Tuesday, August 17, 2010

ಚಕೋರ ಚಂದ್ರಮನಿಗೂ ಪೈಪೋಟಿಯೇ....

ಹೌದು, ಅವಳ ಸೌಂದರ್ಯವೇ ಹಾಗಿತ್ತು. ''ಸೌಂದರ್ಯ'' ವನ್ನು ಯಾವಾಗಲೂ ಹೆಣ್ಣಿಗೆ ಹೋಲಿಸುತ್ತ ಬಂದಿರುವುದು ಜನಜನಿತ. ''ಸಿಂಹದ ಕಟಿ'', ''ಹಂಸದ ನಡಿಗೆ'' ''ಬಾಳೇ ದಿಂಡಿನಂಥ ತೊಡೆ'' ''ತೊಂಡೆ ಹಣ್ಣಿನಂತ ತುಟಿ''  ಅದು ಇದು ಎಂದು ಹೆಣ್ಣನ್ನು ಹೊಗಳಲು ಕವಿ ಮಹಾಶಯರು ಬಳಸಿದ ಪದಕ್ಕೆ ಲೆಕ್ಕವಿಲ್ಲ. ಕಾಳಿದಾಸನಂತೂ ತನ್ನ ಕಾವ್ಯದಲ್ಲಿ ಹೆಣ್ಣನ್ನು ಸೌಂದರ್ಯದ ಪರಮ ದೇವತೆ ಯಾಗಿ ಚಿತ್ರಿಸಿದ್ದಾನೆ. ಇಂಥಹ ಅನುಪಮ ಚೆಲುವೆಯ ಕಥೆಯೇ ನನ್ನ ಈ ವಾರದ ಕಥಾವಸ್ತು. ಆ ಕಥಾ ನಾಯಕಿಯ ಸೌಂದರ್ಯವೂ ಚಕೋರ ಚಂದ್ರಮನನ್ನು ನಾಚಿಸುತ್ತಿತ್ತು. ಚಂದ್ರ ನೋಡಿದರೆ ಆತನೇ ನಾಚಿ ತನಗೊಬ್ಬ ಪೈಪೋಟಿ ನೀಡುವ ಸುಂದರಿ ಬಂದಳೋ ಎನ್ನುವಂತೆ ಬೇಸರಗೊಳ್ಳುತ್ತಿದ್ದ. ಇಂಥಹ ಅನುಪಮ ಚೆಲುವೆ ಯನ್ನು ನಾನೊಬ್ಬ ನೋಡಿದರೆ ನಿಮಗೆ ಬೇಸರವಾಗಬಹುದು. ಬನ್ನಿ, ನೋಡೋಣ ಅವಳ  ರೂಪ ಲಾವಣ್ಯ ರಾಶಿಯನ್ನು. 

ಅದೊಂದು 450 ಜನರು ವಾಸಿಸುವ ಪುಟ್ಟ ಹಳ್ಳಿ. ಹಳ್ಳಿ ಅನ್ನುವುದಕಿಂತ ''ಸ್ವರ್ಗ'' ಅಂದರೆ ಸೂಕ್ತವಾದೀತೇನೋ. ಪುಟ್ಟ ಹಳ್ಳಿಗೆ ನೆಟ್ಟಗೆ ಕರೆಂಟ್  ಕೂಡಾ ಇರದ ಸ್ಥಿತಿಯನ್ನು ನಾವು ಕೇಳಿದ್ದೇವೆ. ಆದರೆ ಇಲ್ಲಿಯ ಹಳ್ಳಿ ಹಾಗಿಲ್ಲ, ಇಲ್ಲಿ ಎಲ್ಲವೂ ಇತ್ತು, ಬಹುಷ: TV-9 ಯವರು ಬಂದಿದ್ದರೆ ''ಹೀಗೂ ಉಂಟೆ'' ಎನ್ನುತ್ತಿದ್ದರೇನೋ. ಹಾಗಿತ್ತು ಇಲ್ಲಿನ ಹಳ್ಳಿ. ಆ ಪುಟ್ಟ ಹಳ್ಳಿಯ ಹೆಸರೇ ಇಂದಿನ ಕಥಾ ನಾಯಕಿ. ''Flam'' ಎಂಬ ಹೆಸರಿನ ಈ ರೂಪವತಿ ನಾರ್ವೆ ಯ ದಕ್ಷಿಣ ಕ್ಕೆ ನೆಲಸಿದ್ದಾಳೆ. ಸುತ್ತ ಸುತ್ತುವರಿದ ಬ್ರಹತ್ ಬೆಟ್ಟ ಗುಡ್ಡಗಳು, ನಡುವೆ ಮೈ ಪುಳಕಗೊಳಿಸುವ ಜಲ ರಾಶಿ, ಸುಂದರ ಜಲಪಾತಗಳು 

''ಚೆಲುವೆಯೇ ನಿನ್ನ ನೋಡಲು, 
ಮಾತುಗಳು ಬರದವನು, 
ಬರೆಯುತಾ, ಹೊಸ ಕವಿತೆಯ
 ಹಾಡುವ ನೋಡಿ ಅಂದವನು''

ಎಂದು ಹಾಡಿದ ಕನ್ನಡದ ಕಣ್ಮಣಿ ಡಾ.ರಾಜಕುಮಾರ್ ನೆನಪಾದರೆ ಆಶ್ಚರ್ಯವೇನು  ಇಲ್ಲ.  ಇಲ್ಲಿನ ತರು ಲತೆಗಳು, ಗಿಡ ಮರಗಳು, ಜಲ ಕೊಳಗಳು, ಬ್ರಹದಾಕಾರದ ಪರ್ವತ ಶಿಖರಗಳು, ಹಸಿರು ಹುಲ್ಲುಗಾವಲುಗಳು ಒಹ್, ಏನೆಂದು ವರ್ಣಿಸಲಿ ಇದರ ಸೊಬಗ. ಸ್ಫಟಿಕದಂತ ಶುಭ್ರತೆ ಹೊಂದಿದ ನೀರು, ಗಂಗೆಯ ಶುಭ್ರತೆ ನೋಡಿದ್ದೇನೆ, ಆ ಗಂಗೆಯ ಶುಭ್ರತೆಯನ್ನೂ ಮೀರಿಸುವ ನೀರಿನ ಶುಭ್ರತೆ ಕಂಡು ಮೂಕ ವಿಸ್ಮಿತ ರಾದ ಜನರೆಷ್ಟೋ. ಒಟ್ಟಿನಲ್ಲಿ  Beauty Queen ಕಣ್ರೀ ಇದು.

Oslo ದಿಂದ ಬೆಳಗಿನ ಜಾವ 7 ಘಂಟೆಗೆ ಈ ಸುಂದರಿಯ ನೋಡಲು ಹೊರಟೆವು. ಓಸ್ಲೋ ದಿಂದ ಮಿರ್ಡಾಲ್ ವರೆಗೆ ರೈಲಿನಲ್ಲಿ ಬಂದು ಅಲ್ಲಿಂದ ಇನ್ನೊಂದು ರೈಲು ತೆಗೆದುಕೊಳ್ಳಬೇಕು. ನಾರ್ವೆಯ ಪ್ರಕೃತಿಯ ದರ್ಶನದ ಮೊದಲ ಹೆಜ್ಜೆ ಇಲ್ಲಿನ ರೈಲಿನ ಪ್ರಯಾಣ. ಮಾರ್ಗ ಮದ್ಯದಲ್ಲಿ ಸಿಗುವ ಸುಂದರ ಹುಲ್ಲುಗಾವಲು, ಮನೆಗಳು, ನದಿ, ಕಣ್ಮನ ಸೆಳೆಯುತ್ತವೆ.



1222 ಮೀಟರ್ ಎತ್ತರದಲ್ಲಿರುವ  Finse


ಸುಮಾರು 4-30 ತಾಸು ಪ್ರಯಾಣಿಸಿದ ಮೇಲೆ ಮಿರ್ಡಾಲ್ ಬರುತ್ತದೆ. ಇಲ್ಲಿಂದ ಆರಂಭವಾಗುವುದೇ Flam ಎಂಬ ಸುಂದರಿಯ ಭೆಟ್ಟಿಯಾಗಲು ಇರುವ ಅಡಚಣೆಗಳು, ಸಾಹಸಗಾಥೆ, ಯಶೋಗಾಥೆ ಎಲ್ಲವೂ.
Flam ಎಂಬ  ರಂಭೆಯನ್ನು ಭೆಟ್ಟಿಯಾಗಲು ಬರುವುದು ಅಷ್ಟೊಂದು ಸುಲಭ ಅಂದುಕೊಳ್ಳಬೇಡಿ. ತನ್ನ ಸುತ್ತಲೂ ಸೈನಿಕರ ಕಾವಲು ಇರುವಂತೆ ಬೆಟ್ಟ ಗುಡ್ದಗಳನ್ನೇ ನಿರ್ಮಿಸಿಕೊಂಡಿದ್ದಾಳೆ. ಎಂಥೆಂಥ ಬಾಲಿವುಡ್ ಲಲನೆಯರಿಗೆ ಸೆಕ್ಯೂರಿಟಿ ಬೇಕಿರುವಾಗ ಪ್ರಪಂಚದಾದ್ಯಂತ ಪ್ರವಾಸಿಗರ ಸೆಳೆಯುವ ಈ ಚೆಲುವೆಗೆ ಬೇಡವೇ ರಕ್ಷಣೆ. ಈ ಚೆಲುವೆ ಯ ಕಥೆಯೂ ಅಷ್ಟೇ ರೋಮಾಂಚನೀಯ. ಬರುವ ಪ್ರತೀ ಪ್ರವಾಸಿಗನ ಮನಸಿನಲ್ಲೂ ''ಅಬ್ಬಬ್ಬ ಹೆಣ್ಣೇ'' ಎಂಬ ಮಾತುಗಳನ್ನು ಹೇಳಿಸದೇ ಇರದು ನೋಡಿ. ಒಂದು ಕಾಲದಲ್ಲಿ ಇಲ್ಲಿಗೆ ಬರುವುದೇ ಅಸಾದ್ಯ ಎಂಬ ಸ್ಥಿತಿ ಇತ್ತಂತೆ.  ಈ ಲಲನೆಗೆ ಚಳಿಗಾಲ ಬಂತೆಂದರೆ ''ವೈಧವ್ಯ'' ಪ್ರಾಪ್ತಿ. ಸುತ್ತಲೂ ಬಿಳಿಯ ಹಿಮದಿಂದ ತುಂಬಿ ಹೋಗುವ ಇವಳು ಅಕ್ಷರಶ: ನತದೃಷ್ಟ ಹತಭಾಗ್ಯೆ ಯಂತೆ ಚಳಿಗಾಲದಲ್ಲಿ ಗೋಚರಿಸುತ್ತಾಳೆ. ಆದರೆ ಬೇಸಿಗೆಯ ಹೊಂಗಿರಣ ಬಂದ ಕೂಡಲೇ 
''ಈ ಸಮಯ ಶೃಂಗಾರ ಮಯ
ನೂತನ ಬಾಳಿಗೆ ಶುಭೋದಯ''
ಎಂದು ಹಾಡಬೇಕೆನಿಸುತ್ತದೆ.
ಅದೇ ಚಳಿಗಾಲ ಬಂದರೆ,
''ಈ ಸಮಯ ಶೃಂಗಾರ ಮಾಯಾ''
ಎಂದು ಹಾಡಬೇಕಾಗುತ್ತದೆ.

''Flam'' ಅಂದರೆ  ''Little place between steep mountains'' ಎಂದರ್ಥ. ಪ್ರಕ್ರತಿಯ ಆರಾಧಕರಿಗೆ ಇದೊಂದು ತಪಸ್ಯಾ ಸ್ಥಳ. ಇಲ್ಲಿಗೆ ಬರಬೇಕಾದರೆ ಸಿಗುವ ಅನುಭವ ಜೀವನದಲ್ಲೇ ಮರೆಯಲಾರದ್ದು. Thanks to Flam Railway. ಸುಮಾರು 1800 ಇಸವಿಯಲ್ಲಿ ಬ್ರೀಟಿಷರು ಮತ್ತು ಜರ್ಮನ್ನರು ಇಲ್ಲಿನ ಸ್ನಿಗ್ಧ ಸೌಂದರ್ಯ ಸವಿಯಲು ಹಡಗಿನಲ್ಲಿ ಬರುತ್ತಿದ್ದದು ಬಿಟ್ಟರೆ ಇದೊಂದು ಮನುಷ್ಯರು ಬಂದು ಹೋಗಲು ಅಸಾಧ್ಯವಾದ ಜಾಗವಾಗಿತ್ತು. ಆದರೆ 1923 ರಲ್ಲಿ ಕೆಲವು ಶೂರ Engineer ಗಳ ತಂಡ ಒಂದು ದುಸ್ಸಾಹಸಕ್ಕೆ ಕೈ ಹಾಕಿದರು. 20 ಕಿ ಮಿ ಗಳಷ್ಟು ಉದ್ದದ ಕಲ್ಪನೆಗೂ ನಿಲುಕದ ರೈಲು  ಮಾರ್ಗವನ್ನು Flam  ಮತ್ತು   Myrdal   ನಡುವೆ ನಿರ್ಮಿಸುವ ಸಂಕಲ್ಪ ತೊಟ್ಟೆ ಬಿಟ್ಟರು. ಅಲ್ಲಿನ 1400 ಮೀಟರ್ ಎತ್ತರದ ಪರ್ವತಗಳನ್ನು ನೋಡಿದರೆ ಎಂಥಹ ಅಂಜದ ಗಂಡಿನಲ್ಲೂ ಗಡ ಗಡ ನಡುಗುವ ಚಳಿ ಆವರಿಸುತ್ತದೆ.




 ಆದರೆ ಕೆಲವರು ಸಾಧನೆ ಮಾಡಲೆಂದೇ ಹುಟ್ಟಿರುತ್ತಾರೆ. ನಾವು ಜಗತ್ತನ್ನು ನೋಡುವ ದೃಷ್ಟಿಗಿಂತ ಅವರು ನೋಡುವ ದೃಷ್ಟಿಕೋನ ಬೇರೆಯೇ ಇರುತ್ತದೆ. ಅದಕ್ಕೆ ಶತಮಾನಕ್ಕೊಬ್ಬ ವಿವೇಕಾನಂದ, ಮಹಾತ್ಮ ಗಾಂಧೀಜಿ, ಯಂಥ  ಮಹಾತ್ಮರು ಕಾಣುತ್ತಾರೆ. 

