Tuesday, February 1, 2011

ಅದು ಕೇವಲ 50 ರೂಪಾಯಿ ಆಗಿರಲಿಲ್ಲ ...

ಕಳೆದ ವಾರ ನನ್ನ ಪ್ರೀತಿಯ ಬ್ಲಾಗ್ ನ ಹುಟ್ಟಿದ ಹಬ್ಬ ಆದ್ದರಿಂದ ''ಬದುಕಿನ ಪುಟಗಳಿಂದ'' ಬರಹ ಮುಂದುವರೆಸಲಾಗಲಿಲ್ಲ. ಅನೇಕ ಮಿತ್ರರು ಮೇಲ್ ಮಾಡಿ ಮುಂದಿನ ಬರಹ ನಿಂತದ್ದೇಕೆ ಎಂದು ಕೇಳಿದ್ದಾರೆ. ಖಂಡಿತ ನಿಲ್ಲಿಸುವ ಉದ್ದೇಶ ಇಲ್ಲ. ಅದಕ್ಕೆ ಈಗ ಮುಂದುವರೆಸುತ್ತಿದ್ದೇನೆ. ಮೊದಲ ಭಾಗ ಓದದವರು ಇಲ್ಲಿ ಓದಿ ''http://gurumurthyhegde.blogspot.com/2011/01/1.html''

ಉಡುಪಿಯ ಆ ದಿನಗಳು ಬದುಕಿಗೆ ಅಡಿಪಾಯ ಮಾತ್ರ ಆಗಿರಲಿಲ್ಲ. ಬದುಕಿನ ರಸಮಯ ಕ್ಷಣಗಳೂ ಹೌದು. ಉಡುಪಿಯಲ್ಲಿ ಓದಿದವರಿಗೆ ರಥ ಬೀದಿಯ ಮಹತ್ವ ಗೊತ್ತೇ ಇರುತ್ತದೆ. ಅದರಲ್ಲೂ ಪೂರ್ಣ ಪ್ರಜ್ಞ ದಲ್ಲಿ ಓದುವ ವಿದ್ಯಾರ್ಥಿಗಳಿಗೂ ರಥ ಬೀದಿಗೂ ಅವಿನಾಭಾವ ಸಂಬಂಧ. ಅದರಲ್ಲೂ ಬೇರೆ ಊರಿನಿಂದ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ರಥಬೀದಿಯ ದರ್ಶನ ದಿನವೂ ಆಗೇ ಆಗುತ್ತದೆ. ಮಧ್ಯಾನ್ಹ  ಊಟಕ್ಕೆ ಹೋಗುವಾಗ, ರಾತ್ರಿ ಊಟಕ್ಕೆ ಹೋಗುವಾಗ, ಜೊತೆಗೆ ರಥಬೀದಿಯಲ್ಲಿ ತಿರುಗುವ ಯಾತ್ರಾರ್ಥಿಗಳ ದರ್ಶನ, ಸಾಲದೆಂಬಂತೆ ಶ್ರೀ ಕ್ರಷ್ಣನ ದರ್ಶನ, ಬದುಕು ಪಾವನ ಎನಿಸಿಬಿಡುತ್ತದೆ. ಸುಂದರ ಯಾತ್ರಾರ್ಥಿಗಳಿಂದ ಕೆಲವರ ಕಣ್ಣು ಪಾವನ ಆಗುವುದೂ ಉಂಟು.  ಉಡುಪಿಯಲ್ಲಿ   ಕಲಿಯಲು ಬರುವ ವಿದ್ಯಾರ್ಥಿಗಳಲ್ಲಿ ಬಹುಪಾಲು ಉತ್ತರ ಕನ್ನಡ ದವರೆ ಇರುತ್ತಾರೆ. ಇಲ್ಲಿನ ಶಿಕ್ಷಣ ವ್ಯವಸ್ಥೆ ಕಾರಣ ಒಂದಾದರೆ, ಇದು ಉತ್ತರ ಕನ್ನಡಕ್ಕೆ ಹತ್ತಿರದ ಜಾಗ ಎನ್ನುವುದು ಇನ್ನೊಂದು. ಅದರಲ್ಲೂ ಉಡುಪಿಯಲ್ಲಿ ಉಚಿತ ಊಟ, ದೇವರ ಪ್ರಸಾದವೂ ಆದ್ದರಿಂದ ಅರ್ಥಿಕ ದ್ರಷ್ಟಿಯಿಂದಲೂ ಇದು ಪ್ರಶಸ್ತ ಜಾಗ.
ಕಾಲೇಜಿಗೆ ಸೇರಿದ ದಿನಗಳಲ್ಲಿ ಹಣದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಯಾಕೆಂದರೆ ತಂದೆಯವರು ಚಾಚೂ ತಪ್ಪದೆ ಹಣ ಕಳಿಸುತ್ತಿದ್ದರು. ಅವರ ಶ್ರಮ, ಬೆವರಿನ ಕಷ್ಟ ನನಗೆ ಗೊತ್ತೇ ಆಗುತ್ತಿರಲಿಲ್ಲ. ಮಧ್ಯಮ ವರ್ಗದ ಕುಟುಂಬವಾದ ನಮಗೆ ತಿನ್ನಲು ಉಣ್ಣಲು ಕೊರತೆ ಇರಲಿಲ್ಲ ಆದರೂ ತಂದೆಯವರಿಗೆ ದೊಡ್ಡ ಕುಟುಂಬದ  (ಆಗ ಸಾಮೂಹಿಕ ಕುಟುಂಬ ಪದ್ಧತಿ) ಜವಾಬ್ದಾರಿಯೂ ಇತ್ತು. ಇದರ ನಡುವೆ ನಮ್ಮ ಶಿಕ್ಷಣದ ಖರ್ಚು. ನನಗಿನ್ನೂ ನೆನಪಿದೆ, ಆ ದಿನಗಳಲ್ಲಿ ತಂದೆ ತಾಯಿಯವರು ಯಲ್ಲಾಪುರದಲ್ಲಿದ್ದರು. ತಂದೆಯವರು ಸರಕಾರೀ ಕೆಲಸದಲ್ಲಿದ್ದರು. ನಾನಾಗ ಒಂದನೇ ಪಿ ಯು ಸಿ ವಿಜ್ಞಾನ ವಿಭಾಗಕ್ಕೆ ಸೇರಿ 6 ತಿಂಗಳು ಆಗಿದ್ದವು. ಒಮ್ಮೆಲೇ ತಂದೆಯವರಿಗೆ ಹಳಿಯಾಳಕ್ಕೆ ವರ್ಗಾವಣೆ ಆಯಿತು. ಹಳಿಯಾಳ ಸುಮಾರು ಒಂದೂ ವರೆ ಘಂಟೆಯ ಪ್ರಯಾಣ ಯಲ್ಲಾಪುರ ದಿಂದ. ಹಾಗೆಂದು ನಾನು ಕಾಲೇಜು ಬಿಡುವುದು ನನಗೆ ಇಷ್ಟವಿರಲಿಲ್ಲ. ಆದರೆ ತಂದೆಯವರೇ ಪ್ರತಿದಿನ ಅಲ್ಲಿಗೆ ಹೋಗಿಬರುವುದೆಂದು ನಿರ್ಧರಿಸಿದರು. ಒಬ್ಬ ಮಗನ ಮಟ್ಟಿಗೆ ತಂದೆಯ ಆ ನಿರ್ಧಾರ ಬಲು ದೊಡ್ಡದಾಗಿತ್ತು. ಮಗ ಕಲಿಯಲಿ, ಆತನ ಶಿಕ್ಷಣ ಮಧ್ಯದಲ್ಲಿಯೇ ತನ್ನಿಂದ ನಿಲ್ಲುವುದು ಬೇಡ ಎಂದು ತಿಳಿದು ತಾವೇ ಪ್ರತಿದಿನ 3 ಘಂಟೆ ಪ್ರಯಾಣ ಮಾಡಿದ ಆ ದಿನಗಳು ಎಂದೂ ಮರೆಯಲಾರದ್ದು. ನಮಗೆ ಬಿಸಿ ಬಿಸಿ ಊಟ ನೀಡಿ, ತಾವು ಮನೆಯಿಂದ ಬೆಳಿಗ್ಗೆಯೇ ಕಟ್ಟಿಸಿಕೊಂಡು ಹೋಗಿ ತಿಂದು ಬರುವ ಆ ಮನಸ್ಸಿನ ತಂದೆಯ ದೊಡ್ಡ ಗುಣ ಹಾಗೂ ಅವರ ಋಣ ಎಂದಿಗೂ ತೀರಿಸಲಾಗದ್ದು.
ಉಡುಪಿ ಸಾಂಸ್ಕ್ರತಿಕವಾಗಿ ಬಹಳಷ್ಟು ಮುಂದುವರೆದ ಪ್ರದೇಶ. ಇಲ್ಲಿ ಸಂಗೀತ, ಕಲೆ ಗಳಿಗೆ ಅಗಾಧ ಪ್ರೋತ್ಸಾಹ. ಕನ್ನಡ ನಾಡಿನ ಗಂಡು ಕಲೆ ''ಯಕ್ಷಗಾನ'' ದ ಉಳಿವಿಗೆ ಮೂಲ ಕಾರಣ ದಕ್ಷಿಣ ಕನ್ನಡದವರೇ ಎಂದರೆ ತಪ್ಪಾಗಲಿಕ್ಕಿಲ್ಲ. ಶಿಕ್ಷಣದಲ್ಲೂ ಅವರು ಎಲ್ಲರಿಗಿಂತ ಮುಂದು. ನಾಡಿನ ಖ್ಯಾತ ಶಿಕ್ಷಣ ಸಂಸ್ಥೆಗಳ ಒಡೆಯರೂ ಹೌದು.

