Thursday, February 11, 2010

ಬೇಲಿಯೇ ಹೊಲವ ಎದ್ದು ಮೇಯ್ದೀತು
ಆಚೆ ಈಚೆ   ನೋಡಬೇಡ, ತಲೆಯ ಕೆಳಗೆ ಮಾಡಬೇಡ,
ಬೇಲಿಯೇ ಹೊಲವ ಎದ್ದು ಮೇಯ್ದೀತು
ನಿನ್ನ ಮನಸೇ ನಿನ್ನನ್ನು ಕೊಂದಿತೂ
ಆಚೆ ಈಚೆ   ನೋಡಬೇಡ, ತಲೆಯ ಕೆಳಗೆ ಮಾಡಬೇಡ,
ಬೇಲಿಯೇ ಹೊಲವ ಎದ್ದು ಮೇಯ್ದೀತು

ಸಾಚ ನೀನು ಸಿಡುಕಬೇಡ, ಕೊಚ್ಚೆ ನೀರ ಕದಡಬೇಡ 
ಪಿಶಾಚಿಯೇ ಎದ್ದು ನಿನ್ನ ಒದ್ದೀತೂ 
ಹರಿಯೋ ನದಿ ನಿನ್ನ ಮನವ  ಕಲಕೀತೂ 
ಆಚೆ ಈಚೆ   ನೋಡಬೇಡ, ತಲೆಯ ಕೆಳಗೆ ಮಾಡಬೇಡ,
ಬೇಲಿಯೇ ಹೊಲವ ಎದ್ದು ಮೇಯ್ದೀತು

ಚುಚ್ಚೋ ಮಾತು ಆಡಬೇಡ, ಆಗು ನೀನು ಅಚ್ಚು ಮೆಚ್ಚು
ಮಚ್ಚ ಹಿಡಿದು ಜನರು ನಿನ್ನ ಬಡಿದಾರು
ಅರಳೋ ಮನಸ ವೇದನೆಯು ನೂರಾರು 
ಆಚೆ ಈಚೆ   ನೋಡಬೇಡ, ತಲೆಯ ಕೆಳಗೆ ಮಾಡಬೇಡ,
ಬೇಲಿಯೇ ಹೊಲವ ಎದ್ದು ಮೇಯ್ದೀತು

89 comments:

Nisha said...

Well written. Arthapoorna salugalu.

ಸಾಗರದಾಚೆಯ ಇಂಚರ said...

Nisha,

tumbaa dhanyavaadagalu

keep visiting

ಚುಕ್ಕಿಚಿತ್ತಾರ said...

ಚ೦ದದ ಕವಿತೆ..

ಮನಸು said...

tumba chennagide kavana, hitavachana.

ಸುಮ said...

ಈ ಕಾಲದಲ್ಲಿ ಸ್ವಲ್ಪ ಎಚ್ಚರತಪ್ಪಿದರೂ ಬೇಲಿಯೆ ಎದ್ದು ಹೊಲಮೇಯುವುದು ಸತ್ಯ. ಚೆನ್ನಾಗಿದೆ ಕವನ.

Creativity!! said...

ಬಹಳ ಸುಂದರವಾದ ಸಾಲುಗಳು.

ರಾಜೀವ said...

ಗುರುಮೂರ್ತಿ ಅವರೆ,

ಮೊನ್ನೆ ತಾನೆ, "ಬೇಲಿ ಹೊಲವ ಮೇದೊಡೆ, ಏರಿ ನೀರುಂಬೊಡೆ, ತಾಯಿ ಮೊಲೆಹಾಲು ನಂಜಾಗಿ ಕೊಲುವೆಡೆ" ಎಂಬ ವಚನ ನೆನೆಸಿಕೊಂಡೆ.

"ಅರಳೋ ಮನಸ ವೇದನೆಯು ನೂರಾರು" ಎಂಬ ಸಾಲು ತುಂಬಾ ಇಷ್ಟವಾಯಿತು.

ದಿನಕರ ಮೊಗೇರ.. said...