Flam Railway, well-known as ''Master of Engineering''

ಆ Engineer ಗಳ ತಂಡಕ್ಕೆ ಇದ್ದ ಸವಾಲಾದರೂ ಎಂಥದ್ದು, ಬ್ರಹತ್ ಬೆಟ್ಟ, ಕಡಿದಾದ ಪ್ರಪಾತ, ರಭಸದಿಂದ ಧುಮ್ಮಿಕ್ಕುವ ಜಲಧಾರೆ ಎಲ್ಲ ಕಡೆ, ವರ್ಷದ 6 ತಿಂಗಳು ತುಂಬಿದ ಹಿಮ ರಾಶಿ, ಎಲ್ಲಿಯೂ ಸೌಂದರ್ಯ ನಾಶ ಮಾಡದೆ, ಅದೇ ವೇಳೆಗೆ ಅತ್ಯಂತ ಅಪಾಯಕರವಾದ ಪರ್ವತಗಳ ತುದಿಯಲ್ಲಿ ರಸ್ತೆ ನಿರ್ಮಾಣ ಮಾಡುವ ಕೆಲಸ. ಹೇಳಿದರೆ ನಿಮಗೆ ನಂಬಿಕೆ ಆಗಲಿಕ್ಕಿಲ್ಲ. ಅಲ್ಲಿ ಹೋಗಿ ಬಂದರೆ ನಿಜಕ್ಕೂ ಆ ರೈಲು ಮಾರ್ಗ ನಿರ್ಮಾಣ ಮಾಡಿದ ಮಹಾತ್ಮರಿಗೆ ಒಂದು ಸಲಾಂ ಎನ್ನಲೇ ಬೇಕಿದೆ.
ರೈಲು  ಮಾರ್ಗದ  ನೀಲ  ನಕ್ಷೆ  
 ಸುಮಾರು 20 ವರುಷಗಳ ಕಠಿಣ ಪರಿಶ್ರಮ, ಹಗಲು ರಾತ್ರಿ ಕೆಲಸ, ಎಲ್ಲಿಯೂ ಮೋಸ ಮಾಡಲಿಲ್ಲ. 1923 ರಲ್ಲಿ ಆರಂಬಿಸಿ 1940 ರ ಸುಮಾರಿಗೆ ರೈಲು ಮಾರ್ಗ ವಿಶ್ವಕ್ಕೆ ತೆರೆದುಕೊಂಡಿತು. ಅಷ್ಟೇ ಅಲ್ಲ, ಆ ಅಪರೂಪದ ಚೆಲುವೆಯ ದರ್ಶನ ಎಲ್ಲರಿಗೂ ಲಭ್ಯವಾಯಿತು. ಈ ರೈಲು ಮಾರ್ಗದಲ್ಲಿ ಸುಮಾರು 20 Tunnel ಗಳಿವೆ. 

ನೋಡಿ, ಎಂಥಹ ಪರ್ವತವನ್ನು ಕೈಯ್ಯಲ್ಲೇ ಕೊರೆದು ಸುರಂಗ  ಮಾಡಿದ್ದಾರೆ ಎಂದು...

ಇಲ್ಲಿನ ಕೆಲಸಗಾರರಿಗೆ ಹೆಚ್ಚಿನ ಸಮಯ ಸುರಂಗ  ನಿರ್ಮಾಣಕ್ಕೆ  ಬೇಕಾಯಿತಂತೆ. ಯಾಕೆಂದರೆ 20 ರಲ್ಲಿ 18 ಸುರಂಗಗಳನ್ನು ಕೈಯಲ್ಲಿಯೇ ಕೆತ್ತಿ ಮಾಡಿದ್ದೆಂದರೆ ಅವರ ಸಾಹಸ ನಿಮಗೆ ತಿಳಿಯಬಹುದು. ಯಾಕೆಂದರೆ ಯಾವ  ದೊಡ್ಡ ದೊಡ್ಡ ಯಂತ್ರಗಳು ಅಲ್ಲಿಗೆ ಹೋಗಲು ಸಾದ್ಯವಿಲ್ಲದ ದುರ್ಗಮ ಜಾಗವದು. ಆ ಸಾಹಸ ಕಥೆ ಓದಲು ಇಲ್ಲಿ ಕ್ಲಿಕ್ಕಿಸಿ http://www.flaamsbana.no/eng/
ಕಡಿದಾದ ಪರ್ವತಗಳು ಕೆಲಸಗಾರರಿಗೆ ಬಹುದೊಡ್ಡ ಸಮಸ್ಯೆ ಆಗಿತ್ತಂತೆ. ಅದಕ್ಕೆಂದೇ ಹಲವಾರು Hairpin  ಸುರಂಗ ನಿರ್ಮಿಸಿದ್ದಾರೆ. ಅತ್ಯಂತ   ಅಪಾಯಕರವಾದ ''avalanches'' ಮತ್ತು ಜಲಪಾತಗಳ ರಭಸ ತಪ್ಪಿಸಲು ರೈಲು ಮಾರ್ಗವನ್ನು 3 ಸಲ ನದಿಯ ಎಡಕ್ಕೆ ಮತ್ತು ಬಲಕ್ಕೆ ಬರುವಂತೆ ನೋಡಿಕೊಳ್ಳಲಾಗಿದೆ. ಅಷ್ಟೇ ಅಲ್ಲ, ಸೇತುವೆಯ ಮೇಲೆಯೂ ನದಿ ದಾಟದಂತೆ ಮುತುವರ್ಜಿ ವಹಿಸಲಾಗಿದೆ. 


ರೈಲಿನ ಒಳಗಿನಿಂದ ಕಾಣುವ ದ್ರಶ್ಯ 

ಈ ರೈಲು ಮಾರ್ಗಕ್ಕೆ ವಿಶ್ವದ ಅತೀ ಸುಂದರ ರೈಲು ಮಾರ್ಗ ಎಂಬ ಪ್ರಶಸ್ತಿಯೂ ಲಭಿಸಿದೆ. 2007 ರಲ್ಲಿ ಸುಮಾರು 6 ಲಕ್ಷ ದಷ್ಟು ಪ್ರಯಾಣಿಕರು ಈ ರೈಲಿನಲ್ಲಿ Flam ಗೆ ಪ್ರಯಾಣಿಸಿದರಂತೆ. ಅದೊಂದು ದಾಖಲೆ. ರೈಲಿನಲ್ಲಿ ಪ್ರಯಾಣಿಸುವಾಗ ಇಕ್ಕೆಲಗಳಲ್ಲಿ ಕಡಿದಾದ ಪ್ರಪಾತ, ನಯನ ಮನೋಹರ ಜಲಪಾತಗಳು, ಎದೆ ನಡುಗಿಸುವ ಪರ್ವತಗಳ ಸಾಲು, ಎಲ್ಲವನ್ನು ನೋಡುತ್ತಿದ್ದರೆ ಯಾವುದೋ ಬೇರೆಯ ಲೋಕಕ್ಕೆ ಬಂದಂತೆ ಅನಿಸುತ್ತದೆ. ಸುಮಾರು ಒಂದು ಘಂಟೆಗಳ ಈ ಪ್ರಯಾಣ ಇನ್ನು ಇದ್ದಿದ್ರೆ ಚೆನ್ನ ಅನ್ನಿಸದೆ ಇರದು.
ಮಾರ್ಗ ಮದ್ಯದಲ್ಲಿ ಸಿಗುವ ಎತ್ತರದ  Kjosfossen ಜಲಪಾತ ನೋಡುಗರಿಗೆ, ಪ್ರಕ್ರತಿ ಪ್ರಿಯರಿಗೆ, ಛಾಯಾ ಚಿತ್ರಗ್ರಾಹಕರಿಗೆ ಹಬ್ಬದೂಟ ನೀಡುತ್ತದೆ. ಇಲ್ಲಿ ರೈಲನ್ನು 10  ನಿಮಿಷ ಸೌಂದರ್ಯ ನೋಡಲೆಂದೇ ನಿಲ್ಲಿಸಲಾಗುತ್ತದೆ.

