- ಗುರು ಬಬ್ಬಿಗದ್ದೆ

ಕೇಳದಿರು ಗೆಳೆಯ, ಚೆಲುವೆಯರ ಹರೆಯ
ದಾಟದು ಹದಿನೆಂಟು, ಅವಳಿಗೆ ಆಗಿದ್ದು ನಲವತ್ತೆಂಟು
ಓ ಚೆಲುವೆ, ನಿನ್ನ ಕೂದಲೇಕೆ ಬಿಳಿಯಾಗಿದೆ
ಮನೆಯಲ್ಲಿ ಜೇನುತುಪ್ಪ ಸೋರುತಿದೆ
ಎಂದವಳ ವಾಕ್ಚಾತುರ್ಯಕೆ ಮರುಳಾದ ನನ್ನ ಗೆಳೆಯ
ಕೇಳದೆಯೆ ಹರೆಯ, ಕಟ್ಟಿದ ತಾಳಿಯ
ಮಧುಚಂದ್ರದಿ ಮೊದಲ ಬಾರಿ ನೋಡಿದ ಅವಳ ಮುಖ
ಸುಕ್ಕುಗಟ್ಟಿದ ಹಣೆ ಹಳಸಿದೆ ಚರ್ಮ
ಅವಳೆಂದಳು ಊಟಿಯ ಚಳಿ, ಬಿರಿದಿದೆ ತುಟಿ, ಒಡೆದಿದೆ ಚರ್ಮ
ನನಗಾಗದು ಚಳಿ ಗೆಳೆಯ, ಎಂದಳು ಹದಿನೆಂಟರ ಹರೆಯ
ಕೆಲಸದಿಂದ ಮನೆಗೆ ಬಂದ ಮೊದಲ ದಿನ, ಮಧುರ ಕ್ಷಣ
ಹಿಡಿದಿತ್ತು ಅವಳ ಬೆನ್ನು, ಕಾಣದಾಗಿತ್ತು ಕಣ್ಣು, ಮೈ ಕೈ ಎಲ್ಲ ನೋವು
ಹೇಳಿದಳು, ಮನೆಯಲ್ಲಿ ನ ಮುದ್ದಿನ ಮಗಳು
ನನಗೇನೂ ಕೆಲ್ಸ ಬಾರದು, ನನಗಿನ್ನೂ ಹದಿನೆಂಟರ ಹರೆಯ
ದಿನ ದಿನವೂ ಸುಳ್ಳಿನ ಕಂತೆ, ಕಾಣದಾಯಿತು ಚೆಲುವಿನ ಕಾಂತೆ
ಛೇಡಿಸತೊಡಗಿದರೆಲ್ಲ, ೪೮ ಅಲ್ಲ ಹದಿನೆಂಟರ ಹರೆಯ
ಹೇಳಿದ ಒಂದು ದಿನ ಎದೆಯುಬ್ಬಿಸಿ ಈ ಮಹಾಶಯ
ಇದ್ದರೂ ಅವಳಿಗೆ ನಲವತ್ತೆಂಟು , ನನಗೆಂದೂ ಕಾಣ್ವಳು ಹದಿನೆಂಟು
7 comments:
hhaa..hha...
mastaagide...!!
ಹ ಹ ಹ ತುಂಬ ಚೆನ್ನಾಗಿದೆ.. ಹಾಸ್ಯಮಯವಾಗಿದೆ... ಹೆತ್ತವರಿಗೆ ಹೆಗ್ಗಣ ಮುದ್ದಂತ್ತೆ.... ಇದು ಹಾಗೆ ...ಅಲ್ಲವೇ..?
ಆತ್ಮೀಯ ಪ್ರಶಾಂತಣ್ಣ,
ಹೀಗೆ ಮನಸ್ಸಿಗೆ ತೋಚಿತು , ಗೀಚಿದೆ. ಇಷ್ಟವಾಗಿದ್ದಕ್ಕೆ ಧನ್ಯವಾದಗಳು.
ಆತ್ಮೀಯ ಮನಸು,
ಹೆತ್ತವರಿಗೆ ಹೆಗ್ಗಣ ಮುದ್ದು ಅಂತಲ್ಲ, ಅದು ತನ್ನವರನ್ನು ಗೌರವಿಸುವ ಪರಿ, ಯಾರು ಯಾರೋ ಟೀಕಿಸುವಾಗ ಅವರ ಬಾಯಿ ಮುಚ್ಚಲು ಕಂಡು ಕೊಂದ ಮಾರ್ಗವೂ ಆಗಬಹುದಲ್ಲ, ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಡಾ!,
ಹಾಸ್ಯವಾಗಿ ಬರೆದಿದ್ದೀರ. ನಕ್ಕು ನಕ್ಕು ಸಾಕಾಯಿತು. ಆ "ಗೆಳೆಯ"ನ ಬಗ್ಗೆ ಯೋಚನೆ ಮಾಡುತ್ತಾಯಿದ್ದೆ.. :)
ಆತ್ಮೀಯ ಅಂತರ್ವಾಣಿ,
ತುಂಬ ಧನ್ಯವಾದಗಳು, ಒಬ್ಬರನ್ನು ನಮ್ಮ ಬರಹ ನಗಿಸುತ್ತದೆ ಎಂದರೆ ನಮ್ಮ ಬರವಣಿಗೆ ಸಾರ್ಥಕ. ನಗಿಸುವುದೇ ಧರ್ಮ ಅಲ್ಲವೇ,
ತುಂಬಾ ಇಷ್ಟವಾಯಿತು ಕವನದೊಳಗಿನ ಹಾಸ್ಯ. ವ್ಯಂಗದೊಳಗೆ ಮಿಳಿತವಾಗಿರುವ ವಾಸ್ತವಿಕತೆ ಮೆಚ್ಚುಗೆಯಾಯಿತು.
ಆತ್ಮೀಯ,ತೇಜಸ್ವಿನಿಯವರೇ,
ಇಷ್ಟವಾಗಿದ್ದಕ್ಕೆ ಧನ್ಯವಾದಗಳು. ಹೀಗೆಯೇ ಬರುತ್ತೀರಿ.
ಗುರು
Post a Comment