Tuesday, July 13, 2010

ಜೈಲಿಗೆ ಹೋಗಲು ಎಂಟೇ ದಿನ ...
ಎಲ್ಲರಂತಿರಲಿಲ್ಲ ಅವಳು, ಹಾಗೆಂದು ಇದು ಅವಳು ಬಯಸಿದ್ದು ಅಲ್ಲ. ಬದುಕಿನ ವೈಚಿತ್ರದ ನರ್ತನಕ್ಕೆ ನ್ರತ್ಯಗಾತಿಯಾದ ನತದೃಷ್ಟೆ ಅವಳು. ಮನುಷ್ಯನ ಭಾವನೆಗಳಿಗೆ ರೆಕ್ಕೆ ಪುಕ್ಕ ಬಲಿತು ಆತ  ಹಾರಾಡುವ ಮಟ್ಟಕ್ಕೆ ಬೆಳೆದರೂ ಮೃಗೀಯ ಮನೋಭಾವನೆ ಬಿಟ್ಟಿಲ್ಲ ಎನ್ನುವುದಕ್ಕೆ ಅವಳ ಜೀವನವೇ ಸಾಕ್ಷಿ.

      ಸುಮಾರು 30 ವರ್ಷಗಳ ಹಿಂದಿನ ಮಾತು. ಸುರ ಸುಂದರ, ಮನ್ಮಥನ ರೂಪವೇ ಆಗಿದ್ದ ಅವನಿಗೆ ಸಾವಿರಾರು ಹೆಣ್ಣು ಮಕ್ಕಳು ಹಿಂದೆ ಬೀಳುತ್ತಿದ್ದರು. ಅವನ ಕುಡಿನೋಟಕ್ಕೆ, ತುಟಿಯ ಮಾಟಕ್ಕೆ, ಮಾದಕ ನಗುವಿಗೆ ಸೋಲದವರಿರಲಿಲ್ಲ. ಇಂಥಹ ಸುಂದರ ಸುಶೀಲ ಹುಡುಗನನ್ನು ಅವಳು ಮೊದಲ ನೋಟದಲ್ಲಿ ಕಂಡಾಗಲೇ ಮಾರುಹೋಗಿದ್ದಳು, ಅಷ್ಟೇ ಅಲ್ಲ ಬಲು ಬೇಗ ತನ್ನನ್ನೇ ಮಾರಿಕೊಂಡಿದ್ದಳು ಕೂಡಾ. ಪ್ರೀತಿಯೇ ಹಾಗೇ, ಅದಕ್ಕೆ ಯಾವ ಗಡಿಯಿಲ್ಲ, ಜಾತಿಯ ಹಂಗಿಲ್ಲ, ಮಾತಿನ ಗೋಜಿಲ್ಲ, ಸಂಭಂಧಗಳ ಕಡಿವಾಣವಿಲ್ಲ. ಒಂದು ನಿಷ್ಕಲ್ಮಶ ಪ್ರೀತಿ ಬೆಳ್ಳಂ ಬೆಳಿಗ್ಗೆ ನಿಮ್ಮ ಎದೆಯಲ್ಲಿ ಹುಟ್ಟಿ ಮಧ್ಯಾನ್ಹದ ವೇಳೆಗೆ ಇನ್ನೊಂದು ಎದೆಗೆ ತನ್ನ ಚಲನೆ ಆರಂಬಿಸಿಬಿಡುತ್ತದೆ. ಅವಳಿಗಾದದ್ದೂ ಅದೇ. ಕುಡಿನೋಟದಲ್ಲೇ ಕೊಂದ ಆ ಸುಂದರಾಂಗನಿಗೆ ಒಲಿದ ಅವಳು ಅವನೊಂದಿಗೆ ಪ್ರೇಮ ಸಲ್ಲಾಪದಲ್ಲಿ ತೊಡಗಿದಳು.

      ಕಾಲ ಯಾರಿಗೂ ಕಾಯದು. ಇಂದು ಬರುವ ಸೂರ್ಯ, ರಾತ್ರಿ ಬರುವ ಚಂದ್ರ, ಬದುಕಿಗೆ ಹಗಲು ರಾತ್ರಿ, ಎಲ್ಲವೂ ತನ್ನಷ್ಟಕ್ಕೆ ಯಾರಿಗೂ ಕಾಯದೆ ತಮ್ಮ ಪಾಡಿಗೆ ತಾವು ಕರ್ತವ್ಯ ಬದ್ದ ಕೆಲಸಗಾರರಂತೆ ಕಾರ್ಯ ನಿರ್ವಹಿಸುತ್ತಿರುತ್ತವೆ. ಅವಳ, ಅವನ ಪ್ರೇಮದ ದ್ಯೋತಕವಾಗಿ ಒಂದು ಮಗು ಅವಳ ಗರ್ಭದಲ್ಲಿ ಬೆಳೆಯುತ್ತಿರುವ ಸಂಗತಿ ಗೊತ್ತಾದಾಗ ಅವರು ಮದುವೆ ಆಗಲು ನಿರ್ಧರಿಸಿದರು. ಅವಳೂ ಸರ್ವಾಂಗ ಸುಂದರಿ. ಬಾಣ ಭಟ್ಟನ ಕಾದಂಬರಿಯಲ್ಲಿ ಬರುವ ಚೆಲುವೆಯನ್ನೂ ಮೀರಿಸುವ ಸೌಂದರ್ಯ ಅವಳದಾಗಿತ್ತು. ಮಾದಕ ಮೈಮಾಟ, ಚೆಲುವಿನ ಮೈಕಟ್ಟು, ಚುಂಬಕ ಶಕ್ತಿಯ ಮಾತು ಅವನನ್ನು ಅವಳ ಬಳಿ ಸೆಳೆದಿತ್ತು. ಇಂಥ ಸರ್ವಾಂಗ ಸುಂದರ, ಸುಂದರಿ 30 ವರ್ಷದ ಹಿಂದೆ ಮದುವೆಯಾದರು.

      ಕಥೆ ಆರಂಬವಾಗುವುದೇ ಇಲ್ಲಿ. ಆರಂಬಿಕ ದಿನಗಳಲ್ಲಿ ಎಲ್ಲವೂ ಸುಗಮವಾಗಿತ್ತು. ಕೈ ಕೈ ಹಿಡಿದುಕೊಂಡು ಅವರು ಹೋಗುವಾಗ ರಸ್ತೆಯ ಇಕ್ಕೆಲಗಳಲ್ಲಿ ಹೂಗಳೇ ನಾಚಿ ಮುದುಡಿ ಕೊಂಡವೇನೋ  ಎಂಬಷ್ಟರ ಮಟ್ಟಿಗೆ ಅವರಿಬ್ಬರ ಬದುಕು ಸಾಗಿತ್ತು. ಅವಳೆಂದರೆ ಜೀವ, ಅವಳಿಲ್ಲದೆ ಬದುಕಿಲ್ಲ ಎನ್ನುತ್ತಿದ್ದ ಕಾಲವದು. ನೋಡದ ಚಲನಚಿತ್ರಗಳಿಲ್ಲ. ಹೋಗದ ಸುಂದರ ತಾಣಗಳಿಲ್ಲ. ಒಟ್ಟಿನಲ್ಲಿ ಅದೊಂದು ಹ್ಯಾಪಿ ಫ್ಯಾಮಿಲಿ.

      ದಿನ ಸರಿಯುತ್ತಿದ್ದಂತೆ ಅವನಲ್ಲಿ ವಿಚಿತ್ರ ಭಾವನೆಗಳು ಮೂಡತೊಡಗಿದವು. ಪದೇ ಪದೇ ಕೋಪ, ಸಿಟ್ಟು, ಅಸಹನೆ ಜಾಸ್ತಿ ಆಗತೊಡಗಿತು. ಯಾವ ಹೆಂಡತಿಯೆಂದರೆ ತನ್ನೆಲ್ಲ ಪ್ರೀತಿಯನ್ನು ಧಾರೆ ಎರೆಯುತ್ತಿದ್ದನೋ ಅದೇ ಹೆಂಡತಿ ಎಂದರೆ ಬುಸುಗುಟ್ಟುವ ಹಾವಂತೆ ತೋರತೊಡಗಿತು ಅವನಿಗೆ. ಅವಳೋ ಏನೂ ಅರ್ಥವಾಗದೆ ಮೌನಿಯಾಗ ತೊಡಗಿದಳು. ಮೌನ ದ ಕಟ್ಟೆ  ಒಡೆದಾಗ ಜಗಳ. ಇಲ್ಲದಿರೆ ಕಣ್ಣೀರು ಅವಳ ಅಸ್ತ್ರ. ಜಗತ್ತಿನ ಎಲ್ಲ ಹೆಣ್ಣುಮಕ್ಕಳಿಗೂ ಕಣ್ಣೀರು  ಎಂದರೆ ಬಹುದೊಡ್ಡ ಆಸ್ತಿ. ಅಪ್ಪನ ಮನೆ ಬಿಟ್ಟು ಗಂಡನ ಮನೆಗೆ ಬರುವ ಪ್ರತಿ ಹೆಣ್ಣು ತನ್ನೊಂದಿಗೆ ಕಣ್ಣೀರು ತರಲು ಮರೆಯುವುದಿಲ್ಲ. ಯಾಕೆಂದರೆ ಆ ಹೆಣ್ಣಿನ ಭಾವನೆಗಳಿಗೆ ಬೆಲೆ ಸಿಗದಿದ್ದಾಗ ಅವಳಿಗೆ ಉಳಿಯುವುದು ಕಣ್ಣೀರು  ಮಾತ್ರ. ಅದೇ ಕಣ್ಣೀರು ಜಗತ್ತಿನ ಅಸಂಖ್ಯಾತ ಮಹಿಳೆಗೆ ಬದುಕಲು ಪ್ರೇರೇಪಿಸಿದೆ, ಬಾಳಲು ಕಾರಣ ನೀಡಿದೆ, ಸಾಯಲು ಪ್ರತಿರೋಧಿಸಿದೆ. 

