Wednesday, December 8, 2010

ನೆನಪಾಯ್ತೆ ಇಂದು ...

ಸ್ವೀಡನ್ನಿನಲ್ಲಿ ಕಳೆದ ಕೆಲವು ದಿನಗಳಿಂದ ವಿಪರೀತ ಹಿಮಮಳೆ ಆಗುತ್ತಿದೆ. ಎಲ್ಲಿ ನೋಡಿದರೂ ಹಿಮದ ರಾಶಿಯೇ ಬಿದ್ದಿದೆ. ಈ ಸಂದರ್ಭದಲ್ಲಿ ಹಿಮಗಳ ನಡುವೆ, ಸಂಗಾತಿಯೊಂದಿಗೆ ಮಲೆನಾಡಿನಲ್ಲಿ ಕಳೆದ ಕ್ಷಣಗಳ ನೆನಪು ಈ ಕವನದ ಹೂರಣ. ಇಲ್ಲಿನ ಹಿಮಗಳ ನಡುವೆ ಅಲ್ಲಿನ ಮಲೆನಾಡಿನ, ಸೌಂದರ್ಯದ, ತರು ಲತೆಗಳ ಮಧುಬನಗಳಲ್ಲಿ ಮನ ತೇಲಾಡಿದೆ. ಇರುಳಿನ ಸಂಜೆಯ ಹೊತ್ತಿನಲ್ಲಿ, ದೇವರಿಗೆ ಅಂಗನೆಯರು ದೀಪ ಬೆಳಗುವ ಹೊತ್ತಿನಲ್ಲಿ, ಚಂದ್ರಮನ ಆಗಮನದ ಹೊತ್ತಿನಲ್ಲಿ, ಮಧುರಗೀತೆಯ ನೆನಪು ಸುಳಿದಾಡಿದೆ. ಮೊನ್ನೆ ಡಿಸೆಂಬರ್ 6 ಕ್ಕೆ ಮದುವೆಯಾಗಿ 3 ವರ್ಷ ತುಂಬಿತು. ನನ್ನೊಂದಿಗೆ ಹೆಜ್ಜೆಯಲ್ಲಿ ಹೆಜ್ಜೆ ಹಾಕಿ, ನೋವು ನಲಿವುಗಳಿಗೆ ಜೊತೆಯಾಗಿ ಉಸಿರಾದ ಬಾಳ ಸಂಗಾತಿ ಗೀತಾ ಳಿಗೆ ಬರೆದ ಕವನವಿದು.



ಮೆತ್ತನೆಯ ಮಲ್ಲಿಗೆಯೇ, ,ಮುತ್ತೊಂದ ಕೊಡುವೆ
ಮಾತಾಡು ಮಾತಾಡು, ಮಕರಂದ ಹೀರುವೆ
ಅಧರದಲಿ ಮಧುರಗೀತೆ, ಬರಲಿ ಎಂದೆಂದೂ 
ಹಿಮಮಳೆಯ ಹಿಮಗಳಲಿ, ನೆನಪಾಯ್ತೆ ಇಂದು 

ಮಲೆನಾಡ ಸಂಪಿಗೆ, ಮಧುಬನದ ಅಂಚಿಗೆ
ಮುಚ್ಚು ಮರೆ ಇಲ್ಲದೆ, ಮೊಂಬೆಳಕಿನ ಹೊತ್ತಿಗೆ 
ಮದನಾರಿ, ಶುಭಕೋರಿ, ಮುದ್ದಾಡುವೆ ಇಂದು
     ಹಿಮಮಳೆಯ ಹಿಮಗಳಲಿ, ನೆನಪಾಯ್ತೆ ಇಂದು 

ಬಾನಿನಲಿ ಹಾರ್ಯಾವ್ , ಹಕ್ಕಿಗಳ ದಂಡು
ಅಂಗನೆಯರು ಬೆಳಗಿಹರು, ದೀಪಗಳ ಬಂದು
ಇರುಳಾಯ್ತು ಚಂದ್ರಮನು, ಬರುತಾನೆ ಇಂದು
ಹಿಮಮಳೆಯ ಹಿಮಗಳಲಿ, ನೆನಪಾಯ್ತೆ ಇಂದು 


73 comments:

PARAANJAPE K.N. said...

