Wednesday, January 26, 2011

ಮಗು ಬೆಳೆಯುತ್ತಿದೆ .....

ಸರ್ವರಿಗೂ ಗಣ ರಾಜ್ಯೋತ್ಸವದ ಶುಭಾಶಯಗಳು 

ಸುಮಾರು ಎರಡು ವರ್ಷಗಳ ಹಿಂದಿನ ಕಥೆಯಿದು, ಬಹಳ ದಿನಗಳಿಂದ ನಿಮ್ಮೊಂದಿಗೆ ಹೇಳಿಕೊಳ್ಳ (ಲ್ಲ) ಬೇಕೆಂದು  ಬಯಸುತ್ತಿದ್ದೆ. ಆದರೆ ಸಮಯ ಬರದೆ ಕಾಯುವಂತೆ ಆಗಿತ್ತು. ಎಲ್ಲದಕ್ಕೂ ಒಂದು ಸಮಯ ಬೇಕಲ್ಲ. ಸುಮ್ಮನೆ ನಮ್ಮ ಖಯಾಲಿ ಗೆ ಎಲ್ಲವನ್ನೂ ಬರೆಯುತ್ತಿದ್ದರೆ ನೀವು ಓದಬೇಕಲ್ಲ. ಅದಕ್ಕೇ ಸರಿಯಾದ ಸಮಯ ಬಂದಾಗ ಮಗು ಬೆಳೆಯುತ್ತಿರುವ ಕಥೆ ಹೇಳೋಣ ಎಂದು ಇಲ್ಲಿಯತನಕ ಕಾದೆ. ಇನ್ನು ಕಾಯಲಾರೆ. ಆ ಬೆಳೆಯುತ್ತಿರುವ ಮಗುವಿನ ಹುಟ್ಟು, ಸುತ್ತಲಿನ ಪರಿಸರ, ಬೆಳೆದ ವಾತಾವರಣ, ಬೆಳೆಯುತ್ತಿರುವ ಪರಿ, ಮಾಡುತ್ತಿರುವ ತರಲೆ, ತುಂಟಾಟಗಳು, ಇವನ್ನೆಲ್ಲ ನಿಮ್ಮೊಂದಿಗೆ ಹೇಳಿಕೊಳ್ಳದೆ ನನಗೆ ಸಮಾಧಾನವಿಲ್ಲ. ಕೇಳದಿದ್ದರೆ ನಿಮ್ಮನ್ನು ಸುಮ್ಮನೆ ನಾನು ಬಿಡುವುದಿಲ್ಲ. ಇದೊಂದು ತರ ಅತಿಥಿ ಗಳನ್ನು ಮನೆಗೆ ಕರೆಯಿಸಿ ಅವರಿಂದಲೇ ಕೆಲಸ ಮಾಡಿಸಿಕೊಳ್ಳುವ ಮನೆಯಾಕೆಯ ಮನಸ್ಥಿತಿ. ತುಂಬಾ ತಲೆ ತಿನ್ನದೇ ಕಥೆಗೆ ಬರುತ್ತೇನೆ.

ಅದೊಂದು ಜನವರಿಯ ಚುಮು ಚುಮು ಛಳಿಯ ಮುಂಜಾನೆ. 
''ತಣ್ಣನೆಯ ತಂಗಾಳಿ ತನುವನ್ನು ತೀಡುತಿದೆ
ತುಂತುರು ಹನಿಗಳು, ಮೈ ಮನವ ಬಳಸುತಿವೆ''

ಕೊರೆಯುತ್ತಿರುವ ಚಳಿ ಪೂರ್ವದಿಂದ ಪಶ್ಚಿಮಕ್ಕೆ ಬೀಸುತ್ತಿದ್ದಂತೆ ಹಿಮ ಮೋಡಗಳು ಸ್ವೀಡನ್ನಿನ ಗೊತ್ಹೆಂಬುರ್ಗ್ ನಲ್ಲಿ ಪಸರಿಸಿತ್ತು. ಇದೇನು, ನೋಡು ನೋಡುವಷ್ಟರಲ್ಲಿ  ಹಿಮದ ಮಳೆ ಆರಂಭವಾಗಿಯೇ ಬಿಟ್ಟಿತ್ತು. ಸ್ವೀಡನ್ನಿಗೆ ಹಿಮ ಮಳೆ ಸಾಮಾನ್ಯವಾದರೂ ಗೊತ್ಹೆಂಬುರ್ಗ್ ಗೆ ಇದೊಂದು ವಿಶೇಷ. ಗೊತ್ಹೆಂಬುರ್ಗ್ ಸಮುದ್ರ ತೀರದಲ್ಲಿ ಇದ್ದಿದ್ದರಿಂದ ಇಲ್ಲಿ ಕೊರೆಯುವ ಗಾಳಿ ಇರುತ್ತಿತ್ತೆ ಹೊರತು ಹಿಮಪಾತ ತುಂಬಾ ಕಡಿಮೆ. ಆದರೆ ಕಳೆದ ಎರಡು ವರ್ಷಗಳಲ್ಲಿ ವಿಪರೀತ ಹಿಮ ಮಳೆ ಗೊತ್ಹೆಂಬುರ್ಗ್ ನ್ನು ಆವರಿಸಿಕೊಂಡಿದೆ. ಕಥೆಯನ್ನು ಬೇರೆಡೆಗೆ ಹೋಗಲು ಅವಕಾಶ ಮಾಡಿಕೊಡದೆ  ಎರಡು ವರ್ಷದ ಹಿಂದಕ್ಕೆ ಹೋಗೋಣ. ಆ ಜನವರಿಯ 26 ನೇ ತಾರೀಖು ನನಗಿನ್ನೂ ನೆನಪಿದೆ. ಆ ದಿನ ವಿಪರೀತ ಗಾಳಿ. ಮೈ ಕೊರೆಯುವ ಚಳಿ, ಹೊರಗೆ ಕಾಲು ಹಾಕಲು ಆಗದಷ್ಟು ಚಳಿ, ಬಹುಷ: - 20 ಡಿಗ್ರಿ ಇತ್ತೆಂದು ಅನಿಸುತ್ತದೆ. ಸರಿಯಾಗಿ ನೆನಪಿಲ್ಲ. ಇಂಥಹ ಪ್ರಕ್ರತಿಗೆ  ವಿರುದ್ಧವಾದ  ವಾತಾವರಣದಲ್ಲಿ ಹೆರಿಗೆ ನೋವು ಆರಂಭವಾಗಿಬಿಟ್ಟಿತ್ತು. ಈ ಹೆರಿಗೆ ನೋವು ವಿಚಿತ್ರ ನೋಡಿ, ತಾಯಿ ಹೆರಿಗೆ ನೋವನ್ನು ಸಂತಸದಿಂದಲೇ ಸ್ವೀಕರಿಸುತ್ತಾಳೆ. ತನ್ನೆಲ್ಲ ನೋವನ್ನು ಮರೆತು ಬರುವ ಕಂದನ ನೀರೀಕ್ಷೆಯಲ್ಲಿ ಕಾಲ ಕಳೆಯುವ ತಾಯಿಯ ಮನಸ್ಥಿತಿ ಕೇವಲ ತಾಯಿಗೆ ಮಾತ್ರ ಸಾದ್ಯ. ಪ್ರತಿ ಹೆಣ್ಣಿಗೆ ಕಂದನ ಹುಟ್ಟು ಮರುಜನ್ಮ ಲಭಿಸಿದಂತೆ. ಆ 9 ತಿಂಗಳ ಕಾಲ ಅನುಭವಿಸಿದ ಎಲ್ಲ ನೋವನ್ನು ಒಂದೇ ಕ್ಷಣದಲ್ಲಿ ಕಂದನ ನಗು ಮರೆಸಿಬಿಡುತ್ತದೆ. 

