Thursday, July 29, 2010

ನಾರ್ವೆ ಎಂಬ ಸೌಂದರ್ಯದ ರಾಶಿಯ ಸುತ್ತ ಒಂದು ಸುತ್ತು ....

ಕೆಲವು ದಿನಗಳಿಂದ ಬ್ಲಾಗ್ ನಲ್ಲಿ ಏನು ಬರೆಯಬೇಕೆಂದು ಯೋಚಿಸುತ್ತಿದ್ದೆ. ಒಂದೆರಡು ಕವನ ಹಾಕಲೇ? ಇಲ್ಲ ಕಳೆದ ವಾರ ನಾರ್ವೆ ಗೆ ಹೋಗಿ ಬಂದ ಬಗ್ಗೆ ಬರೆಯಲೇ ಎಂದು. ನಾರ್ವೆ ಗೆ ಹೋಗಿ ಬಂದ ಮೇಲೆ ಬಹಳಷ್ಟು ವಿಷಯಗಳು ತಲೆಯಲ್ಲಿ ಮನೆ ಮಾಡಿ ಹುಳದಂತೆ ಕೆರೆಯುತ್ತಿವೆ ಇಲ್ಲ ಕೊರೆಯುತ್ತಿವೆ. ಆ ದೇಶದ ಬಗೆಗೆ ಬರೆಯಲೇಬೇಕು ಎಂದೆನಿಸಿ ಕುಳಿತಿದ್ದೇನೆ. ಎಂದಿನಂತೆ ನಿಮ್ಮ ಪ್ರೋತ್ಸಾಹ ಇರುತ್ತದೆ ಎಂದು ನಂಬಿದ್ದೇನೆ.

ನಾನು ಈ ಮೊದಲು ಡೆನ್ಮಾರ್ಕಿನ ಬಗೆಗೆ, ಅಲ್ಲಿನ ಸಮುದ್ರಗಳ ಬಗೆಗೆ (http://gurumurthyhegde.blogspot.com/2010/04/blog-post.html), ಕೋಪೆನ್ಹೇಗನ್  ಎಂಬ ನಗರದ ಬಗೆಗೆ (http://gurumurthyhegde.blogspot.com/2009/01/copenhagen.html) , ಸ್ವೀಡನ್ನಿನ ಕೆಲವು ರಮ್ಯ ತಾಣಗಳ ಬಗೆಗೆ (http://gurumurthyhegde.blogspot.com/2009/03/blog-post_27.html) ಬರೆದಿದ್ದೇನೆ. ಆದರೆ ಅವೆಲ್ಲವೂ ಒಂದು ನಗರದ ಭವ್ಯ ಇತಿಹಾಸ ಬಿಂಬಿಸುತ್ತಿದ್ದವು. ನಾರ್ವೆ ಗೆ ಹೋಗಿ ಬಂದ ಮೇಲೆ ಸೌಂದರ್ಯ ಎನ್ನುವುದಕ್ಕೆ ವ್ಯಾಖ್ಯಾನವೇ ಬೇರೆ ಎಂಬಂತಾಗಿದೆ ನನ್ನ ಸ್ಥಿತಿ. ಅಲ್ಲಿನ ಹಳ್ಳಿಗಳಲ್ಲಿ ಓಡಾಡಿ, ಅಲ್ಲಿನ ಪರ್ವತಗಳ ಅಂಚಿನಲ್ಲಿ ನಲಿದಾಡಿ, ಅಲ್ಲಿನ ನೀರಿನಲ್ಲಿ ತೇಲಾಡಿ, ಮಿಲಿಯನ್ ಗಟ್ಟಲೆ ಹಳೆಯದಾದ ಪರ್ವತಗಳ ನಡುವೆ ಅಡ್ಡಾಡಿ ಬಂದ ಮೇಲೆ ಮನಸು ಯಾವುದೋ ಒಂದು ಲೋಕಕ್ಕೆ ಸದಾ ಕರೆದೊಯ್ಯುತ್ತಿದೆ. ಇದನ್ನೆಲ್ಲಾ ನಿಮ್ಮೊಂದಿಗೆ ಹಂಚಿಕೊಂಡರೆ ಮಾತ್ರ ಸಮಾಧಾನ.