ಇಲ್ಲಿನ ಜಲಪಾತದ ತುಣುಕು ವೀಡಿಯೊ ದಲ್ಲಿದೆ ನೋಡಿ,
 ಜಲಪಾತ ಕಳೆದ ಮರುಕ್ಷಣವೇ 180 ಡಿಗ್ರಿ ಯ ಹೈರ್ ಪಿನ್ ಆಕಾರದ ಸೇತುವೆ ಛಾಯಾ ಚಿತ್ರಗ್ರಾಹಕರಿಗೆ ಸುಗ್ಗಿ ನೀಡುತ್ತದೆ. 180 ಡಿಗ್ರಿ ಯಷ್ಟು ರೈಲು ತಿರುಗಿದಾಗ ಸುತ್ತಲಿನ ಬೆಟ್ಟದ ಪನೋರಮಿಕ್   ಸೌಂದರ್ಯ ಕಣ್ಣಿಗೆ ಲಭಿಸುತ್ತದೆ.

ಇಲ್ಲಿನ ದೃಶ್ಯಗಳು ಪ್ರತಿಕ್ಷಣವೂ ಮರೆಯಲಾರದ ನೆನಪಾಗಿ ಸ್ಮ್ರತಿ ಪಟಲ ದಲ್ಲಿ ಉಳಿದು ಹೋಗುತ್ತದೆ. ಒಂದು ತಾಸಿನ ರೋಮಾಂಚನೀಯ ಮಾರ್ಗದಲ್ಲಿ ಬೆಟ್ಟದ ಮೇಲಿನಿಂದ ಬೆಟ್ಟದ ಕೆಳಗೆ ಬಂದಿಳಿದರೆ ಸಿಗುವುದೇ ಸೌಂದರ್ಯದ ಖನಿ Flam.







ಈ ಸುಂದರಿಯ ಬಗ್ಗೆ ಮುಂದಿನ ವಾರ ಹೇಳ್ತೀನಿ, ಯಾಕಂದ್ರೆ ಅತೀಯಾದ್ರೆ ಅಮ್ರತಾನು ವಿಷ ಅಂತೆ.

ನಿಮ್ಮವ ಗುರು


79 comments:

ದಿನಕರ ಮೊಗೇರ said...

ಗುರು ಸರ್,
wonderful .....ಅಲ್ಲಿನ ದ್ರಶ್ಯ ವೈಭವಕ್ಕೆ , ಅದನ್ನ ವರ್ಣಿಸಿದ ಪರಿಗೆ......hats off .... ಮತ್ತೇನು ಬರೆಯಲು ಬರುತ್ತಿಲ್ಲ.... ಪರ್ವತ ಪ್ರದೇಶಗಳಲ್ಲಿ ತುನ್ನೆಲ್ ಮಾಡೋದು ಎಷ್ಟು ಕಷ್ಟ ಅಂತ ಸಿವಿಲ್ ಮಾಡಿದ ನನಗೆ ಗೊತ್ತು .... ಒಮ್ಮೊಮ್ಮೆ ಅತ್ಯಾಧುನಿಕ ತಂತ್ರಜ್ಞಾನ ಇದ್ದರೂ ಒಂದು ಕಡೆಯಿಂದ ಶುರು ಮಾಡಿದ ಬಂಡೆ ಕೊರೆತ ನಾನು ಮಾರ್ಕ್ ಮಾಡಿದ ಕಡೆ ಸೇರೋದೇ ಇಲ್ಲ..... ಆ ಕಾಲದಲ್ಲಿ ಈ ಸುರಂಗ ಎಷ್ಟು ಚೆಂದವಾಗಿ, ವೈಜ್ಞಾನಿಕವಾಗಿ ಮಾಡಿದ್ದಾರೆ ...... ತುಂಬಾ ಧನ್ಯವಾದ ಸರ್..... ಒಳ್ಳೆಯ ವಿಷಯ ತಿಳಿಸಿದ್ದಕ್ಕೆ... , ಸುಂದರ ಚಿತ್ರ ತೋರಿಸಿದ್ದಕ್ಕೆ....

ಒಂದು ವಿಷಯ...'' ಹೀಗೂ ಉಂಟೆ'' ಕಾರ್ಯಕ್ರಮ ಬರೋದು....'ಈ ಟಿವಿ'ಯಲ್ಲಿ ಅಲ್ಲ.... '' t . v 9 ' ನಲ್ಲಿ......

jithendra hindumane said...

ಗುರು ಸಾರ್‍, ಅದ್ಭುತ ಫೋಟೋಗಳು ಮತ್ತು ಲೇಖನ.
ಧನ್ಯವಾದಗಳು ...

ಸವಿಗನಸು said...

ಗುರು,
ಮೊದಲು ಪೀಠಿಕೆ ನೋಡಿ ಯಾರಪ್ಪ ನಾ ಕಾಣದ ಸುಂದರಿ ಅಂತ ಓದಲು ಶುರು ಮಾಡಿದೆ...ಆಮೇಲೆ ತಿಳಿಯಿತು Flam ನಿಜವಾಗಲೂ ಸುಂದರಿಯೆ....
ಚೆಂದದ ಚಿತ್ರಗಳು ಹಾಗೂ ವರ್ಣನೆ....
ಹಂಚಿಕೊಂಡಿದ್ದಕ್ಕೆ ಅಭಿನಂದನೆಗಳು....

ಜಲನಯನ said...

ಡಾ.ಗುರು...ವಾಹ್ ಗುರು...ಏನು ಪ್ರವಾಸ..? ಎಂಥ ದೃಶ್ಯಗಳು..ಏನು ಕಥನ ? ಎಂಥ ಮಂಥನ..? ಯೂರೋಪಿನ ನಿಮ್ಮ ಪ್ರವಾಸದಲ್ಲಿ ನಮ್ಮನ್ನೂ ಜೊತೆಗೆ ಕೊಂಡೊಯ್ಯುತ್ತಿದ್ದೀರಿ...
ಇಷ್ಟ ಆಯ್ತು ನಿಮ್ಮ ಶೈಲಿ

ಸುಬ್ರಮಣ್ಯ said...

:-)

balasubramanya said...

ನೀವು ವರ್ಣಿಸಿ ಪರಿಚಯಿಸಿದ ಸುಂದರಿ ನಮ್ಮ ಮನಗೆದ್ದಿದ್ದಾಳೆ.ಪರ್ವತ ಪ್ರದೇಶದಲ್ಲಿ ಸಾಹಸ ಮೆರೆದು ಅದ್ಭುತ ಸೃಷ್ಟಿಸಿದ ಆ ಮಹಾನ್ ತಾಂತ್ರಿಕ ವರ್ಗಕ್ಕೆ ನನ್ನ ಸಲಾಂ.ದೇಶ ಯಾವುದಾದರೇನು ಅದು ನಮ್ಮ ಭೂಮಿಯ ಮೇಲೆ ಇದೆಯಲ್ಲವೇ.ನಮ್ಮ ಭೂಮಿಯ ಮೇಲೆ ಸ್ವರ್ಗ ಸೃಷ್ಟಿಸಿದ ಚೇತನಗಳಿಗೆ ನನ್ನ ನಮನಗಳು.ಹಾಗೆ ನಿರ್ಲಕ್ಷ್ಯಕ್ಕೆ ಒಳಗಾದ ನಮ್ಮ ದೇಶದ ಸುಂದರಿಯರ ಗೋಳು ಯಾರಿಗೆ ಕೇಳುತ್ತೆ ?? ಅನ್ನುವ ಪ್ರಶ್ನೆಗೆ ಉತ್ತರ ಸಿಗದೇ ಸಂಕಟವಾಗುತ್ತೆ.ನಿಮ್ಮ ಲೇಖನ ಚೆನ್ನಾಗಿದೆ ನಿಮಗೆ ಧನ್ಯವಾದಗಳು.