ಡಾ. ಗುರು ಸರ್,
ತುಂಬಾ ಚೆನ್ನಾಗಿವೆ ಸಾಲುಗಳು... ಯಾವುದೋ ರಾಗ ಕೇಳಿಸಿಕೊಂಡು ಅದಕ್ಕೆ ಬರೆದ ಹಾಗಿದೆ.....

ಮನಮುಕ್ತಾ said...

Nice one.

Uma Bhat said...

ಚೆನ್ನಾಗಿದೆ ಕವಿತೆ

SANTOSH MS said...

Sir,

Good poem, topic is also good and interesting

ಗೌತಮ್ ಹೆಗಡೆ said...

en sir idu? hosa laharige biddigide egitlagi.fulla different style kavana kodta idde.last kavananu different.idu hangeya:) nice.hinge prayogagalu aagta irli.ade chenda:)

ಸಾಗರದಾಚೆಯ ಇಂಚರ said...

ಚುಕ್ಕಿ ಚಿತ್ತಾರ
ಅಭಿಪ್ರಾಯಕ್ಕ್ಕೆ ಧನ್ಯವಾದಗಳು
ಇದೊಂದು ವಿನೂತನ ಪ್ರಯೋಗ

ಸಾಗರದಾಚೆಯ ಇಂಚರ said...

ಮನಸು
ವಚನವೋ? ಹಿತವಚನವೋ?
ಕವನವೋ?
ಓದುಗರು ತೆಗೆದುಕೊಂಡಂತೆ :)
ನಿಮ್ಮ ಆಶೀರ್ವಾದ ಸದಾ ಇರಲಿ

ಸಾಗರದಾಚೆಯ ಇಂಚರ said...

ಸುಮಾ ನಿಜ
ಇದೊಂದು ಎಚ್ಚರಿಕೆಯ ಕರೆಘಂಟೆ
ಕವನದ ಮೂಲ ಆಶಯವೂ ಅದೇ
ಯಾರ ಬಗ್ಗೆಯೂ ಕೆಟ್ಟ ಮಾತನಾಡದೇ ನೀನು ಇದ್ದರೂ
ಜನರು ನಿನ್ನ ಬಗ್ಗೆಯೇ ಕೆಟ್ಟ ಮಾತನಾಡುತ್ತಾರೆ ಅಂತ ಕಾಲ ಇದು ಎಂಬುದು
ಕವನದ ಒಂದು ಆಶಯ

ಸಾಗರದಾಚೆಯ ಇಂಚರ said...

Creativity.

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೀಗೆಯೇ ಬರ್ತಾ ಇರಿ

ಸಾಗರದಾಚೆಯ ಇಂಚರ said...

ರಾಜೀವ ಸರ್,
ಆ ಕೊನೆಯ ಸಾಲು ನನಗೂ ಬಹಳ ಇಷ್ಟವಾಗಿದೆ
ಎಷ್ಟೋ ಸಲ ಅದೇ ಸಾಲನ್ನು ಓದಿಕೊಳ್ಳುತ್ತೇನೆ
ಜೀವನ ಚಕ್ರದಲ್ಲಿ ನಾವು ಮುಂದೆ ಬರಬೇಕಾದರೆ ಎಷ್ಟೊಂದು ವಿಘ್ನಗಳು,
ಅರಳುವ ಮನಸ್ಸನ್ನು ಕೆರಳಿಸುವ ಶಕ್ತಿಗಳು ಬೇಕಾದಷ್ಟಿವೆ
ಅದಕ್ಕೆ ಆ ಸಾಲು ಬರೆದದ್ದು
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ದಿನಕರ ಸರ್
ನಿಮಗೆ ಇಷ್ಟವಾದರೆ ನಂಗೆ ಸಂತೋಷ ,
ಹೋದುದು ನನಗೂ ಯಾವುದೊ ರಾಗಕ್ಕೆ ಹಾಡಬಹುದು ಎನ್ನಿಸಿದೆ
ರಾಗ ಮಾತ್ರ ಗೊತ್ತಿಲ್ಲ

ಸಾಗರದಾಚೆಯ ಇಂಚರ said...