ನಾರ್ವೆ ಎಂಬ ದೇಶ ಶ್ರೀಮಂತರ ತವರೂರು. ಒಂದು ಕಾಲದಲ್ಲಿ ಸ್ವೀಡನ್ನಿನ ಅಧೀನದಲ್ಲಿದ್ದ ನಾರ್ವೆ ಈಗ ಸ್ವತಂತ್ರ ದೇಶ. ಆಗ ಬಡ ದೇಶವಾಗಿದ್ದ ನಾರ್ವೆ ಯನ್ನು ಸ್ವತಂತ್ರಗೊಳಿಸಿದ ಸ್ವೀಡನ್ ಈಗ ಬಹುಷ ಪರಿತಪಿಸಿದರೆ ಆಶ್ಚರ್ಯವಿಲ್ಲ . ಕಾರಣ ಸ್ವತಂತ್ರಗೊಂಡ ನಾರ್ವೆ ಗೆ ವರದಂತೆ ಸಿಕ್ಕಿದ್ದು ''ಅಲ್ಲಿನ ಹೇರಳ ಅನಿಲ'' ಸಂಪತ್ತು. ಅಗೆದಲ್ಲೆಲ್ಲ Oil ಬರುವ ಜಾಗವದು. ಕೇಳಬೇಕೆ ಸಿರಿವಂತಿಕೆಗೆ. ಒಂದು ಅಂದಾಜಿನ ಪ್ರಕಾರ ''ಹತ್ತು ಜನರಲ್ಲಿ ಒಬ್ಬ ನಾರ್ವೆಯ ನಾಗರಿಕ ಮಿಲಿಯನ್ ಗಟ್ಟಲೆ ಹಣವುಳ್ಳವನಂತೆ''. ಇಂಥಹ ದೇಶಕ್ಕೆ ಕಳಶವಿಟ್ಟಂತೆ ಸಿಕ್ಕಿದ್ದು ನಿಸರ್ಗ ಸಂಪತ್ತು. ಕೆಲವೊಮ್ಮೆ ''ऊपर वाला जब  देता तो चप्पड पाड़ के देता है'' ಎನ್ನುವಂತೆ ಇಲ್ಲಿ ಎಲ್ಲವೂ ಹೇರಳವಾಗಿವೆ. ಬೇಕಾಗಿ ಉಳಿಯುವಷ್ಟು ಸೂರ್ಯ ಪ್ರಕಾಶ, ಬೇಡವೆನ್ನುವಷ್ಟು ಮಂಜುಗಡ್ಡೆ (ಇಲ್ಲ ಮಂಜಿನ ಗುಡ್ಡೆ) , ಬೇಕಾದಷ್ಟು ಕತ್ತಲು, ಅಸಹನೀಯ ಎನಿಸುವಷ್ಟು ಶ್ರೀಮಂತಿಕೆ, ಹೇರಳ ಅನಿಲ ಸಂಪತ್ತು, ಪರಿಶುದ್ಧ ಗಾಳಿ ಒಟ್ಟಿನಲ್ಲಿ GOD GIFT.

 ನಾವು ಸಂಪೂರ್ಣ ನಾರ್ವೆ ಗೆ ಹೋಗದಿದ್ದರೂ ನಾರ್ವೆ ಯ ಕೆಲವು ಸುಂದರ ಸ್ಥಳ ಗಳಿಗೆ ಭೆಟ್ಟಿ ಕೊಟ್ಟು ಬಂದಿದ್ದೇವೆ. ಅವುಗಳಲ್ಲಿ ನಗ್ನತೆಯೇ ಮೈ ವೆತ್ತ ಎಲ್ಲಿಯೂ ಕಾಮದ ವಾಂಛೆ ಇಲ್ಲದ ಪ್ರೇಮದ ಪುತ್ತಳಿಗಳೇ ತುಂಬಿರುವ OSLO ದ ಶಿಲಾ ಸಂಗ್ರಹಾಲಯ (Sculpture Museum) ಮೊದಲಿಗೆ ನಿಮ್ಮನ್ನು ಆಕರ್ಷಿಸುತ್ತದೆ. ಮುಂದೆ ಇದರ ಬಗ್ಗೆ ವಿವರವಾಗಿ ಬರೆಯುತ್ತೇನೆ. ಇದೊಂದು ಜ್ಹಲಕ್ ಅಷ್ಟೇ.



 ಇಲ್ಲಿಂದ ಆರಂಭವಾಗುತ್ತದೆ ನಮ್ಮ ''Norway in a Nutshell'' ಪ್ರವಾಸ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ http://www.norwaynutshell.com/ . ಇಲ್ಲಿ ಬೇರೆ ಬೇರೆ ತರಹದ ಪ್ಯಾಕೇಜ್ ಟ್ರಿಪ್ ಗಳಿವೆ. ನಾವು ಒಂದನ್ನು ಆಯ್ಕೆ ಮಾಡಿಕೊಂಡೆವು. ನಾರ್ವೆ ಶ್ರೀಮಂತ ದೇಶವಾದರಿಂದ ಇಲ್ಲಿ ಎಲ್ಲವೂ ಯದ್ವ ತದ್ವ ತುಟ್ಟಿ. ಹಣ ನೀರಿನಂತೆ ಹರಿಯುತ್ತದೆ ಇಲ್ಲಿ, ಇಲ್ಲಿನ ನದಿಗಳಂತೆ. ನಮ್ಮ ಟ್ರಿಪ್ ಗೆ ನಾವು ಒಬ್ಬರಿಗೆ 11000 ರೂಪಾಯಿಗಳಷ್ಟು ಕೊಟ್ಟು ಟಿಕೆಟ್ ಮಾಡಿಸಿದೆವು. ಟಿಕೆಟ್ ಕೇವಲ ಪ್ರಯಾಣ ಮಾಡಲು ಮಾತ್ರ. ಪ್ಯಾಕೇಜ್ ಟ್ರಿಪ್ ನಲ್ಲಿ ಯಾವ ತಿಂಡಿಯೂ ಇಲ್ಲ, ವಸತಿ ಇಲ್ಲ. ಅದನ್ನೆಲ್ಲ ನಾವೇ ಮಾಡಿಕೊಳ್ಳಬೇಕು. 








ಇದೊಂದು ರೋಚಕ ರಮಣೀಯ ಅನುಭವ. ಇದರ ಬಗ್ಗೆ ಮುಂದಿನ ವಾರಗಳಲ್ಲಿ ವಿವರವಾಗಿ ಬರೆಯುತ್ತೇನೆ. ಇಲ್ಲಿನ ಪ್ರಕ್ರತಿಗೆ ಶರಣಾಗಿದ್ದೇನೆ. ಆ ರಮ್ಯ ಮನೋಹರ ಮೈದುಂಬಿದ ಸೌಂದರ್ಯದ ನಿಸರ್ಗ ರಮಣೀಯ ಜಲಸಿರಿಯ ರಮಣಿ ಕಣ್ಣೆದುರಿಗೆ ಕುಣಿಯುತ್ತಿದ್ದಾಳೆ.
ಮುಂದಿನ ವಾರ ಅವಳನ್ನು ನಿಮ್ಮೆದುರಿಗೆ ಕುಣಿಸುವ ಪ್ರಯತ್ನ ಮಾಡುತ್ತೇನೆ.
ಅಲ್ಲಿಯವರೆಗೆ ಕಾಯುತ್ತಿರಲ್ಲ.....

