Wednesday, December 22, 2010

ಹೃದಯದ ಪಿಸುಮಾತು ...

ಬದುಕಿನಲ್ಲಿ ಎಲ್ಲ ಕಡೆಯೂ ಸಂತಸ ಒದ್ದು ಕೊಂಡು ಬಿದ್ದಿರುವುದಿಲ್ಲ. ಅದೊಂದು ಹೂವಿನ ಮುಳ್ಳಿನ ಹಾಸಿಗೆ. ಮುಳ್ಳನ್ನು ಮೆಟ್ಟಿ ನೋವು ಸಿಕ್ಕಂತೆ  ಹೂವನ್ನು ಮುಟ್ಟಿ ನಲಿವು. ಎಂಥಹ ಸಮಯ ಬಂದರೂ ನಾವು ನಮ್ಮ ಹೆತ್ತವರ ಪ್ರೀತಿಯ ಮರೆಯಬಾರದು. ಕಷ್ಟಕಾಲದಲ್ಲಿ ಜೊತೆಗೆ ಬರುವ ಆತ್ಮೀಯ ಸ್ನೇಹಿತನ ಮಾತುಗಳು ಎಂದಿಗೂ ಪೂರಕ ಮತ್ತು ಪ್ರೇರಕ. ಕೆಟ್ಟ ನೆನಪುಗಳು ಬಾಳಿನ ಅರ್ಧ  ಸುಖವನ್ನೇ ತಿಂದು ಹಾಕುತ್ತವೆ. ನಾಳಿನ ಸುಂದರ ಬದುಕಿಗೆ ಕಾಯಬೇಕೆ ಹೊರತು ನಿನ್ನೆಯ ಕಹಿ ನೆನಪುಗಳಿಗೆ ಮರುಗುವುದಲ್ಲ. ಸಂಸಾರದಲ್ಲಿ ಸಮರಸ, ಬದುಕಿನಲ್ಲಿ ಸಂತಸ ಎರಡೂ ಮುಖ್ಯ. ಕೆಲವೊಮ್ಮೆ ನಮಗೆ ಇನ್ನೊಬ್ಬರ ಸಾಧನೆ ಸಹಿಸಲು ಅಸಾದ್ಯವಾಗುತ್ತದೆ. ಅವರ ಬಗೆಗೆ ಇಲ್ಲ ಸಲ್ಲದ ಆರೋಪ ಮಾಡಿ ಆದಷ್ಟು ಅವರನ್ನು ತುಳಿಯಲು ಪ್ರಯತ್ನ ಪಡುತ್ತೇವೆ. ನಮಗೆ ಇನ್ನೊಬ್ಬರು ಇಷ್ಟವಾಗದಿದ್ದರೆ ಅವರಿಂದ ದೂರವಿರಬೇಕೆ ಹೊರತು ಅವರನ್ನು, ಅವರ ಹೆಸರನ್ನು ಹಾಳು ಮಾಡುವುದಲ್ಲ. ಇನ್ನೊಬ್ಬರ ಮೇಲಿನ ಧ್ವೇಷ ನಮ್ಮನ್ನೇ ಕೊಲ್ಲುತ್ತದೆಯಷ್ಟೇ. ಈ ಮಣ್ಣಿನ ಋಣ ಎಲ್ಲಕ್ಕಿಂತ, ಎಲ್ಲರಿಗಿಂತ ದೊಡ್ಡದು. ಅದರ ಋಣ ತೀರಿಸುವ ಜವಾಬ್ದಾರಿ ಪ್ರತೀ ಒಬ್ಬರ ಕರ್ತವ್ಯ. ಜನನಿ ಮತ್ತು ಜನ್ಮಭೂಮಿಯ  ಮೇಲಿನ ಪ್ರೀತಿ ಇಮ್ಮಡಿಯಾಗುತ್ತ  ಬದುಕು ಹಸನ್ಮುಖಿ ಯಾಗಬೇಕು ಎಂಬುದೇ ಕವನ ಆಶಯ.   


