Tuesday, February 8, 2011

''ಪೆಟ್ಟು'' ನಿನಗೆ ಬಿತ್ತಲ್ಲ ''ಪೆಟ್ಟು'' Part 3

''ಕುರುಡು ಕಾಂಚಾಣ ಕುಣಿಯುತಲಿತ್ತು''

ಹಣ ಸುಖ ಕೊಡುತ್ತದೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸುಳ್ಳು ಕೂಡಾ.

 ದಿನದ ಊಟದ ಖರ್ಚು, ಉಡುವ ಬಟ್ಟೆಯ ವೆಚ್ಚ , ನಲಿದು ಆಡುವ ಮಕ್ಕಳ ಆಸೆ ಇವಿಷ್ಟನ್ನು ದೊರಕಿಸಿಕೊಡುವಷ್ಟು ಹಣ ನಮ್ಮಲ್ಲಿದ್ದರೆ ನಾವೇ ಸುಖಿಗಳು. ಕಾರಣ ಹಣ ಹೆಚ್ಚಾದಂತೆ ಇನ್ನೂ ಹೆಚ್ಚು ಮಾಡುವ ತವಕ. ಕಡಿಮೆ ಸಂಬಳ ಬರುವವನಿಗೆ ಹೆಚ್ಚು ಸಂಬಳ ಪಡೆಯುವ ಆಸೆ, ಹೆಚ್ಚು ಸಂಬಳ ಪಡೆಯುವಗೆ ಇನ್ನೂ ಹೆಚ್ಚು ಪಡೆಯುವ ಆಸೆ. ಮಾನವನಿಗೆ ತ್ರಪ್ತಿ ಎನ್ನುವುದು  ಇರುವುದೇ ಇಲ್ಲ. ಸಣ್ಣ ಟಿ ವಿ ತೆಗೆದುಕೊಂಡವನಿಗೆ  ದೊಡ್ಡ ಟಿ ವಿ ಬೇಕು, ದೊಡ್ಡ ಟಿ ವಿ ತೆಗೆದುಕೊಳ್ಳುವವವನಿಗೆ ಫ್ಲಾಟ್ ಟಿ ವಿ ಬೇಕು, ಹೀಗೆ ಪ್ರತಿಯೊಂದರಲ್ಲೂ ಮನುಷ್ಯ ಇದ್ದಿದ್ದರಲ್ಲಿ ಸಂತ್ರಪ್ತನಾಗುವುದೇ  ಇಲ್ಲ. ಆ ಅಸಂತ್ರಪ್ತ ಮನಸ್ಸೇ ಜಗತ್ತಿನ ಅನೇಕ ಅವಘಡಗಳಿಗೆ ಕಾರಣವೂ ಕೂಡಾ.

  ''ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ''

ಎಂಬ ಹಾಡು ಅಂದಿಗೂ ಇಂದಿಗೂ ಎಂದಿಗೂ ಎಷ್ಟು ಪ್ರಸ್ತುತ ಅಲ್ಲವೇ?

ಉಡುಪಿಯ ಆ ದಿನಗಳಲ್ಲಿ ಆದದ್ದು ಅದೇ, ಮೊದಲ ಗಳಿಕೆ ಎಂದಿಗೂ ವಿಶೇಷ ತ್ರಪ್ತಿ ನೀಡುತ್ತದೆ. ಆದರೆ ಅಲ್ಲಿ ಗಳಿಕೆ ನನ್ನ ಉದ್ದೇಶ ಆಗಿರಲಿಲ್ಲ. ಕಲಿಕೆ ಉದ್ದೇಶವಾಗಿತ್ತು. ಮೊದಲ ''ಪೆಟ್ಟು'' ಹೋಗಿ ಬಂದ ನಂತರ ಬಡಿಸುವುದರಲ್ಲಿ ವಿಶ್ವಾಸ ವೂ ಬಂತು. ಮೊದಲ ಪೆಟ್ಟು, ಎರಡಾಯಿತು, ಎರಡು ಮೂರಾಯಿತು, ಮೂರು ನಾಲಕ್ಕು......... ಹೀಗೆ ಪೆಟ್ಟಿಗೆ ಹೋಗಲು ಆರಂಬಿಸಿದೆ. ಹೋಗಲೇಬೇಕಾದ ಅನಿವಾರ್ಯತೆ ಸ್ರಷ್ಟಿಯಾಗುವಷ್ಟರ    ಮಟ್ಟಿಗೆ ಅದು ಬೆಳೆಯಿತು. ಬದುಕೇ ಹಾಗೇ, ಅದನ್ನು ಎಷ್ಟರ ಮಟ್ಟಿಗೆ ಬೇಕೋ ಅಷ್ಟರ ಮಟ್ಟಿಗೆ ಇಟ್ಟರೆ ಸ್ವರ್ಗ, ಇಲ್ಲದಿರೆ ಆ ಬದುಕೇ ಕುತ್ತಿಗೆಯೇ ಮೇಲೆ ಹತ್ತಿ ಕುಣಿಯಲು ಆರಂಬಿಸುತ್ತದೆ. ಅದಕ್ಕೆ ಇರಬೇಕು, ಸಾಧು ಸಂತರು ಸತತ ಯೋಗ ಧ್ಯಾನ ದ ಮೂಲಕ ಮನಸ್ಸಿನ ಮೇಲೆ ಹಿಡಿತ ಸಾಧಿಸಿದ್ದರು ಎನಿಸುತ್ತದೆ.

