ಚಳಿ ಚಳಿ ತಾಳೆನು ಈ ಚಳಿಯಾ ಅ೦ತ ಹಾಡ್ತಿರೆನೋ ಅ೦ತ ಅ೦ದುಕೊ೦ಡ್ರೆ ನೀವು ಈ ಚಳಿಯಲ್ಲೂ ಬಹಳ ಕಾವ್ಯಮಯವಾಗಿ ನಿಮ್ಮ ಮನದಿಂಗಿತ ತೆರೆದಿಟ್ಟಿದ್ದೀರಿ.

Nagendra hegde said...

ಆ ಮಧುರ ಮಲೆನಾಡಿನ ಪ್ರಕೃತಿ ವೈಭವವ ವರ್ನಿಸಲಸದಳವು ಈ ನಿನ್ನ ಕಾವ್ಯದ ಹಾಗೆ ...

ಭಾಶೇ said...

Nice!!! :)

Too romantic. Hope u showed this first to your wife and then published it!!!

:)

ದಿನಕರ ಮೊಗೇರ said...

tumbaa chennaagide sir...

perfect gift...

Unknown said...

superb kavana sir

and ha belated happy anniversary sir

ಸುಧೇಶ್ ಶೆಟ್ಟಿ said...

how romantic!

thumba ishta aayithu...

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್
ಅದನ್ನ ಅಮ್ಬರಿಶಣ್ಣ ಹೇಳಿದಾರಲ್ಲ, ಅದ್ಕೆ ನಂದು ಸ್ವಲ್ಪ ಬೇರೆ ತರ :)
ಥ್ಯಾಂಕ್ಸ್ ನಿಮ್ಮ ಕಾಮೆಂಟಿಗೆ

ಸಾಗರದಾಚೆಯ ಇಂಚರ said...

ನಾಗೆಂದ್ರ
ನಿನ್ನ ಅಭಿಪ್ರಾಯಕ್ಕೆ ಮನಸೋತೆ
ಬರ್ತಾ ಇರು

ಸಾಗರದಾಚೆಯ ಇಂಚರ said...

Bhashe,

idu avarige surprise poem,

avrige kooda surprise kottu hakidde

nimma abhipraayakke thanks

ಸಾಗರದಾಚೆಯ ಇಂಚರ said...

Dinakar sir

thank you

bartaa iri

ಸಾಗರದಾಚೆಯ ಇಂಚರ said...

Vijayhavin,

thanks for the wishes

keep coming

ಸಾಗರದಾಚೆಯ ಇಂಚರ said...

Sudhesh sir

thanks for the comments

bartaa iri namma blog ge

SANTOSH MS said...

Dear Sir,

Firstly happy wedding anniversary. This gift to your wife should be more than anything else. Let your life boat sail in a peaceful way with happiness and joy.

ಸಾಗರದಾಚೆಯ ಇಂಚರ said...

Dear Santhosh,

thank you so much for your wishes and comments

jithendra hindumane said...

ಸರಳ-ಸುಂದರ ಅರ್ಥಪೂರ್ಣ ಕವನ . ನಿಮ್ಮ ಮನದನ್ನೆಯ ಮೆಚ್ಚುಗೆ ಗಳಿಸುವರಿ...!

jithendra hindumane said...

ಸರಳ-ಸುಂದರ ಅರ್ಥಪೂರ್ಣ ಕವನ . ನಿಮ್ಮ ಮನದನ್ನೆಯ ಮೆಚ್ಚುಗೆ ಗಳಿಸುವರಿ...!

ಸಾಗರದಾಚೆಯ ಇಂಚರ said...

Jitendra sir

nimma abhipraayakke thanks
\
bartaa iri

sunaath said...

ಗುರುಮೂರ್ತಿಯವರೆ,
ತುಂಬ romantic ಕವನ. ನಿಮ್ಮ ಬಾಳಸಂಗಾತಿ ಅದೃಷ್ಟವಂತರು.

ಸಾಗರದಾಚೆಯ ಇಂಚರ said...

ಸುನಾಥ್ ಸರ್
ನಿಮ್ಮ ಪ್ರೀತಿ, ಆಶಿರ್ವಾದ, ಸ್ನೇಹ ಸದಾ ಇರಲಿ ನಮ್ಮ ಮೇಲೆ
ಬರ್ತಾ ಇರಿ

AntharangadaMaathugalu said...

ನಿಮಗೂ ಶ್ರೀಮತಿ ಗೀತಾರಿಗೂ ಮದುವೆಯ ಮೂರನೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ಗುರು ಸಾರ್...

ಶ್ಯಾಮಲ

ಸಾಗರದಾಚೆಯ ಇಂಚರ said...

Shamala madam

nimma wish ge thanks

sadaa ashirvaada namma mele irali

ಸುಬ್ರಮಣ್ಯ said...