ಮರೆಯುವ ಕ್ಷಣಗಳ ಬರೆದು ಇಡು
ಮನಸಿನ ಪುಟಗಳ ತೆರೆದು ಬಿಡು 

ಕಾಡುವ ನೆನಪ ಕೆದಕದಿರು
ಸಿಹಿನೆನಪಿನ ಜೊತೆಗೆ ಬಾಳುತಿರು

ಇನಿಯನ ಮಾತಿಗೆ ಮುನಿಯದಿರು
ಸಂಗಾತಿಯ ಕಣ್ಣಲಿ ಬದುಕನಿಡು

ಸ್ನೇಹಿತನ ಹಿತನುಡಿ ಸತತ ಇಡು
ಕುಹಕವ ಬಗೆವರ ದೂರವಿಡು

ಹೆತ್ತವರ ಪ್ರೀತಿಯ ಅಳಿಸದಿರು
ಹೊತ್ತಿರುವ ಜನನಿಯ ಮರೆಯದಿರು

ಚುಚ್ಚುತ ಮನಸನು ಕೊಲ್ಲದಿರು
ಇಷ್ಟವಾಗದಿರೆ ದೂರವಿರು

ನೊಂದವರ ನೋವಿಗೆ ಅಭಯವಿಡು
ಕಂಡರಿಯದ ಮಾತಿಗೆ ಮರುಗದಿರು

ಜನ್ಮಭೂಮಿಯನು ಬೆಳಗುತಿರು
ಋಣ ತೀರಿಸದೆ ತೊಲಗದಿರು

ಪಿಸುಮಾತಿದು ಹೃದಯದ ನೆನಪಲಿಡು
ಬದುಕಿನ ಪುಟಗಳ ಮುಚ್ಚದಿರು


28 comments:

savitha B C said...

ಕವನ ತುಂಬಾ ಚೆನ್ನಾಗಿದೆ......ಹೀಗೆ ಮುಂದುವರೆಯಲಿ ನಿಮ್ಮ ಬರವಣಿಗೆ....

savitha B C said...

ಕವನ ತುಂಬಾ ಚೆನ್ನಾಗಿದೆ......ಹೀಗೆ ಮುಂದುವರೆಯಲಿ ನಿಮ್ಮ ಬರವಣಿಗೆ....

ಕಾವ್ಯ ಸುಗಂಧ said...

kaduva nenapa kedukadiru
sihinenapina jothege baaluthiru....
thumba chennagide sir..

sunaath said...

ಸರಳವಾದ ಸಾಲುಗಳಲ್ಲಿ ಮಹಾನ್ ತತ್ವಗಳನ್ನು ತಿಳಿಸಿದ್ದೀರಿ. ಧನ್ಯವಾದಗಳು.

AntharangadaMaathugalu said...

ಗುರು ಸಾರ್..
ಕವನಕ್ಕೆ ಮೊದಲು ಬರೆದ ನಿಮ್ಮ ಮಾತುಗಳು... ಒಂಥರಾ ಕವನದ ಭಾವವನ್ನು ಮುನ್ನುಡಿಯಂತೆ ಹೇಳಿರುವಂತಿದೆ... ಚೆನ್ನಾಗಿದೆ...

ಶ್ಯಾಮಲ

shivu.k said...

ಸುಲಭವಾಗಿ ಅರ್ಥವಾಗುವಂತೆ ಕವನವಿದೆ. ಅದರೊಳಗೆ ಉತ್ತಮ ಅರ್ಥಗರ್ಭಿತ ವಿಚಾರಗಳನ್ನು ತಿಳಿಸಿದ್ದೀರಿ.

ಜಲನಯನ said...

ಹಹಹ..ಓಹೋಹೋ....ಏನಿದು ಗುರುಜಿ...
ಗುರು ದೋಹೆ ಅನ್ನೋಣವೇ..??
ಚನ್ನಾಗಿದೆ ದ್ವಿಪದಿ ..ಆದ್ರೆ
ಜನ್ಮಭೂಮಿಯನು ಬೆಳಗುತಿರು
ಋಣ ತೀರಿಸದೆ ತೊಲಗದಿರು
ತೊಲಗು ಇಲ್ಲಿಂದ...ಅಂತ ಯಮರಾಜನೋ ಇಲ್ಲ ಕಸಬಾನೋ ಡಮಾರ್ ಅನ್ನಿಸಿದ್ರೆ ಹ್ಯಾಗೆ..??!!!

ಕವಿತಾ said...

Chennagide Sir :) Ishtavaayitu..

Bhavana ಭಾವನ Rao said...

sweet poem. I like your way of writing prose and then its evolution into poem :)

Anonymous said...

Sooparraagiddu Guru..

keep writing..:)

Pradeep Rao said...

very nice lines.. I liked these very much -
ಪಿಸುಮಾತಿದು ಹೃದಯದ ನೆನಪಲಿಡು
ಬದುಕಿನ ಪುಟಗಳ ಮುಚ್ಚದಿರು

ಅರಕಲಗೂಡುಜಯಕುಮಾರ್ said...

