Saturday, January 7, 2012

ಅವಳಿಗೆ ಬದುಕು ಎಂದರೆ ಮದುವೆ, ಬಾಳು ಎಂದರೆ ಮಕ್ಕಳು:ನನಗೆ ಬದುಕು ಎಂದರೆ ಸಾಧನೆ, ಬಾಳು ಎಂದರೆ ಸಾಹಸ


ಸ್ನೇಹಿತರೆ....
ಗೊತ್ತಿಲ್ಲದೇ ''ಸಾಗರದಾಚೆಯ ಇಂಚರ'' ಕ್ಕೆ 4 ವರುಷಕ್ಕೆ ಕಾಲಿಟ್ಟ ಸಂಭ್ರಮ. ಕಳೆದ ವರ್ಷ ಬ್ಲಾಗ್ ಹೆಚ್ಚು ಬರೆಯಲು ಆಗಲಿಲ್ಲ. ಆದರೆ ಈ ವರ್ಷ ಮತ್ತದೇ ಉತ್ಸಾಹದೊಂದಿಗೆ ನಿಮ್ಮ ಮುಂದೆ ಬರುತ್ತೇನೆ. ನಿಮ್ಮ ಪ್ರೀತಿ ಸದಾ ಇರಲಿ. ನಿಮ್ಮೆಲ್ಲರ ಬ್ಲಾಗ್  ಅನ್ನು ನಿಧಾನ ಓದುತ್ತಿದ್ದೇನೆ. ಅದಕ್ಕೆ ಕ್ಷಮೆ ಇರಲಿ. ಹೊಸ ವರುಷ ಸದಾ ಹರುಷ ತರಲಿ.
           


ಬದುಕಿಗೆ ಸಂಗಾತಿ ಬೇಕು ನಿಜ, ಆದರೆ  ಸಂಗಾತಿ ಇಲ್ಲದ ಬದುಕು ''ಬದುಕಲ್ಲ'' ಎಂಬ ನಿಲುವಿಗೆ ನನ್ನ ವಿರೋಧವಿದೆ. ಅಮ್ಮನ ಮುದ್ದಿನ ಮಗಳಾದ ನನಗೆ ಅಮ್ಮನ ಮದುವೆಯ ಬಲವಂತ ಇಂದಿಗೂ ಅರ್ಥವಾಗದ  ಒಂದು ಸಮೀಕರಣ. ಹರೆಯಕ್ಕೆ ಬಂದ ಮಗಳು ತಂದೆ ತಾಯಿಗಳ ಚಿಂತೆಯನ್ನು ಹೆಚ್ಚಿಸುತ್ತಾಳಂತೆ. ಅವಳ ಮದುವೆ ಮಾಡಿ ಬಿಟ್ಟರೆ ತಮ್ಮ ಕರ್ತವ್ಯ ಮುಗಿಯಿತು ಎಂಬ ಕಲ್ಪನೆ ಬಹುಶ ಎಲ್ಲ ಭಾರತೀಯ ತಂದೆ ತಾಯಿಗಳಲ್ಲೂ ಇರುತ್ತದೆ. 

ಬದುಕು ಕೇವಲ 4  ಗೋಡೆಗಳ ಮಧ್ಯದ ಜೈಲಲ್ಲ ಎಂದು ನಾನು ಹೇಳಿದರೆ ಅದನ್ನು ''ಉಡಾಫೆ'' ಎಂದು ತಿರಸ್ಕರಿಸುವ ಅಥವಾ ತಿರಸ್ಕರಿಸುವಂತೆ ಮಾಡುವ ಅದೆಷ್ಟೋ ನನ್ನ ಸುತ್ತ ಮುತ್ತಲಿನ ಸಮಾಜಿಗರಿಗೆ  ಬದುಕೆಂದರೆ  ಬಾವಿಯೊಳಗಿನ ಕಪ್ಪೆಯಂತೆ. ಅವರು ನಡೆಸಿದ್ದೆ  ಬದುಕು, ಹೇಳಿದ್ದೇ ವೇದ ವಾಕ್ಯ. 

