Tuesday, November 23, 2010

ಬರೆಯಲೆಂದು ಹೊರಟೆ ಬ್ಲಾಗ ವಿಷಯಕೆಲ್ಲ ಬೀಗ...ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ರಾಜಕೀಯವೆಂಬ ವಿಷಯ, ಸದಾ ಜನರ ಬಾಯಲಿಹುದು
ಯಡ್ಡಿ ಅಣ್ಣ, ಕುಮಾರಣ್ಣನ ಬಗ್ಗೆ ಬರೆದೆನು
ಸಾಲು ಸಾಲು ಬರೆದೆ, ಪೇಜು ಪೇಜು ಕೊರೆದೆ
ಪಕ್ಕದಲ್ಲೇ ಇದ್ದ ಒಬ್ಬ, ಕೇಳಿಬಿಟ್ಟ ನನ್ನನು 
ಕೆಲಸವಿಲ್ಲವೇನು ನಿನಗೆ, ಬೇಕೇ ಇಂಥ ವಿಷಯ
ಪಾಳುಬಿದ್ದ ಗುಡಿಯೇ ಲೇಸು, ಹೊಲಸು ರಾಜಕೀಯ


ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಚಲನಚಿತ್ರವೆಂಬ ಮಾಯೆ, ಸದಾ ಗಾಸಿಪ್ , No ಚುಪ್ ಚುಪ್
ಬರೆಯ ಹೊರಟೆ, ತುಂಡು ಲಂಗ, ಬಿಪಾಶಾಳ ಬಗೆಗೆ
ನಡುವೆ ತಡೆದ ಮಿತ್ರನೊಬ್ಬ, ಬಿಪಾಶಾಳ ''ಪಾಶ'' ಬೇಡ,
ಬರೆಯಬೇಡ ಇಂಥ ವಿಷಯ, ಎಂದು ಹೋದ ಮಹಾಶಯ

ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಪ್ರೀತಿಯೆಂಬ ಮೋಹದಲ್ಲಿ, ಸಿಲುಕಿ ಇರದೇ ಉಳಿದೋರ್ಯಾರು
ಇಂಥ ವಿಷಯಕಿಂತ ಬೇರೆ ವಿಷಯ ಎಲ್ಲಿದೆ
ಗೀಚಿ ಬಿಟ್ಟೆ ಪ್ರೇಮ ಕವನ ಗೆಳತಿ ನಿನ್ನ ಮೋಹ ಕುರಿತು
ಓದಿ ಬಿಟ್ಟ ಗೆಳೆಯ ನುಡಿದ, ನಿನ್ನ ತಲೆಯು ಎಲ್ಲಿದೆ?
ಪ್ರೇಮ-ಗೀಮ ಬರೆಯುತಿರುವೆ, ಕೆಲಸವಿಲ್ಲವೇನು ನಿನಗೆ
ಇದ್ದ ಸಮಯವನ್ನು ಯಾಕೆ ಹಾಳು ಮಾಡುವೆ?

ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಬದುಕ ಸೊಗಸ ಬಿಟ್ಟು ಹೊರಟ, ತ್ಯಾಗಜೀವಿ ಬುದ್ದ ದೇವ 
ಅವನ ಬಗ್ಗೆ ಯಾರಿಗಿಲ್ಲ ಪ್ರೇಮ-ಅಕ್ಕರೆ
ಬೆಳಗುತಿರುವ ಜಗದಿ ಬೆಳಕ, ಬರೆದೆ ಬಿಟ್ಟೆ ಎಂಥ ಪುಳಕ
ಕೊಂಕು ನುಡಿಯ ನುಡಿದು ಬಿಟ್ಟ ಮಿತ್ರ ಮೆಲ್ಲಗೆ
''ಮಡದಿ ಜೊತೆಗೆ ಜಗಳವೇನು? ಕೋಪವೇನು? ತಾಪವೇನು?
ಸರಸ-ವಿರಸ ಬಾಳಿನೆರಡು ಚಕ್ರ ಅಲ್ಲವೇ?
ಸುಮ್ಮನೇಕೆ ಬರೆವೆ ನೀನು? ಬದುಕು ನಿನಗೆ ಭಾರವೇನು?
ಬರೆದರೊಮ್ಮೆ ಇಂಥ ವಿಷಯ, 
ಹೊಡೆದು ಬಿಡುವೆನೆಂದನು''

ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಥತ್ ಎಂದು ತಲೆಯ ಕೆರೆದು, ಬರೆದೆ ನನ್ನ ಸಂಶೋಧನೆಯ ಬಗೆಗೆ
ಹಾಕಲೆಂದು ಹೋದೆ ನಾನು, ಇಂದು ಬ್ಲಾಗಿಗೆ
ಅದನು ಓದಿ ನುಡಿದ ಗೆಳತಿ
''ಅಂದು ತೀರಿ ಹೋದ ಗಾಂಧಿ, ಇಂದು ಹುಟ್ಟಿ ಬಂದನು
ಸದಾ ನಿನ್ನ ಸಂಶೋಧನೆ , ಬಿಟ್ಟು ಹೊರಗೆ ಬಂದು ನೋಡು,
ಜಗದ ತುಂಬಾ ಹಸಿರು ತುಂಬಿ,
ಮನವ ಸೆಳೆಯುತಿರುವುದು''

ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಹುಡುಕುತಿರುವೆ ವಿಷಯ ನಾನು
ಹೊಳೆಯಲಿಲ್ಲ ಏನೂ
ಬರೆದರೊಂದು ಕೊಂಕು ಜನರ ಬಾಯಲಿರುವುದು 
ಬಿಟ್ಟು ಅವರ ಬದುಕಲಾರೆ, ಅವರ ಬಿಟ್ಟು ಬಾಳಲಾರೆ 
ಧೈರ್ಯ ಮಾಡಿ ಕವನ ಒಂದು ಹಾಕುತಿರುವೆನು

    
ಸ್ನೇಹಿತರೆ, ಬಹಳ ದಿನಗಳಿಂದ ಕೆಮ್ಮು, ಜ್ವರ, ಜೊತೆಗೆ ಬಿಡುವಿಲ್ಲದ ಕೆಲಸದ ಒತ್ತಡದಿಂದಾಗಿ ಬ್ಲಾಗ್ ಕಡೆಗೆ ಬರಲಾಗಲಿಲ್ಲ. ಹಾಗೆಯೇ ನಿಮ್ಮೆಲ್ಲರ ಬ್ಲಾಗ್ ಓದಲು ಆಗಲಿಲ್ಲ, ಅದಕ್ಕೆ ಕ್ಷಮೆ ಇರಲಿ
ಮತ್ತೆ ಎಂದಿನಂತೆ ಬ್ಲಾಗ್ ಓದುವ ಓದುಗನಾಗುತ್ತೇನೆ.
ಪ್ರೀತಿ ಇರಲಿ
ನಿಮ್ಮವ
ಗುರು 

73 comments:

Bhavana ಭಾವನ Rao said...

Ohh!! such a sweet poem..
But "other" people always have something negative say, but it might be their opinion or can also have some bad intension behind. True its important that we have to get other's opinion, but I feel we should write only to make ourselves feel happy. If you are happy with what you have written and about your opinions, then you >should< not bother what others think about it. Again this is just my opinion :)

life is beautiful, enjoy madi..:)

ಸುಮ said...

:) :) :) nice

ಸಾಗರದಾಚೆಯ ಇಂಚರ said...

Bhavana,
sumne enu baribeku anta tilililla, so kavana hakide,
bareyodu namma khushige, yaru odtare anta naavu bareyolla alva
neevu annodu nija
Just maja maadi :)
thanks for the comments

ಸಾಗರದಾಚೆಯ ಇಂಚರ said...