ನಿಮ್ಮವ 

ಗುರು  

78 comments:

Dr.D.T.Krishna Murthy. said...

ರಮಣೀಯ,ಮನ ಸೂರೆಗೊಳ್ಳುವ ಪ್ರಕೃತಿ ಚಿತ್ರಗಳು.ನಿಮ್ಮ ಪ್ರವಾಸ ಕಥನದ ಮುಂದಿನ ಕಂತುಗಳಿಗಾಗಿ ಕಾಯುತ್ತಿದ್ದೇವೆ.ನಮಸ್ಕಾರ.

ಸಾಗರದಾಚೆಯ ಇಂಚರ said...

ಕೃಷ್ಣಮೂರ್ತಿ ಸರ್
ನಿಮ್ಮ ಫಾಸ್ಟ್ ಕಾಮೆಂಟಿಗೆ ವಂದನೆಗಳು
ಬರುತ್ತಿರಿ

Creativity said...

ಬಹಳ ಸುಂದರವಾಗಿದೆ. ಮುಂದಿನ ಸಂಚಿಕೆಗೆ ಕಾಯುತ್ಹೇನೆ.

ಸಾಗರದಾಚೆಯ ಇಂಚರ said...

Creativity!

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಬರುತ್ತಿರಿ

ಮನಸು said...

ತೈಲ ನಾಡು ಎಂದ ಮೇಲೆ ಕೇಳ ಬೇಕೆ ಸಿರಿವಂತರೇ ಸರಿ ಅದರಲ್ಲೂ ಪ್ರಕೃತಿಯ ಸಿರಿಯೂ ಸೇರಿದೆ ಎಂದಮೇಲೆ ಅದ್ಧೂರಿ ಶ್ರೀಮಂತರವರು.... ತುಂಬಾ ಚೆನ್ನಾಗಿದೆ ವಿವರೆ ಅಂತೆಯೇ ಚಿತ್ರಗಳು ಮುಂದುವರಿಸಿ ಅಲ್ಲಿನ ವಿಭಿನ್ನ ನೋಟಗಳನ್ನು

ಸೀತಾರಾಮ. ಕೆ. / SITARAM.K said...

ಪೀಠಿಕೆಯಲ್ಲಿ ಮುಗಿಯಿತಲ್ಲ ಅಂಕಣ!!!
ಒಳ್ಳೆ ಸೀನೆಮಾ ನೋಡಲು ಕುಳಿತಾಗ ಮುನ್ನೋಟದ ಪೀಠಿಕೆಯಲ್ಲಿ ವಿಶ್ರಾ೦ತಿ ಬಂದ ಹಾಗಾಯಿತು. ಚಿತ್ರಗಳು ಅದ್ಭುತವಾಗಿವೆ. ಕಂತುಗಳಿಗೆ ಕಾತುರತೆಯಿಂದ ಕಾಯುತ್ತಿದ್ದೇನೆ.

Mohan Hegade said...

ಗುರುಜಿ,

ನಾರ್ವೆಯ ವಿವರಣೆ ಚಿಕ್ಕ ಚೊಕ್ಕ ಓಕೆ, ವಿವರವಾದ ಬರಹದ ನಿರೀಕ್ಷೆ? ಸುಂದರ ಫೋಟೋಗೆ ಥ್ಯಾಂಕ್ಸ್, ಆರಂಬದ ಫೋಟೋಗಳು ಇನ್ನು ಇದ್ದರೆ !!!!!!!!! .

ದನ್ಯರಿ,

ಮೋಹನ್ ಹೆಗಡೆ

ಕ್ಷಣ... ಚಿಂತನೆ... said...

ಗುರು ಅವರೆ, ನಾರ್ವೆಯ ರಮಣೀಯ ಸ್ಥಳಗಳ ಚಿತ್ರಗಳನ್ನು ನೋಡಿದರೇ ಖುಷಿಯಾಗುತ್ತದೆ. ಇನ್ನು ನೀವು ಅಲ್ಲಿಗೆ ಹೋದಾಗ ಇನ್ನೆಷ್ಟು ಮನಸ್ಸು ಪ್ರಫುಲ್ಲಿತವಾಗಿರಬಹುದು!

ಬರಹ ಹಾಗೂ ಚಿತ್ರಗಳು ಚೆನ್ನಾಗಿವೆ. ಮುಂದಿನ ಪ್ರವಾಸದ ಬರಹಗಳಿಗಾಗಿ ಕಾಯುತ್ತಿರುವೆ...
ಸ್ನೇಹದಿಂದ,

ರಾಜೇಶ್ ನಾಯ್ಕ said...

ಬೇಗ ಬೇಗ ಬೇಗ.... ವಿವರಗಳನ್ನು ಹಾಕಿ. ಹೀಗೆಲ್ಲಾ ಸ್ವಲ್ಪ ಸ್ವಲ್ಪ ಬರೆಯುತ್ತಾ ಹಿಂಸೆ ಮಾಡ್ಬೇಡಿ ಗುರು.....

ಮನಮುಕ್ತಾ said...

ನಾರ್ವೆಯ ಬಗ್ಗೆ ಉತ್ತಮ ಪರಿಚಯ...
ಮು೦ದಿನ ಕ೦ತಿಗಾಗಿ ಕಾಯುತ್ತಿದ್ದೇನೆ...

PARAANJAPE K.N. said...