''ಪೆಟ್ಟು'' ಮೊದ ಮೊದಲು ಸುಂದರವಾಗಿಯೇ ಇತ್ತು. ಮೊದಲು ಹಣ ಬರಲು ಆರಂಬಿಸಿದಾಗ ಹಾಗೇ ಆಗುತ್ತದೆ ಅಲ್ಲವೇ? ಆದರೆ ಅದೊಂದು ದಿನ ಮಾತ್ರ ಪೆಟ್ಟಿಗೆ ಬಿದ್ದಿತ್ತು ದೊಡ್ಡ ''ಪೆಟ್ಟು''. ಕಾಲೇಜಿನಲ್ಲಿ ಪ್ರತಿದಿನ 12 -30 ಗೆ ಕ್ಲಾಸ್ ಮುಗಿಯುತ್ತಿತ್ತು. ಮತ್ತೆ ಮಧ್ಯಾನ್ಹ  2 ಘಂಟೆಗೆ ಆರಂಬವಾಗುತ್ತಿತ್ತು. ಆ ದಿನವೂ 12 -30 ಗೆ ಕ್ಲಾಸ್ ಮುಗಿಸಿ ಊಟಕ್ಕೆ ಹೋಗುವ ಪ್ಲಾನ್ ಎಂದಿನಂತೆಯೇ ಇತ್ತು. ಪ್ರತಿದಿನ 12 -30 ಕ್ಕೆ  ಊಟಕ್ಕೆ ಕ್ರಷ್ಣ  ಮಠ ಕ್ಕೆ ಹೋಗುತ್ತಿದ್ದೆವು. ಆದರೆ ಆ ದಿನ ಬೆಳಿಗ್ಗೆ ಪೆಟ್ಟಿನ ಸ್ನೇಹಿತರು  ಬಂದು ಇಂದು ಮಧ್ಯಾನ್ಹ ಪೆಟ್ಟು ಇದೆ. 12 -30 ಕ್ಕೆ ಹೋಗಿ 2 ಘಂಟೆಗೆ ಬರುವುದು ಎಂದರು. ನಾನು ನನಗೆ ಎರಡು ಘಂಟೆಗೆ ರಸಾಯನ ಶಾಸ್ತ್ರ (Chemistry) ದ ಕ್ಲಾಸ್ ಇದೆ, ಬರಲು ಆಗುವುದಿಲ್ಲ ಎಂದೆ. ಆದರೆ ಅವರು ಕೇಳಬೇಕಲ್ಲ.  12 -30 ಗೆ ಹೊರಟೆ ಬಿಟ್ಟಿತ್ತು  ದಂಡು. 

ಮದುವೆ ಮನೆ, ವಧು ವರರು ಹಾರ ಬದಲಾಯಿಸಿಕೊಂಡು ಹಸನ್ಮುಖರಾಗಿ ಕುಳಿತಿದ್ದರು. ಬಂದ ಬಂಧು ಬಳಗ ಅವರನ್ನೆಲ್ಲ ಹರಸಿ ಊಟಕ್ಕೆ ಹೋಗುತ್ತಿದ್ದರು. ನಮ್ಮ ಕೆಲಸ ಆರಂಭವಾಗುವುದೇ ಈಗ, ನಾವು ಬಡಿಸಲು ಆರಂಬಿಸಿದೆವು. ಕೆಲವೊಮ್ಮೆ ಮುಂದೆ ಆಗುವ ಸಮಸ್ಯೆ  ಮೊದಲೇ ತಿಳಿಯುತ್ತದಂತೆ. ಆ ದಿನ ಬಡಿಸುವಾಗಲೂ ಏನೋ ಒಂದು ತರ ಬೇರೆಯೇ ತರನಾದ ವಿಚಿತ್ರ ಅನುಭವ ಆಗುತ್ತಿತ್ತು. ಇದೇಕೆ ಹೀಗೆ ಆಗುತ್ತಿದೆ ಎಂದು ಯೋಚಿಸಿದರೂ ಹೊಳೆಯಲಿಲ್ಲ. ಸಮಯ ಹೋಗುತ್ತಿತ್ತು. 2 ಘಂಟೆ ಸಮೀಪಿಸುತ್ತಿತ್ತು. ರಸಾಯನ ಶಾಸ್ತ್ರ ಕ್ಲಾಸ್ ಇದೆ ಬೇರೆ. ಅದು ರಸಾಯನ ಶಾಸ್ತ್ರದ ಅದ್ಭುತ ಪ್ರೊಫೆಸರ್ ಕ್ಲಾಸ್ ಆಗಿತ್ತು. ಮಿಸ್ ಮಾಡಿಕೊಳ್ಳೋ ಚಾನ್ಸ್ ಇರಲೇ ಇಲ್ಲ, 

