ಓ ಬನ್ನಿ ಬಾಂಧವರೇ...
- ಗುರು ಬಬ್ಬಿಗದ್ದೆ
ಬನ್ನಿರೆಲ್ಲ ಭಾಂಧವರೆ ಹೊಸ ನಾಡನು ಕಟ್ಟೋಣ
ಜಾತಿ ಮತಗಳ ಮೀರಿದ ಹೊಸ ಜಾಡನು ಹುಡುಕೋಣ
ಬಡತನ ಸಿರಿತನ ಬೇಡ ಒಂದೇ ಆಗೋಣ
ದುಡಿತದಿ ದೇಶದ ವಿಧಿಯ ನಾವು ಎತ್ತಿ ಮೆರೆಸೋಣ
ಪ್ರೀತಿ ಪ್ರೇಮದ ಪಾಠ ಜಗದಗಲಕೆ ಹರಡೋಣ
ಎಲ್ಲರೂ ಸೇರಿ ಬೆರೆತು ಹೊಸ ಪಥವ ಹಿಡಿಯೋಣ ಹೊಸ ಪಥವ ಹಿಡಿಯೋಣ ೧
ಮೇಲು ಕೀಳು ಭೇಧ ಭಾವ ಕಿತ್ತು ಒಗೆಯೋಣ
ನಾನು ಹೆಚ್ಚು ನೀನು ಹೆಚ್ಚು ಮರೆತೇ ಬಿಡೋಣ
ಕೈಗೆ ಕೈಯ ಸೇರಿಸು ಮತ್ಸರವ ಬಿಡೋಣ
ಭರತ ಮಾತೆಯ ಮಡಿಲಲಿ ಜೀವ ಪಾವನ ಜೀವ ಪಾವನ ೨
ಮೌಡ್ಯತೆ ಜಾಡ್ಯತೆ ಎಲ್ಲ ಮೆಟ್ಟಿ ನಿಲ್ಲೋಣ
ದ್ವೇಷಕೆ ಪ್ರೀತಿ ತೋರಿ ನಾವ್ ಸುಖವ ಹರಿಸೋಣ
ಪ್ರಗತಿಯ ಪಥದಲಿ ನಡೆದು ಎಲ್ಲರನು ಒಯ್ಯೋಣ
ಅನುಕ್ಷಣ ಭೂಮಿಯ ಋಣವ ನಾವು ತೀರಿಸಿ ಹೋಗೋಣ ನಾವು ತೀರಿಸಿ ಹೋಗೋಣ ೩
ಬುದ್ದ ಹುಟ್ಟಿದ ನಾಡಿದು ಶಾಂತಿಯ ತಾಣ
ಒಡನಾಡಿಗಳು ನಾವು ಹೊಡೆದಾಟ ಏಕಣ್ಣಾ
ಹೆತ್ತ ತಾಯಿ ಹೊತ್ತ ತಾಯಿ ಜೀವದಾತೆಯಣ್ಣ
ಓ ಬನ್ನಿ ಭಾಂಧವರೇ ಹೊಸ ನಾಡನು ಕಟ್ಟೋಣ ಹೊಸ ನಾಡನು ಕಟ್ಟೋಣ ೪
the ಗದಗ
-
(ಈ ಪೋಸ್ಟ್ ನನಗೆ drafts ನಲ್ಲಿ ಸಿಕ್ಕಿತು. 2017 ನಲ್ಲಿ ಬರೆದಿದ್ಫು. ನನ್ನ ಪೋನ್
ಹಾಳಾಗಿ ಚಿತ್ರಗಳು ಇಲ್ಲ. ಗದಗ ಕ್ಕೆ ಹಿದಾಗ ನಮ್ಮ ಜತೆ ಬಂದಿದ್ದವರ ಬಳಿ photos ಬಗ್ಗೆ
ಕೇಳಿದೆ. ಹ...
1 day ago
4 comments:
ಗುರುರವರೆ...
ನಿಮ್ಮ ಈ ಕವನ ಬಹಳ ಚೆನ್ನಾಗಿದೆ... ಎಲ್ಲರೊ ಒಂದಾದರೆ ದೇಶದ ಕೀರ್ತಿ ಉತುಂಗಕ್ಕೆ ಏರುವುದರಲ್ಲಿ ಸಂಶಯವೇ ಇಲ್ಲ...
ಹೀಗೆ ನಿಮ್ಮ ದೇಶ ಪ್ರೇಮ ಸಾಗಲಿ ಸಾಗರದಾಚೆ
ವಂದನೆಗಳು..
ಗುರು,
ಕವನ ಉತ್ತಮವಾಗಿದೆ.
wonderful
ಕವನದ ಮೂಲಕ ಒಳ್ಳೆ ಸಂದೇಶ ಕೊಟ್ಟಿದ್ದೀರ ಡಾಕ್ಟರೆ.
Post a Comment