''ಘಟ್ಟದ ಕೆಳಗಿನ ನೀರು, ಜೊತೆಯಲಿ ಹರಿಯುವ ಬೆವರು 
ಎಳೆದಿದೆ ಬದುಕಿನ ತೇರು, ಬದುಕುವೆ ಎಲ್ಲೇ ಹೋದರೂ''

ಯಾವ ಪುಣ್ಯಾತ್ಮ ಹೇಳಿದನೋ ಗೊತ್ತಿಲ್ಲ. ಆದರೆ ಆ ಮಾತು ಮಾತ್ರ ಎಂದಿಗೂ ಸತ್ಯ. ಸಮುದ್ರ ತೀರದ ಜನರಿಗೆ ಮಂಡೆ (ಮಂಡೆ ಅಂದರೆ ಬುದ್ದಿ) ಬಹಳ ಜಾಸ್ತಿ. ವ್ಯಾಪಾರದಲ್ಲಿ ಬಹಳ ಜಾಣರು. ಸ್ವಲ್ಪ ನಾವು ಯಾಮಾರಿದರೂ ನಮ್ಮ ಎದುರಿಗೇ ನಮ್ಮ ಮಾರಾಟ ಮಾಡಿ ಹೋಗುವಷ್ಟು ಚಂಡ-ಪ್ರಚಂಡರು ಅವರು. ಬಹುಷ: ಅವರ ಕಷ್ಟಮಯ ಜೀವನ ಕಲಿಸಿದ ಪಾಠ ಅದೆಂದು ತೋರುತ್ತದೆ. ಅದೇ ಘಟ್ಟದ ಮೇಲೆ ಬಹಳಷ್ಟು ಜನರಿಗೆ ಅಡಿಕೆ ತೋಟವಿದೆ. ಅಡಿಕೆಗೆ ಬೆಲೆಯಿದೆ (ಆದರೂ ಜನ ತಾವು ಬಡವರು ಎನ್ನುವುದು ಬಿಟ್ಟಿಲ್ಲ, ಲಕ್ಷಾದೀಶ್ವರ ಕೋಟ್ಯಾ ಧೀಶ್ವರ ನನ್ನು ನೋಡಿ ತಾನು ಬಡವ ಎನ್ನುತ್ತಾನೆ, ಹೀಗೆಯೇ ಎಷ್ಟೇ ಅಡಿಕೆಗೆ ಬೆಲೆ ನೀವು ಕೊಡಿ, ಅವರು ಕಣ್ಣೀರು ಹಾಕುವುದು ಬಿಡರು)  
ಘಟ್ಟದ ಕೆಳಗಿನ ಜನರಿಗೆ ಇಂಥಹ ಯೋಗವಿಲ್ಲ. ಅಲ್ಲಿರುವುದು ಬೋಳು ಗುಡ್ಡೆ ಗಳು ಮಾತ್ರ. ಅದರಲ್ಲೇ ಸುಖ ಕಾಣಬೇಕು. ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋದರೆ ಮತ್ತೆ ಸಂಜೆಯೇ ಮನೆಗೆ ಬರುವುದು ಅವರು. ಆ ದಿನಚರಿಯೇ ಅವರಿಗೆ ಒಂದು ರೀತಿಯ ಬದುಕನ್ನು ಕಲಿಸಿದೆ. ಇದು ಉಡುಪಿಯಲ್ಲಿ ನಾನು ಕಂಡು ಕೊಂಡ ಜನರ ಜೀವನ ಚಕ್ರ. 
ದಕ್ಷಿಣ ಕನ್ನಡ ದಲ್ಲಿ ಮದುವೆಗಳನ್ನು ಮನೆಯಲ್ಲಿ ಮಾಡುವಷ್ಟು ಸಮಯ ಹಾಗೂ ವ್ಯವಧಾನ ಯಾರಿಗೂ ಇಲ್ಲ. ಅದಕ್ಕೆ ಅವರು ಆಯ್ದು ಕೊಳ್ಳುವುದು ಮಠ ಮಂದಿರ ಗಳನ್ನು, ಛತ್ರಗಳನ್ನು. ಉಡುಪಿಯ ಸುತ್ತ ಮುತ್ತ ಅನೇಕ ಮದುವೆಯ ಛತ್ರಗಳಿವೆ. ಛತ್ರಗಳಲ್ಲಿ ನಡೆಯುವ ಮದುವೆಯ ವ್ಯವಸ್ಥೆ ಯನ್ನು ಆ ಛತ್ರಗಳ ನಿರ್ವಾಹಕರು ಸಂಬಂದಿಸಿದವರಿಗೆ ನೀಡುತ್ತಾರೆ. ಅಂದರೆ  ಊಟದ ವ್ಯವಸ್ಥೆ  ಒಬ್ಬನಿಗೆ, ಅಲಂಕಾರದ ವ್ಯವಸ್ಥೆ  ಇನ್ನೊಬ್ಬನಿಗೆ, ಹೂವಿನ ವ್ಯವಸ್ಥೆ ಮತ್ತೊಬ್ಬನಿಗೆ ಹೀಗೆ. ಇಲ್ಲಿ ಊಟ ಬಡಿಸಲು ನಿರ್ಧಿಷ್ಟ ಪಂಗಡಗಳಿಗೆ ವಹಿಸಿ ಕೊಟ್ಟಿರುತ್ತಾರೆ. ಆ ಪಂಗಡಗಳು ಮಠದಲ್ಲಿ ಕಲಿಯುವ ವಿದ್ಯಾರ್ಥಿಗಳನ್ನು ತಮ್ಮ ಪಂಗಡದಲ್ಲಿ ಸೇರಿಸಿಕೊಳ್ಳುತ್ತಾರೆ.

  ಇಂಥಹ  ಊಟಕ್ಕೆ ಬಡಿಸಲು ಹೋಗುವುದಕ್ಕೆ ''ಪೆಟ್ಟು'' ಎನ್ನುತ್ತಾರೆ.

 ಉಡುಪಿಗೆ ಹೋದ ಮೊದಲ ದಿನಗಳಲ್ಲಿ ಸ್ನೇಹಿತನೊಬ್ಬ ''ಪೆಟ್ಟಿಗೆ'' ಬರುತ್ತಿಯ ಎಂದು ಕೇಳಿದ್ದ. ನಾನು   ಒಳಗೊಳಗೇ ಬೆವೆತುಹೋಗಿದ್ದೆ. ಇನ್ನೆಲ್ಲಿಂದ ಜನರ ಕರೆದುಕೊಂಡು ಬಂದು ನನಗೆ ಹೊಡೆಯುತ್ತಾರೋ ಎಂದು. ಆಮೇಲೆ ಅರ್ಥ ತಿಳಿದಾಗ ನಕ್ಕಿದ್ದೋ ನಕ್ಕಿದ್ದು. 
ಉಡುಪಿಯ ರಥ ಬೀದಿಗಳಲ್ಲಿ ತಿರುಗುವಾಗ ಇಂಥಹ ಒಂದು ಪಂಗಡದ ನಾಯಕನ ಪರಿಚಯ ಆಯಿತು. ಆ ಪಂಗಡದಲ್ಲಿ ನನ್ನ ಕೆಲವು ಸ್ನೇಹಿತರು ಇದ್ದರು. ಅವರೆಲ್ಲ ಮದುವೆಗೆ ಬಡಿಸಲು ಹೋಗಿ ತಮ್ಮ ಖರ್ಚನ್ನು ತಾವೇ ನಿಭಾಯಿಸಿಕೊಳ್ಳುತ್ತಿದ್ದರು. ಹೀಗೆ ಒಂದು ಭಾನುವಾರ ಬೆಳಿಗ್ಗೆ ಪೇಪರ್ ಓದುತ್ತಿದ್ದವನಿಗೆ ಒಂದು ದೂರವಾಣಿ ಕರೆ ಬಂತು. ಸ್ನೇಹಿತನೊಬ್ಬ ಕರೆ ಮಾಡಿ ''ಇಂದಿನ ಪೆಟ್ಟಿ ಗೆ ಒಬ್ಬ ಕೈ ಕೊಟ್ಟಿದ್ದಾನೆ. ನಮಗೆ ಒಬ್ಬ ಬಡಿಸುವ ಜನ ಅರ್ಜೆಂಟ್ ಬೇಕಾಗಿದೆ. ದಯವಿಟ್ಟು ಬರಲು ಆಗುತ್ತದೆಯೇ? '' ಎಂದು ಕೇಳಿದ. ಮಧ್ಯಾನ್ಹ 12 ಘಂಟೆಗೆ ಹೋಗಿ 2 ಘಂಟೆಗೆ ತಿರುಗಿ ಬರುವುದು ಎಂದು ಹೇಳಿದ. ಸರಿ, ಆತ ಸ್ನೇಹಿತ ಬೇರೆ ಎಂದು ಮೊದಲ ಪೆಟ್ಟು ತಿನ್ನಲು (ಕ್ಷಮಿಸಿ , ಬಡಿಸಲು) ಹೊರಟೆ ಬಿಟ್ಟೆ. ಬಡಿಸುವುದು ನನಗೆ ಹೊಸದಲ್ಲ. ಕಾರಣ ಕ್ರಷ್ಣ ಮಠದಲ್ಲಿ ಪ್ರತಿದಿನ ಬಡಿಸುತ್ತೇವೆ. ಆದರೆ ಮದುವೆ ಮನೆಯಲ್ಲಿ ಬಡಿಸುವುದು, ಮತ್ತು ಪದ್ದತಿಯಂತೆ ಬಡಿಸುವುದು ಹೊಸದಾಗಿತ್ತು. ನನಗೆ ಮೊದಲ ದಿನವಾದ್ದರಿಂದ ''ಪ್ರಥಮ ಚುಂಬನಂ ದಂತ ಭಗ್ನಂ'' ಆಗದಿರಲಿ ಎಂದು ಕೇವಲ ಉಪ್ಪು, ಉಪ್ಪಿನಕಾಯಿ ಮತ್ತು ಹಪ್ಪಳ ಮಾತ್ರ ಬಡಿಸಲು ನೀಡಿದ್ದರು. ಸುಮಾರು 1000 ಜನ ಅಂದು ಮದುವೆಗೆ ಬಂದಿದ್ದರು ಎನಿಸುತ್ತದೆ. ಬಡಿಸಿ ಆದ ಮೇಲೆ ನಾವು ಊಟ ಮಾಡಿ ಮನೆಗೆ ಬಂದೆವು. ಆ ದಿನ ಸಂಜೆ ರಥ ಬೀದಿಯಲ್ಲಿ ನನ್ನ ಸ್ನೇಹಿತ ನನಗೆ 50 ರೂಪಾಯಿಗಳನ್ನು ಕೊಟ್ಟ. ನನಗೆ ಆಶ್ಚರ್ಯ .