ಆದರೆ ಬಂದ ಮೇಲೆ ಬಡಿಸಿ ಮುಗಿಸದೆ  ಹೋಗೋ ಚಾನ್ಸ್ ಕೂಡಾ ಇರಲಿಲ್ಲ. ಹಾಗೇ ಸಾಲಿನಲ್ಲಿ ಬಡಿಸುತ್ತ ಬಡಿಸುತ್ತ ಹೋಗುತ್ತಿದ್ದವನಿಗೆ ಎದೆ ಧಸಕ್ ಅಂದಿತು ಒಮ್ಮೆ. ತಲೆ ಎತ್ತಿ ನೋಡುತ್ತೇನೆ, ರಸಾಯನ ಶಾಸ್ತ್ರದ  ಸರ್ವ ಪ್ರೊಫೆಸರ್ ಗಳೂ ಸಾಲಿನಲ್ಲಿ ಸಪ್ತ ಋಷಿಗಳು ತಪಸ್ಸಿಗೆ ಕುಳಿತ ಹಾಗೇ ಕುಳಿತಿದ್ದಾರೆ. ಕೈಯಲ್ಲಿ ರಸಂ (ಸಾರು), ಎದುರುಗಡೆ ರಸಾಯನ ಶಾಸ್ತ್ರ, ಮೈಯೆಲ್ಲಾ ಬೆವರಿನ ರಸ ಒಟ್ಟಿನಲ್ಲಿ ಭೂಮಿ, ಆಕಾಶ ಒಟ್ಟಿಗೆ ಬೆರೆತು ತಲೆಯ ಮೇಲೆ ಬಿದ್ದ ಅನುಭವ. ಅದರಲ್ಲೂ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ರಸಾಯನ ಶಾಸ್ತ್ರದಲ್ಲಿ ಒಬ್ಬರು ಪ್ರೊಫೆಸರ್ ಇದ್ದರು. ಅವರು ಹಾಸ್ಯ ಮಾಡುತ್ತಲೇ ಚಾಟಿ ಬೀಸುವ ಪ್ರವ್ರತ್ತಿಯವರು. ನಾ ಕಂಡ ಅತ್ಯುತ್ತಮ ಪ್ರೊಫೆಸರ್ ಗಳಲ್ಲಿ ಒಬ್ಬರು ಅವರು. 

ನನ್ನ ನೋಡಿ, ಸಮಯ ನೋಡಿದರು, ಮತ್ತೆ ನನ್ನ ನೋಡಿದರು, ನನಗೆ ವಿಚಿತ್ರ ತಳಮಳ. ಪೆಟ್ಟಿಗೆ ಬಂದು ಅಂದು ದೊಡ್ಡ ''ಪೆಟ್ಟು'' ಬಿದ್ದಿತ್ತು. ಅದಕ್ಕೆ ಮೊದಲು ಹೇಳಿದ್ದು, ಹಣ ಬೇಕು ನಿಜ, ಅತಿಯಾದ ಹಣ ಒಳ್ಳೆಯದಲ್ಲ ಎಂದು. ಪಾಪ, ನನಗೇನು ಗೊತ್ತಿತ್ತು ನಾನು ಹೋಗಿದ್ದು ಪೂರ್ಣ ಪ್ರಜ್ಞ ಕಾಲೇಜಿನ ವಿದ್ಯಾರ್ಥಿನಿಯ ಮದುವೆಗೆ ಎಂದು :) 

ಮರುದಿನ ಕ್ಲಾಸ್ ನಲ್ಲಿ ಅವರು ರಸಾಯನ ಶಾಸ್ತ್ರ ಕಲಿಸುವ ಬದಲು ರಸಂ ಮಾಡುವ ವಿಧಾನ, ಬಡಿಸುವ ವಿಧಾನ ಗಳ ಬಗೆಗೆ ಹೇಳಿದರು, ಕ್ಲಾಸ್ ನ ಉಳಿದ ವಿಧ್ಯಾರ್ಥಿಗಳಿಗೆ ಇದ್ಯಾಕೆ ರಸಂ ಬಗ್ಗೆ ರಸಾಯನ ಶಾಸ್ತ್ರದ ಪ್ರೊಫೆಸರ್ ಮಾತನಾಡುತ್ತಿದ್ದಾರೆ ಎಂದು. ನನಗೆ ಮಾತ್ರ ರಸಂ ಬೇಗ ಮುಗಿದು ಹೋದರೆ ಸಾಕೆಂದು ಅನ್ನಿಸುತ್ತಿತ್ತು. ಆ ಪ್ರೊಫೆಸರ್ ಗೆ ನನ್ನ ಮೇಲೆ ಇದ್ದ ವಿಶೇಷ ಪ್ರೀತಿಯಿಂದ ಅವರು ಒಂದು ತಾಸು ರಸಂ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದರು. ಅದರ ನಂತರ ಪೆಟ್ಟು ಕೇವಲ ವಾರಾಂತ್ಯದ ಕೆಲಸವಾಗಿತ್ತೆ ಹೊರತು ವಾರದ ಮಧ್ಯದ ಕೆಲಸವಾಗಿರಲಿಲ್ಲ.

ಇದನ್ನೆಲ್ಲಾ ಯಾಕೆ ಬರೆಯುತ್ತಿದ್ದೇನೆಂದರೆ ಅಂದು ನನ್ನೊಂದಿಗೆ ಪೆಟ್ಟಿಗೆ ಬರುತ್ತಿದ್ದ ಎಷ್ಟೋ ಮಂದಿ ಅಂದಿನ ಕ್ಷಣಿಕ ಗಳಿಕೆಯನ್ನೇ ಮಹಾ ಗಳಿಕೆ ಎಂದು ತಿಳಿದು ಕಲಿಯುವುದ ಅರ್ಧ ದಲ್ಲೇ ಬಿಟ್ಟು ಇಂದು ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ. ಸ್ವಾಭಿಮಾನ, ಸ್ವಂತ ದುಡಿಮೆ ಎಲ್ಲವೂ ಅವಶ್ಯ ನಿಜ, ಆದರೆ ಅದು ಬದುಕನ್ನೇ ನುಂಗಬಾರದು. ನನ್ನೊಂದಿಗೆ ಪೆಟ್ಟಿಗೆ ಬಂದ ಕೆಲವು ಸ್ನೇಹಿತರು ಇಂದು ಬೆಂಗಳೂರಿನಲ್ಲಿ Chartered Accountant ಆಗಿ ದೊಡ್ಡ ದೊಡ್ಡ ಕಂಪನಿಗಳ ಮುಖ್ಯ ಹುದ್ದೆಯಲ್ಲಿದ್ದಾರೆ. ಪ್ರತಿ ಸಲ ಬೆಂಗಳೂರಿಗೆ ಹೋದಾಗ ಅವರನ್ನೆಲ್ಲ ಭೆಟ್ಟಿಯಾಗುತ್ತೇನೆ. ಸಾಹಸಮಯ ಬದುಕಿನ ಉದಾಹರಣೆಯಂತೆ ಇರುವ ಅವರ ಜೀವನ ದ ಮೇಲೆ ನನಗೆ ಬಹಳ ಹೆಮ್ಮೆಯಿದೆ, ಅಂತಹ ಸ್ನೇಹಿತರ ಪರಿಚಯ ಈ ಬದುಕಿಗೆ ಸಿಕ್ಕ ಬಹುದೊಡ್ಡ ಆಸ್ತಿ.

ನನ್ನ ಬದುಕಿನೊಂದಿಗೆ ಹೆಜ್ಜೆ ಹಾಕಿದ ನನ್ನ ಬದುಕಿನ ಪ್ರತಿ ಘಟ್ಟದಲ್ಲೂ ನೋವಿಗೆ ಸಾಂತ್ವನ ನೀಡುವ ತಾಯಿಯಂತೆ, ನಲಿವಿಗೆ ಹುರಿದುಂಬಿಸುವ ಅಣ್ಣನಂತೆ, ಸಾಧನೆಗಳಿಗೆ ಪ್ರೋತ್ಸಾಹಿಸುವ ತಂದೆಯಂತೆ, ತಪ್ಪಿದಲ್ಲಿ ತಿದ್ದುವ  ಸ್ನೇಹಕ್ಕೆ ಅರ್ಥವಾದ ಗೆಳೆಯನೊಬ್ಬನ ಪ್ರೀತಿ  ಉಡುಪಿಯಲ್ಲಿ ಅಷ್ಟೇ ಅಲ್ಲ ನನ್ನ ಬದುಕಿನಲ್ಲಿಯೇ ಮರೆಯಲಾರದ್ದು. ಮುಂದೆ ಅವನ ಬಗ್ಗೆ ಬರೆಯುತ್ತೇನೆ.
 ಮತ್ತೆ ಸಿಗುತ್ತೇನೆ
ನಿಮ್ಮವ 
ಗುರು 

ಮೊದಲ ಹಾಗೂ ಎರಡನೇ ಭಾಗ ಓದದವರು ಕೆಳಗೆ ಕ್ಲಿಕ್ ಮಾಡಿ ಓದಿ 
ಬದುಕಿನ ಪುಟಗಳಿಂದ http://gurumurthyhegde.blogspot.com/2011/01/1.html  ಭಾಗ 1
ಅದು ಕೇವಲ ೫೦ ರೂಪಾಯಿ ಆಗಿರಲಿಲ್ಲ http://gurumurthyhegde.blogspot.com/2011/02/50.html  ಭಾಗ  2 

50 comments:

ಓ ಮನಸೇ, ನೀನೇಕೆ ಹೀಗೆ...? said...