ನಾನಾಗ  ಚಿಕ್ಕವಳಿದ್ದೆ. ಆಗ ಕಲಿಯುವುದೊಂದು ಬಿಟ್ಟು ಇನ್ನೇನು ನನಗೆ ಗೊತ್ತಿರಲಿಲ್ಲ ಅಥವಾ ಬೇಕಿರಲೂ ಇಲ್ಲ. ಜೊತೆಗೆ  ಭರತನಾಟ್ಯದ ಹುಚ್ಚು. ಸದಾ ಮನಸ್ಸಿನಲ್ಲಿ ರಾಗಗಳೊಂದಿಗೆ ಪ್ರಯಾಣ ಮಾಡುತ್ತಾ ಕಾಲ್ಗೆಜ್ಜೆಗಳ ನಾದಕ್ಕೆ ತಾಳಗಳನ್ನು ಜೋಡಿಸುತ್ತ  ನನ್ನೊಂದಿಗೆ ನಾನು ಬದುಕಿನ ಸಂತೋಷದ ತೇರನ್ನು ಎಳೆಯುತ್ತ ಇದ್ದೆ. ಮುದ್ದು ಮಾಡುವ ಅಮ್ಮ, ತಿದ್ದಿ ತೀಡುವ ಅಪ್ಪ, ಗುದ್ದಿ ತಿದ್ದುವ ಗುರು, ಇವರೆಲ್ಲ ಇರುವಾಗ  ನನಗೆ ಯಾವ ಚಿಂತೆಯೂ ಇರಲಿಲ್ಲ. ಮುಂದಿನ ಬದುಕು ಬಹುಶ: ಸಂತೋಷದ ಸಾಗರ  ಎಂದು ಅಂದೇ ಎಣಿಸಿದ್ದೆ.

ಕಾಲ ಯಾರಿಗೂ ನಿಲ್ಲಲ್ಲ. ಅಂತೆಯೇ ನನಗೋಸ್ಕರ ನಿಲ್ಲಲಿಲ್ಲ. ಶಿಕ್ಷಣದ ಜೊತೆ, ಭರತನಾಟ್ಯ, ಜೊತೆ ಜೊತೆಗೆ ಸಾಗುತ್ತಿತ್ತು. ಭರತನಾಟ್ಯ ಮುಗಿದಮೇಲೆ ಪಾಠ, ಪಾಠ ದ  ನಂತರ  ಭರತನಾಟ್ಯ, ಹೀಗೆ  ''ನೀನಿದ್ದರೆ ನಾನು, ನಾನಿದ್ದರೆ ನೀನು'' ಎಂಬಂತೆ ನಡೆಯುತ್ತಿತ್ತು. 

ಹೆಣ್ಣು ''ಸಂಗೀತ ಕಲಿಯಬೇಕು'' ''ನೃತ್ಯ ಕಲಿಯಬೇಕು'' ''ಹೆಚ್ಚಿನ ಶಿಕ್ಷಣ ಕಲಿಯಬೇಕು''ಆದರೆ  ಅವಳು ಅದರಲ್ಲೇ ಸಾಧನೆ ಮಾಡಬಾರದು ಎಂಬ ನಿಲುವು ಎಷ್ಟು ಸರಿ? ಹೆಣ್ಣಿಗೆ   ನೃತ್ಯ , ಸಂಗೀತ ಕೇವಲ ಚಿಕ್ಕವರಿದ್ದಾಗ ಮಾತ್ರ ಕಲಿಯಬೇಕು ಎಂಬ ನಿಲುವು ಭಾರತದ  ಅದೆಷ್ಟೋ ತಂದೆ ತಾಯಿಗಳ  ಅಭಿಪ್ರಾಯ. ಅವಳು ಬೆಳೆದಂತೆ ಇದನ್ನೆಲ್ಲಾ ಬಿಟ್ಟು ಲಕ್ಷಣವಾಗಿ ಅಡಿಗೆ ಮಾಡಿ ಮದುವೆಯಾಗಿ, 4  ಮಕ್ಕಳನ್ನು ಹೆತ್ತು ಅವರನ್ನು ನೋಡಿಕೊಳ್ಳಬೇಕು. ಬಂಗಾರದಂತ ಸಂಸಾರ ಅವಳದಾಗಬೇಕು, ಎಂಬ ನಿಲುವುಗಳೇ ಭಾರತೀಯ ನಾರಿ ಮನೆಯನ್ನು ಬಿಟ್ಟು ಹೊರಗೆ ಬರದಂತೆ ಎಷ್ಟೋ ಬಾರಿ ಕಟ್ಟಿ ಹಾಕುತ್ತವೆ. ಆ ವಿಷಯದಲ್ಲಿ ನಾನು ಅದೃಷ್ಟವಂತೆ. ನನ್ನ ಶಿಕ್ಷಣಕ್ಕಾಗಲಿ, ಅಥವಾ ಸಂಗೀತ,  ನೃತ್ಯಕ್ಕಾಗಲಿ ಯಾರೂ ಅಡ್ಡಿ ಬರಲಿಲ್ಲ. ಒಳ್ಳೆಯ ಅಂಕಗಳನ್ನು ಪಡೆದು Prestigeous  ಕಂಪನಿಯಲ್ಲಿ ದೊಡ್ಡ ಹುದ್ದೆ  ಪಡೆದುಕೊಂಡಾಗ ಮನಸ್ಸಿಗೆ ಆದ ಸಂತೋಷ ಹೇಳಲಸದಳ.