''ಇದೇನಿದು?'' ಎಂದು ಕೇಳಿದೆ, 

''ನಿನ್ನ ಮೊದಲ ದುಡಿಮೆ'' ಎಂದ.

 2 ಘಂಟೆ ಬಡಿಸಲು ಹೋಗಿದ್ದಕ್ಕೆ 50 ರೂಪಾಯಿ ನೀಡುತ್ತಿದ್ದರು ಆ ದಿನಗಳಲ್ಲಿ.

ಇಂದು 50 ರೂಪಾಯಿಗಳಿಗೆ ಬೆಲೆ ಇಲ್ಲದಿದ್ದರೂ 11 ವರ್ಷಗಳ ಹಿಂದೆ ಅದು ಬೆಲೆ ಬಾಳುವನ್ತಾದ್ದೆ  ಆಗಿತ್ತು. 

ಮೊದಲ ಬಾರಿಗೆ ಬೆವರು ಹರಿಸಿ ದುಡಿದ ಹಣ ಅದು, ಅಂದು ಆ 50 ರೂಪಾಯಿಗಳು ಕೇವಲ ಹಣ ಆಗಿರಲಿಲ್ಲ. ಬದುಕಿಗೆ ಕಲಿಸಿದ ಬಹುದೊಡ್ಡ ಪಾಠ ಆಗಿತ್ತು. ಅಪ್ಪ ಮಾಡಿಟ್ಟ ಆಸ್ತಿಯನ್ನು ಲೆಕ್ಕವಿಲ್ಲದೆ ಖರ್ಚು ಮಾಡುವ ನಾವುಗಳು ಸ್ವಂತ ದುಡಿದಾಗ ಅದರ ಅನುಭವ ತಿಳಿಯುತ್ತದೆ ಎಂಬ ಸತ್ಯ ಗೋಚರಿಸಿದ ಕ್ಷಣ ಅದಾಗಿತ್ತು. ಕಣ್ಣು ತೇವ ಗೊಂಡಿತ್ತು. ದುಡಿಯುವ ಕೈಗಳ ನೋವು ಮೊದಲ ಬಾರಿಗೆ ಗೋಚರಿಸಿತ್ತು. ಅಂದು ರಸ್ತೆಯಲ್ಲಿ ಮರಳುವಾಗ ರಸ್ತೆ ಕೆಲಸ ಮಾಡುವ ಅದೆಷ್ಟೋ ಜೀವಗಳ ಮೇಲೆ ನನಗರಿವಿಲ್ಲದೆ ಅಕ್ಕರೆ ಮೂಡಿತ್ತು. 

ಆ 50 ರೂಪಾಯಿ ಕಲಿಸಿದ  ಪಾಠ ಇಂದು ಲಕ್ಷ  ರೂಪಾಯಿಗಳು  ಹೇಳಿಕೊಡುತ್ತಿಲ್ಲ....... 

ಮುಂದಿನ ವಾರ ಮತ್ತೆ ಸಿಗುತ್ತೇನೆ
ನಿಮ್ಮ ಗುರು


78 comments:

Dr.D.T.krishna Murthy. said...

ಮನ ಮುಟ್ಟುವಂತಹ ಬರಹ ಗುರು ಸರ್.ಆ ಐವತ್ತು ರೂಪಾಯಿಗಳಿಗೆ ನಿಮ್ಮ ಜೀವನದ ಆ ಹಂತದಲ್ಲಿ ಎಂತಹ ಬೆಲೆ!ಅದ್ಭುತ ಬರಹ.ಮುಂದುವರೆಸಿ.ನಮಸ್ಕಾರ.

ಸಾಗರದಾಚೆಯ ಇಂಚರ said...

ಡಾಕ್ಟ್ರೆ
ಅತ್ಯಂತ ವೇಗದ ಕಾಮೆಂಟಿಗೆ ಧನ್ಯವಾದ

ಅಂದಿನ ದಿನಗಳಲ್ಲಿ ಆ ಮೊದಲ ದುಡಿಮೆ ಬಹಳಷ್ಟು ಪಾಠ ಕಲಿಸಿತ್ತು

ಅಂದಿನ ದಿನಗಳನ್ನು ಎಂದಿಗೂ ಮರೆಯಲಾರೆ

ಬರುತ್ತಿರಿ

AshKuku said...

That was an awesomely written article with both its funny as well as serious sides.... It feels good, to receive our first earned money.... 'Cuz then we are all new to it & the memories are treasured for LIFE!!!!

Thanks for the wishes... Hugs))))

Ash....
(http://hastkala-oceanichope.blogspot.com/)

ಸಾಗರದಾಚೆಯ ಇಂಚರ said...

Asha,
thanks for your comments

Indeed its true that ''savi savi nenapu, saavira nenapu :)

Soumya. B said...

ತುಂಬಾ ಸುಂದರವಾಗಿ ಬರೆಯುತ್ತೆರಿ ಸರ್ . ಸಲೀಸಾಗಿ ಓದಿಸಿಕೊಂಡು ಹೋಗುತ್ತದೆ. ಐವತ್ತು ರೂಪಾಯಿಗಳ ಮಹತ್ವವನ್ನು ಮನಮುಟ್ಟುವಂತೆ ತಿಳಿಸಿದ್ದೀರಿ :)ಧನ್ಯವಾದಗಳು.

bhavani said...

Nice article my dear brother!!

Shashi jois said...

ಗುರು ನಿಜಕ್ಕೂ ಖುಷಿ ಆಯ್ತು ಓದಿ..ನಿಜ ಬೆವರಿನ ಬೆಲೆ ಹಾಗೇನೆ ಖುಷಿ ತರುವಂತದ್ದು...
ಇಂಥ ಪೆಟ್ಟು ತಿನ್ನೋದು ಒಳ್ಳೆದಲ್ವಾ!!

Anonymous said...

ತುಂಬಾ ಸುಂದರವಾದ ಬರಹ..ನನ್ನ ಹಳೆಯ ನೆನಪುಗಳನ್ನು ಹಸಿರುಗೊಳಿಸಿದ್ದಕ್ಕೆ ಧನ್ಯವಾದಗಳು..ನಾನೂ ಉಡುಪಿಯಲ್ಲೇ ಓದಿದ್ದು..ಅಲ್ಲಿನ ಸರ್ವಿಸ್ ಬಸ್ ಸ್ಟ್ಯಾಂಡ್, ಸಿಟೀ ಬಸ್ ಸ್ಟ್ಯಾಂಡ್, ಡೈಯಾನ, ಕಲ್ಪನಾ ಗಳ ನೆನಪು ಹಚ್ಚ ಹಸಿರಾಗಿವೆ..ನಮ್ಮ ಹಾಸ್ಟೆಲ್‌ನಿಂದ ಹೊರಗೆ ಹೋಗಲು ವಾರಕ್ಕೆ ಒಂದು ದಿನ ಮಾತ್ರ ಅನುಮತಿ ನೀಡುತ್ತಿದ್ದರು..ಗೆಳತಿಯರ ದಂಡು ಗುಂಪು ಗುಂಪಾಗಿ ಹೋಗುತ್ತಿದ್ದುದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ..