ಸರಿಯಾಗಿ ಜನವರಿ 26 ನೇ ತಾರೀಖು ಹೆರಿಗೆ ನೋವು ಬಂದೆ ಬಿಟ್ಟಿತ್ತು. ಹೊರಗಡೆ ಹೋಗಲು ಸಾದ್ಯವಿಲ್ಲದ ಒಳಗೆ ಕೂತುಕೊಳ್ಳಲು ಆಗದ ಪರಿಸ್ಥಿತಿ ಅದು. ಹಾಗೆಂದು ಮಗುವಿನ ಬರುವಿಕೆಗೆ ಸಾಕಷ್ಟು ತಯಾರಿ ನಡೆದಿತ್ತು ಕೂಡಾ. ಯಾವುದೇ ರೀತಿಯಲ್ಲಿ ಮಗುವಿನ ಹುಟ್ಟಿನಲ್ಲಿ ದೋಷ ಬರದಂತೆ ನಿಗಾ ವಹಿಸಲಾಗಿತ್ತು. ಹಿರಿಯರ ಆಶೀರ್ವಾದ, ಕಿರಿಯರ ಬೆಂಬಲ, ಸ್ನೇಹಿತರ ಶುಭ ನುಡಿ ಎಲ್ಲವೂ ಆ ಮಗುವಿನ ಪೋಷಕರಿಗೆ ಲಭಿಸಿತ್ತು. ಇನ್ನೇನು ಬೇಕು ಬದುಕಿಗೆ.

ಅಂತೂ ೨೬ ನೇ ತಾರೀಖು ಎಲ್ಲ ಅಡೆ  ತಡೆಗಳನ್ನು ದಾಟಿ ಆ ಮಗು ಹುಟ್ಟೇ ಬಿಟ್ಟಿತು. ಮಗುವಿನ ಹುಟ್ಟಿದ ನಂತರದ ಬೆಳವಣಿಗೆ ಹೇಳುವ ಮೊದಲು ಸ್ವೀಡನ್ನಿನಲ್ಲಿ ಗರ್ಭಿಣಿ ಹೆಂಗಸರನ್ನು ನೋಡಿಕೊಳ್ಳುವ ಆಸ್ಪತ್ರೆಗಳ ಬಗ್ಗೆ ನಿಮಗೆ ಹೇಳಲೇಬೇಕು. ಸ್ವೀಡನ್ ನಲ್ಲಿ ವೈದ್ಯಕೀಯ ಸೇವೆ ಸದಾ ಉಚಿತ. ನಮ್ಮಲ್ಲಿನ ಸರಕಾರೀ ಆಸ್ಪತ್ರೆಗಳಂತೆ  ''ಸೇವೆ ಉಚಿತ: ಸಾವು ಖಚಿತ'' ದಂತಲ್ಲ. ಆದರೆ ಆಸ್ಪತ್ರೆಗೆ ಹೋಗುವ ಮೊದಲು ವೈದ್ಯರಿಗೆ ಫೋನ್ ಮಾಡಿ ಅವರ ಭೇಟಿಯ ಸಮಯ ನಿಗದಿ ಪಡಿಸಿಕೊಳ್ಳಬೇಕು. ಗರ್ಭಿಣಿ ಸ್ತ್ರೀಯರಿಗೆ  ಇಲ್ಲಿಯ ವ್ಯವಸ್ಥೆ ಹೇಳಿ ಮಾಡಿಸಿದಂತಿದೆ. ಯಾವುದಕ್ಕೂ ಹಣ ಕೊಡುವ ಕೆಲಸವಿಲ್ಲ. ಸಮಯಕ್ಕೆ ಸರಿಯಾಗಿ ಹೋಗಿ ಎಲ್ಲ ರೀತಿಯ ವೈದ್ಯಕೀಯ ಸೇವೆ ತೆಗೆದುಕೊಂಡರೆ ಆಯಿತು. ಮಗುವಿನ ಬೆಳವಣಿಗೆಗೆ ತಾಯಿಗೆ ಕೊಡಬೇಕಾದ ಎಲ್ಲ ರೀತಿಯ ಹೈ-ಟೆಕ್ ಚಿಕಿತ್ಸೆಗಳನ್ನು ನೀಡುತ್ತಾರೆ. ಇನ್ನು ತಾಯಿ ಕೆಲಸದಲ್ಲಿದ್ದರೆ ಅವಳಿಗೆ ಮಗು ಹುಟ್ಟುವ 2 ತಿಂಗಳಿಂದ ಹಿಡಿದು ಒಂದು ವರ್ಷದ ತನಕ ಸಂಬಳದ ಜೊತೆಗೆ ರಜೆ ನೀಡುತ್ತಾರೆ. ಇದು ಸಾಲದೆಂಬಂತೆ ತಂದೆಗೂ 6 ತಿಂಗಳುಗಳ ಕಾಲ ಸಂಬಳದ ಜೊತೆ ರಜೆ ನೀಡುತ್ತಾರೆ. ಮಗು ಹುಟ್ಟಿದ ಮೇಲೆ ಮಗುವಿನ ಪೋಷಣೆಗೆಂದು ಪ್ರತಿ ತಿಂಗಳು 10000 ರೂಪಾಯಿಗಳನ್ನು ಹೆತ್ತವರಿಗೆ ನೀಡುತ್ತಾರೆ ಕೂಡಾ. ಇಂಥಹ ವ್ಯವಸ್ಥೆ ಎಲ್ಲಿದೆ ಹೇಳಿ. ಇಲ್ಲಿ ಜೀವಕ್ಕೆ ಬೆಲೆಯಿದೆ, ಬದುಕಿಗೆ ಗೌರವವಿದೆ. 

2 ವರ್ಷಗಳ ಹಿಂದೆ ಹುಟ್ಟಿದ ಮಗುವಿಗಾಗಲಿ, ಹೆತ್ತವರಿಗಾಗಲಿ ಇದ್ಯಾವ ಸವಲತ್ತುಗಳು ಲಭಿಸಲಿಲ್ಲ. ತಂದೆ ತಾಯಿ ಇಬ್ಬರೂ ಕೆಲಸದಲ್ಲಿದ್ದರೂ ಯಾವುದೇ ರಜೆ ಆಗಲಿ, ಸಂಬಳ ವಾಗಲಿ ಮಗು ಹುಟ್ಟಿದ್ದಕ್ಕೆ ಸಿಗಲಿಲ್ಲ. ಆದರೆ ಆ ಮಗುವಿನ ಹುಟ್ಟಿನ ಸಂಭ್ರಮ ಪೋಷಕರಿಗೆ ಹೇಳಲು ಅಸಾದ್ಯವಾದದ್ದು. ಆರಂಭದಲ್ಲಿ ವಿದೇಶದಲ್ಲಿ ಹುಟ್ಟಿದ ಮಗು ಎಲ್ಲಿ ಅನಾಥವಾಗಿ ಬೆಳೆಯುತ್ತದೋ ಎಂಬ ಆತಂಕವಿತ್ತು. ಆದರೆ ಕಾಲ ಕ್ರಮೇಣ ವಿದೇಶದಲ್ಲಿದ್ದ ಮಗುವಿಗೆ ದೂರದ ಭಾರತೀಯರ ಸಂಪರ್ಕ ಲಭಿಸಿದ್ದಲ್ಲದೆ , ವಿಶ್ವದ ಅನೇಕ ಸ್ನೇಹಿತರ ಹಿತನುಡಿ ಮಗುವಿನ ಅಂತರಿಕ ವಿಶ್ವಾಸ ಹೆಚ್ಚಿಸಿತು. ಇಂದು ಮಗು ಒಂದು ಹಂತಕ್ಕೆ ಬೆಳೆದಿದೆ ಎಂದರೆ ಅದಕ್ಕೆ ಕಾರಣ ಆ ಎಲ್ಲ ಮಹನೀಯರುಗಳು.