ಮನಮುಕ್ತಾ,

ಥ್ಯಾಂಕ್ಸ್ ನಿಮ್ಮ ಅಭಿಪ್ರಾಯಕ್ಕೆ ,
ಬರ್ತಾ ಇರಿ

ಸಾಗರದಾಚೆಯ ಇಂಚರ said...

ಉಮಾ ಭಟ್ ಅವರೇ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಪ್ರೋತ್ಸಾಹ ಹೀಗೆಯೇ ಇರಲಿ

ಸಾಗರದಾಚೆಯ ಇಂಚರ said...

Santhosh,

thanks for your comments

I always like these kind of topics

ಸಾಗರದಾಚೆಯ ಇಂಚರ said...

ಗೌತಮ್ ತಮ್ಮ
ನೀನು ಹೇಳಿದ್ದು ನಿಜ, ಇತ್ತೀಚಿನ ದಿನದಲ್ಲಿ
ಕವನದ ಶೈಲಿ ಬದಲು ಮಾಡ್ತಾ ಇದ್ದಿ
ಮುಂದಿನ ಕವನ ಮತ್ತೊಂದು ಹೊಸ ಶೈಲಿ ಲಿ ಇದ್ದು
ಏನೋ ಕೆಲವು ಪ್ರಯೋಗ ಮಾಡನ ಅನಿಸ್ತ ಇದ್ದು
ಏಕತಾನತೆ ಬೇಜಾರು ಬತ್ತ ಇದ್ದು
ನಿಂಗಕಿಗೆ ಇಷ್ಟ ಆದ್ರೆ ಅದ್ರಕಿಂತ ಸಂತೋಷ ಏನು ಇದ್ದು ಹೇಳು
ಬರ್ತಾ ಇರು

ಕನಸು said...

Sir,

Good poem,and interesting
with love
kanasu

ಮುಸ್ಸ೦ಜೆ ಇ೦ಪು said...

ಮನಸನ್ನು ಎಚ್ಚರಿಸುವ ಕವನ ಚೆನ್ನಾಗಿದೆ!!

Jagadeesh Balehadda said...

ವ್ಹಾ...... ಹಿತವಚನದಸಾಲುಗಳು
ಇದರಲ್ಲೂ ಎನೋ ಹೊಸತನ.
ಹೀಗೇಯೇ ಬರುತ್ತಿರಲಿ .

VASANT said...

guru thanks for chennada kavite! nanna blog nalli s l bhairappanavara darabaari kaanadaa kelisiddene. omme visit maadi.

ಸವಿಗನಸು said...

ಬಹಳ ಅರ್ಥಪೂರ್ಣವಾದ ಸಾಲುಗಳು....
ಚೆನ್ನಾಗಿದೆ...

Manasaare said...

ಗುರು ಅವರೇ ತುಂಬಾ ಚೆನ್ನಾಗಿದೆ ಕವಿತೆಯ ಸಾಲುಗಳು ."ಬೇಲಿಯೇ ಹೊಲವ ಎದ್ದು ಮೇಯ್ದೀತು" ಎಂಬ ಕವಿತೆಯ ತಿರುಳು ತುಂಬಾ ಅರ್ಥಗರ್ಭಿತವಾಗಿದೆ . ಹೀಗೆ ಬರಿತಾ ಇರಿ .

ಸುಧೇಶ್ ಶೆಟ್ಟಿ said...

ಚೆನ್ನಾಗಿದೆ ಚೆನ್ನಾಗಿದೆ :)

ಸಾಗರದಾಚೆಯ ಇಂಚರ said...

ಕನಸು

Thanks for the comments

Keep visiting

ಸಾಗರದಾಚೆಯ ಇಂಚರ said...

