Thursday, July 22, 2010

ಜನುಮದಿನದ ಹಾರೈಕೆ....

ನನ್ನೊಂದಿಗೆ ಹೆಜ್ಜೆ ಹಾಕಿದ, ಬಾಳ ನಾಟ್ಯ ರಂಗದಲ್ಲಿ ನನ್ನೊಂದಿಗೆ ನರ್ತಿಸಿದ, ನೋವಿನಲ್ಲಿ ತಾಯಿಯಾಗಿ, ನಲಿವಿನಲ್ಲಿ ಗೆಳತಿಯಾಗಿ, ಸಾಧನೆಯಲ್ಲಿ ಬೆನ್ನೆಲುಬಾಗಿ ನಿಂತ ನನ್ನ ಮನದಾಳದ ಒಡತಿ,  ಬಾಳ ಸಂಗಾತಿ ಗೀತಾ ಳ 27 ನೇ ಜನುಮದಿನ ಇಂದು (23 ಜುಲೈ). ಅವಳಿಗೆ ಒಂದು ಪುಟ್ಟ ಶುಭ ಹಾರೈಕೆ ಕವನದ ಮೂಲಕ. ನನ್ನನ್ನು ಬ್ಲಾಗ್ ಬರೆಯಲು ಪ್ರೇರೇಪಿಸಿ, ಹುರುದುಂಬಿಸಿದವಳು ಅವಳು. ಇಂದು ಬ್ಲಾಗಿನ ಮೂಲಕವೇ ಅವಳಿಗೊಂದು ಶುಭ ಹಾರೈಕೆ. ನೂರಾರು ವರುಷ ಅವಳು ಸಂತಸದಿ ಬಾಳಲಿ ಎಂಬುದೇ ಜನುಮದಿನದ ಹಾರೈಕೆ.ಚೆಲುವೆ ನಿನ್ನ ಮೊಗದ ನೋಟ, ಹೂವು ಒಂದು ಅರಳಿದಂತೆ
ಒಲವ ಭಾವ ತುಂಬಿ ಮನಸು ಪುಳಕಗೊಂಡಿದೆ
ನಿನ್ನ ಪ್ರೇಮದಾಳದಲ್ಲಿ ಅರಳುತಿರುವ ಮೀನು ನಾನು
ಬಿರಿದ ಹೂವಿನಲ್ಲೆ ನಿನ್ನ ಪ್ರೀತಿ ಕಾಣುವೆ

ವರುಷ ಬಂತು ಇಪ್ಪತೆಂಟು, ಅಳಿಯಲಾರದಂತ ನಂಟು
ಹರುಷ ಎಂದೂ ಮನದಿ ಇರಲಿ, ಇರುವೆ ಜೊತೆಗೆ ನಾ
ಅಂದು ಇಂದು ಎಂದು ನೀನು, ಅಳಿಸಲಾರದಂತ ಸೊಗಸು
ಮುಗುದೆ ನಿನ್ನ ಮೊಗವ ನೋಡಿ, ನನ್ನೇ ಮರೆವೆ ನಾ

ಜನುಮ ದಿನದ ನೆನಪಿಗಾಗಿ, ಬರೆದೆ ಒಂದು ಪ್ರೇಮ ಕವನ
ಎದೆಯ ಆಳದಿಂದ ಬಂದ, ಭಾವ ಮಂಥನ
ಶುಭವ ನಿನಗೆ ಕೋರಿ ಒಲವೆ, ಅಭಯ ಹಸ್ತ ಎಂದೂ ಇಡುವೆ
ಎನ್ನ ಮನದ ತುಂಬ ನಿನ್ನ ತುಂಬಿ ಕೊಳ್ಳುವೆ

ಬಾಳಿನಲ್ಲಿ ನೋವು ನಲಿವು, ಇದ್ದರೇನೆ ಬದುಕು ಚೆಂದ
ಗೆಳತಿ ನಿನ್ನ ಹರುಷಕೆಂದು, ಪಣವ ತೊಟ್ಟಿಹೆ
ನೂರು ಕಾಲ ಬಾಳು ನೀನು,  ಇರುವೆ ಜೊತೆಗೆ ಎಂದೂ ನಾನು
ಎನ್ನ ಹರಕೆ ದೇವರಲ್ಲಿ, ಸದಾ ಇಟ್ಟಿಹೆ

57 comments:

ದಿವ್ಯಾ said...

