Sunday, September 25, 2011

ನಿಮ್ಮ ಬೈಗುಳ ತಾಗದೆ ಇದ್ದಿದ್ದರೆ ....


ಆ ದಿನಗಳೇ ಹಾಗಿತ್ತು, ಒಂದು ಬೈದರೆ ಕಡಿಮೆ , ಎರಡು ಬೈದರೆ ಹೆಚ್ಚು. ಕ್ಲಾಸಿನ ಬಾಗಿಲ ತುದಿಯಲ್ಲಿ ಹುಡುಗಿಯೊಬ್ಬಳು ನಕ್ಕರೆ ಅವಳು ನಮ್ಮನ್ನೇ ನೋಡಿ ನಕ್ಕಳೋ? ಅವಳಿಗೆ ನಮ್ಮ ಕಂಡರೆ ಇಷ್ಟವೇನೋ? ಎಂದೆಲ್ಲ ಚಿಂತಿಸಿ ಅವಳಿಗೆ ನಮ್ಮ ಮೇಲೆ ಪ್ರೀತಿ ಬಂದಿದೆ ಎಂದು ತರ್ಕಿಸಿ ಅದನ್ನು ಎಲ್ಲ ಗೆಳೆಯರಲ್ಲಿ ಟಂ ಟಂ ಮಾಡುವ ವಯಸ್ಸದು. ತರಗತಿಯಲ್ಲಿ ಉಪನ್ಯಾಸಕರು ಸಿಟ್ಟಿನಿಂದ ನಮಗೆ ಅವಮಾನ ಮಾಡಿದರೆ ಅವರು ನಮ್ಮ ಆಜನ್ಮ ಶತ್ರುಗಳು ಎಂದು ಭಾವಿಸಿ ಅವರ ಮೇಲೆ ಸೇಡು ಹೇಗೆ ತೀರಿಸಿಕೊಳ್ಳಬೇಕು ಎಂದು ಮನದೊಳಗೆ ಲೆಕ್ಕ ಹಾಕುವ ಮನಸ್ಸದು. ರಸ್ತೆಯಲ್ಲೆಲ್ಲೋ ಮಂತ್ರಿ ಮಾಗಧರು ಭಾಷಣ ಮಾಡುತ್ತಿದ್ದರೆ ನಾವೇ ಮಂತ್ರಿಗಳೆನೋ ಎಂದು ಭಾವಿಸಿ ಮನದೊಳಗೆ ಮಂತ್ರಿಯಾದಂತೆ ಭವಿಷ್ಯದ ರಾಷ್ಟ್ರ ರೂಪಿಸುವ ಹೊಸ ಕನಸ್ಸದು. ಒಟ್ಟಿನಲ್ಲಿ ಬದುಕಿಗೆ ಸರ್ವಸ್ವವನ್ನೂ ಬಯಸುವ ತುಂಟ ಮನಸಿನ ಸೊಗಸು ಅದು.

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ದಿನಗಳ ನೆನಪು ನನಗೆ ಸದಾ ಮನದಲ್ಲಿ ಉಳಿಯುವಂತಾದ್ದು. ಅದಕ್ಕೆ ಅನೇಕ ಕಾರಣಗಳಿವೆ. ಆ ದಿನಗಳಲ್ಲಿ ಕಷ್ಟವಿತ್ತು, ಸುಖವಿತ್ತು, ಸಾಧನೆಯಿತ್ತು , ನೋವಿತ್ತು, ನಲಿವಿತ್ತು, ಕಲಿಯುವ ಅದಮ್ಯ ಉತ್ಸಾಹವಿತ್ತು. ಬಹುಶ: ಉಡುಪಿಗೆ ನಾನು ಅಂದು ಹೋಗದೇ ಇದ್ದಿದ್ದರೆ ಇಂದು ಇಲ್ಲಿ ನಾನು ಇರುತ್ತಿರಲಿಲ್ಲ. ಪೂರ್ಣಪ್ರಜ್ಞ ಕಾಲೇಜು ನೆನಪಾದ ಕೂಡಲೇ ನೆನಪಾಗುವ ವ್ಯಕ್ತಿತ್ವ ಪ್ರೊಫೆಸರ್ ಡಿ ಜಿ ಹೆಗಡೆ ಅವರದ್ದು. ನಾನು ಅಲ್ಲಿರುವಷ್ಟು ಕಾಲ ನನ್ನನ್ನು ಮಗನಂತೆ ಅವರು ನೋಡಿಕೊಂಡಿದ್ದರು. ಅನೇಕ ಸಂದರ್ಭಗಳಲ್ಲಿ ನನಗೆ ಬಹಳಷ್ಟು ಸಹಾಯ ಮಾಡಿದ ಮಹಾನ್ ವ್ಯಕ್ತಿತ್ವ ಅವರದ್ದು. ಉಡುಪಿಯ ಕಾಲೇಜಿನ ನೆನಪಾದಾಗಲೆಲ್ಲ ನಮ್ಮನ್ನಗಲಿದ ಅವರ ನೆನಪು ಕಾಡುತ್ತದೆ. ನನ್ನ ವ್ಯಕ್ತಿತ್ವ ರೂಪಿಸುವಲ್ಲಿ ಅವರ ಪಾಲು ಬಹು ದೊಡ್ಡದು. ಕಾಲೇಜಿನ ದಿನಗಳೆಂದರೆ ಒಂಥರಾ ಮರ ಹತ್ತುವ ಮಂಗನ ಮನಸ್ಸು. ಎಲ್ಲ ಮರವೂ ನಮ್ಮದೇ ಎನ್ನುವ ಹುಂಬತನ. ಎಲ್ಲ ವಿಷಯಗಳಲ್ಲೂ ಪ್ರಾವೀಣ್ಯತೆ ಸಾಧಿಸುವ ಭಂಡತನ. ಅದು ಸರಿಯಾಗಿ ಅರ್ಥ ಆಗುವಷ್ಟರಲ್ಲಿ ನಾವು ಇಳಿಯುವ station ಬಂದಿರುತ್ತದೆ. ತಿರುಗಿ ಹೋಗುವಂತಿಲ್ಲ.ಮುಂದುವರೆಯಲು ಬೇರೆ ರಸ್ತೆಗಳು ಹೆಚ್ಚಿಲ್ಲ ಎನ್ನುವ ಸ್ಥಿತಿ. ಆದರೆ ಸಾಂಸ್ಕ್ರತಿಕ ರಾಜಧಾನಿ ಉಡುಪಿಯಲ್ಲಿ ಶಿಕ್ಷಣದ ಜೊತೆಗೆ ಕಲಿಯುವ ಪಾಠವಿದೆಯಲ್ಲ ಅದನ್ನು ಬೇರೆ ಎಲ್ಲಿಯೂ ಕಲಿಯುವುದು ಕಷ್ಟ. ಉಡುಪಿ ಶಿಕ್ಷಣದ ಜೊತೆ ಬದುಕನ್ನು ಕಲಿಸುತ್ತದೆ. ಪ್ರತಿದಿನ ಬರುವ  ಲಕ್ಷಾಂತರ ಭಕ್ತಾದಿಗಳು,  ಶ್ರೀ ಕ್ರಷ್ಣನ ಸನ್ನಿಧಾನದಲ್ಲಿ ಭಕ್ತಿ ಪರವಶರಾಗಿ ತಮ್ಮನ್ನು ಆ ಜಗನ್ನಿಯಾಮಕನಿಗೆ ಅರ್ಪಿಸಿಕೊಳ್ಳುವ ಪರಿ, ಅವನಿಗಾಗಿ ಮಾಡುವ ಸೇವೆ ಇವೆಲ್ಲವೂ ನೋಡಿಯೇ ಕಣ್ಣು ತಣಿಸಿಕೊಳ್ಳಬೇಕು. 