      ಅವಳೂ ಸಹ ನೋವಾದಾಗಲೆಲ್ಲ ಕಣ್ಣೀರು  ಹಾಕಿ ಸಮಾಧಾನ ಪಟ್ಟಿದ್ದಳು. ಆದರೆ ದಿನ ಗಳೆದಂತೆ ಆತ ಮನುಷ್ಯತ್ವಕ್ಕೆ ಅಪವಾದವೆಂಬಂತೆ ವರ್ತಿಸತೊಡಗಿದ. ದಿನದ ಕುಡಿತದ ಮುಂದೆ ಹ್ರದಯದ ಮಿಡಿತ ಅರ್ಥವಾಗದು ಯಾರಿಗೂ. ಹಾಗೆಂದೂ ಅವರು ಆಗರ್ಭ ಶ್ರೀಮಂತರು ಕೂಡಾ. ಮನೆಯಲ್ಲಿ ತುಂಬಿ ತುಳುಕುತ್ತಿತ್ತು ಹಣ. ಅವನು, ಅವಳು ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸಕ್ಕಿದ್ದರು. ಆದರೂ ಅದೇನೋ ಅಸಮಾಧಾನ ಅವನಿಗೆ. ಅದು ಎಲ್ಲಿಯವರೆಗೆ  ಹೋಯಿತೆಂದರೆ ಅವಳ ಮೇಲೆ ಕೈ ಎತ್ತುವಷ್ಟರ ಮಟ್ಟಿಗೆ ಅದು ಬೆಳೆಯಿತು. ಕೆಲವೊಮ್ಮೆ ಅವಳಿಗೆ ಹೊಡೆದು ಹೊಡೆದು ಕೋಪ ತಣಿಯದಿದ್ದರೆ ಬಡಪಾಯಿ ನಾಯಿಗೆ ಹೊಡೆಯುತ್ತಿದ್ದ. ಒಬ್ಬ ಸುಸಂಸ್ಕ್ರತ ಮನುಷ್ಯ ಹೇಗೆ ಬದಲಾಗಬಲ್ಲ ಎನ್ನುವುದಕ್ಕೆ ಆತ ಜೀವಂತ ಉದಾಹರಣೆಯಾಗಿದ್ದ.  ಇದನ್ನೆಲ ಮೌನವಾಗಿ ಸಹಿಸಿಕೊಳ್ಳುತ್ತಾ ಸಹಿಸಿಕೊಳ್ಳುತ್ತಾ 30 ವರ್ಷಗಳೇ ಕಳೆದುಹೋಯಿತು. ಹೆಣ್ಣಿನ ಸಹನೆಯ ಮುಂದೆ ''ಸಹನೆ'' ಯೇ  ಶರಣಾಗಿ ಬಿಡುತ್ತದೆ. ಅವಳು ಅದೆಷ್ಟರ ಮಟ್ಟಿಗೆ ಸಹಿಸಿಕೊಳ್ಳುತ್ತಾಳೆಂದರೆ   ನೋವು ತನಗಿಟ್ಟುಕೊಂಡು, ನಲಿವನ್ನು ಹಂಚಿವಷ್ಟು. ಆ ನಲಿವಲ್ಲೇ ನೋವನ್ನು ಮರೆಯುವಷ್ಟು.

      ಹೀಗಿರಲೊಂದು ದಿನ, ಅವಳು ಅಡಿಗೆ ಮನೆಯಲ್ಲಿ ತರಕಾರಿ ಕೊಚ್ಚುತ್ತಿದ್ದಳು. ಎಂದಿನಂತೆ ಆತ ಬಂದು ಅವಳೊಂದಿಗೆ ಜಗಳಕ್ಕೆ ಇಳಿದ. ಅವಳು ಅದು ಇದೂ ಮಾತನಾಡಿದಳು. ಕೋಪದಲ್ಲಿ ಆತ ನಾಯಿಗೆ ರಪ ರಪನೆ ಹೊಡೆದ. ಅಷ್ಟೂ ಸಾಲದೆಂಬಂತೆ ಅವಳನ್ನು ಕೆಳಗೆ ಬೀಳಿಸಿ ಕಾಲಿನಲ್ಲಿ ಒದ್ದ. ನರಳಾಡುತ್ತಿರುವ ಅವಳ ಮೇಲೆ ವಿಕ್ರತ ನಗೆ ಬೀರಿ ಗಂಡಸುತನದ ಪೌರುಷವನ್ನು ತೋರಿದ. ಅವಳು ಪ್ರತಿರೋಧ ತೋರಿದರೂ ಅವನ ಬಲದ ಮುಂದೆ ಅವಳು ''ಅಬಲೆ''. ಪುನಃ ಅಳುತ್ತ ಎದ್ದು ತರಕಾರಿ ಕೊಚ್ಚ ತೊಡಗಿದಳು. ಅವನ ಕೋಪ ಮಿತಿ ಮೀರಿತು. ಪುನಃ ಅವಳ ಮೇಲೆ ಹೊಡೆಯಲೆಂದು ಹೋದಾಗ ಅವಳಿಗೆ ಗೊತ್ತಿಲ್ಲದೇ ತಪ್ಪಿ ಅವಳ ಕೈಯಲ್ಲಿರುವ ಚಾಕು ಅವನ ಕೈಗೆ ತಗುಲಿ ರಕ್ತ ಚಿಮ್ಮಿತು. ಕೂಡಲೇ ಆತ ಜಾಗ್ರತನಾದ. ಹೊಡೆಯಲಿಲ್ಲ, ಬಡಿಯಲಿಲ್ಲ. ನೇರವಾಗಿ ಪೋಲಿಸರಲ್ಲಿಗೆ ಹೋಗಿ ಅವಳ ಮೇಲೆ ಹಲ್ಲೆಯ ಆರೋಪ ಹೊರಿಸಿದ. ಉತ್ತಮ ವಕೀಲರು, ಸತ್ಯವನ್ನೇ ಸುಳ್ಳು ಮಾಡಲು ಸಾದ್ಯ, ಹಾಗೆಯೇ ಸುಳ್ಳನ್ನೇ ಸತ್ಯ ಮಾಡಲು ಸಾದ್ಯ ಎನ್ನುವುದು ಮತ್ತೊಮ್ಮೆ ಸಾಬೀತಾಗಿ ಹೋಯಿತು. ಅವಳು ಅವನ ಮೇಲೆ ಹಲ್ಲೆ ನಡಿಸಿದ್ದು ನಿಜ ಎಂದು ದೃಢ ಪಟ್ಟು ಅವಳಿಗೆ ೨ ವರ್ಷಗಳ ಕಾಲ ಜೈಲು ಶಿಕ್ಷೆ ನಿಗದಿಯಾಯಿತು. ಜೀವನ ಪರ್ಯಂತ ಅವನ ನೋವನ್ನು ಸಹಿಸಿದ್ದಕ್ಕೆ, ಅವನೇ ಸರ್ವಸ್ವ ಎಂದು ನಂಬಿದ್ದಕ್ಕೆ, ಎಲ್ಲವನ್ನು ಕಣ್ಣೀರು ಹಾಕಿ ನುಂಗಿದ್ದಕ್ಕೆ ಅವಳಿಗೆ ಸಿಕ್ಕ ಪ್ರತಿಫಲ ಜೈಲು ವಾಸ.

