Friday, August 6, 2010

ನಗ್ನತೆಯೇ ಮೈವೆತ್ತ ಓಸ್ಲೋ ದ ಶಿಲ್ಪಕಲಾ ಉದ್ಯಾನವನ - ಭಾಗ 2

ಕಳೆದ ವಾರ ನಾರ್ವೆ ಯ ಕಿರು ಪರಿಚಯ ದ ಲೇಖನ ಬರೆದಿದ್ದೆ (http://gurumurthyhegde.blogspot.com/2010/07/blog-post_29.html). ಆ ದೇಶದ ಬಗೆಗೆ ಹೇಳುತ್ತಾ ಹೋದರೆ ಮುಗಿಯದಷ್ಟು ವಿಷಯ ಹೊತ್ತು ತಂದಿದ್ದೇನೆ. ಅದನ್ನು ಎತ್ತಿ ಸಲಹುವ ಕೆಲಸ ನಿಮ್ಮದು.
  
ಬರಹ ಆರಂಬವಾಗುವುದೇ ನಾರ್ವೆಯ ಹ್ರದಯಭಾಗ, ರಾಜಧಾನಿ ಓಸ್ಲೋ ದ ಮೂಲಕ. ಸುಮಾರು 1048 ರಲ್ಲಿ ಹೆರಾಲ್ಡ್ 3, ರಾಜನಿಂದ ನಿರ್ಮಿತವಾದ ಓಸ್ಲೋ , ಸುಮಾರು 1624 ರಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಬಹುತೇಕ ನಿರ್ನಾಮ ವಾಯಿತು. ಪುನಃ ಅದನ್ನು ಡ್ಯಾನಿಶ್ ರಾಜ ಕ್ರಿಸ್ತಿಯನ್ 3 ಕಟ್ಟಿದ. ಅದಕ್ಕೆ ''ಕ್ರಿಸ್ತಯಾನ'' ಎಂದು ಕರೆಯಲಾಯಿತು. 1925 ರಲ್ಲಿ ಪುನಃ ಅದರ ಸ್ವಂತ ಹೆಸರಾದ ಓಸ್ಲೋ ವನ್ನು ನೀಡಲಾಯಿತು. ಇದು ಓಸ್ಲೋ ದ ಬಗೆಗಿನ ಚಿಕ್ಕ ಚೊಕ್ಕ ವಿವರಣೆ.

ಇಂಥಹ ರಾಜಧಾನಿಯನ್ನು ನಾವು ತಲುಪಿದಾಗ ಬೆಳಗಿನ  ಸುಮಾರು 10-45 ಆಗಿತ್ತು. ಕೈಯಲ್ಲಿ ನಕ್ಷೆ ಇದ್ದಿದ್ದರಿಂದ ನಾವು ಉಳಿದುಕೊಂಡಿದ್ದ ಹೋಟೆಲ್ ಹುಡುಕಲೇನು ಕಷ್ಟವಾಗಲಿಲ್ಲ. ಓಸ್ಲೋ ದ ರೈಲು ನಿಲ್ದಾಣ ಅತ್ಯಂತ ವ್ಯವಸ್ತಿತ ವಾದ ರೈಲು ನಿಲ್ದಾಣ. ಹೆಚ್ಚಿನ ಮಾಹಿತಿಗೆ ಇಲ್ಲಿ ಓದಿ (http://en.wikipedia.org/wiki/Oslo_Central_Station). ಹೋಟೆಲ್ ಗೆ ಹೋದ ಕೂಡಲೇ ಹೊಟ್ಟೆಗೆ ವ್ಯವಸ್ತೆ ಮಾಡಿಕೊಂಡು ಓಸ್ಲೋ ದಲ್ಲಿ ಇರುವ ಸ್ವಲ್ಪ ಸಮಯವನ್ನು ಹೇಗೆ ಉಪಯೋಗಿಸುವುದು ಎಂದು ಯೋಚಿಸಿದೆವು. ಕೆಲವೊಮ್ಮೆ ಏನೋ ನೋಡಲು ಹೋಗಿ, ಏನೇನೋ ನೋಡಿ, ಕೊನೆಗೆ ಏನು ಇಷ್ಟವಾಗದೆ, ಆ ನಗರವನ್ನೇ ಬೈದು ಬರುತ್ತೇವೆ. ಯಾವುದೇ ನಗರಕ್ಕೆ ಹೋದಾಗ ಅಲ್ಲಿನ ಬಹು ಮುಕ್ಯವಾದ ಕೆಲವನ್ನು ನೋಡಲೇಬೇಕು ಎನ್ನುವ ಸಿದ್ದಾಂತ ನನ್ನದು. ಎಲ್ಲ ನಗರಗಳಂತೆಯೇ ಓಸ್ಲೋ ದಲ್ಲೂ ನೋಡಲು ಬೇಕಾದಷ್ಟು ಚರ್ಚ್ ಗಳಿವೆ. ಪಾರ್ಕ್ ಗಳಿವೆ. ಮ್ಯುಸಿಯುಂ ಗಳಿವೆ. ಆದರೆ ಇರುವ ಸ್ವಲ್ಪ ಸಮಯದಲ್ಲಿ ಇದನ್ನೆಲ್ಲಾ ನೋಡುತ್ತಾ ಕುಳಿತರೆ ಹೇಗೆ? ಅಲ್ಲವೇ. ಸಮಯದ ಅಭಾವ  ಯಾಕೆ ಕೇಳ್ತಿರಾ?
ನಾವು ಮರುದಿನ ಬೆಳಿಗ್ಗೆ ಓಸ್ಲೋ ದಿಂದ ನಾರ್ವೆ ನೋಡಲು ಪ್ಯಾಕೇಜ್ ಟ್ರಿಪ್ ತೆಗೆದುಕೊಂಡಿದ್ದೆವು. ಹಿಂದಿನ ದಿನವೇ ಓಸ್ಲೋ ಬಂದು ಸ್ವಲ್ಪ ವಿಶ್ರಾಂತಿ ಪಡೆದು ಹೋಗಬೇಕೆಂದು ಓಸ್ಲೋ ಬಂದಿಳಿದೆವು. ಅದಕ್ಕೆ ಹೇಳಿದ್ದು ''ಇರುವ ಸ್ವಲ್ಪ ಸಮಯ'' ಎಂದು. ಯಾಕೆಂದರೆ ಓಸ್ಲೋ ನೋಡಲು ಒಂದು ದಿನ ಸಾಲದು.  