ಕಾಲೇಜಿನ ಆ ದಿನಗಳಲ್ಲಿ ನಾನು ಬಹಳಷ್ಟು ಚರ್ಚಾ ಸ್ಪರ್ಧೆಗಳಲ್ಲಿ , ಭಾಷಣ ಸ್ಪರ್ಧೆಗಳಲ್ಲಿ, ಭಾಗವಹಿಸಿದ್ದೇನೆ. ನನ್ನೊಂದಿಗೆ ನನ್ನ ಆತ್ಮೀಯ ಸ್ನೇಹಿತರಾದ ಅಶ್ವಥ್ ಭಾರದ್ವಾಜ ಮತ್ತು ಕಮಲಾಕರ್ ಕೂಡಾ ಇದ್ದರು. ನಾವು ಮೂರು ಜನ ಬಹಳಷ್ಟು ಪ್ರಶಸ್ತಿ ಗೆದ್ದಿದ್ದೇವೆ. ಇಂದಿಗೂ ಅಲ್ಲಿಗೆ ಹೋದರೆ ಇದನ್ನೆಲ್ಲಾ ನೆನಪಿಸಿಕೊಳ್ಳುವ ಉಪನ್ಯಾಸಕರ ಸಮೂಹವಿದೆ, ಅದಕ್ಕೆ ನಾನು ಋಣಿ. ತಿಂಗಳಿಗೆ ಸುಮಾರು 7 -8  ದಿನ ಕೇವಲ ಅದು ಇದು ಸ್ಪರ್ಧೆಗಳಲ್ಲೇ ಕಾಲ ಕಳೆಯುವ ನಾನು ನಮ್ಮ ವಿಜ್ಞಾನ ವಿಭಾಗದ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದೆ.  ನಮ್ಮಲ್ಲಿ ಒಂದು ಮಾತಿದೆ ''ವಿಜ್ಞಾನದ ವಿಧ್ಯಾರ್ಥಿಯೆಂದರೆ ಆತ ಪುಸ್ತಕ ಬಿಟ್ಟು ಏಳುವಂತಿಲ್ಲ, ಅವನಿಗೆ ಆಟ ಅಲರ್ಜಿ, ಊಟ ಬೇಕಿದ್ದರೆ ಮಾತ್ರ, ಸದಾ ಪುಸ್ತಕದ ಬದನೇಕಾಯಿ ತಿಂದೆ ಆತ ಬದುಕಬೇಕು, 90 % ಗಿಂತ ಕಡಿಮೆ ಬಂದರೆ ಆತ ಬದುಕಲು ಅನರ್ಹ'' ಹೀಗೆಯೇ ಪಟ್ಟಿ ಸಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತಕ್ಕೆ ಭೆಟ್ಟಿ ಕೊಟ್ಟಾಗ ಎಲ್ಲ ತಂದೆ ತಾಯಿಗಳ ಮಾನಸಿಕ ಒತ್ತಡ ಗಮನಿಸಿದ್ದೇನೆ. ಅವರ ಮಾತುಗಳೇನು    ಗೊತ್ತ ''ನನ್ನ ಮಗಳು/ಮಗ ಓದುತ್ತಿಲ್ಲ, ಅವರು ಇಂಜಿನಿಯರ್ ಅಥವಾ ವೈದ್ಯರು ಆಗಬೇಕು. ಆದರೆ ಹಿಂದಿನ ಸಲದ ಪರೀಕ್ಷೆಯಲ್ಲಿ 95 % ಮಾತ್ರ ತೆಗೆದುಕೊಂಡಿದ್ದಾರೆ. ಹೀಗಾದರೆ ನಾವು ದುಡಿದದ್ದು ವ್ಯರ್ಥ. ಇಡೀ ದಿನ ಟ್ಯುಶನ್ ಗೆ ಹೋದರು ಮಾರ್ಕ್ಸ್ ತೆಗೆಯುವುದಿಲ್ಲ ಎಂದು'' ನಾವು ಮಕ್ಕಳಿಗೆ ಬದುಕಿನ ಪಾಠ ಹೇಳುತ್ತಿಲ್ಲ ಬದಲಿಗೆ ಹಣದ ಪಾಠ ಹೇಳುತ್ತಿದ್ದೇವೆ. ಅವರಿಗೆ ಆಡುವ ಮನಸ್ಸು ಹೋಗುತ್ತಿದೆ, ಪಾಲಕರ ಒತ್ತಾಯಕ್ಕೆ ಓಡುವ ಕುದುರೆಗಳು ಆಗಿವೆ ಅವೆಲ್ಲ. ಇಂಥಹ ಒತ್ತಡವೇ ಅವರನ್ನು ಆತ್ಮಹತ್ಯೆ ಯಂತ ಹೇಡಿತನಕ್ಕೆ ದಾರಿ ಮಾಡಿಕೊಡುತ್ತದೆ. ಮೊದಲಿಗೆ ಬದುಕನ್ನು ಅವರು ಕಲಿಯಲಿ, ನಂತರ ಬದುಕೇ ಅವರಿಗೆ ಎಲ್ಲವನ್ನು ಕಲಿಸುತ್ತದೆ.

ಉಡುಪಿಯ ಕಾಲೇಜಿನ ರಸಾಯನ ಶಾಸ್ತ್ರದ ಉಪನ್ಯಾಸಕರಲ್ಲಿ ಕೆಲವರಿಗೆ ನನ್ನ ಮೇಲೆ ಬಹಳ ಕೋಪವಿತ್ತು. ಸದಾ ಭಾಷಣಕ್ಕೆ  ಹೋಗುವ ನಾನು ನನ್ನ ಬದುಕನ್ನೇ ಹಾಳು ಮಾಡಿಕೊಳ್ಳುತ್ತೇನೆ, ನಾನು ಏನು ಸಾಧಿಸುವುದಿಲ್ಲ ಎಂಬ ಕೊರಗಿತ್ತು. ಸಿಟ್ಟು ಯಾವಾಗಲೂ ಪ್ರೀತಿ ಇರುವವರಲ್ಲಿ ಹೆಚ್ಚಾಗಿ ಸುಳಿಯುತ್ತದೆ. ಆ ಮಟ್ಟಿಗೆ ನಾನು ತುಂಬಾ ಅದ್ರಷ್ಟವಂತ. ಆ ಎಲ್ಲ ರಸಾಯನ ಶಾಸ್ತ್ರ ದ ಉಪನ್ಯಾಸಕರಿಗೆ ನನ್ನ ಮೇಲೆ ಕೋಪ, ಸೊ ನಾನು ಅಂದುಕೊಂಡೆ ನನ್ನ ಮೇಲೆ ವಿಪರೀತ ಪ್ರೀತಿ ಅದಕ್ಕೆ ಕೋಪ ಎಂದು :)
 ಕೆಲವೊಮ್ಮೆ ಹೀಗೆ ಅಂದುಕೊಳ್ಳೋದು ಮನಸನ್ನ ಹಗುರ ಮಾಡತ್ತೆ. ಇಲ್ದೆ ಇದ್ರೆ ಚಿಂತೇನೆ ತಲೆ ಹೊಕ್ಕಿ ನಮ್ಮನ್ನ ಚಿತೆ ಮಾಡಿ ಹಾಕುತ್ತೆ. ನನಗೆ ಇನ್ನು ನೆನಪಿದೆ, ನಾನಾಗ ಬಿ ಎಸ್ಸ್ ಸಿ ಕೊನೆಯ ವರ್ಷದಲ್ಲಿದ್ದೆ. ಪರೀಕ್ಷೆ ಹತ್ತಿರ ಬರ್ತಾ ಇತ್ತು. ಜನವರಿ  ತಿಂಗಳ ಅನಿಸತ್ತೆ. ರಸಾಯನ ಶಾಸ್ತ್ರದ ಉಪನ್ಯಾಸಕರು  (chemistry ಗೆ ನಾನು ಕರೆಯೋದು ಕೆಮ್ಮು ಎಷ್ತ್ರಿ ಅಂತಾನೆ ಯಾವಾಗಲು) ಪ್ರಾಕ್ಟಿಕಲ್ ತಗೋತ ಇದ್ರು. ಆ ದಿನಗಳಲ್ಲಿ ನನ್ನ ಮೇಲೆ ಅವ್ರಿಗೆಕೋ ವಿಪರೀತ ಕೋಪ. ತುಂಬಾ ಸಿಡುಕ್ತ ಇದ್ರು, ಬಹುಶ: ಈಗ ಆಗಿದ್ರೆ ಅವರ ಸಿಡುಕಿನ ಮುಖ ಫೋಟೋ ತೆಗೆದು facebook  ನಲ್ಲಿ ಹಾಕ್ತಿದ್ನೇನೋ. ಆದರೆ ಆ ದಿನಗಳು ಹಾಗಿರಲಿಲ್ಲ. ನಾನು ಭಾಷಣಕ್ಕೆ ಹೋಗೋದು ಬೇಡಾ ಅಂತ ತುಂಬಾ ಸಲ ಕ್ಲಾಸಿನಲ್ಲಿ ಹೇಳಿದ್ರು. ಆದ್ರೂನು ಅವರ ಮಾತನ್ನ ಮೀರಿ ನಾನು ತುಂಬಾ ಸಲ ಹೋಗಿದ್ದೆ. ಅದು ಒಂತರ ಗಣಪತಿ ದೇವಸ್ಥಾನಕ್ಕೆ ಹೋಗಿ ಆಮೇಲೆ, ದೇವಿ, ದುರ್ಗೆ, ಶ್ರೀ ಹರಿ ಹೀಗೆ ಬೇರೆ ಬೇರೆ ದೇವಸ್ಥಾನಕ್ಕೆ ಹೋದ ಹಾಗೆ, ಇವರು ಬೈದರು ಅಂತ ಇನ್ನೊಂದು ಕಡೆ ಹೋಗೋದು ಬಿಡೋಕೆ ಆಗುತ್ತ ಅನ್ನೋ ಹುಂಬ ಮನಸ್ಸು ಅದು. 