      ಸ್ನೇಹಿತರೆ, ಮೇಲಿನದು ಚಂದಮಾಮನ ಕಥೆಯಲ್ಲ, ಇಲ್ಲ ಬ್ಲಾಗ್ ಬರೆಯಲು ನಾನು ಮಾಡಿಕೊಂಡ ಕಲ್ಪನೆಯೂ ಅಲ್ಲ. ಇದು ಕಳೆದ ವಾರ ನನ್ನೆದುರಿಗೆ ಕುಳಿತ 55 ವರ್ಷದ ಹೆಣ್ಣಿನ ಕರುಣಾ ಭರಿತ ನೋವು. ಇದೀಗ ಅವಳು ಜೈಲಿಗೆ ಹೋಗಲು ೮ ದಿನ ಬಾಕಿಯಿದೆ.   ದಿನ ಎಣಿಸುತ್ತ, ಕಣ್ಣೀರು  ಹಾಕುತ್ತ ಕುಳಿತ ಆ ಹೆಣ್ಣಿನ ನೋವು  ಹೇಳಲು ಅಸಾದ್ಯ. ಅವಳೆದುರಿಗೆ ಕುಳಿತು, ಅವಳ ಬಾಯಿಂದ ಕಥೆ ಕೇಳಿದ ಮೇಲೆ ಅವಳ ಬಗ್ಗೆ ಬರೆಯಲೇ ಬೇಕೆನಿಸಿತು.

      ಅನಿವಾರ್ಯ ಕಾರಣಗಳಿಂದ ಅವಳ ಹೆಸರು ನೀಡಿಲ್ಲ. ಅವಳು ಸ್ವೀಡನ್ನಿನ ಪ್ರಜೆ. ಆತನೂ ಸ್ವೀಡನ್ನಿನ ಪ್ರಜೆ. ಆ ಹೆಂಗಸು ತನ್ನ ಸರ್ವ ಆಸ್ತಿಯನ್ನು ಬಿಟ್ಟು ಹೋಗುತ್ತಿದ್ದಾಳೆ. ಅವಳ ಮನೆ ತುಂಬಾ ಸುಂದರ ಚಿತ್ರ ಗಳು, ಅವಳ ಮಗನ ಕಣ್ಣಲ್ಲಿ ಕಣ್ಣಿರಿನ ಕೋಡಿ. ಬದುಕು ಎಷ್ಟು ವಿಚಿತ್ರ ಎನಿಸತೊಡಗಿದೆ.

ತಾಯಿ ಸಮಾನಳಾದ ಅವಳಿಗೆ ಹೀಗಾಗಬಾರದಿತ್ತು ಎಂಬ ನೋವು ಮನವನ್ನು ಕಾಡುತ್ತಿದೆ. ವಾರವೆಲ್ಲ ಅವಳ ಬಗ್ಗೆ ಚಿಂತಿಸಿ ಮನ ಸೋತಿದೆ.

ಅವಳ ಮನೆ ಬಿಟ್ಟು ಬರುವಾಗ ''ತಾನಿನ್ನು ಬರುತ್ತೇನೆ'' ಎಂದು ಹೇಳಿ ಕಣ್ಣಿರು ಇಟ್ಟಾಗ ಮನಸಿಗೆ ಅದೇನೋ ನೋವು ಆವರಿಸಿತು. 
ಯಾರಿಗೂ ಹೀಗಾಗದಿರಲಿ.  

82 comments:

shridhar said...

ಗುರು ಸರ್ ..
ಭಾವನೆಗಳ ಅಭಿವ್ಯಕ್ತಿ ಚೆನ್ನಾಗಿದೆ .. ಈ ರೀತಿಯ ಕರುಣಾಜನಕ ಸ್ಥಿತಿ ಯಾರಿಗೂ ಬಾರದಿರಲಿ ..

vijayhavin said...

sir tumba manamutuvantaha baraha

ಸಾಗರದಾಚೆಯ ಇಂಚರ said...

ಶ್ರೀಧರ್ ಸರ್
ಮನಸ್ಸಿಗೆ ನಿಜಕ್ಕೂ ದು:ಖ ನೀಡಿದ ಘಟನೆ

ಸಾಗರದಾಚೆಯ ಇಂಚರ said...

vijayhavin

thanks for your comment

nange tumba besaravaagittu kathe keli

ಮನಸು said...

ಆಕೆಯ ನೋವು ಸಂಕಟವೆಲ್ಲ ಚೆನ್ನಾಗಿ ಚಿತ್ರಿಸಿದ್ದೀರಿ........ಈ ರೀತಿ ನೋವು ಯಾರಿಗೂ ಹಾಗಬಾರದು....ದೇವರು ಆಕೆಗೆ ಬೇಗ ಏನಾದರೊಂದು ಪರಿಹಾರ ಸಿಗಲೆಂದು ಪ್ರಾರ್ಥಿಸುವ ಎಲ್ಲರು....

AntharangadaMaathugalu said...

ಓದಿ ನನಗೂ ತುಂಬಾ ಬೇಸರವಾಯ್ತು ಗುರು ಸಾರ್. ಆದರೆ ದುರದೃಷ್ಟವಶಾತ್ ಇದು ಕಥೆಯಲ್ಲ ನೈಜ ಘಟನೆ. ಅವಳಿಗೆ ಯಾರೂ ಯಾವ ರೀತಿಯಲ್ಲೂ ಸಹಾಯ ಮಾಡುವವರಿಲ್ಲವೇ...? ಅಸಹಾಯಕತೆಯ ದುರುಪಯೋಗ ಇದು.. ಅವನು ಅವಳ ಮೇಲೆ ನಡೆಸಿದ ಹಲ್ಲೆಯನ್ನು ವಿಚಾರಣೆ ನಡೆಸುವುದಿಲ್ಲವೇ..?

ಶ್ಯಾಮಲ

sunaath said...

ಗುರುಮೂರ್ತಿಯವರೆ,
ನ್ಯಾಯದ ವಿಪರ್ಯಾಸವನ್ನು ಓದಿ ಮನಸ್ಸಿಗೆ ತುಂಬ ವೇದನೆಯಾಯಿತು. ಇದಕ್ಕೆ ಪರಿಹಾರವಿಲ್ಲವೆ?

ವಾಣಿಶ್ರೀ ಭಟ್ said...

hennu yava yava reeti abhaleyaaguttiddalembudakke nimma katheye sakshi..intaha hennu makkalu nammodane eshtondu eddare..

uttamavaagi baradde hum..

Ganapati Bhat said...

ಹುಂ .... ಎಲ್ಲಿಗೆ ಬಂತು ಮನುಷ್ಯ ಮನುಷ್ಯರ ಸಂಭಂದ .....

shravana said...

ಬರಿ ಬೆಸರವಲ್ಲ, ಅಸಹಾಯಕತೆ ನೆನೆಸಿದರೆ ಮೈ ಉರಿಯುತ್ತೆ.. 30 ವರ್ಷ ಅವನ ದಬ್ಬಾಳಿಕೆ ಸಹಿಸುವ ಅಗತ್ಯವಿತ್ತೆ? ಯಾರಿಗು ಈ ಥರ ಆಗದಿರಲೆಂದು ನಾವು ಹಾರೈಸಿದಷ್ಟೆ ಇಂತಃ ಘಟನೆಗಳು ನಡಿಯೊದು ಮಾತ್ರ ಕಮ್ಮಿಯಾಗಲ್ಲ.

Dr.D.T.K.Murthy. said...

ಗುರು ಸರ್;ಮನ ಮಿಡಿಯುವ ಕರುಣಾಜನಕ ಕಥೆ.ಇದು ಕಥೆಯಲ್ಲ ಜೀವನ!ಮನುಷ್ಯರ ಕತೆ ಎಲ್ಲಾ ಕಡೆಯೂ ಒಂದೇ.ಸ್ವೀಡನ್ನಿನಲ್ಲಿರಲೀ,ಬೆಂಗಳೂರಿನಲ್ಲಿರಲಿ,ಕಟುಕರು ಕಟುಕರೆ.ಇದು ಇನ್ನೊಂದು ಹೆಣ್ಣು ಜೀವದ ವ್ಯಥೆಯ ಕಥೆಯಾಯಿತಲ್ಲಾ ಎಂದು ಬೇಸರ.ಅವಳಿಗೆ ಕಷ್ಟ ಸಹಿಸುವ ಮನಸ್ಥೈರ್ಯ ಬರಲಿ ಎಂದು ಪ್ರಾರ್ಥಿಸುತ್ತೇನೆ.ನಮಸ್ಕಾರ.

ತೇಜಸ್ವಿನಿ ಹೆಗಡೆ said...

