Thursday, January 6, 2011

ಬದುಕಿನ ಪುಟಗಳಿಂದ ..
ಕೆದಕಿದಷ್ಟೂ ಬರುವ ಅಗಾಧ ರಾಶಿಯೆಂದರೆ ನೆನಪು. ಅದು ಸಿಹಿ ನೆನಪೇ ಆಗಿರಬಹುದು, ಕಹಿ ನೆನಪೇ ಆಗಿರಬಹುದು. 
''ಎಲ್ಲ ಮರೆತಿರುವಾಗ, ಇಲ್ಲ ಸಲ್ಲದ ನೆವವ 
ಹೂಡಿ ಬರದಿರು ಮತ್ತೆ ಹಳೆಯ ನೆನಪೇ''
ನೆನಪುಗಳಲ್ಲಿ ನೋವಿದ್ದರೆ ಅದರ ನೆನಪು ಮನಸಿಗೆ ಮತ್ತೆ ಮತ್ತೆ ನೋವು ತರಿಸುತ್ತದೆ. ಸಿಹಿ ನೆನಪುಗಳು ಬದುಕಿನಲ್ಲಿ ನೆನೆಸಿದ್ದಷ್ಟೂ ಹೊಸತನ ನೀಡುತ್ತವೆ. ಬದುಕು ಮುಂದಕ್ಕೆ ಚಲಿಸಬೇಕು ನಿಜ, ಆದರೆ ಅದೊಂದು ''ಸಿಂಹಾವಲೋಕನ'' ಆಗಿರಬೇಕು. ಮುಂದೆ ನಡೆದಂತೆ ಹಿಂದೆ ಇಟ್ಟ ಹೆಜ್ಜೆಯ ಒಮ್ಮೆ ಅವಲೋಕನ ಅತ್ಯಗತ್ಯ. ಅದರಲ್ಲಿ ತಿದ್ದಿಕೊಳ್ಳುವ ಹಲವು ಅಂಶಗಳು ಆಗ ಗಮನಕ್ಕೆ ಬರದೆ ಪುನಃ ಎಂದಾದರೊಮ್ಮೆ ಗಮನಕ್ಕೆ ಬರಬಹುದು. ಅದಕ್ಕೇ

 ''ಬಂದ ನೆನಪುಗಳ ದೂರ ತಳ್ಳದಿರು, ಭಾವ ತುಂಬಿ ಬರಲಿ
ನೊಂದ ಮನಸಿಗದು ಹಿತವ ನೀಡುವುದು, ಜೀವ ಮತ್ತೆ ತರಲಿ''

