Monday, December 5, 2011

ಮದುವೆಯಾಗಿ 4 ವರುಷ, ನೋಡಿರಣ್ಣ ಹೇಗಿದೆ....

ಮನದ ಗೆಳತಿಗೆ,
ಮನೆಯಂಗಳದಿ ಬೆಳದಿಂಗಳಿಗೆ ಚಂದಿರನೆ ಬರಬೇಕಾಗಿಲ್ಲ, ಮನದಂಗಳದಿ ಬೆಳಗುವ ಚಂದಿರಗೆ ನಗುವೊಂದೇ ಸಾಕಲ್ಲ. ನಮ್ಮಿಬ್ಬರ ಮನೆಯಂಗಳದ, ಮನದಂಗಳದ ಚಂದಿರ ಆಗಲೇ ಬೆಳೆಯುತ್ತಿದ್ದಾನೆ, ಅವನ ನಗು, ಅವನ ಅಳು, ಅವನ ನೋವು, ನಲಿವು ಎಲ್ಲವು ಕಣ್ಣೆದುರಿಗೆ ಸುಳಿಯುತ್ತಿದೆ. ಸಂಭ್ರಮಕ್ಕೆ ಎಣೆಯುಂಟೆ ಗೆಳತಿ.....

4  ವರುಷದ ಹಿಂದೆ 6  ನೆ ಡಿಸೆಂಬರ್ ಗೆ ಹಸೆಮಣೆ ಏರಿದ್ದ ನಿನಗೆ ತಾಳಿ  ಕಟ್ಟಿದ್ದೆ. ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ ನೋಡು, ಇಬ್ಬರು ನಕ್ಕಿದ್ದು, ನಕ್ಕಾಗ ನೆನಪಿಗೆ ಬಂದ ಆ ಹಾಡು...

''ನೆನಪಿದೆಯೇ ಗೆಳತಿ , ನಿನಗೆ ನೆನಪಿದೆಯೇ?
ನಾವಿಬ್ಬರೂ ಬಂದು, ನದಿಯ ದಡದಾಗೆ ನಿಂದು ''

ಎಲ್ಲವೂ ಇಂದು ಮನದ ಅಂಚಿನಲ್ಲಿ ಸುಳಿದಿದೆ. ನಿನ್ನೊಂದಿಗೆ ಎಷ್ಟು ನಕ್ಕಿದ್ದೇನೆ ಹಾಗೆಯೇ ಜಗಳ ಕೂಡಾ ಆಡಿದ್ದೇವೆ. ಸರಸ ವಿರಸ ಇರದ ಬದುಕು ಬದುಕೆನೇ ಗೆಳತಿ....ಪ್ರತಿ ಜಗಳಕ್ಕೂ ಒಂದು ಅದ್ಭುತ ಬೆಸೆಯುವ ಶಕ್ತಿಯಿದೆ. ಪ್ರತಿ ನಗುವಿಗೂ ಒಂದು ಅದ್ಭುತ ಜೀವ ನೀಡುವ ಚೈತನ್ಯವಿದೆ. ಆ 4  ವರುಷಗಳು ಹೇಗೆ ಕಳೆದವೋ ಗೊತ್ತಾಗಲೇ ಇಲ್ಲ. ಇಂದು ಮದುವೆಯ 4  ನೆ ವರುಷದ ಹರುಷಕ್ಕೆ ಸಾಕ್ಷಿ ಆಗುತ್ತಿದ್ದೇವೆ.

4  ನೆ ವರುಷದಲ್ಲಿ ಬದುಕಿಗೆ ಬೆಳಕಂತೆ ಅಭಿನವ ಬಂದಿದ್ದಾನೆ. ಅವನ ಲಾಲನೆ ಪಾಲನೆಯಲ್ಲಿ ನೀನು ನಿರತಳಾಗಿ ನನ್ನಿಂದ ದೂರ ದಲ್ಲಿ ಇದ್ದೀಯ. ಇಂದು ನಮ್ಮಿಬ್ಬರ ಮದುವೆಯ 4  ನೆ ವರುಷದ ಸಂಭ್ರಮಕ್ಕೆ ನೀನಿಲ್ಲ. ಒಬ್ಬನೇ ಕುಳಿತು ನಿನ್ನ ದಾರಿ ಕಾಯುತ್ತಿದ್ದೇನೆ. ನೀ ಬರದ ಈ ದಿನಕ್ಕೆ ಎಲ್ಲಿಯ ಮೆರಗು ಹೇಳು?

ಈ ಪತ್ರ ನಿನಗಾಗಿ....

''ಪತ್ರ ಬರೆಯಲ ಗೆಳತಿ, ಚಿತ್ರ ಬಿಡಿಸಲ,
ಹೇಗೆ ಹೇಳಲಿ ನನ್ನ ಎದೆಯ ತಳಮಳ''

4  ನೆ ವರುಷದ ಸಂಭ್ರಮಕ್ಕೆ ನಿನಗೆ ಹಾರ್ದಿಕ ಶುಭಾಶಯಗಳು. 4  ನೆ ವರುಷಕ್ಕೆ ''ಅಭಿನವ್'' ಕೊಡುಗೆ ಆಗಿ ಸಿಕ್ಕಿದ್ದಾನೆ, ಅದಕ್ಕೆ ನಾನು ನಿನಗೆ ಋಣಿ.

