Wednesday, March 24, 2010

You are not alone...


ಸ್ನೇಹಿತರೆ,
ಇಷ್ಟು ದಿನ ಕನ್ನಡ ಕವನ ಬರೆದೆ, ಅದಕ್ಕೆ ನಿಮ್ಮ ಪ್ರೋತ್ಸಾಹವೂ ಇತ್ತು, ಈದೀಗ  ಆಂಗ್ಲ ಭಾಷೆಯಲ್ಲಿ ಒಂದು ಕವನ ಬರೆದಿದ್ದೇನೆ, ಇದೊಂದು ಪ್ರಯೋಗ ಮಾತ್ರ ನಿಮ್ಮ ಅಭಿಪ್ರಾಯವೇ ನನಗೆ ಬರೆಯಲು ಸ್ಪೂರ್ತಿ, ''ಜೀವನದಲ್ಲಿ ನನಗೆ ಯಾರೂ ಇಲ್ಲ, ನಾನೊಬ್ಬ ಒಂಟಿ ಎಂಬ ಮನೋಭಾವನೆ ನಮಗೆ ಒಂದಿಲ್ಲೊಂದು ದಿನ, ಸಮಯದಲ್ಲಿ ಬರುತ್ತದೆ,ಅಂಥಹ ಸಮಯದಲ್ಲಿ ನಿನ್ನೊಂದಿಗೆ ನಾನಿದ್ದೇನೆ, ನನ್ನ ಪ್ರೀತಿಯಿದೆ, ನಿನ್ನ ಕಷ್ಟ ಸುಖದಲ್ಲಿ ಹೆಜ್ಜೆಯೊಂದಿಗೆ ಗೆಜ್ಜೆ ಕಟ್ಟಲು ನನ್ನ ಸ್ನೇಹವಿದೆ'' ಎಂಬುದರ  ಸಂಕೇತವೇ ಕವನಕ್ಕೆ ಪ್ರೇರಕ, ಪೂರಕ
Life is long
and am not so young
with the name of friend
spread the feel of joy, oh wind

You are not alone
always, you are mine
with the flower in your hand
give it to everyone, don't mind

Don't be a selfish
life is full of wish
with the goal in your hand
always smile, with kind

Monday, March 15, 2010

''ವಿಕೃತಿ'' ನಿನಗೆ ಸ್ವಾಗತ ಕೋರಿ

ಆತ್ಮೀಯ ಬ್ಲಾಗಿಗರೇ,
ಮತ್ತೊಂದು ಯುಗಾದಿ ಬಂದಿದೆ. ''ವಿಕೃತಿ'' ನಾಮ ಸಂವತ್ಸರದ ಯುಗಾದಿ ಸರ್ವರಿಗೂ ಸುಖದಾಯಕವಾಗಿರಲಿ ಹೊಸ ವರುಷ ಎಲ್ಲರ ಬಾಳಿನಲ್ಲಿಯೂ ಹೊಸ ಹರುಷವನ್ನು ತರಲಿ. ನಿಮ್ಮೆಲ್ಲರ ಮನೋ ಕಾಮನೆಗಳು  ಸಿದ್ದಿಸಲಿ. ಹೊಸ ವರುಷದ ಹೊಸ್ತಿಲಲ್ಲಿ ನಿಮಗೆ, ನಿಮ್ಮ ಕುಟುಂಬಕ್ಕೆ ಶುಭ ಹಾರೈಸುತ್ತಿದ್ದೇನೆ.


ಹಾಡಿತು ಕೋಗಿಲೆ, ಮಾಮರದಲ್ಲಿ
ಚಿಗುರಿತು ಮರ ಗಿಡ, ಜೀವನ ಚೆಲ್ಲಿ
ಬೀರುತ ಕಿರಣವ, ಭಾಸ್ಕರನಿಲ್ಲಿ
''ವಿಕೃತಿ'' ನಿನ್ನ ಕರೆಯುವೆವಿಲ್ಲಿ 

ನೋವುಗಳಂತೆ, ನಲಿವುಗಳು
ಹೊಸತನ, ಹೊಸಕ್ಷಣ, ಕನಸುಗಳು
ನಿನ್ನೆಯ ಮರೆಯದೆ, ಹೋದರೆ ಇಂದೇ 
ಇಂದಿನ ಸವಿಕ್ಷಣ, ಹಾಕುವೆ ಮುಂದೆ