ಚಿತ್ರ ಗಳು ತು೦ಬಾ ಚೆನ್ನಾಗಿವೆ, ಅ೦ತಹ ಸು೦ದರ ನಾಡಿಗೆ ಹೋಗಿ ಬ೦ದ ನಿಮ್ಮ ಅನುಭವವನ್ನು ಅಕ್ಷರ ರೂಪದಲ್ಲಿ ಓದುವುದು ಖುಷಿಯ ಸ೦ಗತಿ. ಮುಂದಿನ ಕಂತಿಗೆ ಕಾದಿದ್ದೇನೆ.

PARAANJAPE K.N. said...

ಚಿತ್ರ ಗಳು ತು೦ಬಾ ಚೆನ್ನಾಗಿವೆ, ಅ೦ತಹ ಸು೦ದರ ನಾಡಿಗೆ ಹೋಗಿ ಬ೦ದ ನಿಮ್ಮ ಅನುಭವವನ್ನು ಅಕ್ಷರ ರೂಪದಲ್ಲಿ ಓದುವುದು ಖುಷಿಯ ಸ೦ಗತಿ. ಮುಂದಿನ ಕಂತಿಗೆ ಕಾದಿದ್ದೇನೆ.

ಭಾಶೇ said...

waiting for more pictures of nature and more details

ದಿನಕರ ಮೊಗೇರ said...

ಡಾ. ಗುರು ಸರ್,
ತುಂಬಾ ಸುಂದರವಾದ ಫೋಟೋಗಳನ್ನು ಹಾಕಿ ನಮಗೆ ನಾರ್ವೆ ದೇಶದ ಕಿರು ಪರಿಚಯ ಮಾಡಿಸಿದ್ದೀರಾ ಸರ್...... ತುಂಬಾ ಧನ್ಯವಾದ..... ಫೋಟೋ ಎಲ್ಲವೂ ಚೆನ್ನಾಗಿದೆ......

ಮನೋಜ್ said...

ನಾರ್ಡಿಕ್ ದೇಶಗಳನ್ನು ನೋಡಬೇಕೆಂಬುದು ನನ್ನ ಹಲವು ದಿನಗಳ ಆಸೆ. ಅಲ್ಲಿಯವರೆಗೂ ನಿಮ್ಮ ಸುಂದರ ಬರಹಗಳೇ ಸಾಕು :)

ಅನಂತ್ ರಾಜ್ said...

ಸು೦ದರ ತಾಣಗಳಲ್ಲಿ ವಿಹರಿಸುವುದರ ಜೊತೆಗೆ ಅಲ್ಲಿಯ ರಮಣೀಯ ಅನುಭವಗಳನ್ನು ನಮ್ಮೊಡನೆ ಹ೦ಚಿಕೊಳ್ಳುವ ನಿಮ್ಮ
ಮನೋಭಾವವನ್ನು ನಾನು ಗೌರವಿಸುತ್ತೇನೆ. ರೋಚಕ ರಮಣೀಯ ಅನುಭವಗಳ ಕಥನ ಇನ್ನೂ ಪ್ರಾರ೦ಭವಾಗಿದೆ ಅಷ್ಟೆ..! ನಾರ್ವೆಯ ಅದ್ಭುತ ದೃಶ್ಯಗಳ ಪರಿಚಯ ಮಾಡಿಸಿದ. ಡಾ. ಗುರು ಅವರಿಗೆ ವ೦ದನೆಗಳು.

ಅನ೦ತ್

balasubramanya said...

ಗುರುಮೂರ್ತಿ ಸಾರ್ ನಿಮ್ಮ ನಾರ್ವೆ ದೇಶದ ಅನುಭವ ಸುಂದರವಾಗಿ ಮೂಡಿಬಂದಿದೆ. ಮೋಹಕ ಚಿತ್ರಗಳಿಗೆ ಒಪ್ಪುವ ಲೇಖನ. ಥ್ಯಾಂಕ್ಸ್

shivu.k said...

ಗುರುಮೂರ್ತಿ ಹೆಗಡೆ ಸರ್,

ನಾನು ಈಗ ತಾನೆ ತಿರುಪತಿಯಿಂದ ಬಂದೆ. ಆ ರೈಲು ನಿಲ್ದಾಣಗಳು ಗಲೀಜ್...ವ್ಯಾ...ಎನ್ನುವಷ್ಟು. ನಿಮ್ಮ ಬ್ಲಾಗಿನಾ ನಾರ್ವೇಯ ಫೋಟೊಗಳನ್ನು ನೋಡಿ ಮನಸ್ಸಿಗೆ ಎಷ್ಟೋ ಸಮಧಾನವಾಯಿತು. ನಾನು ನಿರೀಕ್ಷಿಸಿದಂತೆ ಮತ್ತೆ ವಿದೇಶಗಳ ಬಗ್ಗೆ ಬರೆಯುತ್ತಿದ್ದೀರಿ. ಹೀಗೆ ಮುಂದುವರಿಯಲಿ...ನಿಮ್ಮ ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ.

shivu.k said...

ಗುರುಮೂರ್ತಿ ಸರ್,

ಈಗ ತಾನೆ ತಿರುಪತಿಯಿಂದ ಬಂದೆ. ಅಲ್ಲಿನ ರೈಲು ನಿಲ್ದಾಣಗಳನ್ನು ನೋಡಿದರೆ ಬೇಸರವಾಗುತ್ತದೆ. ಗಲೀಜು..ವ್ಯಾ.ಅನ್ನುವಷ್ಟು. ನಿಮ್ಮ ಬ್ಲಾಗಿನ ನಾರ್ವೆ ಫೋಟೊಗಳನ್ನು ನೋಡಿ ಮನಸ್ಸಿಗೆ ಖುಷಿಯಾಯ್ತು...ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ.