ಈ 4  ವರುಷಗಳಲ್ಲಿ ನಿನ್ನ ಮನಸನ್ನು ನಗಿಸಿದ್ದೆಷ್ಟೋ ಅಷ್ಟೇ ನೋಯಿಸಿದ್ದೇನೆ. ಕ್ಷಮಿಸುವೆಯಲ್ಲ ಗೆಳತಿ....

ನಿನ್ನ ದಾರಿ ಕಾಯುತ್ತಿದ್ದೇನೆ

ಈ ದಿನದ ಸಂಭ್ರಮಕ್ಕೆ ಶುಭಾಶಯಗಳು.

ನಿನ್ನ

ಗೆಳೆಯ

23 comments:

shridhar said...

Shubhashayagalu ... Nimma Magana Photo Nodide FBnalli .. very Cute ..
Mastashtu santasada varushagalu barali ...

ಓ ಮನಸೇ, ನೀನೇಕೆ ಹೀಗೆ...? said...

ಬಾಳಸಂಗಾತಿಗಳಾಗಿ ಪಯಣ ಶುರು ಮಾಡಿದ ದಿನದ ನೆನಪಿನಲಿ ಗೆಳತಿಯ ಜೊತೆಗಿನ ಅಂತರಂಗ ವಿನಿಮಯ ತುಂಬಾ ಚೆನ್ನಾಗಿದೆ. ತುಂಬಾ ಆತ್ಮೀಯವಾದ ಬರಹ. ನಿಮ್ಮಿಬ್ಬರಿಗೂ ವಿವಾಹ ವಾರ್ಷಿಕೋತ್ಸವದ ಶುಭಾಷಯಗಳು ಗುರು ಅವರೇ..
ನಿಮ್ಮೀ ಬಾಳ ಪಯಣದಲಿ
ಸದಾ ನಗುವೇ ತುಂಬಿರಲಿ ...:)

Dr.D.T.Krishna Murthy. said...

ಗುರು ಸರ್;ಮದುವೆಯ ನಾಲ್ಕನೇ ವಾರ್ಷಿಕೋತ್ಸವಕ್ಕೆ ಶುಭಾಶಯಗಳು.ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.

SANTOSH MS said...

Dear Guru Sir,

A very warm, pleasant and happy wedding anniversary. good writeup and interpretation.

ಮನಸು said...

May God bless your union together..

True love is the bond that keeps your happiness together..

Happy Anniversary Guru & Geeta..

AshKuku said...

Happy Anniversary! That was a beautiful narration.... :D

Happy Celebrations!!!

Ash... :)

Gold13 said...

Best wishes to you on your special day and many more to come
Swarna

Anonymous said...

happy anniversary...

Shruthi Rao said...

ನಿಮ್ಮ ದಾ೦ಪತ್ಯ ಜೀವನ ೪ವರ್ಷಗಳನ್ನು ಪೂರೈಸಿದೆ...ನಿಮಗೆ ಶುಭಾಶಯಗಳು....:)

nimmolagobba said...

ನಾಲ್ಕನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಗುರು ಮೂರ್ತಿ ಸರ್ ಹಾಗು ಗೀತ ಮೇಡಂ. ಈ ವರ್ಷ ಹೊಸ ಜೀವ ಜೊತೆಯಲ್ಲಿರುವ ಪ್ರಯುಕ್ತ ವಿಶೇಷವಾಗಿರುತ್ತೆ ಅಭಿನಂದನೆಗಳು.

ಮೌನರಾಗ... said...

happy aniversary...

ಸೀತಾರಾಮ. ಕೆ. / SITARAM.K said...

ಶುಭಾಶಯಗಳು.

ಮನೆಯ ಶಕ್ತಿ said...

Happy Anniversary!

ist pritiyinda bareda letter ge attige manasolade irta....!

ibrigu..... nanna haange abhinav kadeyinda shubhaashayagalu...
keep smile....:)

Nisha said...

ನಿಮ್ಮಿಬ್ಬರಿಗೂ ವಿವಾಹ ವಾರ್ಷಿಕೋತ್ಸವದ ಶುಭಾಷಯಗಳು

ಸುಬ್ರಮಣ್ಯ ಮಾಚಿಕೊಪ್ಪ said...

ಶುಭಾಶಯಗಳು

ನನ್ನೊಳಗಿನ ಕನಸು.... said...

ತುಂಬಾ ಮನಮುಟ್ಟುವಂತಿದೆ ನಿಮ್ಮ ಪತ್ರ ... ಶುಭಾಷಯಗಳು

Kanthi said...

Wish you Happy and peace full life ahead...

sunaath said...

ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯಗಳು. ನೂರ್ಕಾಲ ಹರುಷದಿಂದ ಬಾಳಿರಿ.

ಗುಬ್ಬಚ್ಚಿ ಸತೀಶ್ said...

HAPPY ANNIVERSARY.

Pradeep Rao said...

Congratulations Guru Sir...

ashokkodlady said...

Belated Wishes sir......

shivu.k said...

ಗುರುಮೂರ್ತಿ ಸರ್,

ನಿಮ್ಮ ಮದುವೆಯ ವಾರ್ಷಿಕೋತ್ವವಕ್ಕೆ ಶುಭಾಶಯಗಳು. ಲೇಖನ ಚೆನ್ನಾಗಿದೆ.

ತೇಜಸ್ವಿನಿ ಹೆಗಡೆ said...

Belated wishes to both of you :) Happy married life...