Sunday, March 7, 2010

ಕವಿತೆ ನಿನಗಾಗಿ

ಬ್ಲಾಗಿನಲ್ಲಿ ಬರೆಯದೆ ಬಹಳಷ್ಟು ದಿನಗಳಾಯಿತು. ಒಂದು ಬರಹ ಬರೆಯುತ್ತಿದ್ದೇನೆ. ಅದು ಇನ್ನೂ ಮುಗಿದಿಲ್ಲ. ಅದಕ್ಕೆ ಬ್ಲಾಗನ್ನು ಹಾಗೆಯೇ ಬಿಡಬಾರದೆಂದು ಒಂದು ಕವನ ಬರೆದಿದ್ದೇನೆ.

ಕಾಣದ ಪ್ರಿಯತಮೆಯ ಹುಡುಕುತ್ತಾ ಹೋದ ಪ್ರಿಯತಮನ ಮನಸಿನ ಭಾವನೆಗಳ ಅನಾವರಣ ಇದು. ಅವಳ ಕಾಣದೆ, ಇಲ್ಲ ಅವಳ ಇರುವಿಕೆ ತಿಳಿಯದೆ, ಅವನ ಮನ ತೊಳಲಾಡಿದೆ. ಅವಳ ನೆನಪು ಅವನಿಗೆ ಬದುಕಿನ ಸುಂದರ ಕ್ಷಣದ ನೆನಪು ತಂದಿದೆ. ಅವಳಿಗಾಗಿ ಕಾಯುತ್ತಾ , ಬರುವಿಕೆಗೆ ಚಡಪಡಿಸುತ್ತಾ ಕುಳಿತ ಭಗ್ನ ಪ್ರೇಮಿಯ ಮನದಾಳದ ಮಿಡಿತವಿದು.


ಎಲ್ಲಿರುವೆ , ಮನವ  ಕಾಡುವ ಮಾನಸಿಯೇ
ನಗುವಿನ, ಮುಖದಲಿ, ಎಲ್ಲಿಗೆ ನೀ ಹೋಗಿರುವೆ 
ನಿನ್ನ ಪ್ರೀತಿ ಮಾತು, ಮುತ್ತಿನಂತೆ ಹ್ರದಯಕೆ 
ನೀನು ಕಾಣದಿದ್ರೆ, ಏನೋ ನೋವು ಜೀವಕೆ

ನಿನ್ನ ರೂಪ ರಾಶಿ, ಸೆಳೆಯಿತೆನ್ನ ಅಲ್ಲಿಗೆ
ಬಂದು ಬಿಡುವೆ, ಬಾರದಿದ್ರೆ, ನೀನು ಈಗ ಇಲ್ಲಿಗೆ
 ನಿನ್ನ ಕಣ್ಣ ನೋಟದಲ್ಲಿ, ಜಗವನೇಕೆ ನುಂಗುವೆ
ನಾನು ನಿನ್ನ ಕಣ್ಣಿನಲ್ಲಿ, ನನ್ನೇ ಕಾಣ ಬಯಸುವೆ 

ನೀನು ಮುನಿಸಿಕೊಂಡರೆ, ಹೂವೆ ಬಾಡಿದಂತೆಯೇ
 ನೀನು ಅರಳಿ ನಿಂತರೆ, ಹೂವೆ ನಾಚಿ ಮಲಗಿವೆ
ನೀನು ಮನದಿ ಅತ್ತರೆ, ಹೃದಯ ಇಲ್ಲಿ ಮಿಡಿದಿದೆ
ನಿನ್ನ ಮನಕೆ ಸಾಂತ್ವನ, ಹೇಳಲೆಂದು ಕಾದಿದೆ

ಕಾದು ಕುಳಿತೆ, ಇನ್ನು ಏಕೆ, ಹೋದೆ ನೀನು ಎಲ್ಲಿಗೆ
ಬಂದು ನೀನು, ಮಾತನಾಡು, ಅರಳಿ ನಿಂತ ಮಲ್ಲಿಗೆ
ಸ್ನೇಹ ಎಂಬ ಬಂಧ ಎಂದೂ, ಇರಲಿ ನಮ್ಮ ಬಾಳಿಗೆ
ನೋವೆ ಇರಲಿ, ನಲಿವೆ ಬರಲಿ, ಸದಾ ಇರಲಿ ಮುಗುಳ್ನಗೆ 

70 comments:

Ranjita said...