ಆನಂದ said...

ಫೋಟೋಗಳು ಚೆನ್ನಾಗಿವೆ.
ವರ್ಣನೆ ಕೂಡ ಸೊಗಸಾಗಿದೆ.

AntharangadaMaathugalu said...

ತುಂಬಾ ಸುಂದರ ಚಿತ್ರಗಳು ಗುರು ಸಾರ್. ನಿಮ್ಮ ಕಥೆಯೂ ಕುತೂಹಲಕರವಾಗಿದೆ. ಮಧ್ಯೆ ಬಳಸಿರುವ ಕನ್ನಡ ಹಾಡುಗಳು...ಪೂರಕವಾಗಿವೆ.... ಧನ್ಯವಾದಗಳು ಇಂತಹ ಸುಂದರ ತಾಣಗಳನ್ನು ನಮಗೂ ತೋರಿಸುತ್ತಿರುವುದಕ್ಕೆ..

ಶ್ಯಾಮಲ

V.R.BHAT said...

too good ! thanks

ರಾಜೇಶ್ ನಾಯ್ಕ said...

ಆ ಜಲಧಾರೆಗಳು... ಸುಂದರ. ಧನ್ಯವಾದ ಈ ಸರಣಿಗಾಗಿ. ಇನ್ನಷ್ಟು ಬರಲಿ ಬೇಗ....

sunaath said...

ನಮ್ಮ ಗುರುಮೂರ್ತಿಯವರು ಯಾವ ಸುಂದರಿಯ ಸೆಳೆತಕ್ಕೆ ಸಿಕ್ಕಿದರಪ್ಪಾ ಎಂದು ವಿಸ್ಮಯವಾಗಿತ್ತು. ನೀವು ಬರೆದ ವರ್ಣನೆಯನ್ನು ಓದುತ್ತಿದ್ದಂತೆ ಹಾಗು ಫೋಟೋಗಳನ್ನು ನೋಡುತ್ತಿದ್ದಂತೆ, Flam ನಿಜವಾಗಿಯೂ ಮೋಹಿನಿ ಎಂದೆನಿಸಿತು.

Nisha said...

:-)

Ittigecement said...

ಗುರುಮೂರ್ತಿಯವರೆ...

ಹಳೆಯ ಹಾಡುಗಳ ಇಂಚರ...
ಚಂದದ ಫೋಟೊಗಳ ಹೂರಣ..
ನಡೆಯಲಿ ನಿಮ್ಮ ಪ್ರವಾಸ ಕಥನ...

ಅಭಿನಂದನೆಗಳು...

Snow White said...

awesome pictures and video sir..nimma nirupane tumbaane chennagide..dhanyavadagalu sir hanchikondidakke :):)

ದೀಪಸ್ಮಿತಾ said...

ಛೇ! ನಿಮ್ಮನ್ನು ನೋಡಿದರೆ ಹೊಟ್ಟೆಉರಿಯುತ್ತದೆ. ಎಂತೆಂಥ ಸುಂದರಿಯರನ್ನು ನೋಡಿದೀರಿ ಎಂದು. ಒಳ್ಳೆಯ ಫೋಟೋಗಳು ಮತ್ತು ವಿವರಣೆ

Mohan Hegade said...

ಗುರುಜಿ,

ಆರಂಭದಲ್ಲಿ ಓ ಯಾವುದೊ ಸುಂದರ ಹುಡುಗಿಯ ಕತೆ ಅಂತ ತಿಳ್ಕಂಡಿ ಮಾರಾಯ. ಓದುತ್ತ ಹೋದಾಗ ಇದು ಪ್ರವಾಸ ಕತನ, ಅಲ್ಲದೆ ನನಗು ಹೋಗಿ ಬಂದಂಗೆ ಆತು ನೋಡು. ಸೂಪರ್ ಬರಹ ಎಂಥಹ ನಿರೂಪಣೆ ಜೊತೆ ಫೋಟೋಗಳು. ನಿಮ್ಮ ಕಾಲೇಜ್ ಜೀವನದಲ್ಲಿದ್ದ ಸಾಹಿತ್ಯಾಸಕ್ತಿ ಈಗ ಪರಿಪಕ್ವವಾಗಿದೆ ದೋಸ್ತಾ.

ದನ್ಯರಿ,

ಮೋಹನ್ ಹೆಗಡೆ

shravana said...

Hm.. no words to explain.. amazing beauty and hats off to the dedication of those engineers. I wish if we had the same dedicated and uncorrupted people to work for/with.. India could have been in such list. currently here beauty has been entangled with ugly. More I see those articles more I feel bad for our country.

Any ways am happy in a globalized view, for our mother earth. :) though not for mother India.

Just awesome place n views.. and good photos too.. :)

ಮನಮುಕ್ತಾ said...

nice photos & explanation..thanks.

SATISH N GOWDA said...

ನಿಮ್ಮ ಈ ಬರವಣಿಗೆ ತುಂಬಾ ಅದ್ಬುತವಾಗಿದೆ ಇಂಚರ ಸರ್ , ನಿಜವಾಗಲು ನಿಮ್ಮ ಬರವಣಿಗೆ ಓದುತ್ತಿದ್ದರೆ ಮನಸ್ಸಿನಲ್ಲಿ ಏನೋ ಪುಳಕ ,ನಮಗರಿವಿಲ್ಲ ದಂತೆ ಇನ್ನೊಂದು ಲೋಕ ಸೃಷ್ಟಿಯಾಗುತ್ತದೆ ಈ ಲಿಕಹನವನ್ನ್ ನೋಡುತ್ತಿದ್ದರೆ ಅಲ್ಲಿಗೆ , ಆ ಸುಂದರ ತಾಣಕ್ಕೆ ಹೋಗಿ ಬಂದಷ್ಟು ಹಿತವಾಗಿದೆ , ನಿಮ್ಮ ಸುಂದರಿ ಬಗ್ಗೆ ಇನ್ನಷ್ಟು ಹೇಳಿದ್ದರೆ ಚನ್ನಾಗಿತ್ತು .

SATISH N GOWDA
ನನ್ನ ಸ್ನೇಹಲೋಕ (ORKUT)
satishgowdagowda@gmail.com
ನನ್ನವಳ ಪ್ರೇಮಲೋಕ ( my blog)
http://nannavalaloka.blogspot.com/

ಸಾಗರದಾಚೆಯ ಇಂಚರ said...