ಇದೇನಪ್ಪ, ಮಗು, ಹೆರಿಗೆ, ಹುಟ್ಟು, ಸ್ನೇಹಿತರು, ಬೆಳವಣಿಗೆ ಏನೇನೋ ಹೇಳ್ತಾ ಇದಾನೆ ಅಂತ ಬೈಕೋತಾ ಇದೀರಾ, ಇಂದು 26 ನೇ ತಾರೀಖು ನನ್ನ ಪುಟ್ಟ ಮಗು ''ಸಾಗರದಾಚೆಯ ಇಂಚರ'' ಕ್ಕೆ  ಎರಡು ವರ್ಷ ತುಂಬಿತು. ಈ ಸಂಭ್ರಮ ಅದಕ್ಕೇ. ಈ  ಎರಡು ವರ್ಷಗಳಲ್ಲಿ ನನ್ನ ಬ್ಲಾಗ್ ನ್ನು ಎತ್ತಿ ಬೆಳೆಸಿದ ನಿಮ್ಮೆಲ್ಲರಿಗೂ ಹ್ರತ್ಪೂರ್ವಕ ವಂದನೆಗಳು.

ಇಲ್ಲಿ ಯಾರ ಹೆಸರನ್ನು ಪ್ರಸ್ತಾಪಿಸಲು ಸಾದ್ಯವಿಲ್ಲ ಕಾರಣ ನೀವೆಲ್ಲರೂ ನನ್ನ ಬ್ಲಾಗ್ ಬೆಳೆಯಲು ಕಾರಣ ಆಗಿದ್ದೀರಿ.  ಈ ಎರಡು ವರ್ಷಗಳಲ್ಲಿ ನನ್ನ ನೋವುಗಳಿಗೆ ಸಾಂತ್ವನ ನೀಡಿ, ನಲಿವುಗಳಿಗೆ ಬೆಂಬಲವಾಗಿ, ತಪ್ಪಿದಲ್ಲಿ ತಿದ್ದಿ, ಇಷ್ಟವಾದಲ್ಲಿ ಮೆಚ್ಚಿ ಈ ಮಗುವನ್ನು ಬೆಳೆಸಿದ್ದಿರಿ. ಅದಕ್ಕೆ ಇನ್ನೊಮ್ಮೆ ಥ್ಯಾಂಕ್ಸ್

ಕೆಲವು ಸಂದರ್ಭಗಳಲ್ಲಿ ನಿಮ್ಮೆಲ್ಲರ ಬ್ಲಾಗ್ ಓದಲು ಆಗಲಿಲ್ಲ, ಅದಕ್ಕೆ ಕ್ಷಮೆ ಇರಲಿ, ಕೆಲವೊಮ್ಮೆ ನಿಮಗೆ ಬೇಸರ ಆಗುವಂತೆ  ಕಾಮೆಂಟ್ ನೀಡಿರಬಹುದು. ನಿಮ್ಮದೇ ಮನೆಯ ಸದಸ್ಯ ಎಂದು ತಿಳಿದು ಮನ್ನಿಸಿಬಿಡಿ.  

ಬ್ಲಾಗ್ ಆರಂಬಿಸಿದಾಗ ನನ್ನ ಮನದಾಳದ ಭಾವನೆಗಳನ್ನು ಬರೆಯುವ ತಾಣ ಎಂದುಕೊಂಡಿದ್ದೆ. ಆದರೆ ಅದು ಈಗ ಅದನ್ನೆಲ್ಲ ಮೀರಿ ನಡೆದಿದೆ. ನಿಮ್ಮೆಲ್ಲರ ಪ್ರೀತಿಗೆ, ಸ್ನೇಹಕ್ಕೆ ಸೋತಿದ್ದೇನೆ. ಬ್ಲಾಗ್ ನಿಂದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಸ್ನೇಹ ಲಭಿಸಿದೆ. ಕೆಲವರು ಇಟ್ಟಿಗೆ ಸಿಮೆಂಟ್ ನಲ್ಲಿಯೇ  ಮನಸ್ಸನ್ನು ಗೆದ್ದರೆ, ಇನ್ನು ಕೆಲವರು ಮನಸಿನಲ್ಲಿಯೇ ಮಾತಾಡಿ ಮನಸನ್ನು ಅರಿತಿದ್ದಾರೆ. ತಮ್ಮ ಛಾಯಾ ಕನ್ನಡಿಯಿಂದ ಸ್ನೇಹಿತರಾದ ಕೆಲವರು, ಜಲದಲ್ಲಿದ್ಹ ಮೀನುಗಳ ನಯನಗಳ ಬಗ್ಗೆ ತಿಳಿಸುತ್ತ ಜೊತೆಗಾರರಾದವರು ಹಲವರು,  ಮರುಭೂಮಿಯಲ್ಲಿದ್ದು ಕೊಂಡು  
ಮ್ರದು ಮನಸಿನಿಂದ, ಸವಿ ಮಾತಿಂದ  ಸ್ನೇಹ ಹಂಚಿದವರು,  ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಒಟ್ಟಿನಲ್ಲಿ ಬ್ಲಾಗ್ ಲೋಕಕ್ಕೆ ಬಂದ ಮೇಲೆ ಅನೇಕ ಸ್ನೇಹಿತರು ಸಿಕ್ಕಿದ್ದಾರೆ. ಬೆಂಗಳೂರಿಗೆ ಹೋಗುವುದೇ ಒಂದು ಸಂಭ್ರಮ. ಅನೇಕ ಬ್ಲಾಗ್ ಸ್ನೇಹಿತರು ಬೆಂಗಳೂರು ಬರುತ್ತೇನೆ ಅಂದರೆ, ''ಯಾವಾಗ ಬರುತ್ತಿರಾ'' ''ಎಲ್ಲರೂ ಸೇರೋಣ, ಪ್ರೀತಿಯಿಂದ 4 ಕ್ಷಣ ಒಟ್ಟಿಗೆ ಕಳೆಯೋಣ'' ''ಬರುವ ದಿನ ತಿಳಿಸಿ'' ಎಂದೆಲ್ಲ ಹೇಳಿದಾಗ ಹ್ರದಯ ತುಂಬಿ ಬರುತ್ತದೆ. ಎಲ್ಲಿಯೋ ಇರುವ ನಮ್ಮನ್ನು ಆಪ್ತರನ್ನಾಗಿಸಿಕೊಂಡು ನಮ್ಮನ್ನು ಭೆಟ್ಟಿ ಆಗಲು ಬರುವ ಎಲ್ಲ ಸ್ನೇಹಿತರುಗಳ ಸ್ನೇಹಕ್ಕೊಂದು  ಸಲಾಮು.  

3 ನೇ ವರ್ಷಕ್ಕೆ ಕಾಲಿಡುತ್ತಿರುವ ಮಗುವಿಗೆ ನಿಮ್ಮೆಲ್ಲರ ಆಶೀರ್ವಾದ ಬೇಕಿದೆ, ಕೊಡುತ್ತಿರಲ್ಲ
ಮತ್ತೆ ಮುಂದಿನ  ವಾರ ಸಿಗುತ್ತೇನೆ 
ಪ್ರೀತಿ ಇರಲಿ
ನಿಮ್ಮ
ಗುರು 

85 comments:

ಅನಂತರಾಜ್ said...

janma dinada shubhashayagalu guru sir.(saagaradaacheya incharakke)...beleyuttiruva magu, tannonadanaadigaligu preeti inda belesuttide. ee aatameeyateye adara kshipra belavanagige kaarana.

shubhashayagalu
ananth

ಸಂದೀಪ್ ಕಾಮತ್ said...

ಶುಭವಾಗಲಿ , ನಿಮ್ಮ ಮಗುವಿಗೂ ಬ್ಲಾಗ್ ಗೂ .

ಜಲನಯನ said...

