ಕಾಡುತಿರುವೆ ಕಾಡಬೇಡ,ಕೋಮಲಾಂಗಿ ಮೋಹಿನಿ
ಕನಸುಗಳನು ಹೊಸೆಯಬೇಡ ನನ್ನ ಬಾಳ ಚಾಂದಿನಿ
ಕಣ್ಣ ರೆಪ್ಪೆಯಂಚಿನಲ್ಲಿ,ಕೊಂಕುಕಣ್ಣ ನೋಟದಲ್ಲಿ
ಕರಗುವಂತೆ ಕಲ್ಲು ಹ್ರದಯ ನೋಡಬೇಡ ನನ್ನ ನೀ
ಕಾಯುತಿರುವೆ ನಿನ್ನ ನಾನು,ನನ್ನ ಪ್ರೇಮ ಗೂಡಿನಲ್ಲಿ
ಕಾಯಲಾರೆ ಇನ್ನು ಮುಂದೆ ಕದವ ತೆರೆಯೆ ಮಾನಿನಿ
ಹಾರುತಿರುವೆ ಮನದ ತುಂಬ,ಬಂಧಿಯಾಗು ಕಣ್ಮಣಿ
ನಿನ್ನ ಪ್ರೇಮ ಪಾಶದಲ್ಲಿ ಸಿಲುಕಿಬಿಡಲೇ ಅರಗಿಣಿ
ಅಚ್ಚ ಹಸಿರ ಪಚ್ಚೆ ಕೆನೆಯ,ಕಡೆದ ಕಲ್ಲ ಶಿಲ್ಪದಲ್ಲಿ
ತುಂಟನಗೆಯ ಬೀರಿ ಎನ್ನ ಕಾಡಬೇಡ ಕಾಮಿನಿ
ಕಾಲವೆಂಬ ಪರಿಧಿಯಲ್ಲಿ,ಕವನವಾದ ವಾಹಿನಿ
ಕಾಲವೆಂಬ ಪರಿಧಿಯಲ್ಲಿ,ಕವನವಾದ ವಾಹಿನಿ
ಕವಿಯ ಮನದ ಕಣ್ಣ ಮುಂದೆ ಮೂಡಿ ಬಂದ ಕಾವ್ಯ ನೀ