ತುಂಬಾ ತುಂಬಾ ಧನ್ಯವಾದಗಳು..

ಸಾಗರದಾಚೆಯ ಇಂಚರ said...

ಸೌಮ್ಯಾ,
ಬದುಕಿನ ಬತ್ತಳಿಕೆಯಲ್ಲಿ ಇನ್ನೂ ಅನೇಕ ಅಸ್ಥ್ರಗಳಿವೆ
ನಿಮ್ಮೊಂದಿಗೆ ಎಲ್ಲವನ್ನೂ ಹೇಳಿಕೊಳ್ಳಬೇಕು ಎನಿಸಿದೆ
ಹೇಳುತ್ತಿದ್ದೇನೆ
ನೀವೆಲ್ಲ ಓದುತ್ತಿದ್ದಿರಿ
ಅದೇ ಸಂತಸ

ಸಾಗರದಾಚೆಯ ಇಂಚರ said...

Bhavani

thank you sister

ಸಾಗರದಾಚೆಯ ಇಂಚರ said...

ಶಶಿ ಅಕ್ಕ

ಹೌದಲ್ದ

ಬೆವರಿನ ಬೆಲೆ ಹರಿಸಿದವನಿಗೆ ಮಾತ್ರ ಗೊತ್ತು

ಯಾರೋ ಮಾಡಿಟ್ಟ ಆಸ್ತಿ ನಾವು ತಿಂತ ಇದ್ರೆ ನಮಗೆ ಗೊತ್ತೇ ಆಗ್ತಿಲ್ಲೆ

ಸಾಗರದಾಚೆಯ ಇಂಚರ said...

ಆಕಾಶಬುಟ್ಟಿ

ಹೌದಾ, ನೀವು ಅಲ್ಲೇ ಓದಿದ್ದಾ

ಉಡುಪಿಯ ಬಗೆಗೆ ಬರೆದಷ್ಟೂ ಮುಗಿಯದ ಕಥೆಗಳಿವೆ

ಅಲ್ಲಿ ನೋಡದ ಸಾಂಸ್ಕ್ರತಿಕ ಸಂಜೆಗಳಿಲ್ಲ

ಅದರ ಬಗೆಗೆ ಮುಂದೆ ಬರೆಯುತ್ತೇನೆ

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

sunaath said...

ಮೊದಲ ದುಡಿಮೆಯ ಹಣಕ್ಕೆ ಬೆಲೆ ಕಟ್ಟಲಾಗದು ಅಲ್ಲವೆ? ತುಂಬ ಸ್ವಾರಸ್ಯಪೂರ್ಣವಾಗಿದೆ ಲೇಖನ.

ಸಿಮೆಂಟು ಮರಳಿನ ಮಧ್ಯೆ said...

ಗುರು...

ನಿಜ ನಮ್ಮ ಮನೆಯ ಹಿರಿಯರು ನಮ್ಮ ಓದಿಗಾಗಿ ಮಾಡಿದ ತ್ಯಾಗ ನಾವು ಮರೆಯುವಂತಿಲ್ಲ..
ದುಡಿದ ಹಣ..
ಅದರ ಅನುಭವ ಮನತಟ್ಟುವಂತೆ ತಿಳಿಸಿದ್ದೀರಿ...

ನೀವು "ಪೆಟ್ಟು" ತಿಂದಿದ್ದು ಓದಿ ನಗು ಬಂತು...

ಅಭಿನಂದನೆಗಳು..

prabhamani nagaraja said...

ಮೊದಲ ಸ್ವ೦ತ ಗಳಿಕೆಯ ಮಹತ್ವವನ್ನು ಮನಸೂರೆಗೊಳ್ಳುವ೦ತೆ ನಿರೂಪಿಸಿದ್ದೀರಿ ಗುರು ಸರ್, ಮು೦ದಿನ ಬರಹಕ್ಕಾಗಿ ನಿರೀಕ್ಷಿಸುತ್ತೇನೆ. ನನ್ನ ಬ್ಲಾಗ್ ಗೊಮ್ಮೆ ಬನ್ನಿ.

ಸಾಗರದಾಚೆಯ ಇಂಚರ said...

sunaath ಸರ್

ನಿಮ್ಮ ಮಾತು ನಿಜ

ಮೊದಲ ದುಡಿಮೆ ಅತೀ ಮಹತ್ವದ್ದು

ಅದರ ಮರೆತು ಇರಲು ಸಾದ್ಯವೇ?

ಬರುತ್ತಿರಿ

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ

ಇಂದು ಎಷ್ಟೋ ಜನರು ಅಪ್ಪ ಮಾಡಿಟ್ಟ ಹಣದಲ್ಲಿ ಬದುಕುತ್ತಿದ್ದಾರೆ

ಬದುಕು ಹೀಗೆ ಎಷ್ಟು ದಿನ?

ಖಾಲಿಯಾಗುವಷ್ಟು ದಿನ ಅಲ್ಲವೇ?

ನಾವು ದುಡಿದಾಗ ನಮಗೆ ಸಿಗುವ ಸಂತೋಷವೇ ಬೇರೆ

ಹೆತ್ತವರ ಪರಿಶ್ರಮ ಸಾರ್ಥಕತೆ ಪಡೆಯುವುದು ನಾವು ದುಡಿದು ಅವರೆದುರಿಗೆ ನಿಂತಾಗ ಅಲ್ಲವೇ?

''ಪೆಟ್ಟಿನ '' ಕಥೆ ಇನ್ನೂ ಇದೆ

ಮುಂದೆ ಹೇಳುತ್ತೇನೆ

ಬರುತ್ತಿರಿ

ಸಾಗರದಾಚೆಯ ಇಂಚರ said...

ಪ್ರಭಾಮಣಿ ನಾಗರಾಜ ಅವರೇ

ದಯವಿಟ್ಟು ಬ್ಲಾಗ್ ಗೆ ಬರ್ದೇ ಇದ್ದಿದ್ದಕ್ಕೆ ಕ್ಷಮಿಸಿ

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಮೊದಲ ದುಡಿಮೆ ಒಂದು ರೀತಿಯ ಸ್ವಾಭಿಮಾನ ಮಾತ್ರವಲ್ಲ, ಧೈರ್ಯವನ್ನೂ ಕೊಡುತ್ತದೆ

Ganapati Bhat said...

Chennagiddo....nanu 70 rupayinda 100 rupayivarige pettinge hoyde :D

ಜಲನಯನ said...

ಡಾಕ್ಟ್ರೇ, ಐವತ್ತು ಐವತ್ತು ಬದುಕಿನ ದಾರಿಗಳನ್ನು ತೋರುತ್ತೆ ಎನ್ನೋದಕ್ಕೆ ನಿಮ್ಮೈವತ್ತೇ ಸಾಕ್ಷಿ...ಟೂರ್ ಅಂತ ಹೋದಾಗ ಅಪ್ಪ ಖರ್ಚಿಗೆ ಅಂತ ೧೦-೧೫ ಕೇಳಿದ್ರೆ ೨೦-೨೫ ಕೊಡ್ತಿದ್ದ ಇರ್ಲಿ ಇಟ್ಕೋ ..ಅಕಸ್ಮಾತ್ ಕಮ್ಮಿ ಆದ್ರೆ ಯಾರನ್ನ ಕೇಳ್ತೀಯಾ ಅಂತ ಕೊಟ್ಟು ನಾನು ವಾಪಸ್ ಬಂದು ೨೦ ಕ್ಕೂ ಹೆಚ್ಚು ಖರ್ಚುಮಾಡಿದ್ರೆ..ಯಾಕೆ ನೀನು ಕೇಳಿದ್ದು ಹದಿನೈದು ಆದ್ರೂ ೨೦ ಕ್ಕೆ ಮೀರಿ ಖರ್ಚು ಮಾಡ್ದೆ..? ಅಂತ ಕೇಳ್ತಿದ್ದ ನನ್ನ ಹತ್ರ ಸಮಂಜಸ ಕಾರಣ ಇಲ್ದೆ ಇರ್ತಿದ್ರೆ...ಹೇಳ್ತಿದ್ದದ್ದು..."ಹೌದಪ್ಪಾ ಕಷ್ಟಪಟ್ಟು ಬೆವರು ಸುರಿಸಿ ದುಡಿದಿದ್ರೆ ಗೊತ್ತಾಗೋದು ನಿನಗೆ.." ಅಂತ ನವಿರಾಗಿ ಗದರಿ ಸುಮ್ಮನಾಗ್ತಿದ್ದ...ಎಷ್ಟು ನಿಜ ಅಲ್ವೇ...?
ತುಂಬಾ ಚನ್ನಾಗಿ ವಿವರಿಸಿ ಬರೆದಿದ್ದೀರಿ...ಜೈ ಹೋ

thandacool said...