ಪ್ರಾಕ್ಟಿಕಲ್ ಪ್ರಾರಂಭ ಆಗಿತ್ತು. ಎಲ್ಲರ ಪ್ರಾಕ್ಟಿಕಲ್ ಬುಕ್ ಚೆಕ್ ಮಾಡ್ತಾ ಬಂದ್ರು. ನಾನು ಎಷ್ಟೇ ಭಾಷಣಕ್ಕೆ ಹೊದ್ರುನು ಕ್ಲಾಸಿನ ಕೆಲಸನ ಕರೆಕ್ಟ್ ಆಗಿ ಮಾಡಿರ್ತಿದ್ದೆ. ಆ ದಿನ ನನ್ನ ಪ್ರಾಕ್ಟಿಕಲ್ ಬುಕ್ ಚೆಕ್ ಮಾಡೋಕೆ ತಗೊಂಡ್ರು. ಏನೋ, ಅದು ಇದು ಅಂತ 4  ಪೇಜ್ ತಿರುಗಿಸಿ ಕಸದ ಬುಟ್ಟಿಯ ಕಡೆ ಬಿಸಾಕಿ ಬಿಟ್ರು. ನನಗೆ ಥರ ಥರ ನಡುಕ. ಇದೇನಾಯ್ತು ಇವರಿಗೆ ಅಂತ. ಅವರಿಗೆ ಅದೆಲ್ಲಿಂದ ಸಿಟ್ಟು ಬಂದಿತ್ತೋ ಗೊತ್ತಿಲ್ಲ, ''ನೀನು ಇನ್ನು ಮೇಲೆ ನನ್ನ ಕ್ಲಾಸ್ ಗೆ ಆಗಲಿ, ಲ್ಯಾಬ್ ಗೆ ಆಗಲಿ ಬರಬೇಡ. ಇದೇನು ಪ್ರಾಕ್ಟಿಕಲ್ ಬುಕ್, ಗಬ್ಬೆದ್ದು ಹೋಗಿದೆ, ನೀನು ಬದುಕಲ್ಲಿ ಉದ್ದಾರ ಆಗಲ್ಲ, ಹಾಳಾಗಿ ಹೋಗ್ತಿಯ, ನಿನಗೆ ವಿಜ್ಞಾನ ದ ವಿಷಯ ಯಾಕೆ ಬೇಕಿತ್ತು, ಹೋಗು ಎಲ್ಲಾದರು ಭಾಷಣ ಮಾಡ್ಕೊಂಡೆ ಜೀವನ ಮಾಡು'' ಅಂತ ಒಂದೇ ಸಮನೆ ರುದ್ರಾಭಿಷೇಕ ಮಾಡೋಕೆ ಆರಂಭ್ಸಿದ್ರು. ನನಗೋ ಏನು ಹೇಳಬೇಕು ಅಂತ ಗೊತ್ತಾಗ್ಲಿಲ್ಲ. ಕೆಲವೊಮ್ಮೆ ಧೋ ಅಂತ ಸುರಿಯೋ ಮಳೇನ ನಿಲ್ಲಿಸಿದರೆ ಮತ್ತೆ ಅದು ತನ್ನ ಆಟ ತೋರಿಸತ್ತೆ. ಅದ್ಕೆ ಎಷ್ಟು ಬೇಕಾದರು ಬೈಕೊಳ್ಳಿ ಅಂತ ಬೈಸ್ಕೊತ ಇದ್ದೆ, ತಿರುಗಿ ಒಂದೇ ಒಂದು ಮಾತು ಹೇಳಲಿಲ್ಲ. ಹಾಗೆಯೇ ಅವರು 20  ನಿಮಿಷ ಉಗಿದು ನನ್ನ ಪ್ರಾಕ್ಟಿಕಲ್ ಬುಕ್ ನ 4  ಪೇಜ್ ಹರಿದು ಲ್ಯಾಬ್ ನಿಂದ ಹೊರಗೆ ಹಾಕಿದ್ರು. 

ಹೊರಗೆ ಬಂದವನಿಗೆ ನಿಜವಾಗಿ ನಡುಕ ಆರಂಬವಾಯ್ತು. ನನ್ನ ಬದುಕನ್ನ ಸರ್ವನಾಶ ಮಾಡಿಕೊಂಡು ಬಿಟ್ನ ಅಂತ. ಗುರುವಿನ ಶಾಪ ಒಳ್ಳೇದಲ್ಲ ಅಂತಾರೆ ನಮ್ಮ ಹಿರಿಯರು. ಅವತ್ತು ಅವರು ಉಪಯೋಗಿಸಿದ ಶಬ್ದಗಳು ಇನ್ನು ನೆನಪಾದಾಗ ಕಿವಿಯ ಮೇಲೆ ಬಿಳತ್ವೆ. ಅವರು ಯಾವತ್ತು ಯಾರಿಗೂ ಅಷ್ಟೊಂದು ಬೈದಿರಲಿಲ್ಲ ಅಂತೆ. ನಾನೇ ಫಸ್ಟ್ ಮತ್ತು ನಾನೇ ಲಾಸ್ಟ್. ಮನಸ್ಸಿಗೆ ತುಂಬಾನೇ ಬೇಜಾರು ಆಗಿ ಹೋಯ್ತು. ಇಲ್ಲಿ ಯಾರು ಸರಿ, ಯಾರು ತಪ್ಪು ಅಂತ ಹೇಳೋದು ಕಷ್ಟ, ಒಬ್ಬ ಭಾಷಣಕ್ಕೆ ಹೋದ ವಿಧ್ಯಾರ್ಥಿಯನ್ನು ಬೈದಿದ್ದು ಅವರದು ತಪ್ಪು ಹಾಗೆ ಓದೋಕೆ ಅಂತ ಬಂದ ನಾನು ಭಾಷಣಕ್ಕೆ ಹೋಗಿದ್ದು ನನ ತಪ್ಪು. ಅಂತೂ ಎಲ್ಲ ರಸಾಯನ ಶಾಸ್ತ್ರದ ಉಪನ್ಯಾಸಕರು ಸೇರಿ ನನಗೆ ಅವರಿಗೆ ರಾಜಿ ಮಾಡಿಸಿ ಕೊಟ್ರು. ಅದಾದ ಮೇಲೆ ಅವರು ನನ್ನನ್ನು ಅಷ್ಟೊಂದು ಬಯ್ಯಲಿಲ್ಲ. ಅಷ್ಟೊಂದು ವಿಚಾರಿಸಲು ಇಲ್ಲ.

ಆದರೆ ಪೂರ್ಣಪ್ರಜ್ಞ ಕಾಲೇಜು ಬಿಟ್ಟು ಬಂದ ಎಷ್ಟೋ ದಿನಗಳ ನಂತರ ಅವರ ಬೈಗುಳದ ನಿಜ ಅರ್ಥ ತಿಳಿಯಿತು. ಕೊನೆಗೆ ಅವರಿಷ್ಟದಂತೆ ಪಿ ಎಚ್ ಡಿ ಮಾಡಿ ಕೆಲಸದಲ್ಲಿದ್ದೇನೆ, ಈಗ ಆ ಗುರು ಎಲ್ಲಿದ್ದಾರೋ ಗೊತ್ತಿಲ್ಲ. ಆದರೆ ಅಂದು ಅವರ ''ಬೈಗುಳ ತಾಗದೆ ಹೋಗಿದ್ದರೆ'' ಇಂದು ನಾ ಇಲ್ಲಿರುತ್ತಿರಲಿಲ್ಲ. ಇಂದಿಗೂ ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎಂತಾದರೆ ಅವರ ಬೈಗುಳದ ನೆನಪು ಆಗುತ್ತದೆ. ನನ್ನ ಬದುಕಿನ ಬಗ್ಗೆ ವಿಪರೀತ ತಲೆಕೆಡಿಸಿಕೊಂಡು ಅವರು ಬೈದಿದ್ದರು. ಯಾರಿಗೂ ಬಯ್ಯದ ಅವರ ಆ ನಡವಳಿಕೆ ಅಂದು ಕೋಪ ತರಿಸಿದರೂ ಇಂದು ಅವರು ಸಿಕ್ಕರೆ ಅವರ ಪಾದಗಳಲ್ಲಿ ಎರಗಿ ಆಶಿರ್ವಾದ ಪಡೆಯುವ ಆಸೆ. ಆದರೆ ಅವರು ಕಾಲೇಜು ನಿಂದ ನಿವ್ರತ್ತರಾಗಿ ಮಕ್ಕಳೊಂದಿಗೆ ಭಾರತದ ಯಾವುದೋ ಕಡೆ ಇದ್ದಾರೆ ಎಂಬ ಸುದ್ದಿಯಿದೆ. 
ಕವಿಯ ಮಾತುಗಳು ನೆನಪಿಗೆ ಬರುತ್ತಿದೆ,

''ಗುರುವಿನ ಗುಲಾಮ 
ನಾಗದ ಹೊರತು
ದೊರೆಯದಣ್ಣ ಮುಕುತಿ ''

ಬದುಕು ಕೇವಲ ಪುಸ್ತಕದ ಬದನೇಕಾಯಿ ಅಲ್ಲ, ಅದು ಎಲ್ಲಕ್ಕೂ ಮೀರಿದ್ದು. ಬದುಕನ್ನ ನಾವು ಕಲಿತರೆ, ಉಳಿದೆಲ್ಲವೂ ನಮ್ಮ ಹಿಂದೆಯೇ ಬರುತ್ತದೆ. ಇಂದು ಶಾಲೆಗಳಲ್ಲಿ ಶಿಕ್ಷರು ಮಕ್ಕಳನ್ನು ಬೈಯ್ಯುವ ಹಾಗಿಲ್ಲ. ಬೆದರಿಸುವ ಹಾಗೆ ಇಲ್ಲ. 