ಗುರು ಅಣ್ಣ ,
ತುಂಬಾ ಚೆನ್ನಾಗಿದ್ದು :)
ಕೊನೆ ಪ್ಯಾರ ಸೂಪರ್ ..........

sunaath said...

ಗುರುಮೂರ್ತಿಯವರೆ,
ವಿರಹವೇ ಕವನರೂಪ ತಾಳಿದಂತಿದೆ!
"ನೀನು ಮುನಿಸಿಕೊಂಡರೆ, ಹೂವೆ ಬಾಡಿದಂತೆಯೇ
ನೀನು ಅರಳಿ ನಿಂತರೆ, ಹೂವೆ ನಾಚಿ ಮಲಗಿವೆ"
ತುಂಬ ಭಾವಪೂರ್ಣ ನುಡಿಗಳಿವು.

ದಿನಕರ ಮೊಗೇರ.. said...

soopar.... nimma kavanagaloo raagakke barada haagiratte sir.... omme try maadi sir...... endinante olle kavana..... ellaa pyaaragaloo arthabarbhitavaagide.........

kuusu Muliyala said...

ಒಳ್ಳೆಯ ಕವನ .ಸ್ನೇಹ ಎಂಬ ಬಂಧ ಎಂದೂ, ಇರಲಿ ನಮ್ಮ ಬಾಳಿಗೆ
ನೋವೆ ಇರಲಿ, ನಲಿವೆ ಬರಲಿ, ಸದಾ ಇರಲಿ ಮುಗುಳ್ನಗೆ -ಇದ೦ತೂ superb.

Subrahmanya Bhat said...

ಮೊದಲ ಸಾಲು ’ಬಯಲುದಾರಿ’ ಹಾಡಿನ ನೆನಪು ತಂದಿತು.
ಭಾವಪೂರ್ಣವಾಗಿದೆ ಕವನ. ಚೆನ್ನಾಗಿದೆ.

Manasaare said...

ಗುರು ಅವರೇ ,
ಕವಿತೆ ಸೂಪರ್ !! 80's ನಲ್ಲಿ ಬರುತ್ತಿದ್ದ ಹಳೆ ಕನ್ನಡ ಸಿನಿಮಾ ಹಾಡಿನಂತಿದೆ . ನಾನು " ಎಲ್ಲಿರುವೆ ಮನವ ಕಾಡುವ ರೂಪಸಿಯೇ " ಟ್ಯೂನ್ ಹಾಕಿ ಹಾಡುವ ಪ್ರಯತ್ನವು ಮಾಡಿದೆ :)
ಭಗ್ನ ಪ್ರೇಮಿಯ ವಿರಹ ಭಾವನೆಗಳು ಚೆನ್ನಾಗಿ express ಮಾಡಿದ್ದೀರಾ .

ಮನಸಾರೆ

ಸಾಗರಿ.. said...

ಗುರು ಅವರೇ,
ಕವನ ತುಂಬಾ ಚೆನ್ನಾಗಿದೆ. ವಿರಹಿಯ ವಿರಹದ ಬೇಗೆ ನಮಗೂ ತಟ್ಟಿದೆ.

ಮನಸು said...

ಗುರು,
ನಿಮ್ಮ ಕವನ ತುಂಬಾ ಚೆನ್ನಾಗಿದೆ, ಇದು ಯಾವಾಗ ಬರೆದದ್ದು ಎಂದು ಕೇಳಬಹುದೇ.... ಹಹಹ.... ಭಾವನೆಗಳ ಜೋಡಣೆ ಮನದಾಳದಲ್ಲಿ ಅಡಗಿದಂತೆ ಬರೆದಿದ್ದೀರಿ.
ವಂದನೆಗಳು.