ನಗ್ನತೆಯೇ ಮೈವೆತ್ತ ಓಸ್ಲೋ ದ ಶಿಲ್ಪಕಲಾ ಉದ್ಯಾನವನ ಓಸ್ಲೋ ದ ಪ್ರಮುಖ ಆಕರ್ಷಣೀಯ ಸ್ಥಳಗಳಲ್ಲಿ ಒಂದು. ಓಸ್ಲೋ ಗೆ ಬಂದವರು ಇಲ್ಲಿನ ವಿಗೆಲಂದ್ ಶಿಲ್ಪಕಲಾ ಉದ್ಯಾನವನಕ್ಕೆ (Vigeland Sculpture Park)  ಬಾರದೆ ಹೋಗುವುದಿಲ್ಲ. ಸುಮಾರು 80 ಎಕರೆ ಗಳಷ್ಟು ವಿಸ್ತಾರವುಳ್ಳ ಉದ್ಯಾನವನದ ಪ್ರವೇಶವೇ ನಿಮ್ಮನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ. ಇಲ್ಲಿನ ಸ್ವಚ್ಛತೆ, ಪ್ರಕ್ರತಿ ಸೌಂದರ್ಯ ಹೊಸ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಸುಮಾರು 212 ಕಂಚಿನ ಹಾಗೂ ಗ್ರಾನೈಟ್ ನ ಮೂರ್ತಿಗಳಿರುವ ಜಗಹ ತನ್ನ ಅಪ್ರತಿಮ ಸೌಂದರ್ಯಕ್ಕೆ ಹೆಸರುವಾಸಿ. ''ಗುಸ್ತಾವ್ ವಿಗಿಲೆಂದ್'' ಎಂಬಾತ ಸ್ವತಹ ತಾನೇ ನಿಂತು ಕೆತ್ತಿದ ಶಿಲ್ಪಗಳಂತೆ ಇವು. ಬೇಲೂರಿನ ಶಿಲ್ಪಕಲೆ, ಅಜಂತಾ ಎಲ್ಲೋರಿನ ಶಿಲ್ಪಗಳೆಲ್ಲ ನಮ್ಮ ಕಣ್ಣೆದುರಿಗೆ ಬಂದು ನಿಂತು ನರ್ತಿಸಿದಂತೆ ಭಾಸವಾಯಿತು. ಸುಮಾರು 1924-1947 ರಲ್ಲಿ ಉದ್ಯಾನವನ ನಿರ್ಮಾಣ ವಾಯಿತು ಎಂದು ಹೇಳುತ್ತದೆ ಇಲ್ಲಿನ ಇತಿಹಾಸ.

 ಇಂಥಹ ಸ್ಥಳಗಳಿಗೆ ಬಂದರೆ ಇರುವ ದೊಡ್ಡ ತಲೆನೋವೆಂದರೆ ಕ್ಯಾಮೆರ ಜೊತೆಗಿರುವುದು. ಅಷ್ಟೊಂದು ಶಿಲ್ಪಕಲೆಗಳ ಫೋಟೋ ತೆಗೆಯುವುದು. ನಂತರ ಅದರೊಂದಿಗೆ ನಿಂತ ಜೀವಂತ ಶಿಲ್ಪಗಳು (ನಾವು ಎಂದು ಬೇರೆ ಹೇಳಬೇಕಾಗಿಲ್ಲ ತಾನೇ ), ನಂತರ ಆ ಶಿಲ್ಪಗಳೊಂದಿಗೆ ನಮ್ಮ ನರ್ತನ ಫೋಟೋ ಎಲ್ಲ ಸೇರಿ ದಿನದ ಕೊನೆಗೆ ಕ್ಯಾಮೆರ ಗುಂಡಿ ಒತ್ತಿ ಒತ್ತಿ ಕೈಯೆಲ್ಲ ಗುಂಡಿ ಒತ್ತುತ್ತಿರುವಂತೆ ಭಾಸವಾಗುತ್ತಿತ್ತು. ಇಲ್ಲಿನ ಶಿಲ್ಪಗಳ ವೈಶಿಷ್ಟ್ಯ ವೆಂದರೆ ಸಂಸಾರದ ಸಂಭಂಧ ಗಳ  ಬಗೆಗಿನ ಚಿತ್ರಣ. ಹೆಣ್ಣಿನ ಗಂಡಿನ ಸಮಾಗಮದ ಚಿತ್ರಣ. ಎಲ್ಲಿಯೂ ಕಾಮಕ್ಕೆ ಆಸ್ಪದ ಕೊಡದೆ, ಪ್ರೇಮವನ್ನು ಬಿಡದೆ, ನಗ್ನತೆಯನ್ನೇ ಬಿಂಬಿಸಿ ತೋರಿಸುವ ಒಂದೊಂದು ಶಿಲ್ಪವೂ ಒಂದು ಶತಮಾನದ ಕಥೆ ನಮ್ಮೊಂದಿಗೆ ಹೇಳುತ್ತಿರುವಂತೆ ಭಾಸವಾಗುತ್ತದೆ. ಇಲ್ಲಿನ ಪ್ರತಿ ಶಿಲ್ಪದಲ್ಲಿಯೂ ಯಾವುದೋ ಜನ್ಮದ ಕಥೆಯಿದೆ, ಅದರ ಒಳಗಿನ ಭಾವನಗಳ ಮಿಳಿತವಿದೆ. ಮನುಷ್ಯನ ದಿನನಿತ್ಯದ ಹೋರಾಟದ ಮಾದರಿ ಇಲ್ಲಿದೆ, ನ್ರತ್ಯ, ಸಿಟ್ಟು, ಕೋಪ, ತಾಳ್ಮೆ, ಪ್ರೀತಿ, ಸ್ನೇಹ ಇವೆಲ್ಲವುಗಳ ಮೂರ್ತರೂಪವೇ ಉದ್ಯಾನವನ ಎಂದರೆ ತಪ್ಪಾಗಲಾರದೇನೋ.                                        