ದಿನಕರ್ ಸರ್

ಮೊದಲ ಅಭಿಪ್ರಾಯಕ್ಕೆ ಧನ್ಯವಾದಗಳು

ಅಲ್ಲಿನ ವಿಷಮ ಪರಿಸ್ಥಿತಿಯಲ್ಲಿ ಸುರ್ನಗ ಮಾಡೋದು ಎಷ್ಟು ಕಷ್ಟ ಇರಬೇಕು ಆಲ್ವಾ

ನನಗೆ ಕೊಂಕಣ ರೈಲು ಮಾರ್ಗ ಮಾಡುವಾಗ ಅಲ್ಲಿನ ಕೆಲಸಗಾರರು ಪಟ್ಟ ಪರಿಶ್ರಮ ಓದಿದ ನೆನಪು ಇದೆ

ನಿಜಕ್ಕೂ ಅವರಿಗೆ ಒಂದು ಸಲಾಂ

ಸಾಗರದಾಚೆಯ ಇಂಚರ said...

jithendra hindumane ಸರ್

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಹೀಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಸವಿಗನಸು

ನಿಮಗೆ ಗೊತ್ತಿಲ್ಲದ ಸುಂದರಿ ಬಗ್ಗೆ ಹೇಗೆ ಬರೆಯೋದು ಹೇಳಿ :)

ಎಲ್ಲ ಸುಂದರಿಯರ ಬಗ್ಗೆ ಚುಟುಕಾಗಿ ನೀವು ಬರೆದು ಬಿಡ್ತೀರಾ

ನಂದು ಅದನ್ನು ದೊಡ್ಡದಾಗಿ ವರ್ನಿಸೋದು ಅಷ್ಟೇ

ನಿಮ್ಮ ಸುಂದರ ಅಭಿಪ್ರಾಯಕ್ಕ್ಕೆ ಥ್ಯಾಂಕ್ಸ್

ಮನಸಿನ ಮಾತುಗಳು said...

ಗುರುಮೂರ್ತಿ ಸರ್,
ಚನಾಗಿ ಬರದ್ದಿ... ಇಷ್ಟ ಆತು.. ಒಳ್ಳೆ ಮಾಹಿತಿ... :-) ನಿಮ್ಮ ನಿರೂಪಣೆ ಶೈಲಿ is good .. :-)

ಸಾಗರದಾಚೆಯ ಇಂಚರ said...

ಜಲನಯನ ಅಜಾದ್ ಸರ್

ನಿಮ್ಮ ಕವನ ಸಂಕಲನ ಕಾರ್ಯಕ್ರಮಕ್ಕೆ ಶುಭವಾಗಲಿ

ನಿಮ್ಮ ಸಾಧನೆ ಇನ್ನು ಹೆಚ್ಚಾಗಲಿ

ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಮಾಚಿಕೊಪ್ಪ ಸರ್

ನಗು ಬಹಳಷ್ಟನ್ನು ಹೇಳತ್ತೆ

ನಗ್ತಾ ಅಭಿಪ್ರಾಯ ಕೊಟ್ಟಿದ್ದಿರಾ

ಬರ್ತಾ ಇರಿ

ಸಾಗರದಾಚೆಯ ಇಂಚರ said...

nimmolagobba ಬಾಲು ಸರ್

ನೀವು ಹೇಳೋದು ನಿಜಾ

ನಮ್ಮ ದೇಶದ ಇಂಥಹ ಸುಂದರಿಯರಿಗೆ ಯಾರು ದಿಕ್ಕು ಹೇಳಿ

ಮನಸಿಗೆ ನೋವು ಆಗುತ್ತೆ, ನಮ್ಮಲ್ಲಿ ಅಷ್ಟೊಂದು ಪ್ರಕ್ರತಿ ಸಂಪತ್ತು ಇದ್ರೂ ನಾವು ಸರಿಯಾಗಿ

ಅದನ್ನು ಉಪಯೋಗಿಸಿಕೊಳ್ತಾ ಇಲ್ಲ

ಹೀಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಆನಂದ ಸರ್

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ನಾರ್ವೆ ಇರುವುದೇ ಹಾಗೆ

ಸೌಂದರ್ಯದ ಗಣಿ ಅದು

ಸಾಗರದಾಚೆಯ ಇಂಚರ said...

AntharangadaMaathugalu ಶಾಮಲ ಮೇಡಂ

ನಿಮ್ಮ ಮಾತುಗಳು ನನಗೆ ಬರೆಯಲು ಇನ್ನೂ ಸ್ಪೂರ್ತಿ ನೀಡಿವೆ

ನಂಗೆ ಆ ಹಾಡುಗಳೆಲ್ಲ ಅಲ್ಲಿ ನೆನಪಾದವು

ಮೊಬೈಲ್ ನಲ್ಲಿ ಹುಡುಕಿದೆ ಆ ಹಾಡು ಇದೆಯಾ ಎಂದು

ಆದರೆ ಸಿಗಲಿಲ್ಲ

ಸಿಕ್ಕಿದ್ದರೆ ಅಲ್ಲಿಯೇ ಹಾಕಿಕೊಂಡು ಕೇಳುತ್ತಿದ್ದೆ

ಸಾಗರದಾಚೆಯ ಇಂಚರ said...

ವಿ.ಆರ್.ಭಟ್ ಸರ್

ಥ್ಯಾಂಕ್ಸ್

ಹೀಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

ರಾಜೇಶ್ ನಾಯ್ಕ ಸರ್

ಆ ದೇಶ ಇರೋದೇ ಹಾಗೆ

ಅದೊಂದು ಭೂಲೋಕದ ಸ್ವರ್ಗ

ಬರ್ತಾ ಇರಿ

ಸಾಗರದಾಚೆಯ ಇಂಚರ said...

sunaath ಸರ್

ನಾರ್ವೆಯ ಮೋಹಿನಿ ಯ ಸೆಳೆತಕ್ಕೆ ಸಿಕ್ಕಿ ಇನ್ನೂ ಹೊರಗೆ ಬರೋಕೆ ಅಗ್ತಾ ಇಲ್ಲ

ಆ ಸೌಂದರ್ಯಕ್ಕೆ ಮೂಕ ವಿಸ್ಮಿತ ನಾಗಿದ್ದೇನೆ

ಇನ್ನೊಮ್ಮೆ ಹೋಗುವ ಬಯಕೆ ಹೆಚ್ಚಾಗ್ತಾ ಇದೆ

ಸಾಗರದಾಚೆಯ ಇಂಚರ said...

Nisha

thanks for the smile

keep coming

ಸಾಗರದಾಚೆಯ ಇಂಚರ said...

ಸಿಮೆಂಟು ಮರಳಿನ ಮಧ್ಯೆ ಪ್ರಕಾಶಣ್ಣ

ನಿಮ್ಮ ಮೆಚ್ಚುಗೆಗೆ ವಂದನೆಗಳು

ನೀವೇ ಬ್ಲಾಗ್ ಸ್ನೇಹಿತರು ಬರೆಯಲು ಪ್ರೇರೆಪಿಸುತ್ತಿರಿ

ನಿಮ್ಮನ್ನೆಲ್ಲ ಬ್ಲಾಗ್ ಲೋಕ ನೀಡಿದೆ

ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

Snow White

thanks for your comments

bartaa iri

ಸಾಗರದಾಚೆಯ ಇಂಚರ said...

