Monday, October 3, 2011

ಬಿತ್ತಿರುವ ಭತ್ತದ ತೆನೆಗಳಿವು ಎಲ್ಲೆಡೆಯು...

ಬದುಕಿನ ತುಂಬಾ ನೋವುಗಳಿವೆ, ಆಸೆಗಳಿವೆ, ಕೊಳಕು ಮನಸುಗಳಿವೆ, ಮೋಸದ ಮುಖಗಳಿವೆ. ಯಾರನ್ನು ನಂಬುವುದು, ಯಾರನ್ನು ಮೆಚ್ಚುವುದು, ಮುತ್ತುಗಳ ಆಸೆಯಲ್ಲಿ ಎಲ್ಲರೂ ಮತ್ತೇರಿದಂತೆ ನಶೆಯಲ್ಲಿ ಮುಳುಗಿದ್ದಾರೆ. ಎಷ್ಟು ಹಣ ಇದ್ದರೂ ಸುಖವಿಲ್ಲ. ಎರಡಗಲ ಭೂಮಿಯಲ್ಲಿ ಮಣ್ಣಾಗುವ ದೇಹವಿದು, ಅಂಥಹ ದೇಹ ಮಣ್ಣಾಗುವ ಮುನ್ನ, ಬಾಯಿ ತುಂಬಾ ನಗಲು ಕೂಡಾ ಹಿಂದೆ ಮುಂದೆ ನೋಡುವ ನಾವು ಸಾಧಿಸುವುದಾದರೂ  ಏನನ್ನು? 

ಇಲ್ಲಿ ಸಖ ತನ್ನ ಸಖಿಗೆ ಹೇಳುತ್ತಿದ್ದಾನೆ,  ನಿನ್ನ ಮುಖದಲ್ಲಿ ನನಗೆ ನಗು ಕಂಡರೆ ಅದಕ್ಕೆ ಕಾರಣ ನಾ ಹುಡುಕುವುದಿಲ್ಲ, ನಿನ್ನ ಸುಂದರ ಮಾತುಗಳಿಗೆ ನನಗೆ ಟಿಪ್ಪಣಿ ಬೇಕಾಗಿಲ್ಲ, ಆದರೆ ನೀನು ಬಿಕ್ಕಳಿಸದಿರು ಗೆಳತಿ, ಅದು ನನಗೆ ಹಿಂಸೆ ನೀಡುತ್ತದೆ. ಬತ್ತದ ಅದೆಷ್ಟೋ ನದಿಗಳು, ಅವುಗಳ ದಂಡೆಯಲ್ಲಿ ಬೆಳೆಯ ಬೆಳೆಯುತ್ತ ಇರುವ ಅದೆಷ್ಟೋ ಜನರಿದ್ದಾರೆ. ಎಲ್ಲೆಡೆ ಭತ್ತದ ಬಿತ್ತನೆ ಮುಗಿದು ತೆನೆ ಹಸನಾಗಿ ತೋರುತ್ತಿದೆ, ಮತ್ತೆ ಚಿಂತೆ ಬೇಡ, ಸದಾ ನಗುವಿರಲಿ ಮುಖದಿ, ಎನ್ನುತ್ತಿದ್ದಾನೆ. ಮೇಲುನೋಟಕ್ಕೆ ಇದು ಕೇವಲ ಗೆಳತಿಯ ಸಮಾಧಾನ ನೀಡುವ ಗೆಳೆಯನ ಪ್ರೀತಿಯೇ ಆದರೂ ಇದು ಸಮಾಜಕ್ಕೆ ಹಿಡಿದ ಕನ್ನಡಿಯೂ ಹೌದು. ಇಲ್ಲಿ ಬತ್ತದ ನದಿಗಳೆಂದರೆ, ''ಮನಸು''. ಬಿತ್ತಿದ ಬೆಳೆ ''ಪ್ರೀತಿ''. ಹುಟ್ಟಿ ನಳ ನಳಿಸುತ್ತಿರುವ ತೆನೆಗಳೆಂದರೆ ''ನಾಳೆಯ ಕಂದಮ್ಮಗಳು''. ಅವುಗಳಿಗೆ ಸರಿಯಾದ ನೀರಿನ ಪೋಷಣೆ ಸಿಕ್ಕರೆ ನಾಳಿನ ಉತ್ತಮ ಫಸಲಿಗೆ ಚಿಂತಿಸುವ ಅಗತ್ಯವಿಲ್ಲ. ಹಾಗೆಯೇ ಪ್ರೀತಿ, ನಗು ತುಂಬಿದ್ದರೆ ಅಲ್ಲಿ ಬಿಕ್ಕಳಿಸುವ ಪ್ರಮೇಯವಿಲ್ಲ ಎಂದು ತನ್ನ ಸಖಿಗೆ ಪ್ರಿಯ ಸಖ ಹೇಳುತ್ತಿದ್ದಾನೆ.
ನಿನ್ನ ನಗು ಕಂಡಾಗ ಕಾರಣವು ಬೇಕಿಲ್ಲ
ಅಂದದ ಮೊಗದಲ್ಲಿ, ಗೆರೆಗಳೇಕೆ
ಅಕ್ಕರೆಯ ನುಡಿಗಳಿಗೆ ಒಕ್ಕಣಿಕೆ ಬೇಕಿಲ್ಲ
ಬಿಕ್ಕಳಿಸದಿರು ಗೆಳತಿ, ಚಿಂತೆಯೇಕೆ?