ಬದುಕು ಏಕತಾನತೆಯಿಂದ ಕೂಡಿದ್ದರೆ ಅದರಲ್ಲಿ ಯಾವ ಖುಷಿಯೂ ಇಲ್ಲ ಎಂಬುದು ನನ್ನ ಭಾವನೆ.  ಗೆಲುವು-ಸೋಲು ಬದುಕಿನಲ್ಲಿದ್ದರೆ ಮಾತ್ರ ಹಸನಾದ ಬಾಳು ನಡೆಯಲು ಸಾದ್ಯ. ಹುಟ್ಟಿದ ಮಗು ಒಮ್ಮೆಲೇ ನಡೆಯಲು ಕಲಿತರೆ ಮುಂದೆ ಬಿದ್ದಾಗ ಆಗುವ ನರಳಾಟ ಸಹಿಸಲಸಾದ್ಯ. ಅದೇ ಮಗು ಎದ್ದು ಬಿದ್ದು ನಡೆಯಲು ಕಲಿತರೆ ಬರುವ ಎಲ್ಲ ನೋವುಗಳ ಸಮರ್ಥವಾಗಿ ಎದುರಿಸುವ ಮಾನಸಿಕ ಸ್ಥೈರ್ಯ ಪಡೆದುಕೊಳ್ಳುತ್ತದೆ. ಆ ಏಳು-ಬೀಳುಗಳ ನಡುವಿನ ಬದುಕಿನ ಚಿತ್ರಣದ ನೆನಪು ಎಂದಿಗೂ ಮಧುರ.
ಸರಿಯಾಗಿ 11 ವರ್ಷಗಳ ಹಿಂದೆ ನಾನು PUC ಮುಗಿಸಿದಾಗ ಮನೆಯಲ್ಲಿ ಮುಂದಕ್ಕೆ ಏನು ಮಾಡಬೇಕೆಂದು ಚಿಂತನೆ. ನಮ್ಮ ತಂದೆ ಎಂದಿಗೂ ನೀನು ಇಂಜಿನಿಯರ್ ಆಗಲೇಬೇಕು, ಡಾಕ್ಟರ್ ಆಗಲೇಬೇಕು ಎಂದು ಪೀಡಿಸಲಿಲ್ಲ. ಆ ಮಟ್ಟಿಗೆ ನಾನು ಸುಖಿ. ನನಗೆ ಆಗ ಇಂಜಿನಿಯರಿಂಗ್ ನಲ್ಲಿ ಸಾಕಷ್ಟು Rank ಬಂದರೂ BSc ಮಾಡುವ ಮನಸ್ಸಿತ್ತು. ತಂದೆಯವರ ಸಮ್ಮತಿ ಪಡೆದು ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ಸೇರಿದ್ದಾಯಿತು. ಅಂದಿನ ದಿನಗಳಲ್ಲಿ ನಾನು ಇಂಜಿನಿಯರ ಮಾಡದೇ BSc ಗೆ ಸೇರಿದ್ದಕ್ಕೆ ನನ್ನ ಅನೇಕ ಸ್ನೇಹಿತರು, ಹಾಗೂ ಸಂಬಂಧಿಕರು ''ನಾನು ಯಾವ ಪ್ರಯೋಜನಕ್ಕೂ ಬಾರದವನು'' ಎಂದು ನನ್ನೆದುರಲ್ಲೇ ಅನೇಕ ಸಲ ಮೂದಲಿಸುತ್ತಿದ್ದರು. ಕೆಲವೊಮ್ಮೆ ಅಂಥಹ  ಮೂದಲಿಕೆ ಎಂಥಹ ಪರಿಣಾಮ ಬೀರುತ್ತದೆ ಎಂದರೆ ''ಏನಾದರಾಗಲಿ, ಸಾಧಿಸಿ ತೋರಿಸಬೇಕು'' ಎಂಬ ನಿರ್ಧಾರ ವನ್ನು ನಮ್ಮಲ್ಲಿ ತುಂಬಿ ಬಿಡುತ್ತದೆ. ರಜೆಯಲ್ಲಿ ಊರಿಗೆ ಹೋದಾಗ ಅಮ್ಮ-ಅಪ್ಪ ಹೇಳುತ್ತಿದ್ದುದು ''ಸರಿಯಾಗಿ ಓದು, ಮೂದಲಿಸುವವರ ಬಾಯಿಗೆ ಆಹಾರ ಆಗಬೇಡ '' ಎಂದು. ಬಹುಷ: ತಂದೆ-ತಾಯಿ ಕೊಟ್ಟ ಆ ಪ್ರೀತಿಯೇ ನನ್ನನ್ನು ಮುನ್ನಡೆಸಿತು ಎಂದರೆ ತಪ್ಪಾಗಲಾರದೇನೋ. 
ಆ ದಿನಗಳಲ್ಲಿ ಬಿಸಿ ರಕ್ತದ ವಯಸ್ಸು, ಸ್ವಾಭಿಮಾನ ಅದೆಲ್ಲಿತ್ತೋ ಗೊತ್ತಿಲ್ಲ. ಪ್ರತಿಯೊಂದಕ್ಕೂ ಸ್ವಾಭಿಮಾನ. ತಂದೆಯಿಂದ ಹಣ ಪಡೆಯಲು ಸ್ವಾಭಿಮಾನ. ವರ್ಷದ ಕಾಲೇಜಿನ ಫೀಸ್ ಗೆ ಎಷ್ಟು ಬೇಕೋ ಅಷ್ಟನ್ನೇ ಪಡೆಯಬೇಕು ಎಂಬ ಹಠ. ಉಡುಪಿಯಲ್ಲಿ ಇರುವಾಗ ಶ್ರೀ ಕೃಷ್ಣ ಮಠದ ಹತ್ತಿರಲ್ಲಿಯೇ ರೂಮು ಮಾಡಿಕೊಂಡು ಇದ್ದೆ. ಸುಮಾರು 20 ಜನ ವಿಧ್ಯಾರ್ಥಿಗಳು ನನ್ನಂತೆಯೇ ಅಲ್ಲಿ ಇದ್ದರು. ನಾನು ಜೀವನದಲ್ಲಿ ಮೊದಲ ಬಾರಿಗೆ ತಂದೆ-ತಾಯಿಯನ್ನು ಬಿಟ್ಟು ಹೊರಗೆ ಬಂದ ಕ್ಷಣ ಅದು. ಮನೆಯಲ್ಲಿ ಅಮ್ಮ ಮಾಡಿದ ಕೈ ತುತ್ತನ್ನು ತಿನ್ನುತ್ತ ಊಟಕ್ಕೆ ಕುಳಿತಾಗ ''ಅದು ಸರಿ, ಇದು ಸರಿ ಇಲ್ಲ'' ಎಂದು ಅಮ್ಮನಿಗೆ ಬುದ್ಧಿ ಹೇಳುತ್ತಾ ಇದ್ದೆ. ಆದರೆ ಉಡುಪಿಗೆ ಬಂದ ಒಂದೇ ವಾರದಲ್ಲಿ ನಾನೇ ಅಡಿಗೆ ಮಾಡಿಕೊಂಡಾಗ ಅಮ್ಮನ ನೆನಪಾಗಿ ''ಕಣ್ಣೀರು'' ಗಳ ಗಳ ನೇ ಹರಿದಿತ್ತು. ನಮ್ಮೆಲ್ಲ ಮಾತುಗಳನ್ನು ಶಾಂತಿಯಿಂದ ಕೇಳಿ, ನಮ್ಮ ಮಾತುಗಳಿಗೆ ಬೇಸರ ಮಾಡಿಕೊಳ್ಳದೆ, ಪುನಃ ಅದೇ ನಗು, ಅದೇ ತಾಳ್ಮೆ, ಅದೇ ಸೇವಾ ಮನೋಭಾವ, ಅದೇ ವಾತ್ಸಲ್ಯದಿಂದ ನಮ್ಮನ್ನು ಸಲಹುವ ಮಮತಾಮಯಿ ತಾಯಿಯ ಪ್ರೀತಿಯ ಮುಂದೆ ಜಗತ್ತಿನ ಯಾವ ಪ್ರೀತಿಯೂ ಸರಿಸಮನಲ್ಲ. ಆ ಕ್ಷಮಯಾಧರಿತ್ರಿಯ ಮುಂದೆ ನಾವು ತುಂಬಾ ಚಿಕ್ಕವರು. 
ಉಡುಪಿಯಲ್ಲಿ ಶ್ರೀ ಕೃಷ್ಣ ಮಠ ದಲ್ಲಿ ಪ್ರತಿದಿನ ಮಧ್ಯಾನ್ಹ ಮತ್ತು ಸಂಜೆ ಸರ್ವರಿಗೂ ಉಚಿತ ಊಟ ಹಾಕುತ್ತಾರೆ. ಶ್ರೀ ಕೃಷ್ಣನ ಪರಮ ಪ್ರಸಾದ ವಾದ ಊಟವನ್ನು ಮಾಡಿ ಸರ್ವರೂ ಪುನೀತರಾಗುತ್ತಾರೆ. ನಾನು ಬಂದ ಒಂದು ವಾರದ ನಂತರ ಶ್ರೀ ಕೃಷ್ಣ ಮಠ ಕ್ಕೆ  ಊಟಕ್ಕೆ ಹೋಗತೊಡಗಿದೆ. ನನ್ನ ಬದುಕಿನಲ್ಲಿ ಶ್ರೀ ಕೃಷ್ಣ ಮಠ ದ ಋಣ ಮಾತ್ರ ತೀರಿಸಲಾಗದ್ದು. ಪ್ರತಿದಿನ ಮಧ್ಯಾನ್ಹ ಮತ್ತು ರಾತ್ರಿ ಶ್ರೀ ಕೃಷ್ಣನ ದರ್ಶನ ಮಾಡಿ ಸಾವಿರಾರು ಜನರ ನಡುವೆ ಕುಳಿತು ಮಾಡುವ ಊಟದ ರುಚಿ ಐಶಾರಾಮಿ ಬಂಗಲೆಯಲ್ಲಿ ಚಿನ್ನದ ತಟ್ಟೆ ಯಲ್ಲಿ ಕುಳಿತರೂ ಸಿಗದು. ಮನುಷ್ಯ ನ ಅಹಂಕಾರ ಕಡಿಮೆ ಮಾಡಬೇಕು ಎಂದಾದರೆ ''ವಿಶಾಲ ಸಮುದ್ರದ ಎದುರಲ್ಲಿ ಅಥವಾ ವಿಶಾಲ ಆಕಾಶದ ಕೆಳಗೆ ನಕ್ಷತ್ರಗಳ ವೀಕ್ಷಣೆಯಲ್ಲಿ ಘಂಟೆಗಟ್ಟಲೆ ಕುಳಿತು ಕೊಳ್ಳಬೇಕಂತೆ . ಆ ನಿಸರ್ಗದ ವೈಚಿತ್ರ್ಯದ ಮುಂದೆ ಮನಸ್ಸು ತನ್ನಿಂದ ತಾನೇ ಶಾಂತವಾಗುತ್ತದೆ ಎನ್ನುತ್ತಾರೆ ಹಿರಿಯರು. ಇತ್ತೀಚಿನ ದಿನಗಳಲ್ಲಿ ನಮಗೆ ಸಮುದ್ರ ಎಂದರೆ ನೆನಪಾಗುವುದು ಮರಳಲ್ಲಿ ಆಡುವುದು, ಸ್ನಾನ ಮಾಡುವುದು ಬಿಟ್ಟರೆ ಶಾಂತವಾಗಿ ಕುಳಿತುಕೊಳ್ಳಲು ನಮಗೆ ಸಾದ್ಯವಿಲ್ಲದ ಸ್ಥಿತಿ. ಅಂತೆಯೇ ಸಾವಿರಾರು ಜನರ ನಡುವೆ ಕುಳಿತು ಊಟ ಮಾಡಿದಾಗ ಸಿಗುವ ಭಾವನೆಯೇ ಬೇರೆ.  
ಹಾಗೆಂದೂ ಎಂದಿಗೂ ಉಚಿತ ಊಟ ಕೊಡುತ್ತಾರೆ ಎಂದು ಸುಮ್ಮನೆ ಊಟ ಮಾಡಿ ಬರುತ್ತಿರಲಿಲ್ಲ. ನಾವು ಒಂದು 10 ಜನ ಗೆಳೆಯರು ಪ್ರತಿ ದಿನ ಸುಮಾರು ಸಾವಿರದಷ್ಟು ಜನರಿಗೆ ಬಡಿಸಿ , ಅವರ ಊಟ ಆದ ಮೇಲೆ ಕೊನೆಯಲ್ಲಿ ನಾವು ಊಟ ಮಾಡಿ ಬರುತ್ತಿದ್ದೆವು. ಇದಕ್ಕೆ ನಮಗೆ ಯಾರೂ ಹಣ ಕೊಡುತ್ತಿರಲಿಲ್ಲ. ಹೀಗೆ ಕೃಷ್ಣನ ಮಠ  ದಲ್ಲಿ ಬಡಿಸಿ ಊಟ ಮಾಡಿ ಕಲಿಯುವ ಅನೇಕ ವಿದ್ಯಾರ್ಥಿಗಳಿದ್ದಾರೆ. ಕೃಷ್ಣ ಮಠ  ನಮ್ಮೆಲ್ಲರ ಬಾಳಿಗೆ ಬೆಳಕಾಗಿದೆ. ಅನ್ನ ನೀಡಿ ಬದುಕು ಬರೆದ ಮಹಾನ್  ಸ್ಥಳವೂ ಹೌದು.
ನೋಡಿ, ಎಲ್ಲಿಂದನೋ ಆರಂಬಿಸಿದ ಕಥೆ ಎಲ್ಲಿಗೋ ಹೋಗುತ್ತಿದೆ. ನೆನಪಿನ ಬುತ್ತಿ ಬಿಚ್ಚಿದಂತೆ ಬರೆಯಬೇಕು ಎನಿಸುತ್ತದೆ. ಆ ದಿನಗಳಲ್ಲಿ ಇದ್ದ ಸ್ವಾಭಿಮಾನ ಬದುಕಿಗೆ ಹೊಸ ಆಯಾಮ ನೀಡಿತು.