 ಗದರಿಸಿ ಬೆದರಿಸಿ ಹೇಳಿದ ಪಾಠ
ನಡುಗಿಸಿ ಗುಡುಗಿಸಿ ಕಲಿತ ವಿದ್ಯೆ
ನಗುತ ನಲಿಯುತ ಆಡಿದ ಆಟ
ವಂದಿಸಿ, ಆಲಿಸಿ ಪಡೆದ ಬದುಕು 

ಇವೆಲ್ಲವೂ ಪರಿಪಕ್ವ ಮಾನವನನ್ನಾಗಿಸುತ್ತವೆ. ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬೇಕಾದರೆ ಅಲ್ಲಿ ಸಣ್ಣ ಹೆದರಿಕೆಯೂ ಇರಬೇಕು. 

ಮತ್ತದೇ ಕವಿವಾಣಿ ಕಿವಿಯಲ್ಲಿ ಸುಳಿಯುತ್ತಿದೆ,

      ಅಂದು,

         ಮುಂದೆ ಗುರಿಯಿತ್ತು
         ಹಿಂದೆ ಗುರುವಿದ್ದ
         ಸಾಗಿತ್ತು ಧೀರರ ಹಿಂಡು ಹಿಂಡು

        ಇಂದು,

           ಮುಂದಕ್ಕೆ ಗುರಿಯಿಲ್ಲ
            ಹಿಂದಕ್ಕೆ ಗುರುವೂ ಇಲ್ಲ
            ಸಾಗುತಿದೆ ರಣ ಹೇಡಿಗಳ ದಂಡು ದಂಡು 




ನನ್ನ  ಕಾಲೇಜಿನ  ದಿನಗಳ ಬದುಕಿನ ಕಥೆ ''ಬದುಕಿನ ಪುಟಗಳಿಂದ'' ಮುಂಚೆ ಒಮ್ಮೆ ಆರಂಬಿಸಿದ್ದೆ. ಕೆಲವು ಅನಿವಾರ್ಯ ಕಾರಣಗಳಿಂದ ಅದನ್ನ ಮುಂದುವರಿಸೋಕೆ ಆಗಿರಲಿಲ್ಲ. ಈಗ  ಮತ್ತೆ ಬರಿತ ಇದ್ದೀನಿ, ಇದರ ಮೊದಲಿನ  ಭಾಗ ನೀವು ಮುಂಚೆ ಓದದೆ ಇದ್ರೆ  ಓದೋಕೆ  ಕೆಳಗೆ ಕ್ಲಿಕ್ ಮಾಡಿ.


http://gurumurthyhegde.blogspot.com/2011/01/1.ಹ್ತ್ಮ್ಲ್  Part 1


http://gurumurthyhegde.blogspot.com/2011/02/50.html  Part 2 


http://gurumurthyhegde.blogspot.com/2011/02/part-3.html Part 3 


http://gurumurthyhegde.blogspot.com/2011/05/blog-post.html Part 4  



ಮತ್ತೆ ಮುಂದಿನ ವಾರ ಸಿಗೋಣ
ಗುರು ಬಬ್ಬಿಗದ್ದೆ










66 comments:

nenapina sanchy inda said...

wow tumbaa chennagi barediddeeri. tumbaa isTaa aaytu. we should always view life and its experiences positively
:-)
malathi S

ಕ್ಷಣ... ಚಿಂತನೆ... said...

ಗುರುಮೂರ್ತಿ ಅವರೆ, ನಿಮ್ಮ ಬ್ಲಾಗನ್ನು ಓದುತ್ತಿರುತ್ತೇನೆ. ಆದರೆ, ಇತ್ತೀಚೆಗೆ ಪ್ರತಿಕ್ರಿಯೆ ಹಾಕಲು ಆಗುತ್ತಿರಲಿಲ್ಲ. ಕಾರಣಗಳು ಬೇಕಾದಷ್ಟಿವೆ. ಆದರೆ, ಅದು ಇಲ್ಲಿ ಅಪ್ರಸ್ತುತ.

ಹೌದು. ನಿಜಕ್ಕೂ ಶೀರ್ಷಿಕೆಯನ್ನು ಓದುತ್ತಿದ್ದರೇ, ಸಾಕು ಮುಂದಿನದು ಯಾರು ಯಾರಿಗೆ ಬೈದಿರಬಹುದು, ಬದುಕಿನ ದಾರಿ ತೋರಿಸಿರಬಹುದು ಎಂದು ಅನಿಸುತ್ತದೆ. ಓದುತ್ತಾ ಹೋದಂತೆ ನನಗೂ ಓದಿನ ದಿನಗಳೂ ನೆನಪಾದವು.

ನಿಮಗೆ, ಆ ನಿಮ್ಮ ರಸಾಯನಶಾಸ್ತ್ರ ಶಿಕ್ಷಕರು ಒಂದು ದಿನ ಸಿಕ್ಕೇ ಸಿಗುತ್ತಾರೆ ಅನ್ನೋ ನಂಬಿಕೆಯಿದೆ. ಹಾಗೂ ಅವರು ಸಿಗಲಿ...

ಧನ್ಯವಾದಗಳು.

ಸ್ನೇಹದಿಂದ,

ಮನಸು said...

super guru tumba chennagi barediddeeri.. guruvige gulaamanagale beku agale ellavu siddisodu..

ಸಾಗರದಾಚೆಯ ಇಂಚರ said...

Nenapina Sanchay inda, Malathi madam,

neevu helodu nija, baduku positive agirbeku alva,

modala comment ge dhanyavaadagalu

bartaa iri

ಸಾಗರದಾಚೆಯ ಇಂಚರ said...

ಚಂದ್ರು ಸರ್

ಓದ್ತಾ ಇರಿ, ಪ್ರತಿಕ್ರಿಯೆ ಇಷ್ಟ ಆದ್ರೆ ಹಾಕಿ :)

ನಿಮ್ಮ ಸಲಹೆ ಸದಾ ಇರಲಿ

ನಾನು ಆ ಉಪನ್ಯಾಸಕರ ಹುಡುಕಾಟದಲ್ಲಿದ್ದೇನೆ

ಅವರು ಸಿಕ್ಕ ದಿನ ನಾನು ಧನ್ಯ

ಸಾಗರದಾಚೆಯ ಇಂಚರ said...

ಮನಸು,

ಗುರು ಇಲ್ಲದೆ ಬದುಕು ಅಸಾದ್ಯ

ತಾಯಿಯೇ ಮೊದಲ ಗುರು, ಅಲ್ಲಿಂದಲೇ ಗುರುವಿನ ಪಾಠ

ಶಾಲೆಯ ಗುರು ಎರಡನೇ ಗುರು , ಅದು ಬದುಕಿನ ಪಾಠ

ಬದುಕು ಮೂರನೆಯ ಗುರು, ಅದು ಬಾಳಿಗೆ ದಾರಿ ದೀಪ

ಬರುತ್ತಿರಿ

ವಾಣಿಶ್ರೀ ಭಟ್ said...

ಮೊದಲಿಗೆ ಬದುಕನ್ನು ಅವರು ಕಲಿಯಲಿ, ನಂತರ ಬದುಕೇ ಅವರಿಗೆ ಎಲ್ಲವನ್ನು ಕಲಿಸುತ್ತದೆ. nija anna :) mundina bhaagakke kayuttiruttene :)

ಸಾಗರದಾಚೆಯ ಇಂಚರ said...

ವಾಣಿ,

ಬದುಕೇ ನಮಗೆ ದೊಡ್ಡ ಗುರು ಆಲ್ವಾ

ಎಷ್ಟೊಂದನ್ನ ಇಲ್ಲಿಂದ ಕಲಿತಿವಿ

ನೂರಾರು ಮನಸ್ಸಿನ ನೂರಾರು ವ್ಯಕ್ತಿತ್ವ
ಅವರ ಜೊತೇನೆ ಇರಬೇಕು

ಬಿಟ್ಟು ಹೋಗೋ ಹಾಗಿಲ್ಲ

ಒಂತರ ಬಿಸಿ ತುಪ್ಪ,

ಉಗುಳಿದರೆ ಹಾಳಾಗುತ್ತದೆ ಎಂಬ ಪಶ್ಚಾತ್ತಾಪ

ತಿಂದರೆ ಬಾಯಿ ಸುಡುತ್ತದೆ ಎಂಬ ಕಹಿ ಸತ್ಯದ ಅರಿವು

ಬದುಕು ಎಲ್ಲವನು ಕಲಿಸುತ್ತದೆ ಅಲ್ಲವೇ?

ಬರುತ್ತಿರಿ

Chaithrika said...