Suma
thank you

ಸುಬ್ರಮಣ್ಯ ಮಾಚಿಕೊಪ್ಪ said...

:-)

ಬಾಲು ಸಾಯಿಮನೆ said...

ನಿಜ್ವಾಗೂ ಚನ್ನಾಗಿದೆ. ಇಷ್ಟ ಆಯ್ತು.

ದೀಪಸ್ಮಿತಾ said...

ಚೆನ್ನಾಗಿದೆ ಸರ್

sunaath said...

ಗುರುಮೂರ್ತಿಯವರೆ,
ನಿಮ್ಮ ಆರೋಗ್ಯ ಸುಧಾರಿಸಿದೆ ಎಂದು ಹಾರೈಸುತ್ತೇನೆ. ನಿಮ್ಮ ಈ ಕವನದಲ್ಲಿಯೇ ಎಲ್ಲ ವಿಷಯಗಳೂ ಅಡಕವಾಗಿವೆ! ಕವನ ಸುಂದರವಾಗಿದೆ.

ಸತೀಶ್ ಗೌಡ said...

ಇಂಚರ ಸರ್ ತುಂಬಾ ಚನ್ನಾಗಿದೆ ನಿಮ್ಮ ಈ ಕವನ . ನನಗೂ ಕೆಲವೊಮ್ಮೆ ಬರೆಯಲು ವಿಷಯಗಳು ಸಿಕ್ಕದೆ ಇದ್ದಾಗ ಬೇಸರವಾಗುತ್ತದೆ . ಆದರೆ ನಿಮ್ಮ ಈ ಕವಿತೆಯನ್ನು ಓದಿದಾಗ ಎಲ್ಲವನ್ನು ಬರೆಯಬಹುದೆಂಬ ಆಸಕ್ತಿ ಮನದಲ್ಲಿ ಮೂಡುತ್ತದೆ, ನಿಜಕ್ಕೋ ತುಂಬಾ ಚನ್ನಾಗಿದೆ

PARAANJAPE K.N. said...

ಮನಸ್ಸು ಖಾಲಿಯಾಗಿದ್ದಾಗ ಕೂತು ಬರೆದುದು ಚೆನ್ನಾಗಿಯೇ ಇದೆ.

AshKuku said...

Well written poem... It was like reading your thoughts at the moment, u put it down, in writing.... Cheers!!!!

Ash...
(http://asha-oceanichope.blogspot.com/)

ವಾಣಿಶ್ರೀ ಭಟ್ said...

:) :)

Pradeep Rao said...

ಚಂದದ ಕವನ ಗುರುಮೂರ್ತಿಯವರೇ, ವಿದೇಶದಲ್ಲಿದ್ದುಕೊಂಡೂ, ಕೆಲಸದ ಒತ್ತಡ ಹಾಗು ಅನಾರೋಗ್ಯದ ನಡುವೆಯೂ ನಿಮ್ಮ blog ಬರೆಯುವ, ಓದುವ ಹಂಬಲ ಕೇಳಿ ಬಹಳ ಸಂತೋಷವಾಯಿತು.. ಆದಷ್ಟು ಬೇಗ ನಿಮ್ಮ ಹಂಬಲ ಈಡೇರುವಷ್ಟು ಸಮಯ ಒದಗಿ ಬರಲಿ ಮತ್ತು ಕವನ, ಲೇಖನ ಬರೆಯಲು ವಿಷಯಗಳು ಸಹ ಸಾಕಷ್ಟು ದೊರಕಲಿ ಎಂದು ಆಶಿಸುವೆ.. :)

ಚಿತ್ರಾ said...

ಗುರುವೇ,
ಮನಸ್ಸು ಖಾಲಿ ಇದ್ರೂ ಕವನ ಅಂತು ಖಾಲಿ ಇಲ್ಲೆ .
ಚಂದ ಇದ್ದು. ಕವನ . ಓದಕಾದ್ರೆ ಮಜಾ ಅನಿಸ್ತು !