:-)

Soumya. Bhagwat said...

simply superb :) each lines are romantic :)

Ambika said...

Kavana chennagiddu..
Belated happy anniversary to you and Geeta!

ಸಾಗರದಾಚೆಯ ಇಂಚರ said...

Subramanya sir

smile nalle ellanu heltiraa

thanks

ಸಾಗರದಾಚೆಯ ಇಂಚರ said...

Dear Soumya,

abhipraayakke dhanyavaadagalu

bartaa iri

ಸಾಗರದಾಚೆಯ ಇಂಚರ said...

Kavita,

thanks for the wishes

hinge bartaa iru blog ge

balasubramanya said...

ಹಿಮಮಳೆಯ ಹಿಮಗಳಲಿ, ನೆನಪಾಯ್ತೆ ಇಂದು
ಬಾನಿನಲಿ ಹಾರ್ಯಾವ್ , ಹಕ್ಕಿಗಳ ದಂಡುಅಂಗನೆಯರು ಬೆಳಗಿಹರು, ದೀಪಗಳ ಬಂದುಇರುಳಾಯ್ತು ಚಂದ್ರಮನು, ಬರುತಾನೆ ಇಂದುಹಿಮಮಳೆಯ ಹಿಮಗಳಲಿ, ನೆನಪಾಯ್ತೆ ಇಂದು
ಇಷ್ಟವಾದ ಸಾಲುಗಳು ಸರ್ ಕವಿತೆ ಚೆನ್ನಾಗಿದೆ. .

ವನಿತಾ / Vanitha said...

ahaa...:) masth iddu modern K.S. Na. Avare..:)
Belated wishes on your anniversary..Have a good year ahead,
- Vanitha.

Dr.D.T.Krishna Murthy. said...

ಮಧುರ ಕ್ಷಣಗಳನ್ನು ನೆನಪಿಸಿಕೊಳ್ಳಲು ಸುಂದರ ಕವನ.ಸಂಗಾತಿಗೆ ಅದ್ಭುತ ಉಡುಗೊರೆ.ಹಾರ್ದಿಕ ಅಭಿನಂದನೆಗಳು.

ವಾಣಿಶ್ರೀ ಭಟ್ said...

ಮದುವೆಯ ಮೂರನೇ ವಾರ್ಷಿಕೋತ್ಸವದ ಶುಭಾಶಯ..
ಒಳ್ಳೆಯ ಉಡುಗೊರೆ...ಬಾಳಸಂಗಾತಿಗೆ ಕವನದ ಅರ್ಪಣೆಯೇ?!!!

ಚುಕ್ಕಿಚಿತ್ತಾರ said...

good gift...:)

Ash said...

Thumba sundaravaada romanchaka kavana..... Kudos!!!!

Ash...
(http://asha-oceanichope.blogspot.com/)

Gubbachchi Sathish said...

ತುಂಬಾ ರೊಮ್ಯಾಂಟಿಕ್ ಆಗಿ ಬರೆದಿದ್ದೀರಿ.
ವಿವಾಹ ವಾರ್ಷಿಕೋತ್ಸವದ ಶುಭಾಷಯಗಳು.

Shashi jois said...

Happy anniversary Guru..

ಮಲೆನಾಡಿನ ಪ್ರಕೃತಿಯನ್ನು ಗೀತಾಳಿಗೆ ಹೋಲಿಸಿ ಬರೆದದ್ದು ಚೆನ್ನಾಗಿದೆ..

ಸಾಗರದಾಚೆಯ ಇಂಚರ said...

nimmolagobba baalu sir


ನಿಮ್ಮ ಮಾತುಗಳು ಬರೆಯಲು ಉತ್ತೇಜಿಸಿವೆ

ಪ್ರೀತಿ ಇರಲಿ

ಸಾಗರದಾಚೆಯ ಇಂಚರ said...

ವನಿತಾ / Vanitha

dhanyavaada :)

tamma aagamana sadaa irali

ಸಾಗರದಾಚೆಯ ಇಂಚರ said...

Dr.D.T.krishna Murthy sir

ಇಂಥಹ ಉಡುಗೊರೆ ಎಂದಿಗೂ ನೆನಪಿನಲ್ಲಿ ಇರುತ್ತದೆ ಅಲ್ಲವೇ?

ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ವಾಣಿಶ್ರೀ ಭಟ್

ಥ್ಯಾಂಕ್ಸ್

ಅಭಿಪ್ರಾಯಕ್ಕೆ ಧನ್ಯವಾದಗಳು

ಬರ್ತಾ ಇರು

ಸಾಗರದಾಚೆಯ ಇಂಚರ said...