''ವಿಜ್ಞಾನದ ವಿಧ್ಯಾರ್ಥಿಯೆಂದರೆ ಆತ ಪುಸ್ತಕ ಬಿಟ್ಟು ಏಳುವಂತಿಲ್ಲ, ಅವನಿಗೆ ಆಟ ಅಲರ್ಜಿ, ಊಟ ಬೇಕಿದ್ದರೆ ಮಾತ್ರ, ಸದಾ ಪುಸ್ತಕದ ಬದನೇಕಾಯಿ ತಿಂದೆ ಆತ ಬದುಕಬೇಕು, 90 % ಗಿಂತ ಕಡಿಮೆ ಬಂದರೆ ಆತ ಬದುಕಲು ಅನರ್ಹ''
ಹ್ಹ ಹ್ಹ ಹ್ಹಾ… ಇದನ್ನು ನಾನೂ ಹೇಳಿಸಿ/ಕೇಳಿಸಿಕೊಂಡಿದ್ದೇನೆ. ಅಧ್ಯಾಪಕರೂ "ನೀವು ಸಯನ್ಸಿನವರು. ಹೀಗೆ ಮಾಡ್ಬಾರ್ದು, ಹಾಗೆ ಮಾಡ್ಬಾರ್ದು" ಅಂತ ಸದಾ ಹೇಳುತ್ತಿದ್ದರು. ವಿಜ್ಞಾನದ ವಿಧ್ಯಾರ್ಥಿಯೆಂದರೆ ತಲೆ ಬಾಚದೆ, ಸಿಕ್ಕಿದ ಬಟ್ಟೆ ಹಾಕಿಕೊಂಡು ಬರುವವರು ಎಂದು ನಾನು ಸದಾ ಅಮ್ಮನಲ್ಲಿ ಹೇಳಿ ನಗುತ್ತಿದ್ದೆ.
ಬಯಾಲಜಿಯನ್ನು ನಾನು ಆಸಕ್ತಿಯಿಂದ ಓದುತ್ತಿದ್ದೆ. ಒಳ್ಳೆ ಅಂಕವೂ ಬರುತ್ತಿತ್ತು. ಆದರೆ ಕಲಿಯ ಬಯಸಿದ್ದು, ಕಲಿತದ್ದು ಇಂಜಿನಿಯರಿಂಗ್. ನಾನು ಮೆಡಿಕಲ್ ಕಲಿಯಲಿಲ್ಲ ಎಂದು ಬಯಾಲಜಿ ಅಧ್ಯಾಪಕರು ಸಿಟ್ಟು ಮಾಡಿಕೊಂಡು ಬೈದದ್ದು ನಿಮ್ಮ ಬರಹ ಓದುವಾಗ ನೆನಪಾಯಿತು.

Chaithrika said...

ಶಾಲೆಯಲ್ಲಿ ಮಗುವಿಗೆ ಟೀಚರ್ ಬೈದರೆಂದು ಶಾಲೆಯೇ ಬದಲಿಸಿದ ಹೆತ್ತವರು ಬೆಂಗಳೂರಲ್ಲಿ ಇದ್ದಾರೆ ಸ್ವಾಮೀ!

ಸಾಗರದಾಚೆಯ ಇಂಚರ said...

ಚೈತ್ರಿಕ

ಅದು ಆಗೋದು ಹಾಗೆ, ಇಷ್ಟ ಪಟ್ಟಿದ್ದು ಆಗೋಕೆ ಆಗೋದೇ ಇಲ್ಲ ತುಂಬಾ ಸಲ ಅಲ್ವ

ವಿಜ್ಞಾನದ ವಿಧ್ಯಾರ್ಥಿಗಳು ಅಂದ್ರೆ ತುಂಬಾ ಬೇಜಾರು ಆಗತ್ತೆ

ಅವರು ಆತನು ಆಡದೆ ಸಿನಿಮಾ ನು ನೋಡದೆ ಇರ್ತಾರೆ

ಛೆ ಛೆ ಅನಿಸತ್ತೆ

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಚೈತ್ರಿಕ

ಬೈದಾಗ ಮಾತ್ರ ಕಲಿಯಲು ಸಾದ್ಯ

ಬೈದರು ಅಂತ ನಾವು ಶಾಲೇನೆ ಬಿಡಿಸಿದರೆ ನಷ್ಟ ನಮಗೆ ತಾನೇ?

ನಾವು ಮಕ್ಕಳಿಗೆ ತುಂಬಾನೇ ಮುದ್ದು ಮಾಡ್ತಾ ಇದೀವಿ

Jagadeesh Balehadda said...

ಬೈತಾ ಹೇಳದು ಬದಕಲ್ಲೆ ನೆಗಾಡ್ತಾ ಹೇಳದು ನಾಶಕ್ಕೆ ಅನ್ನೋ ಮಾತು ನಾನು ಕೇಳಿದ್ದೆ. ಇದನ್ನು ಈಗ ಓದಿ ತಿಳಿದೆ.ನಿಮ್ಮ ಬ್ಲಾಗ್ ಚನ್ನಾಗಿ ಬರುತ್ತಿದೆ. ಹೀಗೆಯೇ ಮುಂದುವರಿಯಲಿ.....

Ambika said...

Tumba chennagide..Mundina bhaga bega barali.
Ujire kooda Udupi yante badukannu kalisikoduva jaaga..

Mohan Hegade said...

super guru. college jivanada kate odalu. adre a timenalli kelamomme edentha jivana anthanu anisirutte alva? ega aa nenape sundara. aa rasayana madida lecture hesaru yantado? hudakana heli.

barla,

Mohan Hegade

ಗಿರೀಶ್.ಎಸ್ said...

ಇತ್ತೀಚೆಗೆ ತಂದೆ ತಾಯಿಯರು ಮಕ್ಕಳಿಗೆ ಹಣ ಗಳಿಸುವ ಪಾಠ ಹೇಳಿಕೊಡುತ್ತಿದ್ದಾರೆ ಹೊರತು ಬದುಕುವ ಪಾಠ ಅಲ್ಲ... ಒಪ್ಪುವ ಮಾತು ಸರ್ !!!
ಇದರ ಜೊತೆಗೆ ಗುರುವಿನ ಮಹತ್ವ ಮತ್ತು ಅವರ ಒಂದೊಂದು ಮಾತಿನ ಹಿಂದೆ ಇರುವ ಸಲಹೆಗಳನ್ನು ತುಂಬ ಚೆನ್ನಾಗಿ ಬರೆದಿದ್ದೀರಾ...
ಅಂದ ಹಾಗೆ ನಾನು ಕೂಡ ಹೈ ಸ್ಕೂಲ್ ಅನ್ನು ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆ ಅಲ್ಲೇ ಓದಿದ್ದು (ಬೇಲೂರು ಶಾಖೆ)....

ಮನದಾಳದಿಂದ............ said...

ಗುರು ಸರ್,
ನಿಮ್ಮ ಮಾತುಗಳು ನಿಜ. ಬೈದು ಹೇಳಿದ ಗುರು ಬದುಕು ಕಲಿಸುವ ದೇವರು
ಒಂದು ವೇಳೆ ಆ ವಯಸ್ಸಿನ ಸಹಜ ಬುದ್ಧಿಯಂತೆ ನೀವೇನಾದರೂ ಬೇರೆ ರೀತಿ ಚಿಂತಿಸಿದ್ದರೆ ಇಂದು ಅದರ ಪಶ್ಚಾತ್ತಾಪ ಪಡಬೇಕಾಗಿತ್ತು. ಆದರೆ ನೀವು ಸರಿಯಾಗೆ ಆಲೋಚಿಸಿ ನಿಮ್ಮ ಬದುಕನ್ನು ರೂಪಿಸಿಕೊಂಡಿರಿ,

ಪೂರ್ಣಪ್ರಜ್ಞ ಕಾಲೇಜಿನ ವಿಧ್ಯಾರ್ಥಿಗಳು ಕಲೆ ಸಂಸ್ಕೃತಿ ಮತ್ತು ಆಟದಲ್ಲಿ ಯಾವಾಗಲೂ ಮುಂದೆ! ನಾನು ಸಣ್ಣವನಿರುವಾಗ ರೇಡಿಯೋದಲ್ಲಿ ಬರುತ್ತಿದ್ದ ರಸಪ್ರಶ್ನೆ, ಭಾಷಣ ಸ್ಪರ್ದೆ ಇನ್ನಿರ ಸ್ಪರ್ಧೆಗಳ ಪ್ರಸಾರವನ್ನು ಕೇಳುತ್ತಿದ್ದೆ. ಅಲ್ಲಿ ಹೆಚ್ಚಾಗಿ ಕೇಳುತ್ತಿದ್ದ ಹೆಸರು ಅಂದರೆ ಪೂರ್ಣಪ್ರಜ್ಞ ಕಾಲೇಜು ಮತ್ತು ಕಸ್ತುರಿಬಾ ಕಾಲೇಜು!

ನಿಮ್ಮ ಕಾಲೆಜುಜೀವನವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

krutthivaasapriya said...