ಆ ನಿನ್ನ ಸ್ನೇಹಿತನ ಮಾತಿಗೆ ಕಿವಿಗೊಡದೆ, ತಲೆಗೆ ಬಂದ ವಿಷಯ ಎಲ್ಲಾ ಬ್ಲಾಗಲ್ಲಿ ಸುರಿದಿದ್ರೆ , ಇಷ್ಟೊತ್ತಿಗೆ ತುಂಬಿ ಹೋಗ್ತಿತ್ತು ! ಹಿ ಹಿ ಹಿ . ಇನ್ನು ಮುಂದೆ ಅವನ ಮಾತು ಕೇಳಡ . ಬರೀತಾ ಹೋಗು , ಓದಲೇ ನಂಗ ಇದ್ದೇ ಇದ್ಯ !!!

Dr.D.T.krishna Murthy. said...

ಗುರು ಸರ್ ;ನಿಮ್ಮ ಬ್ಲಾಗಿನಲ್ಲಿ ಕವನ ಓದಿ ಖುಷಿಯಾಯಿತು.ಎಷ್ಟೋ ಸಲ,ಏನುಬರೆಯಬೇಕೆಂದು ತೋಚುವುದಿಲ್ಲಾ.ಜೊತೆಗೆ ಮೂಡ್ ಚೆನ್ನಾಗಿರುವುದಿಲ್ಲ.ನಿಮ್ಮ ಕವಿತೆ ಚೆನ್ನಾಗಿದೆ.

nimmolagobba said...

ಗುರು ಮೂರ್ತಿ ಸರ್ ಕವಿತೆ ಚೆನ್ನಾಗಿದೆ. ಇಷ್ಟಾ ಆಯ್ತು.

AntharangadaMaathugalu said...

ಗುರು ಸಾರ್...
ಕೆಲವೊಮ್ಮೆ ಹೀಗಾಗುತ್ತದೆ ಅಲ್ವಾ..? ಏನೂ ತೋಚೋದೇ ಇಲ್ಲ. ಯಾವ ವಿಷಯವೂ ಧಾರೆಯಾಗುವುದೇ ಇಲ್ಲ ಮನದಲ್ಲಿ... ಹೊಸ ವಿಚಾರಗಳೇನೂ ಮಿಂಚುವುದೇ ಇಲ್ಲ... ಇದು ಕೆಲವು ದಿನಗಳ ಭಾವನೆ ಅನ್ನಿಸತ್ತೆ ನನಗೆ. ಮನಸು ಖಾಲಿ ಅನ್ನುತ್ತಲೇ ಒಂದು ಕವನ ಮೂಡಿದೆಯಲ್ಲಾ... ಇದಲ್ಲವೇ ಅಚ್ಚರಿ...!!!

ಶ್ಯಾಮಲ

ಭಾಶೇ said...

very nice... chennagide

ದಿನಕರ ಮೊಗೇರ said...

wav... bareyalu vishaya sigade hige barediri sir...

suppar...

ಮನಮುಕ್ತಾ said...

ಮನಸಿನ ಭಾವನೆಗಳನ್ನು ವ್ಯಕ್ತಪಡಿಸಿದ ಕವನ... ಚೆನ್ನಾಗಿದೆ.

ಪ್ರವೀಣ್ ಭಟ್ said...

entu vishya ille heline ondu dodda kavana bardbitte.. cholo iddu

ಚುಕ್ಕಿಚಿತ್ತಾರ said...

nice poem...:):)

SANTOSH MS said...

Guru Sir,

Hope your are in good health now. This poem is very different from the usual ones covering all aspects of the latest in news from different fields. Good thought. Keep going like this.

ವಸಂತ್ said...

ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು....

ವಸಂತ್

shwetha said...