ಸಾಗರಿ.. said...

ಸಕತ್ತಾಗಿದೆ photo ಗಳು ಮತ್ತು ತಮ್ಮ ಆಪ್ತ ಬರವಣಿಗೆ ಹಾಗೂ ನಾರ್ವೆ.. ಮುಂದಿನ ಸಂಚಿಕೆಗೆ ಕಾಯುತ್ತಲಿದ್ದೇವೆ.

ಪ್ರವೀಣ್ ಭಟ್ said...

Nice photos... nice writeup gorumoorthanna....

AntharangadaMaathugalu said...

ಗುರು ಸಾರ್...
ಚಿತ್ರಗಳು ಸುಂದರವಾಗಿವೆ. ನಾರ್ವೆ ಸುಂದರೆ ದೇಶವೆಂದು ಕೇಳಿದ್ದೆ... ಈಗ ನಿಮ್ಮ ವಿವರಣೆ ಜೊತೆಗೆ, ನಾವೂ ನಾರ್ವೆ ನೋಡಬಹುದು...

ಶ್ಯಾಮಲ

Shashi jois said...

ನಾರ್ವೆ (ದೇಶದ) ಬಗ್ಗೆ ತಿಳಿಸಿದ್ದಕ್ಕೆಧನ್ಯವಾದಗಳು..ಸುಂದರ ಚಿತ್ರದೊಂದಿಗೆ ವಿವರಣೆ ಸಹಿತ ಬರಹ .ಮುಂದಿನ ಸಂಚಿಕೆಗೆ ಕಾಯುತ್ತಿದ್ದೇನೆ.

shridhar said...

ಗುರು ಸರ್,
ಸುಂದರ ಚಿತ್ರಗಳು

sunaath said...

ಗುರುಮೂರ್ತಿಯವರೆ,
ಚೆಲುವಿನ ತಾಣದ ಸುಂದರ ಚಿತ್ರಗಳನ್ನು ನೋಡಿ ಖುಶಿಯಾಯಿತು. ಮುಂದಿನ ಕಂತುಗಳಿಗಾಗಿ ಕಾಯುತ್ತಿರುತ್ತೇನೆ.

ಮನದಾಳದಿಂದ............ said...

ಗುರುಮೂರ್ತಿ ಸರ್,
ಕಣ್ಮನ ಸೆಳೆಯುವ ಸುಂದರ ಪೋಟೋಗಳು! ಅದ್ಭುತವಾಗಿದೆ....
ಧನ್ಯವಾಧಗಳು.........

ಚುಕ್ಕಿಚಿತ್ತಾರ said...

ಚ೦ದದ ಫೋಟೋಗಳೊ೦ದಿಗೆ ಸು೦ದರ ಚಿತ್ರಣ..
ವಂದನೆಗಳು

ಸುಬ್ರಮಣ್ಯ said...

ನಾನು ಹೈ ಸ್ಕೂಲ್ ಓದಿದ್ದು ನಾರ್ವೇಲಿ!!! ದಿನಾ ಬಸ್ಸಲ್ಲಿ ನಾರ್ವೆಗೆ ಹೋಗಿ ಬರ್ತಿದ್ವಿ.

ತೇಜಸ್ವಿನಿ ಹೆಗಡೆ said...

ಚಿತ್ರಗಳನ್ನು ನೋಡಲೇ ಎರಡು ಕಣ್ಣು ಸಾಲದೆನ್ನುವ ಸ್ಥಿತಿ... ಇನ್ನು ಸ್ವತಃ ಅಲ್ಲಿಗೇ ಹೋಗಿ ನೋಡಿದ ನಿಮ್ಮ ಅನುಭವ....!!! ಮುಂದಿನ ಭಾಗದಲ್ಲಿ ಆದಷ್ಟು ಚಿತ್ರಗಳನ್ನು ಹಾಕಿ.

Snow White said...

nijakku kayta iddini sir :)

Soumya. Bhagwat said...

ತುಂಬಾ ಸುಂದರವಾದ ಪ್ರವಾಸ ಕಥನ. ನಾರ್ವೆಯನ್ನು ಸುತ್ತಿಸಿದ್ದಕ್ಕೆ ಧನ್ಯವಾದಗಳು ಗುರು ಸರ್ ..

Soumya. Bhagwat said...

ತುಂಬಾ ಸುಂದರವಾದ ಪ್ರವಾಸ ಕಥನ. ನಾರ್ವೆಯನ್ನು ಸುತ್ತಿಸಿದ್ದಕ್ಕೆ ಧನ್ಯವಾದಗಳು ಗುರು ಸರ್

ಜಲನಯನ said...

ಗುರು...ನಮ್ಮನ್ನೆಲ್ಲ ಪುಕ್ಕಟೆ ಪ್ರವಾಸಕ್ಕೆ ಯೂರೋಪಿಗೆ ಕರೆದೊಯ್ದದ್ದೇ ಅಲ್ಲದೇ ಯಾವ ಗೈಡ್ ಗೂ ಕಡಿಮೆಯಿಲ್ಲದ ವಿವರಣೆ...ನೈಸ್ ಫೋಟೋಸ್ ಸಹಾ...

Guruprasad . Sringeri said...

ಚೆಂದದ ಚಿತ್ರಗಳೊಂದಿಗೆ ಹಾಗೂ ಉತ್ತಮ ವಿವರಣೆಗಳೊಂದಿಗೆ ನಮ್ಮನ್ನೂ ಕೂಡಾ ನಾರ್ವೆಗೆ ಕೊಂಡೊಯ್ಯುವಿರೆಂದು ಭಾವಿಸುತ್ತೇನೆ.... ಮುಂದುವರೆಯಲಿ :)

V.R.BHAT said...