ಆದರೆ ಅದಾಗಲೇ ನಮ್ಮೂರ ಜನರಿಗೆ, ನಮ್ಮ ಹೆತ್ತವರಿಗೆ ನಾನು ''ಬೆಳೆದ ಮಗಳು'' ಅಂದರೆ  ''ಮದುವೆಗೆ ಬಂದ ಮಗಳು''
ಶುರುವಾಯಿತು ನೋಡಿ, ಜನ ಮರುಳೋ, ಜಾತ್ರೆ ಮರುಳೋ. ಹುಡುಗನ ಹುಡುಕುವ  ಸಾಹಸ. ಒಂದೆರಡು ವಧು ಪರೀಕ್ಷೆಯೂ ಆಯಿತು. ಏನಂತಿರಾ, ಅದನ್ನ, ನಾನು ಮೊದಲೇ ಸ್ವಲ್ಪ ಸೀರಿಯಸ್  ಮನುಷ್ಯ, ಅದನ್ನ ಆ ಪ್ರಾಣಿ ಹೇಗೋ ತಿಳಿದುಕೊಂಡಿದೆ. ಅವನ ಪ್ರಶ್ನೆಯ ವೈಖರಿಯ ಸ್ಯಾಂಪಲ್  ನಿಮ್ಮ ಮುಂದೆ, 

ವಧು ಪರೀಕ್ಷೆ  ೧: ಪರೀಕ್ಷಾ ಕೊಠಡಿ.

ವರ : ಹೇಗಿದ್ದಿರಾ,
ವಧು: ಚೆನ್ನಾಗಿದ್ದೀನಿ  (ಇನ್ನೇನು ನಿಮ್ಮ  ನೋಡಿದ ಮೇಲೆ  ಹುಷಾರು ತಪ್ಪಿ ಹೋಗೋ ಲಕ್ಷಣ ಇದೆ )
ವರ: ನಾನು ಚೆನ್ನಾಗಿದ್ದೀನಿ  
ವಧು : (ನಾನೇನು ಕೇಳಿದನ ನಿಮ್ಮ)
ವರ: ಏನು ಓದ್ಕೊಂಡಿದಿರಾ? ನೀವು ತುಂಬಾ ಮೂಡಿ ಅಂತೆ, ಹೆಚ್ಚು ಯಾರತ್ರನು ಮಾತಾಡಲ್ಲ ಅಂತೆ, ಒಳ್ಳೆ ಡಾನ್ಸ್ ಮಾಡ್ತಿರಂತೆ? ಹಾಡು ಬರತ್ತೆ ಅಂತನು ಕೇಳಿದೆ, ಹೌದ?
ವಧು: ಪರವಾಗಿಲ್ಲ, homework ಚೆನ್ನಾಗಿ ಮಾಡಿ ಬಂದಿದಿರಾ, ನೀವು ಕೇಳಿರೋದು ಎಲ್ಲ ನಿಜ. ನಾನು ಹಾಗೆಲ್ಲ ಸುಮ್ಮ ಸುಮ್ಮನೆ ಮಾತಾಡೋಕೆ ಹೋಗಲ್ಲ. ವಿಷಯ ಇದ್ರೆ ಮಾತಾಡ್ತೀನಿ, ಇಲ್ಲ ಅಂದ್ರೆ ಆಫೀಸ್ ಕೆಲಸ ಇದ್ದೆ ಇದೆ. ನನಗೆ ಸುಮ್ಮನೆ ಹರಟೆ ಹೊಡೆಯೋಕೆ ಇಷ್ಟ ಇಲ್ಲ.
ವರ: Same Here ನಾನು ಹಾಗೇನೆ . ನನಗೆ ಸೀರಿಯಸ್ ಮನುಷ್ಯರು ಅಂದ್ರೆ ತುಂಬಾ ಇಷ್ಟ. ಯಾರಿಗೆ ಬೇಕು ಹರಟೆ ಹೇಳಿ, ಟೈಮ್ ಎಲ್ಲಿದೆ ಅದನ್ನೆಲ್ಲ ಮಾಡೋಕೆ 
ವಧು:(ಈಗ ತಾವು ಮಾಡ್ತಾ ಇರೋದು ಅದನ್ನೇ ಅಲ್ಲವೇ)
ವರ: ನಿಮಗೆ ಅಡಿಗೆ ಮಾಡೋಕೆ ಬರತ್ತಾ? ನಾನು ತುಂಬಾ ಸಂಬಳ ತಗೋತೀನಿ, ನನಗೆ ನೀವು ಕೆಲಸ ಮಾಡೋದು ಇಷ್ಟ ಇಲ್ಲ. ಮನೇಲಿ ಎಲ್ಲಾನು ಇದೆ. ಆರಾಮಾಗಿ ಮನೇಲೆ ಇದ್ದು ಬಿಡಿ. ಕೆಲಸದವರು ಇದ್ದಾರೆ. ನೀವು ಏನು ಮಾಡೋದು ಬೇಡ. ಬೇಜಾರಾದರೆ ಮನೇಲೆ ಡಾನ್ಸ್ ಮಾಡಿ. ಆದ್ರೆ ಹೊರಗಡೆ ಪ್ರೋಗ್ರಾಮ್ ಕೊಡೋದು ಬೇಡ ಯಾಕಂದ್ರೆ ನಂದು ಸ್ಟೇಟಸ್ ಹಾಳಾಗತ್ತೆ, ನನ್ನ ಹೆಂಡ್ತಿ ಡಾನ್ಸ್ ಮಾಡ್ತಾಳೆ ಅಂತ ಕೇಳಿದ್ರೆ. ನೀವು ಹೇಗೆ  ಬೇಕಾದ್ರೂ ಇರಿ, ನನದೇನೂ ಅಭ್ಯಂತರ ಇಲ್ಲ, ಒಟ್ಟಿನಲ್ಲಿ ನೀವು ಸುಖವಾಗಿ ಇರಬೇಕು ಅಷ್ಟೇ..
ವಧು : (ನಿಮ್ಮಜ್ಜಿ, ಎಲ್ಲಿ ಸುಖ, ಇಷ್ಟೊಂದು ಬಂಧನದಲ್ಲಿ ನನ್ನ ಇಟ್ಟು, ಸುಖವಾಗಿರು ಅಂತಿರಲ್ಲ)
ವರ: ಸರಿ ಹಾಗಾದ್ರೆ, ಮದುವೆ ಬಗ್ಗೆ ನಿಮ್ಮ ತಂದೆ ತಾಯಿ ಹತ್ರ ಮಾತಾಡ್ತೀನಿ, ನನ್ನ ನಂಬರ್ ತಗೋಳಿ, ಕಾಲ್ ಮಾಡ್ತಾ ಇರಿ ಆಯ್ತಾ..
ವಧು: ಸರಿ, ನೀವು ಕಾಲ್ ಗೆ ಕಾಯ್ತಾ ಇರಿ ಆಯ್ತಾ ;;;;;;

