Thursday, February 11, 2010

ಬೇಲಿಯೇ ಹೊಲವ ಎದ್ದು ಮೇಯ್ದೀತು




ಆಚೆ ಈಚೆ   ನೋಡಬೇಡ, ತಲೆಯ ಕೆಳಗೆ ಮಾಡಬೇಡ,
ಬೇಲಿಯೇ ಹೊಲವ ಎದ್ದು ಮೇಯ್ದೀತು
ನಿನ್ನ ಮನಸೇ ನಿನ್ನನ್ನು ಕೊಂದಿತೂ
ಆಚೆ ಈಚೆ   ನೋಡಬೇಡ, ತಲೆಯ ಕೆಳಗೆ ಮಾಡಬೇಡ,
ಬೇಲಿಯೇ ಹೊಲವ ಎದ್ದು ಮೇಯ್ದೀತು

ಸಾಚ ನೀನು ಸಿಡುಕಬೇಡ, ಕೊಚ್ಚೆ ನೀರ ಕದಡಬೇಡ 
ಪಿಶಾಚಿಯೇ ಎದ್ದು ನಿನ್ನ ಒದ್ದೀತೂ 
ಹರಿಯೋ ನದಿ ನಿನ್ನ ಮನವ  ಕಲಕೀತೂ 
ಆಚೆ ಈಚೆ   ನೋಡಬೇಡ, ತಲೆಯ ಕೆಳಗೆ ಮಾಡಬೇಡ,
ಬೇಲಿಯೇ ಹೊಲವ ಎದ್ದು ಮೇಯ್ದೀತು

ಚುಚ್ಚೋ ಮಾತು ಆಡಬೇಡ, ಆಗು ನೀನು ಅಚ್ಚು ಮೆಚ್ಚು
ಮಚ್ಚ ಹಿಡಿದು ಜನರು ನಿನ್ನ ಬಡಿದಾರು
ಅರಳೋ ಮನಸ ವೇದನೆಯು ನೂರಾರು 
ಆಚೆ ಈಚೆ   ನೋಡಬೇಡ, ತಲೆಯ ಕೆಳಗೆ ಮಾಡಬೇಡ,
ಬೇಲಿಯೇ ಹೊಲವ ಎದ್ದು ಮೇಯ್ದೀತು

Tuesday, February 2, 2010

ಅರಳುತಿರು ಎಂದೂ ...

ಕೃಪೆ : Google

ಆಗಸದ ಅಂಗಳದಿ ಅಂತರಂಗದ ಅಂದ
ಆಸೆಗಳ ಅಂಬಾರಿ ಅರಳಿಸಿದ ಚಂದ
ಅಂಕೆಗಳ ಅಂಚಿನಲಿ ಮಿಂಚಿಹುದು ಅನವರತ
ಅಕ್ಷರದಿ ಕುಕ್ಷರಿಗೆ ಹಾಡು ನಿರತ

ಅಂಧ ನಾ ಅನಬೇಡ,ಅಸಂಖ್ಯರಿಹರಿಲ್ಲಿ
ಅಜ್ಞಾನಿ ನೀನೆಂಬ ಅಳುಕು ಬೇಡ
ಅಂಕು ಡೊಂಕುಗಳೆಂಬ ಬಿಂಕದಲಿಹರೆಲ್ಲ
ಅವರಿವರ ನಡುವಿನಲಿ ನಗುತಲಿರು ನೀನು

ಅನ್ನವಸ್ತ್ರವ ಪಿಡಿದು ಅವಿರತದಿ ದುಡಿಯುತಿರು
ಅಂತರಾತ್ಮದ ಅಣತಿ ಮೀರದಿರು ಮನುಜ
ಅಂಜದಿರು,ಅರಳುತಿರು,ಅಸ್ಪ್ರಶ್ಯನೆನದಿರು
ಅನಂತದಾನಂತದಲಿ ಬಾಳು ಸತತ
 ಮನುಜ ಅರಳು ನಿರತ