ಇಲ್ಲಿಯ ಮೂರ್ತಿಗಳಿಗೆ, ನಾವೇ ಅಲ್ಲಿ ಹೋಗಿ ನಿಂತಂತೆ ನಮ್ಮನ್ನು ಕರೆಯುವ ಸೆಳೆತವಿದೆ.  ಆ ಮುಗ್ಧ ಮಗುವಿನ ಚಿತ್ರ, ಮಗುವನ್ನು ಆಡಿಸುತ್ತಿರುವ ಚಿತ್ರ, ಪ್ರೇಮದ ಪರಕಾಷ್ಟೆಯ ಚಿತ್ರ, ಆಗಸವನ್ನೇ ನೋಡುತ್ತಿರುವ ಚಿತ್ರ, ಒಂದೇ ಎರಡೇ, ಪ್ರತೀ ಚಿತ್ರವೂ ನನ್ನ ಕಾಡಿದೆ. ಚಿತ್ರದ ಹಿಂದೆ ಅದನ್ನು ಕೆತ್ತಿದ ಶಿಲ್ಪಿಯ ಮನೋಭಾವನೆಯ ತಿಳಿಯುವ ವ್ಯರ್ಥ ಪ್ರಯತ್ನಕ್ಕೆ ಕೈ ಹಾಕುವಂತೆ ಮಾಡಿದೆ.
ಹೆಣ್ಣು ಹೆಣ್ಣಿನ ಸಮಾಗಮದ ಕೆಲವು ಫೋಟೋಗಳು ಇಲ್ಲಿದ್ದರೂ ಎಲ್ಲಿಯೂ ಕಾಮದ ಸುಳಿವು ನೀಡುವುದಿಲ್ಲ. ಮನುಷ್ಯ ಮನುಷ್ಯನ ಸಹಜ ಪ್ರೀತಿಯನ್ನು ಸಹಜವಾಗಿಯೇ ಕೆತ್ತಿದ ಗುಸ್ತಾವ್ ಗೆ ಒಂದು ಸಲಾಂ.

ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ಬ್ರಹತ್ ಫೌಂಟೆನ್ (ಕಾರಂಜಿ). ಸುಮಾರು 41 ವರ್ಷಗಳೇ ಬೇಕಾಯಿತಂತೆ ಇದನ್ನು ನಿರ್ಮಿಸಲು. ಸಾವಿನ ನಂತರ ಹೊಸ ಜೀವನವಿದೆ. ಬದುಕು ಕೇವಲ ನಶ್ವರವಲ್ಲ. ಅದೊಂದು ಶಾಶ್ವತ. ಸಾವಿನ ನಂತರದ ಬದುಕಿಗೆ ಹೊಸ ಮಾರ್ಗ ಎಂಬ ಸಂಕೇತ ಇಲ್ಲಿಯ ಕಾರಂಜಿ ಯ ಒಳಗೆ ಇರುವ ಶಿಲ್ಪಗಳಲ್ಲಿ ಇವೆ. ''ಸಾವು ಹೊಸ ಜೀವಕ್ಕೆ ನಾಂದಿ'' ಎನ್ನುವ ಗುಸ್ತಾವ್ ನ ಕಲ್ಪನೆಗೆ ಮನಸಲ್ಲೇ ತಲೆದೂಗಿದೆ. ಕಾರಂಜಿಯ ನೀರಿನ ಅಲೆಗಳನ್ನು ಫೋಟೋದಲ್ಲಿ ಸೆರೆ ಹಿಡಿಯುವ ಪ್ರಯತ್ನವೂ ಇಲ್ಲಿ ನಮ್ಮಿಂದ ನಡೆಯಿತು. ನೀರ ಮೇಲೆ ಕುಳಿತ ಹಕ್ಕಿ ಇತಿಹಾಸಕ್ಕೆ ಕಳಶವಿಟ್ಟಂತೆ ತೋರಿತು. 

ಇಲ್ಲಿಂದ ಸ್ವಲ್ಪ ಮುಂದೆ ಹೋದರೆ ಸಿಗುವುದೇ ಇಲ್ಲಿನ ಉದ್ಯಾನವನದ ಬಹುಮುಖ್ಯ ಶಿಲ್ಪ ''ಮೊನೋಲಿತ್'' . ಜೀವನ ಚಕ್ರ (The Circle of Life) ವನ್ನು ಬಿಂಬಿಸುವ ಚಿತ್ರ ಎಂಥಹ ನಿರ್ಭಾವುಕನಲ್ಲೂ ಭಾವನೆಗಳ ಅಲೆ ಎಬ್ಬಿಸುತ್ತದೆ. ಹಲವಾರು ಶಿಲ್ಪಗಳು ಒಂದರ ಮೇಲೆ ಒಂದು ಬಿದ್ದು ಕೊಂಡಂತೆ ಭಾಸವಾಗುವ ಮೊನೋಲಿತ್ ಗುಸ್ತಾವ್ ನ ಶಿಲ್ಪಕಲೆಗೆ ಸಾಕ್ಷಿಯೂ ಹೌದು. ಗ್ರೀಕ್ ಪದವಾದ ಮೊನೋಲಿಥಸ್ ನಿಂದ ಬಂದ ಮೊನೋಲಿತ್ ನ ನಿಜವಾದ ಅರ್ಥ ''ಒಂದೇ ಕಲ್ಲು'' ಎಂದು. ಶಿಲ್ಪ ನೋಡಿದರೆ ಹಾಗೆಂದು ಅನ್ನಿಸುವುದಿಲ್ಲ. ಹಲವಾರು ಕಲ್ಲುಗಳನ್ನು ಕೆತ್ತಿ ನಿಲ್ಲಿದಂತೆ ಗೋಚರಿಸುತ್ತದೆ.
 ಇದನ್ನು ಒಂದೇ ಕಲ್ಲಿನಲ್ಲಿ ನಿರ್ಮಿಸಿದ ಗುಸ್ತಾವ್ ನ ಚಾಕ ಚಕ್ಯತೆ ಯಾವ ಜಕಣಾಚಾರಿಗೂ ಕಡಿಮೆ ಇರಲಿಲ್ಲ ಎಂದು ಒಮ್ಮೆ ಅನ್ನಿಸದೆ ಇರದು. ಸುಮಾರು 14 ಮೀಟರ್ ಗಳಷ್ಟು ಎತ್ತರವಿರುವ ಮೊನೋಲಿತ್ 121 ಮನುಷ್ಯರ ಆಕ್ರತಿಯನ್ನು ಹೊಂದಿದೆ. ಪ್ರತಿ ಆಕ್ರತಿಯೂ ಆಕಾಶದ ಕಡೆ ಚಲಿಸುತ್ತಿರುವಂತೆ ಗೋಚರಿಸುತ್ತದೆ. 