ಮುತ್ತಿನ ಮಾತುಗಳ ಮಾಲೆಯ ಹೆಣೆಯುವರು
ಕಿತ್ತಾಡುತಿಹರೆಲ್ಲ ಜಗದ ಒಳಗೆ
ಮುತ್ತುಗಳ ಆಸೆಯಲಿ ಮತ್ತೇರಿಹರೆಲ್ಲ
ಬಿಕ್ಕಳಿಸು ಗೆಳತಿ ಸುಖವು ಬೇಕೇ?


ಬತ್ತದ ನದಿಗಳಿವು ಬಿತ್ತುತಿರು ಬೆಳೆಯ
ಹೊತ್ತಲ್ಲದೊತ್ತಿನಲಿ ಹಸನು ಹಸನು
ಬಿತ್ತಿರುವ ಭತ್ತದ ತೆನೆಗಳಿವು ಎಲ್ಲೆಡೆಯು
ಬಿಕ್ಕಳಿಸದಿರು ಗೆಳತಿ, ಚಿಂತೆಯೇಕೆ?

ಅಡಿಯಗಲ ಭೂಮಿಯಲಿ ಮಣ್ಣಾಗುವ ಮುನ್ನ
ಮನದಗಲ ನಗುವಿಗೆ ಸುಂಕ ಯಾಕೆ?
ನಿನ್ನ ನಗುವಿನಲೆನಗೆ ಕಾರಣವು ಬೇಕಿಲ್ಲ 
ಮಗುವಿನ  ಮೊಗವಿರಲಿ, ಬದುಕಿರುವುದ್ಯಾಕೆ?

26 comments:

ಜಲನಯನ said...

ಗುರು, ಜೀವನ ಚಿತ್ತಾರದ ಬಣ್ಣಗಳ ಛೇದಿತ ಸಪ್ತವರ್ಣ ಮತ್ತೆ ಕೂಡಿ ಬೆಳಗಾಗುವಂತೆ...ಎಲ್ಲಾ ಆಯಾಮಗಳನ್ನೂ ಪೋಣಿಸಿ ಜೀವನ ಏನು ಎನ್ನುವುದರ ಸಂಕ್ಷಿಪ್ತ ರೂಪ ತಂದಿರಿಸಿದ್ದು....
ಅಡಿಯಗಲ ಭೂಮಿಯಲಿ ಮಣ್ಣಾಗುವ ಮುನ್ನ
ಮನದಗಲ ನಗುವಿಗೆ ಸುಂಕ ಯಾಕೆ?
ನಿನ್ನ ನಗುವಿನಲೆನಗೆ ಕಾರಣವು ಬೇಕಿಲ್ಲ
ಮಗುವಿನ ಮೊಗವಿರಲಿ, ಬದುಕಿರುವುದ್ಯಾಕೆ?

ಈ ಸಾಲುಗಳ ಮೂಲಕ....

nimmolagobba said...