ನಂಗವೆಲ್ಲಾ ಬತ್ವನಾ ಅದ್ರಲ್ಲಿ....ಪೆಟ್ಚಸ್ಟ್ ಗಳ ಸಾಲಲ್ಲಿ.. ರಥಬೀದಿಯ ಶಿರೂರು ಮಠದ ಕಟ್ಟೆಯಲ್ಲಿ ಕುಳಿತು....ನೆನಪು ಮಾಡಡ್ದೋ ದೋಸ್ತಾ...ಒಳ್ಳೆ ಬರವಣಿಗೆ

prakash said...

ಬರಹ ತುಂಬಾ ಚೆನ್ನಾಗಿದೆ.ಘಟ್ಟದ ಕೆಳಗಿನವರ ಬಗ್ಗೆ ಇರುವ ನಿಮ್ಮ ಒಳ್ಳೆಯ ಅಭಿಪ್ರಾಯಕ್ಕೆ ತುಂಬಾ ದನ್ಯವಾದಗಳು.

nimmolagobba said...

ನಿಮ್ಮ ಜೀವನ ಯಾತ್ರೆಯ ನೆನಪುಗಳು ಇಂದಿನ ಹಲವು ಕಿರಿಯರಿಗೆ ಉತ್ತಮ ಉದಾಹರಣೆ , ಅಂದಿನ ಇಂತಹ ಘಟನೆಗಳು ನಿಮ್ಮನ್ನು ಸಮಾಜಕ್ಕೆ ಉತ್ತಮ ಕೊಡುಗೆಯಾಗಿ ಹೊಮ್ಮಲು ಕಾರಣವಾಗಿವೆ. ಇಂತಹ ಘಟನೆಗಳನ್ನು ಮರೆಯದೆ ನೆನಪಿಸಿಕೊಂಡ ನಿಮಗೆ ನನ್ನ ನಮನಗಳು .ನಿಮ್ಮ ಕೀರ್ತಿ ಇನ್ನೂ ಪಸರಿಸಲಿ. ಶುಭಾಶಯಗಳು.ದಯಮಾಡಿ ನಿಮ್ಮ ಮೇಲ್.ಐ.ಡಿ ನನ್ನ ಮೇಲ್ ಗೆ ಕಳುಹಿಸಿಕೊಡಿ.[balusmiles@gmail.com].

--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

kamal said...

Tumba Chennagi barediddiya....Odalu swalp hasyamayavagiddaru lekan seriousagide....

kamal said...

tumba chennagide..spasta mattu satya lekhana.....waiting for next episode

ವಾಣಿಶ್ರೀ ಭಟ್ said...

''ಘಟ್ಟದ ಕೆಳಗಿನ ನೀರು, ಜೊತೆಯಲಿ ಹರಿಯುವ ಬೆವರು
ಎಳೆದಿದೆ ಬದುಕಿನ ತೇರು, ಬದುಕುವೆ ಎಲ್ಲೇ ಹೋದರೂ''

edu nanna anubhavakku kooda bandiruvudu.. olleya baraha anna.. waiting for the next part!!

ಸಾಗರದಾಚೆಯ ಇಂಚರ said...

Ganapati,
neenu mahaan pettist hangare :)

bartaa irappa

ಸಾಗರದಾಚೆಯ ಇಂಚರ said...

ಜಲನಯನ ಅಜಾದ್ ಸರ್

ಮನೆಯಲ್ಲಿ ಆ ದಿನಗಳಲ್ಲಿ ತಂದೆಯವರು ಎಷ್ಟು ಕೇಳಿದ್ರು ಹಣ ಕೊಡ್ತಿದ್ರು ಆದರೆ
ಆಮೇಲೆ ಮಾಡಿದ ಖರ್ಚಿಗೆ ಲೆಕ್ಕ ಕೇಳ್ತಿದ್ರು
ಎಲ್ಲಿ ಮಗ ಹಣವನ್ನು ದುಂಡು ವೆಚ್ಚಕ್ಕೆ ಹಾಲು ಮಾಡ್ತಾನೋ ಅನ್ನೋ ಆತಂಕ

ಅದೇ ರೀತಿ ಕೊಟ್ಟ ಹಣವನ್ನ ಸರಿಯಾಗಿ ಉಪಯಿಗಿಸೋದು ನಮಗೆ ರೂಡಿ ಆಗಿ ಹೋಗಿತ್ತು
ಆದರೆ ಇಂದು ಮಕ್ಕಳಿಗೆ ಹಣ ಬೇಕು
ಆದರೆ ಲೆಕ್ಕ ಕೇಳಬಾರದು
ಆಲ್ವಾ

ಸಾಗರದಾಚೆಯ ಇಂಚರ said...

thandacool

ಹೌದೋ ಮಾರಾಯ, ನಿಂಗೆ ಇಲ್ದೆ ಹೆಂಗೆ

ಉಡುಪಿಯ ನೆನಪು ನೆನೆದಷ್ಟು ಸಾಗರ

ಆ ಶಿರೂರ ಮಠದ ಕತ್ತೆಯ ಮೇಲಿನ ಪಟ್ಟಾಂಗ ಹೆಂಗೆ ಮರೆಯದು

ಸಾಗರದಾಚೆಯ ಇಂಚರ said...

prakash ಸರ್

ಘಟ್ಟದ ಕೆಳಗಿನವರ ಜೀವನ ನನ್ನನ್ನು ಬಹುವಾಗಿ ಸೆಳೆದಿದೆ

ಬಹಳ ಚತುರರು ಅವರು

ಸಾಗರದಾಚೆಯ ಇಂಚರ said...

nimmolagobba Baalu Sir

ನಿಮ್ಮ ಪ್ರೀತಿಯ ಮಾತುಗಳಿಗೆ ವಂದನೆಗಳು

ಹೀಗೆಯೇ ಬರುತ್ತಿರಿ

ಹರಸುತ್ತಿರಿ

ನಿಮಗೆ ಮೇಲ್ ಮಾಡಿದ್ದೇನೆ ಆದರೆ ಯಾಕೋ ತಿರುಗಿ ಬಂತು

ಮತ್ತೊಮ್ಮೆ ಮೇಲ್ ಮಾಡುತ್ತೇನೆ

ಬರುತ್ತಿರಿ

ಸಾಗರದಾಚೆಯ ಇಂಚರ said...

amal

ನಿನ್ನ ಕಾಮೆಂಟ್ ನೋಡಿ ತುಂಬಾ ಸಂತಸವಾಯಿತು

ಸ್ವಲ್ಪ ಹಾಸ್ಯ ಇಲ್ಲದಿದ್ದರೆ ಓದಲು ಕಷ್ಟ ಎಂದು ಹಾಸ್ಯ ಹಾಕಿದೆ

ಆದರೆ ಆ ಜೀವನ ನಿನಗೆ ಗೊತ್ತಲ್ಲ

ನನ್ನ ಪ್ರತಿ ಹೆಜ್ಜೆಯಲ್ಲೂ ಜೊತೆಗೆ ಇದ್ದವ ನೀನು

ನಿನಗೆ ಬೇರೆ ಹೇಳಬೇಕೇ

ಸಾಗರದಾಚೆಯ ಇಂಚರ said...

ವಾಣಿಶ್ರೀ ಭಟ್

ಘಟ್ಟದ ಕೆಳಗಿನವರ ಬದುಕೇ ಹಂಗೆ ಅಲ್ದಾ

ಅಭಿಪ್ರಾಯಕ್ಕೆ ಥ್ಯಾಂಕ್ಸ್

ಬರ್ತಾ ಇರು

ಖಂಡಿತ ಮುಂದಿನ ಭಾಗ ಶೀಗ್ರದಲ್ಲಿ :)

ಚುಕ್ಕಿಚಿತ್ತಾರ said...

ದುಡಿದದ್ದು ಐದಾಗಲೀ ಐವತ್ತಾಗಲೀ ಅದು ಬೆಲೆಕಟ್ಟಲಾಗದ ಅನುಭವ.. ಅದೇ ಅನುಭವದ ಮೆಟ್ಟಿಲುಗಳೇರಿ ಇ೦ದು ಉನ್ನತ ಹ೦ತದಲ್ಲಿದ್ದೀರಿ.. ಬರಹ ಸು೦ದರವಾಗಿದೆ..

nagendra hegde said...

Bhavayya truly amazing. I felt very sorry about myself. Bcos I dont even know when did I earn first rupee by own effort.

By reading ur article I am just thinking about the small small moments (with High pleasure and value)which I missed out in my life.

Thanks for that.

ಸಾಗರದಾಚೆಯ ಇಂಚರ said...

ಚುಕ್ಕಿಚಿತ್ತಾರ

ಬದುಕಿನ ಕಷ್ಟಗಳ ನೆನಪು ಸದಾ ನೆನೆಯುತ್ತಿದ್ದಾರೆ
ಬಾಳು ಹಸನು ಅಲ್ಲವೇ

ಆ ದಿನಗಳ ನೆನಪು ಇಂದು ಸ್ವೀಡನ್ನಿನ ಹಿಮಗಳಲ್ಲಿ ಕುಳಿತು ನೆನಪು ಮಾಡಿಕೊಳ್ಳುತ್ತಿದ್ದೇನೆ

ಬರುತ್ತಿರಿ

ಸಾಗರದಾಚೆಯ ಇಂಚರ said...