ಚುಕ್ಕಿಚಿತ್ತಾರ

yes,

keep visiting

ಸಾಗರದಾಚೆಯ ಇಂಚರ said...

AshKuku

thanks for the comments

bartaa iri

ಸಾಗರದಾಚೆಯ ಇಂಚರ said...

ತೇಜಸ್ವಿನಿ ಹೆಗಡೆ

thank you

bartaa iri

ಸಾಗರದಾಚೆಯ ಇಂಚರ said...

ಗುಬ್ಬಚ್ಚಿ ಸತೀಶ್ sir

ನಿಮ್ಮ ಹಾರೈಕೆಗೆ ವಂದನೆಗಳು

ಸದಾ ವಿಶ್ವಾಸ, ಪ್ರೀತಿ ಇರಲಿ

ಸಾಗರದಾಚೆಯ ಇಂಚರ said...

Shashi Akka

thank you

bartaa iri

ಸಾಗರದಾಚೆಯ ಇಂಚರ said...

Vasant,

thanks for the comments

Shwetha Kiran said...

ಮೂರನೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು...
ಕವನ ಚೆನ್ನಾಗಿದೆ..
ನಾನು ನಿಮ್ಮ ಹಾಗೆ ಸಂಶೋಧಕಿ ಅಲ್ಲ, ರೋಗಿಗಳಿಗೆ ಚಿಕಿತ್ಸೆ ಮಾಡುವ ವೈದ್ಯೆ ಅಷ್ಟೇ..
(I hope my kannada is alright)

ಸಾಗರದಾಚೆಯ ಇಂಚರ said...

Shwetha,

thanks for the wishes,

neevu namaginta punya kelsa madta idiraa

devaru olledu madali :)

Ittigecement said...

ಗುರು....

ಮಂಜಿನ ಹನಿಗಳ.. ಚಳಿಯಲ್ಲಿ
ಪ್ರೇಮ ಭರಿತ ಕವನ... !!
ವಾತಾವರಣವೇ ಹಾಗಿರಬೇಕು ಅಲ್ವಾ?

ಅಭಿನಂದನೆಗಳು ಚಂದದ ಕವನಕ್ಕೆ...

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ

ನಿಮ್ಮ ಮಾತು ನಿಜ

ಮಂಜು ಎಲ್ಲೆಡೆ ಕವಿದಿದೆ

ಬಿಳಿಯ ಮೋಡದಂತೆ ಹಿಮ ಮಳೆ ಆವರಿಸಿದೆ

ಪ್ರೇಮ ಕವನಕ್ಕೆ ಇನ್ನೇನು ಬೇಕು ಸ್ಪೂರ್ತಿ

ಅಭಿಪ್ರಾಯಕ್ಕೆ ಧನ್ಯವಾದಗಳು

Creativity said...

ಬಹಳ ಸುಂದರವಾದ ಕವನ.

ಸಾಗರದಾಚೆಯ ಇಂಚರ said...

Creativity,

tumbaa thanks bandiddakke

vishwaasa heegeye irali

SATISH N GOWDA said...

ತುಂಬಾ romentic ಆಗಿದೆ ನಿಮ್ಮ ಮನಸ್ಸು , ಮದುವೆಯ ಮೂರನೇ ವಾರ್ಷಿಕೋತ್ಸವದ ಶುಭಾಶಯ.. ಏನ್ ಸರ್ ಬರೀ ಕವನ ಅಷ್ಟೇನಾ ? ಪಾರ್ಟಿ-ಗೀರ್ಟಿ ಕೊಡಿಸೋದಿಲ್ಲವೋ ...?


ಸುಮ್ಮನೆ ಕೀಟಲೆಗೆ ....
SATISH N GOWDA

ಸಾಗರದಾಚೆಯ ಇಂಚರ said...

Dear Satish Sir

kodisona sir

nimma preeti heege irali

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಸುಂದರ ಪ್ರೇಮಕವನ..
ಚೆನ್ನಾಗಿದೆ.ಅಭಿನಂದನೆಗಳು ಸಾರ್.

Pradeep Rao said...

Really very romantic.. Congratulations! & wishing many many happy returns of your wedding anniversary!

ಚಿತ್ರಾ said...