ಎಲ್ಲಿಗೇ ಹೋದರೂ ಹೆಣ್ಣಿನ ಶೋಷಣೆ ಮಾತ್ರ ನಿಲ್ಲದು! :( ಏನು ಹೇಳಲೂ ತೋಚುತ್ತಿಲ್ಲ. ಅಲ್ಲೂ ಇಲ್ಲಿಯದೇ ಕಥೆಯೆಂದರೆ........ :(

ಭಾಶೇ said...

ಓದಿ ಹೊಟ್ಟೆ ಉರಿದು ಹೋಯಿತು. ಎಲ್ಲಿ ಹೋದರೂ ಹೆಣ್ಣಿಗೆ ಈ ಪರಿ ಶೋಷಣೆ ತಪ್ಪಿಲ್ಲ.
ಹೆಣ್ಣುಮಕ್ಕಳು ಅದ್ಯಾಕಾದರು ಸಹನೆ ತಳೆದು ಬಾಳುತ್ತರೋ?
ಆ ಪಾಪಿಗೆ ಶಿಕ್ಷೆ ಆಗಬೇಕು. ಸ್ವೀಡನ್ನಿನ ಕಾನೂನಿನಲ್ಲಿ ರಕ್ಷಣೆ ಇಲ್ಲವೇ? ಛೆ!

ಸೀತಾರಾಮ. ಕೆ. / SITARAM.K said...

ಕಥೆ ಓದಿ ಬೇಜಾರಾಯಿತು. ಮೇಲ್ಮನವಿ ಸಾಧ್ಯವಿಲ್ಲವೇ?
ಹಲವು ಮಹಿಳಾಕ್ರಿಯಾಸಂಘಗಳು ಅವಳಿಗೆ ನ್ಯಾಯ ದೊರಕಿಸುವಲ್ಲಿ ಪಾತ್ರವಹಿಸಲಾರವೇ? ಈ ವಿಚಾರದಲ್ಲಿ ನಾವೇನು ಮಾಡಲಾರೆವಾ...
ಕಥೆ ಮನ ಮುಟ್ಟುವಂತೆ ಹೇಳಿದ್ದಿರಾ...

ಅನಂತರಾಜ್ said...

ಅಸಹಾಯಕ, ಅಮಾಯಕ ಹೆಣ್ಣಿಗೆ ಅನುಕ೦ಪದ ಅಲೆ ಬರುತ್ತದೆ, ಆದರೆ ಮೃಗೀಯ ವರ್ತನೆಯ ಗೋಮುಖ ವ್ಯಾಘ್ರಗಳಿಗೆ ಒ೦ದು ಪಾಠವನ್ನು ಕಲಿಸುವವರು ಯಾರು? ಇದು ಒ೦ದು ಸಾಮಾಜಿಕ ಸಮಸ್ಯೆಯ ವಿಚಾರ. ನಿಮ್ಮ ನಿರೂಪಣೆಯಲ್ಲಿ "ದಿನ ಸರಿಯುತ್ತಿದ್ದಂತೆ ಅವನಲ್ಲಿ ವಿಚಿತ್ರ ಭಾವನೆಗಳು ಮೂಡತೊಡಗಿದವು." ಎ೦ದು ತಿಳಿಸಿದ್ದೀರಿ. ಬದಲಾವಣೆಗೆ ಕಾರಣಗಳು ಸ್ಪಷ್ಟವಾಗಲಿಲ್ಲ. ಒಟ್ಟಾರೆ ನಿಮ್ಮ ನೋವಿಗೆ ನಾವೂ ಸ್ಪ೦ದಿಸುತ್ತೇವೆ.

ಅನ೦ತ್

ವನಿತಾ / Vanitha said...

ಸ್ವೀಡನ್ ನಲ್ಲೂ ಕೂಡ ಇಂತಹ ದಬ್ಬಾಳಿಕೆಯೇ..??!!..
Very bad..I'm not able to say anything further:(

ಸಾಗರದಾಚೆಯ ಇಂಚರ said...

ಮನಸು
ಅವಳು ಎರಡು ವರ್ಷ ಅದೇಗೆ ಕಳೆಯುತ್ತಾಳೋ ಗೊತ್ತಿಲ್ಲ
ಬದುಕು ವೈಚಿತ್ರ್ಯಗಳ ಆಗರ

ಸಾಗರದಾಚೆಯ ಇಂಚರ said...

ಶ್ಯಾಮಲಾ ಮೇಡಂ
ವಿಚಾರಣೆ ನಡೆದಿದೆ
ಅವಳು ಹಲ್ಲೆ ಮಾಡಿದ್ದು ನಿಜ ಎಂದು ಸಾಬೀತಾಗಿದೆ
ನ್ಯಾಯಾಲಯಕ್ಕೆ ಅಷ್ಟು ಸಾಕಲ್ಲ

ಸಾಗರದಾಚೆಯ ಇಂಚರ said...

ಸುನಾಥ್ ಸರ್
ಎಲ್ಲಿಯ ಪರಿಹಾರ ಹೇಳಿ
ನ್ಯಾಯಾಲಯಕ್ಕೆ ಮಾನವೀಯತೆ ಮುಕ್ಯವಲ್ಲ ಅಲ್ಲವೇ
ಅದಕ್ಕೆ ಸಾಕ್ಷಿ ಬೇಕು
ಅವಳು ಹಲ್ಲೆ ಮಾಡಿದ್ದು ನಿಜ ಎನ್ನುವುದು ಸಾಬೀತಾಗಿದೆ

ಸಾಗರದಾಚೆಯ ಇಂಚರ said...

ವಾಣಿಶ್ರಿ
ಇದು ಕೇವಲ ಹೆಣ್ಣಿನ ಕಥೆ ಮಾತ್ರ ಅಲ್ಲ
ಒಂದು ಅರೆಕ್ಷಣದ ಕೋಪ ನಮ್ಮನ್ನು ಎಲ್ಲಿಗೆ ತಂದೊಡ್ಡುತ್ತದೆ ಎನ್ನುವುದಕ್ಕೆ ಉದಾಹರಣೆ ಕೂಡ
ಸದಾ ಸಮಾಧಾನಿಯಾದ ಅವಳು ಆ ದಿನ ಮಾಡಿದ ಸಣ್ಣ ತಪ್ಪು ಇಂದು ಇಲ್ಲಿಗೆ ತಂದು ನಿಲ್ಲಿಸಿದೆ

ಸಾಗರದಾಚೆಯ ಇಂಚರ said...

ಗಣಪತಿ
ಸಂಭಂಧಗಳು ನಶಿಸುತ್ತಿವೆ
ಮಾನವೀಯತೆ ಪುಸ್ತಕದ ಬದನೇಕಾಯಿ ಆಗುತ್ತಿದೆ

ಸಾಗರದಾಚೆಯ ಇಂಚರ said...

ಶ್ರಾವಣ
ನಿಜಾ,
ನಾವು ಎಷ್ಟು ಎಚ್ಚರ ಆಗಿರುತ್ತೆವೆಯೋ ಅಷ್ಟು ತಪ್ಪುಗಳು ನಡೆಯುತ್ತವೆ
ಪರಿಹಾರ ಎಂದು, ಹೇಗೆ

ಸಾಗರದಾಚೆಯ ಇಂಚರ said...

Dr.D.T.K.Murthy

ಸರ್ ದೇಶ ಯಾವುದೇ ಆಗಲಿ
ನ್ಯಾಯ ಒಂದೇ ಅಲ್ಲವೇ,
ಆದರೆ ಅವಳಿಗೆ ಇಂಥಃ ವಯಸ್ಸಿನಲ್ಲಿ ಹೀಗಾಗ ಬಾರದಿತ್ತು
ಕೇವಲ ಸಮಯಕ್ಕೆ ಕಾಯಬೇಕು

ಸಾಗರದಾಚೆಯ ಇಂಚರ said...

ತೇಜಸ್ವಿನಿ
ಇಲ್ಲಿ ನಂಗೆ ತಿಳಿದಿರುವುದು ಇವಿಷ್ಟೇ
ಆದರೆ ಅವರ ಬದುಕಿನ ಅದೆಷ್ಟೋ ಘಟನೆಗಳು ನಂಗೆ ತಿಳಿದಿಲ್ಲ
ಮಾನವೀಯತೆ ನಶಿಸಿದರೆ ಎಲ್ಲಿ ಹೋದರು ಒಂದೇ ರೀತಿಯ ಜನತೆ

ಸಾಗರದಾಚೆಯ ಇಂಚರ said...

ಭಾಶೇ

ಕಾನೂನೇ ನೀಡಿದ ಶಿಕ್ಷೆ ಇದು
ಇಲ್ಲಿ ಹೆಣ್ಣು ಗಂಡು ಎಂಬ ಭೇಧ ಭಾವ ಇಲ್ಲ
ಎಲ್ಲರೂ ಒಂದೇ
ತಪ್ಪಿಗೆ ಶಿಕ್ಷೆ

ಸಾಗರದಾಚೆಯ ಇಂಚರ said...