Dear Bavayya,

those are the days which inspired me to learn and earn. Still many more memorable moments are there,
will write in future.

Dont think that you missed those moments...
Gone are the days....
One thing is true, never ever forget small small things..

SANTOSH MS said...

Guru Sir,

Really a good writeup and explanation. Your feelings are brought out well.

ಸಾಗರದಾಚೆಯ ಇಂಚರ said...

Santhosh,

thanks for the comments

keep coming

Anantha said...

Uttama baraha Dr Guru sir. Jeevanadalli nadeyuva inthaha ghatanegalu badukinalli paathavannu kalisuttave. Hanchikondaddakke vandanegalu.

ananth

ಸಾಗರದಾಚೆಯ ಇಂಚರ said...

Ananth sir

thank you so much for your comments

bartaa iri

ಡಾ. ಚಂದ್ರಿಕಾ ಹೆಗಡೆ said...

nenapina buttiya tuttu tuumbaa saviyaagide.....

ಸಾಗರದಾಚೆಯ ಇಂಚರ said...

Dear Chandrika

thank you so much

butti innoo ide
mundina vaara taruttene mattashtu

ರಾಜೇಶ್ ನಾಯ್ಕ said...

ಗುರು,
ಬಹಳ ಚೆನ್ನಾದ ಬರಹ. ನಿಮ್ಮ ಮೊದಲ ದುಡಿಮೆಯನ್ನು ಉತ್ತಮವಾಗಿ ಬಣ್ಣಿಸಿದ್ದೀರಿ. ತುಂಬಾ ಆಪ್ತವೆನಿಸಿತು.
ಈಗ ’ಪೆಟ್ಟಿಗೆ’ ಹೋದರೆ ೧೫೦-೧೮೦ ರೂಪಾಯಿ ತನಕ ಕೊಡುತ್ತಾರೆ.

PARAANJAPE K.N. said...

ಉಡುಪಿಯ ಮಠ, ರಥಬೀದಿ ಮತ್ತು ಅಲ್ಲಿನ ಪರಿಸರದ ಜೊತೆ ನಿಮಗಿರುವ ಭಾವನಾತ್ಮಕ ಸ೦ಬ೦ಧ, ನೀವು ಪೆಟ್ಟಿಗೆ ಹೋದದ್ದು, ನಿಮ್ಮ ಮೊದಲ ಗಳಿಗೆ - ಎಲ್ಲವೂ ಚೆನ್ನಾಗಿದೆ. ಇನ್ನಷ್ಟು ಬರೆಯಿರಿ. ನಾನು ಕೂಡ 2000 -2003 ರ ನಡುವೆ ಉಡುಪಿಗೆ ಪ್ರತೀ ವಾರ ಬರ್ತಿದ್ದೆ. ಅಲ್ಲಿ ನನ್ನ ಮಿತ್ರರೊಬ್ಬರು ಶೇರ್ ಬ್ರೋಕರ್ ಆಗಿದ್ರು. ಅದು ವಿದ್ಯಾಸಮುದ್ರ ಮಾರ್ಗದಲ್ಲಿದೆ. ನಿಮ್ಮ ಉಡುಪಿಯ ಅನುಭವ ಓದಿದಾಗ ಏನೇನೋ ನೆನಪಿಗೆ ಬಂತು.

Vidya Ramesh said...

ಗುರು ಸರ್, ನಿಮ್ಮ ಕಥೆ ಓದ್ತಾ ಇದ್ರೆ, ನಂಗೆ ನಾನು ಸಣ್ಣಕ್ಕಿದ್ದಾಗ ಪಕ್ಕದ ಮನೆಯವ್ರಿಂದ ೨೦ ರೂಪಾಯಿ ಸಾಲ ತರ್ತಾ ಇದ್ದದ್ದು ನೆನಪಾತು. ನಿಜವಾಗ್ಲೂ ಬೆವರು ಸುರ್ಸಿ ದುಡಿದು ತಿನ್ನೋ ಖುಷಿ ಪುಕ್ಕಟೆ ಕೊಟ್ಟಿದ್ರಲ್ಲಿ ಇರ್ತಿಲ್ಲೆ ಅಲ್ದಾ?

Chaithrika said...

ಚೆನ್ನಾಗಿದೆ... ಇನ್ನೂ ಮುಂದುವರಿಸಿ. "ಪೆಟ್ಟಿಗೆ ಬರುತ್ತೀಯಾ?" ಎಂದದ್ದು ನಗು ತರಿಸಿತು.

Chaithrika said...

ದಕ್ಷಿಣ ಕನ್ನಡದವರ ಮಂಡೆ ಬಗ್ಗೆ ಓದಿದಾಗ ಒಂದು ವಿಷಯ ನೆನಪಾಯಿತು. ನಾನು ನಾಲ್ಕನೇ ತರಗತಿ ಕಲಿತದ್ದು ಮೈಸೂರಿನಲ್ಲಿ. ಆ ಒಂದು ವರ್ಷ ನನ್ನ ತಂದೆಯವರು Ph.D. ಗಾಗಿ ಅಲ್ಲಿ ನೆಲೆಸಬೇಕಾಗಿತ್ತು. ನನ್ನನ್ನು ಶಾಲೆಗೆ ಸೇರಿಸಲು ಕನ್ನಡ ಮಾಧ್ಯಮ ಶಾಲೆಯೊಂದಕ್ಕೆ ಕರೆದೊಯ್ದರು. ಅಲ್ಲಿ interview ಎಂದು Principal ಕರೆದರು. ನಾನು ದಕ್ಷಿಣ ಕನ್ನಡದವಳೆಂದು ತಿಳಿದ ತಕ್ಷಣ "ಇನ್ನೇಕೆ interview?" ಎಂದು ಕೂಡಲೇ ಶಾಲೆಗೆ ಸೇರಿಸಿಕೊಂಡರು!
ನನ್ನ ಅಲ್ಲಿನ ಸಹಪಾಠಿಗಳಲ್ಲಿ ಹೆಚ್ಚಿನವರು tuition ಗೆ ಹೋಗುತ್ತಿದ್ದರು. ಅಷ್ಟು ಚಿಕ್ಕ ತರಗತಿಗೆ tuition ಏಕೆ ಎಂದು ಕೇಳಿದರೆ "ನಾವೆಲ್ಲ ಒಂದನೇ ತರಗತಿಯಿಂದಲೇ tuition ತೆಗೆದುಕೊಳ್ಳುತ್ತೇವೆ. ನೀನು ಮನೇಲೇ ಹೇಗ್ ಓದ್ಕೋತೀಯೇ?" ಅಂದಾಗ ನಾನು ಪೆಚ್ಚು!

Santosh Hegde Ajjibal said...

ಪ್ರೀಯ ಗುರು
ಕುರುಡು ಕಾಂಚಾಣ ಕುಣಿಯುತ್ತಲಿತ್ತು
ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು
ಕುರುಡು ಕಾಂಚಾಣ ........
ಇದು ಇಂದಿನ ಸ್ತಿತಿ
ಆದರೆ ನಮ್ಮ ತಂದೆ ತಾಯಿಗಳು ಇದೇ
ಕಾಂಚಾಣಕ್ಕಾಗಿ ಪಟ್ಟ ಕಷ್ಟ ಕಾರ್ಪಣ್ಯ ನಮಗೆ ಲೆಕ್ಕಕಿಲ್ಲ ಯಾ ಗೊತ್ತಿಲ್ಲ
ಮೊತ್ತೊಮ್ಮೆ ದುಡ್ಡಿನ ಬೆಲೆ ಜ್ಞಾಪಿಸಿದ್ದಿರಿ
ದನ್ಯವಾಧಗಳು
ಪ್ರಥಮ ದುಡಿಮೆ ಯಾವಾಗಲು ಮಧುರವಾಗಿರುತ್ತದೆ

ಸಾಗರದಾಚೆಯ ಇಂಚರ said...

ರಾಜೇಶ್ ಸರ್
ನಾವಿರುವಾಗ ೫೦ ರೂಪಾಯಿ ಮಾತ್ರ ಕೊಡುತ್ತಿದ್ದರು ಆಗ ಅದೇ ದೊಡ್ಡ ಮೊತ್ತ ಎನಿಸಿತ್ತು

ಪೆಟ್ಟಿನ ಕಥೆ ತುಂಬಾ ಇದೆ

ಮತ್ತೆ ಬರೆಯುತ್ತೇನೆ

ಬರ್ತಾ ಇರಿ

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್

ಉಡುಪಿಯ ರಥಬೀದಿಯ ಜೊತೆ ಅನೇಕ ಮಧುರ ನೆನಪುಗಳಿವೆ

ಎಲ್ಲ ಸ್ನೇಹಿತರು ಪ್ರತಿ ದಿನ ಸಂಜೆ ಅಲ್ಲಿ ಸೇರುತ್ತಿದ್ದೆವು

ಅದೊಂದು ಮಧುರ ಅನುಭವ

ಹೀಗೆಯೇ ಬರುತ್ತಿರಿ ಬ್ಲಾಗ್ ಕಡೆಗೆ

ಸಾಗರದಾಚೆಯ ಇಂಚರ said...