ಪ್ರಿಯತಮೆಗೆ ಕೊಟ್ಟ ಸುಂದರ ಉಡುಗೊರೆಯಿದು . ಹೊರಗೆ ಹಿಮಮಳೆ ಸುರಿಯುವಾಗ ಇದನ್ನೋದುತ್ತ ಬೆಚ್ಚಗಾಗುವ , ಕೆನ್ನೆ ಕೆಂಪಾಗಿಸಿಕೊಳ್ಳುವ ಪತ್ನಿಯನ್ನು ನೋಡುತ್ತಾ ಮೈ ಮರೆಯಬಹುದು ನೀನು ! ಮತ್ತೊಮ್ಮೆ ಶುಭಾಶಯಗಳು !!

ಸಾಗರದಾಚೆಯ ಇಂಚರ said...

Venkatakrishna.K.K. sir


ಧನ್ಯವಾದಗಳು ಸರ್

ಹೀಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

Pradeep Rao Sir

thanks for your wishes

keep visiting my blog

ಸಾಗರದಾಚೆಯ ಇಂಚರ said...

ಚಿತ್ರ

ಹಿಮಮಲೆಯ ಹಿಮಗಳಲ್ಲಿ ಪ್ರೇಮದ ಕವನ

ಹೆಂಡತಿಗೆ ಇದೊಂದು ಆಶ್ಚರ್ಯಕರ ಉಡುಗೊರೆ

ಅಭಿಪ್ರಾಯಕ್ಕೆ ಧನ್ಯವಾದಗಳು

ಬರುತ್ತಿರು

ಹಳ್ಳಿ ಹುಡುಗ ತರುಣ್ said...

chiliyalli prakrutiya madura varnane chenagide sir.. nice one.. :)

ಸಾಗರದಾಚೆಯ ಇಂಚರ said...

Halli Huduga Tarun Sir

thanks for your kind wishes

keep visiting

ಸಾಗರದಾಚೆಯ ಇಂಚರ said...

Halli Huduga Tarun Sir

thanks for your kind wishes

keep visiting

V.R.BHAT said...

ಕವಿಗಳೇ, ಚೆನ್ನಾಗಿದೆ, ಚಳಿಯಲ್ಲಿ ಬಿಸಿಬಿಸಿ ತೆಳ್ಳವು ತಿಂದ ನೆನಪೂ ಬಂತು. -೧೦ ಡಿಗ್ರಿಯಲ್ಲಿ ಕುಳಿತು ಬರೆದಿರಲ್ಲ, ನಿಮ್ಮ ಸಾಹಸಕ್ಕೆ ಶರಣು!

ಸಾಗರದಾಚೆಯ ಇಂಚರ said...

V R Bhat sir,

tellavu nenapu madadi

oorina nenapu bandogtu :)

Subrahmanya said...

good one sir.

ಕ್ಷಣ... ಚಿಂತನೆ... said...

ಸರ್‍, ಅಭಿನಂದನೆಗಳು.

ಕವನ ಸುಂದರವಾಗಿದೆ. ಜೊತೆಗೆ ಅಲ್ಲಿನ ಸೊಬಗೂ ಸಹ.

ಸ್ನೇಹದಿಂದ,

ಸಾಗರದಾಚೆಯ ಇಂಚರ said...

Subramanya sir

thanks for the comment

keep coming

ಸಾಗರದಾಚೆಯ ಇಂಚರ said...

Chandru sir

preeti vishwaasa heegeye irali

baruttiri

bareyuttiruve

ಅಪ್ಪ-ಅಮ್ಮ(Appa-Amma) said...

ಗುರು,

ವಾರ್ಷಿಕೋತ್ಸವದ ಶುಭಾಶಯಗಳು !
ಹಾಗೆಯೇ ಕವನ ರಸಮಯವಾಗಿದೆ :)

ಸಾಗರದಾಚೆಯ ಇಂಚರ said...

ಅಪ್ಪ-ಅಮ್ಮ(Appa-Amma)

tumbaa thanks wish madiddakke

bartaa iri

ಸೀತಾರಾಮ. ಕೆ. / SITARAM.K said...

tumbaaa sundaravaada padya. tammibbara jodige shubhavaagali.
daampatya sadaa nalanalisali.


ella dampatigaligu aaptavenisuva padya mattu bhaashe.

ಡಾ. ಚಂದ್ರಿಕಾ ಹೆಗಡೆ said...

jeevanada jote hejje haakuvavalige ondu illeya salahe idda haage ide...
romantic aadruu onthara message ide tnks kanoo....

Harish Rao said...

namaskAra, nice one, this is my first visit to your blog, and really am impressed with your imagination, creativity and expression.

dhanyavAdagaLu