ಕೆಲ ನೆನಪುಗಳೇ ಹಾಗೆ ...ನೆನೆದಾಗಲೆಲ್ಲ ಒಂದು ರೀತೀಯ ರೋಮಾಂಚನವನ್ನು ನೀಡುತ್ತವೆ. ಹಳೆಯ ಕೆಲ ನೆನಪುಗಳು ಎಂದಿಗೂ ನಮ್ಮ ಜೀವನದ ಸಾರ್ಥಕತೆಯ ತುಲನೆಗೆ ಸಹಕಾರಿಯಾಗುತ್ತವೆ. ಮುಂದಿನ ಬದುಕಿಗೆ ಸ್ಪೂರ್ತಿ ನೀಡುತ್ತವೆ.
ಆಸಕ್ತಿ , ಕುತೂಹಲ ಮೂಡಿಸುವ ರೋಚಕಮಯವಾದ ಅನುಭವ ಕಥನ ಗುರು ಅವರೇ. ತುಂಬಾ ಚೆನ್ನಾಗಿದೆ.

ಸುಧೇಶ್ ಶೆಟ್ಟಿ said...

kaayisuvanthe idhe nimma baraha maalike.... thumba kushi aaguttade oduvaaga... mundina bhaagakke kaayutta iddene :)

ಸಾಗರದಾಚೆಯ ಇಂಚರ said...

ಓ ಮನಸೇ ನೀನೇಕೆ ಹೀಗೆ
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು
ನೀವು ಹೇಳಿದಂತೆ ಹಳೆಯ ನೆನಪುಗಳು ಬದುಕಿಗೆ ಸ್ಪೂರ್ತಿ
ಉಡುಪಿಯಲ್ಲಿ ಕಳೆದ ಕ್ಷಣಗಳು ಮರೆಯಲು ಸಾದ್ಯವಿಲ್ಲ
ಹೀಗೆಯೇ ಬರುತ್ತಿರಿ
ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸುಧೇಶ ಸರ್
ಕಾಯಿಸುವಂತಿದೆ ಅಂತ ಹೇಳಿ ಬೇಗ ಹಾಕಿ ಅಂತ ಹೇಳ್ತಿದಿರ :)
ನಿಮ್ಮ ಮಾತುಗಳಿಗೆ ಋಣಿ
ಬರೆಯಲು ಸ್ಪೂರ್ತಿ ನೀಡುವ ಮಾತುಗಳಿಗೆ ವಂದನೆ

balasubramanya said...

ನಿಮ್ಮ ಜೀವನದ ಮರೆಯಲಾರದ ಕ್ಷಣಗಳ ಸುಂದರ ಮಾಲಿಕೆ .ಜೀವನ ಮೌಲ್ಯಗಳ ಬಗ್ಗೆ ಬೆಳಕು ಚೆಲ್ಲಿದ ನೀವು ಹಾಗು ನಿಮ್ಮ ಬಗ್ಗೆ ಕಾಳಜಿ ಇಂದ ರಸಂ ಪಾಠ ಮಾಡಿ ನಿಮಗೆ ಕಣ್ತೆರೆಸಿದ ನಿಮ್ಮ ಪ್ರೊಫೆಸರ್ ಗೆ ಅಭಿನಂದನೆಗಳು. ಅಂದಿನ ಪ್ರೊಫೆಸರ್ ನಿಜವಾಗಿಯೂ "ಗುರು ಬ್ರಹ್ಮ, ಗುರು ವಿಷ್ಣು , ಗುರುದೇವೋ ಮಹೇಶ್ವರ " ಶ್ಲೋಕದ ಅನ್ವರ್ಥ ವಾಗಿದ್ದರೂ. ಇಂದು ಶಿಷ್ಯನೆ ಬ್ರಹ್ಮ , ವಿಷ್ಣು, ಮಹೇಶ್ವರ ಎಲ್ಲಾ . ಮುಂದಿನ ಬರಹಕ್ಕೆ ಕಾಯುತ್ತೇನೆ.

ಸುಮ said...

ನಿಮ್ಮ ಅನುಭವಗಳ ಮೂಲಕ ಬದುಕಿನ ಸತ್ಯವನ್ನು ತಿಳಿಸಿದ್ದೀರಿ. ಚಂದದ ಬರಹ.

SANTOSH MS said...

Guru Sir,

Very good writeup. Good experience.

Jagadeesh Balehadda said...

ನಿಮ್ಮ ಬರವಣಿಗೆ ತುಂಬಾ ಚನ್ನಾಗಿಬರುತ್ತಿದೆ. ಮುಂದಿನ ಬ್ಲಾಗ್ ಪೋಸ್ಟಗೆ ನಾನು ಕಾಯುತ್ತಿದ್ದೇನೆ.

