ನಗು...
- ಗುರು ಬಬ್ಬಿಗದ್ದೆ
ನಕ್ಕು ಬಿಡು ಮನದೆನ್ನೆ
ನಕ್ಕು ಬಿಡು ಒಮ್ಮೆ
ನೀನು ನಕ್ಕಾಗ ಆಗುವುದು ಸರ್ವಾಂಗಗಳಲು ಹೆಮ್ಮೆ
ನಗಲು ನಿನಗೇಕೆ ಬರ
ಇರಲು ನಗುವಿನಲಿ ಶಕ್ತಿ ಪ್ರಖರ
ಆ ನಿನ್ನ ನಗು ಬೆಂದ ಜೀವಕ್ಕೂ ತಂಪಿನ ಆಸರ
ದು:ಖವನು ಮರೆಮಾಚಿ
ಹುಸಿನಗೆಯ ನಗದಿರು
ನಿನ್ನ ನಗುವಿನಲ್ಲೇಷ್ಟೋ ದು:ಖದಲಿ ಪಾಲಿಡು
ನಕ್ಕು ನಗಿಸಲು ಹೋಗಿ
ಅಳುವುದ ಮರೆಯದಿರು
ಸಾಂತ್ವನದ ಚುಂಬನಕೆ ಸುಖ ದು:ಖ ಕಲ್ಪತರು
ಒಂದೊಮ್ಮೆ ಅಳಲು ಹೋಗಿ ನಗಲು ಬಿಟ್ಟರೆ
ಜಗತ್ತು ನಿನಗಾಗಿ ಎಂದು ಅಳದು
ನಕ್ಕು ಬಿಡು ಮನದೆನ್ನೆ ನಕ್ಕು ಬಿಡು ಒಮ್ಮೆ
the ಗದಗ
-
(ಈ ಪೋಸ್ಟ್ ನನಗೆ drafts ನಲ್ಲಿ ಸಿಕ್ಕಿತು. 2017 ನಲ್ಲಿ ಬರೆದಿದ್ಫು. ನನ್ನ ಪೋನ್
ಹಾಳಾಗಿ ಚಿತ್ರಗಳು ಇಲ್ಲ. ಗದಗ ಕ್ಕೆ ಹಿದಾಗ ನಮ್ಮ ಜತೆ ಬಂದಿದ್ದವರ ಬಳಿ photos ಬಗ್ಗೆ
ಕೇಳಿದೆ. ಹ...
1 day ago
12 comments:
Hey awesome!!!!!!!!!!!!!!!
ಗುರು..
ಚಂದದ ಕವನ..
ಪ್ರೇಮ...
ಚೆನ್ನಾಗಿ ವ್ಯಕ್ತವಾಗಿದೆ...
ಅಭಿನಂದನೆಗಳು...
ಗುರು..
ನಗುವಿನಲ್ಲಿ ಏನೋ ಇದೆ... ಅದು ತಮ್ಮೆಲ್ಲ ನೋವ ಮರೆಸೋ ಶಕ್ತಿ ಇದೆ.. ನಗುವಿಂದೆ ಅಳು ಕೂಡ ಇದೆ ಆದರೆ ಅದ ಮರೆಸೋಕ್ಕೆ ನಗು ಕಾದಿರುತ್ತೆ.. ನಿಮ್ಮ ಕವನ ತುಂಬಾ ಇಷ್ಟವಾಯಿತು ಕವನದಲ್ಲಿ ತುಂಬು ಹೃದಯದ ಪ್ರೀತಿ ಇದೆ... ನಿಮ್ಮ ಹಾಗು ನಿಮ್ಮ ಮನದನ್ನೆಯ ನಗು ಚಿರಕಾಲ ಉಳಿಯಲಿ..
ಪ್ರೀತಿಯ ಮೂರ್ತಿ,
ತುಂಬಾ ಧನ್ಯವಾದಗಳು,
ಆತ್ಮೀಯ ಪ್ರಕಾಶಣ್ಣ,
ಪ್ರೇಮಕ್ಕೆ ಒಂದು ವ್ಯಕ್ತಪಡಿಸಲಾಗದ ಶಕ್ತಿಯಿದೆ. ಅದಿಲ್ಲದ ಜಗತ್ತು ಕಲ್ಪಿಸಿಕೊಳ್ಳಲು ಸಾದ್ಯವೇ?
ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಚಿರಋಣಿ.
ಆತ್ಮೀಯ ಮನಸು,
ತಾವು ಹೇಳಿದ್ದು ನಿಜ, ನಗು ಒಂದು ಜೀವದಾಯಕ ಶಕ್ತಿ,
ಪ್ರಾಣೇಶ್ ಅವರು ಒಂದು ಮಾತು ಹೇಳುತ್ತಾರೆ,
"ಚಿಕ್ಕ ಮಕ್ಕಳ ನಗು ಸತ್ತವರನ್ನು ಬದುಕಿಸುತ್ತದೆ,
ಹರೆಯದ ಹುಡುಗಿಯ ನಗು ಬದುಕಿದವರನ್ನು ಸಾಯಿಸುತ್ತದೆ" ಅಂತ.
ನಗುತ್ತಿರಬೇಕು ಅಲ್ಲವೇ?
ತುಂಬಾ ಧನ್ಯವಾದಗಳು.
ಹೆಗಡೆಯವರೇ,
ನಗು ಮತ್ತು ಅಳು, ಮನುಷ್ಯನ ಮಾನಸಿಕ ಭಾವನೆಗಳನ್ನು ಅಭಿವ್ಯಕ್ತಿಸಲು ಇರುವ ಸಾಧನಗಳು. ಈಗೀಗ ಭಾವನೆಗಳೇ ಸತ್ತುಹೋಗುತ್ತಿರುವುದರಿ೦ದ ಮತ್ತು ಭಾವನಾರಹಿತ ಸಮಾಜದಲ್ಲಿ
ನಾವಿರುವುದರಿ೦ದ ಇದರ ಅರ್ಥ ಬಹಳ ಜನರಿಗೆ ಮನದತ್ತಾಗುವುದಿಲ್ಲ. ಉತ್ತಮ ಕವನ. ನನ್ನನ್ನು ಬ್ಲಾಗ್ ರೋಲಿಗೆ ಸೇರಿಸಿಕೊ೦ಡಿದ್ದಕ್ಕೆ thanks.
ಪರಾಂಜಪೆಯವರೇ,
ನನ್ನ ಬ್ಲಾಗ್ ಗೆ ಆತ್ಮೀಯ ಸ್ವಾಗತ. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಹೀಗೆಯೇ ಬರುತ್ತಿರಿ.
ಸಾಗರಾದಚೆಯ ಇಂಚರ..ಇದೇ ಮೊದಲಿಗೆ ನಿಮ್ಮ ಬ್ಲಾಗಿಗೆ ಪ್ರವೇಶ.
ಕವನ ಖುಷಿಕೊಟ್ಟಿತ್ತು....
-ಚಿತ್ರಾ
ಆತ್ಮೀಯ ಚಿತ್ರಾ,
ನನ್ನ ಬ್ಲಾಗ್ ಗೆ ಸುಸ್ವಾಗತ, ಹೀಗೆಯೇ ಬರುತ್ತಿರಿ,
ಧನ್ಯವಾದಗಳು.
Nice One!!!!
TuMbA chennAgide!!!!
Dear Chandrika, nanna blog ge swaagata, heege baruttiri
Ganapati, nanna blog ge swaagata
Post a Comment