ಅಭಿನಂದನೆಗಳು...ಅಭಿನಂದನೆಗಳು
CONGRATS
ಡಾಕ್ಟರ್ ಗುರು ಮತ್ತು ಶ್ರೀಮತಿ ಗುರು ಗೆ...ಪುಟ್ಟ/ಪುಟ್ಟಿ ...ಮಗುವಿಗೆ ತಾಯಿಗೆ ಶುಭಾಶಯ ಮತ್ತು ಉತ್ತಮ ಆರೋಗ್ಯಕ್ಕೆ ನಮ್ಮ ಪ್ರಾರ್ಥನೆಗಳು....
ನಿಮ್ಮ ಬ್ಲಾಗ್ ಕೂಸಿನ ಮೂರು ತುಂಬುವಿಕೆಗೂ ಅಭಿನಂದನೆಗಳು..

ನಿಖಿಲ್ said...

ಆತ್ಮೀಯ ಗುರು, ನಿಮ್ಮ ಪುಟ್ಟ ಮಗುವಿಗೆ ಶುಭ ಹಾರೈಕೆಗಳು. ಬರಹ ಓದಿ ಮನ ತುಂಬಿ ಬಂತು, ಅಷ್ಟೇ ಕುತೂಹಲಕರವಾಗಿತ್ತೂ ಕೂಡ. ನಿಮ್ಮ ಲೇಖನಿಯಿಂದ (ಕೀಲಿಮಣೆಯಿಂದ)ಬರಹಗಳು ಸದಾ ಮೂಡಿ ಬರುತ್ತಿರಲಿ, ನಿನ್ನೊಂದಿಗೆ ನಾವಿದ್ದೇವೆ ಎಂಬಷ್ಟೇ ನಾನು ಹಾರೈಸಬಲ್ಲೆ.

shivu.k said...

ಗುರುಮೂರ್ತಿ ಸರ್,
ನಿಮ್ಮ ಬ್ಲಾಗ್ ಮೂರನೆ ವರ್ಷಕ್ಕೆ ಕಾಲಿಡುತ್ತಿದೆ. ಅಭಿನಂದನೆಗಳು ಅದು ನೂರನ್ನು ದಾಟಲಿ. ಮತ್ತೆ ಈ ಬರಹದಲ್ಲಿ ವಿವರಿಸಿದ ಆಸ್ಪತ್ರೆ ವಿವರಗಳನ್ನು ಓದಿದ ಮೇಲೆ ನಾನು ನಿರೀಕ್ಷಿಸಿದ್ದು ಬೇರೆ. ಅದರ ಬಗ್ಗೆ ಚಾಟಿಂಗಿನಲ್ಲಿ ಸಿಕ್ಕಿ ಹೇಳಿದ್ದೀರಿ. ಅದು ಯಶಸ್ವಿಯಾಗಲಿ. ನಿಮಗೆ ಮತ್ತು ನಿಮ್ಮ ಶ್ರೀಮತಿಗೆ ಎಲ್ಲಾ ಯಶಸ್ಸು ಸಿಗಲಿ. ಅದಕ್ಕಾಗಿ ಕಾಯುತ್ತಿದ್ದೇನೆ. ಮತ್ತು ಬೆಂಗಳೂರಿಗೆ ಬಂದಾಗ ಬೇಟಿಯಾಗೋಣ...
all the best!

chandrika said...

magu andre yaarige ista aagalla? maguna haage belesida ninna saagaradaache incharada.... swara idii jagattige dhwanisali.... shubhaashayagalu friend.....

ಗುಬ್ಬಚ್ಚಿ ಸತೀಶ್ said...

ನಿಮ್ಮ ಮಗು ಬೇಗ ನರ್ಸರಿ ಸೇರಲಿ. ಎಸ್.ಎಸ್.ಎಲ್.ಸಿ ಗೆ ಬೆಂಗಳೂರಿನಲ್ಲೇ ಸೇರಿಸಿ. ಅಷ್ಟರಲ್ಲಿ ನಮ್ಮ ಗುಬ್ಬಿ ಅಥವಾ ತುಮಕೂರೇ ಬೆಂಗಳೂರಿನಂತೆ ಆಗಲೂಬಹುದು. ಇಲ್ಲಿಯಾದರೂ ಪರ್ವಾಗಿಲ್ಲ. ಎಲ್ಲಾದರೂ ಪರ್ವಾಗಿಲ್ಲ. ಎಂದೆಂದಿಗೂ ಕನ್ನಡದ ಮಗುವಾಗಿರಲಿ. ಶುಭಾಷಯಗಳೊಂದಿಗೆ - ಗುಬ್ಬಚ್ಚಿ.

ಸಾಗರದಾಚೆಯ ಇಂಚರ said...

ಅನಂತ್ ರಾಜ್ ಸರ್
ನಿಮ್ಮೆಲ್ಲರ ಪ್ರೀತಿಯೇ ಬರೆಯಲು ಪ್ರೇರಣೆ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಸಂದೀಪ್
ನಮ್ಮ ಮಗುವೆ ನಮ್ಮ ಬ್ಲಾಗ್
ಅದಕ್ಕೆ ನಿಮ್ಮ ಆಶಿರ್ವಾದ ಬೇಕು
ಬರುತ್ತಿರಿ

ಸಾಗರದಾಚೆಯ ಇಂಚರ said...

ಅಜ್ಹಾದ್ ಸರ್
ನನ್ನ ಬ್ಲಾಗೆಂಬ ಮಗುವಿನ ಹುಟ್ಟಿದ ಹಬ್ಬವೇ ಹೊರತು ನಮ್ಮ ಮಗುವಿನದಲ್ಲ,
ಆ ಸಂದರ್ಭ ಬಂದಾಗ ನಿಮಗೆಲ್ಲ ಖಂಡಿತ ಹೇಳುವೆ
ಬ್ಲಾಗ್ ಗೆ ನಿಮ್ಮೆಲ್ಲರ ಹಾರೈಕೆ ಬೇಕು
ಸದಾ ಬರುತ್ತಿರಿ
ನಿಮ್ಮ ಕಾಮೆಂಟ್ ನೋಡಿದವರೆಲ್ಲ ನನಗೆ ಮಗು ಹುಟ್ಟಿದೆ ಎಂದು ಅಭಿನಂದನೆಗಳ ಪತ್ರ ಕಳಿಸುತ್ತಿದ್ದಾರೆ ನೋಡಿ :)

ಸಾಗರದಾಚೆಯ ಇಂಚರ said...

ನಿಖಿಲ್
ನಿಮ್ಮ ಪ್ರೀತಿಗೆ ನಾನು ಋಣಿ
ಬ್ಲಾಗ್ ಲೋಕದ ಗೆಳೆಯರ ಒಡನಾಟ ಬಹಳ ದೊಡ್ಡದು
ಹೊಸ ಜನ ಆದರೂ ಹೊಸದಂತೆ ಕಾಣುತ್ತಿಲ್ಲ
ಎಲ್ಲ ನಮ್ಮವರೇ ಎಂಬ ಭಾವನೆ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಶಿವೂ ಸರ್
ನಿಮ್ಮ ಆತ್ಮೀಯತೆಗೆ ನಾನು ಅಭಾರಿ
ಬೆಂಗಳೂರಿಗೆ ಬಂದಾಗ ನೀವೆಲ್ಲ ತೋರುವ ಪ್ರೀತಿ ಅಮೋಘವಾದದ್ದು
ಮುಂದಿನ ತಿಂಗಳ ಬಂದಾಗ ಖಂಡಿತ ನಿಮಗೆಲ್ಲ ಸಿಗುತ್ತೇನೆ
ಪ್ರೀತಿ ಇರಲಿ
ಬರುತ್ತಿರಿ

ಸಾಗರದಾಚೆಯ ಇಂಚರ said...

ಚಂದ್ರಿಕಾ

ಬ್ಲಾಗ್ ಒಂದು ಮಗುವಿನಂತೆ
ಪ್ರತಿವಾರ ಅದರ ಕಡೆಗೆ ಲಕ್ಷ ಹಾಕಿ ಏನಾದರೂ ಮನದ ಭಾವನೆಗಳನ್ನು
ಅದರಲ್ಲಿ ಬಿತ್ತುವ ಆಸೆ
ಓದಲು ನೀವಿದ್ದೀರಿ ಎಂಬ ಭರವಸೆ
ಪ್ರೀತಿ, ವಿಶ್ವಾಸ ಹೀಗೆಯೇ ಇರಲಿ
ಬರುತ್ತಿರಿ

nimmolagobba said...