ಭಾಶೇ said...

Yes! the desire to be independent at an early age should not spoil our independence in future.

That's why they say, for the one who is a student, money and sleep are the two biggest enemies! :)

sunaath said...

ಗುರುಮೂರ್ತಿಯವರೆ,
ನಿಮ್ಮ ನೆನಪುಗಳು ತುಂಬ ಸ್ವಾರಸ್ಯಕರವಾಗಿವೆ. ಮುಂದುವರೆಸಿ.

ಡಾ. ಚಂದ್ರಿಕಾ ಹೆಗಡೆ said...

"pettina" kattindaa innashtu pettu illi bilali... haleya sihi kahi anubhavagala abhivyakti swaarasyakaravaagide,,,, mundinaa pettu... kaayuvikeyalli......

Chaithrika said...

ಹ್ಹ ಹ್ಹಾ... ನಿಮ್ಮ ಅವಸ್ಥೆಗೆ ನಗು ಬಂತು. ಅಧ್ಯಾಒಕರಿಗೆ ಸರಿಯಾಗಿ ಊಟ ಬಡಿಸಿದಿರೋ ಇಲ್ಲವೋ?

ಹೌದು. ಅತಿಯಾದರೆ ಅಮೃತವೂ ವಿಷ ಎಂಬಂತೆ, ನಿಮ್ಮ ಅನುಭವ ಚೆನ್ನಾಗಿದೆ.

Ganapati Bhat said...

ಹ ಹ ಹ ನಂಗೂ ವೊಂದಿನ ಆರ್ ಎಲ್ ಭಟ್ ರು ಸಿಕ್ದಿದ್ರಪಾ ಪೆಟ್ಟಿಂಗ್ ಹೋದಾಗ :)

Nagendra hegde said...

indirect agi part time job madavke buddi helidde. Olledu.

ಮನಸಿನಮನೆಯವನು said...

ಚೆನ್ನಾಗಿದೆ..
ನಮ್ಮ ಗೆಳೆಯರಲ್ಲಿ ಕೆಲವ್ರು ಕೂಡ ಮುಂದಿನದನ್ನು ಮರೆತು ಈಗ ಬರುವ ಹಣಕ್ಕಾಗಿ ಭವಿಷ್ಯ ಕಳೆದುಕೊಳ್ಳುತ್ತಿದ್ದಾರೆ..

ಮನಸು said...

tumba chennagide lekhana haagu nimma nenapugaLu... nenapugaLa maatu madhura... annohaagide


guru sanchikege kaayta iddeevi...

ಸುಬ್ರಮಣ್ಯ said...

ಪೆಟ್ಟು=ಬಡಿಸುವುದು???

Ittigecement said...

ಗುರು...

ಬದುಕಿನ ಇಂಥಹ ಘಟ್ಟದಲ್ಲಿ ತಿರುಗಿ ನೋಡಿದಾಗ ನಮ್ಮ ಹಳೆಯ ನೆನಪುಗಳು ಬಲು ಸೊಗಸು...
ಕೆಲವೊಂದು ಕಹಿಯಾಗಿದ್ದರೂ..
ಅದರ ನೆನಪುಗಳು ಸದಾ ಹಸಿರು..

ನಿಮ್ಮ ಹಳೆಯ ನೆನಪುಗಳು ಇನ್ನಷ್ಟು ಬರಲಿ...

ಜೈ ಹೋ !

Ambika said...

Lekhana chennagide..Pettige hogi "Pettu" tindaddu odi nagu bantu..:)

ತೇಜಸ್ವಿನಿ ಹೆಗಡೆ said...

Good one.. keep writing. Next part bega haaku :)

ಚಂದಿನ | Chandrashekar said...

ಸುಂದರವಾಗಿದೆ ನಿಮ್ಮ ನೆನಪುಗಳ ಮೂಡಿ ಬರುವ ಪರಿ, ಹೀಗೆ ಮುಂದುವರೆಯಲಿ...

ಮನಮುಕ್ತಾ said...

nicely wtitten...please continue.

ಸಾಗರದಾಚೆಯ ಇಂಚರ said...

ಬಾಲು ಸರ್
ನಂಗೆ ಸಿಕ್ಕ ಗುರುಗಳೆಲ್ಲ ತುಂಬಾನೇ ಒಳ್ಳೆಯವರು ಆಗಿದ್ರು
ಬದುಕಿಗೆ ಮಾರ್ಗದರ್ಶನ ನೀಡಿದಾ ಅಗುರುಗಳ ನೆನಪು ಸದಾ ಬರ್ತಾ ಇರತ್ತೆ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

ಸುಮಾ ಅವರೇ

ಬದುಕಿನ ಸತ್ಯಗಳ ಬರಹಕ್ಕೆ ಸಾಕ್ಷಿಯಾಗಿದ್ದಿರಿ

ನಿಮ್ಮಂತ ಓದುಗರೇ ಬರೆಯಲು ಸ್ಪೂರ್ತಿ

ಬರುತ್ತಿರಿ

ಸಾಗರದಾಚೆಯ ಇಂಚರ said...