ಇದರ ಬಗ್ಗೆ ಸ್ಥಳೀಯರಲ್ಲಿ ಕೇಳಿದಾಗ '' ಮನುಷ್ಯನ ಆಸೆಗಳು ಅಧ್ಯಾತ್ಮದ ಕಡೆಗೆ, ಭಗವಂತನ ಕಡೆಗೆ, ಅಲೌಕಿಕ ದ ಕಡೆಗೆ ಸಾಗುವಂತಿರಬೇಕು '' ಎಂಬುದೇ ಅದರ ಮೂಲ ಮಂತ್ರ ಎಂದರು.

 ಪುನಃ ಅವರಲ್ಲಿ ಕೇಳಿದೆ, ''ಅದೇನೋ ಸರಿ, ಆದರೆ ಮನುಷ್ಯರು ಒಬ್ಬರಿಗೊಬ್ಬರು ಅಂಟಿ ಕೊಂಡಿದ್ದು ಯಾಕೆ? '' 


ಅವರಿಂದ ಉತ್ತರ ''ಮನುಷ್ಯ ಸದಾ ಜೊತೆಯಾಗಿರಬೇಕು, ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ, ಕಷ್ಟ ಸುಖ ಹಂಚಿಕೊಳ್ಳುತ್ತ ಅಲೌಕಿಕದ  ಕಡೆಗೆ ಹೆಜ್ಜೆ ಹಾಕಬೇಕು, ನಮ್ಮ ನಮ್ಮಲ್ಲೇ ಕಚ್ಚಾಡಿ ಕೊಳ್ಳುತ್ತಾ, ಇನ್ನೊಬ್ಬರ ಬಗೆಗೆ ಅಸೂಯೆ ಪಡುತ್ತ ಬದುಕುವುದು ಮಾನವೀಯ ಬದುಕಲ್ಲ ಎಂಬುದೇ ಅದರ ಸಂಕೇತ'' ಎಂದರು. 


ಅಷ್ಟು ವಿವರಣೆ ನನಗೆ ಸಾಕಾಗಿತ್ತು. ಎಂಥಹ ಅದ್ಭುತ ಕಲ್ಪನೆ, ಶತ ಮಾನಗಳು ಕಳೆಯುತ್ತಿದ್ದರೂ ನಮ್ಮ ಮೂಲ ಬುದ್ದಿ ಬದಲಾಗುತ್ತಿಲ್ಲ. ಸದಾ ಇನ್ನೊಬ್ಬರ ಬಗೆಗೆ ಮಾತಾಡಿಕೊಳ್ಳುತ್ತ, ಇನ್ನೊಬ್ಬನ ತಪ್ಪನ್ನೆ ದೊಡ್ಡದು ಮಾಡುತ್ತಾ, ನಮ್ಮ ಮನೆಯ ಮುಂದಿರುವ ಆನೆಯ ಬಗ್ಗೆ ಚಿಂತಿಸದೆ, ನೆರೆಮನೆಯವನ ಮುಂದಿರುವ ಇರುವೆಯನ್ನೇ ದೊಡ್ಡ ವಿಷಯ ಮಾಡುವ ನಮ್ಮ ಭಾವನೆಗಳು ಬದಲಾಗುವುದು ಎಂದು? ಎಂಬ ಚಿಂತೆ ಕೊರೆಯಲಾರಂಬಿಸಿತು.

ಉದ್ಯಾನವನ ತುತ್ತ ತುದಿಗೆ ''Wheel of Life'' ಎಂಬ ಪ್ರತಿಮೆಯಿದ್ದು ಬದುಕಿನ ಚಕ್ರಕ್ಕೆ ಕನ್ನಡಿಯಂತಿದೆ. ಇದನ್ನೆಲ್ಲಾ ನೋಡುತ್ತಾ ನೋಡುತ್ತಾ ಕೆಲವು ಕೀಟಲೆಗಳನ್ನು ಮಾಡುತ್ತಾ ಇರುವಾಗಲೇ ಸಮಯ ಕಳೆದು ಹೋಯಿತು. ಅಲ್ಲಿನ ಕಲಾಕ್ರತಿಯೊಂದಿಗೆ ವಿವಿದ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡು ನೆನಪಿನ ಬುತ್ತಿಯಲ್ಲಿ ಎಲ್ಲವನ್ನೂ ತುಂಬಿಕೊಂಡು ಗುಸ್ತಾವ್ ನ ಪ್ರತಿಭೆಗೆ ವಂದಿಸುತ್ತಾ ಹೋಟೆಲ್ ಕಡೆ ಹೆಜ್ಜೆ ಹಾಕಿದೆವು.ಮುಂದಿನ ವಾರ ನಾರ್ವೆ ಯ ರಮಣೀಯ ಸ್ಥಳ ಗಳಲ್ಲಿ ಒಂದಾದ ''ಫ್ಲಾಂ'' ''Flam'' ಬಗ್ಗೆ ಹೇಳುತ್ತೇನೆ. ನನ್ನ ಬದುಕಿನಲ್ಲಿಯೇ ನೋಡದ  ಅತ್ಯಂತ ಸುಂದರ ವರ್ಣನೆಗೂ ಸಿಲುಕದ ರಮಣೀಯ ಸ್ಥಳವದು. ಅಲ್ಲಿನ ಬೆಟ್ಟ ಗುಡ್ಡಗಳು, ಸುಂದರ ನದಿ, ಮನಸಿನಲ್ಲಿ ತುಂಬಿದೆ. ಅದನ್ನೆಲ್ಲ ಮುಂದಿನ ವಾರ ಹಂಚಿ ಕೊಳ್ಳುತ್ತೇನೆ.

                                           ಕಾಯುತ್ತಿರಲ್ಲ.
                                          ನಿಮ್ಮವ ಗುರು 


62 comments:

PARAANJAPE K.N. said...