ನನ್ನದೂ ಒಂದು ಶುಭಾಶಯ... :-)
ಅವರೆಲ್ಲ ಕನಸುಗಳು ಈಡೇರಲಿ ... :-)

nimmolagobba said...

ಬಾಳ ಸಂಗಾತಿಗೆ ಉತ್ತಮ ಕೊಡುಗೆ. ನಿಮ್ಮ ಬಾಳ ಸಂಗಾತಿಗೆ ನಮ್ಮ ಕುಟುಂಬದ ಶುಭಾಶಯಗಳು.

nimmolagobba said...

ಬಾಳ ಸಂಗಾತಿಗೆ ಪ್ರೀತಿಯ ಅಮೂಲ್ಯ ಕಾಣಿಕೆ . ನಮ್ಮ ಕುಟುಂಬದ ಶುಭಾಶಯಗಳು .

Ranjita said...

ಹುಟ್ಟು ಹಬ್ಬದ ಶುಭಾಶಯಗಳು ಅತ್ಗೆಗೆ . :)
ಚಂದದ ಕವನದೊಂದಿಗೆ ಶುಭಾಶಯ ಆಹಾ ! ಸಕ್ಕತ್ತಾಗಿದ್ದು ಗುರುಅಣ್ಣ :)

ಸೀತಾರಾಮ. ಕೆ. / SITARAM.K said...

ಮೊಟ್ಟ ಮೊದಲಿಗೆ ಗೀತಾರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ನಿನ್ನೆ ತಮ್ಮ ಆರ್ಕುಟ್ ತಮ್ಮ ಜನ್ಮದಿನ ತೋರಿಸುತ್ತಿತ್ತು. ಹಾಗಾಗಿ ತಮಗೂ ತಡವಾಗಿ ಹುಟ್ಟುಹಬ್ಬದ ಶುಭಾಶಯಗಳು. ಅದ್ಭುತವಾದ ಗೀತ ರಚನೆ ಮಾಡಿದ್ದಿರಾ ಗೀತಾರ ಹುಟ್ಟುಹಬ್ಬಕ್ಕೆ-ಇದಕ್ಕಿಂತಾ ದೊಡ್ಡ ಉದುಗೊರೆಯಿಲ್ಲ ಅವರಿಗೆ. ಇಬ್ಬರಿಗೂ ಶುಭಾಶಯಗಳು ಹೀಗೆ ತಮ್ಮ ದಾಂಪತ್ಯ ನೂರ್ಕಾಲ ಹಸಿರಾಗಿ ನಳನಳಿಸಲಿ.

ಚುಕ್ಕಿಚಿತ್ತಾರ said...

nice poem..
happy birthday to your spouse..

shivu.k said...

ಗುರುಮೂರ್ತಿ ಹೆಗಡೆ ಸರ್,

ನಿಮ್ಮ ಬಾಳಸಂಗಾತಿ ಗೀತರವರ ಹುಟ್ಟುಹಬ್ಬದ ಶುಭಾಶಯಗಳು ಹೀಗೆ ನೂರಾರು ಕಾಲ ಒಟ್ಟಾಗಿ ಬಾಳಲು ದೇವರ ಆಶೀರ್ವಾದ ಸಿಗಲೆಂದು ಹಾರೈಸುತ್ತೇನೆ.

ಜ್ಯೋತಿ ಶೀಗೆಪಾಲ್ said...

chennagide kavana... convey my wishes to Geetakka..

shridhar said...

ಗುರು ಸರ್ ,
ಜನುಮದಿನದ ಕೊಡುಗೆ ನಿಮ್ಮ ಈ ಕವನ. ಚೆನ್ನಾಗಿದೆ.
ನಿಮ್ಮವರಿಗೆ ನನ್ನ ಕಡೆಯಿಂದಲೂ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಮನಮುಕ್ತಾ said...