ವಿದ್ಯಾ

ನಿಜವಾಗಲೂ ಈಗ ನಮಗೆ ದುಡ್ಡಿನ ಬೆಲೆ ಗೊತ್ತಿಲ್ಲೆ

ಮನುಷ್ಯಂಗೆ ದುಡ್ಡು ಹೆಚ್ಚೆಚ್ಚು ಕೊಟ್ಟಷ್ಟೂ ಆಟ ಅದರ ಬೆಲೆ ಮರಿತ ಹೋಗ್ತಾ

ಆಗಿನ ಆ ಶ್ರಮ ಈಗ ಇರ್ತೆ ಇಲ್ಲೇ

ಸಾಗರದಾಚೆಯ ಇಂಚರ said...

ಚೈತ್ರಿಕ
ನಿಮಗೆ ನಗು, ಆದರೆ ನನಗೆ ಆ ಸಮಯದಲ್ಲಿ ನಡುಕ ಬಂದಿತ್ತು\
ಉಡುಪಿಗೆ ಹೋದ ಮೊದಲ ದಿನಗಳವು

ಪೆಟ್ಟು ಅಂದರೆ ಹೊಡೆಯುವುದು ಅಂತಲೇ ತಿಳಿದುಕೊಂಡಿದ್ದೆ

ಅರ್ಥ ತಿಳಿದ ಮೇಲೆ ನಗುವ ಸರದಿ ನನ್ನದು ಆಗಿತ್ತು

ಸಾಗರದಾಚೆಯ ಇಂಚರ said...

ಸಂತೋಷ್ ಹೆಗಡೆಯವರೇ

ಬ್ಲಾಗ್ ಗೆ ಸ್ವಾಗತ

ನಿಮ್ಮ ಮಾತುಗಳು ಸತ್ಯ

ದುಡ್ಡಿನ ಬೆಲೆ ನಮಗೆ ಈಗ ಅನಿಸುತ್ತಿಲ್ಲಾ

ಮುಂದಿನ ಪೀಳಿಗೆ ಹೇಗೋ ಗೊತ್ತಿಲ್ಲ

shivu.k said...

ಗುರು ಸರ್,

ನಿಮ್ಮ ಬದುಕಿನ ಬರಹ ಮನತಟ್ಟುತ್ತದೆ. ಇಪ್ಪತ್ತು ವರ್ಷಗಳ ಹಿಂದೆ ನಾನು ತಿಂಗಳಿಗೆ ಇಪ್ಪತ್ತು ರೂಪಾಯಿ ದುಡಿದು ಅದರಲ್ಲೇ ನನ್ನ ಕಾಲೇಜಿಗೆ ಬೇಕಾದ ಪುಸ್ತಕ ಪೆನ್ನು ಇತ್ಯಾದಿ ಕೊಳ್ಳಬೇಕಾದ ಪ್ರಸಂಗವನ್ನು ನೆನಪಿಸಿತು. ಮೊದಲ ಗಳಿಕೆ ಆನಂದವೇ ಬೇರೆ ಅಲ್ವಾ ಸರ್..ಮುಂದಿನ ಬರಹಕ್ಕಾಗಿ ಕಾಯುತ್ತಿದ್ದೇನೆ.

ಸವಿಗನಸು said...

ಗುರು,
ಐವತ್ತು ರೂಪಾಯಿಗಳಿಗೆ ಆ ಹಂತದಲ್ಲಿ ಎಂತಹ ಬೆಲೆ...
ಬಹಳ ಸುಂದರವಾದ ಬರಹ....

ಮನಮುಕ್ತಾ said...

ಜೀವನದ ಅನುಭವ ತು೦ಬಿದ ಲೇಖನ..ಚೆನ್ನಾಗಿ ಬರೆದಿದ್ದೀರಿ.ಮೊಟ್ಟ ಮೊದಲು ದುಡಿದ ದುಡ್ಡು ಬೆಲೆಕಟ್ಟಲಾಗದ್ದು..ಜೀವನ ಪೂರ್ತಿ ಸಿಹಿ ನೆನಪನ್ನು ಕೊಡುತ್ತಿರುತ್ತದೆ.

ವಿಚಲಿತ... said...

ಹಾಗೆಯೇ ನೋಡಿ..
ನನ್ನ ಮೊದಲ ಸಂಪಾದನೆ ಕೂಡ ನನ್ನ ಮನ ತುಂಬಿಸಿತ್ತು..

HegdeG said...

Sundaravaada baraha.

Mohan Hegade said...

ಗುರುಜಿ,

ನಿಮ್ಮ ಬದುಕಿನ ಪಯಣದ ೨ನೇ ಭಾಗ ಓದಿದಾಗ, ಅದರಲ್ಲೂ ನಿಮ್ಮಂತೆ ಬದುಕನ್ನು ಅರಸಿಕೊಂಡು ಉಡುಪಿ ಬಂದು ಈಗ ಇಲ್ಲಿಯೇ, ಅಂದರೆ ಮಣಿಪಾಲದಲ್ಲಿ ದಿನದ ಹೊಟ್ಟೆ ತುಂಬಿಸಿ ಕೊಳ್ಳವ ಕಾಯಕ ಮಾಡುತ್ತಿರುವ ನಾ ನಿಮ್ಮ ಬರಹದ ಪ್ರತಿ ಅಕ್ಷರವನ್ನು ಅನುಭವಿಸಿದ್ದೇನೆ. "ಪೆಟ್ಟು" ಇಲ್ಲಿ ಓದಲು ಬರುವವರಿಗೆ ಒಂದು ಸಣ್ಣ ಅರ್ಥಿಕ ಆದರ, ಆದರೆ ಅದನ್ನೇ ಹಚ್ಚಿಕೊಂಡು ತಮ್ಮ ವಿದ್ಯಾರ್ಥಿಜೀವನವನ್ನೇ ಹಾಳುಮಾಡಿಕೊಂಡು ಈಗ ಅನಿವಾರ್ಯವಾಗಿ ಜೀವನ ಸಾಗಣೆಗೆ ಅದನ್ನೇ ಮಾಡುವವರನ್ನು ಕಂಡಾಗ ಬೇಸರ ಆಗುತ್ತೆ.
ಇಲ್ಲಿಯ ಜೀವನ ಕ್ರಮ ಕಂಡಾಗ ಉತ್ತರ ಕನ್ನಡ ಜನರು ಎಸ್ಟೆ ಹಣವಂತರಾದರು, ತಾ ಬಡವ ಎಂದು, ಇರುವ ಮನೆಯನ್ನು ಕೂಡ ಒಂದು ಸುಂದರವಾದ ರೀತಿಯಲ್ಲಿ ಮಾಡಿಕೊಳ್ಳದಿರುವುದು ದುರಂತವೇ ಸರಿ ಅಲ್ವ. ಆಶ್ಚರ್ಯವೆಂದರೆ ಒಳ್ಳೆಯ ಕೆಲಸದಲ್ಲಿದ್ದು, ಕೈ ತುಂಬಾ ಸಂಬಳ ಬರುತ್ತಿದ್ದು, ಪರವುರು ವಾ ವಿದೇಶದಲ್ಲಿ ಇರುವವರು ಕೂಡ ತಮ್ಮ ಮನೆ, ಹುಟ್ಟುರಿಗೆ ಸಹಾಯ ಮಾಡುವುದು ಕಡಿಮೆ (ಕೆಲವರು ಇರಬಹುದು). ಆಶ್ಚರ್ಯವೆಂದರೆ ಇರುವ ತುಂಡು ತೋಟಕ್ಕೆ ಪಾಲು ಕೇಳಲು ಅವರು ಎಂದಿಗೂ ಸಿದ್ದ.

ಕ್ಷಮಿಸಿ ಗುರುಜಿ ನಮ್ಮನೆ ಆಲೆಮನೆ ರವಿವಾರ (೬-೨-೧೧) ಮುಗಿತು. ನಾ ಈಗ ಉಡುಪಿ ಬಂದಾಯ್ತು.

ತಾವು ಉಡುಪಿ ಬರುವ ಪ್ಲಾನ್ ಇದ್ದರೆ ಖಂಡಿತ ಸಿಗೋಣ.
ನನ್ನ ಜಂಗಮವಾಣಿ : ೯೮೪೪೩೨೩೩೫೩.

ದನ್ಯರಿ,

ಮೋಹನ ಹೆಗಡೆ.

Nempu Guru said...

ನಿಮ್ಮ ಬರವಣಿಗೆಯ ಶೈಲಿ ಉತ್ತಮವಾಗಿದೆ, ಓದಿಸಿಕೊಂಡು ಹೋಗುತ್ತದೆ. ನಿಮ್ಮ ಬ್ಲಾಗಿಗೆ ಇದು ಮೊದಲ ಭೇಟಿ. ಇನ್ಮುಂದೆ ತಪ್ಪದೇ ಓದುತ್ತೇನೆ :)

ವಿ.ಆರ್.ಭಟ್ said...