ದೀಪಸ್ಮಿತಾ

ನೋಡಿ, ನಿಮಗೂ ಒಂದು ದಿನ ಸುಂದರಿಯರ ನೋಡುವ ಅವಕಾಶ ಸಿಗಲಿ :)

ಹೊಟ್ಟೆ ಜಾಸ್ತಿ ಉರಿಸ್ಕೊಬೇಡಿ, ದೇಹಕ್ಕೆ ಒಳ್ಳೇದಲ್ಲ :)

ಅಭಿಪ್ರಾಯಕ್ಕೆ ಧನ್ಯವಾದಗಳು

ಬರ್ತಾ ಇರಿ

ಸಾಗರದಾಚೆಯ ಇಂಚರ said...

Mohan Hegade ಸರ್

ನಿನಗೆ ಗೊತ್ತಿದ್ದಂತೆ ಕಾಲೇಜ್ ದಿನಗಳಲ್ಲಿ ಸಾಹಿತ್ಯದ ಕೃಷಿ ಈಗ ಸಹಾಯ ಮಾಡ್ತಾ ಇದ್ದು

ನಿಂಗ್ಲಂತ ಓದುಗರು ಇರದ್ರಿಂದ ಬರೆಯಲೇ ಸ್ಪೂರ್ತಿ ಸಿಗ್ತು

ಥ್ಯಾಂಕ್ಸ್ ರೀ

ಬರ್ತಾ ಇರಿ

ಸಾಗರದಾಚೆಯ ಇಂಚರ said...

shravana

you are right

i also got same kind of feelings

more i see these countries, more i felt bad about my country

we have everything but bloody politics ruined everything

hope for the best

thanks for the comments

keep coming

ಸಾಗರದಾಚೆಯ ಇಂಚರ said...

ಮನಮುಕ್ತಾ


thanks for the comments

keep visiting

ಸಾಗರದಾಚೆಯ ಇಂಚರ said...

SATISH N GOWDA ಸರ್

ನಿಮ್ಮ ಮಾತುಗಳಿಗೆ ಧನ್ಯವಾದಗಳು

ಖಂಡಿತ ಮುಂದಿನ ವಾರ ಸುಂದರಿಯ ಇನ್ನಷ್ಟು ದರ್ಶನ ಮಾಡಿಸ್ತೀನಿ

ನಿಮ್ಮ ಮಾತುಗಳು ಬಹಳಷ್ಟು ಉತ್ಸಾಹ ನೀಡಿವೆ

ಬರ್ತಾ ಇರಿ

ಸಾಗರದಾಚೆಯ ಇಂಚರ said...

ದಿವ್ಯಾ

ಸರ್ ಎಲ್ಲ ಕರೆಯಡ , ಗುರುಮೂರ್ತಿ ಹೇಳಿ ಸಾಕು :)

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ನಿಂಗಕಿಗೆ ಇಷ್ಟ ಆದ್ರೆ ಅದೇ ಸಂತೋಷ

ಹೀಗೆ ಬರ್ತಾ ಇರಿ

ಸಾಗರಿ.. said...

ಗುರು ಅವರೇ,
ಬೆಂಗಳೂರಲ್ಲಿ ಕುಳಿತು ಯುರೋಪ್ ಸುತ್ತಿಸುತ್ತಿದ್ದೀರಿ, ಕುರಡನಿಗೆ ಕಣ್ಣಿಗೆ ಕಟ್ಟಿದಂತೆ ವಿವರಿಸುವುದು ಹೇಗೋ ಹಾಗೆ.. ಕಾಣದವರಿಗೆ ಕಂದಿದ್ದನ್ನು ಅನುಭವಿಸಿದ್ದನ್ನು ವಿವರಿಸೋದು. ಬಹಳ ಚೆನ್ನಾಗಿದೆ ವಿವರಣೆ, ಫೋಟೋ ಮತ್ತು Flam

ಸಾಗರದಾಚೆಯ ಇಂಚರ said...

ಸಾಗರಿ

ನಿಮ್ಮ ಮಾತು ದೊಡ್ಡದು

ನಿಮಗೆಲ್ಲ ಇಷ್ಟವಾದರೆ ಅದೇ ಸಂತೋಷಾ

ಬರ್ತಾ ಇರಿ

ಏನಾದರು ಹೊಸದನ್ನು ಕೊಡೊ ಪ್ರಯತ್ನ ಮಾಡ್ತಾ ಇರ್ತೀನಿ

ಮನಸು said...

very nice guru, nimma jote naavu tripge hoda haage aytu

SANTOSH MS said...

Sir,
Beautiful and mind blowing place. The description is also very good.

Subrahmanya said...

Oh !. ಅದ್ಭುತವಾಗಿದೆ ಸರ್. ಎಂತಹ ಅದ್ಭುತವನ್ನು ಪರಿಚಯಿಸಿದ್ದೀರಿ. ವಿವರಣೆಯೂ ಪ್ರವಾಸ ಮಾಡುತ್ತಿರುವಂತಯೇ ಇದೆ. ತುಂಬ Thanks.

PARAANJAPE K.N. said...

ಚಿತ್ರ-ಲೇಖನ ಎರಡೂ ಸೂಪರ್, ಬಹಳ ರಸವತ್ತಾಗಿ, ಅನುಭವಿಸಿ ಬರೆದಿದ್ದೀರಿ, ಪ್ರತಿ ವಿವರಣೆಯೂ ರಸಭರಿತವಾಗಿದೆ.

ಸಾಗರದಾಚೆಯ ಇಂಚರ said...

ಮನಸು

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಓದುಗರ ಪ್ರತಿಕ್ರಿಯೆ ನಮಗೆ ಟಾನಿಕ್ ಆಲ್ವಾ\

ಬರ್ತಾ ಇರಿ

ಸಾಗರದಾಚೆಯ ಇಂಚರ said...

Santhosh

thanks for the comments

keep visiting

ಸಾಗರದಾಚೆಯ ಇಂಚರ said...

Subrahmanya ಸರ್

ನಿಮ್ಮ ಮಾತುಗಳು ಬರೆಯೋಕೆ ಉತ್ಸಾಹ ಕೊಡುತ್ತೆ

ಬರ್ತಾ ಇರಿ
ಬರಿತ ಇರ್ತೀನಿ

ಸಾಗರದಾಚೆಯ ಇಂಚರ said...

PARAANJAPE ಸರ್

ನಿಮ್ಮ ಆಶಿರ್ವಾದ ಸದಾ ಇರಲಿ

ನಿಮ್ಮ ಮಾತಗಳಿಗೆ ವಂದನೆಗಳು

ಬರುತ್ತಿರಿ

Dr.D.T.Krishna Murthy. said...

super article and photos.

ಸಾಗರದಾಚೆಯ ಇಂಚರ said...

Dr.Krishnamurthy Sir

thanks for your comments

keep visiting

Ash said...

Awesome captures & an aweswome read too.... Kudos!!!!

Ash...
(http://asha-oceanichope.blogspot.com/)

ಸಾಗರದಾಚೆಯ ಇಂಚರ said...

Asha

thanks for the comments

keep visiting

ಸೀತಾರಾಮ. ಕೆ. / SITARAM.K said...

ಚೆಂದದ ಮಾಹಿತಿ. ಪ್ರವಾಸಕಥನ ಹೇಳಿದ ಶೈಲಿ ತುಂಬಾ ಇಸ್ತ್ತವಾಯಿತು. ಸುಂದರ ಛಾಯಾಚಿತ್ರಗಳು ಮನಸೆಳೆದವು.

ಸಾಗರದಾಚೆಯ ಇಂಚರ said...

