Wednesday, July 7, 2010

ಅರಳಿದಂತೆ ಸುಮವು ........

ಬದುಕು ಕೇವಲ ಮೂರು ದಿನದ್ದು, ಆ ಮೂರು ದಿನದ ಬಾಳಿನಲ್ಲಿ ಸಂಕಷ್ಟಗಳು ಬರುತ್ತವೆ ಹೋಗುತ್ತವೆ. ಹಾಗೆಂದೂ ಸುತ್ತಲೂ ಕತ್ತಲಿದೆ, ಎಲ್ಲಿಯದು ಬೆಳಕು  ಎಂದು ಪ್ರತಿಕ್ಷಣವೂ ಕಣ್ಣೀರಿಡುತ್ತಾ ಕುಳಿತರೆ ನಗುವೇ ಮಾಯವಾಗಿ ಬಿಡುತ್ತದೆ. ನಗು ಎಂತಹ ವಿರಕ್ತನಲ್ಲೂ ಹೊಸ ಚಲನೆ ಎಬ್ಬಿಸುತ್ತದೆ. ಸದಾ ಬದುಕಿಗೆ ಮರುಗದೆ ಪ್ರತಿದಿನವೂ ಹೊಸ ಕ್ಷಣದಂತೆ ಭಾವಿಸಿ ಮುನ್ನುಗ್ಗಬೇಕು. ನಮ್ಮ ಬಗ್ಗೆ ಏನು ಹೇಳುತ್ತಾರೆ ಎಂಬ ಬಗ್ಗೆ ಚಿಂತೆ ಬೇಡ. ಜನರಿರುವುದೇ ಅದಕ್ಕೆ. ಅವರು ಅವರಷ್ಟಕ್ಕೆ ಹೇಳುತ್ತಿರುತ್ತಾರೆ. ನಾವು ನಮ್ಮಷ್ಟಕ್ಕೆ ಸಾಧನೆಯ ಹಾದಿಯಲ್ಲಿ ಹೆಜ್ಜೆಯಿಡಬೇಕು. ಕನಸುಗಳನ್ನು ಹೊಸೆದರಷ್ಟೇ ಸಾಲದು. ಅದನ್ನು ನನಸಾಗಿಸುವಲ್ಲಿ ನಮ್ಮ ಪ್ರಯತ್ನ ಅಗತ್ಯ. ಬದುಕು ಹೂವಿನಂತೆ ಸದಾ ಅರಳುತ್ತಿರಬೇಕೆ ಹೊರತು ನರಳುತ್ತಿರಬಾರದು  ನಿನಗೆ ನೀನೆ ಗೆಳೆಯ, ನಿನಗೆ ನೀನೆ ಗೆಳತಿ. ಬದುಕು ಧನಾತ್ಮಕತೆಗೆ ಸಾಗಲಿ ಎಂಬುದು ಕವನದ ಆಶಯ 


ಮನಸಿನಲಿ ಸ್ವಚ್ಛಂಧ ಮಗುವಿನಂತಹ ನಗುವು
ಮರೆಯದ ಛಾಯೆ, ನಿನ್ನ ಗೆಳತನವು
ನೀನಿರದ ಅರೆಕ್ಷಣವು ಮರೆತಂತೆ ಸೂರ್ಯ
ಸುತ್ತಲೂ ಕತ್ತಲಿರೆ  ಬೆಳಕು  ಅನಿವಾರ್ಯ

ತಿಳಿನೀಲ ಆಗಸದಿ ಹುಣ್ಣಿಮೆಯ ಚಂದ್ರ
ಸುವಿಶಾಲ ಪ್ರಥ್ವಿಯಲಿ ಬೆಳಗಿಹುದು ಅಂದ
ನೀನೆಂಬ ನಾನು, ನಾನಾಗಿ ನೀನು
ಸ್ನೇಹದ  ಪರಿಧಿಯಿರೆ, ಬೇಕಿಲ್ಲ  ಏನೂ 
  
ಮರೆತುಬಿಡು ಎಲ್ಲವನು, ನೋವಿರಲಿ ನನಗೆ
ಹರಿಯಬಿಡು ಬದುಕನ್ನು, ನಲಿವಿರಲಿ ನಿನಗೆ
ಲೋಕದಲ್ಲಿ ನೂರೆಂಟು ಜನರಿಹರು ಗೆಳತಿ
ನಿನ್ನ ಮನೆಕೆ ನೀನೆ ಎಂದಿಗೂ ಒಡತಿ

ಚಲನೆಯಿದೆ ಚಲಿಸುತಿದೆ ಚಿತ್ತಾರ ಮನಸು
ಅಂತರಂಗದಿ ಕುಳಿತ ವಿಸ್ತಾರ ಕನಸು  
ಸಾಧನೆಯು ಬಾಡದಿರೆ, ಬದುಕಿಹುದು ಮೂರೇ ದಿನ
ನಿನ್ನೊಳಗೆ ಉಳಿಯದಿರು, ಎದ್ದು ಬಾ ಅನುದಿನ 

80 comments:

SANTOSH MS said...