ಮನಸಿನ ಪುಟಗಳ ತೆರೆದು.. ಸಿಹಿ ನೆನಪುಗಳ ಲಹರಿಯಲಿ... ಬದುಕಿನ ಪುಟಗಳ ಮುಚ್ಚದಿರು. ಬಹುಶ: ಇಷ್ಟೊಂದು ಸರಳ ಪದಗಳಲ್ಲಿ ನನ್ನ ಅಂತರಂಗಕ್ಕೆ ತಾಕಿದ ಕವನ ಇದು, ಗುರು ಸರ್ ನಿಮ್ಮ ಭಾವದ ಕಣಜದಿಂದ ಇನ್ನು ಹೆಚ್ಚಿನ ಕವನಗಳು ಮೂಡಿಬರಲಿ.

ನಿಖಿಲ್ said...

ನಮಸ್ಕಾರ ಗುರು, ಬರಹ ಓದಿ ಸಂತೋಷವಾಯಿತು. ಉತ್ತಮ ಬರಹ. ಹೀಗೆ ತಮ್ಮ ಬರವಣಿಗೆ ಮುಂದುವರಿಯಲಿ.

ಪ್ರಗತಿ ಹೆಗಡೆ said...

nice one...

ವಸಂತ್ said...

ಕವನ ತುಂಬಾ ಚೆನ್ನಾಗಿದೆ ಸರ್ ಭಾವನೆಗಳನ್ನು ಅದ್ಭುತವಾಗಿ ಬಿಡಿಸಿದ್ದೀರ ಧನ್ಯವಾದಗಳು ನಿಮಗೆ .....

Dr.D.T.krishna Murthy. said...

ಸುಂದರ ಕವಿತೆ ಗುರು ಸರ್.ನಿಮ್ಮಿಂದ ಇನ್ನಷ್ಟು ಒಳ್ಳೆಯ ಕವಿತೆಗಳು ಬರಲಿ.ನಮಸ್ಕಾರ.ಬ್ಲಾಗಿಗೆ ಭೇಟಿ ಕೊಡಿ.

PARAANJAPE K.N. said...

ಸರಳ ಶಬ್ದಗಳಲ್ಲಿ ಮಹತ್ತರವಾದ ಅರ್ಥವ೦ತಿಕೆ ಅಡಗಿದೆ, ಚೆನ್ನಾಗಿದೆ ಗುರು

ಧರಿತ್ರಿ said...

ಚೆಂದದ ಭಾಷೆ, ಸೊಗಸಾದ ಬರಹ
-ಚಿತ್ರಾ

ಚಿತ್ರಾ said...

ಗುರು ,

ಅರ್ಥ ಪೂರ್ಣ ಕವನ .

" ಏನೇ ಆಗಲಿ ಬರೆಯುತಿರು
ಬ್ಲಾಗನು ಎಂದೂ ಮರೆಯದಿರು ! "

ತೇಜಸ್ವಿನಿ ಹೆಗಡೆ said...

good one... :) keep writing.

shwetha said...

ಜೀವನದ ತಿರುಳನ್ನು ಸರಳವಾದ ಪದಗಳಲ್ಲಿ ಬಿಡಿಸಿ ಹೇಳಿದ್ದೀರ.. ಚೆನ್ನಾಗಿದೆ...

ಅಪ್ಪ-ಅಮ್ಮ(Appa-Amma) said...

ಚೆನ್ನಾಗಿದೆ ಕವನ ಗುರು ಅವರೇ..

Anonymous said...

[url=crush-the-castle.com]Crush The Castle[/url]

ಕಲರವ said...

ಸಾಗರದಾಚೆಯ ಇಂಚರ ಭಾವಪೂರ್ಣವಾಗಿದೆ.ಬದುಕಿನ ಮೌಲ್ಯಗಳನ್ನು ಬಹಳ ಸುಂದರವಾಗಿ ಹೆಣೆದಿದ್ದೀರಿ.ಧನ್ಯವಾದಗಳು.ನಮ್ಮ ಬ್ಲಾಗ್ ಗೂ ಒಮ್ಮೆ ಭೇಟಿ ಕೊಡಿ..ನಮಸ್ಕಾರ .

ಸಾಗರದಾಚೆಯ ಇಂಚರ said...

Thanks to each and every one

SANTOSH MS said...

Dear Guru Sir,

Really marvelous. Beautiful lines and touching.

ಹಿಮಕಣ said...

kaaduva nenepugala mooteyanu dooradalli bisaadalu... ondhu rayatna.... hettavara preetige.. sari saati innelli... thumbaa artha poornavaada ssaalugalu sir,

namitha said...

very nice i liked it very much.....good thought ...if u not able to good for someone...at least dont do bad alva.....:)