Thursday, February 19, 2009

ಜೈ ವಿಠ್ಠಲ ಹರಟೆ.....

ಜೈ ವಿಠ್ಠಲ ಹರಟೆ ಕಟ್ಟೆಯ ಪರಿಚಯ- ಗುರು ಬಬ್ಬಿಗದ್ದೆ
ಸ್ನೇಹಿತರೇ, ಜೈ ವಿಠ್ಠಲ ಹರಟೆ ಕಟ್ಟೆ ನಾವು ಕೆಲವು ಸ್ನೇಹಿತರು ಸೇರಿ ಬೆಳೆಸಿದ , ಬೆಳೆಸುತ್ತಿರುವ ಒಂದು ಸಣ್ಣ ಸಂಘ ಅನ್ನಬಹುದು. ಇದಕ್ಕೆ ಜೈ ವಿಠ್ಠಲ ಎಂಬ ಹೆಸರೇಕೆ ಎಂದು ಅನೇಕ ಮಿತ್ರರು ಪ್ರಶ್ನಿಸಿದ್ದಾರೆ.ಕೆಲವು ವರ್ಷದ ಹಿಂದಿನ ಮಾತು, ಆತ್ಮೀಯ ಸ್ನೇಹಿತ ಕಮಲಾಕರನ ಬಾಯಿಯಿಂದ ಹೊರಬಿದ್ದ ಜೈ ವಿಠ್ಠಲ ಎಂಬ ಶಬ್ದ ಬಹುಬೇಗನೆ ಪ್ರಚಾರ ಪಡೆಯಿತು. ನಂತರದ ದಿನಗಳಲ್ಲಿ ನಮ್ಮ ಬಳಗದ ಯಾವುದೇ ಸ್ನೇಹಿತರು ಸಿಕ್ಕರೂ ಹಲೋ ಹೇಳುವ ಬದಲು ಜೈ ವಿಠ್ಠಲ ಹೇಳುವುದು ರೂಢಿಯಾಯಿತು. ಕಾಲಗರ್ಭದಲ್ಲಿನ ಸಮಯ ಯಾರಿಗೂ ಕಾಯದೇ ಓಡುವುದು ವಿಧಿ ಲಿಖಿತ. ಸ್ನೇಹಿತರೊಂದಿಗೆ ಮೊದಲಿನಂತೆ ಹರಟೆ ಹೊಡೆಯಲು ಕೆಲಸದ ಒತ್ತಡಗಳೂ ಆಸ್ಪದ ಸಿಗಲಾರದಂತೆ ಮಾಡಿದವು. ಎಲ್ಲರೂ ಸಿಗಬೇಕು, ನಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಬೇಕು, ಹುಚ್ಚು ಹರಟೆ ಹೊಡೆಯಬೇಕು, ಸಮಾಜದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು, ಒಟ್ಟಿಗೆ ಎಲ್ಲರೂ ಕುಳಿತು ಹ್ರದಯದಾಳದ ಹೊನ್ಗನಸುಗಳನ್ನು ಹೊಸೆಯಬೇಕು ಎಂಬ ಅಭಿಪ್ರಾಯ ಎಲ್ಲರಲ್ಲಿ ಕೇಳಿ ಬಂತು. ಆದರೆ ಹೇಗೆ? ಎಲ್ಲರನ್ನೂ ಒಂದೇ ಕಡೆ ಸೇರಿಸಲು ಹಾರ ಸಾಹಸ ಪಡಬೇಕು. ನಮ್ಮ ಬಳಗದ ಪ್ರತಿಯೊಬ್ಬರೂ ಅವರದೇ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದವರು, ಹಲವರು ಬೆಂಗಳೂರು, ಕೆಲವರು ಹೈದರಾಬಾದ್, ಇನ್ನೂ ಕೆಲವರು ಉಡುಪಿ, ಉಳಿದವರು ಸಿಂಗಾಪೂರ್, ಹಾಂಗ್ ಕಾಂಗ್, ಸಿಡ್ನಿ ಹೀಗೆ ಹತ್ತು ಹಲವು ಕಡೆ ಹಂಚಿ ಹೋಗಿದ್ದರು. ಇವರನ್ನೆಲ್ಲ ಒಂದೇ ನೆಲಗಟ್ಟಿನಲ್ಲಿ ಸೇರಿಸುವುದು ಸುಲಭವಲ್ಲ ಎಂಬ ಸತ್ಯ ನಮಗೆಲ್ಲ ತಿಳಿದಿತ್ತು. ಅತ್ಯಂತ ಸುಲಭ ಸಾಧನವಾದ ಅಂತರ್ಜಾಲದ ಮೂಲಕ ಇವರನ್ನೆಲ್ಲ ಸೇರಿಸಿ ಮೊದಲಿನ ಸುಮಧುರ ಕ್ಷಣಗಳ ಸವಿ ಸವಿ ನೆನಪುಗಳನ್ನು ಬಿಚ್ಛಿಡುವ ಪ್ರಯತ್ನದ ಮೂರ್ತ ರೂಪವೇ "ಜೈ ವಿಠ್ಠಲ". ಇಲ್ಲಿ ಮನಸಿದೆ, ಕನಸಿದೆ, ಸಹಾಯ ಹಾಸ್ತವಿದೆ, ಪ್ರೇಮದ ಬಳ್ಳಿಯಿದೆ, ಕೋಪದ ಸೆಳೆತವಿದೆ, ನವರಸಗಳ ಸಮ್ಮಿಲನವಿದೆ, ಜ್ಞಾನದ ಕೋಶವಿದೆ, ಮಾನವೀಯತೆಯ ಸ್ಪರ್ಶವಿದೆ, ಆತ್ಮೀಯತೆಯ ಹರ್ಷವಿದೆ. ನಿಮ್ಮ ಜೀವನದ ಮ್ರಧು ಮಧುರ ಕ್ಷಣಗಳು, ಕಹಿ ನೆನಹುಗಳು, ಮೊದಲ ನೋಟ, ಮೊದಲ ಪ್ರೀತಿ, ಸವಿ ಸವಿ ನೆನಪುಗಳ ಬಗೆಗೆ ಇಲ್ಲಿ ಸದಾ ಸ್ವಾಗತವಿದೆ. ಇದು ನಮ್ಮದೇ ಮನೆ, ನಮ್ಮದೇ ಜನರು. ಏನೆಂದು ಹೇಳಲಿ ಇವರೆಲ್ಲರ ಬಗೆಗೆ, 17 ವರ್ಷಗಳಿಂದ ನನ್ನೊಂದಿಗೆ ನೋವು ನಲಿವುಗಳನ್ನು ಹಂಚಿಕೊಂಡ ಕಮಲಾಕರ, ಪ್ರೀತಿಗೆ ಹೊಸ ಭಾಷ್ಯ ಬರೆದ ಗೀತಾ, ಸ್ನೇಹಕ್ಕೆ ಹೊಸ ಅರ್ಥ ಕೊಟ್ಟ ಜನಾರ್ಧನ, ನನ್ನಲ್ಲಿನ ಕಲೆಗೆ ಹೊಸ ಮೂರ್ತ ರೂಪ ತುಂಬಿದ ಒಲವಿನ ಗೆಳೆಯ ಅಶ್ವತ್ಠ, ಲವಲವಿಕೆಯ ಸದಾ ಚಟುವಟಿಕೆಯ ನನ್ನ ನೆಚ್ಚಿನ ಮಿತ್ರ ಪ್ರಕಾಶ, ಮಧುರ ಕಂಠದ ಕೋಗಿಲೆ ಮಲ್ಲಿಗೆ ಹೂವಿನ ಮನಸ್ಸಿನ ಸತೀಶ, ತನ್ನ ಮಾತಿನಿಂದಲೇ ಮನಸ್ಸನ್ನು ಗೆದ್ದ ಹಾಸ್ಯ ಚಕ್ರವರ್ತಿ ಅಚಲ ಕುಮಾರ, ಚೈತನ್ಯದ ಚಿಲುಮೆ ಸಾಧಕ ಗೋವಿಂದ ಭಟ್ಟ, ಸದಾ ನಗುಮೊಖದ ವಿದ್ಯಾ, ಮಾತಿನಲ್ಲಿಯೇ ಆತ್ಮೀಯಳಾಗುವ ಚಿತ್ರಾ, ಇವರೆಲ್ಲರೂ ಜೈ ವಿಠ್ಠಲದ ಆಧಾರ ಸ್ಟಂಭಗಳು. "ಹಳೆ ಬೇರು ಹೊಸ ಚಿಗುರು, ಕೂಡಿರಲು ಮರ ಸೊಗಸು" ಎಂಬಂತೆ ಹೊಸ ಮುಖಗಳು ಆಗಮಿಸಿದ್ದಾರೆ. ಕಳೆದ ಒಂದು ವರ್ಷದಿಂದ ಅತ್ಯಂತ ಯಶಸ್ವೀಯಾಗಿ ಇದನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಇಲ್ಲಿ ನಾವೇನು ಕಾರ್ಯಕ್ರಮ ಮಾಡುತ್ತಿಲ್ಲ. ಸಹ್ರದಯೀ ಮಿತ್ರ ಮಿತ್ರೆಯರ ಸಾಹಿತ್ಯಾಸಕ್ತಿಯನ್ನು ಜಗತ್ತಿಗೆ ಉಣಬಡಿಸುತ್ತಿದ್ದೇವೆ. ಪ್ರತಿವಾರವೂ ಇ ತಾಣಕ್ಕೆ ಭೇಟಿ ನೀಡಿ ಯುವ ಬರಹಗಾರರನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ.ನಮ್ಮ ತಾಣದ ವಿಳಾಸ, http://jaivittala.page.tl/

ಸದಾ ತಮ್ಮವ ಗುರು

5 comments:

ಮನಸು said...