ಕವನ ಬಹಳ ಸೊಗಸಾಗಿದೆ.. ಓದಿ 'ಅಪ್ಪ, ಮಗ ಮತ್ತು ಕತ್ತೆ' ಕಥೆ ನೆನಪಾಯಿತು. ಹೌದು, ಜನರೇ ಹಾಗೆ.. ಬೆನ್ನು ತಟ್ಟುವವರಿಗಿಂತ ಕಾಲು ಎಳೆಯುವವರೇ ಹೆಚ್ಚು. ಅವರ ಮಾತು ಕೇಳಿದರು ಕಷ್ಟ ಕೇಳದಿದ್ದರು ಕಷ್ಟ.. ಇವೆರಡರ ನಡುವೆ ಇರುವ ಸಣ್ಣ ಗೆರೆಯ ಅರಿವು ಇದ್ದರೆ ಉತ್ತಮ..

shwetha said...

ಕವನ ಬಹಳ ಸೊಗಸಾಗಿದೆ.. ಓದಿ 'ಅಪ್ಪ, ಮಗ ಮತ್ತು ಕತ್ತೆ' ಕಥೆ ನೆನಪಾಯಿತು. ಹೌದು, ಜನರೇ ಹಾಗೆ.. ಬೆನ್ನು ತಟ್ಟುವವರಿಗಿಂತ ಕಾಲು ಎಳೆಯುವವರೇ ಹೆಚ್ಚು. ಅವರ ಮಾತು ಕೇಳಿದರು ಕಷ್ಟ ಕೇಳದಿದ್ದರು ಕಷ್ಟ.. ಇವೆರಡರ ನಡುವೆ ಇರುವ ಸಣ್ಣ ಗೆರೆಯ ಅರಿವು ಇದ್ದರೆ ಉತ್ತಮ..

shivu.k said...

ಗುರುಮೂರ್ತಿ ಸರ್,
ಮನಸ್ಸು ಖಾಲಿಯಾಗಿದ್ದಾಗ ಬರೆಯಲು ಹೊರಟರೇ..ಏನಾಗುತ್ತದೆ..ಇದೆಲ್ಲಾ ಆಗುತ್ತದೆ ಅಲ್ವಾ..

ಚೆನ್ನಾಗಿದೆ ಸರ್..

Anonymous said...

Merest interesting article you got there. It helped me a scads and I'm indubitably coming backside to your site again in the future. Protect up the good work. [url=http://szkoleniaforex.info/]gielda forex[/url]

ಕ್ಷಣ... ಚಿಂತನೆ... bhchandru said...

ಗುರು ಸರ್‍, ಬರೆಯಲೆಂದು ಹೊರಟಿದ್ದ ಬ್ಲಾಗಿನಲ್ಲಿ ಮೂಡಿಬಂದ ಬರಹ (ಕವನ) ಸೊಗಸಾಗಿದೆ.
ಸ್ನೇಹದಿಂದ,

ವಿ.ಆರ್.ಭಟ್ said...

ವಿಷಯವಿಲ್ಲದೇ ಬರೆಯಲು ಹೊರಟರೇ ಏನನ್ನೋ ಹೇಗೋ ಬರೆಯುತ್ತೇವೆ :) ಒಂಥರಾ ವಿಭಿನ್ನ!

ಅಪ್ಪ-ಅಮ್ಮ(Appa-Amma) said...

ಗುರು ಅವರೇ,

ವಿಷಯ ಸಿಗಲಿಲ್ಲಾ ಅಂತೇಳಿ ಒಳ್ಳೆ ಕವನನೇ ಬರೆದಿದ್ದೀರಿ :)
ಆದರೂ ಯಾವಾಗಲಾದರೂ ನಿಮ್ಮ ಸಂಶೋದನೆ ಬಗ್ಗೆ ಏನಾದರೂ ಬರೀರಿ

Badarinath Palavalli said...

really nice poem. we shall write for ourselves. bhavana madams view is absolutely perfect. you have bright coming days... :-)

visit my blogs too:
www.badari-poems.blogspot.com
www.badari-notes.blogspot.com
facebook.com/Badarinath.Palavalli

Dr.D.T.krishna Murthy. said...