ಮನಮುಕ್ತಾ said...

ನೋವೆ ಇರಲಿ ,ನಲಿವೆ ಇರಲಿ, ಸದಾ ಇರಲಿ ಮುಗುಳ್ನಗೆ..
ಸಾಲು ತು೦ಬಾ ಚೆನ್ನಾಗಿದೆ.
ಭಾವಪೂರ್ಣ ಕವಿತೆ ಚೆನ್ನಾಗಿದೆ.

ಸುಧೇಶ್ ಶೆಟ್ಟಿ said...

"ಎಲ್ಲಿರುವೆ... ಮನವ ಕಾಡುವ ರೂಪಸಿಯೇ..." ಸಿನಿಮಾ ಹಾಡನ್ನು ನೆನಪಿಸಿತು :)

ಚೆನ್ನಾಗಿದೆ....

Guru's world said...

ಗುರು ಸರ್...
ತುಂಬಾ ಚನ್ನಾಗಿ ಇದೆ,, ವಿರಹ ವೇದನೆ,,,,,,,ಒಳ್ಳೆಯ ಕವನ....... ಕೊನೆಯ ಸಾಲುಗಳು ತುಂಬಾ ಇಷ್ಟ ಆಯಿತು....

yogish said...

Good one!

ಸಾಗರದಾಚೆಯ ಇಂಚರ said...

ರಂಜಿತಾ,
ನಿನ್ನ ಕಾಮೆಂಟಿಗೆ ಥ್ಯಾಂಕ್ಸ್
ಬರ್ತಾ ಇರು

ಸಾಗರದಾಚೆಯ ಇಂಚರ said...

ಸುನಾಥ್ ಸರ್,
ಆ ಸಾಲುಗಳು ನನಗೂ ತುಂಬಾ ಇಷ್ಟವಾಗಿವೆ,
ನಿಮ್ಮ ಅಭಿಪ್ರಾಯಕ್ಕೆ ಸಂತೋಷವಾಯಿತು
ಹೀಗೆಯೇ ಬರ್ತಾ ಇರಿ

ಸಾಗರದಾಚೆಯ ಇಂಚರ said...

ದಿನಕರ್ ಸರ್
ನಿಮ್ಮ ಮಾತುಗಳನ್ನು ಕೇಳಲು ಸಂತೋಷ,
ಖಂಡಿತ ಅವಕಾಶ ಸಿಕ್ಕರೆ ರಾಗ ಹಾಕಿಸುವೆ
ಆದರೆ ಭಾರತಕ್ಕೆ ಬಂದ ಮೇಲೆ ಇದನ್ನೆಲ್ಲಾ ಮಾಡಬೇಕು
ಅಭಿಪ್ರಾಯಕ್ಕೆ ವಂದನೆಗಳು

ಸಾಗರದಾಚೆಯ ಇಂಚರ said...

ಕೂಸು ಮುಳಿಯಾಲ ಅವರೇ,
ನಿಮಗೆ ಇಷ್ಟವಾಗಿದ್ದಕ್ಕೆ ನನಗೆ ಹೆಮ್ಮೆ
ನೀವು ಓದುಗರೇ ಬರೆಯಲು ಸ್ಪೂರ್ತಿ

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಭಟ್ ಸರ್
ಕವನ ಬರೆಯುವಾಗ ಮನಸ್ಸಿನಲ್ಲಿ ''ಬಯಲು ದಾರಿ'' ತುಂಬಿತ್ತು
ಬಹುಶ ಅದಕ್ಕೆ ಆ ಹಾಡು ಬಹಳಷ್ಟು ಕಾಡಿದೆ

ಸಾಗರದಾಚೆಯ ಇಂಚರ said...