ಕವಿತೆ ಚೆನ್ನಾಗಿ ಮೂಡಿ ಬಂದಿದೆ ಸರ್ , ನನಗೆ ಇಷ್ಟವಾದ ಸಾಲುಗಳು. ಬತ್ತದ ನದಿಗಳಿವು ಬಿತ್ತುತಿರು ಬೆಳೆಯ ಹೊತ್ತಲ್ಲದೊತ್ತಿನಲಿ ಹಸನು ಹಸನು ಬಿತ್ತಿರುವ ಭತ್ತದ ತೆನೆಗಳಿವು ಎಲ್ಲೆಡೆಯು ಬಿಕ್ಕಳಿಸದಿರು ಗೆಳತಿ, ಚಿಂತೆಯೇಕೆ?
ಅಡಿಯಗಲ ಭೂಮಿಯಲಿ ಮಣ್ಣಾಗುವ ಮುನ್ನ ಮನದಗಲ ನಗುವಿಗೆ ಸುಂಕ ಯಾಕೆ? ನಿನ್ನ ನಗುವಿನಲೆನಗೆ ಕಾರಣವು ಬೇಕಿಲ್ಲ ಮಗುವಿನ ಮೊಗವಿರಲಿ, ಬದುಕಿರುವುದ್ಯಾಕೆ? ಈ ಸಾಲುಗಳು ಯಾಕೋ ನನಗೆ ತುಂಬಾ ಇಷ್ಟವಾದವು.

Dr.D.T.Krishna Murthy. said...

ಗುರು ಸರ್;ಸುಂದರ,ಅರ್ಥಪೂರ್ಣ ಕವನ.

SANTOSH MS said...

ಗುರು ಸರ್, ಸುಂದರವಾದ ಪದ ಜೋಡಣೆ ಮತ್ತು ಭಾವನೆಗಳು ತುಂಬಾ ಚನ್ನಾಗಿ ವ್ಯಕ್ತವಾಗಿದೆ. ಜೀವನದ ಎಲ್ಲ ಏಳು ಬೀಳುಗಳು ನಮಗೆ ದಾರಿದೀಪವಾಗುತ್ತದೆ ಮತ್ತು ನಮನ್ನು ನಮ್ಮ ಮುಂದಿನ ದಾರಿಯ ಬಗ್ಗೆ ಎಚ್ಚರಿಸುತ್ತದೆ. ಎಲ್ಲ ಸಾಲುಗಳು ಬಹಳ ತೂಕಬದ್ಧವಾಗಿ, ಅರ್ಥಪೂರ್ಣವಾಗಿ ಮೂಡಿಬಂದಿದೆ.

e nelada dani said...

ಕವನ ದ್ವನಿಸುವ ಅ೦ತರ್ಯದ ದ್ವನಿ ಬಿನ್ನ ಬಿನ್ನವಾಗಿ ದ್ವನಿಸಿ ಆಪ್ತವಾಗುತ್ತದೆ .

ಮೌನರಾಗ... said...

ಬತ್ತದ ನದಿಗಳೆಂದರೆ, ''ಮನಸು''. ಬಿತ್ತಿದ ಬೆಳೆ ''ಪ್ರೀತಿ''. ಹುಟ್ಟಿ ನಳ ನಳಿಸುತ್ತಿರುವ ತೆನೆಗಳೆಂದರೆ ''ನಾಳೆಯ ಕಂದಮ್ಮಗಳು''.
ವಾವ್..ಎಂತಹ ಉದಾಹರಣೆ ಕೊಟ್ಟಿದ್ದಿರಿ ಸರ್,,..n ಕವನ ಬಹಳನೇ ಇಷ್ಟ ಆಯಿತು..

ಮನಸು said...

guru... nijakku olle bhaavachittarada kavana dhanyavadagaLu intaha oLLe kavana kottiddakke

ಸೀತಾರಾಮ. ಕೆ. / SITARAM.K said...

ಚೆಂದದ ಕವನ.

Anonymous said...

kavana chandha bareetheeralri

Anonymous said...

chandha kavana bareetheralri

Kanthi said...

Very nice..:-)

sunaath said...

Beautiful poem!

ಅನಂತ್ ರಾಜ್ said...

ನಗುವಿಗೆ ಸು೦ಕ.. ಉತ್ತಮ ಕಾನ್ಸೆಪ್ಟ್, ಚಿತ್ರ, ಚಿತ್ರಣ ಎರಡೂ ತು೦ಬಾ ಆಪ್ತವಾಗಿದೆ. ಅಭಿನ೦ದನೆಗಳು ಸರ್.

ಅನ೦ತ್

ಚಿತ್ರಾ said...