ಗುರು ಅವರೇ , ಒಳ್ಳೆಯ ಲೇಖನ ....
ಆದರೆ ನನ್ನ ಕಾಡಿದ್ದು ನಿಮ್ಮ ಲೇಖನದ ಮೂರನೆಯ ಪ್ಯಾರ, ಅದನ್ನು ಓದುತ್ತಿದ್ದ ಹಾಗೆ ನನಗೆ ನಾಕು ವರ್ಷಗಳ ಹಿಂದಿನ ನನ್ನ ಪಿ ಯು ದಿನಗಳು ನೆನಪಾದವು .... ಆ ದಿನಗಳನ್ನು ಯಾವತ್ತು ಮರೆಯಲು ಸಾಧ್ಯವಿಲ್ಲ .....ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿದ್ದು , ಅಂದು ಕೊಂಡಷ್ಟು ಮಾರ್ಕ್ಸ್ ಬರದೆ ಹೋದಾಗ ಅತ್ತಿದ್ದು ,ಸ್ಪರ್ಧೆಯ ಒತ್ತಡ ತಡೆಯಲಾಗದೆ ಹತಾಶಳಾಗಿದ್ದು , ಆ ಹತಾಶೆಯಲ್ಲಿ ಮನೆಯವರ ಮೇಲೆ ಸಿಡುಕಿದ್ದು ಎಲ್ಲ ನೆನಪಾಗಿ ಕಣ್ಣುಗಳು ಕೊಂಚ ಒದ್ದೆಯಾದವು ....ಕೊನೆಗೂ ದೇವರ ದಯೆಯಿಂದ, ಪಾಲಕರ ಒತ್ತಾಸೆಯಿಂದ ಕೊಂಚ ಸುಧಾರಿಸಿ ಅಂದು ಕೊಂಡಿದ್ದನ್ನು ಸಾಧಿಸಿದೆ .... ಇದಾಗಿ ನಾಕು ವರ್ಷಗಳಲ್ಲಿ ಪಿ ಯು ವಿದ್ಯಾಥಿಗಳ ಪಾಡು ಇನ್ನಷ್ಟು ವಿಷಮಿಸಿದೆ ಅಂತ ನನಗನಿಸುತ್ತದೆ ... ನೀವು ಹೇಳುವ ' ಮೊದಲಿಗೆ ಬದುಕನ್ನು ಅವರು ಕಲಿಯಲಿ, ನಂತರ ಬದುಕೇ ಅವರಿಗೆ ಎಲ್ಲವನ್ನು ಕಲಿಸುತ್ತದೆ' ಅನ್ನುವ ಮಾತು ನೂರಕ್ಕೆ ನೂರು ನಿಜವಾದುದು ....

ಸುಮ said...

nice thoughts ishta aytu :)

ಸುಬ್ರಮಣ್ಯ said...

:-)

Ash said...

Thank You so much Guru.... I really appreciate the gesture of u leaving a comment for me.... I can only say a SORRY for not being able to make my way to any blog for that matter!!!

Wishes,

Ash... :)

ಚುಕ್ಕಿಚಿತ್ತಾರ said...

channaagi badukannu hanchikondiddeeri guru..

ಜಲನಯನ said...

ಗುರು..ನಿಮ್ಮ ಸಮ್ಮಿಳಿತ ಲೇಖನದ ಶೈಲಿ ಬಹಳ ಇಷ್ಟ ಆಗುತ್ತೆ..ವಿಚಾರಗಳ ಗಂಭೀರತೆ ಲಾಲಿತ್ಯದ ಹೊದಿಕೆ ಮತ್ತು ಮಣಿ ಪೋಣಿಸಿದಂತೆ ಕವಿ ಮಾತುಗಳು(ಕವನ)..
ಇಲ್ಲೂ ಅದೇ ಛಾಪು...ವಿಜ್ಞಾನಿಯೆಂಬುದು ವಿದಿತ ನಿಮ್ಮ ನಿರೂಪಣೆಯಲ್ಲಿ....ಗುಡ್ ಲಕ್

Pavana Bhat said...

Tumba layaka eddu guruanna.. yanagu yanna college nenapptu.. yanna mava yanna lecture agi eddvu yanage tumba help madiddavu, tumba baidavu, tumba preeti madiddavu.. ega avu elle, last year he passed away.. but avara nenappu sada ertu.. nanu ega yanta eddeno, adu avara ashirvadadinda.. thank you for sharing this..

ದೀಪಸ್ಮಿತಾ said...

ನಿಮ್ಮ ಮಾತು ನಿಜ. ಹಿಂದೆ ಇದ್ದಂತಹ ಗುರುಗಳು ಈಗಿಲ್ಲ. ವಿದ್ಯೆಯ ಬಗ್ಗೆ ಆಸಕ್ತಿ ಇರುವ ವಿದ್ಯಾರ್ಥಿಗಳೂ ಈಗಿಲ್ಲ

Ananda_KMR said...

koneyalli baridro kavanada tunuku thumba ishtavayithu

ಸವಿಗನಸು said...

chennagide guru...
ಗುರು(neenu)ಇಲ್ಲದೆ ಬದುಕು ಅಸಾದ್ಯ...

Dr.D.T.Krishna Murthy. said...

ಗುರು ಸರ್;ಲೇಖನ ತುಂಬಾ ಚೆನ್ನಾಗಿದೆ.ಗಾದೆಯ ಮಾತೇ ಇದೆಯಲ್ಲಾ;'ಬೈದು ಹೇಳಿದವರು,ಬದುಕಕ್ಕೆ ಹೇಳಿದರು'ಅಂತಾ!ನನ್ನ ಬ್ಲಾಗಿಗೆ ಬನ್ನಿ.ನಾವು ನಮ್ಮ ದೇವರ ಹತ್ತಿರ ಬೈಸಿಕೊಂಡದ್ದು ಹಾಕಿದ್ದೇನೆ.ಆದರೆ ಒಂದು ಕಂಡೀಷನ್ನು!ನೀವು ನಗಬಾರದು ಮತ್ತೆ!!

ಸಾಗರದಾಚೆಯ ಇಂಚರ said...

ಜಗದೀಶ್
ನಿಜಾ, ಹಿರಿಯರ ಆ ಮಾತು ನೂರಕ್ಕೆ ನೂರು ಸತ್ಯ

ಬ್ಲಾಗ್ ಬಗೆಗಿನ ಪ್ರೀತಿಗೆ ಥ್ಯಾಂಕ್ಸ್

ಬರುತ್ತಿರಿ

ಸಾಗರದಾಚೆಯ ಇಂಚರ said...

ಕವಿತಾ

ಬೇಗ ಬರೆಯುತ್ತೇನೆ, :)

ಉಜಿರೆ ಕೂಡಾ ಸಾಂಸ್ಕ್ರತಿಕ ತವರು
ಬಹುಶ ದಕ್ಷಿಣ ಕನ್ನಡ ಜಿಲ್ಲೆಯೇ ಹಾಗೆ ಅನಿಸುತ್ತದೆ ಅಲ್ಲವೇ?

ಬರುತ್ತಿರಿ

ಸಾಗರದಾಚೆಯ ಇಂಚರ said...

ಮೋಹನ
ನಿಜ, ಬದುಕೇ ಹಾಗೆ
ಕೆಲವೊಮ್ಮೆ ಬೇಸರ, ಕೆಲವೊಮ್ಮೆ ಅದೇ ಎಲ್ಲವೂ ಅನ್ನುವ ಮೋಹ

ಇದೊಂದು ತರದ ಮಾಯೆ

ಅಪ್ಪಿದವರಿಗೆ ಮೋಸವಿಲ್ಲ, ಅಪ್ಪದವರಿಗೆ ದೋಷವಿಲ್ಲ, ಎಲ್ಲವೂ ಮಾಯೆಯ ಪ್ರಭಾವ

ಬರುತಿರು

ಸಾಗರದಾಚೆಯ ಇಂಚರ said...

ಗಿರೀಶ್

ನಿಜ, ಇಂದು ಹಣವೇ ಎಲ್ಲವೂ ಆಗಿದೆ, ನೌಕರಿ ಸೇರಲಿ ಹಣವು ಒಂದೇ ಸಾಕು

ಹಣ ಮಾಡುವುದೇ ಎಲ್ಲರ ಗುರಿಯೂ ಹೌದು

ಬದುಕು ಎತ್ತ ಹೋಗುತ್ತಿದೆ, ಕಾಲವೇ ನಿರ್ಧರಿಸಬೇಕಿದೆ ಅಲ್ವ

ಪೂರ್ಣಪ್ರಜ್ಞ ಎನ್ನುವುದು ಮನಸ್ಸಿಗೆ ಇಷ್ಟವಾಗುವ ಹೆಸರು

ಸಾಗರದಾಚೆಯ ಇಂಚರ said...