 ಕಳೆದ ದಿನಗಳಾದರೂ ಎಂತಹುದು? ಬದುಕಿನ ದಾರಿ ಹುಡುಕುವಲ್ಲಿ ಉಡುಪಿ ಯ ಮಾತ್ರವೇನು?  ಇವೆಲ್ಲವುಗಳನ್ನು ಮುಂದಿನ ವಾರ ಹೇಳುತ್ತೇನೆ. 
ಮತ್ತೆ ಸಿಗೋಣ
ಗುರು 

72 comments:

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

Achchukattagi bidisiduttiddeeri badukina putagaLanna.. heege saagali..

_Poornima

santasajoy said...

haleya hasi-bisi nenapugalu indina kelasakke spoorti :-) nice write up
jaya

Dr.D.T.krishna Murthy. said...

ಗುರು ಸರ್;ಬದುಕಿನ ಬರಹ ಇಷ್ಟವಾಯಿತು.ಪ್ರತಿಯೊಬ್ಬರ ಬದುಕೂ ವಿಶಿಷ್ಟವಾದದ್ದು.

ವಾಣಿಶ್ರೀ ಭಟ್ said...

''ಬಂದ ನೆನಪುಗಳ ದೂರ ತಳ್ಳದಿರು, ಭಾವ ತುಂಬಿ ಬರಲಿ
ನೊಂದ ಮನಸಿಗದು ಹಿತವ ನೀಡುವುದು, ಜೀವ ಮತ್ತೆ ತರಲಿ''
ಅರ್ಥ ಪೂರ್ಣ ಸಾಲುಗಳು..
ಮುಂದೆ ಸಾಗುವುದರ ಜೊತೆಗೆ ಹಿಂದಿನ ಅತ್ಮಾವಲೋಕನ ಅವಶ್ಯ.ನನ್ನ ತಂದೆಯವರ ಬಾಯಲ್ಲಿ ಪೂರ್ಣಪ್ರಜ್ನ ಕಾಲೇಜು,ಮಠದ ಊಟದ ಬಗ್ಗೆ ಕೇಳಿದ್ದೇನೆ.ಮುಂದಿನ ಭಾಗಕ್ಕಾಗಿ ಎದಿರು ನೋಡ್ತಾ ಇರ್ತಿ..

ಭಾಶೇ said...

very strong and nice.

thanks :)

shivu.k said...

ಗುರುಮೂರ್ತಿ ಸರ್,

ನಿಮ್ಮ ಕಾಲೇಜು ಜೀವನದ ಬದುಕು ಆಸಕ್ತಿದಾಯಕವಾಗಿದೆ. ಕೃಷ್ಣಮಠದ ಊಟ ಮತ್ತು ನಿಮ್ಮ ಸೇವೆಯೇ ನಿಮ್ಮನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆಯೆಂದು ನನ್ನ ಭಾವನೆ.

SANTOSH MS said...

Dear Guru Sir,

This happens in our life. Every experience helps us learn new things. Well written

yogish bhat said...

ಗುರುಅವರೆ, ಹಳೆಯ ದಿನಗಳನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು. ತು೦ಬಾ ಸು೦ದರವಾಗಿ ವಿಶ್ಲೇಷಿಸಿದ್ದೀರಿ... ಮು೦ದಿನ ಲೇಖನಕ್ಕಾಗಿ ಕಾಯುತ್ತಿರುವ, ಯೋಗೀಶ್ ಭಟ್

Vidya Ramesh said...

ನಿಜ, ಕೆಲವೊಂದು ನೆನಪುಗಳು ಎಷ್ಟು ಸಿಹಿಯೆಂದರೆ, ಪದೇ ಪದೇ ನೆನಪಿಸಿಕೊಳ್ಳುವ ಹಾಗೆ. ಒಳ್ಳೆಯ ಸವಿ ನೆನಪು , ಒಳ್ಳೆಯ ಬರಹ :)

Anonymous said...

haleya nenapu ,,,, indina savighaligege saaxshi badukina.... lekhana... nangu ee anubhava aagittuu swalpa change aste... nanu M.A maadal hodaga identa alli hogi yaavdaadru hugan katkand od hogtu antaaa nann hinde adesto maatadidda. nan bagge ilssallad appa ammange helidda. aadre adkella tale kediskalde idda appa amma ivattina nan khushige kaarana.... nanu M.A UNIVERSITYGE 1 RANK TAGANDU 4 gold medal tagandaga adrinda est odave maadsalaagtu heli adra bele kattal hoogidda. munde diplomadallu 2 sala medal bantu.. avagluu ohooo chandrika bhari srimanthe adr appa ammange bangara maadsavu hele ille anta.... hingella silly.... che anthavr bagge bariyalu nange hesige kanoo... bardre elli key boardgu avr holasu taagtenoo antha... madhurateya hindiruva parishrama antavke ello gottagudu alda? strong aatu alda? enta maadli kanoo astu sittu battu...

ಸುಮ said...

olleya baraha .Ishta aytu :)

Mohan Hegade said...

ನಮಸ್ತೆ ಗುರುಜಿ,

ಎಂಥ ಚೆಂದದ ನೆನಪುಗಳು. ನಾ ಕೂಡ ನಿಮ್ಮ ೧೦ ಜನರ ಗುಂಪಿನಲ್ಲಿ ಅನು ಇದ್ದಿ ಅಲ್ದನೋ. ಅದೊಂದು ಸೂಪರ್ ಅನುಭವ ಹಾಗು ಮುಖ್ಯಪ್ರಾಣನ ಅನುಗ್ರಹ ಕೂಡ. ಒಳ್ಳೆಯ ನೆನಪಿನ ಬುತ್ತಿ ಬಿಚ್ಚಿ ತಿನ್ನಲು ಎಷ್ಟು ಖುಶಿ ಅಲ್ವ. ಮುಂದಿನ ಕಂತಿನ ನಿರೀಕ್ಷೆಯಲ್ಲಿದ್ನೋ.

ಬರಲಾ,

ಮೋಹನ ಹೆಗಡೆ

ಸುಬ್ರಮಣ್ಯ ಮಾಚಿಕೊಪ್ಪ said...

'ಸವಿ ಸವಿ ನೆನಪು, ಸಾವಿರ ನೆನಪು'

sunaath said...

ಗುರುಮೂರ್ತಿಯವರೆ,
"ಇರುಳು ತಾರೆಗಳಂತೆ ಬೆಳಕೊಂದು ಹೊಳೆಯುವದು
ಕಳೆದ ನೆನಪುಗಳಲ್ಲಿ ಮಿಂದಂತೆಯೆ!"
(ಬೇಂದ್ರೆಯವರನ್ನು ಸ್ವಲ್ಪ ಬದಲಾಯಿಸಿಕೊಂಡಿದ್ದೇನೆ)

ನಿಮ್ಮ ನೆನಪಿನ ಬುತ್ತಿಯನ್ನು ಹಂಚಿಕೊಳ್ಳುತ್ತಿರುವದಕ್ಕಾಗಿ ಧನ್ಯವಾದಗಖು.

ShastriUmapati said...

tumba chennagide

Pradeep Rao said...

ಮನಸ್ಸು ತುಂಬಿತು ಗುರುರವರೆ.. ನಾನು ಸಹ ಬಿ.ಎಸ್ಸಿ. ಓದಿದವನು.. ಶುರುವಿನಲ್ಲಿ ಜನಗಳ ಮಾತುಗಳು ಹೀಗೆಯೆ ಕಾಡುತಿತ್ತು.. ನಿಮ್ಮ ಈ ಕಥೆಯ ಮುಂದಿನ ಅಧ್ಯಾಯ ಓದಲು ಕಾತುರನಾಗಿದ್ದೇನೆ

ಕವಿತಾ said...