Guru Sir,

Super poem. Really good concept and nicely explained. Has lot of essence in it.

Nisha said...

Chendada Kavana. ಮರೆತುಬಿಡು ಎಲ್ಲವನು, ನೋವಿರಲಿ ನನಗೆ
ಹರಿಯಬಿಡು ಬದುಕನ್ನು, ನಲಿವಿರಲಿ ನಿನಗೆ
ಲೋಕದಲ್ಲಿ ನೂರೆಂಟು ಜನರಿಹರು ಗೆಳತಿ
ನಿನ್ನ ಮನೆಕೆ ನೀನೆ ಎಂದಿಗೂ ಒಡತಿ
Ee salugalu thumba ista aithu.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

"ಲೋಕದಲ್ಲಿ ನೂರೆಂಟು ಜನರಿಹರು ಗೆಳತಿ
ನಿನ್ನ ಮನೆಕೆ ನೀನೆ ಎಂದಿಗೂ ಒಡತಿ

ಚಲನೆಯಿದೆ ಚಲಿಸುತಿದೆ ಚಿತ್ತಾರ ಮನಸು
ಅಂತರಂಗದಿ ಕುಳಿತ ವಿಸ್ತಾರ ಕನಸು
ಸಾಧನೆಯು ಬಾಡದಿರೆ, ಬದುಕಿಹುದು ಮೂರೇ ದಿನ
ನಿನ್ನೊಳಗೆ ಉಳಿಯದಿರು, "
----------------
ಸುಂದರ ಕವನ.ಚೆನ್ನಾಗಿದೆ.

ಸಾಗರದಾಚೆಯ ಇಂಚರ said...

Santhosh

thanks for your quick responce

keep visiting

ಸಾಗರದಾಚೆಯ ಇಂಚರ said...

ನಿಶಾ ಮೇಡಂ,
ನಿಮಗೆ ಇಷ್ಟಾ ಆದ್ರೆ ನನಗೆ ಸಂತೋಷ
ನಿಮ್ಮೆಲ್ಲರ ಆಶಿರ್ವಾದ ಸದಾ ಇರಲಿ

ಸಾಗರದಾಚೆಯ ಇಂಚರ said...

ವೆಂಕಟಕ್ರಷ್ಣ ಸರ್
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಸದಾ ಬರ್ತಾ ಇರಿ
ಏನಾದ್ರು ಹೊಸದನ್ನು ಕೊಡ್ತಾ ಇರ್ತೀನಿ

Swathi Bhat said...

nice one.. i liked the lines u hv written before the pic..

ಸಾಗರದಾಚೆಯ ಇಂಚರ said...

Swati

thanks for your comments
keep visiting

Raghu said...

ನೋವನ್ನು ಮರೆತು ನಲಿವಿನ ಹೆಜ್ಜೆ ಹಾಕುವ ಕವನ ಚೆನ್ನಾಗಿದೆ.
ನಿಮ್ಮವ,
ರಾಘು.

Dr.D.T.Krishna Murthy. said...

ಗುರೂ ಸರ್ ;ತುಂಬಾ ಒಳ್ಳೆಯ ಭಾವಪೂರ್ಣ,ಅರ್ಥಪೂರ್ಣ ಕವನ!ಇಂತಹ ಇನ್ನೂ ಒಳ್ಳೆಯ ಕವನಗಳು ನಿಮ್ಮಿಂದ ಬರಲಿ ಎನ್ನುವ ಹಾರೈಕೆ.

Amit Hegde said...

ಕವನ ತುಂಬಾ ಚೆನ್ನಾಗಿದೆ... keep up the good work.. :)

ದಿನಕರ ಮೊಗೇರ said...

ಡಾ. ಗುರು ಸರ್,
ಸುಂದರ ಕವನ, ಜೀವನ ಉತ್ಸಾಹ ತುಂಬುವ ಕವನಕ್ಕೆ ತುಂಬಾ ಧನ್ಯವಾದ ಸರ್....
ಪ್ರತೀ ಸಾಲುಗಳೂ ಅದರದ್ದೇ ಆದ ತೂಕ ಹೊಂದಿವೆ ಸರ್.....