ಸೀತಾರಾಂ ಸರ್
ಇಲ್ಲಿ ಕಾನೂನಿಗೆ ತುಂಬಾ ಬೆಲೆ ಕೊಡುತ್ತಾರೆ
ಕಾನೋನೆ ಶಿಕ್ಷೆ ನೀಡಿದ ಮೇಲೆ ಮೇಲ್ಮನವಿ ಅಂತೆಲ್ಲ ಇಲ್ಲ
ಅವಳೇ ಅವಳ ತಪ್ಪನ್ನು ಒಪ್ಪಿಕೊಂಡಿದ್ದಾಳೆ
ತಾನು ಬೇಕೆಂದೇ ಮಾಡಲಿಲ್ಲ ಆದರೆ ತನ್ನ ಕೈಯಿಂದ ಅವರಿಗೆ ಎಟಾದದ್ದು ನಿಜ ಎಂದಿದ್ದಾಳೆ

ಸಾಗರದಾಚೆಯ ಇಂಚರ said...

ಅನಂತ್ ರಾಜ್ ಸರ್
ಅವಳ ವ್ಯಯಕ್ತಿಕ ವಿಚಾರಗಳೆನಿದೆಯೋ ಗೊತ್ತಿಲ್ಲ,
ನನಗೆ ಅವಳಿಂದ ತಿಳಿದಿದ್ದು ಇಷ್ಟು
ಸಮಾಜ ಎಷ್ಟೇ ಸುಧಾರಿಸಿದರೂ ಮನುಷ್ಯನ ಭಾವನೆಗಳು ಬದಲಾಗದಿರೆ ಅಷ್ಟೇ

ಸಾಗರದಾಚೆಯ ಇಂಚರ said...

ವನಿತಾ
ಇದು ದಬ್ಬಾಳಿಕೆಯೇನೋ ಸರಿ
ಆದರೆ ತಪ್ಪು ಇದೆಯಲ್ಲ
ರಕ್ತ ಎಲ್ಲಿಂದ ಬಂದಿದೆ ಎಂಬುದೇ ನ್ಯಾಯಾಲಯಕ್ಕೆ ಮುಖ್ಯ ಅಲ್ಲವೇ?
ಏನು ಮಾಡೋದು ಹೇಳಿ

shivu.k said...

ಗುರುಮೂರ್ತಿ ಸರ್,

ನಮ್ಮಲ್ಲಿ ಮಾತ್ರ ಇಂಥವೆಲ್ಲಾ ಘಟಿಸುತ್ತವೆ ಅಂದುಕೊಂಡಿದ್ದೆ. ಪ್ರಪಂಚದ ಎಲ್ಲಾ ಭಾಗದಲ್ಲೂ ಪುರುಷ ಪ್ರಧಾನ ಸಮಾಜ ದೌರ್ಜನ್ಯ ನಡೆಯುತ್ತಲೇ ಇದೆ ಎನ್ನುವುದು ಈ ಸತ್ಯ ಕತೆಯಿಂದ ಗೊತ್ತಾಗುತ್ತಿದೆ. ಕತೆಯನ್ನು ಓದಿ ವಿಷಾದ ಉಂಟಾಯಿತು.

AshKuku said...

This incident is not new to any of us.... And according to me it is not something to sympathize for.... A woman is to be blamed for her plight.... What did the damsel profit from her silence??? She had to retaliate the very first instance in order to curb even the slightest thought of such act in the man's mind.... as people say 'NIP IT FROM THE BUD'.... I empathize her situation, but no sympathies for her.... She is solely responsible for her own plight.... Love is different & physical assault is different... One has to stand for him or herself.... No one else can....

Ash...
(http://asha-oceanichope.blogspot.com/)

AshKuku said...

But yes! I must admit...very well written post... I loved the literature used to depict HER..... :)

Ash....
(http://asha-oceanichope.blogspot.com/)

Creativity!! said...

ಬಹಳ ಸಂಕಟ ವೈತು. ಆಕೆಯ ತಪ್ಪು ಇಲ್ದೇನೆ, ಶಿಕ್ಷೆ ಅನುಭವಿಸುವ ಸಂಧರ್ಭ. ಆ ತಾಯಿಯ ಹೃದಯ ಹೇಗಿರಬೇಕು, ಮಗನನ್ನು ಬಿಟ್ಟು ಜೈಲು ವಾಸ ಮಾಡಬೇಕಿಧ್ರೆ. ದೇವ್ರು ಅವಳಿಗೆ ನ್ಯಾಯ ದೊರಸಿಕೊದಲಿ ಎಂದು ಪ್ರಾರ್ಥನೆ ಮಾಡುವೆ.

Uday Hegde said...

dont have words to express.....very sad

Anonymous said...

ಗುರು.. ಇದೆಂತ ನೈಜ ಘಟನೆ?? ಕಥೆಯೇನೋ ಅಂತ ಓದ್ತಾ ಇದ್ರೆ...ನೀವೇ ಆಕೆಯನ್ನ ಕಣ್ಣಾರೆ ನೋಡಿದ್ದೀನಿ ಅಂತೀರಲ್ಲಾ..ಅವಳ ಮನಸ್ಥಿತಿ ಹೇಗಿರಬೇಕು ಅಂತ ಊಹಿಸೋದೇ ಕಷ್ಟ..ಎಲ್ಲದಕ್ಕೂ ಹೆಂಗಸರೇ ಬಲಿಪಶು ಆಗ್ತಾರಲ್ಲ ಅಂತ ಬೇಸರ!
"ಮದುವೆಯ ಮೊದಲಿನ ವಿವರ" ತುಂಬಾ ಚೆನ್ನಾಗಿ ಮೂಡಿಬಂದಿದೆ!

ಸುಬ್ರಮಣ್ಯ ಮಾಚಿಕೊಪ್ಪ said...

ಅವಳು ಹೇಳಿದ್ದು ಸಂಪೂರ್ಣ ಸತ್ಯವಲ್ಲ ಎಂಬುದು ನನ್ನ ಅಭಿಪ್ರಾಯ.

ಸಿಮೆಂಟು ಮರಳಿನ ಮಧ್ಯೆ said...

ಗುರುಮೂರ್ತಿ...

ಮನಕಲಕುವಂಥಹ ಘಟನೆ...!

ಆ ತಾಯಿಯ ಮನಸ್ಥಿತಿ ಊಹಿಸಿ ಬಹಳ ದುಃಖವಾಯಿತು..

ತಾನು ಮಾಡಿರದ ತಪ್ಪಿಗೆ ಯಾಕೆ ಇಂಥಹ ಶಿಕ್ಷೆ ?

ಇದಕ್ಕಾಗಿಯೆ ನ್ಯಾಯ ದೇವತೆಗೆ ಕಪ್ಪು ಬಟ್ಟೆ ಕಟ್ಟಿರುತ್ತಾರೆಯೆ?

ನಿಮ್ಮ ಬರವಣಿಗೆಯ ಶೈಲಿ ಚೆನ್ನಾಗಿದೆ... ಅಭಿನಂದನೆಗಳು..

PARAANJAPE K.N. said...

ಸವಕಲಾಗುತ್ತಿರುವ ಮಾನವೀಯ ಸ೦ಬ೦ಧ, ಸ್ತ್ರೀ ಶೋಷಣೆ - ಇದು ಎಲ್ಲೆಲ್ಲೂ ವ್ಯಾಪಕವಾಗಿರುವ ವಿಚಾರ. ಬರಹದ ಶೈಲಿ ಚೆನ್ನಾಗಿದೆ.

Bhat Chandru said...

ಕತೆ ಅಂತ ಓದ್ತಾ ಕುತವನಿಗೇ ನಿಜವಾಗಿಯೂ ನಡೆದಿದ್ದು ಅಂತ ಗೊತ್ತಾದಾಗ ಕಣ್ಣಾಳೆ ಒದ್ದೆ ಆತು ಗುರು ಸರ್ ಅವ್ರೆ.
ನಿಮ್ಮ ಬರವಣಿಗೆ ಓದಿ ನಮಗೆ ಇಷ್ಟು ಸಿಟ್ಟು ಬರ್ತಾ ಇದ್ದು ಆ ಮನುಷ್ಯ ನ ಮೇಲೆ,, ಇನ್ನು ಅವಳ ಕತೆ ಅವಳಿಂದನೆ
ಕೇಳಿದ ನಿಮ್ಗೆ ಹೇಗೆ ಆಗಿರ್ಗು ಅಲ್ದ?
ಅವಳ ಜೈಲು ಶಿಕ್ಷೆ ಹೇಗಾದ್ರೂ ತಪ್ಪಲಿ.