ಇದು ನನ್ನ ಮೊದಲ ವಧು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಕೂಡಾ. ನನ್ನ ಅಭಿಪ್ರಾಯಕ್ಕೆ ಎಳ್ಳೆಣ್ಣೆ ಯಾ ಬೆಲೆಯೂ ಇಲ್ಲದ ಮದುವೆ ಬೇಕಾ? ಎಂದು ಮೊದಲ ಬಾರಿಗೆ ಅನ್ನಿಸಿದ್ದು ಅಂದೇ. ಈ ಬದುಕು ತಂದೆ ತಾಯಿಗಳ ಕ್ರಪೆ. ಆದರೆ ಬದುಕಿನ ಸಂಪೂರ್ಣ ಹಕ್ಕು ನನ್ನದಲ್ಲವೇ? ನನ್ನ ಬದುಕಿನ ನಿರ್ಧಾರ  ಊರಿನ 4-6  ಜನ ನಿರ್ಧರಿಸುತ್ತಿದ್ದಾರೆ  ಎಂದಾದರೆ  ನಾನ್ಯಾರು? ನನ್ನ ಸ್ವಂತಿಕೆ  ಏನು? ಇದೂ ಒಂದು ಬದುಕೇ? ಇನ್ನೊಬ್ಬರ ಹಂಗಿನ  ಸ್ವಾತಂತ್ರವೇ ಇಲ್ಲದ ಬದುಕಿನ ಬಗ್ಗೆ ಬಹಳಷ್ಟು ವಿಚಾರಗಳು ಅಂದು ತಲೆಯಲ್ಲಿ ಸುಳಿದು ಹೋದವು.