ಮುಸ್ಸಂಜೆ ಇಂಪಿನ ಪರಮ್,
ನಿಮ್ಮ ಹಾರೈಕೆ ಸದಾ ಇರಲಿ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಜಗದೀಶ್ ಸರ್
ಹಿತವಚನದ ಸಾಲುಗಳು ಇಷ್ಟವಾಯ್ತಲ್ಲ ,
ಥ್ಯಾಂಕ್ಸ್
ಹೀಗೆಯೇ ಬರ್ತಾ ಇರಿ
ನಿಮ್ಮೆಲ್ಲರ ಮಾತೆ ಪ್ರೋತ್ಸಾಹ

ಸಾಗರದಾಚೆಯ ಇಂಚರ said...

ವಸಂತ್
ಖಂಡಿತ ನಿಮ್ಮ ಬ್ಲಾಗ್ ಗೆ ಬರ್ತೀನಿ
ನೀವು ಹೀಗೆ ಬರ್ತಾ ಇರಿ
ಪ್ರತಿಕ್ರಿಯೆಗೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸವಿಗನಸು
ನಿಮ್ಮ ಪ್ರೋತ್ಸಾಹ ಸದಾ ಇರಲಿ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಮನಸಾರೆ,
ನಿಮ್ಮ ಮಾತುಗಳು ನಿಜ, ಆ ಸಾಲಿನಲ್ಲಿ ಎಷ್ಟೊಂದು ಅರ್ಥ ಇದೆ ಆಲ್ವಾ
ಹೀಗೆಯೇ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಸುಧೇಶ್
ಅಭಿಪ್ರಾಯಕ್ಕೆ ಧನ್ಯವಾದಗಳು
ಬರ್ತಾ ಇರಿ

PARAANJAPE K.N. said...

ಅರ್ಥಪೂರ್ಣವಾಗಿದೆ ಕವನ. ಕವನದೊಳಗೊ೦ದು ನೀತಿ ಪಾಠ ವಿದೆ

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್
ನಿಮ್ಮ ಪ್ರತಿಕ್ರಿಯೆಗೆ ಚಿರಋಣಿ
ಹೀಗೆಯೇ ಪ್ರೋತ್ಸಾಹ ಕೊಡುತ್ತ ಇರಿ

ತೇಜಸ್ವಿನಿ ಹೆಗಡೆ- said...

ಅರ್ಥಪೂರ್ಣ ಕವನ. ಚೆನ್ನಾಗಿದೆ.

sunaath said...

ಗುರುಮೂರ್ತಿಯವರೆ,
ತುಂಬ ಸೊಗಸಾದ ಕವನ. ಮನಸ್ಸಿಗೆ ನೀವು ಕೊಡುತ್ತಿರುವ ಎಚ್ಚರಿಕೆ
ಹಿತವಾದ ಭಾಷೆಯಲ್ಲಿದೆ.

Guru's world said...

ಗುರು ಸರ್,
ಒಳ್ಳೆಯ ಅರ್ಥ ಪೂರ್ಣ ಕವನ... ಚೆನ್ನಾಗಿ ಇದೆ.....

Snow White said...

tumba chennagide sir :)

Venkatakrishna.K.K. said...

ಉತ್ತಮ..ಅರ್ಥಪೂರ್ಣ ಸಾಲುಗಳು..
ಯೋಚನೆಗೆ ಒಳ್ಳೇ ಸರಕು..
ಚೆನ್ನಾಗಿದೆ..ಸಾರ್.ಕವನ.

Manasaare said...

ಗುರು ಅವರೇ ನನಗೊಂದು ಚಿಕ್ಕ ಸಂಶಯ್ , ನಾನು ಕೇಳಿದ್ದು ಓದಿದ್ದು "ಬೇಲಿಯೇ ಎದ್ದು ಹೊಲವ ಮೇಯ್ದೀತು" ಅಂತ ಆದ್ರೆ ನಿಮ್ಮ ಪೋಸ್ಟ್ ನಲ್ಲಿ ಅದು ""ಬೇಲಿಯೇ ಹೊಲವ ಎದ್ದು ಮೇಯ್ದೀತು" ಅಂತ ಬರಿದಿದ್ದಿರಾ . ಅದನ್ನ ಬೇಕು ಅಂತಲೇ ಇಟ್ಟಿರೋದಾ? ಇಲ್ಲ by mistake ಅಗಿರೋದಾ?