People around the world criticize India for women harassments.
India has been portrayed as a country with no security for women.
This incident shows it’s not only in India but it’s a global issue.

Divya Mallya - ದಿವ್ಯಾ ಮಲ್ಯ said...

ಹ್ಮ್... ಕರುಣಾಜನಕವಾಗಿದೆ :-(

ಬಾಲು said...

ಗುರು ಮೂರ್ತಿ ಅವರೇ.
ಗಂಡಸು "ಗಂಡ" ಅನ್ನುವ ಪದವಿ ಬಂದ ಮೇಲೆ ಬಹಳಷ್ಟು ಬದಲಾಗುತ್ತಾನೆ, ಇದು ಭಾಗಷ್ಯ "Universal Truth" ಅನ್ಸುತ್ತೆ.

ಪ್ರೀತಿಸಿ ಮದುವೆ ಆಗುತ್ತಾರೆ, ನಮಗಿಂತ ಸುಖವಾಗಿ ಬೇರಾರಿಗೂ ಇರಲು ಸಾದ್ಯವೇ ಇಲ್ಲವೇನೋ ಎಂಬಂತೆ ಬದುಕುತ್ತಾರೆ, ಆದರೆ ಬರ ಬರುತ್ತಾ ಪ್ರೀತಿಯ ಕಾವು ಆರುತ್ತೆ, ಅವನು ಗಂಡ ನ ಹಾಗೆ ವರ್ತಿಸುತ್ತಾನೆ, ಅವಳು ಹೆಂಡತಿ ಆಗಿ ಬಿತ್ತಾಳೆ. ಹಿಂದಿನ ಪ್ರೇಮ ಎಲ್ಲ ಬರಿ ನೆನಪುಗಳು ಆಗಿ ಬಿಡುತ್ತವೆ. ಅಲ್ಲಿ ಹೇಗೋ ಗೊತ್ತಿಲ್ಲ, ಇಲ್ಲಿ ಭಾರತದಲ್ಲಿ ಕೆಲವು ಗಂಡಸರು ಬಚ್ಚಲು ಮನೆಯಲ್ಲಿ ಚಡ್ಡಿ ಕೂಡ ತೊಳೆಯದೇ ಹಾಗೆ ಬಿಟ್ಟು ಬಂದಿರುತ್ತಾರೆ. :(

ಮನಸ್ಸಿಗೆ ತುಂಬಾ ಬೇಸರ ಆಯಿತು ಆಕೆಯ ಕಥೆ ಕೇಳಿ. ಅಲ್ಲಿ ಸ್ವಿಡನ್ ದಲ್ಲಿ ಆಕೆಯ ರಕ್ಷಣೆಗೆ ಯಾವ ಕಾನೂನು ಇಲ್ಲವೇ?

ವಿ.ಆರ್.ಭಟ್ said...

ನಿನ್ನೇನೆ ಓದಿದ್ದರೂ ಪ್ರತಿಕ್ರಿಯಿಸಲು ತಡವಾಯಿತು, ನಿಮ್ಮ ಈ ಲೇಖನ ಮನಸ್ಸಿಗೆ ನೋವು ತಂದಿತು, ಆ ತಾಯಿಯನ್ನು ಜೈಲುಮುಕ್ತರನ್ನಾಗಿಸಲು ಸಾಧ್ಯವಿದ್ದರೆ ತುಂಬಾ ಒಳ್ಳೆಯದಿತ್ತು, ಧನ್ಯವಾದಗಳು

ಸಾಗರದಾಚೆಯ ಇಂಚರ said...

ಶಿವೂ ಸರ್
ಮನುಷ್ಯ ಇದ್ದಲ್ಲಿ ಎಲ್ಲ ಇಂಥಹ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ
ಆದರೆ ಇಲ್ಲಿ ಕೇವಲ ಆ ಹೆಣ್ಣಿನ ಕಥೆ ಮಾತ್ರ ನಮಗೆ ಗೊತ್ತು. ಆ ಗಂಡಿನ ಕಥೆ ಅವನ ಬಾಯಿಂದ ಗೊತ್ತಿಲ್ಲ

ಸಾಗರದಾಚೆಯ ಇಂಚರ said...

Dear Asha
i completely agree with you. You know sometime, we are waiting for the ray of hope. It might be positive side or negative side but waiting n waiting. She might thought that one day her husband may improve. So we never know what future has kept for us.

ಸಾಗರದಾಚೆಯ ಇಂಚರ said...

Dear Asha

thanks for your nice comment.
keep visiting

ಸಾಗರದಾಚೆಯ ಇಂಚರ said...

Uday,

yes it is.

I am also speechless

ಸಾಗರದಾಚೆಯ ಇಂಚರ said...

Creativity!!

ಅವಳ ತಪ್ಪೆಂದರೆ ಚಾಕು ಅವನಿಗೆ ತಾಗಿದ್ದು
ಅದು ಅವಳು ಬೇಕೆಂತಲೇ ಮಾಡಿದಳೋ ಇಲ್ಲ ಗೊತ್ತಿಲ್ಲದೇ ಆಯಿತೋ ನಮಗಂತೂ ಗೊತ್ತಿಲ್ಲ
ಅವಳ ಮಾತಲ್ಲೇ ನಂಬಿಕೆ ಇಟ್ಟರೆ ಇದು ನಿಜಕ್ಕೂ ದುರಂತ ಸಂಗತಿ

ಸಾಗರದಾಚೆಯ ಇಂಚರ said...

ಸುಮನ madam
ಅವಳ ಕಥೆ ಕೇಳಿ ನಂಗೆ ತುಂಬಾ ಬೇಸರವಾಯಿತು
ಅದು ಇಂಥಹ ವಯಸ್ಸಿನಲ್ಲಿ ಜೈಲು ಶಿಕ್ಷೆ ಎಂದರೆ
ಛೆ ಎನಿಸಿತು

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಮಾಚಿಕೊಪ್ಪ ಸರ್

ಸತ್ಯವೋ ಸುಳ್ಳೋ,
ಶಿಕ್ಷೆಯಂತೂ ನಿಗದಿಯಾಗಿದೆ,
ಹೋಗಲು ತಯಾರಿ ನಡೆಸಿದ್ದಾಳೆ

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
ನ್ಯಾಯ ದೇವತೆಗೆ ಸಂಪೂರ್ಣ ನ್ಯಾಯ ತಿಳಿಯಬಾರದೆಂದೆ ಬಟ್ಟೆ ಕಣ್ಣಿಗೆ
ನ್ಯಾಯಾಲಯಕ್ಕೆ ಕರುಣೆ ಮುಖ್ಯವಲ್ಲ
ಸಾಕ್ಷಿ ಮುಖ್ಯ
ಅವಳು ಸೋತಿದ್ದಾಳೆ
ಶಿಕ್ಷೆ ನಿಗದಿಯಾಗಿದೆ
ಅಸಹಾಯಕರು ಎಂದಿಗೂ ಅಸಹಾಯಕರೆ

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್
ಎಲ್ಲಿಯವರೆಗೆ ನಾವು ನಮ್ಮ ಮನಸ್ಸಿನಲ್ಲಿ ಬದಲಾವಣೆ ತರುವುದಿಲ್ಲವೋ ಅಲ್ಲಿಯವರೆಗೆ ಇದೆಲ್ಲ ಇರುವುದೇ
ಆದರೂ ಬೇಸರ ವಾಗುತ್ತದೆ

ಸಾಗರದಾಚೆಯ ಇಂಚರ said...

ಚಂದ್ರು ಸರ್
ಜೈಲು ಶಿಕ್ಷೆ ತಪ್ಪಲು ಸಾದ್ಯ ಇಲ್ಲ
ಆದರೆ ಅವಳ ನಡತೆ ಜೈಲಿನಲ್ಲಿ ಒಳ್ಳೆಯದಾದರೆ ಅವಳು ಬೇಗನೆ ಹೊರ ಬರಲು ಸಾದ್ಯವಷ್ಟೇ
ಏನೂ ಹೇಳಬೇಕೆಂಬುದೇ ತಿಳಿಯುತ್ತಿಲ್ಲ

ಸಾಗರದಾಚೆಯ ಇಂಚರ said...

ದಿವ್ಯಾ
ನಿಜಕ್ಕೂ ಮನ ಕಲಕುತ್ತಿದೆ

ಸಾಗರದಾಚೆಯ ಇಂಚರ said...