ಮನದಾಳದಿಂದ

ನಿಮ್ಮ ಮಾತು ನಿಜ, ಆ ಘಟ್ಟದಲ್ಲಿ ಅವರ ಬೈಗುಳ ವನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದರೆ

ನೆನೆಸಿಕೊಂಡರೆ ಭಯ ಆಗುತ್ತದೆ,

ಅಂತೂ ಅವರ ಮಾತಿಗೆ ತಪ್ಪದೆ ನಡೆದ ತ್ರಪ್ತಿಯಿದೆ

ಪೂರ್ಣಪ್ರಜ್ಞ ಕಾಲೇಜು ಶಿಕ್ಷಣಕ್ಕೆ ಹೆಸರುವಾಸಿ
ಬರುತ್ತಿರಿ

ಸಾಗರದಾಚೆಯ ಇಂಚರ said...

krutthivaasapriya

ಆ ದಿನಗಳೇ ಹಾಗೆ , ಮಾರ್ಕ್ಸ್ ಮೇಲೆ ಮಾತ್ರ ಚಿಂತೆ

ಆದರೆ ಬದುಕು ಅದು ಅಲ್ಲ ಎಂದು ತಿಳಿಯುವ ಹೊತ್ತಿಗೆ ಕಾಲ ಮಿಂಚಿರುತ್ತದೆ

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಬರ್ತಾ ಇರಿ ನನ್ನ ಬ್ಲಾಗ್ ಗೆ

ಚಿನ್ಮಯ ಭಟ್ said...

ನಿಜಾ ಹೇಳ್ಳಾ??
ನಂಗೂ ಯಾರಾದ್ರೂ ಅದೇ ತರ ಬೈಲಿ ಅನ್ನಸ್ತಾ ಇದೆ..
ಈ ಲೇಖನದ ಪೂರ್ವಾರ್ದದಲ್ಲಿ ಬರುವ ತಮಗೂ ,ಸಧ್ಯ ನನ್ನ ಬದುಕಿನ ಶೈಲಿಗೂ ಸುಮಾರು ಸಾಮ್ಯತೆ ಇದೆ...

ಮುಂದಿನದೆಲ್ಲಾ ನೀವೇ ಅರ್ಥ ಮಾಡಿಕೊಳ್ಳುವಿರೆಂದು ನಂಬಿದ್ದೇನೆ..

ನನ್ನನ್ನು ಈ ರೀತಿ ಬೈಯ್ಯುವ ಗುರುಗಳು ಸಿಗುವ ಆಸೆ ಹೊತ್ತು,
ಇತಿ ನಿಮ್ಮನೆ ಹುಡುಗ,
ಚಿನ್ಮಯ ಭಟ್
ಚಿನ್ಮಯ ಭಟ್

ಓ ಮನಸೇ, ನೀನೇಕೆ ಹೀಗೆ...? said...

ಬರಹದ ಶೈಲಿ ತುಂಬಾ ಇಷ್ಟವಾಯ್ತು. ನಮ್ಮ ಬದುಕನ್ನೆ ರೂಪಿಸುವ ಆ ವಿಧ್ಯಾರ್ಥಿ ಜೀವನದ ಕ್ಷಣಗಳನ್ನು ತುಂಬಾ ಚೆನ್ನಾಗಿ ಉತ್ತೇಜಕರವಾಗಿ ಹಂಚಿಕೊಡಿದ್ದೀರಿ. ಧನ್ಯವಾದಗಳು.

SANTOSH MS said...

Guru Sir,

Hats off. What you described is really true. Even I remembered some incidents of my college days.

ಮನಸಿನ ಮಾತುಗಳು said...

ಗುರು ಅಣ್ಣ,

ಚಂದ ಇದ್ದು ಲೇಖನ. ಕಾಲೇಜಿನ ದಿನಗಳು, ಶಾಲೆಯ ದಿನಗಳು ಬಹುಷಃ ಯಾರ ಬದುಕಲ್ಲೂ ಮರೆಯಲಾಗದಂಥ ಸವಿ ನೆನಪಿನ ಬುತ್ತಿ ಅನ್ನಿಸುತ್ತೆ ಅಲ್ಲವ?...ನಾವು ತಪ್ಪು ಮಾಡಿದಾಗ ಅದನ್ನು ತಿದ್ದಿ ನಮ್ಮನ್ನು ಮುನ್ನಡೆಸಿದ ಶಿಕ್ಷಕರು ಆ ಕ್ಷಣಕ್ಕೆ ನಮ್ಮ ವೈರಿ ಥರ ಕಂಡರೂ, ಮುಂದೆ ಅವರೇ ನಮ್ಮ ಮನಸಿನ ಯಾವುದೋ ಮೂಲೆಯಲ್ಲಿ ಇಷ್ಟದ ಶಿಕ್ಷಕರಾಗಿ, ಅವರ ಬಗೆಗೆ ಒಂದು ಆಪ್ತತೆ ಮತ್ತು ಧನ್ಯತೆ ಮನೆ ಮಾಡಿ ಬಿಡುತ್ತದೆ. ನಿನ್ನ ಲೇಖನ ನನ್ನ ನೆನಪುಗಳನ್ನು ನೆನಪು ಮಾಡಿತು.:-)

shivu.k said...

ಗುರು ಸರ್,

ಮತ್ತೆ ಮುಂದುವರಿಸಿದ್ರಲ್ಲ...ಬದುಕಿನ ಹಳೆಯ ನೆನಪುಗಳು ಹೀಗೆ ಹೊರಬರುತ್ತಿರಬೇಕು. ಚೆನ್ನಾಗಿ ನಿರೂಪಿಸುತ್ತಿದ್ದೀರಿ...ಮುಂದುವರಿಸಿ..

ಸುಧೇಶ್ ಶೆಟ್ಟಿ said...

Gurumoorthy sir... thumba dinagaLa mele nimma blog oduttiddene... e baraha maalike yaavaaga matte shuru maadutteeri antha kaayuttidde.. chennagi munduvaredide :)

ಸಾಗರದಾಚೆಯ ಇಂಚರ said...

ಸುಮಾ ಮೇಡಂ,

ಥ್ಯಾಂಕ್ಸ್ ಫಾರ್ ದಿ ಕಾಮೆಂಟ್ಸ್

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಮಾಚಿಕೊಪ್ಪ sir

nagunalle ellanu heltira :)

ಸಾಗರದಾಚೆಯ ಇಂಚರ said...

AshKuku,

nevermind, whenever u have time, visit my blog,

thanks for the comments

ಸಾಗರದಾಚೆಯ ಇಂಚರ said...

Chukki chittaara

tumbaa thankss

bartaa iri

ಸಾಗರದಾಚೆಯ ಇಂಚರ said...

ಅಜಾದ್ ಸರ್

ಎಲ್ಲ ನಿಮ್ಮ ಆಶೀರ್ವಾದ

ನಿಮ್ಮಂತಹ ಒಳ್ಳೆಯ ಮನಸ್ಸುಗಳೊಂದಿಗೆ ಇರುವುದು ನನ್ನ ಪುಣ್ಯ

ಸದಾ ಬರ್ತಾ ಇರಿ

ತಿದ್ದತ ಇರಿ

ಸಾಗರದಾಚೆಯ ಇಂಚರ said...

ಪವನ,

ಹೌದು, ಎಷ್ಟೋ ನಮಗೆ ಆಗ ಕಲಿವಾಗ ಹೆಲ್ಪ್ ಮಾಡ್ತಾ,

ಕಾಡಿಗೆ ನಾವೇ ಮರೆತು ಬಿಡ್ತ್ಯ ಅಲ್ದಾ.

ನಂಗೆ ಡಿ ಜಿ ಹೆಗಡೆ ಅವರು ಮಾಡಿದ ಸಹಾಯ ಮರೆಯಲೇ ಆಗ್ತಿಲ್ಲೆ

ಅಭಿಪ್ರಾಯಕೆ ಥ್ಯಾಂಕ್ಸ್

ಬರ್ತಾ ಇರು ಬ್ಲಾಗ್ ಗೆ

ಸಾಗರದಾಚೆಯ ಇಂಚರ said...

ದೀಪಸ್ಮಿತಾ

ಶಿಕ್ಷಣ ಅಂದ್ರೆ ಹಣ ಮಾಡುವ ಕಾರ್ಖಾನೆ ಆಗಿದೆ ಈಗ

ಎಷ್ಟೊಂದು ಡೊನೇಶನ್ ನೋಡಿ.

ಹಣ ಇದ್ರೆ ಮಾತ್ರ ಶಿಕ್ಷಣ ಅಂತ ಆಗಿದೆ ಮಹಾ ನಗರಗಳಲ್ಲಿ

ಪಾಪ ಬಡವರು ಏನು ಮಾಡ್ಬೇಕು?

ಸಾಗರದಾಚೆಯ ಇಂಚರ said...

Ananda_KMR

thanks you

heege bartaa iri

ಸಾಗರದಾಚೆಯ ಇಂಚರ said...