ಜೀವನದ ಮೊದಲ ಸ್ವಂತ ಗಳಿಕೆಯ ಅನುಭವ ಎಲ್ಲರಿಗೂ ಅನನ್ಯ! ವೃತ್ತಿ ಯಾವುದೇ ಇರಲಿ ಕೃಷಿಯೋ, ವ್ಯಾಪಾರವೋ, ನೌಕರಿಯೋ ಅಥವಾ ಇನ್ನೇನೋ ಪ್ರಥಮವಾಗಿ ಇನ್ನೊಬ್ಬರ ಕೈಯ್ಯಿಂದ ನಮ್ಮಕೈಗೆ ನಮಗಗಿ ಬಂದ ಹಣವನ್ನು ಕಂಡಾಗ ಆಗುವ ಆನಂದ ನಿಜಕ್ಕೊ ಮರೆಯಲಾಗದ್ದು. ವಿಷಯವನ್ನು ಹೃದಯಂಗಮವಾಗಿ ವಿವರಿಸಿದ್ದೀರಿ, ಶುಭಹಾರೈಕೆಗಳು, ಧನ್ಯವಾದ.

ಮನಸು said...

ಅಬ್ಬಾ..!! ಎಂತಹಾ ಬರಹ... ನೆಡೆದು ಬಂದ ಹಾದಿಯನ್ನು ಮರೆಯಬಾರದಂತೆ ಅದರಂತೆ ನಿಮ್ಮ ಹಿಂದಿನ ನಡಿಗೆಯನ್ನು ನೆನಪು ಮಾಡಿಕೊಂಡಿದ್ದೀರಿ.... ಅಂದು ೧೦ ರೂ ಸಹ ಎಷ್ಟು ಬೆಲೆ ಬಾಳುತ್ತಿತ್ತು. ನಿಮ್ಮ ಲೇಖನದಿಂದ ನಾವೂ ಹಿಂದಿನದ್ದನ್ನು ಮೆಲುಕುಹಾಕುವ ಹಾಗೆ ಮಾಡಿತು.
ಕ್ಷಮೆ ಇರಲಿ ತಡವಾದ ಅನಿಸಿಕೆಗಳಿಗೆ

ಸಾಗರದಾಚೆಯ ಇಂಚರ said...

ಶಿವೂ ಸರ್
ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್
ಮೊದಲ ಗಳಿಕೆಯ ಸಂತೋಷವೇ ಬೇರೆ

ಆ ದಿನಗಳು ಹಾಗಿತ್ತು

ಬರುತ್ತಿರಿ

ಸಾಗರದಾಚೆಯ ಇಂಚರ said...

ಸವಿಗನಸು ಮಹೇಶ್ ಸರ್

ನಿಜಕ್ಕೂ ಅಂದು ಇದ್ದ ಸಂತೋಷ ಇಂದು ಲಕ್ಷ ಕೊಟ್ಟರೂ ಇಲ್ಲ

ಹಣ ಸಂತೋಷ ಕೊಡುತ್ತದೆ ಎನ್ನುವುದು ಸುಳ್ಳು
\
ಹೀಗೆ ಬರುತ್ತಿರಿ

ಸಾಗರದಾಚೆಯ ಇಂಚರ said...

ಮನಮುಕ್ತ

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಹಾರೈಕೆ ಸದಾ ಇರಲಿ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ವಿಚಲಿತ

ಮೊದಲ ಸಂಪಾದನೆ ಕೊಡುವ ಸಂತೋಷವೇ ಬೇರೆ ಅಲ್ಲವೇ

ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಹೆಗ್ಡೆ ಯವರೇ

ಬ್ಲಾಗ್ ಗೆ ಸ್ವಾಗತ

ಹೀಗೆ ಬಂದು ಓದ್ತಾ ಇರಿ

ಸಾಗರದಾಚೆಯ ಇಂಚರ said...

ಮೋಹನ,
ನೀವು ಹೇಳುವುದು ಸರಿ
ಕೆಲವೊಮ್ಮೆ ನಾವು ಊರು ಮತ್ತು ಹೆತ್ತವರನ್ನು ಮರೆಯುತ್ತೇವೆ
ಬದುಕು ಹಾಗೆ ಆಗಬಾರದು ಎಂಬುದೇ ಆಶಯ

ನಿಮ್ಮ ಮನೆಯ ಆಲೆಮನೆ ಮುಗಿದು ಹೋಯಿತೆಂದು ಕೇಳಿ ಬೇಸರವಾಯಿತು

ಒಂದಾದರು ಆಲೆಮನೆ ಸಿಗುತ್ತದೆ ಅಂತಿದ್ದೆ

ಸಾದ್ಯವಾದರೆ ಭೆಟ್ಟಿಯಾಗೋಣ

ಪ್ರೀತಿ ಇರಲಿ

ಸಾಗರದಾಚೆಯ ಇಂಚರ said...

ನೆಂಪು ಗುರು

ನನ್ನ ಬ್ಲಾಗ್ ಗೆ ಸ್ವಾಗತ

ನನ್ನ ಅನುಭವಗಳ ಬರಹ ಬರೆದಿದ್ದೇನೆ

ತಪ್ಪಿದಲ್ಲಿ ತಿದ್ದಿ

ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ವಿ.ಆರ್.ಭಟ್ ಸರ್

ನೀವು ಹೇಳೋದು ನಿಜ

ಮನುಷ್ಯ ಕಷ್ಟ ಪಟ್ಟು ಬೆವರು ಸುರಿಸಿ ಗಳಿಸಿದ ಹಣದ ರುಚಿಯೇ ಬೇರೆ

ಅದೇ ಹಣ ಜೂಜಾಡಿಯೋ, ಇನ್ಯಾವುದರಿಂದಲೋ ಬಂದರೆ ರುಚಿಸದು ಅಲ್ಲವೇ?

ಬರುತ್ತಿರಿ

ಸಾಗರದಾಚೆಯ ಇಂಚರ said...

ಮನಸು

ಹಿಂದಿನ ಹೆಜ್ಜೆಗಳು ಮುಂದಿನ ಹೆಜ್ಜೆಗೆ ಭದ್ರ ಸೋಪಾನ

ಕೆಲವು ಹಿಂದಿನ ಹೆಜ್ಜೆಗಳು ಮುಳ್ಳಂತೆ ಚುಚ್ಚಿರುತ್ತವೆ

ಅಂಥಹ ಹೆಜ್ಜೆಗಳ ಬಗೆಗೆ ಎಚ್ಚರ ದಿಂದ ಇರಬೇಕು ಅಷ್ಟೇ

ತಡವಾಗಿ ಬಂದಿದ್ದಕ್ಕೆ ಬೇಸರವಿಲ್ಲ

ಬಂದು ಓದುತ್ತಿರಲ್ಲ ಎಂಬ ಸಂತಸವಿದೆ

ಸದಾ ಬರುತ್ತಿರಿ

Renuka said...

simply superb Guru, after long time I read something which touched my heart..keep writing

ಸುಧೇಶ್ ಶೆಟ್ಟಿ said...

thumbaane ishta aaguttide i baraha maalike guru avare.... naanu udupiyavanu... :)

ಸಾಗರದಾಚೆಯ ಇಂಚರ said...

Hi Renuka
thanks for the comments
i am really happy that you people liked this writing
keep coming

ಸಾಗರದಾಚೆಯ ಇಂಚರ said...

Sudhesh,

your comments mad eme to write more about it

sadaa bartaa iri

ಗಿರೀಶ್ ಎಸ್ said...

Guru really superb....those incidents must happen in life...they will teach so many valuable chapters na....

ರಾಜ್ said...

ಬದುಕೇ ಹಾಗೆ ನೋಡಿ, ನನ್ನ ತಂದೆಯವರು ಕೂಡಾ ಎಂದು ಏನನ್ನೂ ಕಡಿಮೆ ಮಾಡಿದವರಲ್ಲ, ಆದರೂ ಗೊಣಗಾಡುತ್ತಿದ್ದೆ. ಅದು ಬೇಕು, ಇದು ಬೇಕು ಎಂದು. ಹಣದ ಬೆಲೆ ಏನು ಎಂದು ಗೊತ್ತಾಗುವಷ್ಟರಲ್ಲಿ ದುಡಿಮೆಯ ಹಣ ಕೇವಲ ಈ ಬೆಂದಕಾಳೂರಿನಲ್ಲಿ ನನ್ನ ಖರ್ಚಿಗೆ ಸಾಲುತ್ತಿಲ್ಲ. ಈಗ ಒಂದು ಪುಟ್ಟ ಸಂಸಾರ ನೌಕೆಗೆ ನಾವಿಕನಾಗಿದ್ದೇನೆ. ಈಗ ಅರಿವು ಮೂಡುತ್ತಿದೆ. ಧನ್ಯವಾದಗಳು ನಿಮಗೆ, ಇದನ್ನೆಲ್ಲಾ ಹೇಳಿಕೊಳ್ಳಲು ವೇದಿಕೆ ಸೃಷ್ಟಿಸಿದ್ದಕ್ಕೆ..
ಚೆನ್ನಾಗಿದೆ ನಿಮ್ಮ ಬರಹ..