ಸಾಗರದಾಚೆಯ ಇಂಚರ said...

ತೇಜಸ್ವಿನಿ ಯವರೇ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಸುನಾಥ್ ಸರ್
ಎಚ್ಚರಿಕೆ ಎಲ್ಲರಿಗೂ ಒಳ್ಳೆಯದಾಗಲಿ ಎಂಬುದು
ನಿಮ್ಮ ಹಾರೈಕೆ ಸದಾ ಇರಲಿ
ಸರ್ವರಿಗೂ ಒಳ್ಳೆಯದಾಗಲಿ

ಸಾಗರದಾಚೆಯ ಇಂಚರ said...

ಗುರು ಸರ್,
ನಿಮ್ಮ ಅಭಿಪ್ರಾಯಕ್ಕೆ ತಂಕ್ಸ್ಸ್
ಸದಾ ಬರ್ತಾ ಇರಿ
ನಿಮಗೋಸ್ಕರ ಓದುವಂಥದ್ದನ್ನು ಬರೆಯೋ ಪ್ರಯತ್ನ ನನ್ನದು

ಸಾಗರದಾಚೆಯ ಇಂಚರ said...

Snow White,

thanks for the comments

keep visiting

ಸಾಗರದಾಚೆಯ ಇಂಚರ said...

ವೆಂಕಟ ಕೃಷ್ಣ ಸರ್
ಬ್ಲಾಗಿಗೆ ಸ್ವಾಗತ
ನಿಮ್ಮ ಅಭಿಪ್ರಾಯಕ್ಕೆ ಮೊದಲಿಗೆ ಥ್ಯಾಂಕ್ಸ್
ಕವನದ ಸಾಲುಗಳು ನನ್ನನ್ನೂ ತುಂಬಾ ಕಾದಿವೆ
ಬದುಕು ಧನಾತ್ಮಕತೆಯೆಡೆಗೆ ಇರಲಿ ಎನ್ನುವುದೇ ಇದರ ತಿರುಳು

ಸಾಗರದಾಚೆಯ ಇಂಚರ said...

ಮನಸಾರೆ,
ನಿಜವಾಗಿ ಹೇಳೋದು ''ಬೇಲಿಯೇ ಎದ್ದು ಹೊಲವ ಮೇಯ್ದಿತು''
ಅಂತಾ
ಆದರೆ ಕಾವ್ಯಾತ್ಮಕ ಭಾಷೆಯಲ್ಲಿ ಹಾಗೆ ಹೇಳಿದರೆ ಪಾತದ ಸಾಲುಗಳು ಆಗುತ್ತವೆ
ಮೇಲಿಂದ ಎರಡೂ ಒಂದೇ ಅರ್ಥ ಕೊಡುತ್ತವೆ,
ಆದ್ರೆ ಓದಿಕೊಳ್ಳುವಾಗ, ''ಬೇಲಿಯೇ, ಹೊಲವ ಎದ್ದು ಮೇಯ್ದಿತು '' ಅಂತ ಓದಿಕೊಳ್ಳಿರಿ
ಕೆಲವೊಮ್ಮೆ ಕವನ ಬರೆಯುವಾಗ ಗಾದೆಯನ್ನು ಸ್ವಲ್ಪ ತಿರುಚಬೇಕಾಗುತ್ತದೆ
ಆದರೆ ಅರ್ಥದಲ್ಲಿ ಮೋಸ ಇಲ್ಲ
ನಿಮ್ಮ ಕಳಕಳಿಗೆ ಧನ್ಯವಾದಗಳು
ಹೀಗೆಯೇ ಬರ್ತಾ ಇರಿ

Suman said...

nice

kamal said...

second stanza is good

ಸೀತಾರಾಮ. ಕೆ. said...