ಚಿತ್ರ-ಬರಹ ಎರಡೂ ತು೦ಬಾ ಚೆನ್ನಾಗಿವೆ. ವಿವರಣೆಗಳನ್ನೂ ಚೆನ್ನಾಗಿ ಕೊಟ್ಟಿದ್ದೀರಿ. ಮು೦ದಿನ ಕ೦ತಿಗೆ ಕಾದಿದ್ದೇನೆ.

Dr.D.T.krishna Murthy. said...

ಗುರು ಸರ್;ಅದ್ಭುತ ಶಿಲ್ಪಗಳ ಪರಿಚಯ ಮಾಡಿಕೊಟ್ಟಿದ್ದೀರ.ಚಿತ್ರಗಳು,ಅದಕ್ಕೆ ನಿಮ್ಮ ವಿವರಣೆ ಎಲ್ಲವೂ ಚೆನ್ನಾಗಿವೆ.ಮುಂದಿನ ಕಂತಿಗೆ ಕಾಯುತ್ತಿದ್ದೇವೆ.ಧನ್ಯವಾದಗಳು.

ವಿ.ಆರ್.ಭಟ್ said...

Wonderful, thanks

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್
ನಿಮ್ಮ ಅಭಿಪ್ರಾಯಕ್ಕೆ ವಂದನೆ
ಬರುತ್ತಿರಿ

ಸಾಗರದಾಚೆಯ ಇಂಚರ said...

Dr.D.T.krishna Murthy.

ಅಭಿಪ್ರಾಯಕ್ಕೆ ಥ್ಯಾಂಕ್ಸ್

ಮುಂದಿನ ವಾರ ಹೊಸ ಲೋಕಕ್ಕೆ ಕರೆದೊಯ್ಯುತ್ತೇನೆ

ಬನ್ನಿ

ಸಾಗರದಾಚೆಯ ಇಂಚರ said...

ವಿ.ಆರ್.ಭಟ್ ಸರ್

ಧನ್ಯವಾದಗಳು

ಬರುತ್ತಿರಿ

shivu.k said...

ಗುರುಮೂರ್ತಿ ಸರ್,

ನಿಮ್ಮ ಲೇಖನವನ್ನು ಓದುತ್ತಾ ಚಿತ್ರಗಳನ್ನು ನೋಡುತ್ತಾ, ಹಾಗೆ ಗೂಗಲ್ ಅರ್ಥ್ ಮೂಲಕ vigiland sclupture park ಮತ್ತು ರೈಲು ನಿಲ್ದಾಣವನ್ನು ನೋಡಿದೆ. ಶಿಲ್ಪಗಳು ಕಾಣಲಿಲ್ಲ. ಎಲ್ಲವನ್ನು ನೋಡುತ್ತಿದ್ದಂತೆ ನಿಮ್ಮ ಜೊತೆಗೆ ಇದ್ದಂತೆ ಭಾಷವಾಯಿತು...

ಮುಂದಿನ ವಾರಕ್ಕೆ ಕಾಯುತ್ತಿದ್ದೇನೆ.

shivu.k said...

ಮತ್ತೆ ನಾರ್ವೆ ವಿಶ್ವ ಎರಡನೇ ಅತಿ ಶ್ರೀಮಂತ ದೇಶವೆನ್ನುವುದು ತಿಳಿಯಿತು. ಅದರ ವಿಕಿಪೀಡಿಯದಲ್ಲಿ ನೋಡಿದಾಗ ಅವರ ತಲಾಆಧಾಯ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ.[ಮೊದಲ ಸ್ಥಾನ [ಲಕ್ಸಂಬರ್ಗ್ ಎಂಬ ಪುಟ್ಟ ದೇಶಕ್ಕೆ. ಆ ದೇಶದಲ್ಲಿ Federation of International photography ಎನ್ನುವ ಫೋಟೊಗ್ರಫಿ ಸಂಸ್ಥೆಯಿದೆ. ಇದು ವಿಶ್ವದ ಎಲ್ಲಾ ದೇಶಗಳ ಫೋಟೊಗ್ರಫಿ ಸಂಸ್ಥೆಗಳಿಗೂ ಇದೇ ಮೂಲ. ನಮಗೆ ಕೊಡುವ ಫೋಟೊಗ್ರಫಿ Distinctions ಇಲ್ಲಿಂದ approval ಆಗಿ ಬರುತ್ತದೆ]
ಧನ್ಯವಾದಗಳು.

ಸುಬ್ರಮಣ್ಯ ಮಾಚಿಕೊಪ್ಪ said...

ಧನ್ಯವಾದ. ಹೊಸಹೊಸ ಮಾಹಿತಿಗಳಿಗೆ ಧನ್ಯವಾದ.

nimmolagobba said...

ಗುರುಮೂರ್ತಿ ಸರ್ ನಿಮ್ಮ ಬರಹ ವೈಶಿಷ್ಟ್ಯ ದ ಜೊತೆ ಸುಂದರ ಚಿತ್ರಗಳು ಮೆರಗು ನೀಡಿವೆ .ನಿಮ್ಮ ಬರಹ ದಿಂದ ದೇಶ ವಿದೇಶಗಳ ಮಾಹಿತಿ ಅದ್ಭುತವಾಗಿ ಮೂಡಿಬರುತ್ತಿದೆ. ಮುಂದಿನ ನಿಮ್ಮ ಪಯಣದ ಬರಹಗಳನ್ನು ಕಾಯುತ್ತೇನೆ.ನಿಮಗೆ ಧನ್ಯವಾದಗಳು.

sunaath said...

ಓಸ್ಲೋದ ಈ ಅದ್ಭುತ ಶಿಲ್ಪಕಲಾ ಉದ್ಯಾನವನದ ಶಿಲ್ಪಗಳನ್ನು ನೋಡಿ ವಿಸ್ಮಯವಾಯಿತು. ಸುಂದರ ಚಿತ್ರಗಳನ್ನು ಹಾಗು ಉತ್ತಮ ವಿವರಣೆಯನ್ನು ನೀಡಿದ ನಿಮಗೆ ಧನ್ಯವಾದಗಳು.

ಮನಸು said...

very nice... guru

Mohan Hegade said...