ಚುಕ್ಕಿಚಿತ್ತಾರ said...

sundaravaada kavana..
ನಿನ್ನ ಮನೆಕೆ ನೀನೆ ಎಂದಿಗೂ ಒಡತಿ...saalu sadaa satya..

balasubramanya said...

ಗುರುಮೂರ್ತಿ ಸರ್ ನನಗೆ ತುಂಬಾ ಇಷ್ಟವಾದ ಕವನ ಮೂಡಿಬಂದಿದೆ. ನಮ್ಮ ಬದುಕೂ ಈ ಪುಷ್ಪದಂತೆ ಎಂಬ ಹೋಲಿಕೆ ಅರ್ಥ ಪೂರ್ಣವಾಗಿದೆ. ನನ್ನ ಪ್ರೀತಿಯ ಶುಭಾಶಯಗಳು.

Uday Hegde said...

Meaningful and inspirational poem..enjoyed it.

sunaath said...

ಗುರುಮೂರ್ತಿಯವರೆ,
ಸೊಗಸಾದ ಭಾವಗೀತೆಗಳ ಮೂಲಕ ಮನಸ್ಸಿಗೆ ಸಂತೋಷ ನೀಡುತ್ತಿದ್ದೀರಿ. ಇದು ಮುಂದುವರೆಯಲಿ.

ವಾಣಿಶ್ರೀ ಭಟ್ said...

murthi anna.. wordings super and even meaning...

ಮನಸು said...

super kavana........

ಸಾಗರದಾಚೆಯ ಇಂಚರ said...

ಕ್ರಷ್ಣಮುರ್ತಿ ಸರ್
ನಿಮ್ಮ ಅಶಿರ್ವಾದವಿದ್ದರೆ ಖಂಡಿತ ಬರುತ್ತೆ ಒಳ್ಳೆಯ ಕವನಗಳು
ಹೀಗೆಯೇ ಬರುತ್ತಿರಿ
ತಿದ್ದುತ್ತಿರಿ

ಸಾಗರದಾಚೆಯ ಇಂಚರ said...

ರಘು ಸರ್
ಬದುಕೇ ಹಾಗೆ, ನೋವನ್ನ ಮರಿಬೇಕು
ನಲಿವು ಕಾಣಬೇಕು
ಅಲ್ಲವ

ಸಾಗರದಾಚೆಯ ಇಂಚರ said...

ಅಮಿತ್ ಸರ್
ಬರ್ತಾ ಇರಿ

ಸಾಗರದಾಚೆಯ ಇಂಚರ said...

ದಿನಕರ್ ಸರ್
ನಿಮ್ಮ ಮಾತುಗಳು ಬರೆಯಲು ಇನ್ನಷ್ಟು ಹೆಚ್ಚಿನ ಬಲ ನೀಡಿವೆ.
ಹೀಗೆಯೇ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಚುಕ್ಕಿ ಚಿತ್ತಾರ
ನಮ್ಮ ಮನಸನ್ನ ನಾವೇ ನಿಯಂತ್ರಿಸಬೇಕು
ಅದನ್ನ ಇನ್ನೊಬ್ರಿಗೆ ಕೊಟ್ರೆ ಬೇಕಾದ ಹಾಗೆ ಕುಣಿಸ್ತಾರೆ ಅಲ್ವ

ಸಾಗರದಾಚೆಯ ಇಂಚರ said...

ನಿಮ್ಮೊಳಗೊಬ್ಬ,
ಬದುಕು ಹೂವಿನ ಹಾಗೆ ಅರಳಿದರೆ ಚೆಂದ, ಬಾಡಿದರೆ ಬೇಸರ
ಅರಳುವ ಹೂವು ಹೊಸ ಭರವಸೆ, ನೀರೀಕ್ಷೆ ಕೊಡುತ್ತದೆ
ಅದಕ್ಕೆ ಹೋಲಿಕೆ
ಬರುತ್ತಿರಿ

ಸಾಗರದಾಚೆಯ ಇಂಚರ said...

Uday

thanks for your nice comments

keep coming

ಸಾಗರದಾಚೆಯ ಇಂಚರ said...