ಗುರು,

ನಿಜವಾಗಿಯು ಇದು ಚೆಂದದ ಕೆಲಸ, ನಿಮ್ಮ ಹಾದಿ ಸುಗಮವಾಗಲೆಂದು ಆಶಿಸುತ್ತೇವೆ... ಹೆಚ್ಚಿನ ಪ್ರೋತ್ಸಾಹ, ಸಲಹ, ಎಲ್ಲವು ಎಲ್ಲರಿಂದ ಸಿಗಲಿ.... ನಮ್ಮಿಂದ ಆಗುವ ಸಹಾಯ ಖಂಡಿತ ನೀಡಲು ನಾವು ಸದಾ ಸಿದ್ದರಿದ್ದೇವೆ..
ಜೈ ವಿಠಲ...
ವಂದನೆಗಳು

ಸಿಮೆಂಟು ಮರಳಿನ ಮಧ್ಯೆ said...

ಗುರುರವರೆ...

ನಿಮ್ಮ ಪ್ರಯತ್ನ ನೋಡಿ.
ತುಂಬಾ ಖುಷಿಯಾಯಿತು..

ಮುಂದುವರೆಸಿರಿ..
ಅಭಿನಂದನೆಗಳು..

ಜೈ.. ವಿಟ್ಠಲ...!

Sushma Sindhu said...

ಹಾಯ್ ಗುರುರವರೆ,
ನನ್ನ ಬ್ಲಾಗ್ ಗೆ ಭೇಟಿಯಿತ್ತಿದ್ದಕ್ಕೆ ಧನ್ಯವಾದಗಳು. ನಿಮ್ಮ 'ಇ೦ಚರ'ದಲ್ಲಿ ನಿಜಕ್ಕೂ ವೈವಿಧ್ಯತೆಯಿದೆ.
ನಿಮ್ಮ ಇ ತಾಣ 'ಜೈ ವಿಠಲ' ದ ಬಗೆಗೆ ಲೇಖನದಲ್ಲಿ ಪ್ರಸ್ತಾಪಿಸಿದ್ದಕ್ಕೆ ಥ್ಯಾ೦ಕ್ಸ್. ತಾಣ ವನ್ನು book mark ಮಾಡಿಕೊ೦ಡಿದ್ದೇನೆ.
ನಿಮ್ಮ proffessional homepage ಗೂ ಹೋಗಿ ಬ೦ದೆ. wish you great success in all your endeavours :)
ಮತ್ತೆ ಇತ್ತ ಬರುತ್ತೇನೆ.

~ಸುಷ್ಮ

ಸಾಗರದಾಚೆಯ ಇಂಚರ said...

ಆತ್ಮೀಯ ಮನಸು,
ತಮ್ಮ ಪ್ರೋತ್ಸಾಹದಾಯಕ ಮೆಚ್ಚುಗೆಗೆ ನಾನು ಆಭಾರಿ, ಭೇಟಿ ಇಟ್ಟಿದ್ದಕ್ಕೆ ಅಭಿನಂದನೆಗಳು.
ಆತ್ಮೀಯ ಪ್ರಕಾಶಣ್ಣ,
ಇದೊಂದು ಸಣ್ಣ ಪ್ರಯತ್ನ, ಯಶಸ್ಸು ಅವಿರತ ಶ್ರಮದಲ್ಲಿದೆ. ನೋಡೋಣ ಏನಾಗುತ್ತದೆ ಎಂದು.
ಆತ್ಮೀಯ ಸಿಂಧು ರವರೆ,
ನನ್ನ ಬ್ಲಾಗ್ ಗೆ ಸುಸ್ವಾಗತ. ಸದಾ ಬ್ಲಾಗ್ ಗೆ ಬರುತ್ತಿರಿ. ಮೆಚ್ಚುಗೆ ತಿಳಿಸಿದ್ದಕ್ಕೆ ನಾನು ಆಭಾರಿ.
ಸದಾ ನಿಮ್ಮೆಲ್ಲರ
ಗುರು

ಮಲ್ಲಿಕಾರ್ಜುನ.ಡಿ.ಜಿ. said...

ಗೆಳೆಯರನ್ನೆಲ್ಲಾ ಒಂದುಗೂಡಿಸುವ ನಿಮ್ಮ concept ಚೆನ್ನಾಗಿದೆ. ನಿಮ್ಮ ಪ್ರಯತ್ನಕ್ಕೆ ಯಶಸ್ಸನ್ನು ಕೋರುತ್ತೇನೆ.
ಜೈ ವಿಠಲ...