ಮನಸಾರೆ,
ಹೌದು, ನನಗೂ ಹಳೆಯ ಕನ್ನಡ ಪದ್ಯಗಳೆಂದರೆ ಪ್ರಾಣ,
ಆ ಹಳೆಯ ಪದ್ಯಗಳಲ್ಲಿನ ಭಾವನೆ ಈಗೆಲ್ಲಿ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸಾಗರಿ,
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು
ನಿಮ್ಮ ಬ್ಲಾಗ್ನಲ್ಲಿ ಕಾಮೆಂಟಿಸಲು ಬಹಳಷ್ಟು ಭಾರಿ ಪ್ರಯತ್ನಿಸಿದ್ದೇನೆ,
ಆದರೆ ಕಾಮೆಂಟಿಸಲು ಆಗುತ್ತಿಲ್ಲ
ಯಾಕೆ? ನಿಮಗೆ ಗೊತ್ತೇ?
ದಯವಿಟ್ಟು ತಿಳಿಸಿ

ಸಾಗರದಾಚೆಯ ಇಂಚರ said...

ಮನಸು,
ಇದನ್ನು ತೀರ ಇತ್ತೀಚಿಗೆ ಬರೆದಿದ್ದೇನೆ,
ವಿರಹದ ನೋವಿನ ನೆನಪು ಬಹಳಷ್ಟು ಮನಸ್ಸಿಗೆ ಸಂತಸ ಕೊಡುತ್ತದೆ,
ಆಗ ಹುಟ್ಟಿದ ಕವನ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಮನಮುಕ್ತಾ,
ಬದುಕಿನ ಅರ್ಥವೂ ಅದೇ ಅಲ್ಲವೇ?
ಸಂತಸ ಹಾಗೂ ದು:ಖ ಬಾಳಿನ ಎರಡೂ ಕಣ್ಣು ಗಳಲ್ಲವೇ ?
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಸುದೇಶ್ ಸರ್
ನಾನೂ ಅದೇ ರಾಗಕ್ಕೆ ಹಾಡಿಕೊಂಡಿದ್ದೇನೆ
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು

ಸಾಗರದಾಚೆಯ ಇಂಚರ said...

ಗುರು,
ನಿಮ್ಮ ಪ್ರೀತಿಪೂರ್ವಕ ಮಾತುಗಳು ಬರೆಯಲು ಪ್ರೇರೇಪಿಸುತ್ತವೆ
ಕಸದಿಂದ ರಸ ತೆಗೆಯುವ ಜನರ ಬಗೆಗೆ ನೀವು ಹಾಕುವ ಫೋಟೋಗಳು
ನನಗೆ ಬಹಳ ಹಿಡಿಸುತ್ತವೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಯೋಗಿಶ್
ಥ್ಯಾಂಕ್ಸ್ ನಿಮ್ಮ ಕಾಮೆಂಟಿಗೆ
ಹೀಗೆಯೇ ಬರ್ತಾ ಇರಿ

ಸವಿಗನಸು said...

ಗುರು,
ಕವಿತೆ ಸೂಪರ್ .......
ಬರೀತಾ ಇರಿ...

PARAANJAPE K.N. said...

ಕವಿತೆಯ ಆರ೦ಭ ಒ೦ದು ಸಿನಿಮಾ ಹಾಡನ್ನು ನೆನಪಿಸಿತು "ಎಲ್ಲಿರುವೆ ಮಾನವ ಕಾಡುವ ರೂಪಸಿಯೇ"
ಒಟ್ಟಿನಲ್ಲಿ ತು೦ಬ ಚೆನ್ನಾದ ನವಿರಾದ ಪದಪುಂಜ ಗಳಿ೦ದ ಕೂಡಿದೆ, ಚೆನ್ನಾಗಿದೆ.