ಗುರು ಸರ್ ;ಬ್ರಾಡ್ ಬ್ಯಾಂಡ್ ತೊಂದರೆಯಿಂದ ಬ್ಲಾಗುಗಳಿಗೆ ಭೇಟಿಕೊಡಲು ತಡವಾಗುತ್ತಿದೆ.ಕವನ ತುಂಬಾ ಚೆನ್ನಾಗಿದೆ.ತಾವು ನನ್ನ ಬ್ಲಾಗಿಗೆ ಬಂದು ಬಹಳ ದಿನಗಳಾದವು.ನೀವೆಲ್ಲಾ ಬಂದರೆ ಬರೆಯಲು ಖುಷಿ.ತಪ್ಪದೆ ಭೇಟಿ ಕೊಡಿ.ನಮಸ್ಕಾರ.

ಶಿವಶಂಕರ ವಿಷ್ಣು ಯಳವತ್ತಿ said...

ಸರ್. ಬೇಗ ಹುಶಾರಾಗಿ,. ಕವನ ಚನ್ನಾಗಿದೆ.. ಜೊತೆಗೆ ಕವನವು ಚಿತ್ರದ ಶೈಲಿಯಲ್ಲಿ ಇದೆ ಅದೂ ಚನ್ನಾಗಿದೆ..

ಕವನಕ್ಕೆ ಹಾಕಿರೋ ನಿಮ್ಮ ಫೋಟೋನೂ ಸೂಪರ್..

-ಯಳವತ್ತಿ

ಜಲನಯನ said...

ಡಾಕ್ಟ್ರೆ...ಕೆಮ್ಮು ಜ್ವರ ಹೋಯ್ತಾ ,...? ಆ ದಿನ ನಿಮ್ಮೊಮ್ದಿಗೆ ವೀಡಿಯೋ ಚಾಟ್ ಮಾಡಿದ್ರಿಂದ ಅದು ಖಾತರಿ...ಹೋಯ್ತು ಅಂತ...ಬರಿಯೋದೇನು ಅಂತ ಜಿಝ್ಞಾಸೆಯಲ್ಲೇ ಇಷ್ಟೊಂದು ಚನ್ನಾಗಿ ಬರೆದ್ರಿ..ಇನ್ನು ಬರೀಬೇಕು ಅಂತ ಬರೆದ್ರೆ...ನೋ ವೇ...ನಿಲ್ಲೋದೇ ಬೇಡ...ಮುಂದುವರೆಸಿ..ನಾವಿದ್ದೀವಿ..ಓದೋಕೆ..(ಸ್ವಲ್ಪ ಆಚೆ ಈ ಚೆ ಆಗಬೌಹುದು ಅಷ್ಟೆ...)

ಸಾಗರದಾಚೆಯ ಇಂಚರ said...

at ಸುಬ್ರಮಣ್ಯ ಮಾಚಿಕೊಪ್ಪ
:)

ಸಾಗರದಾಚೆಯ ಇಂಚರ said...

ಬಾಲು ಸಾಯಿಮನೆ

ಬರ್ತಾ ಇರಪ್ಪ
ಪ್ರೀತಿ ಇರಲಿ

ಸಾಗರದಾಚೆಯ ಇಂಚರ said...

ದೀಪಸ್ಮಿತಾ madam

tumbaa thanks
bartaa iri

ಸಾಗರದಾಚೆಯ ಇಂಚರ said...

sunaath sir

ಅರೋಗ್ಯ ಈಗ ಫುಲ್ ಸುಧಾರಿಸಿದೆ
ಹೀಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಸತೀಶ್ ಗೌಡ sir

ಎಷ್ಟೋ ಸಲ ಬರೆಯೋಕೆ ಮೊದಲು ಹೀಗೆ ಆಗುತ್ತೆ
ಒಮ್ಮೆ ಬರೆಯೋಕೆ ಆರಂಬಿಸಿದರೆ ಮತ್ತೆ
ನಿಲ್ಲಿಸೋಕೆ ಕಷ್ಟ ಆಗುತ್ತೆ ಆಲ್ವಾ
ಬರ್ತಾ ಇರಿ

ಸಾಗರದಾಚೆಯ ಇಂಚರ said...