ಮನೆಯಲ್ಲಿ ಅಂದೇ ಹೇಳಿದೆ, ನನಗೆ ಮದುವೆ ಬೇಡ ಎಂದು. ಅಂದಿನಿಂದ ಆರಂಭವಾಯಿತು ಅಮ್ಮನ  ಉಪವಾಸ ಸತ್ಯಾಗ್ರಹ, ಅದೆಲ್ಲೋ ಉತ್ತರ ಭಾರತದಲ್ಲಿ  ನೀರಿಲ್ಲದೆ ಜನ ಸಾಯುತ್ತಿದ್ದಾರೆ ಎಂದು ಓದಿದ್ದೆ. ಅಂದೆನಾದರೂ ನಮ್ಮ ಮನೆಯಿಂದ ಒಂದು ಪೈಪ್  ನಲ್ಲಿ ಕಣ್ಣೀರನ್ನು ಉತ್ತರ ಭಾರತಕ್ಕೆ ಕಳಿಸಿದ್ದರೆ ಅದೆಷ್ಟೋ ಜನ ಬದುಕಿಕೊಳ್ಳುತ್ತಿದ್ದರು. ಅಮ್ಮನ ಕಣ್ಣೀರಿನ ಪವರ್ ಹಾಗಿತ್ತು. ಅತ್ತು ಅತ್ತು ಅವಳ ಕಣ್ಣು ಕೆಂಪಾಗಿತ್ತು. 

ಅಮ್ಮನಿಗೆ ಮದುವೆ ಎನ್ನುವುದು ಒಂದು ಅನಿವಾರ್ಯ ಅಷ್ಟೇ ಅಲ್ಲ ಅದೊಂದು ಸಂಪ್ರದಾಯ. ನನಗೆ ಮದುವೆ ಎನ್ನುವುದು ಬಂಧನ.ಹಾರುವ ಹಕ್ಕಿಗೆ ಚಿನ್ನದ ಪಂಜರದಲ್ಲಿ ಕೂಡಿಸಿ ಪಂಚ ಭಕ್ಷ ಪರಮಾನ್ನ ನೀಡಿದರೂ ಅದಕ್ಕೆ ಹಾರುವಿಕೆಯಲ್ಲಿ ಸಿಗುವ ಸ್ವಾತಂತ್ರ್ಯ ಬೇರೆ ಎಲ್ಲಿಯೂ ಸಿಗದು.ಆದರೆ ಸಂಪ್ರದಾಯದ ನೆರಳಲ್ಲಿ ಬೆಳೆದ ಅಮ್ಮನಿಗೆ ಇದನ್ನು ಅರ್ಥ ಮಾಡಿಸಲು ಸಾದ್ಯವಿಲ್ಲ.

ಅವಳಿಗೆ ಬದುಕು ಎಂದರೆ ಮದುವೆ, ಬಾಳು ಎಂದರೆ ಮಕ್ಕಳು.
ನನಗೆ ಬದುಕು ಎಂದರೆ ಸಾಧನೆ, ಬಾಳು ಎಂದರೆ ಸಾಹಸ

ಅವಳು ಬದುಕಿಗೆ ಹೆದರಿ ಬಾಳನ್ನು ಒಪ್ಪಿ ಕೊಂದವಳು (ಅಲ್ಲಲ್ಲ ಒಪ್ಪಿ ಕೊಂಡವಳು)
ನಾನು ಬದುಕಿಗೆ ಸವಾಲಾಗಿ ನಿಂತು ಬಾಳನ್ನು ಅಪ್ಪುವವಳು

ಇಬ್ಬರ ಮನಸ್ಸಿನ ದ್ವಂದ್ವ ಇಬ್ಬರಿಗೂ ಅರ್ಥ ಆಗದು 


ಮತ್ತೆ ಮುಂದಿನ ವಾರ ಸಿಗುತ್ತೇನೆ, ಕಥೆ ಇನ್ನೂ ಇದೆ....

25 comments:

ಮನಸು said...

ಹೊಸ ವರ್ಷದ ಶುಭಾಷಯಗಳು... ಕಥೆ ತುಂಬಾ ಚೆನ್ನಾಗಿ ಮನಸ್ಸು ದ್ವಂದ್ವ ಕೆಲವೊಮ್ಮೆ... ದೊಡ್ಡವರ ಆಶಯಕ್ಕೆ ಸೋಲಬೇಕಾಗುತ್ತದೆ

ಸಾಗರದಾಚೆಯ ಇಂಚರ said...

ಮನಸು
ಮನಸ್ಸಿನ ದ್ವಂದ್ವ ಕೆಲವೊಮ್ಮೆ ನಮ್ಮ ತನವನ್ನೇ ಸಾಯಿಸಿ ಬಿಡುತ್ತದೆ

ತಾಯಿ ಮಗಳ ದ್ವಂದ್ವ ಬಿಡಿಸಲಾಗದ ಕಗ್ಗಂಟು. ಇಬ್ಬರು ಅವರವರ ನಿಲುವಿನಲ್ಲಿ ಸರಿಯೇ

ತಪ್ಪು ಯಾರದು

ಕೇವಲ ಅನುಭವಿಸಿದವರಿಗೆ ಮಾತ್ರ ಗೊತ್ತು ಅಲ್ಲವೇ?