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್
ನಿಮ್ಮ ಸ್ಪೂರ್ತಿದಾಯಕ ಮಾತುಗಳು ಯಾವಾಗಲು ಕವನ ಬರೆಯಲು ಪ್ರೇರಣೆ ನೀಡುತ್ತವೆ
ನೀವು ಹೇಳಿದಂತೆ ಇಲ್ಲಿನ ಹಿಮದ ಬಗೆಗೆ ಬರೆಯಲು ಪ್ರಯತ್ನಿಸಿದ್ದೇನೆ,
ಆದರೆ ಪದಪುಂಜಗಳ ಕೊರತೆ ಅರ್ಧಕ್ಕೆ ನಿಲ್ಲಿಸಿದೆ
ಹೀಗೆಯೇ ಬರುತ್ತಿರಿ

shivu.k said...

ಗುರುಮೂರ್ತಿ ಸರ್,

ಓದುತ್ತಿದ್ದಂತೆ ಮೊದಲು ಬಯಲು ದಾರಿ ಸಿನಿಮಾದ ಹಾಡು ನೆನಪಿಗೆ ಬಂತು. ನಂತರ ಓದುತ್ತಾ ಬೇರೆಯದೇ ಅರ್ಥ ಕೊಡುತ್ತಾ ಆತನ ವಿರಹದ ಭಾವನೆಗಳು ಹೊರಹೊಮ್ಮಿದವು.
ಚೆನ್ನಾಗಿ ಬರೆದಿದ್ದೀರಿ...

ಬಿಸಿಲ ಹನಿ said...

viraha manamidiyuvaMtide.

ಸಾಗರದಾಚೆಯ ಇಂಚರ said...

ಬಿಸಿಲ ಹನಿ ಉದಯ್ ಸರ್,
ಮನ ಮಿಡಿದರೆ ತಾನೇ ವಿರಹ ಹೋಗೋಕೆ ಸಾದ್ಯ,
ನಿಮ್ಮ ನೆಚ್ಚಿನ ಮಾತುಗಳಿಗೆ ಅಭಾರಿ

ಸಾಗರದಾಚೆಯ ಇಂಚರ said...

ಶಿವೂ ಸರ್
ಹಳೆಯ ನೆನಪುಗಳು ಎಷ್ಟು ಮಧುರ ಆಲ್ವಾ,

ಆ ಹಳೆಯ ಗೀತೆಗಳೂ ಇನ್ನು ಹೇಗೆ ಮನಸ್ಸಿನಲ್ಲಿ ಇವೆ ನೋಡಿ

ನಿಮ್ಮ ಪ್ರೀತಿಯ ಹಾರೈಕೆಗೆ ಧನ್ಯವಾದಗಳು

ಸಾಗರಿ.. said...

ಗುರು ಅವರೇ,
ಕಾಮೆಂಟಿಸಲು ಪ್ರಯತ್ನಿಸಿದ್ದಕ್ಕೆ ನಾನು ಆಭಾರಿ. ನನ್ನ ಕಾಮೆಂಟ್ ಸೆಟ್ಟಿಂಗಿನಲ್ಲಿ ಸ್ವಲ್ಪ ದೊಷವಿತ್ತು, ನನಗೂ ಗೊತ್ತಿರಲಿಲ್ಲ. ಕಾಕಾ ಅವರು(ಸಲ್ಲಾಪದ ಕಾಕಾ) ತಿಳಿಸಿದ್ದರಿಂದ ಕಾಮೆಂಟ್ ಸೆಟ್ಟಿಂಗನ್ನು ಸರಿಪಡಿಸಿದ್ದೇನೆ. ಈಗ ಕಾಮೆಂಟ್ ಬರೆಯಲು ಸಾಧ್ಯವಿದೆ. ನನ್ನ ಲೇಖನದ ತಪ್ಪು ಒಪ್ಪುಗಳನ್ನು ತಿದ್ದಿ ಹೇಳಿದರೇ ನನಗದೇ ಖುಷಿ.

Raghu said...

ಸರ್ ಒಳ್ಳೆಯ ಕವನ..ಒಳ್ಳೆಯ ಹೋಲಿಕೆ ಸಹ..
ನಿಮ್ಮವ,
ರಾಘು.

ತೇಜಸ್ವಿನಿ ಹೆಗಡೆ- said...