ನೆಚ್ಚಿನ 'ಸಾಗರದಾಚೆಯ ಇಂಚರ " ಎರಡು ವರ್ಷ ಪೂರೈಸಿದ ಸಂತಸವನ್ನು ವಿಭಿನ್ನವಾಗಿ ನಮ್ಮೊಂದಿಗೆ ಹಂಚಿಕೊಂಡಿದ್ದೀರ ತುಂಬಾ ಖುಷಿಯಾಯ್ತು.ಹಲವು ಉತ್ತಮ ಮಾಹಿತಿ ನೀಡಿದ ನಿಮಗೆ ಶುಭಾಶಯಗಳು.ಮುಂದಿನ ದಿನಗಳಲ್ಲಿ ಮತ್ತಷ್ಟು ಸಂತಸದ ಕ್ಷಣಗಳು ನಿಮ್ಮದಾಗಲಿ.

Ravi Hegde said...

ಅಭಿನಂದನೆಗಳು

ತೇಜಸ್ವಿನಿ ಹೆಗಡೆ said...

Congrats.. bahu bEga innOndu ritiya congrats hELu samayanU battu hELi gottiddu :) Keep writing.

ವಾಣಿಶ್ರೀ ಭಟ್ said...

congrats... maguvannu chennagi nodikolli ..:)

Indira said...

Happy birthday to Sagaradacheya inchara :)

PARAANJAPE K.N. said...

ಗುರುಮೂರ್ತಿಯವರೇ, ಶುಭವಾಗಲಿ

Joshini said...

ಗುರು ಸಾರ್,

ನಿಮ್ಮ ಸಾಗರದಾಚೆಯಲಿ ಚುಮುಚುಮು ಚಳಿಯಲಿ.. ಬೆಳೆಯೂ ಮಗುವನ್ನ ಇಂಗ್ಲೇಷ್ ಶಾಲೆಗೆ ಸೇರಿಸದೆ, ನಮ್ಮ ಕನ್ನಡ ಶಾಲೆಯಲ್ಲೆ... ಸೇರಿಸಿ...
ನಿಮ್ಮ ಮಗುವಿನ ಮೂಲಕ ನಾವು ಮತ್ತೆ ಅದ್ಬುತ ಕ್ರುತಿಗಳನ್ನು ನೀರಿಕ್ಷಿಸುತ್ತಾ ಇದೆವೆ...
ನಿಮ್ಮ ಮಗುವಾದ "ಸಾಗರದಾಚೆಯ ಇಂಚರಕ್ಕೆ ಜನುಮ ದಿನದ ಶುಬಾಶಯಗಳು...

ನಿಮ್ಮ ಮಗುವಿಗೊಸ್ಕರ
"ಸಾಗರದಾಚೆಯ ಬಿಳಿಯರ ಲೊಕದಲಿ
ಒಬ್ಬಂಟಿಗನಾಗಿ ನೀ ಕುಳಿತಿರಲು...
ತೆರೆ ನೀ ನಿನ್ನ ಬ್ಲಾಗನ್ನು...

ಮನಸ್ಸಿಗೆ ತೊಚಿದ ಸಾಲುಗಳನ್ನು
ಪೊಣಿಸಿ ಮಾಡು... ಕಾವ್ಯಮಾಲೆಯನು
ನಿನ್ನ ಎಲ್ಲಾ ಎಳಿಗೆಯಲೂ...
ನಾವುಗಳು ಕೂಡ.... ಸಂತ್ರಪ್ತರೊ...

Joshini said...

ಗುರು ಸಾರ್,

ನಿಮ್ಮ ಸಾಗರದಾಚೆಯಲಿ ಚುಮುಚುಮು ಚಳಿಯಲಿ.. ಬೆಳೆಯೂ ಮಗುವನ್ನ ಇಂಗ್ಲೇಷ್ ಶಾಲೆಗೆ ಸೇರಿಸದೆ, ನಮ್ಮ ಕನ್ನಡ ಶಾಲೆಯಲ್ಲೆ... ಸೇರಿಸಿ...
ನಿಮ್ಮ ಮಗುವಿನ ಮೂಲಕ ನಾವು ಮತ್ತೆ ಅದ್ಬುತ ಕ್ರುತಿಗಳನ್ನು ನೀರಿಕ್ಷಿಸುತ್ತಾ ಇದೆವೆ...
ನಿಮ್ಮ ಮಗುವಾದ "ಸಾಗರದಾಚೆಯ ಇಂಚರಕ್ಕೆ ಜನುಮ ದಿನದ ಶುಬಾಶಯಗಳು...

ನಿಮ್ಮ ಮಗುವಿಗೊಸ್ಕರ
"ಸಾಗರದಾಚೆಯ ಬಿಳಿಯರ ಲೊಕದಲಿ
ಒಬ್ಬಂಟಿಗನಾಗಿ ನೀ ಕುಳಿತಿರಲು...
ತೆರೆ ನೀ ನಿನ್ನ ಬ್ಲಾಗನ್ನು...

ಮನಸ್ಸಿಗೆ ತೊಚಿದ ಸಾಲುಗಳನ್ನು
ಪೊಣಿಸಿ ಮಾಡು... ಕಾವ್ಯಮಾಲೆಯನು
ನಿನ್ನ ಎಲ್ಲಾ ಎಳಿಗೆಯಲೂ...
ನಾವುಗಳು ಕೂಡ.... ಸಂತ್ರಪ್ತರೊ...

ಮನಸು said...

ಅಭಿನಂದನೆಗಳು..ಗುರು

Chaithrika said...

ಸಾಗರದಾಚೆಯ ಹುಟ್ಟು ಹಬ್ಬದ ಶುಭಾಶಯಗಳು. "ಬದುಕಿನ ಪುಟಗಳಿಂದ"ದ ಮುಂದಿನ ಭಾಗ ಈ ವಾರ ಬರೆಯುತ್ತೇನೆ ಎಂದಿದ್ದರಲ್ಲ?

Chaithrika said...

ಉಡುಪಿ ವಿವರ ನೋಡಿ... ನಿಮ್ಮ official site ನೋಡಿದೆ. ನೀವು ನಮ್ಮ ದಕ್ಷಿಣ ಕನ್ನಡದವರೆಂದು ಗೊತ್ತೇ ಇರಲಿಲ್ಲ! ಬಹಳ ಖುಷಿ ಆಯಿತು. ಅಲ್ಲದೆ ನನ್ನದೇ ಶೈಕ್ಷಣಿಕ batch (ಪಿ.ಯು.ಸಿ ಮುಗಿಸಿದ ವರ್ಷ ಒಂದೇ) ಎಂದು ಇನ್ನಷ್ಟು ಸಂತೋಷವಾಯಿತು.

Anonymous said...

ಭಾವನೆಗಳನ್ನು ಬರೆದಿಡುವ ತಮ್ಮ ಹವ್ಯಾಸ ಹೀಗೆಯೇ ಬೆಳೆಯಲಿ. ಈ ಹವ್ಯಾಸ (ಮುಂದೊಂದು ದಿನ ನಿಮ್ಮನ್ನೂ ಸೇರಿಸಿ) ಓದುವವರಿಗೆಲ್ಲ ಖುಷಿ ಕೊಡುತ್ತದೆ. ಶುಭವಾಗಲಿ

ಗೋಪೀನಾಥ ರಾವ್

Mohan Hegade said...