Santhosh

thank you for the comments

keep visiting

ಸಾಗರದಾಚೆಯ ಇಂಚರ said...

ಜಗದೀಶ್ ಸರ್

ನಿಮ್ಮ ಮಾತುಗಳಿಗೆ ಥ್ಯಾಂಕ್ಸ್

ಮುಂದಿನ ಕಂತು ಬೇಗ ಬರುತ್ತದೆ

ಸಾಗರದಾಚೆಯ ಇಂಚರ said...

ಭಾಶೆ

ಹೌದು

ಹಣ ಮುಖ್ಯ ಆದರೆ ಬದುಕನ್ನು ಹಾಲು ಮಾಡಿಕೊಂಡು ಅಲ್ಲ

ಹೀಗೆ ಬರುತ್ತಿರಿ

ಸಾಗರದಾಚೆಯ ಇಂಚರ said...

ಸುನಾಥ್ ಸರ್

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಚಂದ್ರಿಕಾ,

ಪೆಟ್ಟು ಬಹಳಷ್ಟು ಪೆಟ್ಟು ನೀಡಿಲ್ಲ,
ಪೆಟ್ಟು ಬದುಕಿಗೆ ಒಳ್ಳೆಯ ಪಾಠ ಕಲಿಸಿದೆ

ಸಾಗರದಾಚೆಯ ಇಂಚರ said...

ಚೈತ್ರಿಕ

ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ

ನನ್ನ ಅವಸ್ಥೆ ನೋಡಿ ನಿಮಗೆ ನಗು ಬಂತಾ

ಇರಲಿ ಇರಲಿ
ಎಲ್ಲರಿಗೂ ಬಡಿಸಿದ ಮೇಲೆ ನನಗೆ ಕ್ಲಾಸ್ ನಲ್ಲಿ ಅವರೇ ಬಡಿಸಿದರು ರಸಂ ನ ಹಹಹಹ

ಸಾಗರದಾಚೆಯ ಇಂಚರ said...

ಗಣಪತಿ

ನಿನಗೂ ರಸಂ ಸಿಕ್ಕಿದ್ದು ಹಂಗಾರೆ

ಅದೊಂದು ತರ ಮಜಾ ಅಲ್ದಾ

ಸಾಗರದಾಚೆಯ ಇಂಚರ said...

ನಾಗೇಂದ್ರ

ಹಣ ಇಲ್ದೆ ಏನು ನಡಿತಿಲ್ಲೇ

ಆದರೆ ಆ ಹಣ ಎಷ್ಟಕ್ಕೆ ಬೇಕೋ ಅಷ್ಟಿದ್ರೆ ಸಾಕು

ಅದರ ಹಿಂದೆ ಹೋದ್ರೆ ನಮ್ಮ ಮೂರ್ಖ ಮಾಡ್ತು ಅದು

ಸಾಗರದಾಚೆಯ ಇಂಚರ said...

ವಿಚಲಿತ

ನನ್ನ ಹಲವು ಗೆಳೆಯರು ಜೀವನ ಹಾಲು ಮಾಡಿಕೊಂಡಿದ್ದಾರೆ ಪೆಟ್ಟಿಗೆ ಬಿದ್ದು

ಆದರೆ ಪೆಟ್ಟು ಬದುಕಿಗೆ ಬೆಳಕೂ ಆಗಿದೆ

ಸಾಗರದಾಚೆಯ ಇಂಚರ said...

ಮನಸು

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ನೆನಪುಗಳ ಮಾತು ಎಂದಿಗೂ ಮಧುರವೇ

ಮುಂದಿನ ಸಂಚಿಕೆಗೆ ಕಾಯುತ್ತಿರಲ್ಲ

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಮಾಚಿಕೊಪ್ಪ ಸರ್

ಪೆಟ್ಟು ಅಂದರೆ ಬಡಿಸುವುದು

ನಿಮಗೆ ಗೊತ್ತಿರಬೇಕಲ್ಲ

ನೀವು ಆ ಕಡೆಯವರೇ

Dr.D.T.Krishna Murthy. said...

ಗುರು ಸರ್;ಪೆಟ್ಟಿಗೆ ಪೆಟ್ಟು ಬಿದ್ದ ಕಥೆ ತುಂಬಾ ಚೆನ್ನಾಗಿದೆ.ಅಭಿನಂದನೆಗಳು.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ

ಹಳೆಯ ನೆನಪುಗಳ ಮಾಲೆ ಬದುಕಿಗೆ ದಾರಿ ದೀಪ ದಂತೆ

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಜೈ ಹೋ

ಸಾಗರದಾಚೆಯ ಇಂಚರ said...