ಅಭಿಪ್ರಾಯಕ್ಕೆ ಧನ್ಯವಾದಗಳು

Kanthi said...

Kathe chennaagiddu.. Intha dwandva next generation ge aadroo sari hogtaa nodakku.

ಸಾಗರದಾಚೆಯ ಇಂಚರ said...

Kanthi
nija, kaalane helakkau ashteya

sudhaarane nammindane start agavu aste

thanks for the comments

namitha Hegde said...

channagiddu..kathe..i liked it
hosa horushakke ..hosa kathe..keep it up...:)

savitha B C said...

ಕಥಾವಸ್ತು ಚೆನ್ನಾಗಿದೆ ಗುರು...ನನಗೆ ಇಂದಿಗೂ ಅರ್ಥವಾಗದೇ ಗೊಂದಲದ ಗೂಡಾಗಿರುವುದೆಂದರೆ ಎಷ್ಟೇ ಕಲಿತರು ಹೆಣ್ಣು ಮದುವೆ ಆಗುವವರೆಗೂ ಎಂಬ ಮನೋಭಾವನೆ....ಅದೆಷ್ಟೋ ಪ್ರತಿಭಾವಂತೆಯರು ಇಂದು ಮನೆಕೆಲಸವೆಂಬ ಗೃಹಬಂದನದಲ್ಲಿ ಬಂಧಿಯಾಗಿದ್ದಾರೆ ಅವರ ಪ್ರತಿಭೆ ಅಡುಗೆಗೆ ಮನೆಯ ನಾಲ್ಕು ಗೋಡೆಯ ಮದ್ಯೆ ಸಿಕ್ಕಿ ನಲುಗುತ್ತಿದೆ....ಇನ್ನೊಂದು ಮಾತು ಹೆಣ್ಣು ಎಷ್ಟೇ ಕಲಿತರು ಮದುವೆ ಆದ ನಂತರ ಗಂಡಂದ ಮನೆಯೇ ಆಕೆಯ ಸರ್ವಸ್ವ ಇಂದು ಹೇಳುವುದು ಒಂದು ಹೆಣ್ಣೇ(ಹೆಚ್ಚಾಗಿ ತಾಯಿ -ಹೆಚ್ಚಿನ ಸಂಖ್ಯೆಯಲ್ಲಿ )...

sunaath said...

ನಮ್ಮ ಸಮಾಜದಲ್ಲಿ ಹೆಣ್ಣಿಗಿರುವ ಸಮಸ್ಯೆಯನ್ನು ತುಂಬ ಚೆನ್ನಾಗಿ ಬಿಡಿಸಿಟ್ಟಿದ್ದೀರಿ. ಅಭಿನಂದನೆಗಳು.

ಸಾಗರದಾಚೆಯ ಇಂಚರ said...

ನಮಿತಾ
ಅಭಿಪ್ರಾಯಕ್ಕೆ ಥ್ಯಾಂಕ್ಸ್

ಹೊಸ ವರುಷಕ್ಕೆ ಹೊಸ ಕಥೆಗಳನ್ನು ಆರಂಬಿಸುವ ಬಯಕೆ

ಇದೊಂದು ಸಣ್ಣ ಪ್ರಯತ್ನ

ಬರುತ್ತಿರಿ

ಸಾಗರದಾಚೆಯ ಇಂಚರ said...