ತಲೆಬರೆಹವೇ ಹೇಳಿದ ಮೇಲೆ ಅದರಲ್ಲಿ ಗಮ್ಮತ್ತೆ ಅಡಗಿದೆ ಎಂದು ಹೊಸದಾಗಿ ಹೇಳಬೇಕಿಲ್ಲ ಅಲ್ಲವೇ ? ಚೆನ್ನಾಗಿದೆ, ಕಂತುಗಳು ಬೇಗ ಬರಲಿ, ಧನ್ಯವಾದಗಳು

ಕನಸು said...

hi
sir
tuMbA cenfnAgide nimma article with best photo
with lot of thanks
kanssu

ಮನಸಿನಮನೆಯವನು said...

ನೀವು ಹೇಳುತ್ತಿರುವುದನ್ನು ನೋಡಿದರೆ ಆದಷ್ಟು ಬೇಗ ಆ ಸಿರಿಯನ್ನು ಕಣ್ ತುಂಬಿಕೊಳ್ಳಬೇಕು ಎನಿಸುತ್ತಿದೆ..
ಹೆಚ್ಚು ಕಾಯಿಸದಿರಿ....

ಅರಕಲಗೂಡುಜಯಕುಮಾರ್ said...

ಸರ್ ಸ್ಕಾಂಡಿನೇವಿಯಾದ ನಾರ್ವೆ ಅಂದ್ರೆ Land Of the MidNight ಅಂತಾರಲ್ಲ ಅದೇ ನಾರ್ವೇನಾ ಇದು.. ಚಿತ್ರಗಳ ಹಸಿರ ಝಲಕ್ ನೀವು ಭಾವನಾ ಜೀವೀ-ಉತ್ತಮ ಬರಹಗಾರ ಮಾತ್ರವಲ್ಲ ಉತ್ತಮ ಛಾಯಾಗ್ರಾಹಕರು ಹೌದೆಂಬುದನ್ನು ಸಾಬೀತುಪಡಿಸಿದೆ... ಮುಂದಿನ ಓದಿಗೆ ಹಸಿದ ಹುಲಿಯಂತಾಗಿದ್ದೇನೆ ಕಾಯಿಸಬೇಡಿ.

ಸುಧೇಶ್ ಶೆಟ್ಟಿ said...

ವಾವ್.... ನಾರ್ವೆ...!

ಸುಧಾ ಮೂರ್ತಿಯವರ "ಹಕ್ಕಿಯ ತೆರದಲಿ" ಪುಸ್ತಕದಲ್ಲಿ ಮತ್ತು ಶಿವರಾಮ ಕಾರ೦ತರ "ಅಪೂರ್ವ ಪಶ್ಚಿಮ" ಪುಸ್ತಕದಲ್ಲಿ ನಾರ್ವೆಯ ಗುಣಗಾನ ಓದಿ, ಈಗ ನಿಮ್ಮ ಬ್ಲಾಗಿನಲ್ಲೂ ಅದೇ... ಆ ಪುಸ್ತಕದಲ್ಲಿ ಇಲ್ಲದ ಒ೦ದೇ ಅ೦ಶ ಅ೦ದರೆ ಚಿತ್ರಗಳು. ನಿಮ್ಮ ಬ್ಲಾಗಿನಲ್ಲಿ ಸು೦ದರ ಚಿತ್ರಗಳಿವೆ... ಮು೦ದಿನ ಭಾಗದ ನಿರೀಕ್ಷೆಯಲ್ಲಿ :)

ಚಿತ್ರಾ said...

ಗುರು,
ಟಾಕೀಸ್ ನಲ್ಲಿ ಟ್ರೈಲರ್ ತೋರಿಸ್ತ್ವಲ ಹಾಂಗೆ ಆತು ಇದು. coming soon ಹೇಳಿ !!!
ಬೇಗ ಬೇಗ ಪೂರ್ಣ ಸಿನೆಮಾ ಬರಲಿ ! ಕಾಯ್ತಾ ಇದ್ದಿ.

ಸಾಗರದಾಚೆಯ ಇಂಚರ said...

ಮನಸು,
ನೀವು ತೈಲನಾಡಿನವರೆ, ನಿಮಗೆ ಶ್ರೀಮಂತಿಕೆ ಗೊತ್ತಿರಬೇಕಲ್ಲವೇ?

ಅಭಿಪ್ರಾಯಕ್ಕೆ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

ಸೀತಾರಾಮ್ ಸರ್
ಖಂಡಿತ ಬೇಗ ಮುಂದಿನ ಭಾಗ ಬರುತ್ತೆ
ಬರ್ತಾ ಇರಿ

ಸಾಗರದಾಚೆಯ ಇಂಚರ said...

ಮೋಹನ ಅಣ್ಣ
ಮುಂದಿನ ಭಾಗದಲ್ಲಿ ಇನ್ನಷ್ಟು ಫೋಟೋಗಳೊಂದಿಗೆ ಬರುವೆ
ಬರುತ್ತಿರಿ

ಸಾಗರದಾಚೆಯ ಇಂಚರ said...

ಕ್ಷಣ... ಚಿಂತನೆ... bhchandru ಸರ್
ನಿಜ, ಅದೊಂದು ಅಮೋಘ ಅನುಭವ

ಸಾಗರದಾಚೆಯ ಇಂಚರ said...

ರಾಜೇಶ್ ಸರ್

ಖಂಡಿತ ಸತಾಯಿಸೋದಿಲ್ಲ

ಬರ್ತಾ ಇರಿ

ಸಾಗರದಾಚೆಯ ಇಂಚರ said...