ಬಾಲು ಸರ್
ಬದುಕು ಎಷ್ಟು ವೈಚಿತ್ರ್ಯಗಳ ಆಗರ
ನಾಳೆ ಏನಾಗುತ್ತದೆ ಎನ್ನುವುದು ಇಂದೇ ತಿಳಿದರೆ ನಾಳಿನ ಬದುಕಿಗೆ ಎಲ್ಲಿಯ ಆಸಕ್ತಿ
ಅದಕ್ಕೆ ಕೆಲವೊಮ್ಮೆ ಬದುಕು ನಮ್ಮೊಂದಿಗೆ ಆಟ ಆಡುತ್ತದೆ
ಅವಳ ತಪ್ಪಿಗೆ ನ್ಯಾಯಾಲಯ ಶಿಕ್ಷೆ ನೀಡಿದೆ
ಆದರೆ ಅವಳ ಗಂಡ ತಪ್ಪಿಸಿಕೊಂಡಿದ್ದಾನೆ ಶಿಕ್ಷೆಯಿಂದ ಎನ್ನುವುದೇ ಬೇಸರ

ಸಾಗರದಾಚೆಯ ಇಂಚರ said...

ವಿ.ಆರ್.ಭಟ್ ಸರ್

ಏನು ಮಾಡೋಣ ಹೇಳಿ
ನಮ್ಮ ಕೈಯಲ್ಲಿ ಏನೂ ಇಲ್ಲ ಈಗ
ಬೇಸರವಾಗುತ್ತಿದೆ

SANTOSH MS said...

Guru Sir,

The fact is really annoying. Even I felt as if I am in her situation. May god give her peace and happiness in future.

Namratha said...

ಇದರಲ್ಲಿ ಆ ಪಾಪದ ಹೆಣ್ಣು ಬಲಿಪಶು.. ಇನ್ನುಕೆಲವು ಘಟನೆಗಳಲ್ಲಿ ಗಂಡಸರೂ ಬಲಿಪಶುಗಳಾಗಿದ್ದಾರೆ... ಅವರವರು ಅವರವರ, ಮಾನ, ಪ್ರಾಣ, ಅನಿವಾರ್ಯ ಹಕ್ಕುಗಳನ್ನು ಯಾವುದೇ ದಾಕ್ಷಣ್ಯಕ್ಕೊಳಗಾಗದೆ ಕಾಪಾಡಬೇಕು... ಅದೇ ಧರ್ಮ.. ಆಶಾ ಅವರು ಹೇಳಿದಂತೆ ಸ್ಥಿತಿ ತಿಳಿಯಾಗಿದ್ದಗಲೇ ಅವರು ಅವರ ಗಂಡನನ್ನ ಯಾವುದೊ ರೀತಿಯಲ್ಲಿ ಬುದ್ಧಿ ಹೇಳಿ ತಮ್ಮ ಸಂಸಾರವನ್ನು ಉಳಿಸಿಕೊಳ್ಳಬಹುದಿತ್ತು .. ಆತ ಇನ್ನೂ ಮೃಗವಾಗಲು ಬಿಟ್ಟಿದ್ದೆ ಅವರ ತಪ್ಪು.. ನಾನು ಆ ಹೆಣ್ಣಿನ ಪರವಾಗಿ ಮಾತ್ರ ಮಾತನಾಡುತ್ತಿಲ್ಲ... ಯಾರು ಶೋಷಣೆಗೆ ಒಳಗಾಗಿದ್ದಾರೋ ಅವರ ಯೋಚನಾಶಕ್ತಿ ಇನ್ನೂ ದೃಢವಾಗಿದ್ದಲ್ಲಿ ಅವರು ಹೆದರದೆ, ದಾಕ್ಷಣ್ಯಕ್ಕೊಳಗಾಗದೆ, ಅಧೋಗತಿಗೆ ಹೋಗುತ್ತಿರುವ ಅವರ ಸಂಗಾತಿಯನ್ನು ಈ ವಿಕೃತಿಯಿಂದ ಪಾರು ಮಾಡಲು ಪ್ರಯತ್ನಿಸಬೇಕು.. ಇದು ಕಷ್ಟ .. ಆದರೂ ಪ್ರಯತ್ನಿಸಿದರೆ ಫಲವುಂಟು.. ಮೇಲಾಗಿ ಆ ದೇವರು ಒಳ್ಳೆಯವರ ಕೈ ಬಿಡುವುದಿಲ್ಲ ಎಂದು ನಂಬಿದ್ದೇನೆ..
ದೇವರು ಆಕೆಗೆ ಮತ್ತೆ ಆತನಿಗೆ ಬೇಗನೆ ಮನಃಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ..

SSK said...

ಬದುಕು ಎಷ್ಟು ವಿಚಿತ್ರ ಅಲ್ಲವಾ...?
ಎಷ್ಟೆಲ್ಲಾ ಕಷ್ಟ ಸಹಿಸಿಕೊಂಡೂ ಜೀವನದ ೩೦ ವರ್ಷಗಳು ಅವನೊಂದಿಗೆ ಕಳೆದಿದ್ದಾಳೆ
ನಿಜವಾಗಿಯೂ ಅವಳು ಗ್ರೇಟ್.....!
ಆದರೆ ಇಂತಹವರ ಮೇಲೆ ಕೋಪವೂ ಬರುತ್ತೆ, ಯಾಕೆಂದರೆ ಯಾವುದನ್ನಾದರೂ ಸರಿ,
ಸಹಿಸಲು ಒಂದು ಮಿತಿ ಇದೆ ಅಲ್ಲವೇ ?
ಅಪರಾಧ, ದಬ್ಬಾಳಿಕೆ ಮಾಡುವವರನ್ನು ಸಹಿಸಿಕೊಳ್ಳುವುದೂ ಸಹ ಅವರುಗಳಿಗೆ ಕುಮ್ಮಕ್ಕು ನೀಡಿ
ಇವರುಗಳು ಅಪರಾಧ ಮಾಡಿದಂತೆ.

ಈ ಭೂಮಿಯ ಮೇಲಿನ ಒಂದೊಂದು ಮನುಷ್ಯನದೂ ಒಂದೊಂದು ರೀತಿಯ ಕಥೆ.
ಆದರೂ, ಪಾಪ ಆಕೆಗೆ ಹೀಗಾಗಬಾರದಿತ್ತು .
ಮನುಷ್ಯರಿಂದ ಸಿಗದ ನ್ಯಾಯ ಆಕೆಗೆ ಆ ದೇವರಿಂದಲಾದರೂ ಸಿಗಲಿ ಎಂದು ಆಶಿಸೋಣ!

ಸಾಗರದಾಚೆಯ ಇಂಚರ said...

ನಮ್ರತಾ
ನೀವು ಅನ್ನೋದು ನಿಜಾ
ಆಕೆಯ ಗಂಡನ ಮನೋಸ್ಥಿತಿ ಹೇಗಿತ್ತು ಅನ್ನೋದು ನಮಗೆ ತಿಳಿದಿಲ್ಲ
ಇಲ್ಲಿಯವರೆಗೂ ಅವಳ ಮಾತನ್ನೇ ನಂಬಿ ಕುಳಿತರೆ ಸಾಲದು
ಎರಡೂ ಕಡೆಯಿಂದ ಕಥೆ ಕೇಳಲೇಬೇಕು
ಆದರೆ ಅವಳ ಮಾತಿನಲ್ಲಿ ಮೋಸ ಕಾಣಲಿಲ್ಲ
ಅಸಹಾಯಕತೆ ಎದ್ದು ಕಾಣುತ್ತಿತ್ತು
ಇನ್ನು, ಎಲ್ಲ ಹೀನುಮಕ್ಕಳು ತಮ್ಮ ಗಂಡ ನ ಸುಧಾರಿಸಲು ಪ್ರಯತ್ನಿಸುತ್ತಾರೆ,
ಕೆಲವರಿಗೆ ಯಶಸ್ಸು ಸಿಕ್ಕರೆ ಇನ್ನು ಕೆಲವರಿಗೆ ನೋವು
ಆಕೆ ಈಗಾಗಲೇ ಗಂಡನಿಂದ ವಿಚ್ಚೇದನ ಪಡೆದಿದ್ದಾಳೆ
ಕಾಲ ಮಿಂಚಿ ಹೋಗಿದೆ
ಶಿಕ್ಷೆ ಅನುಭವಿಸಲೆಬೇಕಾಗಿದೆ

ಸಾಗರದಾಚೆಯ ಇಂಚರ said...

Santhosh
yes u r right

its unbelievable but true

ಸಾಗರದಾಚೆಯ ಇಂಚರ said...