ಸುನಾಥ್ ಸರ್
ನಿಮ್ಮ ಮಾತುಗಳು ಹೆಮ್ಮೆ ಎನಿಸುತ್ತಿವೆ
ಖಂಡಿತ ಆದಷ್ಟು ಒಳ್ಳೆಯ ಕವನ ಕೊಡಲು ಪ್ರಯತ್ನಿಸುವೆ
ಬರುತ್ತಿರಿ

ಸಾಗರದಾಚೆಯ ಇಂಚರ said...

Vanishri

thanks for the comments

keep visiting

ಸಾಗರದಾಚೆಯ ಇಂಚರ said...

ಮನಸು
ಧನ್ಯವಾದ ಅಭಿಪ್ರಾಯಕ್ಕೆ
ಬರ್ತಾ ಇರಿ

Ganapati Bhat said...

ನೀನೆಂಬ ನಾನು, ನಾನಾಗಿ ನೀನು
ಸ್ನೇಹದ ಪರಿಧಿಯಿರೆ, ಬೇಕಿಲ್ಲ ಏನೂ
.............ವಾವ್
ಹಿಂಗೆ ಬರೀತಾ ಇರು

ಸೀತಾರಾಮ. ಕೆ. / SITARAM.K said...

ತುಂಬಾ ಸು೦ದರವಾದ ಸರಳ ಮಹದಾಸೆಯ ಕವನ!!

ಅನಂತ್ ರಾಜ್ said...

ಚಲನೆಯಿದೆ ಚಲಿಸುತಿದೆ ಚಿತ್ತಾರ ಮನಸು
ಅಂತರಂಗದಿ ಕುಳಿತ ವಿಸ್ತಾರ ಕನಸು ..
ಅಧ್ಭುತ ಕಲ್ಪನೆ, ಜೋಡಣೆ, ಭಾವ, ಪ್ರಾಸ..ಎಲ್ಲ ಸಕತ್ matching..
ಶುಭಾಶಯಗಳು.. ಡಾ.

ಅನ೦ತ್

Subrahmanya said...

ಮತ್ತೊಂದು ಭಾವಪೂರ್ಣ ಕವಿತೆಯೊಂದಿಗೆ ಮನತಣಿಸಿದಿರಿ. ನಿಮ್ಮ ಭಾವನೆಗಳು ಕವಿತೆಗಳಾಗಿ ಹರಿದುಬರಲಿ.

shivu.k said...

ಗುರುಮೂರ್ತಿ ಸರ್,

ನೋವನ್ನು ಮರೆತು ನಲಿವಿನೆಡೆಗೆ ಸಾಗುವಂತಹ ವಿಚಾರ.

ಉತ್ತಮವಾದ ಅರ್ಥಗರ್ಭಿತವಾದ ಕವನ.

ಮನದಾಳದಿಂದ............ said...

ಗುರುಮೂರ್ತಿ ಸರ್,
ಸುಂದರ ಕವನ,
ಮನಮಿಡಿಸುವ ಸಾಲುಗಳು.

Unknown said...

sir tumba chendada kavana baredidira

shridhar said...

Guru Sir,
Kavana Chennagide ...

ಚಲನೆಯಿದೆ ಚಲಿಸುತಿದೆ ಚಿತ್ತಾರ ಮನಸು
ಅಂತರಂಗದಿ ಕುಳಿತ ವಿಸ್ತಾರ ಕನಸು
ಸಾಧನೆಯು ಬಾಡದಿರೆ, ಬದುಕಿಹುದು ಮೂರೇ ದಿನ
ನಿನ್ನೊಳಗೆ ಉಳಿಯದಿರು, "

IShatvaytu ...

ಸಾಗರದಾಚೆಯ ಇಂಚರ said...

ಗಣಪತಿ ಭಟ್
ನಿನಗೆ ಇಷ್ಟ ಆಗಿದ್ದಕ್ಕೆ ನಂಗೆ ಖುಷಿ
ಹಿಂಗೆ ಬರ್ತಾ ಇರಪ್ಪ

ಸಾಗರದಾಚೆಯ ಇಂಚರ said...

ಸೀತಾರಾಮ್ ಸರ್
ನಿಮ್ಮ ಪ್ರೀತಿಯ ಹಾರೈಕೆಗೆ ಸದಾ ಚಿರ ಋಣಿ
ಬರುತ್ತಿರಿ

ಸಾಗರದಾಚೆಯ ಇಂಚರ said...