ಮನಮುಕ್ತಾ

ಧನ್ಯವಾದಗಳು

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್
ಖಂಡಿತ ಮುಂದಿನ ಭಾಗದಲ್ಲಿ ಇನ್ನೂ ರೋಚಕತೆ ತುಂಬುವ ಪ್ರಯತ್ನ ಮಾಡುತ್ತೇನೆ
ಆ ಸ್ಥಳವೆ ಹಾಗಿದೆ

ಸಾಗರದಾಚೆಯ ಇಂಚರ said...

ಭಾಶೇ

thanks for your comments

keep visiting

ಸಾಗರದಾಚೆಯ ಇಂಚರ said...

ದಿನಕರ್ ಸರ್
ಬರ್ತಾ ಇರಿ
ಏನಾದ್ರು ಹೊಸತು ಕೊಡ್ತಾ ಇರುವೆ

ಸಾಗರದಾಚೆಯ ಇಂಚರ said...

ಮನೋಜ್ ಸರ್
ಖಂಡಿತ ಇಲ್ಲಿಯ ದೇಶಗಳನ್ನು ನೋಡ್ಬೇಕು
ಇದೊಂದು ಹೇಳಲಾಗದ ಅನುಭವ

ಸಾಗರದಾಚೆಯ ಇಂಚರ said...

ಅನಂತ್ ರಾಜ್ ಸರ್

ನೋಡಿದ್ದನ್ನು ಹೇಳಿಕೊಳ್ಳೋ ತನಕ ಸಮಾಧಾನ ಇರೋಲ್ಲ ನೋಡಿ
ಬರ್ತಾ ಇರಿ

ಸಾಗರದಾಚೆಯ ಇಂಚರ said...

ನಿಮ್ಮೊಳಗೊಬ್ಬ,
ಬರ್ತಾ ಇರಿ ಬರೆಯುತ್ತಿರುವೆ

ಸಾಗರದಾಚೆಯ ಇಂಚರ said...

ಶಿವೂ ಸರ್
ನೀವು ಯಾವತ್ತೂ ಹೇಳ್ತಾ ಇದ್ದಿದ್ರಿ, ಇಲ್ಲಿಯ ಜನರ, ದೇಶದ ಬಗೆಗ್ ಬರೆಯಿರಿ ಅಂತ
ಮತ್ತೆ ಬರೆಯೋಕೆ ಆರಂಬಿಸಿದೆ

ಬರ್ತಾ ಇರಿ

ಸಾಗರದಾಚೆಯ ಇಂಚರ said...

ಸಾಗರಿ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಬರ್ತಾ ಇರಿ

ಸಾಗರದಾಚೆಯ ಇಂಚರ said...

Praveen,

thanks for the comments

keep visiting

ಸಾಗರದಾಚೆಯ ಇಂಚರ said...

AntharangadaMaathugalu

ನಿಮ್ಮನ್ನೂ ನಾರ್ವೆಗೆ ತೆಗೆದುಕೊಂದೋ ಹೋಗೋ ಚಿಕ್ಕ ಪ್ರಯತ್ನ

ಬರ್ತಾ ಇರಿ

ಸಾಗರದಾಚೆಯ ಇಂಚರ said...

Shashi jois

ಬೇಗನೆ ಮುಂದಿನ ಸಂಚಿಕೆ ಹಾಕ್ತೇನೆ,

ಸ್ವಲ್ಪ ಕೆಲಸದ ಒತ್ತಡದಲ್ಲಿ ಹಾಕೋಕೆ ಆಗ್ತಾ ಇಲ್ಲ

ಸಾಗರದಾಚೆಯ ಇಂಚರ said...

Shridhar

thanks for the comment

ಸಾಗರದಾಚೆಯ ಇಂಚರ said...

ಸುನಾಥ್ ಸರ್

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಬರುತ್ತಿರಿ

ಸಾಗರದಾಚೆಯ ಇಂಚರ said...

ಮನದಾಳದಿಂದ............

ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು

ಬರುತ್ತಿರಿ,

ಬರೆಯುತ್ತಿರುವೆ

ಸಾಗರದಾಚೆಯ ಇಂಚರ said...

ಚುಕ್ಕಿಚಿತ್ತಾರ

ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಮಾಚಿಕೊಪ್ಪ

ಹಹಹ

ಹಾಗಾದ್ರೆ ನಿಮಗೆ ನಾರ್ವೆ ತುಂಬಾ ಗೊತ್ತಿರಬೇಕಲ್ವೆ :)

ಸಾಗರದಾಚೆಯ ಇಂಚರ said...

ತೇಜಸ್ವಿನಿ ಹೆಗಡೆ ಯವರೇ

ಖಂಡಿತ ಮುಂದಿನ ಭಾಗದಲ್ಲಿ ಹೆಚ್ಚೆಚ್ಚು ಚಿತ್ರಾ ಹಾಕುವೆ

ಬರುತ್ತಿರಿ

ಸಾಗರದಾಚೆಯ ಇಂಚರ said...

Snow white

kaayisolla
bega haktini barahana

ಸಾಗರದಾಚೆಯ ಇಂಚರ said...

Soumya. B

ಧನ್ಯವಾದಗಳು

ಸುತ್ತಾಟ ಮುಗಿದಿಲ್ಲ

ಬರ್ತಾ ಇರಿ

ಸಾಗರದಾಚೆಯ ಇಂಚರ said...

ಜಲನಯನ ಅಜಾದ್ ಸರ್

ನಿಮ್ಮ ಮಾತುಗಳಿಗೆ ಚಿರ ಋಣಿ
ನಿಮ್ಮಂತವರ ಆಶೀರ್ವಾದ ಇದ್ರೆ ಸಾಕು

ಸಾಗರದಾಚೆಯ ಇಂಚರ said...