SSK

ನಾವು ಕೆಲವೊಮ್ಮೆ ನಮಗೆ ಅರಿವಿಲ್ಲದೆ ಎಷ್ಟೋ ಅನ್ಯಾಯಗಳನ್ನು ಸಹಿಸಿಕೊಳ್ಳುತ್ತೇವೆ
ನಮಗೆ ಗೊತ್ತಿದೆ, ಯಾವ ರಾಜಕಾರಣಿಯೂ ನಮಗೆ ಉದ್ದಾರ ಮಾಡುವ ಭರವಸೆ ನೀಡಲಾರ ಎಂದು
ಆದರೂ ಅವನನ್ನೇ ನಂಬಿ ಎಷ್ಟೋ ವರ್ಷ ಬದುಕುತ್ತಿದ್ದೇವೆ
ನಮ್ಮ ಸಹನೆಯ ಮಿತಿ ಅವಳ ಮಿತಿಗಿಂತ ದೊಡ್ಡದು ಎಂದು ಅನ್ನಿಸುವುದಿಲ್ಲವೇ?
ನಮಗೆ ತಿಳಿಯದೆಯೋ, ತಿಳಿದೋ ನಾವೂ ಸಹ ಕೆಲವು ಅನಿವಾರ್ಯತೆಗೆ ಸಿಲುಕಿ ದಾಳ ಗಳಾಗಿ ಬಿಡುತ್ತೇವೆ
ಅವಳ ಕಥೆ ಮನ ಕಲಕುವ ವೇದನೆ

Raghu said...

ಏನ್ ಜನ ರೀ..
ಈ ಸ್ಟೋರಿ ಬೇಸರ ತರಿಸಿದೆ. ಹಾಗಗಬಾರದಿತ್ತು.
ನಿಮ್ಮವ,
ರಾಘು .

ಸಾಗರದಾಚೆಯ ಇಂಚರ said...

ರಘು ಸರ್
ಏನು ಮಾಡೋದು
ಕೆಲವರಿಗೆ ಅರ್ಥ ಆಗೋದೇ ಕಷ್ಟ
ಬದುಕು ಅಂದ್ರೆ ಅವರಿಗೆ ಆಟ
ಇನ್ನು ಕೆಲವರಿಗೆ ಅದೊಂದು ನೋವಿನ ಕಂತೆ

!! ಜ್ಞಾನಾರ್ಪಣಾಮಸ್ತು !! said...

ಸಾಗರದಾಚೆಯ ಇಂಚರ ,
ನಿಜಕ್ಕೂ ಕರುಣಾಜನಕ,ಭಾವುಕ ನೈಜಚಿತ್ರಣ..
ನೀವು ಹೇಳಿದಂತೆ ಯಾರಿಗೂ ಹೀಗಾಗದಿರಲಿ..

Deepasmitha said...

ದುಃಖ ತರಿಸುವ ಕಥೆ. ಕಟ್ಟು ಕಥೆ ಎಂದು ಓದುತ್ತ ಹೋದಾಗ ಇದು ಸತ್ಯ ಕಥೆ ಎಂದು ಓದಿ ಇನ್ನೂ ಬೇಸರವಾಯಿತು

ಸಾಗರಿ.. said...

ಅಬ್ಬಬ್ಬ ಅದೆಂತಹ ನೋವು ಕೊಟ್ಟುಬಿಟ್ಟ ಆ ಮನುಷ್ಯ. ಇಳಿವಯಸ್ಸಲ್ಲಿ ಜೈಲು. ನಿಜಕ್ಕೂ ಬೇಸರವಾಯ್ತು.

Snow White said...

odi tumba bejaraytu sir..avarige nyaya sigali endu bedikolluve..

nimmolagobba said...

ಮನಸ್ಸು ತುಂಬಾ ಭಾರವಾಯಿತು. ಕೆಲವೊಮ್ಮೆ ಕಷ್ಟ ಪಟ್ಟವರಿಗೆ ಇಂತಹ ಸಂದರ್ಭಗಳು ಬರುತ್ತವೆ.ನೊಂದ ಜೀವಕ್ಕೆ ನ್ಯಾಯ ಸಿಗಲಿ.ನೋಯಿಸಿದ ಮ್ರುಗಕ್ಕೆ ತಕ್ಕ ಶಾಸ್ತಿಯಾಗಲಿ . ಆಕೆಯ ಜೀವನಕ್ಕೆ ವಸಂತ ಮತ್ತೆ ಬರಲಿ.

Manasa said...

Guru, Petition sign maado haagenaadaru irabekalla... shikshe indaa hora baralu???

Iddare ellaru seri sign maadi uLisabahudeno anta nanna anisike :)

ಶಿವಪ್ರಕಾಶ್ said...

Its very sad...
i don't know what to comment...

ಕ್ಷಣ... ಚಿಂತನೆ... bhchandru said...

ಗುರು, ಓದಿ ಮನಸ್ಸು ತುಂಬಾ ಭಾರವಾಯಿತು. ಕಷ್ಟ ಪಟ್ಟವರಿಗೆ ಇಂತಹ ಸಂದರ್ಭಗಳು ಬರುತ್ತವೆ.ನೊಂದ ಜೀವಕ್ಕೆ ನ್ಯಾಯ ಮನಸ್ಥೈರ್ಯ ಸಿಗಲಿ.

ಸಾಗರದಾಚೆಯ ಇಂಚರ said...

!! ಜ್ಞಾನಾರ್ಪಣಾಮಸ್ತು !!

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೌದು ಇಂಥಹ ಸನ್ನಿವೇಶ ಇನ್ನಾರಿಗೂ ಬರದಿರಲಿ

ಸಾಗರದಾಚೆಯ ಇಂಚರ said...

Deepasmitha

ನನಗೂ ಮನಸ್ಸು ತುಂಬಾ ನೋವು ನೀಡಿತು
ನಿಮ್ಮ ಕನಿಕರಕ್ಕೆ ವಂದನೆಗಳು

ಸಾಗರದಾಚೆಯ ಇಂಚರ said...

ಸಾಗರಿ..

ಬದುಕೇ ಹಾಗೆ
ನಾವಂದುಕೊಂಡಂತೆ ಆಗದು ಯಾವುದೂ
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು

ಸಾಗರದಾಚೆಯ ಇಂಚರ said...

Snow White

ನಿಮ್ಮ ಪ್ರೀತಿಯ ಹಾರೈಕೆ ನಿಜವಾಗಲಿ

ಸಾಗರದಾಚೆಯ ಇಂಚರ said...

nimmolagobba

ಹೌದು\
ಆಕೆಗೆ ನ್ಯಾಯ ಸಿಗಲಿ ಎಂದು ಪ್ರಾರ್ಥಿಸಬೇಕಷ್ಟೇ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಮಾನಸ
ಅದು ಅಗೊದಾಗಿದ್ರೆ ಮಾಡಬಹುದಿತ್ತು
ಅವಳು ಈಗ ಜೈಲಿಗೆ ಹೋಗಿದಾಳೆ
ಅವಳೇ ತಪ್ಪು ನಂದೇ ಅಂತ ಒಪ್ಪಿಕೊಂಡು ಬಿಟ್ಟಿದಾಳೆ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

Shivu

really its sad
but thats how life is

ಸಾಗರದಾಚೆಯ ಇಂಚರ said...

ಕ್ಷಣ... ಚಿಂತನೆ... bhchandru

ನಿಜಾ
ಅವಳಿಗೆ ಇದನ್ನು ತಾಳಿಕೊಳ್ಳುವ ಶಕ್ತಿ ಬರಲಿ

ಜಲನಯನ said...

ಗುರು...ಇದು ನಿಜಕ್ಕೂ ಟ್ರಾಜಿಡಿ...ಅಲ್ಲ ಇಷ್ಟು ವರ್ಷಗಳ ಜೊತೆ-ಜೊತೆ ನಂತರವೂ ಹೀಗೆ ಕ್ರೂರನಾಗೋದೇ ಅವ...ಛೇ...ಆ ವಿಷಯದಲ್ಲಿ ನಮ್ಮವರು ಎಷ್ಟೋ ಉತ್ತಮ..ಅಲ್ಲಿನವರ ಕಥೆ ವ್ಯಥೆ...

ಮನಮುಕ್ತಾ said...

ತು೦ಬಾ ಸ೦ಕಟ ತರುವ೦ತಹ ಘಟನೆ...ಯಾರಿಗೂ ಬಾರದಿರಲಿ.
ವಿಷಯದ ನಿರೂಪಣೆಯನ್ನು ಚೆನ್ನಾಗಿ ಮಾಡಿದ್ದೀರ.

ಸಾಗರದಾಚೆಯ ಇಂಚರ said...

ಅಜ್ಹಾದ್ ಸರ್
ನಿಜಾ
ಕೆಲವೊಮ್ಮೆ ನಂಗೂ ಹಾಗೆ ಅನ್ನಿಸಿದೆ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

ಮನಮುಕ್ತ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೀಗೆಯೇ ಬರುತ್ತಿರಿ