ನಿಮ್ಮ ಮಡದಿ ಗೀತಾ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.ನೀವು ನಿಮ್ಮ ನಲ್ಮೆಯ ಗೀತಾರಿಗಾಗಿ ಸು೦ದರವಾಗಿ ಕವನಿಸಿ ಶುಭ ಹಾರೈಸಿದ್ದೀರಿ.ಕವನ ತು೦ಬಾ ಚೆನ್ನಾಗಿದೆ.

ಸಂದೀಪ್ ಕಾಮತ್ said...

ನಂದೂ ಒಂದು ಶುಭಾಶಯ ತಲುಪಿಸಿ..

sunaath said...

ಬಾಳಗೆಳತಿಗೆ ಒಲವಿನ ಉಡುಗೊರೆಯನ್ನು ಕವನರೂಪದಲ್ಲಿ ಕೊಟ್ಟಿದ್ದೀರಿ. ಕವನಕ್ಕೆ ತಕ್ಕ ಚಿತ್ರವೂ ಇಲ್ಲಿದೆ. ನಿಮ್ಮ ಶ್ರೀಮತಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನೀವಿಬ್ಬರೂ
ಸುಖಮಯವಾದ ದೀರ್ಘ ಜೀವನ ನಡೆಯಿಸಿರಿ ಎಂದು ಹಾರೈಸುತ್ತೇನೆ.

ಪ್ರಗತಿ ಹೆಗಡೆ said...

ಹುಟ್ಟು ಹಬ್ಬದ ಹಾರ್ಧಿಕ ಶುಭಾಷಯಗಳು ಗೀತಾಅವರಿಗೆ... ಕವನ ಸೊಗಸಾಗಿದೆ... ಒಳ್ಳೆಯ ಉಡುಗೊರೆ...

ಸಾಗರಿ.. said...

ಗುರು ಅವರೇ,
ತಮ್ಮ ಬಾಳ ಸಂಗಾತಿಗೆ ನನ್ನದೂ ಒಂದು ಶುಭ ಹಾರೈಕೆ, ತಮ್ಮ ಕವನ ಕೂಡ ಬಹಳ ಸುಂದರವಾಗಿದೆ. ತಮ್ಮ ದಾಂಪತ್ಯದ ಪ್ರಯಾಣ ಸುಧಿರ್ಘವಾಗಿಯೂ ಸುಖಮಯವಾಗಿಯೂ ಇರಲೆಂಬ ಹಾರೈಕೆ ನನ್ನದು

ಮನದಾಳದಿಂದ............ said...

ಗುರು ಸರ್,
ಅತ್ತಿಗೆಗೆ ಜನುಮದಿನದ ಹಾರ್ದಿಕ ಶುಭಾಶಯಗಳು.
ಚಂದದ ಕವನದ ಉಡುಗೊರೆ...........

ವಾಣಿಶ್ರೀ ಭಟ್ said...

ನನ್ನದು ಒಂದು ಶುಭಾಶಯ....

Uday Hegde said...

I wish her many more happy returns of the day...

AntharangadaMaathugalu said...

ಗುರು ಸಾರ್....
ತಮ್ಮ ಒಲವಿನ ಬಾಳ ಗೆಳತಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ದಾಂಪತ್ಯದ ಸೊಗಸಾದ ಬಳ್ಳಿಯಲ್ಲಿ, ಸುಂದರ ಹೂವುಗಳು ಅರಳಲಿ.....

ಶ್ಯಾಮಲ

Nisha said...

ಗೀತಾರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

Subrahmanya said...

ಸದಾಶಯದ ಕವನದೊಂದಿಗೆ ಒಳ್ಳೆಯ ಕಾಣಿಕೆಯನ್ನೇ ಕೊಟ್ಟಿದ್ದೀರಿ. ನನ್ನ ಹೃತ್ಪೂರ್ವಕ ಶುಭಾಶಯಗಳು.

Ganapati Bhat said...