ಗುರುಗಳೇ ನಿಮ್ಮ ಸುಂದರವಾದ ವಿವರಣೆಗೆ ದನ್ಯವಾದಗಳು. ನಾ ಕೇಳಿದ ಫೋಟೋಗಳನ್ನೂ ಸೇರಿಸಿ ಉತ್ತಮ ವಿವರಣೆಯೊಂದಿಗೆ ನಾರ್ವೆ ಬಗ್ಗೆ ತಿಳಿಸಿದಕ್ಕೆ ದನ್ಯ. ಮುಂದಿನ ಕಂತಿಗಾಗಿ ಕಾಯ್ತಾ ಇದ್ದೇನೆ.

ದನ್ಯರಿ,

ಮೋಹನ್ ಹೆಗಡೆ

ಅನಂತರಾಜ್ said...

ಉತ್ತಮ ಮಾಹಿತಿಯ ಚಿತ್ರ-ಚಿತ್ರಣ, ರಮಣೀಯವಾದ ಶಿಲಾಕೃತಿಗಳು.
'ಮನುಷ್ಯ ಸದಾ ಜೊತೆಯಾಗಿರಬೇಕು, ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ, ಕಷ್ಟ ಸುಖ ಹಂಚಿಕೊಳ್ಳುತ್ತ ಅಲೌಕಿಕದ ಕಡೆಗೆ ಹೆಜ್ಜೆ ಹಾಕಬೇಕು, ನಮ್ಮ ನಮ್ಮಲ್ಲೇ ಕಚ್ಚಾಡಿ ಕೊಳ್ಳುತ್ತಾ, ಇನ್ನೊಬ್ಬರ ಬಗೆಗೆ ಅಸೂಯೆ ಪಡುತ್ತ ಬದುಕುವುದು ಮಾನವೀಯ ಬದುಕಲ್ಲ ಎಂಬುದೇ ಅದರ ಸಂಕೇತ' - ಉತಮ ಸ೦ದೇಶ ಕೂಡ ಇದೆ. ಧನ್ಯವಾದಗಳು ಗುರುಮೂರ್ತಿ ಸರ್.

ಅನ೦ತ್

- ಕತ್ತಲೆ ಮನೆ... said...

ಅತ್ಯದ್ಭುತ..
ಆ ಶಿಲ್ಪಿ ಬಲು ಕಲಾಕಾರನೆ.
ನಾನೂ ಕೂಡ ಅಲ್ಲಿಗೆ ಭೇಟಿ ನೀಡಿ ಬದುಕುವ ಆಸೆ ಚಿಗುರಿಸಿಕೊಳ್ಳುವ ಕನಸನ್ನು ಕಟ್ಟಿದ್ದೇನೆ..
ಧನ್ಯವಾದಗಳು..

ಹೌದು,.. ನಾವು ಎಷ್ಟೇ ದೊಡ್ಡ ತಪ್ಪು ಮಾಡಿದಾಗಲೂ ನಮ್ಮನ್ನು ದ್ವೇಷಿಸದ ನಾವು ಬೇರೆಯವರ ಸಣ್ಣ ತಪ್ಪುಗಳಿಗೆ ಅವರನ್ನು ದೂಷಿಸುತ್ತೇವೆ..

ರಾಜೇಶ್ ನಾಯ್ಕ said...

ಮೂಕವಿಸ್ಮಿತನಾದೆ! ಅದ್ಭುತವಾಗಿ ಕೆತ್ತಲಾಗಿದೆ. ಪರಿಚಯಿಸಿದ್ದಕ್ಕೆ ಧನ್ಯವಾದಗಳು ಗುರು. ಚಿತ್ರಗಳಂತೂ ಬಹಳ ಚೆನ್ನಾಗಿ ಬಂದಿವೆ. ಒಂದು ದಿನವೂ ಕಡಿಮೆ ಈ ಪಾರ್ಕ್ ನೋಡಬೇಕಾದರೆ ಎಂದೆನಿಸುತ್ತಿದೆ.

ಮನದಾಳದಿಂದ............ said...

ಚಂದದ ಚಿತ್ರಗಳು,
ಸುಂದರ ಬರಹ.......
ಉತ್ತಮ ಮಾಹಿತಿ....
ಧನ್ಯವಾದಗಳು.........

nenapina sanchy inda said...

wow what sculptures!! your write up is very explanatory.
:-)
malathi S

ದಿನಕರ ಮೊಗೇರ.. said...

wonderful photo..... kettida shilpige salaam...... thank you sir.....

Subrahmanya said...

ಓಹ್ !. ಬಹಳ ಚೆನ್ನಾಗಿದೆ.

ಸಿಮೆಂಟು ಮರಳಿನ ಮಧ್ಯೆ said...

ಗುರುಮೂರ್ತಿಯವರೆ..

ಉತ್ತಮ ಫೋಟೊಗಳ ಸಂಗಡ..
ನಿಮ್ಮ ಪ್ರವಾಸ ಕಥನದ ವಿವರಣೆ.. ಬಹಳ ಇಷ್ಟವಾಯಿತು...

ನಗ್ನತೆ ಅಸಹ್ಯವಲ್ಲ..
ನಿಶಿದ್ಧವೂ ಅಲ್ಲ...

ನಮ್ಮ ಶಿಲ್ಪಕಲೆಗಳಲ್ಲೂ "ನಗ್ನತೆಯನ್ನು" ಕಾಣ ಬಹುದು...

ಕೆಲವು ದೆವಾಲಯದ ಶಿಲ್ಪಗಳ ಫೋಟೊಗಳು ನನ್ನಲ್ಲಿವೆ ...

ಬ್ಲಾಗಿನಲ್ಲಿ ಹಾಕಲು ಧೈರ್ಯ ಬರುತ್ತಿಲ್ಲ...

ಚಂದದ ಫೋಟೊಲೇಖನಕ್ಕಾಗಿ ಅಭಿನಂದನೆಗಳು...

ಸೀತಾರಾಮ. ಕೆ. / SITARAM.K said...

ಅದ್ಭುತವಾಗಿ ನಾರ್ವೆಯ ಶಿಲ್ಪಕಲಾ ಉಧ್ಯಾನವನ್ನ ವರ್ಣಿಸುತ್ತಾ ಜೊತೆಗೆ ಸುಂದರ ಛಾಯಚಿತ್ರಗಳನ್ನು ಒದಗಿಸಿ ಉತ್ತಮ ಮಾಹಿತಿ ಒದಗಿಸಿದ್ದಿರಾ...
ಧನ್ಯವಾದಗಳು.
ಮುಂದಿನ ಕಂತಿಗೆ ಕಾಯುತ್ತಿರುವೆ....