Nenapugalannu sundaravaagi nammondige hanchikondiddiri...
Mundina bhaga bega barali...

ಗುಬ್ಬಚ್ಚಿ ಸತೀಶ್ said...

ಗುರು ಸರ್, ನಿಮ್ಮ ಹಳೆಯ ದಿನಗಳ ಮೆಲುಕು ಮನಕಲಕುವಂತಿದೆ. ಮುಂದುವರೆಸಿ.

ಅಪ್ಪ-ಅಮ್ಮ(Appa-Amma) said...

ಗುರು ಅವರೇ,

ಬದುಕಿನ ಪುಟಗಳಿಂದ ಬರುತ್ತಿರುವ ನೆನಪುಗಳ ಸಾಲುಗಳು ಹೃದಯಕ್ಕೆ ಹತ್ತಿರವಾಗಿವೆ..

ಮುಂದಿನ ಪುಟಗಳನ್ನು ಎದುರುನೋಡುತ್ತಾ...

nimmolagobba said...

''ಎಲ್ಲ ಮರೆತಿರುವಾಗ, ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೇ''ಆಹಾ ಎಂತಹ ಸುಂದರ ಭಾವಗೀತೆಯ ಸಾಲಿನ ಮೂಲಕ ನಿಮ್ಮ ಲೇಖನ ಶುರುವಾಗಿದೆ, ನಿಮ್ಮ ಜ್ಞಾನದ ಬೆಳಕಿನ ಹಿಂದಿನ ಕಥಾನಕ ಬೇರೆಯವರಿಗೆ ಮಾರ್ಗ ದರ್ಶಕವಾಗಿದೆ.ಎಂತಹ ವಿಚಾರಗಳ ನೆಲೆಗಟ್ಟಿನ ಮೇಲೆ ನಿಮ್ಮ ಬದುಕಿನ ದಾರಿ ಸಾಗಿಬಂದಿದೆ ಎಂಬ ಕಿರುಪರಿಚಯವಾಯಿತು.ಹೌದು ಪ್ರತಿಯೊಬ್ಬರೂ ತಾವು ನಡೆದು ಬಂದ ಹಾದಿಯ ಬಗ್ಗೆ ಒಮ್ಮೆಯಾದರೂ ವಿಮರ್ಶೆಮಾಡಿ ಜೀವನ ಅರಿತುಕೊಳ್ಳುವುದು ಸರಿಯಾದ ಕ್ರಮ.ನಿಮಗೆ ಶುಭಾಶಯಗಳು.

ಓ ಮನಸೇ, ನೀನೇಕೆ ಹೀಗೆ...? said...

"ಸವಿ ನೆನಪುಗಳು ಬೇಕು ಸವಿಯಲಿ ಬದುಕು " ಅನ್ನುವ ನಿಮ್ಮ ಬರಹ ಚೆನ್ನಾಗಿದೆ. ನೆನಪಿನ ಪುಟಗಳನ್ನ ತಿರುವಿದಾಗ ಆ ಸವಿ ನೆನಪುಗಳನ್ನು ಸವಿದಾಗ ನಮಗೆ ಒಂದು ರೀತಿಯ ಹೊಸ ಹುರುಪು ಬರುತ್ತೆ. ನಿಮ್ಮ ನೆನಪುಗಳಿಂದ ಉದುರಿದ ಭಾವಲಹರಿ ಚೆನ್ನಾಗಿದೆ.

ವಿ.ಆರ್.ಭಟ್ said...

ಬದುಕಿನ ಹೊತ್ತಗೆಯನ್ನು ತೆರೆದು ಪುಟಗಳನ್ನು ತಿರುವಿದ ನಿಮ್ಮ ಈ ರೀತಿಯ ಪ್ರಯತ್ನ ಮುದನೀಡಿತು, ಮುಂದುವರಿಯಲಿ, ಶುಭಾಶಯಗಳು

chandrika said...

haleya nenapu ,,,, indina savighaligege saaxshi badukina.... lekhana... nangu ee anubhava aagittuu swalpa change aste... nanu M.A maadal hodaga identa alli hogi yaavdaadru hugan katkand od hogtu antaaa nann hinde adesto maatadidda. nan bagge ilssallad appa ammange helidda. aadre adkella tale kediskalde idda appa amma ivattina nan khushige kaarana.... nanu M.A UNIVERSITYGE 1 RANK TAGANDU 4 gold medal tagandaga adrinda est odave maadsalaagtu heli adra bele kattal hoogidda. munde diplomadallu 2 sala medal bantu.. avagluu ohooo chandrika bhari srimanthe adr appa ammange bangara maadsavu hele ille anta.... hingella silly.... che anthavr bagge bariyalu nange hesige kanoo... bardre elli key boardgu avr holasu taagtenoo antha... madhurateya hindiruva parishrama antavke ello gottagudu alda? strong aatu alda? enta maadli kanoo astu sittu battu...

PARAANJAPE K.N. said...

ನಿಮ್ಮ ಈ ಬರಹ ಬ್ಲಾಗಿನಲ್ಲಿ ಪ್ರಕಟವಾದ ದಿನವೇ ಓದಿದ್ದೆ, ನೀವು ಹಳೆಯ ನೆನಪನ್ನು ಮೆಲುಕು ಹಾಕಿದ ಪರಿ ಬಹಳ ಇಷ್ಟವಾಯಿತು. ಆದರೆ ಯಾಕೋ ಮರೆವು ಜಾಸ್ತಿ ಆಗ್ತಿದೆ. ಕಾಮೆ೦ಟು ಹಾಕಿದ್ದೇನೆ ಎನ್ನುವ ಗ್ರಹಿಕೆಯಲ್ಲಿ ಸುಮ್ಮನಿದ್ದೆ. ಇವತ್ಯಾಕೋ ಮತ್ತೆ ನೋಡಿದಾಗ ಕಾಮೆ೦ಟು ಹಾಕದೆ ಇರುವುದು ಗಮನಕ್ಕೆ ಬ೦ತು. ಇದೇನು ವಯಸ್ಸಾಗುತ್ತಿರುವ ಲಕ್ಷಣವೋ ? ಗೊತ್ತಿಲ್ಲ.