ಸವಿತಾ

ನಿಮ್ಮ ಮಾತು ನಿಜ

ಹೆಣ್ಣಿಗೆ ಹೆಣ್ಣೇ ಶತ್ರು

ವರದಕ್ಷಿಣೆ ಕೇಳುವವಳು ಹೆಚ್ಚಾಗಿ ಅತ್ತೆಯೇ ಹೊರತು ಮಾವನಲ್ಲ

ಹಾಗೆಯೇ ತಾಯಿ, ಮಗಳು ವಯಸ್ಸಿಗೆ ಬಂದಂತೆ ಮಾಡುವೆ ಮಾಡಲು ಪ್ರಯತ್ನಿಸುತ್ತಾಳೆ

ಆದರೆ ತಂದೆ ಮಗಳು ಹೆಚ್ಚೆಚ್ಚು ಓದಲಿ ಎಂದು ಬಯಸುತ್ತಾನೆ

ಈ ದ್ವಂದ್ವಗಳನ್ನು ಅಲ್ಲಿಯೇ ಬಿಡುವುದು ಹೆಚ್ಚು ಸೂಕ್ತ

ಇಲ್ಲಿ ಯಾರು ತಪ್ಪು, ಯಾರು ಸರಿ ಎನ್ನುವುದು ತೀರ್ಮಾನಿಸಲಾಗದ ವಿಚಾರ

ಯಾಕೆಂದರೆ ಸೋಲು ಇಲ್ಲಿ ಯಾರಿಗೂ ಇಷ್ಟವಿಲ್ಲದ ವಿಚಾರ

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಸುನಾಥ್ ಸರ್
ಸಮಸ್ಯೆಗಳು ಇನ್ನೂ ಸಮಸ್ಯೆಗಳನ್ನೇ ಸೃಷ್ಟಿಸುತ್ತಿವೆ
ಪರಿಹಾರ ಎಂದು?
ಸಮಸ್ಯೆಗಳು ಪರಿಹಾರ ಕಾಣಲು ವಿಫಲ ಆಗುತ್ತಿವೆ ಅಲ್ಲವೇ?
ಪುನಃ ಅದೇ ದ್ವಂದ್ವ ಮನಸ್ಸಿನಲ್ಲಿ ನೆಲೆ ಮಾಡಿದೆ

ಸುಮ said...

Interesting ...munduvaresi bega :)

Pradeep Rao said...

ನಿಜ.. ತಾಯಿಗೂ ಮಗಳಿಗೂ ಅನೇಕ ಬಾರಿ ಈ ರೀತಿ ದ್ವಂದ್ವ ಉಂಟಾಗುವುದು.. ಚೆನ್ನಾಗಿ ಹೇಳಿದ್ದೀರಿ. ಹೊಸ ವರುಷದ ಹಾಗು ಸಂಕ್ರಾಂತಿ ಶುಭಾಶಯಗಳು!!

nimmolagobba said...

ಗುರು ಮೂರ್ತಿ ಸರ್ ಮೊದಲನೆಯದಾಗಿ ನಿಮ್ಮ ಬ್ಲಾಗ್ "ಸಾಗರದಾಚೆಯ ಇಂಚರ " ನಾಲ್ಕು ವರ್ಷಕ್ಕೆ ಕಾಲಿಟ್ಟ ಸಂಭ್ರಮಕ್ಕೆ ನನ್ನ ಹಾರ್ದಿಕ ಶುಭಾಶಯಗಳು. ೨೦೧೨ ರ ಶುರುವಿಗೆ ಒಂದು ಲಘು ಹಾಸ್ಯದ ಕಥೆಯ ರಸಾಯನ ದೊರೆತಿದ್ದು ಖುಷಿಕೊಟ್ಟಿತು.ಕಥೆಯಲ್ಲಿ ಬರುವ ಪಾತ್ರಗಳು ನಾ ಕಂಡ ನಿಜ ಜೀವನದ ಹಲವು ಮುಖಗಳೇ ಆಗಿವೆ. ಆವುದೇ ವಿಚಾರವನ್ನು ಆಸಕ್ತಿ ಪೂರಕವಾಗಿ ಹೇಳುವ ನಿಮ್ಮ ನೈಪುಣ್ಯ ಮೆಚ್ಚುತ್ತೇನೆ ಶುಭಾಶಯಗಳು ನಿಮಗೆ , "ಸಾಗರದಾಚೆಯ ಇಂಚರ" ನಿರಂತರ ಕೇಳುತ್ತಿರಲಿ ಜೈ ಹೋ

Maitri Vinay said...

ಕಥೆ ಚೆನ್ನಾಗಿ ಬತ್ತಾ ಇದ್ದು. ಆ ಹುಡುಗನ್ ಆಲೊಚನೆ ಧಿಮಾಕು ಅನ್ಸ್ತು... ಅಲ್ದಾ?.. . ಅವಳ ಕಲೆಗೆ ಬೆಲೆನೆ ಇಲ್ಯಾ?? ಮುನ್ದಿನ ಭಾಗಕ್ಕೆ ಕಾಯ್ತಾ ಇರ್ತ್ಯ. ...

ಸಾಗರದಾಚೆಯ ಇಂಚರ said...

ಸುಮಾ ಮೇಡಂ,
ಖಂದಯಾತ್ ಮುಂದುವರಿಯತ್ತೆ :)
ನೀವು ಬರ್ತಾ ಇರಿ

ಸಾಗರದಾಚೆಯ ಇಂಚರ said...