ತುಂಬಾ ಚೆನ್ನಾಗಿದ್ದು ಕವನ. ಕಾಯುವಿಕೆಯಲ್ಲಿರುವ ಸಂಭ್ರಮ, ಸಂತೋಷಗಳನ್ನು ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಿ ಕವನದಲ್ಲಿ.

ಜಲನಯನ said...

ಪ್ರೇಮ- ಅಮರ ಮತ್ತು ಅದರ ನೆನಪೇ ಮಧುರ...ವಿರಹ ಇದರ ತೀವ್ರತೆಗೆ ಒಂದು ಮಾಪನಾ ಮಾನದಂಡ...ಬಹಳ ಚನ್ನಾಗಿ ಮೂಡಿವೆ ಸಾಲುಗಳು...ಗುರು...ನಿಮ್ಮ ಕವನಗಳಲ್ಲಿ ತುಡಿತ ಹೆಚ್ಚಾಗ್ತಿದೆ...ಮುಂದುವರೆಯಲಿ...

ಸುಬ್ರಮಣ್ಯ ಮಾಚಿಕೊಪ್ಪ said...

ನಮಸ್ಕಾರ ಗುರುಮುರ್ತಿಯವರೇ .
ಕವನ ಚನ್ನಾಗಿದೆ.
ಯಾವುದಾದರೂ ಪ್ರವಾಸ ಕಥನ ಅಥವಾ ನಿಮ್ಮ ಅಲ್ಲಿನ ಅನುಭವಗಳಿಗೆ ಕಾಯುತ್ತಿದ್ದೇನೆ!!!

ಗುರು-ದೆಸೆ !! said...

'ಸಾಗರದಾಚೆಯ ಇಂಚರ' ಅವ್ರೆ..,

ಗೆಳತಿಯ ಕಣ್ಣಲ್ಲಿ ನಮ್ಮನ್ನು ನೋಡುವ ತವಕ ಚಂದವಲ್ಲವೇ... ಚೆನ್ನಾಗಿದೆ.

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

arya_forU said...

nce one sir :)

ಸಾಗರದಾಚೆಯ ಇಂಚರ said...

ಸವಿಗನಸು ಮಹೇಶ್ ಸರ್
ನಿಮ್ಮ ಅಶಿರ್ವಾದವೇ ಶ್ರೀರಕ್ಷೆ
ಹೀಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಸಾಗರಿ
ನಿಮ್ಮ ಬ್ಲಾಗ್ನಲ್ಲಿ ಕಾಮೆಂತಿಸಿದ್ದೇನೆ
ಹೀಗೆಯೇ ಬರ್ತಾ ಇರಿ

ಸಾಗರದಾಚೆಯ ಇಂಚರ said...

ರಘು
ಅಭಿಪ್ರಾಯಕ್ಕೆ ಥ್ಯಾಂಕ್ಸ್
ನಿಮ್ಮಂತ ಓದುಗರೇ ಬರೆಯಲು ಪ್ರೇರಕ ಪೂರಕ

ಸಾಗರದಾಚೆಯ ಇಂಚರ said...

ತೇಜಸ್ವಿನಿ ಯವರೇ,
ಕಾಯ್ತುವಿಕೆಯ ಸಂಭ್ರಮ, ಕಾದ ನಂತರ ಇರುವುದಿಲ್ಲ ಅಲ್ಲವೇ,
ಅದೊಂದು ತಾರಾ ಮುಚ್ಚಿಟ್ಟ ಪೆಟ್ಟಿಗೆಯ ಹಾಗೆ
ಕುತೂಹಲ ಪ್ರತಿಕ್ಷಣ
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು
ಬರುತ್ತಿರಿ

ಸಾಗರದಾಚೆಯ ಇಂಚರ said...