ಹೊಸತನದ ಕವನ. ಆಶಯವೂ ಸಹಾ. ಕೆಲವು ಸಾಲುಗಳ ಪದೇ ಪದೇ ಪ್ರಯೋಗವಿದ್ದರೂ ಓದಿಸಿಕೊ೦ಡು ಹೋಗಿದೆ.

VENU VINOD said...

ಗುರು ಯಾಕೋ ಫಿಲಸಾಫಿಕಲ್ ಆಗಿ ಬರೆದಿರೋ ಹಾಗಿದೆ :)
ಚೆನ್ನಾಗಿದೆ...

ಸಾಗರದಾಚೆಯ ಇಂಚರ said...

ಸುಮನ್ ಸರ್
ಬ್ಲಾಗಿಗೆ ಸ್ವಾಗತ
ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಕಮಲ್,
ನಿನಗೆ ಇಷ್ಟವಾಗಿದ್ದಕ್ಕೆ ನನಗೆ ಹೆಮ್ಮೆ

ಹೀಗೆಯೇ ಬರ್ತಾ ಇರು

ಸಾಗರದಾಚೆಯ ಇಂಚರ said...

ಸೀತಾರಾಂ ಸರ್

ಆ ಸಾಲುಗಳನ್ನು ಪಡೆ ಪಡೆ ಉಪಯೋಗಿಸಿದ್ದರ ಹಿಂದೆ ಅದರ ಅರ್ಥವನ್ನು
ಪದೇ ಪದೇ ತಿಳಿಸುವುದೇ ಆಗಿತ್ತು
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ವೇಣು,
ಮನಸ್ಸನ್ನು ತುಂಬಾ ಕಾಡಿದ ಕವನ ಇದು
ನೀವು ಅಂದಿದ್ದು ನಿಜಾ
ಹೀಗೆಯೇ ಬರ್ತಾ ಇರಿ

shivu.k said...

ಗುರುಮೂರ್ತಿ ಹೆಗಡೆ ಸರ್,

ನಿಮ್ಮ ಮೊದಲೇ ಓದಿದ್ದರೂ ಸಮಯದ ಅಭಾವದಿಂದ ಕಾಮೆಂಟಿಸಲಾಗಿರಲಿಲ್ಲ. ಈಗ ಮತ್ತೊಮ್ಮೆ ಓದಿದೆ. ಚೆನ್ನಾಗಿ ಬರೆದಿದ್ದೀರಿ.

ಅರ್ಥಪೂರ್ಣಸಾಲುಗಳ ಜೊತೆಗೆ ಎಚ್ಚರಿಕೆಯ ವಿಚಾರಗಳನ್ನು ಚೆನ್ನಾಗಿ ಹೇಳಿದ್ದೀರಿ.

Deepasmitha said...

ಸರ್, ಅರ್ಥಪೂರ್ಣ ಕವಿತೆ. ನಾನು ಸಾಮಾನ್ಯವಾಗಿ ಕವಿತೆಗಳನ್ನು ಓದುವುದು ಕಡಿಮೆ. ಆದರೆ ನಿಮ್ಮದು ಅದೇಕೊ ಓದದೆ ಬಿಡಲಾರೆ ಎನಿಸುವಂತೆ ಮಾಡಿತು

ಸಾಗರದಾಚೆಯ ಇಂಚರ said...

ಶಿವೂ ಸರ್

ನಿಮ್ಮ ಅಭಿಪ್ರಾಯ ಯಾವತ್ತೂ ಉತ್ಸಾಹದಾಯಕ
ನಿಮಗೆ ಇಷ್ಟವಾಗಿದ್ದಕ್ಕೆ ನನಗೆ ಹೆಮ್ಮೆ
ನಿಮ್ಮ ಪ್ರೀತಿ ಹಾರೈಕೆ ಸದಾ ಇರಲಿ

ಸಾಗರದಾಚೆಯ ಇಂಚರ said...