ಗುರುಜಿ,

ತಮ್ಮ ಬ್ಲಾಗ್ ಎಂಬ ಮಗುವಿನ ಮೂರನೇ ವರ್ಷಕ್ಕೆ ಶುಭಾಶಯಗಳು. ಅಲ್ಲ ಗುರುಗಳೇ, ನಿಮ್ಮ ಆರಂಭ ಓದಿದಾಗ ಮರಿ ವಿಜ್ಞಾನಿಯ ಆಗಮನದ ಸಿಹಿ ಸುದ್ದಿ ಎಂದು ತಿಳಿದೇ ಕಣೋ. ಒಳ್ಳೆಯ ಬರಹ ಸರಳ ವಿಷಯವನ್ನು ಎಷ್ಟು ಸುಂದರವಾದ ಪದಪುಂಜಗಳಿಂದ ತುಂಬಿದಿರಾ..............

ಊರಿಗೆ ಬರುವ ಪ್ಲಾನ ಇದೆಯಾ?

feb ಮೊದಲವಾರ ಎಮ್ಮನೇಲಿ ಆಲೆಮನೆ ಅಕ್ತು, ಊರಿಗೆ ಬಂದರೆ ಮುದ್ದಮ ಬರವು ಅಕ.

ದನ್ಯರಿ,

ಮೋಹನ್ ಹೆಗಡೆ

ಚುಕ್ಕಿಚಿತ್ತಾರ said...

happy birthday...:)
all tha best..

nagendra hegde said...

ನಾವೆಲ್ಲರೂ ನಿಮ್ಮ ಎರಡನೇ ಮಗುವಿಗಾಗಿ ಕಾತುರರಾಗಿದ್ದೇವೆ ಗುರುವರ್ಯ..!!!

ವಿ.ಆರ್.ಭಟ್ said...

ಭಗವಂತ ದೀರ್ಘಾಯುಷ್ಯ ಆರೋಗ್ಯ ಐಶ್ವರ್ಯ ಸಕಲ ಸಂಪದಭಿವೃದ್ಧಿ ಕರುಣಿಸಲಿ ಎಂದು ಬೆಳವಣಿಗೆಯ ಈ ಹಂತದಲ್ಲಿ ಹೃತ್ಪೂರ್ವಕವಾಗಿ ಹಾರೈಸುತ್ತೇನೆ.

sunaath said...

ಭಾರತದ ಗಣರಾಜ್ಯೋತ್ಸವದಂದು ನಿಮ್ಮ ಮಗು ಹುಟ್ಟಿದ್ದು ವಿಶೇಷವಾಗಿದೆ. ವಿದೇಶದಲ್ಲಿದ್ದೂ ಸಹ, ಅಪ್ಪಟ ಭಾರತೀಯನಾಗಿ, ಅಪ್ಪಟ ಕನ್ನಡಿಗನಾಗಿ ಶೋಭಿಸುತ್ತಿರುವ ಈ ಮಗುವಿಗೆ ಏನೆಂದು ಶುಭಾಶಯ ಕೋರಲಿ?--"ಶತಂ ಜೀವ: ಶರದ: ಶತಮ್!"

ಮನಮುಕ್ತಾ said...

ಅಭಿನ೦ದನೆಗಳು.ಮು೦ದೆಯೂ ನಿಮ್ಮಿ೦ದ ಉತ್ತಮ ಬರಹಗಳು ಬರುತ್ತಿರಲಿ.

SANTOSH MS said...

Dear Guru Sir,

many happy returns of the day. Congratulations for having such a wonderful bloggers with you. You have provided some very good poems, articles and explanations. Keep going............

'A-NIL' said...

ಗುರುಮೂರ್ತಿ ಸರ್,
ಶುಭಾಶಯಗಳು..
ಇದು ನಮ್ಮ ಬ್ಲಾಗ್ ಗೆಳೆಯರಿಗೆಲ್ಲ ಸಂತಸದ ವಿಷಯ.
ಮಗುವಿಗೆ, ಹ್ಯಾಪಿ ಬರ್ತ ಡೇ :)

shwetha said...

@ Guru: I am really sorry, I actually thought u had a (real)baby in the first half of the post... :)
Congrats and keep writing..

Dr.D.T.krishna Murthy. said...

ಗುರು ಸರ್;ನಿಮ್ಮ ಬ್ಲಾಗಿಗೆ ಹುಟ್ಟಿದ ಹಬ್ಬದ ಶುಭಾಶಯಗಳು.ನನ್ನ ಬ್ಲಾಗಿಗೆ ಬನ್ನಿ.ನಮಸ್ಕಾರ.

ಶಾಂತಲಾ ಭಂಡಿ said...

ಗುರು,
‘ಸಾಗರದಾಚೆಯ ಇಂಚರ’ಕ್ಕೆ ಎರಡನೇ ಹುಟ್ಟುಹಬ್ಬದ ಶುಭಾಶಯಗಳು. ಬರೆಯುತ್ತಿರು.

ಪ್ರೀತಿಯಿಂದ,
-ಶಾಂತಲಾ ಭಂಡಿ

ಭಾವಜೀವಿ... said...

ಗುರು,
ಅಬ್ಬಾ! ನಿನ್ನಂತೆ ನಿನ್ನ ಬ್ಲಾಗೂ ಸಹ ಅಗಾಧವಾಗಿ ಬೆಳೆದಿದು ಬಿಡು!
ಇಬ್ಬರೂ ಹೀಗೆ ಅವಿರತವಾಗಿ ಬೆಳೆಯುತ್ತಿರಿ! ನಿಮ್ಮ ಸಂತತಿಯು ಸಾವಿರವಾಗಲಿ!

ಶಂಕರ್

ಸುಬ್ರಮಣ್ಯ ಮಾಚಿಕೊಪ್ಪ said...

ನಿಮ್ಮ ಬ್ಲಾಗ್ ಹೀಗೇ ಮುಂದುವರೆಯಲಿ. ನಾನು ಬ್ಲಾಗ್ ಶುರುಮಾಡಿದ ಆರಂಬದಲ್ಲಿ ಕಾಮೆಂಟ್ ಮಾಡಿ ಪ್ರೋತ್ಸಾಹಿಸಿದ್ದನ್ನು ನಾನೆಂದೂ ಮರೆಯೆ. (ಮೊದಲ ಬಾರಿ ನಿಮ್ಮ ಕಾಮೆಂಟ್ ನೋಡಿದಾಗ ನನ್ನೆದೆ ಧಸಕ್ ಎಂದಿತ್ತು-ಇಷ್ಟು ದೊಡ್ಡ ಬ್ಲಾಗಿಗರು ಕಾಮೆಂಟ್ ಮಾಡುವಷ್ಟು ನಾನು ಬರೆದಿದ್ದೆನೆಯೇ ಎಂದು)

ಅಪ್ಪ-ಅಮ್ಮ(Appa-Amma) said...

ಗುರು,

ಮೂರು ವರ್ಷಕ್ಕೆ ಹೆಜ್ಜೆ ಇಟ್ಟಿರುವ ಸಾಗರದಾಚೆಯ ಇಂಚರಕ್ಕೆ ಅಭಿನಂದನೆಗಳು !

ಮೂರು ನೂರಾಗಲಿ ಎಂಬ ಹಾರೈಕೆ.

ದಿನಕರ ಮೊಗೇರ said...

ಡಾ. ಗುರು ಸರ್,
ನಿಮ್ಮ ಮಗುವಿಗೆ ನನ್ನ ಶುಭ ಹಾರೈಕೆ..... ಹೀಗೆ ಬೆಳೆಯುತ್ತಿರಲಿ.....

ಚಿತ್ರಾ said...