ಸೀತಾರಾಮ್ ಸರ್

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಆ ದೇಶವೇ ಹಾಗೆ

ಸೌಂದರ್ಯದ ತವರು ಅಂದರೂ ತಪ್ಪಿಲ್ಲ

ಬರುತ್ತಿರಿ

ರಾಘವೇಂದ್ರ ಹೆಗಡೆ said...

ತುಂಬಾ ಸೊಗಸಾಗಿ ಬರೆದಿದ್ದೀರಿ ಸರ್..
ಚಿತ್ರಗಳೆಲ್ಲ ಮನಸ್ಸಿಗೆ ಆಪ್ತವಾಗುತ್ತವೆ.

ಸಾಗರದಾಚೆಯ ಇಂಚರ said...

ರಾಘವೇಂದ್ರ ಹೆಗಡೆ

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಬರುತ್ತಿರಿ

ಪ್ರವೀಣ್ ಭಟ್ said...

oh .. mast iddo anna..

sachitra varadi kannu munde kattida haage iddu.. sakkaththagi explain madidde. bega next part haku ... avalanna nodade iradu hege? istella kasta pattu nodakke baindi !!!!

salam to those engineers!!!!

ವೆಂಕಟೇಶ್ ಹೆಗಡೆ said...

very nice article gurumurty ,and nice photography

ವೆಂಕಟೇಶ್ ಹೆಗಡೆ said...

very nice article gurumurty ,and nice photography

ಶಿವಪ್ರಕಾಶ್ said...

:) :) wonderful place

ಸಾಗರದಾಚೆಯ ಇಂಚರ said...

ಪ್ರವೀಣ್ ಭಟ್

ನಿನ್ನ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಖನಿಡ್ತ ಆ ಸುಂದರಿ ಬಗ್ಗೆ ಬೇಗ ಹೇಳ್ತಿ

ನೀನು ಮಾತ್ರ ಬರದೆ ಹೋಗಡ

ಹಿಂಗೆ ಬರ್ತಾ ಇರು

ಸಾಗರದಾಚೆಯ ಇಂಚರ said...

ನನ್ನೊಳಗಿನ ಕನಸು

ತುಂಬಾ ಧನ್ಯವಾದ

ಫೋಟೋಗ್ರಫಿ ಕಲಿಯುವ ವಿಧ್ಯಾರ್ಥಿಯಂತೆ ನಾನು

ಇನ್ನು ಪರಿಪಕ್ವ ಆಗಿಲ್ಲ

ಬರುತ್ತಿರಿ

ಸಾಗರದಾಚೆಯ ಇಂಚರ said...

ಶಿವಪ್ರಕಾಶ್

thank you so much
keep visiting

Gubbachchi Sathish said...

ಹೆಣ್ಣು ಪ್ರಕೃತಿಯೆನ್ನುತ್ತಾರೆ. ರಸಿಕತನದ ಜೊತೆಗೆ ಒಳ್ಳೆಯ ಆಸ್ವಾದವಿದೆ. ಮುಂದಿನ ಪೋಸ್ಟಿಗೆ ಕೂತುಹಲವಿದೆ.

ಸಾಗರದಾಚೆಯ ಇಂಚರ said...

ಸತೀಶ್ ಸರ್

ಬ್ಲಾಗಿಗೆ ಸ್ವಾಗತ

ಬರ್ತಾ ಇರಿ

ಹೆಣ್ಣು ಪ್ರಕ್ರತಿ

ನಿಜ

ಚಿತ್ರಾ said...

ಗುರು ,
ಚಂದದ ' ನಾರ್ವೆ' ಯ ಬಗ್ಗೆ ಸುಂದರ ನಿರೂಪಣೆ. ಖುಷಿ ಆಗ್ತಾ ಇದ್ದು. ಫೋಟೋ ದಲ್ಲಿನ ಪರ್ವತ, ಪ್ರಕೃತಿ ಸೌಂದರ್ಯ ಎಲ್ಲಾ ನೋಡಕಾದ್ರೆ ನನ್ನ ಹಿಮಾಲಯ ಪ್ರವಾಸ ನೆನಪಾಗ್ತಾ ಇದ್ದು . ಮುಂದುವರಿಯಲಿ ಪ್ರವಾಸ..

nenapina sanchy inda said...

wow. vivareNe kaNNige kaTTidaMte ittu. katheyendu Odida 'flam' kathaanaka romachakaariyaagide.
nice photos, especially the first one.
:-)
malathi S

Manasa said...

Too good discription and nice photography :)

Shiv said...

ಗುರು ಅವರೇ,

ಸುಂದರ ಪ್ರವಾಸಕ್ಕೆ ಕರೆದೊಯ್ದದಕ್ಕೆ ವಂದನೆಗಳು.
ಮೋಹಕವಾಗಿತ್ತು ನಿರೂಪಣೆ ಮತ್ತು ಚಿತ್ರಗಳು-ವಿಡಿಯೋ ಸಹ !
ಮುಂದಿನ ಕಂತಿಗಾಗಿ ನೋಡುತ್ತಾ..

ಮನಸಿನಮನೆಯವನು said...

ಚೆನ್ನಾಗಿದೆ..
ಬೇಗ ಚೆಲುವೆಯನ್ನು ಕಣ್ಮುಂದೆ ತನ್ನಿ..

SATISH N GOWDA said...

ಮಳೆಯಲಿ ಜೊತೆಯಲಿ ಚಿತ್ರದ ಸವಿ ನೆನೆಪು ನನ್ನವಳಜೋತೆ
ನೋಡಲು ಇಲ್ಲಿ ಕ್ಲಿಕ್ಕಿಸಿ ...
http://nannavalaloka.blogspot.com/2010/01/blog-post_06.html

ಸಾಗರದಾಚೆಯ ಇಂಚರ said...

ಚಿತ್ರಾ

ನೀನು ಹಿಮಾಲಯಕ್ಕೆ ಹೋಗಿದ್ದ ನೆನಪುಗಳನ್ನು ಬರೆಯೆ

ನಿಜ, ನಾರ್ವೆ ಪ್ರವಾಸ ಮರೆಯಲೇ ಸಾದ್ಯ ಇಲ್ಲೇ ನೋಡು

ಸಾಗರದಾಚೆಯ ಇಂಚರ said...

nenapina sanchy inda

ನಿಮ್ಮ ಅಭಿಉಪ್ರಾಯಕ್ಕೆ ವಂದನೆಗಳು

ಶತ ಶತಮಾನಗಳಿಂದ ಸೌಂದರ್ಯವನ್ನೇ ಒಡಲ್ಲಲ್ಲಿ ಇಟ್ಟುಕೊಂಡಿರುವ ನಾರ್ವೆ

ಸೋಜಿಗದ ಕಡಲು

ಸಾಗರದಾಚೆಯ ಇಂಚರ said...

Manasa

thanks for your words,

keep coming

ಸಾಗರದಾಚೆಯ ಇಂಚರ said...

Shiv ಸರ್

ಖಂಡಿತ ಬೇಗ ಮುಂದಿನ ಕಂತು ಹಾಕ್ತೀನಿ

ನೀವು ಬರೋದು ಮರಿಬೇಡಿ

ಸಾಗರದಾಚೆಯ ಇಂಚರ said...

- ಕತ್ತಲೆ ಮನೆ..

ಶೀಘ್ರದಲ್ಲಿ ಚೆಲುವೆ ನಿಮ್ಮ ಮುಂದೆ

ಬನ್ನಿ

ಕಾಯುತ್ತಿರುವೆ

ಸಾಗರದಾಚೆಯ ಇಂಚರ said...

Satish sir

thank you