ನವ ವರುಷದಿ, ನವ ಭಾವನೆ ಬೀರಿ
ನವಮಾಸದಿ, ನವ ಸಾಧನೆ ತೋರಿ
ಸೇರುವ ಗುರಿ, ಹಿಡಿ, ಒಲವಿನ ದಾರಿ
''ವಿಕೃತಿ'' ನಿನಗೆ ಸ್ವಾಗತ ಕೋರಿ  

Sunday, March 7, 2010

ಕವಿತೆ ನಿನಗಾಗಿ

ಬ್ಲಾಗಿನಲ್ಲಿ ಬರೆಯದೆ ಬಹಳಷ್ಟು ದಿನಗಳಾಯಿತು. ಒಂದು ಬರಹ ಬರೆಯುತ್ತಿದ್ದೇನೆ. ಅದು ಇನ್ನೂ ಮುಗಿದಿಲ್ಲ. ಅದಕ್ಕೆ ಬ್ಲಾಗನ್ನು ಹಾಗೆಯೇ ಬಿಡಬಾರದೆಂದು ಒಂದು ಕವನ ಬರೆದಿದ್ದೇನೆ.

ಕಾಣದ ಪ್ರಿಯತಮೆಯ ಹುಡುಕುತ್ತಾ ಹೋದ ಪ್ರಿಯತಮನ ಮನಸಿನ ಭಾವನೆಗಳ ಅನಾವರಣ ಇದು. ಅವಳ ಕಾಣದೆ, ಇಲ್ಲ ಅವಳ ಇರುವಿಕೆ ತಿಳಿಯದೆ, ಅವನ ಮನ ತೊಳಲಾಡಿದೆ. ಅವಳ ನೆನಪು ಅವನಿಗೆ ಬದುಕಿನ ಸುಂದರ ಕ್ಷಣದ ನೆನಪು ತಂದಿದೆ. ಅವಳಿಗಾಗಿ ಕಾಯುತ್ತಾ , ಬರುವಿಕೆಗೆ ಚಡಪಡಿಸುತ್ತಾ ಕುಳಿತ ಭಗ್ನ ಪ್ರೇಮಿಯ ಮನದಾಳದ ಮಿಡಿತವಿದು.


ಎಲ್ಲಿರುವೆ , ಮನವ  ಕಾಡುವ ಮಾನಸಿಯೇ
ನಗುವಿನ, ಮುಖದಲಿ, ಎಲ್ಲಿಗೆ ನೀ ಹೋಗಿರುವೆ 
ನಿನ್ನ ಪ್ರೀತಿ ಮಾತು, ಮುತ್ತಿನಂತೆ ಹ್ರದಯಕೆ 
ನೀನು ಕಾಣದಿದ್ರೆ, ಏನೋ ನೋವು ಜೀವಕೆ

ನಿನ್ನ ರೂಪ ರಾಶಿ, ಸೆಳೆಯಿತೆನ್ನ ಅಲ್ಲಿಗೆ
ಬಂದು ಬಿಡುವೆ, ಬಾರದಿದ್ರೆ, ನೀನು ಈಗ ಇಲ್ಲಿಗೆ
 ನಿನ್ನ ಕಣ್ಣ ನೋಟದಲ್ಲಿ, ಜಗವನೇಕೆ ನುಂಗುವೆ
ನಾನು ನಿನ್ನ ಕಣ್ಣಿನಲ್ಲಿ, ನನ್ನೇ ಕಾಣ ಬಯಸುವೆ 

ನೀನು ಮುನಿಸಿಕೊಂಡರೆ, ಹೂವೆ ಬಾಡಿದಂತೆಯೇ
 ನೀನು ಅರಳಿ ನಿಂತರೆ, ಹೂವೆ ನಾಚಿ ಮಲಗಿವೆ
ನೀನು ಮನದಿ ಅತ್ತರೆ, ಹೃದಯ ಇಲ್ಲಿ ಮಿಡಿದಿದೆ
ನಿನ್ನ ಮನಕೆ ಸಾಂತ್ವನ, ಹೇಳಲೆಂದು ಕಾದಿದೆ

ಕಾದು ಕುಳಿತೆ, ಇನ್ನು ಏಕೆ, ಹೋದೆ ನೀನು ಎಲ್ಲಿಗೆ
ಬಂದು ನೀನು, ಮಾತನಾಡು, ಅರಳಿ ನಿಂತ ಮಲ್ಲಿಗೆ
ಸ್ನೇಹ ಎಂಬ ಬಂಧ ಎಂದೂ, ಇರಲಿ ನಮ್ಮ ಬಾಳಿಗೆ
ನೋವೆ ಇರಲಿ, ನಲಿವೆ ಬರಲಿ, ಸದಾ ಇರಲಿ ಮುಗುಳ್ನಗೆ