PARAANJAPE K.N. sir

tumbaa thanks

bartaa iri

ಸಾಗರದಾಚೆಯ ಇಂಚರ said...

Dear Asha

thank you for your words

keep visiting

ಸಾಗರದಾಚೆಯ ಇಂಚರ said...

ವಾಣಿಶ್ರೀ ಭಟ್

nagune commentaaaa

ok

granted

bartaa iru

ಸಾಗರದಾಚೆಯ ಇಂಚರ said...

Pradeep Rao sir

ಬ್ಲಾಗ್ ಗೆಳೆಯರ ಪ್ರೀತಿಯೇ ಅಂಥಾದ್ದು ನೋಡಿ

ಪಡೆ ಪಡೆ ಬರೀಬೇಕು ಅನಿಸುತ್ತೆ

ನಿಮ್ಮ ಪ್ರೀತಿ ಹೀಗೆ ಇರಲಿ
ಬರ್ತಾ ಇರಿ

ಸಾಗರದಾಚೆಯ ಇಂಚರ said...

ಚಿತ್ರಾ


ನಿಂಗ ಎಲ್ಲ ಇದ್ದಿ ಹೇಳೇ ಇಷ್ಟು ಧೈರ್ಯ ಬರೆಯಲೇ

ನಿಂಗ ಬರದು ಮಾತ್ರ ಮರೆಯಡಿ

ಆಶಿರ್ವಾದ ಸದಾ ಇರಲಿ

ಸಾಗರದಾಚೆಯ ಇಂಚರ said...

Dr.D.T.krishna Murthy sir

neevu annodu nija

nimma blog nalli irovanta aaasktikara vishayagala korate namma blog nallide

bartaa iri

ಸಾಗರದಾಚೆಯ ಇಂಚರ said...

nimmolagobba baalu sir

thank you

bartaa iri

ಸಾಗರದಾಚೆಯ ಇಂಚರ said...

AntharangadaMaathugalu Shamala madam,

houdu, kelavomme subject sigde oddadi bidtivi alvaa

bartaa iri

ಸಾಗರದಾಚೆಯ ಇಂಚರ said...

ಭಾಶೇ

thank you

ಸಾಗರದಾಚೆಯ ಇಂಚರ said...

ದಿನಕರ ಮೊಗೇರ sir

nodi, vishayagalu sigde idre enaagutte anta hahahha

bartaa iri

ಸಾಗರದಾಚೆಯ ಇಂಚರ said...

ಮನಮುಕ್ತಾ

heege barta iri

ಸಾಗರದಾಚೆಯ ಇಂಚರ said...

ಪ್ರವೀಣ್ ಭಟ್
houdappa

ninga brtaa iri nodu

bariyadna ningane sudhaarisavu

ಸಾಗರದಾಚೆಯ ಇಂಚರ said...

ಚುಕ್ಕಿಚಿತ್ತಾರ

thank you

ಸಾಗರದಾಚೆಯ ಇಂಚರ said...

SANTOSH MS

thanks for your words,

am fine now,

keep visiting my blog

ಸಾಗರದಾಚೆಯ ಇಂಚರ said...

ವಸಂತ್ sir

thank you

bartaa iri

ಸಾಗರದಾಚೆಯ ಇಂಚರ said...

shwetha


ಜೀವನಾನೆ ಹಾಗೆ ನೋಡಿ

ಬೆನ್ನು ತತ್ತೊರೆ ಕೆಲವೊಮ್ಮೆ ಕಾಲು ಏಳಿತಾರೆ

ಅವುಗಳ ನಡುವಿನ ಸಣ್ಣ ಗೆರೆಯ ಅರಿವು ನಮಗೆ ಇರಬೇಕು ಅನ್ನೋ ನಿಮ್ಮ ಮಾತು ನಿಜ

ಬರ್ತಾ ಇರಿ

ಸಾಗರದಾಚೆಯ ಇಂಚರ said...

shivu.k sir

nija alvaa

nimma abhipraayakke thanks

barta iri

ಸಾಗರದಾಚೆಯ ಇಂಚರ said...