ದೀಪಸ್ಮಿತ,
ನಿಮ್ಮನ್ನು ನನ್ನ ಕವನ ಓದಿಸಿಕೊಂಡು ಹೋಯಿತು ಎಂದರೆ ನನಗೆ ಹೆಮ್ಮೆ
ನಿಮ್ಮೆಲ್ಲರ ಪ್ರೀತಿಯೇ ಸದಾ ಬರೆಯಲು ಸ್ಪೂರ್ತಿ
ಹೀಗೆಯೇ ಬರುತ್ತಿರಿ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

Ramesha said...

Thumba chennagide.. Kelavomme halavu pustakagalu heLalaagadaddannu ondu saNNa kavithe heLuttade..

Keep writing,
Ramesha

Ranjita said...

ಗುರು ಅಣ್ಣ ,
ತುಂಬಾ ಚೆನ್ನಾಗಿದ್ದು ... ಚಂದಾಗಿ ಪುಟ್ಟ ಕವನದಲ್ಲಿ ಶುಭಾಷಿತವನ್ನ ಹೇಳಿದಿರಿ

ಸಾಗರದಾಚೆಯ ಇಂಚರ said...

ರಂಜಿತ,
ನಿನ್ನ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೀಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

ರಮೇಶ ಸರ್

ಅಭಿಪ್ರಾಯಕ್ಕೆ ಧನ್ಯವಾದಗಳು
ಬರುತ್ತಿರಿ

ಜಲನಯನ said...

ಇದನ್ನ ಪೂರ್ತಿ ಲಯಭರಿತ ಮಾಡಿ ಗುರು...ಚನ್ನಾಗಿವೆ ಬುದ್ಧಿ-ಎಚ್ಚರಿಕೆ ಮಾತುಗಳು...ಹಾಡಿಕೊಳ್ಳಲು ಆಗುತ್ತೆ..ಮೂರು ಚರನವಾದ್ರೂ ಇದ್ರೆ...

ಗುರು-ದೆಸೆ !! said...

'ಸಾಗರದಾಚೆಯ ಇಂಚರ ಅವ್ರೆ..,

ಹೌದು ! ಅರಳೋ ಮನಸ ವೇದನೆಯು ನೂರಾರು...

ನನ್ನ 'ಮನಸಿನಮನೆ'ಗೆ ಬನ್ನಿ:http://manasinamane.blogspot.com/

arya_forU said...

ಸಕತ್ ಆಗಿದೆ ಸರ್

ಸಾಗರದಾಚೆಯ ಇಂಚರ said...

ಜಲನಯನ ಅಜ್ಹಾದ್ ಸರ್
ಖಂಡಿತ ರಾಗ ಹಾಕಿಸಬೇಕು ಅಂತಿದೆ
ನೋಡೋಣಾ ಏನಾಗುತ್ತೆ ಅಂತ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಗುರು-ದೆಸೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಆ ಸಾಲುಗಳು ತುಂಬಾ ಕಾಡಿವೆ ನನಗೆ

ಸಾಗರದಾಚೆಯ ಇಂಚರ said...

Arya4 u Sir,

ಥ್ಯಾಂಕ್ಸ್ ಸರ್
ಹೀಗೆ ಬರ್ತಾ ಇರಿ

ಪ್ರವೀಣ್ ಭಟ್ said...

Gurumoorthanna,

tumbaa chennagiddu..

aahunika vachanagaLu:)

Pravi

ಸಾಗರದಾಚೆಯ ಇಂಚರ said...

ಪ್ರವೀಣ್,
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹಿಂಗೆ ಬರ್ತಾ ಇರು

Manasa said...

Guru avre,

Tumbaa chenaagive salugaLu... Liked it :)

Manasa said...

Guru avree,

tumbaa chenagive nimma kaviteya saluGalu.... Like it :)

ಸಾಗರದಾಚೆಯ ಇಂಚರ said...

Manasa
thanks for the comments
heege barta iri

doddamanimanju said...

ನಿಮ್ಮ ಕವಿತೆ ಅಲ್ಲಿ ಬಾಳುವ ಬಗೆಯ ಬಗ್ಗೆ ತುಂಬಾ ಅರ್ಥ ತುಂಬಿದೆ !
ಸುಂದರ ಕವಿತೆ

ಸಾಗರದಾಚೆಯ ಇಂಚರ said...