ಜಲನಯನ ಅಜಾದ್ ಸರ್
ವಿರಹ ಹೆಚ್ಚಿದಷ್ಟೂ ಪ್ರೇಮ ಬೆಳೆಯುತ್ತದೆ
ಒಂದನ್ನು ಬಿಟ್ಟು ಇನ್ನೊಂದಿಲ್ಲ ಅಲ್ಲವೇ?
ನಿಮ್ಮ ಸುಂದರ ಪ್ರತಿಕ್ರಿಯೆಗೆ ವಂದನೆಗಳು

ಸಾಗರದಾಚೆಯ ಇಂಚರ said...

ಮಾಚಿಕೊಪ್ಪ ಸರ್
ಸದ್ಯಕ್ಕೆ ಒಂದು ಪ್ರವಾಸ ಕಥನ ಬರೆಯುವ ಯೋಚನೆಯಲ್ಲಿದ್ದೇನೆ
ಖಂಡಿತ ಸದ್ಯದಲ್ಲಿಯೇ ಒಂದು ಪ್ರವಾಸ ಕಥನದೊಂದಿಗೆ ಬರುತ್ತೇನೆ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

ಗುರು-ದೆಸೆ,
ಹೌದು, ನೀವು ಅಂದಿದ್ದು ನಿಜ,
ಗೆಳತಿಯ ಕಣ್ಣಿನಲ್ಲಿ ನಮ್ಮನ್ನು ಕಾಣುವ ಬಗೆ ಅದ್ಭುತ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

Arya-for U

thanks for the comments, keep visiting

AntharangadaMaathugalu said...

ಸ್ನೇಹ ಎಂಬ ಬಂಧ ಎಂದೂ, ಇರಲಿ ನಮ್ಮ ಬಾಳಿಗೆ
ನೋವೆ ಇರಲಿ, ನಲಿವೆ ಬರಲಿ, ಸದಾ ಇರಲಿ ಮುಗುಳ್ನಗೆ...
ಸಾಲುಗಳು ತುಂಬಾ ಇಷ್ಟವಾದವು....

ಸಾಗರದಾಚೆಯ ಇಂಚರ said...

AntharangadaMaatugalu,

nimma abhipraayakke thanks

heegeye baruttiri

ವಿನುತ said...

"ನಿನ್ನ ಕಿರುನಗೆಯೊಂದು ಸಾಲದೇ ಓ ನಲ್ಲ ಬಾಳು ಬೆಳಕಾಗಲು.." ಭಾವಗೀತೆಯೇ ಮತ್ತೆ ಮೈದಳೆದು ಬಂದಂತಿದೆ. ಸುಂದರ ಕವನ. ಚೆನ್ನಿದೆ.

ಮೌನಿ said...

ಗುರು ಅಣ್ಣ....
ಮಸ್ತ್ ಇದ್ದು ಕವನ....ಭಾಳ ಕಷ್ಟ ಹೇಳಾತು...ಹಂಗಾದ್ರೆ....

ಸಾಗರದಾಚೆಯ ಇಂಚರ said...

ವಿನುತಾ,
ನಿಮ್ಮ ಚಂದದ ಅಭಿಪ್ರಾಯಕ್ಕೆ ಧನ್ಯವಾದಗಳು
ಕವನ ಓದುಗರಿಗೆ ಇಷ್ಟವಾದರೆ ಕವಿಗೆ ಇನ್ನೇನು ಬೇಕು ಹೇಳಿ

ಸಾಗರದಾಚೆಯ ಇಂಚರ said...

ಮೌನಿ
ಎಂತ ಕಷ್ಟನೋ,
ವಿರಹ ಕಷ್ಟನೋ, ಪ್ರೇಮ ಕಷ್ಟನೋ :)
ಹಿಂಗೆ ಬರ್ತಾ ಇರು
ಅಭಿಪ್ರಾಯಕ್ಕೆ ಥ್ಯಾಂಕ್ಸ್

Creativity!! said...

ಬಹಳ ಚೆನ್ನಾಗಿದೆ!!!!!

ಚಂದಿನ | Chandina said...

ಬಹಳ ಸುಂದರವಾದ ರಚನೆ...