Kavita

nimage nagu
namge sankata hahha

heege bartaa iri

ಸಾಗರದಾಚೆಯ ಇಂಚರ said...

ವಸಂತ್ ಸರ್

ನೆನಪಿಸುವ ನೆನಪುಗಳು ಮರೆಯದೆ ನೆನಪಿನಲ್ಲಿ ಇರುತ್ತವೆ

ನೆನಪು ಮಾಡಲು ಇಚ್ಚಿಸದ ನೆನಪುಗಳು ನೆನಪಿಗೆ ಬಂದರೂ ನೆನಪಿರದೆ ಹಾಗೆ ಕುಳಿತಿರುತ್ತವೆ

ಸದಾ ನೆನಪಿಸುತ್ತಿರಿ ನಮ್ಮ ಬ್ಲಾಗ್

ಸಾಗರದಾಚೆಯ ಇಂಚರ said...

Tejaswniyavare

thank you

khandita next part bega

ಸಾಗರದಾಚೆಯ ಇಂಚರ said...

ಚಂದಿನ

ತುಂಬಾ ಧನ್ಯವಾದಗಳು

ಬರುತ್ತಿರಿ

ಸಾಗರದಾಚೆಯ ಇಂಚರ said...

ಮನಮುಕ್ತಾ

ಧನ್ಯವಾದಗಳು

ಬರುತ್ತಿರಿ

ಸಾಗರದಾಚೆಯ ಇಂಚರ said...

ಕೃಷ್ಣಮೂರ್ತಿ ಸರ್

ನಿಮ್ಮ ಆಶಿರ್ವಾದ ಹೀಗೆಯೇ ಇರಲಿ

ಬರುತ್ತಿರಿ

KalavathiMadhusudan said...

guru sir,nimma lekhana tumba svaarasyakaravaagide.mundina lekhana bega barali....

ಅಪ್ಪ-ಅಮ್ಮ(Appa-Amma) said...

ಗುರು,
ಪೆಟ್ಟಿನ ಅಧ್ಯಾಯ ಹಾಸ್ಯದ ಕ್ಷಣಗಳಿಂದ ಕೂಡಿದ್ದರೂ, ತುಂಬಾ ಇಷ್ಟವಾಗಿದ್ದು ಜೀವನದ ಗುರಿಗಳ ಬಗ್ಗೆ ನಿಮಗಿದ್ದ ಸ್ಪಷ್ಟತೆಯ ಬಗ್ಗೆ..

KalavathiMadhusudan said...

guru sir nimma anubhava tumbaa svaarasyakaravaagide.munduvaresi.

prabhamani nagaraja said...

ನಿಮ್ಮ ಅನುಭವದ ಪ್ರಸ೦ಗಗಳು ಬಹಳ ಸೊಗಸಾಗಿವೆ. ನಮ್ಮೊಡನೆ ಹ೦ಚಿಕೊ೦ಡದ್ದಕ್ಕಾಗಿ ಧನ್ಯವಾದಗಳು ಗುರು ಸರ್. ನಿಮ್ಮ ಸ್ವಾನುಭವ ಲೇಖನಗಳು ಹೀಗೆ ಮು೦ದುವರಿಯಲಿ.

Ashok.V.Shetty, Kodlady said...

Guru Sir,

mooru bhagagalannu odi mugiside, tumba ishta aitu....bahala Chennagide sir...

ಜಲನಯನ said...

ಗುರು, ನಿಮ್ಮ ಅನುಭವವನ್ನು ಹಂಚ್ಕೊಳ್ಳುವುದರು ಜೊತೆಗೆ ಕೆಲವು ಬದುಕಿನ ಸತ್ಯಗಳನ್ನೂ ತಿಳಿಸಿಸ್ತಿದ್ದೀರಿ..ರಸಾಯನದಿಂದ ರಸಂ ...ಚನ್ನಾಗಿದೆ..ಆದ್ರೆ ರಸಾಯನದಿಂದ ಭೌತ ಶಾಸ್ತ್ರದತ್ತ ನಿಮ್ಮ ಒಲವು ..?? !! ಪೆಟ್ಟು--ಜೋರಾಗಿತ್ತು

shivu.k said...

ಗುರುಮೂರ್ತಿ ಹೆಗಡೆ ಸರ್,

ನೆನಪುಗಳ ಮಾತು ಮಧುರ..ಎನ್ನುವ ಹಾಡನ್ನು ನಿಮ್ಮ ಈ ಬರಹವನ್ನು ಓದಿದ ಮೇಲೆ "ನೆನಪುಗಳ ಬರಹ ಮಧುರ" ಅಂತ ಬದಲಾಯಿಸಿಕೊಂಡಿದ್ದೇನೆ. ಹಳೆಯ ನೆನಪುಗಳು ಒಂಥರ ರೋಮಾಂಚನವಲ್ಲವೇ...