ಸವಿಗನಸು

ಗುರು ಇಲ್ಲದೆ ಬದುಕು ಕಷ್ಟ

ಆದರೆ ನಾ ಇಲ್ಲದೆ ಬದುಕು ನಡೆಯತ್ತೆ ಸರ್ :)

ಮತ್ತೆ ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

ಕೃಷ್ಣಮೂರ್ತಿ ಸರ್

ಧನ್ಯವಾದಗಳು

ನಿಮ್ಮ ಬ್ಲಾಗ್ ಗೆ ಹೋಗಿ ತುಂಬಾ ನಕ್ಕು ಬಂದೆ

ಹೀಗೆ ನಗಿಸ್ತ ಇರಿ

ನಮ್ಮ ಬ್ಲಾಗ್ ಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಚಿನ್ಮಯ್

ಇತ್ತೀಚಿಗೆ ಪಾಲಕರ ವಿಪರೀತ ಪ್ರೀತಿ ಶಿಕ್ಷಕರ ಕೈ ಕಟ್ಟಿ ಹಾಕಿದೆ

ಮೊನ್ನೆ ಅಷ್ಟೇ ನನಗೆ ಪರಿಚಯದ ಒಬ್ಬರು ಶಿಕ್ಷಕರು ಬೈದರು ಎಂದು

ಮಕ್ಕಳನ್ನೇ ಬೇರೆ ಶಾಲೆಗೇ ಹಾಕಿದ್ದಾರೆ.

ಇಂಥಹ ಪಾಲಕರು ಇದ್ದರೆ ಮಕ್ಕಳು ಹೇಗೆ ಬೆಳೆಯಲು ಸಾದ್ಯ ಹೇಳಿ?

ಮುಂದಿನ ಪೀಳಿಗೆ ನೆನೆದರೆ ಭಯವಾಗುತ್ತದೆ

ಸಾಗರದಾಚೆಯ ಇಂಚರ said...

ಓ ಮನಸೇ, ನೀನೇಕೆ ಹೀಗೆ...?

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಇದೆಲ್ಲ ಕಾಲೇಜಿನ ದಿನಗಳ ನೆನಪು

ಬರೆದಾಗ ಮತ್ತೆ ಅದೇ ಹಳೆಯ ನೆನಪುಗಳ ಬುತ್ತಿ ಬಿಚ್ಚಿದ ಅನುಭವ

ಬರ್ಯ್ತ್ತ ಇರಿ

ಸಾಗರದಾಚೆಯ ಇಂಚರ said...

Santhosh

thanks yaar

keep coming

ಸಾಗರದಾಚೆಯ ಇಂಚರ said...

ದಿವ್ಯ ಹೆಗಡೆ

ನಿಜಾ, ಆದ್ರೆ ಈಗಿನ ಮಕ್ಕಳಿಗೆ ಅಂಥಹ ಸೌಲಬ್ಯ ಇಲ್ಲೇ

ಅವಕೆ ಬೈಯ್ಯವು ಯಾರೂ ಇಲ್ಲೇ

ಪಾಲಕರೇ ಅವ್ಕೆ ಬಯ್ಯಲೇ ಹೆದರ್ತ ಇನ್ನು ಪಾಲಕರು ಎಲ್ಲಿ ಬಯ್ಯದು ಹೇಳು?

ಶಿಕ್ಷಣ ವ್ಯಾಪಾರೀಕರಣ ಆಗ್ತಾ ಇದ್ದು

ಹೆಚ್ಚು ದುಡ್ಡು ಅದ್ರಲ್ಲಿ ಹಾಕಿದವ ಹೆಚ್ಚು ದುಡ್ಡು ತೆಗಿತ ಅಷ್ಟೇ

ಸಾಗರದಾಚೆಯ ಇಂಚರ said...

ಶಿವೂ ಸರ್

ತುಂಬಾ ಥ್ಯಾಂಕ್ಸ್

ಖಂಡಿತ ಬರಿತ ಇರ್ತೇನೆ

ನೀವು ಬರ್ತಾ ಇರಿ

ಸಾಗರದಾಚೆಯ ಇಂಚರ said...

ಸುಧೇಶ್ ಸರ್

ತುಂಬಾ ಸಂತೋಷ

ನಿಮ್ಮ ಪ್ರೀತಿಗೆ ಚಿರಋಣಿ

ಸದಾ ಬರ್ತಾ ಇರಿ

ಸಾಗರದಾಚೆಯ ಇಂಚರ said...

ವಸಂತ್

ತುಂಬಾ ಥ್ಯಾಂಕ್ಸ್ ರೀ

ಬರ್ತಾ ಇರಿ

ಕಥೆ ಮುಂದುವರೆಯತ್ತೆ

Kanthi said...

nice write up.. college dinagalu haagene..kushi, harate, nagu, baigula, ella iddidde.. jeevana poorti savi nenapu..

ಸಾಗರದಾಚೆಯ ಇಂಚರ said...

Kanthi,

thank you for the comments

houdu, savi savi nenapeya adellava

bartaa iru

Ittigecement said...

ಗುರು...

ಹೊಗಳುವವರಿಗಿಂತ ಬಯ್ಯುವವರನ್ನು ಇಷ್ಟ ಪಡಬೇಕಂತೆ...
ನಮಗೆ ಕಲಿಸಿದ ಗುರುವೃಂದ ಬಯ್ಯದೆ ಇದ್ದಿದ್ದರೆ ನಾವು ಈ ಮಟ್ಟಕ್ಕೆ ಬರಲು ಸಾಧ್ಯವಿಲ್ಲ...

ನಮಗೆ ನಮ್ಮ ಭವಿಷ್ಯದ ಕುರಿತು ಹೆದರಿಸದಿದ್ದರೆ ಓದುವದಿಲ್ಲವಾಗಿತ್ತು...

ನನ್ನ ನೆನಪುಗಳನ್ನೂ ಕೆದಕಿದ ಈ ಲೇಖನ ಇಷ್ಟವಾಯಿತು...

ಕಾಲೇಜು ದಿನಗಳನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು...

ಸಾಗರದಾಚೆಯ ಇಂಚರ said...

Prakaashanna,,

nee andiddu nija

Guruve dodda daiva

baruttiru

ಸೀತಾರಾಮ. ಕೆ. / SITARAM.K said...

ಚೆಂದದ ಮೆಲುಕು. ಉಡುಪಿಯ ಹಾಗೆ ಧಾರವಾಡ ಅಲ್ಲಿ ಓದಿದವರು ಎಲ್ಲ ಬದುಕಿನ ಇತರ ಪಾತಗಳನ್ನು ಕಲಿಯುತ್ತಾರೆ. ವಿಜ್ಞಾನದ ವಿಧ್ಯರ್ಥಿಯಾಗಿದ್ದು ಸದಾ ಕಥೆ ಕಾದಂಬರಿ ಕವನ ಓದೀ ಕವಿ-ಸ೦ಗಿತ ಗೋಷ್ಠಿ ಅಂತೆಲ್ಲಾ ಅ೦ಡಳೆಯುತ್ತಿದ್ದ ನಾನು ಹೀಗೆ ಬೈಗುಳ ತಿನ್ನುತ್ತಿದ್ದೆ,

uma bhat said...

Nanu school ali irekadre nanna Primary school headmistress nange ondu hesaru kottittu asha bhonsle heli b'coz i used to sing well :)
I always admired that madam, she was a very graceful & encouraging lady. After school, i tried searching her adress a lot - yeshtu kade hudkidde gottidda but then one day i got to know that shes no more :(
Adeshtu attidno aa dina - ondu sarti matadale aidilyali avara hatra heli.
so guru anna time yavaga henge irtu gotagtile. try n talk to ur teacher asp. u wil feel 2 gud else u wil mis dat 1 thing always.

by the thanx for again reminding me my mam n her beautiful encouraging smiles.

ಡಾ. ಚಂದ್ರಿಕಾ ಹೆಗಡೆ said...

nodo namgella haange spardhege hogadu andre estu khushi ittu.... ivagina makkalige adenu.... "neevu illi koreda haage naanuu bereyavarige koreya beeka " annuva mukha maadtavo....chennnagiddu lekhana ...

prashasti said...

ತುಂಬಾ ಚೆನ್ನಾಗಿ ಬರೆದಿದ್ದೀರ. ಗುರುವಿನ ಗುಲಾಮನಾಗದ ತನಕ .. ಮಾತು ನಿಜ.. ನನಗೂ ಪಿಯುಸಿಯಲ್ಲಿ ಸ್ಪರ್ಧೆಗಳಿಗೆ ಹೋಗುವೆನೆಂದಾಗ ಬಯ್ದ ಗುರುಗಳು. ಕೊನೆಗೆ ಯಾರೂ ಹೋಗದೇ ಇದ್ದಾಗ ನೀನಾದ್ರೂ ಹೋಗೋ ಅಂತ ನನ್ನ ಹೆಸರನ್ನು ಅವ್ರೇ ಕೊಟ್ಟಿದ್ದು ಎಲ್ಲಾ ನೆನಪಾಯ್ತು..
ಒಳ್ಳೇ ಲೇಖನ :-)

PrashanthKannadaBlog said...

Totall agree with you. I was also upset with my teachers for stopping me to do few things which I liked at that age. I am not sure I would have reached till here if they have not guided me to right direction. good article.