AntharangadaMaathugalu said...

ಗುರುಮೂರ್ತಿ ಸರ್...

ಚಿತ್ರಗಳು ಮತ್ತು ನಿಮ್ಮ ಪ್ರವಾಸ ಕಥನ ಎರಡೂ ತುಂಬಾ ಚೆನ್ನಾಗಿವೆ. ನಿಮ್ಮ ಸರಳ ಭಾಷೆ ಸುಲಲಿತವಾಗಿ ಓದಿಸಿಕೊಳ್ಳತ್ತೆ. ಚಿತ್ರಗಳ, ಜಾಗದ ವಿವರಣೆಯ ಜೊತೆ ಆಧ್ಯಾತ್ಮ ಸಂದೇಶದ ಬಗ್ಗೆಯೂ ವಿವರಿಸಿದ್ದೀರಿ. ಧನ್ಯವಾದಗಳು.


ಶ್ಯಾಮಲ

ಚಿತ್ರಾ said...

ಗುರು ,
ಎಲ್ಲೆಲ್ಲಿಯೂ ನಗ್ನತೆಯೇ ತುಂಬಿದ್ದರೂ , ಎಲ್ಲಿಯೂ ಅಶ್ಲೀಲವೆನಿಸದಂಥಾ ಶಿಲ್ಪಗಳಿವು ! ಅಪ್ಪಿ ತಪ್ಪಿ ನಮ್ಮ ದೇಶದಲ್ಲೆಲ್ಲಾದರೂ ಇದ್ದಿದ್ದರೆ ಹೇಗಿರುತ್ತಿತ್ತು ಅವುಗಳ ( ದು) ಸ್ಥಿತಿ ಅಂತ ಯೋಚನೆ ಮಾಡ್ತಾ ಇದ್ದೆ. ನಮ್ಮ ದೇವಾಲಯಗಳಲ್ಲೂ ಕಾಣಸಿಗುತ್ತವೆ ಆದರೆ ಅದನ್ನು ಶುದ್ಧ ಮನಸಿಂದ ನೋಡುವುದು ನಮಗೆ ಗೊತ್ತಿಲ್ಲ ! ಇಂತಹಾ ಕೆತ್ತನೆಗಳನ್ನು ಪವಿತ್ರ ಸ್ಥಳಗಳಲ್ಲಿ ಇಡುವ ಉದ್ದೇಶವನ್ನೂ ನಮ್ಮಲ್ಲಿ ಅರಿತಿಲ್ಲ ! ನೋಡುವ ಮನಸು ಸ್ವಚ್ಚವಾಗಿದ್ದರೆ ಯಾವುದೂ ಕೆಟ್ಟದೆನಿಸುವುದಿಲ್ಲ ಅಲ್ಲವೇ?

SANTOSH MS said...

Nice one. Interesting to see such sculptures.

ಶಿವಪ್ರಕಾಶ್ said...

after seeing these photos and your details, nanage nodabekenisutide...

Ravi Hegde said...

nice one :)

ಪ್ರಗತಿ ಹೆಗಡೆ said...

ಅದ್ಭುತ ಶಿಲ್ಪಗಳು.... ಚೆಂದದ ಬರಹ...

ಕ್ಷಣ... ಚಿಂತನೆ... bhchandru said...

ಗುರು ಸರ್,
ಚಿತ್ರ, ಬರಹ ತು೦ಬಾ ಚೆನ್ನಾಗಿವೆ.

ಧನ್ಯವಾದ.

ಸಾಗರದಾಚೆಯ ಇಂಚರ said...

ಶಿವೂ ಸರ್
ನಿಮ್ಮ ರಿಸರ್ಚ್ ಗೆ ಮೆಚ್ಚಿದೆ
ನೀವು ಅಂದಿದ್ದು ನಿಜ

ಇದೊಂದು ಶ್ರೀಮಂತ ದೇಶ

ಬರುತ್ತಿರಿ

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಮಾಚಿಕೊಪ್ಪ ಸರ್

ಧನ್ಯವಾದಗಳು

ಬರ್ತಾ ಇರಿ

ಸಾಗರದಾಚೆಯ ಇಂಚರ said...

nimmolagobba

ನಿಮ್ಮ ಮಾತುಗಳಿಗೆ ವಂದನೆ
ನನ್ನ ಬರಹಗಳು ಹಿಡಿಸಿದರೆ ಅದೇ ಸಂತಸ

ಸಾಗರದಾಚೆಯ ಇಂಚರ said...

sunaath ಸರ್

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಮನಸು

ತುಂಬಾ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

Mohan Hegade ಸರ್

ನಿಮ್ಮ ಪ್ರೀತಿಯ ಮಾತುಗಳು ಬರೆಯಲು ಪ್ರೇರೇಪಿಸುತ್ತವೆ

ಬರುತ್ತಿರಿ

ಸಾಗರದಾಚೆಯ ಇಂಚರ said...

ಅನಂತರಾಜ್ ಸರ್

ಬದುಕು ಹಾಗೆ ಇದ್ರೇನೆ ಚೆಂದ ಆಲ್ವಾ

ನಮ್ಮೊಳಗೇ ಧ್ವೇಷ ಮಾಡೋದ್ರಲ್ಲಿ ಏನಿದೆ ಸುಖ ಹೇಳಿ

ಸಾಗರದಾಚೆಯ ಇಂಚರ said...

- ಕತ್ತಲೆ ಮನೆ...

ಖಂಡಿತ ನಿಮ್ಮ ಕನಸು ಬೇಗ ನನಸಾಗಲಿ

ಬನ್ನಿ ಇಲ್ಲಿಗೆ

ಸಾಗರದಾಚೆಯ ಇಂಚರ said...

ರಾಜೇಶ್ ನಾಯ್ಕ

ನಿಜಾ
ಎರಡು ದಿನ ಬೇಕೇ ಬೇಕು
ನಮಗೆ ಸಮಯದ ಅಭಾವ ಇತ್ತು

ಪ್ರತಿಕ್ರಿಯೆಗೆ ಧನ್ಯವಾದಗಳು

ಬರುತ್ತಿರಿ

ಸಾಗರದಾಚೆಯ ಇಂಚರ said...

ಮನದಾಳದಿಂದ............