ಕ್ಷಣ... ಚಿಂತನೆ... bhchandru sir

thank you

sadaa bartaa iri

ಸಾಗರದಾಚೆಯ ಇಂಚರ said...

ವಿ.ಆರ್.ಭಟ್ sir

adondu tara majaa nodi

thanks for the comments

ಸಾಗರದಾಚೆಯ ಇಂಚರ said...

ಅಪ್ಪ-ಅಮ್ಮ(Appa-Amma)

khanidta baritini

nanna research bagge google nalli bekadashtu vivara ide matte enu bareyodu anno udaseena ashte

omme baritini

thanks for the comments

ಸಾಗರದಾಚೆಯ ಇಂಚರ said...

Badarinath Palavalli sir

I also agree with Bhavana madam view. But sometime we have to respect for other people right.

thank for your comments

Keep in touch

ಸಾಗರದಾಚೆಯ ಇಂಚರ said...

Dr.D.T.krishna Murthy

khandita bartini sir

kelavu dina aglilla kshamisi

ಸಾಗರದಾಚೆಯ ಇಂಚರ said...

ಶಿವಶಂಕರ ವಿಷ್ಣು ಯಳವತ್ತಿ sir

nimma maatige thankso thanksu

heege barta iri

ಸಾಗರದಾಚೆಯ ಇಂಚರ said...

ಜಲನಯನ sir


ನಿಮ್ಮ ಪ್ರೀತಿ ಆಶಿರ್ವಾದ ಇದ್ರೆ ಇನ್ನು ಬರಿತಿವಿ ಬಿಡಿ

ಅರೋಗ್ಯ ತುಂಬಾ ಚೆನ್ನಾಗಿದೆ

ಚಳಿ ದಿನೇ ದಿನೇ ಜಾಸ್ತಿ ಆಗ್ತಾ ಇದೆ

ಹಿಮ ಮಳೆ ತುಂಬಿದೆ

ನೀವು ಬರೋದು ಬಿಡಬೇಡಿ ಬ್ಲಾಗ್ ಗೆ

ಪ್ರಗತಿ ಹೆಗಡೆ said...

:-)

ಸಾಗರದಾಚೆಯ ಇಂಚರ said...

Pragathi,
thank you for your comments

Shashi jois said...

ಗುರು ಖಾಲಿಯಾದ ಮನಸ್ಸಿಂದ ಕವನ ಸೊಗಸಾಗಿ ಬರೆದಿದ್ದೀರಿ.ಇಷ್ಟ ಆಯ್ತು..

Girish Hegde said...

ಬರೆಯುವ ವಿಷಯಗಳಲ್ಲಿ ಆಗುವ ಗೊಂದಲ.. ತುಂಬಾ ಚೆನ್ನಾಗಿದೆ.

ಸಾಗರದಾಚೆಯ ಇಂಚರ said...

Shashi madam
thank you

ಸಾಗರದಾಚೆಯ ಇಂಚರ said...

Girish

thank you

ಸೀತಾರಾಮ. ಕೆ. / SITARAM.K said...

tumbaa sarasavagide tamma blognalli bareva bagge janara anisikeya kavana.
ade kavanakke vastuvaayitu.
jai ho!

ಕಲರವ said...

guru sir nimma blognalli ellavuu aaptavenisuttave.adannu nirupisuva nimma shailiyuu vibhinna.dhanyavaadagalu.

ಕಲರವ said...

guru sir nimma blognalli ellavuu aaptavenisuttave.adannu nirupisuva nimma shailiyuu vibhinna.dhanyavaadagalu.