ಚಿತ್ರಾ said...

ಗುರು,

ನಿನ್ನ ಬರಹದ ಮೊದಲ ಕವನ nanage ಅತ್ಯಂತ ಪ್ರಿಯವಾದ ಕವನಗಳಲ್ಲೊಂದು .

ಚಂದದ ಬರಹ. ಎಲ್ಲರ ಬದುಕೂ ಹೂವಿನ ಹಾಸಿಗೆಯಲ್ಲ ! ಕಷ್ಟ ಪಟ್ಟು , ಛಲ ಹೊತ್ತು ಮೇಲೆ ಬಂದಿರುವವರಿಗೆ ಮಾತ್ರ ಅದರ ಬೆಲೆ ತಿಳಿಯುವುದು ! ಬದುಕಿನಲ್ಲಿ , ಒಂದು ಮಟ್ಟಕ್ಕೇರಿ ತಿರುಗಿ ನಾವು ನಡೆದು ಬಂದ ದಾರಿಯ ಅವಲೋಕನೆ ಮಾಡಿದಾಗ ನಡೆದ ಹೆಜ್ಜೆಗಳು , ಬಿದ್ದ ಹೊಂಡಗಳು, ಎದುರಾದ ತಿರುವುಗಳು ಅರ್ಥವಾಗುತ್ತವೆ. ಕಷ್ಟ ಎಣಿಸಿದ ಕ್ಷಣಗಳು ಗುರಿ ಸಾಧಿಸುವ ಛಲವನ್ನೂ ತುಂಬುತ್ತವೆ .ಕಹಿ ನೆನಪುಗಳನ್ನು ಬದಿಗಿಟ್ಟು, ಸಿಹಿಯನ್ನು ಜೊತೆಗಿಟ್ಟು ನಡೆದಾಗ ಬದುಕು ಸೊಗಸೆನಿಸುವುದು !

ಮನಸು said...

ಗುರು ತುಂಬಾ ಚೆನ್ನಾಗಿ.... ನೆಡೆದು ಬಂದ ಹಾದಿಯನ್ನು ಯಾವಾಗಲೂ ನೆನೆಯಬೇಕಂತೆ... ಮತ್ತಷ್ಟು ನೆನಪು ನಮ್ಮೊಂದಿಗೆ ಮೆಲುಕು ಹಾಕಿ .... ಶುಭವಾಗಲಿ

nenapina sanchy inda said...

wow esTu chennagi barediddeeri! waiting for more. am coming here after a long time.
Udupi krishna maThada suttinalli maithreyi anta mess ittu. hittaLe taTTe, lOTa , maNe mele ooTa. alli esTo sala ooTa maaDiddEne.used to enjoy it.
Happy Sankranthi
:-)
malathi S

ವಿ.ಆರ್.ಭಟ್ said...

ಸಂಕ್ರಮಣದ ಹಾರ್ದಿಕ ಶುಭಾಶಯಗಳು.

ಜಲನಯನ said...

ಡಾ. ಗುರು..ಬಹಳ ವಾಸ್ತವಕ್ಕೆ ಹತ್ತಿರದ ಮಾತುಗಳು...ಮುನ್ನಡೆಯಬೇಕಾದ್ದು ಸಹಜ ಮತ್ತು ಅದೇ ಆಶಾವಾದ..ಹಿಂದೆ ಏನೇ ಆಗಿದ್ದರೂ ಕೊರಗುವುದರಿಂದ ಪ್ರಯೋಜನವಿಲ್ಲ..ಆದರೆ ಅದರಿಂದ ಪಾಠ ಕಲಿಯಬೇಕಾದ್ದು ಅನಿವಾರ್ಯ ಇಲ್ಲವೇ ಎಡವಿ ಬೀಳುವುದು ತಪ್ಪದು..
ನೊಂದ ಮನಸಿಗದು ಹಿತವ ನೀಡುವುದು, ಜೀವ ಮತ್ತೆ ತರಲಿ''
ಇಷ್ಟ ಆಯ್ತು...

ಕಲರವ said...

nimma anubhavagalanna arthapoorna saalugalondige chennaagi nirupisiddira. wish happy new year.

ಕಲರವ said...

nimma anubhavagalanna arthapoorna saalugalondige chennaagi nirupisiddira. wish happy new year.

ವಿಚಲಿತ... said...

ಸಾಗರದಾಚೆಯ ಇಂಚರ ..,,

ನಾನೂ ಕೂಡ ಪಿ.ಯು.ನಲ್ಲಿ ಉತ್ತಮ ಅಂಕವನ್ನೇ ಪಡೆದು ಯಾರ ಮಾತನ್ನು ಕೇಳದೆ ತನ್ನಿಚ್ಚೆಯಂತೆ ಬಿ.ಎಸ್ಸಿ. ಸೇರಿ ಎಲ್ಲರ ಬಾಯಿಗೆ ಎಳೆ-ಅಡಿಕೆಯಾಗಿದ್ದೇನೆ..
ಮುಂದೇನಾಗುತ್ತೆ.. ಕಾದ್ನೋಡಬೇಕು.

ತೇಜಸ್ವಿನಿ ಹೆಗಡೆ said...

Interesting! Next part bEga barli..

SavithaSR said...

ಸವಿ ನೆನಪುಗಳು ಬೇಕು ಸವಿಯಲೀ ಬದುಕು , ಚೆಂದನೆಯ ಬರಹ ಮತ್ತು ಬರೆದ ಪರಿ ಕೂಡಾ ಡಾಕ್ಟ್ರ‍ೇ :)
-ಸವಿತ ಎಸ್ ಆರ್

SavithaSR said...

ಸವಿ ನೆನಪುಗಳು ಬೇಕು ಸವಿಯಲೀ ಬದುಕು , ಚೆಂದನೆಯ ಬರಹ ಮತ್ತು ಬರೆದ ಪರಿ ಕೂಡಾ ಡಾಕ್ಟ್ರ‍ೇ :)
-ಸವಿತ ಎಸ್ ಆರ್

ಸಾಗರದಾಚೆಯ ಇಂಚರ said...