ಸಾಗರದಾಚೆಯ ಇಂಚರ said...

ಕ್ರಿಯೇಟಿವಿಟಿ
ಥ್ಯಾಂಕ್ಸ್ ನಿಮ್ಮ ಅಭಿಪ್ರಾಯಕ್ಕೆ
ಹೀಗೆಯೇ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಚಂದಿನ ಸರ್
ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆಯೇ ಇರಲಿ
ನಿಮ್ಮ ಹಾಯ್ಕು ಗಳ ಅಭಿಮಾನಿ ನಾನು
ಹೀಗೆಯೇ ಬರುತ್ತಿರಿ

ಸೀತಾರಾಮ. ಕೆ. said...

ಡಾ.ಗುರುಮೂರ್ತಿಯವರೇ ಚೆ೦ದದ ಕವನ ಬಯಲದಾರಿಯ ಹಾಡನ್ನು ನೆನಪಿಸುತ್ತಾ ವಿರಹದ ಚಿತ್ರಣವನ್ನು ನೀಡಿದ ಮುದ್ದಾದ ಸರಳ ಸು೦ದರ ಕವನ.

SANTOSH MS said...

Sir,

Kavite is good. It reminds me the Anantnag song elliruve, manava kaaduva roopasiye

Shweta said...

ಗುರು ಸರ್,
ಸೂಪರ್ ಆಜು ...
ಕವಿಗಳ Imagination ಸೂಪರ್ ಅಲ್ಲ?

ಸಾಗರದಾಚೆಯ ಇಂಚರ said...

ಸೀತಾರಾಮ್ ಸರ್
ನಿಮಗೆ ಆ ಕವನವನ್ನು ನನ್ನ ಕವನ ನೆನಪಿಸಿತು ಎಂದರೆ ನನಗದೆ ಭಾಗ್ಯ
ನಿಮ್ಮ ಆಶೀರ್ವಾದ ಸದಾ ಇರಲಿ

ಸಾಗರದಾಚೆಯ ಇಂಚರ said...

Santhosh

many people told me the same thing.

thanks for the comments

keep visiting

ಸಾಗರದಾಚೆಯ ಇಂಚರ said...

ಶ್ವೇತಾ
ಹೌದು, ಕವಿಗಳಿಗೆ ಎಷ್ಟೊಂದು ಸ್ವಾತಂತ್ರ್ಯ ನೋಡು
ನಾವು ಎಷ್ಟೊಂದು Imagination ಮಾಡ್ಳಕ್ಕು
ಕನಸಿನಲ್ಲೇ ಎಷ್ಟೊಂದು ಸುಂದರ ಸೌಧ ಕಟ್ಟಲೆ ಆಗ್ತು
ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹಿಂಗೆ ಬರ್ತಾ ಇರು

Snow White said...

tumba andavaada saalugalu sir.. :)tumba ista aithu :)

Deepasmitha said...

ಗುರುಮೂರ್ತಿ ಸರ್, ಸೊಗಸಾಗಿದೆ ಕವನ. ವಿರಹ ಎಂತಹ ಕೃತಿಯನ್ನು ಸೃಷ್ಟಿಸುತ್ತದೆ ನೋಡಿ

ಸಾಗರದಾಚೆಯ ಇಂಚರ said...

Snow White,

thanks for your comments

heege bartaa iri

ಸಾಗರದಾಚೆಯ ಇಂಚರ said...

ದೀಪಸ್ಮಿತ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರ್ತಾ ಇರಿ

My life is full of Mirth said...

nanage tumba khushi agutte nimma kavithegalannu odalikke, tumba chennagi bariyuttira

My life is full of Mirth said...

tumba khushi agutte nimma kvithegalannu odalikke, tumba chennagi baritira

My life is full of Mirth said...

tumba chennagide nimma kavithe, khushi agutte odalikke

Manasa said...

Maanasi nenapinalli... telutiruva saagaradaacheya inchara :)

Nice one.. chenaagi barediddiree :)