ಇಬ್ಬರಿಗೂ ಹುಟ್ಟು ಹಬ್ಬದ ಶುಭಾಶಯಗಳು,
ಪರವಾಗಿಲ್ವೆ ನೀವು ತುಂಬಾ ಅದೃಷ್ಟವಂತರು :)
ದಿನ ಬಿಟ್ಟು ದಿನ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತ ಇರುವಿರಲ್ಲ :D

Ganapati Bhat said...

ಇಬ್ಬರಿಗೂ ಹುಟ್ಟು ಹಬ್ಬದ ಶುಭಾಶಯಗಳು,
ಪರವಾಗಿಲ್ವೆ ನೀವು ತುಂಬಾ ಅದೃಷ್ಟವಂತರು :)
ದಿನ ಬಿಟ್ಟು ದಿನ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತ ಇರುವಿರಲ್ಲ :D

SANTOSH MS said...

Guru Sir,

Super, tumbha channaagide.

PARAANJAPE K.N. said...

ಕವನ ಸೂಪರ್ ಆಗಿದೆ, ನಿಮ್ಮ ಪ್ರೀತಿ-ಪುಳಕ-ಆಶಯ ಎಲ್ಲವನ್ನು ಅದರಲ್ಲಿ ತು೦ಬಿದ್ದೀರಿ. ನಮ್ಮ ಕಡೆಯಿ೦ದಲೂ ಜನುಮದಿನದ ಶುಭಾಶಯ ತಿಳಿಸಿ. ನಿಮಗೀರ್ವರಿಗೂ ಶುಭವಾಗಲಿ.

Dr.D.T.K.Murthy. said...

ಗುರು ಸರ್;ನಿಮ್ಮ ಬಾಳ ಸಂಗಾತಿಗೆ ಹುಟ್ಟು ಹಬ್ಬದ ಉಡುಗೊರೆಯಾಗಿ ಕವನದ ರೂಪದಲ್ಲಿ ಒಳ್ಳೆಯ ಕಾಣಿಕೆ ನೀಡಿದ್ದೀರಿ.ನೀವಿಬ್ಬರೂ ನೂರು ವರುಷ ಸುಖವಾಗಿ ಬಾಳಿ ಎಂದು ನಮ್ಮ ಹಾರೈಕೆ.

nivedita said...

ಮೊದಲ ಸಾಲುಗಳು ತುಂಬಾ ಇಷ್ಟವಾದವು.
ನಿಮ್ಮ ಬಾಳ ಸಂಗಾತಿಗೆ ನನ್ನ ಶುಭಾಶಯಗಳು.

Swathi said...

so nice of you to wish through a poem.. wish u both a happy life :)

ತೇಜಸ್ವಿನಿ ಹೆಗಡೆ said...

ಗೀತಾ ಅವರಿಗೆ ನನ್ನ ಕಡೆಯಿಂದಲೂ ಹಾರ್ದಿಕ ಶುಭಾಶಯಗಳನ್ನು ತಿಳಿಸಿಬಿಡಿ.. ಉತ್ತಮ ಉಡುಗೊರೆಯನ್ನೇ ಕೊಟ್ಟಿರುವಿರಿ... :)

ವನಿತಾ / Vanitha said...

Convey our wishes to Geetha..Have a nice day and year ahead :-)

ಸಾಗರದಾಚೆಯ ಇಂಚರ said...

ಹರಸಿದ ಎಲ್ಲರಿಗೂ ಹ್ರತ್ಪೂರ್ವಕ ಧನ್ಯವಾದಗಳು
ಪ್ರೀತಿ ಸದಾ ಇರಲಿ
ನನ್ನ ಬಾಳ ಸಂಗಾತಿಯ ಪರವಾಗಿ ನಿಮಗೆಲ್ಲರಿಗೂ ಕ್ರತಜ್ನತೆಗಳು

jithendra hindumane said...

ಗುರು ಸರ್‍, ನಿಮ್ಮ ಮನೆಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

ಮನಸು said...

ಗೀತಾರವರಿಗೆ ಹುಟ್ಟು ಹಬ್ಬದ ಶುಭಾಶಯಗಳು

ವಿ.ಆರ್.ಭಟ್ said...