ಎಲ್ಲರ ಕಾಮೆಂಟ್ ಗಳಿಗೂ ಉತ್ತರ ವ್ಯಯಕ್ತಿಕವಾಗಿ ನೀಡಲಾಗಲಿಲ್ಲ
ಕ್ಷಮಿಸಿ
ಮುಂದಿನ ಬರಹಕ್ಕೆ ಖಂಡಿತ ನೀಡುತ್ತೇನೆ
ಬರುತ್ತಿರಲ್ಲ
ಧನ್ಯವಾದಗಳು

ಸುಧೇಶ್ ಶೆಟ್ಟಿ said...

ವಿಶಿಷ್ಟವಾದ ಬರಹ... ತು೦ಬಾ ತಡವಾಗಿ ಓದಿದರೂ, ಬರಹ ಮಿಸ್ ಮಾಡಿಕೊಳ್ಳಲಿಲ್ಲ ಅನ್ನುವ ಸ೦ತೋಷವಿದೆ :)

ಸಾಗರದಾಚೆಯ ಇಂಚರ said...

ಪೂರ್ಣಿಮಾ ಭಟ್ಟ, ಸಣ್ಣಕೇರಿ

thank you for the comments

ಸಾಗರದಾಚೆಯ ಇಂಚರ said...

santasajoy

haleya nenapugale mundina badukige dari deepa allave

ಸಾಗರದಾಚೆಯ ಇಂಚರ said...

Dr.D.T.krishna Murthy sir

tumbaa santhosha
heege baruttiri

ಸಾಗರದಾಚೆಯ ಇಂಚರ said...

ವಾಣಿಶ್ರೀ ಭಟ್

ಹೌದು, ಪೂರ್ಣ ಪ್ರಜ್ನ ಕಾಲೇಜು ಮತ್ತೆ ಮಠದ ಊಟ ಬದುಕಿನಲ್ಲಿ ಬಹಳಷ್ಟು ಬದಲಾವಣೆ ತಂಜು

ಬೇಗನೆ ಮುಂದಿನ ಭಾಗ ಹಾಕ್ತಿ

ಸಾಗರದಾಚೆಯ ಇಂಚರ said...

ಭಾಶೇ

thank you

keep coming

ಸಾಗರದಾಚೆಯ ಇಂಚರ said...

shivu.k sir
ಆ ದೇವರ ಕ್ರಪೆಯೇ ನನಗೆ ಬೆಳೆಯಲು ಪ್ರೇರೇಪಣೆ

ಮುಂದಿನ ಭಾಗದಲ್ಲಿ ಇನ್ನ್ಸಹ್ತು ಬರೆಯುತ್ತೇನೆ
ಬರುತ್ತಿರಿ

ಸಾಗರದಾಚೆಯ ಇಂಚರ said...

SANTOSH MS

yes, you are right

keep coming

ಸಾಗರದಾಚೆಯ ಇಂಚರ said...

yogish bhat

ಖಂಡಿತ ಮುಂದಿನ ಬೇಗ ಬರುತ್ತದೆ

ಕಾಯಿಸಿದ್ದಕ್ಕೆ ಕ್ಷಮಾ ಇರಲಿ

ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

Vidya ರಮೇಶ್

ಹೌದು, ಹಳೆಯ ನೆನಪುಗಳು ಸಿಹಿಯಾದರೆ ಮಧುರ
ಕಹಿಯಾದರೆ .................

ಸಿಹಿಯೇ ಆಗಿರಲಿ ಎಂಬ ಹಾರೈಕೆ ಅಲ್ಲವೇ?

ಸಾಗರದಾಚೆಯ ಇಂಚರ said...

Anonymous

adakkella chintisadiri

kelavu janare haage

namma praytna, kartavya naavu maaduttiddare ayitu

nimage yashassu sadaa irali emba haaraike nannadu

baruttiri

ಸಾಗರದಾಚೆಯ ಇಂಚರ said...

ಸುಮ

thank you

keep coming

ಸಾಗರದಾಚೆಯ ಇಂಚರ said...

Mohan ಹೆಗಡೆ
ಖಂಡಿತ
ನಿಮ್ಮನ್ನು ಹೇಗೆ ಬಿಡೋಕೆ ಆಗುತ್ತೆ ಹೇಳಿ

keep coming

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಮಾಚಿಕೊಪ್ಪ sir

nenapugala maatu madhura

baruttiri

ಸಾಗರದಾಚೆಯ ಇಂಚರ said...

ಸುನಾಥ್ ಸರ್

ನಿಮ್ಮ ಮಾತುಗಳಿಗೆ ಥ್ಯಾಂಕ್ಸ್

ಹಳೆಯ ನೆನಪುಗಳ ಬುತ್ತಿ ನಿಮ್ಮೆದುರು ಇಡುತ್ತಿದ್ದೇನೆ
ಸದಾ ಅಶಿರ್ವದಿಸುತ್ತಿರಿ

ಸಾಗರದಾಚೆಯ ಇಂಚರ said...

ShastriUmapati ಸರ್

ಥ್ಯಾಂಕ್ಸ್

ಬರ್ತಾ ಇರಿ

ಸಾಗರದಾಚೆಯ ಇಂಚರ said...

Pradeep Rao ಸರ್

ಬಿ ಎಸ್ಸಿ ಅಂದರೆ ಏನೋ ಅನ್ಕೊತಾರೆ

ಕೆಲವರ ಮನಸ್ಥಿತಿ ಬದಲಾಯಿಸೋದೆ ಕಷ್ಟ ನೋಡಿ

ಆದರೆ ಯಶಸ್ಸಿನ ಬೆನ್ನೇರಿ ಹೋದ್ರೆ ಖಂಡಿತ ಏನು ಓದಿದರು ಯಶಸ್ಸು ಸಿಗುತ್ತೆ

ಸಾಗರದಾಚೆಯ ಇಂಚರ said...

ಕವಿತಾ

khandita mundina bhaaga bega haakuttene

ಸಾಗರದಾಚೆಯ ಇಂಚರ said...

ಗುಬ್ಬಚ್ಚಿ ಸತೀಶ್

ಪ್ರೀತಿ ಹೀಗೆ ಇರಲಿ

ಬರುತ್ತಿರಿ

ಬರೆಯುತ್ತಿರುವೆ

ಸಾಗರದಾಚೆಯ ಇಂಚರ said...