ಬಾಲು ಸರ್
ಇದೊಂದು ನಿಜ ಕಥೆ ಅಂದರೂ ತಪ್ಪಿಲ್ಲ
ನಿಮ್ಮ ಪ್ರೀತಿಪೂರ್ವಕ ಅಭಿಪ್ರಾಯಕ್ಕೆ ವಂದನೆಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಪ್ರದೀಪ್ ಸರ್

ಕೆಲವೊಮ್ಮೆ ತಾಯಿ ಮಗಳ ದ್ವಂದ್ವವೇ ಹಾಗೆ

ಅದೊಂದು ಅವ್ಯಕ್ತ ಭಾವನೆಗಳ ಸಂಗಮ

ಅನುಭವಿಸಿದವರಿಗೆ ಮಾತ್ರ ವೇದ್ಯ

ಬರುತ್ತಿರಿ

ಸಾಗರದಾಚೆಯ ಇಂಚರ said...

ಮೈತ್ರಿ,

ಇಲ್ಲಿ ಅವನ ಯೋಚನೆ ತಪ್ಪ, ಅವಳ ನಡವಳಿಕೆ ತಪ್ಪ?

ಹೇಳದು ಕಷ್ಟ

ಯಾಕಂದ್ರೆ ಅವ ಅವನ ರೀತಿಯಲ್ಲಿ ವಿಚಾರಿಸ್ತ

ಪುರುಷ ಪ್ರಧಾನ ಪ್ರಪಂಚದಲ್ಲಿ ಅವನ ಯೋಚನೆ ಸರಿನೆ ಇರ್ಲಕ್ಕು

ಇದೊಂದು ತಾಯಿ ಮಗಳ ನಡುವಿನ ಭಾವನೆಗಳ ತಿಕ್ಕಾಟ

ಬರ್ತಾ ಇರು

nagendra hegde said...

bavayya,

bega mundindoo bari...

yan vand frnd kathe same iddapa, munde henge heli curious aaji :)

ashokkodlady said...

"ಅವಳು ಬದುಕಿಗೆ ಹೆದರಿ ಬಾಳನ್ನು ಒಪ್ಪಿ ಕೊಂದವಳು (ಅಲ್ಲಲ್ಲ ಒಪ್ಪಿ ಕೊಂಡವಳು)
ನಾನು ಬದುಕಿಗೆ ಸವಾಲಾಗಿ ನಿಂತು ಬಾಳನ್ನು ಅಪ್ಪುವವಳು---ಸುಂದರ ಸಾಲುಗಳು..ಅವರವರ ಸ್ಥಾನದಲ್ಲಿ ಅವರು ಸರಿಯಾಗೇ ಇದ್ದಾರೆ.....ಯಾರದ್ದು ತಪ್ಪು, ಯಾರದ್ದು ಒಪ್ಪು ಎಂದು ಹೇಳುವಂತಿಲ್ಲ ....ಉತ್ತಮ ಲೇಖನ ....ಹೊಸ ವರ್ಷದ ಹಾರ್ದಿಕ ಶುಭಾಶಯಗಳು...

ನನ್ನ ಬ್ಲಾಗ್ ಗೂ ಬನ್ನಿ ....

Gold13 said...

ವಯಸ್ಸಿನಲ್ಲಿ ಏಕಾಂತ ಹಿತವೆನ್ನಿಸಿದರೆ,
ಬಹುಪಾಲು ಜನರಿಗೆ ವಯಸ್ಸು ಮುಗಿದಾಗ ಅದು ಶಿಕ್ಷೆ ಎನಿಸುತ್ತದೆ.
ಅದಕೆ ಬಹಳ ಹೆಂಗಳೆಯರು 'ಅಮ್ಮ'ನ ದಾರಿ ಹಿಡಿಯುತ್ತಾರೆನೋ?
ಮುಂದಿನ ಭಾಗಕ್ಕೆ ಕಾಯುತ್ತಿದ್ದೇವೆ
ಹೊಸವರ್ಷದ ಶುಭಾಶಯಗಳು
ಸ್ವರ್ಣಾ

SANTOSH MS said...

Dear Guru Sir,

Super, different aagi idru channagide. Congratulations on you blog's 4th anniversary

uma bhat said...

Quite similar to my own experiences & the present situations in my house.
Sometimes i feel they dont understand our feelings n they just want to get rid of the girl child in name of madve n sampradaaya.
but then when a gal is of mariage age it is quite natural for the parents to expect their kids to get settled.
but how valid is that they start pestering in that context is out of my reach.
i say - "when it has to happen it will".
why worry for it unecesarily n spoil the peace.

ವನಿತಾ / Vanitha said...

Chendada kathe Guru :)

nange vadhu pareeksheya experience ille maaraya :D

ushodaya said...

kathe thumbaa chennaagiddu.kateya taital thumbaa arthavatthhaagiddu.