Manju sir,

thanks for the comments

hinga bartaa iri

Namratha said...

nimma saalugala aala bhala ide endu gocharisuttade... olleya kavan.. bahushyaha beliyannu neladalliu bhala aalavagi gattiya hootittare ache baruvudu kashta... idannu aa beli hakidava madabeku..
matte innondu vichara iga holitu... beli bare gadavina nishaane...adu kayuvudilla.. kaayuvava berobbaniddane.. :) yenanteeri?

Namratha said...

nanna blog ge bhetineedi abhipraya barediddakke tumba dhanyavadagalu.. hege sahakaara munduvareyali..

ಅರಕಲಗೂಡುಜಯಕುಮಾರ್ said...

ಭಾವಯಾನಕ್ಕೆ ಬರಹದ ರೂಪ//
ತಂದಿತಿದೋ ಹೊಸತನದ ಛಾಪ//
ಸಾಗರದಾಚೆಯ ಇಂಚರ ನೀಡಿದೆ
ಅಮೂರ್ತ ಸ್ವರೂಪ//
ಧನ್ಯವಾದಗಳೂ ಸಾರ್
Nice lines.....:) Keep it up

ಸಾಗರದಾಚೆಯ ಇಂಚರ said...

ನಮ್ರತಾ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ನಿಮ್ಮ ಮಾತುಗಳು ಹೊಸ ಅರ್ಥ ನೀಡಿವೆ
ನೀವು ಅಂದಿದ್ದು ನಿಜ
ಬೇಲಿ ಏನನ್ನೂ ಕಾಯುವುದಿಲ್ಲ
ಕಾಯುವುದು ಬೇರೊಬ್ಬರೇ
ಆದರೆ ಬೇಲಿಯೇ ಇಲ್ಲದಿರೆ ದಾಳಿ ಮಾಡುವವನಿಗೆ ಮುಕ್ತ ಆಹ್ವಾನ ನೀಡಿದಂತೆ
ಇದೊಂದು ತರ ಮಕ್ಕಳಿಗೆ ಪರೀಕ್ಷೆಯೇ ಇಲ್ಲದಿದ್ದರೆ ಎಂದಂತೆ? ಅಲ್ಲವೇ
ಬೇಲಿ ಎನ್ನುವುದು ಕೇವಲ ಗದ್ದೆಗೆ ಮಾತ್ರವಲ್ಲ, ಅದು ಪ್ರತಿಯೊಬ್ಬರ ಮನ ಮನಗಳಿಗೆ ಸಂಭಂಧಿಸಿದ್ದು ಕೂಡಾ
ನಿಮ್ಮ ಸುಂದರ ಅಭಿಪ್ರಾಯಕ್ಕೆ ಮತ್ತೊಮ್ಮೆ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

ಜಯಕುಮಾರ್ ಸರ್
ನೀವೇ ಒಂದು ಸುಂದರ ಕವನ ಮಾಡಿಬಿಟ್ರಿ
ನಿಮ್ಮ ಪ್ರೀತಿ ಸಹಕಾರ ಹೀಗೆಯೇ ಇರಲಿ
ಬರ್ತಾ ಇರಿ

ಭಾಶೇ said...

chennagide!

ಸಾಗರದಾಚೆಯ ಇಂಚರ said...

Bhashe,

thanks for the comments

keep visiting

ವಿನುತ said...

"ಕುರುಡು ಕಾಂಚಾಣ ಕುಣಿಯುತಲಿತ್ತು.." ರಿದಮ್ ಗೆ ಹೊಂದಿಸಿಕೊಂಡು ಓದಿಸಿಕೊಂಡು ಹೋಯಿತು. ಚೆನ್ನಾಗಿದೆ.

ಸಾಗರದಾಚೆಯ ಇಂಚರ said...

ವಿನುತಾ,
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಬರುತ್ತಿರಿ

Frenzbench said...

Its very nice and meanigfull lines....