ತಡವಾಗಿ ಬಂದೆ ಅಂತ ಬೇಸರಿಸಬೇಡಿ, ತಡವಾಗಿ ತಮಗೀರ್ವರಿಗೂ ಜ್ನಮದಿನದ ಶುಭಾಶಯಗಳು, ನಿಮ್ಮ ಹೆಸರು ನನ್ನ ಆರ್ಕುಟ್ಟಿನ ಲಿಸ್ಟ್ನಲ್ಲಿ ಇರಲಿಲ್ಲದ ಕಾರಣ ಸೀತಾರಮರಾಯರಿಂದ ತಿಳಿಯಿತು, ಕವನ ಚೆನ್ನಾಗಿ ನಿರೂಪಿತವಾಗಿದೆ, ಭಾವಕ್ಕೆ ಪದಪುಂಜವನ್ನು ಕಟ್ಟಿಕೊಟ್ಟಿದ್ದೀರಿ, ನಿಮ್ಮ ದಾಂಪತ್ಯ ಅನ್ಯೋನ್ಯವಾಗಿರಲಿ, ಹಲವು ಹಾರೈಕೆಗಳು-ಹೃತ್ಪೂರ್ವಕವಾಗಿ,ನಿಮ್ಮ ಮನದನ್ನೆಗೂ ನಮ್ಮ [ನನ್ನ ಮನದನ್ನೆಯನ್ನೂ ಸೇರಿಸಿಕೊಂಡು] ಹಾರ್ದಿಕ ಶುಭಾಶಯಗಳನ್ನು ತಿಳಿಸಿ, ನಮಸ್ಕಾರ

ದಿನಕರ ಮೊಗೇರ.. said...

dr. guru sir,
chandada kavanakke nimage dhanyavaada, bareyalu prerepisida nimmaakege dhanyavaada.....

happy birthday to geetaa madam...

ಸುಮ said...

shubhaashayagalu Geeta.kavana cennaagide Guru avare.

ಸುಬ್ರಮಣ್ಯ ಮಾಚಿಕೊಪ್ಪ said...

"ಅರಳುತಿರುವ ಮೀನು " ಬದಲು "ವಿಹರಿಸುತ್ತಿರುವ ಚಿಟ್ಟೆ" ಎಂದಿದ್ದರೆ ಸೂಕ್ತವೇನೋ!!!

ನಂದು ಕೂಡ "ಹುಟ್ಟು ಹಬ್ಬದ ಶುಭಾಶಯಗಳು"

ಜಲನಯನ said...

Many many Happy returns of the Day-gone...hahaha aadre helibittiddene..Orkut nalli shubhaashagayalu anta...heheheh

kanasu said...

sogasaada padya. nimma sangaathige nanna haaraike :)

ಸಾಗರದಾಚೆಯ ಇಂಚರ said...

Thank you for all

Shashi jois said...

ಗೀತಾರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಸಿಮೆಂಟು ಮರಳಿನ ಮಧ್ಯೆ said...

ಆ ದಿನದಂದೇ ಶುಭ ಕೋರಿರುವೆ...
ಈಗ ಮತ್ತೊಮ್ಮೆ "ಜನುಮ ದಿನದ ಶುಭಾಶಯಗಳು"

ಗೀತಾ..
ನಿಮ್ಮಿಬ್ಬರ ಬಾಳಗೀತೆ..
ಸುಮಧುರಗೀತ..
ಸಂಗೀತವಾಗಿರಲಿ..

ಪ್ರಕಾಶಣ್ಣ...

"ನಾಗರಾಜ್ .ಕೆ" (NRK) said...

i wish her many many happy returns sorry, for belated :-(
your lines are very nice
may all ur dreams come true

Deepasmitha said...

ನಿಮ್ಮ ಬಾಳಸಂಗಾತಿಯ ಹುಟ್ಟುಹಬ್ಬಕ್ಕೆ ನಮ್ಮದೂ ಶುಭ ಹಾರೈಕೆಗಳು

Venkatakrishna.K.K. said...