ಪ್ರತಿಕ್ರಿಯೆಗೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

nenapina sanchy inda ಮೇಡಂ
ತುಂಬಾ ಥ್ಯಾಂಕ್ಸ್

ಬರ್ತಾ ಇರಿ

ಸಾಗರದಾಚೆಯ ಇಂಚರ said...

ದಿನಕರ ಮೊಗೇರ..

thanks for the comments

keep visiting

ಸಾಗರದಾಚೆಯ ಇಂಚರ said...

Subrahmanya ಸರ್

ಬರ್ತಾ ಇರಿ

ಸಾಗರದಾಚೆಯ ಇಂಚರ said...

ಸಿಮೆಂಟು ಮರಳಿನ ಮಧ್ಯೆ ಪ್ರಕಾಶಣ್ಣ

ನಿಮ್ಮ ಮಾತು ನಿಜ

ನಗ್ನತೆ ಅಸಹ್ಯವಲ್ಲ

ಬೇಲೂರಿನ ಶಿಲ್ಪಿ ಕಲೆ ನಮ್ಮ ವಾಸ್ತುಶಿಲ್ಪಕ್ಕೆ ಹಿಡಿದ ಕನ್ನಡಿ

ನೋಡುವ ಕಣ್ಣು ಸುಂದರವಾಗಿರಬೇಕು

ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು

ಸಾಗರದಾಚೆಯ ಇಂಚರ said...

ಸೀತಾರಾಮ. ಕೆ. / SITARAM.K ಸರ್

ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು

ಮುಂದಿನವಾರ ಹೊಸ ವಿಷಯಗಳೊಂದಿಗೆ ಬರುವೆ

ಬರುತ್ತಿರಲ್ಲ

ಸಾಗರದಾಚೆಯ ಇಂಚರ said...

AntharangadaMaathugalu ಮೇಡಂ

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಚಿತ್ರಾ

ನೀವು ಹೇಳೋದು ಸರಿ

ನಮ್ಮ ಮನಸ್ಸು ಸರಿ ಇದ್ದಾರೆ ಏನೂ ಅನಿಸುವುದಿಲ್ಲ

ವಿದೇಶಗಳಲ್ಲಿ ಕಡಿಮೆ ಬಟ್ಟೆ ಹಾಕಿ ಓಡಾಡುತ್ತಾರೆ

ಹಾಗೆಂದೂ ಅವರು ಸಂಸ್ಕ್ರತಿ ಬಿಟ್ಟವರಲ್ಲವಲ್ಲ

ನಮ್ಮ ದ್ರಷ್ಟಿ ಕೋನ ಸರಿ ಇರಬೇಕು ಅಷ್ಟೇ

ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

SANTOSH MS

you are most welcome :)

ಸಾಗರದಾಚೆಯ ಇಂಚರ said...

ಶಿವಪ್ರಕಾಶ್

banni banni

sadaa swaagata

ಸಾಗರದಾಚೆಯ ಇಂಚರ said...

Ravi Hegde

thank you

bartaa iri

ಸಾಗರದಾಚೆಯ ಇಂಚರ said...

ಪ್ರಗತಿ ಹೆಗಡೆ

ಸ್ವಾಗತ ಬ್ಲಾಗಿಗೆ

ಬರ್ತಾ ಇರಿ

ಸಾಗರದಾಚೆಯ ಇಂಚರ said...

ಕ್ಷಣ... ಚಿಂತನೆ... bhchandru

thanks for your comments

bartaa iri

Ramya said...

Inta vondu theme park nalli bahalashtu hotu kaleda nantra nimge suthamutalina yellavu nagna vagi kandirbekala...

What I mean here is you could see through the fake smiles and fake tears....

very good one!

Magia da Inês said...

Olá, amigo!
Passei para uma visitinha...
Simplesmente incrível!!!
Fantástico!!!
Bom fim de semana!
Tudo de bom!!!
Beijinhos.
Itabira
Brasil

Snow White said...

lekhana mattu chitragalu tumba chennagive sir :)hanchikondidakke dhanyavadagalu :)

Vinay Hegde said...

Superb article... thanks guru... illindane Norway torsidakke..!!!!

ಸಾಗರದಾಚೆಯ ಇಂಚರ said...

ರಮ್ಯಾ

ನಿಜ, ಅಲ್ಲಿನ ಸೌಂದರ್ಯ ಕಣ್ಣಿಗೆ ಕಟ್ಟುವಂತಿದೆ

ಆದರೆ ನೋಡುವ ಕಣ್ಣು ಸರಿ ಇರಬೇಕು ಅಷ್ಟೇ

ಹೀಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

Magia da Inês

thanks for the comments

ಸಾಗರದಾಚೆಯ ಇಂಚರ said...

Snow White

thanks for the comments

bartaa iri

ಸಾಗರದಾಚೆಯ ಇಂಚರ said...

Vinay Hegde

dhanyavaada kano

bartaa iru hinge

*ಚುಕ್ಕಿ* said...

ಇಲ್ಲೇ ಪಕ್ಕದ ಗೆಳೆಯನ ಊರಿಗೆ ಹೋಗಿ ಬಂದಸ್ಟೇ ಸಂಬ್ರಮ ನಿಮ್ಮ ಪ್ರವಾಸ ಕಥನ ಓದಿದಾಗ ಅನಿಸ್ತು. ಕಣ್ಣಿಗೆ ಕಟ್ಟುವಂತಹ ಚಿತ್ರಣ , ನಿಮ್ಮ ಜೊತೆ ಜೊತೆಗೆ ನೋಡಿದ ಆನಂದ . ನಮ್ಮ ಹಳ್ಳಿಗಳು ಹೀಗೆ ಸಿಂಗರಿಸಿಕೊಳ್ಳುವುದು ಯಾವಾಗ?! !!!!!!

ಧನ್ಯವಾದ ಪರಿಚಯಿಸಿದ್ದಕ್ಕೆ..

ಸಾಗರದಾಚೆಯ ಇಂಚರ said...

@ Chukki

dhanyavaadagalu abhipraayakke,

baruttiri

ವಿ.ರಾ.ಹೆ. said...

ಅಪರೂಪದ ಉದ್ಯಾನವನ. ಚೆನ್ನಾಗಿ ತೋರಿಸಿದ್ದೀರಿ. ಥ್ಯಾಂಕ್ಸ್.