ಗುರು ,
ಮೊದಲಿಗೆ ತುಂಬು ಹೃದಯದ ಅಭಿನಂದನೆಗಳು !!! ಸಾಗರದಾಚೆಯಿಂದಲೂ ಕೇಳುವ ಮಧುರವಾದ ಇಂಚರ ನಮ್ಮ ಮನಸನ್ನು ತುಂಬುತ್ತದೆ ! ಈ ಚಿಕ್ಕ ಅವಧಿಯಲ್ಲಿ ನಿನ್ನ ವೈವಿಧ್ಯಮಯ ಬರಹಗಳಿಂದ , ಕವನಗಳಿಂದ ನಮ್ಮೆಲ್ಲರನ್ನು ರಂಜಿಸಿದ್ದಕ್ಕೆ , ಯೂರೋಪ್ ನ ಸುಂದರ ತಾಣಗಳನ್ನು ಪರಿಚಯಿಸಿದ್ದಕ್ಕೆ , ಚಂದದ ಫೋಟೋಗಳಿಂದ ಸುಂದರ ಜಾಗಗಳ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು .
ಸುಮಾರು ದಿನಗಳಿಂದ , ಕೆಲ ವೈಯುಕ್ತಿಕ ಕಾರಣಗಳಿಂದಾಗಿ ಬ್ಲಾಗ್ ನೋಡಲಾಗಲಿಲ್ಲ. ಇವತ್ತು " ಮಗು ಬೆಳೆಯುತ್ತಿದೆ " ಎಂಬ ಶೀರ್ಷಿಕೆ ನೋಡುತ್ತಲೇ ಕುತೂಹಲದಿಂದ ಓದಿದೆ . ಖುಷಿಯಾಯ್ತು . ಹೀಗೆ ಇನ್ನೂ ಬೆಳೆಯುತ್ತಿರಲಿ . ಮೈ ಕೈ ತುಂಬಿಕೊಂಡು , ಮುದ್ದು ಮುದ್ದಾಗಿ ಬೆಳೆಯಲಿ ಎನ್ನುವುದು ನನ್ನ ಹಾರೈಕೆ !

ಸುಧೇಶ್ ಶೆಟ್ಟಿ said...

ಕ೦ಗ್ರಾಟ್ಸ್....ತು೦ಬಾ ಇನೋವೇಟಿವ್ ಆಗಿ ಬರೆದಿದ್ದೀರಿ... ಓದಲಿಕ್ಕೆ ಖುಶಿ ಆಯಿತು...

ನಿಮ್ಮ ಮಗುವಿನ ಬಗ್ಗೆ ಬರೆಯುತ್ತಿದ್ದೀರೇನೋ ಅ೦ದುಕೊ೦ಡೆ ಮೊದಲಿಗೆ :)

ಚ೦ದದ ಬ್ಲಾಗ್ ನಿಮ್ಮದು. ಹೀಗ ಬರೆಯುತ್ತಿರಿ :)

Sachi said...

magu ...blog ..guru ...ellaru supero ranga !!

ಕವಿತಾ said...

Happy Birthday to " ಸಾಗರದಾಚೆಯ ಇಂಚರ " !! Congrats !

ಸಾಗರದಾಚೆಯ ಇಂಚರ said...

ಗುಬ್ಬಚ್ಚಿ ಸತೀಶ್ ಸರ್
ಖಂಡಿತ
ನಿಮ್ಮ ಮಾತಿನಂತೆ ಆಗಲಿ
ನಿಮ್ಮ ಪುಸ್ತಕ ಬಿಡುಗಡೆ ಸಮಾರಂಭ ಚೆನ್ನಾಗಿ ನಡೆಯಲಿ

ಸಾಗರದಾಚೆಯ ಇಂಚರ said...

nimmolagobba ಬಾಲು ಸರ್
ನಿಮ್ಮೆಲ್ಲರ ಪ್ರೀತಿ ಸದಾ ಇರಲಿ
ಬ್ಲಾಗ್ ಗೆ ಬರುತ್ತಿರಿ
ಹೊಸದನ್ನು ನೀಡುವ ಪ್ರಯತ್ನ ನನ್ನದು

ಸಾಗರದಾಚೆಯ ಇಂಚರ said...

Ravi Hegde

thank you sir

ಸಾಗರದಾಚೆಯ ಇಂಚರ said...

ತೇಜಸ್ವಿನಿ ಹೆಗಡೆ

ನಿಮ್ಮ ಹಾರೈಕೆಯಂತೆ ಹಾಗೆ ಆಗಲಿ :)
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ವಾಣಿಶ್ರೀ ಭಟ್
khandita
neevu sadaa maguvannu nodalu baruttiri :)

ಸಾಗರದಾಚೆಯ ಇಂಚರ said...

Indira madam

thank you :)

ಸಾಗರದಾಚೆಯ ಇಂಚರ said...

PARAANJAPE K.N sir

thank you

keep visiting

ಸಾಗರದಾಚೆಯ ಇಂಚರ said...

ಜೋಶಿನಿ
ನಿಮ್ಮ ಆತ್ಮೀಯ ಮಾತುಗಳಿಗೆ ನಾನು ಅಭಾರಿ
ನನ್ನ ಬ್ಲಾಗ್ ನ್ನು ಮೆಚ್ಚಿ ಬಂದಿದ್ದಕ್ಕೆ ಥ್ಯಾಂಕ್ಸ್

ಮಗುವಿಗೆ ಹೊಸ ಕವನ ನೀಡಿದ್ದಿರಿ
ಹಾರೈಕೆ ಸದಾ ಇರಲಿ

ಸಾಗರದಾಚೆಯ ಇಂಚರ said...

ಮನಸು

ತುಂಬಾ ಧನ್ಯವಾದಗಳು

ಸಾಗರದಾಚೆಯ ಇಂಚರ said...

Chaithrika

ನಾನು ಉಡುಪಿಯ ನೀರು ಕುಡಿದ್ಡಿದ್ದೇನೆ
ದಕ್ಷಿಣ ಕನ್ನಡ ನನ್ನ ಊರಲ್ಲ
ಆದರೆ ಬಹಳಷ್ಟು ವರ್ಷ ಅಲ್ಲಿಯೇ ಇದ್ದೆ
ನಿಮ್ಮ ಆತ್ಮೀಯ ಮಾತುಗಳಿಗೆ ಥ್ಯಾಂಕ್ಸ್
ಬರುತ್ತಿರಿ ಬ್ಲಾಗ್ ಗೆ

ಸಾಗರದಾಚೆಯ ಇಂಚರ said...

ಗೋಪಿನಾಥ್ ಸರ್
ನಿಮ್ಮ ಪ್ರೀತಿ, ವಿಶ್ವಾಸ , ಹಾರೈಕೆ ಸದಾ ಇರಲಿ

ಸಾಗರದಾಚೆಯ ಇಂಚರ said...

Mohan ಹೆಗಡೆ ಸರ್

ಸ್ವಲ್ಪ ಕುತೂಹಲಕಾರಿಯಾಗಿ ಬರೆಯುವ ಪ್ರಯತ್ನವಷ್ಟೇ
ನಿಮ್ಮೆಲ್ಲರ ಪ್ರೀತಿ ಸದಾ ಇರಲಿ
ಓದುತ್ತಿರಿ
ಹರಸುತ್ತಿರಿ

ಸಾಗರದಾಚೆಯ ಇಂಚರ said...

ಚುಕ್ಕಿಚಿತ್ತಾರ

thank you so much

ಸಾಗರದಾಚೆಯ ಇಂಚರ said...

nagendra hegde

wait and watch :)

thanks for the comments

ಸಾಗರದಾಚೆಯ ಇಂಚರ said...

ವಿ.ಆರ್.ಭಟ್ ಸರ್
ನಿಮ್ಮ ಆಶಿರ್ವಾದ ಸದಾ ಇರಲಿ

ಸಾಗರದಾಚೆಯ ಇಂಚರ said...

sunaath ಸರ್

ನಿಮ್ಮ ಪ್ರೀತಿ , ಹಾರೈಕೆ, ಆಶಿರ್ವಾದ ನನ್ನ ಬ್ಲಾಗ್ ಗೆ ಶ್ರೀರಕ್ಷೆ

ಪ್ರೀತಿಯ ಮಾತುಗಳು ಸದಾ ನಂಗೆ ಮಾರ್ಗದರ್ಶಿ

ಬರುತ್ತಿರಿ

ಸಾಗರದಾಚೆಯ ಇಂಚರ said...