ನಿಮ್ಮ ಬಾಳ ಸಂಗಾತಿಗೆ ಹುಟ್ಟು ಹಬ್ಬದ ಉಡುಗೊರೆಯಾಗಿ ಕವನದ ರೂಪದಲ್ಲಿ ಒಳ್ಳೆಯ ಕಾಣಿಕೆ ನೀಡಿದ್ದೀರಿ.ನೀವಿಬ್ಬರೂ ನೂರು ವರುಷ ಸುಖವಾಗಿ ಬಾಳಿ ಎಂಬುದೇ ನಮ್ಮ ಮನದಾಳದ ಬಯಕೆ.

Vinay Hegde said...

kavana super aagiddu...!!! nangu swalpa tips kodi... :)attigege nanna kadeindalu huttu habbada shubhashayavanna tilisibidi.. :)

Vinay Hegde said...

nivu nanna blog alli disappoint aaytu anta helidri... but yaake anta helalilla.... enaadaru tappaagiddare heli.... sudhaarisalu sahaaya aaguttade....:) pls don post this comment...!!!

arya_forU said...

ಗೀತಕ್ಕನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು :)
ಅವರ ಪಾಪೆ ಹಾಕಿದ್ರೆ ಇನ್ನು ಚೆನ್ನಾಗಿರೋದು :)

ಇಂತಿ ಇರ್ವರ ತಮ್ಮ
ವಿನಯ

- ಕತ್ತಲೆ ಮನೆ... said...

ಸಾಗರದಾಚೆಯ ಇಂಚರ ,

ನಿಮ್ಮಾಕೆಗೆ ನನ್ನ ಕಡೆಯಿಂದಲೂ ಒಂದು ಪುಟಾಣಿ ಜನುಮದಿನದ ಹಾರೈಕೆ..

ನಿಮ್ಮ ಸಂಗಾತಿಗಾಗಿ ಉತ್ತಮ ಕವನ ಹೊಸೆದಿದ್ದೀರಿ..

ಸಾಗರದಾಚೆಯ ಇಂಚರ said...

Thank you all

ಗುರುಪ್ರಸಾದ್, ಶೃಂಗೇರಿ. said...

ಗುರುಮೂರ್ತಿಯವರೆ ಚೆಂದದ ಸಾಲುಗಳಿಂದ ನಿಮ್ಮ ಬಾಳ ಸಂಗಾತಿಗೆ ಶುಭಕೋರಿರುವಿರಿ...
ನನ್ನ ಕಡೆಯಿಂದಲೂ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ :)

ಕ್ಷಣ... ಚಿಂತನೆ... bhchandru said...

ಗುರು ಅವರೆ,
ನಿಮ್ಮ ಬಾಳಸಂಗಾತಿಯ ಜನ್ಮದಿನಕ್ಕೆ ಕವನದ ಮೂಲಕ ಶುಭಾಶಯ ತುಂಬಾ ಚೆನ್ನಾಗಿದೆ. ನನ್ನ ಕಡೆಯಿಂದಲೂ ಅವರಿಗೆ ಶುಭಾಶಯಗಳನ್ನು ತಿಳಿಸಿ.

ಸ್ನೇಹದಿಂದ,

shravana said...

Belated wishes from me too.. :)

Rashmi said...

Belated Birthday Wishes to Geetha :)

ರಾಘವೇಂದ್ರ ಹೆಗಡೆ said...

ಚೆಂದದ ಕವಿತೆ ಸರ್..
ಕಾರಣಾಂತರಗಳಿಂದ ಕೆಲ ದಿನಗಳಿಂದೀಚೆ ಬ್ಲಾಗ್ ಕಡೆ ಬರಲಾಗಲಿಲ್ಲ.

ನನ್ನ ಶುಭಾಶಯಗಳನ್ನೂ ತಿಳಿಸಿಬಿಡಿ..

ಪ್ರವೀಣ್ ಭಟ್ said...

Kavana moolaka shubhashaya.. tumba chennagide.. nannadu ondu shubhashaya helbidi

Mila said...

very beautiful!))

ಶ್ವೇತ said...

Nimma pravasa kathanagalu oduvudakke sogasagive. Photos are amazing.

Nimma hendatiya huttida dinakke kavanavannu gift kotta idea romantic agide. Nice poem. Nanna blog odi mechidakke dhanyavada.