ಗುರು,

ಏನು ಹೇಳಲಿ ? ಅತ್ಯಂತ ಸುಂದರ ಸಾಲುಗಳು ! ತುಂಬಾ ತುಂಬಾ ಚಂದದ ಕವನ ! ರಾಶಿ ರಾಶಿ ಇಷ್ಟ ಆತು !

Anonymous said...

ಕವನ ಇಷ್ಟವಾಯಿತು....

prabhamani nagaraja said...

`ಅಡಿಯಗಲ ಭೂಮಿಯಲಿ ಮಣ್ಣಾಗುವ ಮುನ್ನ
ಮನದಗಲ ನಗುವಿಗೆ ಸುಂಕ ಯಾಕೆ?' ಸು೦ದರ ಸಾಲುಗಳ , ಅರ್ಥ ಪೂರ್ಣ ಕವನ. ಅಭಿನ೦ದನೆಗಳು ಗುರು ಸರ್..

Deep said...

Channagide Guruju.. Kone salugalantu tumba ista aytu...

Anonymous said...

simply super...tumba tumba chennagide kavana...:)

ಕಲರವ said...

jivanada alla
mukhagalannu bimbisiruva
shaili sogasaagide.
abhinandanegalu.

ಬಿಸಿಲು ಬೆಳದಿಂಗಳ ಹುಡುಗಿ.. said...

ಕ್ಷಮಿಸಿ ಅಭಿನವ್ ಅವರೇ,,
ನಿಮ್ಮ ಬರಹಗಳನ್ನ್ಯಾವೂ ನಾನು ಇನ್ನೂ ಓದಿಲ್ಲ..
ಅದಕ್ಕಾಗಿ ಅದರ ಬಗ್ಗೆ ನನ್ನ ಕಾಮೆಂಟ್ ಯಾವುದೂ ಇಲ್ಲ,,
ನನಗೆ ಒಂದು ಸ್ಪಷ್ಟೀಕರಣ ಬೇಕಾಗಿತ್ತು ಅದಕ್ಕಾಗಿ ನಿಮ್ಮ ಬ್ಲಾಗ್ ಗೆ ಬಂದಿರುವೆ..!
ನಿಮ್ಮ ಕಡೆಯಿಂದ ನನಗೆ ಕೆಲವು ಮಾಹಿತಿ ಬೇಕಾಗಿತ್ತು..
ದಯವಿಟ್ಟು ನನ್ನನ್ನು ಸಂಪರ್ಕಿಸಿ..!
ನನ್ನ Facebook ID:https: //www.facebook.com/mallikarjunag
E-Mail ID: mallikarjunagoedru@gmail.com

prashasti said...

ತುಂಬಾ ಚೆನ್ನಾಗಿದ್ದು.. ಲೇಖನದ ಲಹರಿ,ಕವನದ ಅರ್ಥ, ಓದಿಸಿಕೊಳ್ಳೋ ಗುಣಗಳು ಭಾರಿ ಇಷ್ಟ ಆತು :-)

prashasti said...

ಚೆನ್ನಾಗಿದೆ. ಕವನವೂ , ಅದರ ಅರ್ಥವಿವರಣೆಯೂ :-)

ಡಾ. ಚಂದ್ರಿಕಾ ಹೆಗಡೆ said...

indu naalegalalli...
aasegala hambalinalli
samaya kolluva nammagala
chitegendu kone!
battadiruva aasegalu..
mitimiirida kanasu
bayake vistaarake...
ondu janma saaladu....

super...super kavite kano....
vaastavada kathu satya....chandaane baradde....

Shivamogga Nandini said...

DEAR Guru..

Hambalisuva manasu..
kanditu nuraru kanasu..
Adakkenu gottu jeevanada katu satya..
Tannanteya jaga enditadu nitya...

Asegala beesanige beesuva galigenu korate..
Tandeete adu preetiya orate..
Sristi sthiti layagalannarivudu durlabha..
Oppikondellavanu baluvudu sulabha.......????

Shivamogga Nandini said...

DEAR Guru..

Hambalisuva manasu..
kanditu nuraru kanasu..
Adakkenu gottu jeevanada katu satya..
Tannanteya jaga enditadu nitya...

Asegala beesanige beesuva galigenu korate..
Tandeete adu preetiya orate..
Sristi sthiti layagalannarivudu durlabha..
Oppikondellavanu baluvudu sulabha.......????

Nora Jenifer said...

nice