ಗುರುಪ್ರಸಾದ್, ಶೃಂಗೇರಿ ಯವರೇ

ಕಹ್ನ್ದಿತ ನಿಮ್ಮನೆಲ್ಲ ಅಲ್ಲಿಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡ್ತೀನಿ
ಬರ್ತಾ ಇರಿ

ಸಾಗರದಾಚೆಯ ಇಂಚರ said...

ವಿ.ಆರ್.ಭಟ್ ಸರ್

ಖಂಡಿತ ಗಮ್ಮತ್ತಿದೆ

ಓದ್ತಾ ಇರಿ

ಸಾಗರದಾಚೆಯ ಇಂಚರ said...

ಕನಸು

ನಿಮ್ಮ ಸುಂದರ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಬರ್ತಾ ಇರಿ

ಸಾಗರದಾಚೆಯ ಇಂಚರ said...

- ಕತ್ತಲೆ ಮನೆ...

ನಿಜಕ್ಕೂ ನಾರ್ವೆ ನಂಬಲಾಗದ ಸೌಂದರ್ಯದ ಕಣಿ

ಸಾಗರದಾಚೆಯ ಇಂಚರ said...

ಅರಕಲಗೂಡುಜಯಕುಮಾರ್ ಸರ್

ನೀವು ಅಂದಿದ್ದು ನಿಜ

ಇದು ಸೂರ್ಯ ಮುಳುಗದ ದೇಶ

ಮದ್ಯರಾತ್ರಿ ಸೂರ್ಯ ಕಾಣುವ ದೇಶ

ಸೌಂದರ್ಯದ ದೇಶ

ಸಾಗರದಾಚೆಯ ಇಂಚರ said...

ಸುಧೇಶ್ ಶೆಟ್ಟಿ ಸರ್

ನೀವು ಅಂಥಹ ಮಹಾನ್ ಕವಿಗಳ ಪಟ್ಟಿಗೆ ನನ್ನ ಸೇರಿಸಬೇಡಿ

ನನ್ನದು ಒಂದು ಪುಟ್ಟ ಪ್ರಯತ್ನವಷ್ಟೇ

ಬರ್ತಾ ಇರಿ

ಸಾಗರದಾಚೆಯ ಇಂಚರ said...

ಚಿತ್ರಾ

ಹಂಗೆ ಸಿನೆಮ ತೋರಿಸದೆ ಇದ್ರೆ ನಿನಗೆಲ್ಲಿ ಇಂಟರೆಸ್ಟ್ ಬತ್ತು, ಓದಿ ನಡಿತೆ

ಮುಂದಿವಾರದಿಂದ ಸಿನಿಮಾ ಬತ್ತು

ನೋಡಲೇ ಬಾ ಮತ್ತೆ

ಶಿವಪ್ರಕಾಶ್ said...

Beautiful sir :)

shravana said...

wow.. :)
ಆದರೆ.. ನಿಮ್ಮ ಲೇಖನದಲ್ಲಿನ ಒಂದು ಪದ ಬಹಳ ಕಾಡಿತು.."ಮಿಲಿಯನ್ ಗಟ್ಟಲೆ ಹಳೆಯದಾದ ಪರ್ವತಗಳು" ನಮ್ಮ ಪಶ್ಚಿಮ ಘಟ್ಟಗಳಿಗೆದುರಾಗಿರೊ ಗಂಡಾಂತರ ನೆನೆಯುವಂತೆ ಮಾಡಿತು.. ಇವು ಕೂಡ ಮಿಲಿಯನ್ ಗಟ್ಟಲೆ ಹಳೆಯದಾದವು.. ಈಗಾಗಲೆ ನಮ್ಮಿಂದಾಗಿ ತನ್ನ ವಿಸ್ತೀರ್ಣತೆ ಕಡಿಮೆಗೊಂಡಿದು ಈಗ "ಗುಂಡ್ಯ" ಪ್ರೊಜೆcಟ್ , ಶಿರಾಡಿ ಪ್ರೊಜೆcಟ್ ನಿಂದಾಗಿ ತನ್ನ ಸಂಪೂರ್ಣ ಅಸ್ತಿತ್ವ ಕಳೆದು ಕೊಳ್ಳೊದ್ರಲ್ಲಿದೆ..ಅಲ್ಲಿರೊ ವನ್ಯ ಸಂಪತ್ತು ನಾಶಿಸೊ ಅಂಚಿಗೆ ಬಂದಿವೆ.. ಯಾರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದಿರುವು ಇನ್ನೂ ಬೆಸರ. ಧ್ವನಿ ಎತ್ತಿರೊರದು ಮೂಕ ರೋದನವಾಗಿದೆ..! ಹವಮಾನ ವೈಪರೀತ್ಯ, ಭೂ ಕುಸಿತವಾದಾಗ ಎಚ್ಚರವಾಗಬಹುದೆನೊ.. ಆಗ ಎನು ಉಪಯೊಗ..
ಎನೊ ನೊಡ್'ದಾಗ ಇನ್ನೇನೊ ನೆನಪಾಯ್ತು.. Any ways, waiting for the updates.. :)

ಸಾಗರದಾಚೆಯ ಇಂಚರ said...

Dear Shivpraksh

thanks for the comments

ಸಾಗರದಾಚೆಯ ಇಂಚರ said...

Dear Shravana

neev annodu nija
adare illina betta guddagalu halagade irodakke virala janasankyeye kaarana

avarige adara avashyakateyilla

bhaaratadalli janasankye hecchhaagi kaadu naadaagta ide

nimma abhipraayakke thanks

prameela said...

prakruthiya manamohaka chitthaaragalondigina sundara lekhana thumba sogasaagi moodi bandide..