ಅಪ್ಪ-ಅಮ್ಮ(Appa-Amma)

ನಿಮ್ಮ ಮಾತುಗಳ ಮನ ತುಂಬಿವೆ

ಖಂಡಿತ ಮುಂದಿನ ಭಾಗ ಕಾಯಿಸಲಾರೆ

ಸಾಗರದಾಚೆಯ ಇಂಚರ said...

ನಿಮ್ಮೊಳಗೊಬ್ಬ ಬಾಲು ಸರ್

ಬದುಕಿನ ಹಿಂದಿನ ನೆನಪು ಮುಂದಿನ ಬಾಳಿಗೆ ಅವಶ್ಯ ಅಲ್ಲವೇ?

ಉಡುಪಿಯ ಆ ದಿನಗಳು ಮರೆಯಲಾರದ್ದು

ಸಾಗರದಾಚೆಯ ಇಂಚರ said...

ಓ ಮನಸೇ, ನೀನೇಕೆ ಹೀಗೆ...?

ಹಳೆಯ ನೆನಪುಗಳ ಬುತ್ತಿ ಬಿಚ್ಚುತಿಹೆ
ಹಂಚಿಕೊಲ್ಲುತಿಹೆ ನಿಮ್ಮಲ್ಲಿ
ಬಂದು ಓದುತಿರಿ
ಓದಿ ಹರಸುತಿರಿ
ಹರುಷ ಎಂದಿಗೂ ಎನ್ನಲ್ಲಿ

ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ವಿ.ಆರ್.ಭಟ್ ಸರ್

ನಿಮ್ಮ ಆಶಿರ್ವಾದ ಸದಾ ಇರಲಿ

ಸಾಗರದಾಚೆಯ ಇಂಚರ said...

chandrika

thanks for the comments

keep coming

ಸಾಗರದಾಚೆಯ ಇಂಚರ said...

PARAANJAPE K.ನ ಸರ್
ವಯಸ್ಸಾದ ಲಕ್ಷಣ ಅಲ್ಲ

ಕೆಲವೊಮ್ಮೆ ಹೀಗೆ ಆಗುತ್ತದೆ
ಸದಾ ನೀವು ಬರುತ್ತಿರಲ್ಲ ಓದಲು ಅದು ಸಾಕು ನನಗೆ

ಪ್ರೀತಿ ಇರಲಿ

ಸಾಗರದಾಚೆಯ ಇಂಚರ said...

ಚಿತ್ರಾ

ನೀ ಹೇಳುವುದು ನಿಜ

ಹಳೆಯ ದಾರಿಯ ತಪ್ಪುಗಳು, ಪಡೆದ ನೋವುಗಳ, ತೆಗೆದುಕೊಂಡ ದಿಟ್ಟ ಹೆಜ್ಜೆಗಳು
ಎಲ್ಲವು ಬದುಕಿಗೆ ಮುಖ್ಯ

ಬರಹ ಮೆಚ್ಚಿದ್ದಕ್ಕೆ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

ಮನಸು

ನನ್ನ ನೆನಪುಗಳೊಂದಿಗೆ ನೀವೆಲ್ಲ ಬನ್ನಿ

ಬರುತ್ತಿರಲ್ಲ ?

ಸಾಗರದಾಚೆಯ ಇಂಚರ said...

nenapina sanchy ಇಂದ

ನಿಮ್ಮ ಮಾತು ನಿಜ
ಆ ಮೆಸ್ಸ್ ನಂಗು ಗೊತ್ತು

ಅಲ್ಲಿಯ ಕ್ರಮವೇ ಮನಸ್ಸಿಗೆ ಮುದ ನೀಡುತ್ತೆ

ಸಾಗರದಾಚೆಯ ಇಂಚರ said...

ಜಲನಯನ ಸರ್

ನಿಮಗೆ ಬರಹ ಹಿಡಿಸಿದ್ದಕ್ಕೆ ಥ್ಯಾಂಕ್ಸ್

ಸದಾ ಬರ್ತಾ ಇರಿ

ಹಳೆಯ ನೆನಪುಗಳ ಬುತ್ತಿ ಇನ್ನೂ ಇದೆ

ಸಾಗರದಾಚೆಯ ಇಂಚರ said...

ಕಲರವ

thanks for the comments

ಸಾಗರದಾಚೆಯ ಇಂಚರ said...

ವಿಚಲಿತ..

ನೀವು ವಿಚಲಿತ ಆಗಬೇಡಿ

ಜನರ ಮಾತಿಗೆ ಬೆಲೆ ಕೊಡಬೇಕು ನಿಜ
ಆದರೆ ನಮ್ಮ ಬದುಕನ್ನೇ ಅವರಿಗೆ ನೀಡಬಾರದು ಅಷ್ಟೇ

ಯಶಸ್ಸು ನಿಮ್ಮದಾಗಲಿ

ಸಾಗರದಾಚೆಯ ಇಂಚರ said...

ತೇಜಸ್ವಿನಿ ಹೆಗಡೆ

bega baratte next part

thanks for visiting

ಸಾಗರದಾಚೆಯ ಇಂಚರ said...

SavithaSR

ತುಂಬಾ ಥ್ಯಾಂಕ್ಸ್

ಬರ್ತಾ ಇರಿ
ಓದ್ತಾ ಇರಿ

ಸಾಗರದಾಚೆಯ ಇಂಚರ said...

ಸುಧೇಶ್ ಶೆಟ್ಟಿ ಸರ್

ತಡವಾಗಿ ಬಂದರೂ ಬೇಸರವಿಲ್ಲ

ಬಂದ ಸಂತೋಷ ತುಂಬಾ ಇದೆ

ಹೀಗೆಯೇ ಬರುತ್ತಿರಿ

Lo said...

'ತಾಯಿಗಿಂತ ದೇವರಿಲ್ಲ.ಉಪ್ಪಿಗಿಂತ ರುಚಿಯಿಲ್ಲ'

Anonymous said...

Guru sir.,
Nice write up.........and it inspires a lot.
suresh
bangalore