ಮನಮುಕ್ತಾ

thank you very much

ಸಾಗರದಾಚೆಯ ಇಂಚರ said...

SANTOSH MS

thanks for your nice words

keep visiting

ಸಾಗರದಾಚೆಯ ಇಂಚರ said...

'A-NIL' sir

nimmanta geleyara sneha nangae santasada vishaya

baruttiri

ಸಾಗರದಾಚೆಯ ಇಂಚರ said...

'A-NIL' sir

nimmanta geleyara sneha nangae santasada vishaya

baruttiri

ಸಾಗರದಾಚೆಯ ಇಂಚರ said...

shwetha

ಅದಕ್ಕೆ ಸ್ವಲ್ಪ ಕುತೂಹಲಕಾರಿಯಾಗಿ ಇರಲಿ ಎಂದು ಹಾಗೆ ಬರೆದೆ

ಕ್ಷಮೆ ಎಲ್ಲ ಯಾಕೆ

ಸದಾ ಬ್ಲಾಗ್ ಓದುತ್ತಿರಿ

ಸಾಗರದಾಚೆಯ ಇಂಚರ said...

Dr.D.T.krishna ಮೂರ್ತಿ ಸರ್

ಧನ್ಯವಾದಗಳು

ಬರುತ್ತಿರಿ

ಸಾಗರದಾಚೆಯ ಇಂಚರ said...

ಶಾಂತಲಾ

ತುಂಬಾ ಥ್ಯಾಂಕ್ಸ್

ಹಿಂಗೆ ಬರ್ತಾ ಇರು

ಸಾಗರದಾಚೆಯ ಇಂಚರ said...

ಭಾವಜೀವಿ..

ಬ್ಲಾಗ್ ಮಾಡಿ ಎರಡು ವರ್ಷ ಆಗಿದ್ದೆ ತಿಳಿಯಲಿಲ್ಲ ನೋಡು
ನಿಮ್ಮೆಲ್ಲರ ಪ್ರೀತಿ ಇದಕ್ಕೆ ಸದಾ ಇರಲಿ

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಮಾಚಿಕೊಪ್ಪ ಸರ್

ಇಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ

ನಿಮ್ಮ ಸಂಶೋಧನ ಬರವಣಿಗೆ ನನ್ನ ಮನ ಸೆಳೆಯುವುದು ನಿಜ

ನಿಮ್ಮ ಪ್ರೀತಿ ಹೀಗೆಯೇ ಇರಲಿ

ಸಾಗರದಾಚೆಯ ಇಂಚರ said...

ಅಪ್ಪ-ಅಮ್ಮ(Appa-Amma)

ನಿಮ್ಮ ಹಾರೈಕೆಗೆ ಸದಾ ಋಣಿ

ಸಾಗರದಾಚೆಯ ಇಂಚರ said...

ದಿನಕರ ಮೊಗೇರ ಸರ್

ನಿಮ್ಮ ಪ್ರೀತಿಗೆ ಅಭಾರಿ

ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಚಿತ್ರಾ ಅಕ್ಕ

ಬ್ಲಾಗ್ ಆರಂಬಿಸಿದಾಗ ಸುಮ್ಮನೆ ಬರೆಯುವ ಮನಸ್ಸಿತ್ತು
ಆದರೆ ಇಂದು ನೀವೆಲ್ಲ ಸೇರಿ ಒಂದು ಕುಟುಂಬದ ವಾತಾವರಣ ನಿರ್ಮಿಸಿದ್ದಿರಿ

ನಿಮ್ಮೆಲ್ಲ ಆಶಿರ್ವಾದ ನನ್ನ ಬ್ಲಾಗ್ ಗೆ ಸದಾ ಇರಲಿ
ತಪ್ಪಿದಲ್ಲಿ ತಿದ್ದಿ, ಹರಸಿ

ಪ್ರೀತಿಯ ಮಾತುಗಳಿಗೆ ಚಿರ ಋಣಿ

ಸಾಗರದಾಚೆಯ ಇಂಚರ said...

ಸುಧೇಶ್ ಶೆಟ್ಟಿ ಸರ್

ನಿಮ್ಮ ಮಾತುಗಳಿಗೆ ಥ್ಯಾಂಕ್ಸ್

ತುಂಬಾ ಜನ ಹೀಗೆ ತಿಳಿದುಕೊಂಡು ಮೇಲ್ ನಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದಾರೆ ಹಹಹ

ಬರುತ್ತಿರಿ

ಪ್ರೀತಿ ಇರಲಿ

ಸಾಗರದಾಚೆಯ ಇಂಚರ said...

Sachi

ಥ್ಯಾಂಕ್ಸ್ ಸರ್

ಬರ್ತಾ ಇರಿ

ಸಾಗರದಾಚೆಯ ಇಂಚರ said...

ಕವಿತಾ

ಥ್ಯಾಂಕ್ಸ್

ಹೀಗೆ ಬರುತ್ತಿರಿ

ಹಾರೈಕೆ ಸದಾ ಇರಲಿ

ಕಲರವ said...

gurumoortiyavare, nimma moorane varshakke kaalirisuttiruva muddu kusige, shubhahaaraikegalu

ಶಿವಪ್ರಕಾಶ್ said...

Happy Birthday to your blog sir..
keep blogging :)

ಸಾಗರದಾಚೆಯ ಇಂಚರ said...

Kalarava,

thanks for the wishes

ಸಾಗರದಾಚೆಯ ಇಂಚರ said...

Shivaprakash sir

thank you

bartaa iri

ವಿಚಲಿತ... said...

ಅಬ್ಬಬ್ಬ..
ಎಂಥ ತಿರುವು.. ಹಹಹ..
ಸ್ವೀಡನ್ ಸೇವೆಯ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ..
ಜೊತೆಗೆ,ನಿಮ್ಮ ಮಗುಗೆ ಶುಭಾಶಯಗಳು..
ಹೀಗೆಯೂ ದೇವರ ಕೃಪೆಯಿಂದ ಎತ್ತರಕ್ಕೆ ಬೆಳೆಯುತ್ತಿರಲಿ..

ಸಾಗರದಾಚೆಯ ಇಂಚರ said...

Vichalita
thanks for the comments

keep coming

ಸಿಮೆಂಟು ಮರಳಿನ ಮಧ್ಯೆ said...

ಗುರು..

ದಿನಗಳ ಲೆಕ್ಕವಲ್ಲ...
ಮಾನಸಿಕ ಬೆಳವಣಿಗೆ ನಿಮ್ಮ ಬ್ಲಾಗಿನಲ್ಲಿ ನೋಡುತ್ತಿದ್ದೇವೆ..

ನಿಮ್ಮ ಬ್ಲಾಗಿನಲ್ಲಿ ವೈವಿಧ್ಯತೆ ಇದೆ.. ಅದೇ.. ನಿಮ್ಮ ಯಶಸ್ಸಿನ ಗುಟ್ಟು..

ಇನ್ನಷ್ಟು ಒಳ್ಳೊಳ್ಳೆ ಲೇಖನಗಳು..
ಕವಿತೆಗಳು.. ಕಥೆಗಳು ಬರಲಿ...

ಶುಭ ಹಾರೈಕೆಗಳು.. ಜೈ ಹೋ !!

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ

ನಿಮ್ಮ ಪ್ರೀತಿ ಅಷಿರ್ವಾದವೇ ಬರೆಯಲು ಪ್ರೇರಣೆ

ಹೀಗೆಯೇ ಬಂದು ಹರಸುತ್ತಿರಿ

ಪ್ರೀತಿಗೆ ಚಿರ ಋಣಿ

ಜೈ ಹೋ

uma bhat said...

Nice Post dear :)
1st few coments nodi confuse ninge yavaga magu aatu heli hehehe :)

Ranjita said...

ಗುರಣ್ಣ ಬ್ಲಾಗ್ ಹುಟ್ಟು ಹಬ್ಬಕ್ಕೆ be lated wishes.:P
haage shubhashayagalu :)