ಅನಂತ್ ಸರ್
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ನಿಮ್ಮೆಲ್ಲರ ಪ್ರೀತಿಯೇ ಬರೆಯಲು ಪ್ರೇರೇಪಿಸುತ್ತದೆ,
ಹೊಸತನ್ನು ನೀಡುವ ಪ್ರಯತ್ನ ನನ್ನದು

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಸರ್
ಪ್ರೀತಿಯ ಅಭಿಪ್ರಾಯಕ್ಕೆ ಧನ್ಯವಾದಗಳು
ಬರುತ್ತಿರಿ

ಸಾಗರದಾಚೆಯ ಇಂಚರ said...

ಶಿವೂ ಸರ್
ಬದುಕು ನಲಿಯುತ್ತಿದ್ದರೆ ಚೆನ್ನ
ಇಲ್ಲದಿರೆ ಬೇಸರ
ನೋವಿಗೆ ಜೊತೆಯಿಲ್ಲ ನಲಿವಿಗೆ ಮಿತಿಯಿಲ್ಲ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

ಮನದಾಳದಿಂದ
ಪ್ರತಿ ಕವನಕ್ಕೂ ಪ್ರೀತಿಯ ಅಭಿಪ್ರಾಯ ನೀಡುತ್ತಿರಿ
ಬರೆಯಲು ಉತ್ಸಾಹ ನಿಮ್ಮಂತ ಓದುಗರಿಂದ ಸಿಗುತ್ತದೆ
ಬರುತ್ತಿರಿ

ಸಾಗರದಾಚೆಯ ಇಂಚರ said...

VijayHavin

ಪ್ರೀತಿಯ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಬರುತ್ತಿರಿ ಬರೆಯುತ್ತಿರುವೆ

ಸಾಗರದಾಚೆಯ ಇಂಚರ said...

ಶ್ರೀಧರ
ನಿಮ್ಮೆಲ್ಲರ ಅಭಿಪ್ರಾಯ, ಪ್ರೋತ್ಸಾಹ ಮೂಕನನ್ನಾಗಿಸಿದೆ
ಬ್ಲಾಗ್ ಪ್ರಪಂಚ ಹೊಸ ಕಲ್ಪನೆ ನೀಡಿದೆ
ಬರುತ್ತಿರಿ

shravana said...

Very inspirational.. ತುಂಬಾ ಇಷ್ಟವಾಯಿತು..:)

ಸವಿಗನಸು said...

Guru,
ಕವನ ತುಂಬಾ ಚೆನ್ನಾಗಿದೆ....
Keep writing

ಭಾಶೇ said...

ತುಂಬಾ ಚೆಂದದ ಕವನ

ಸಾಗರದಾಚೆಯ ಇಂಚರ said...

ಶ್ರಾವಣ
ಅಭಿಪ್ರಾಯಕ್ಕೆ ತುಂಬಾ ಥ್ಯಾಂಕ್ಸ್
ಬರ್ತಾ ಇರಿ

ಸಾಗರದಾಚೆಯ ಇಂಚರ said...

ಸವಿಗನಸು,
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಭಾಶೇ

ತುಂಬಾ ಥ್ಯಾಂಕ್ಸ್ ಅಭಿಪ್ರಾಯಕ್ಕೆ
ಹೀಗೆಯೇ ಬರ್ತಾ ಇರಿ

V.R.BHAT said...

ಪ್ರಾಸಬದ್ಧವಾಗಿ ಅರ್ಥಗರ್ಭಿತವಾಗಿ ಬರೆದಿದ್ದೀರಿ, ಹೌದು ಪ್ರತಿಯೊಬ್ಬರ ಜೀವನದಲ್ಲೂ ಹಲವು ಪಾತ್ರಗಳು ಬಂದುಹೊದರೂ ಮನಸ್ಸಿಗೆ ಅವರವರೇ ಒಡೆಯರು! ಮನೋ ನಿಗ್ರಹ ತುಂಬಾ ಕಷ್ಟದ ಕೆಲಸ, ಅದು ಕಡಿದಾದ ಹಿಮಾಲಯದ ಅತೀ ಎತ್ತರದ ಶಿಖರ ಏರುವ ಸಾಹಸ! ಪರಸ್ಪರ ಅರ್ಥವಾಗದಿದ್ದರೆ ಜಗತ್ತೇ ಶೂನ್ಯ, ಪರ್ವತದ ಕೆಳಗಿನ ಪ್ರಪಾತ ! ಈ ಅರಿಯುವಿಕೆ ಮತ್ತು ತಪ್ಪಾಗಿ ಅರಿಯುವಿಕೆ ಇವೆರಡಕ್ಕೆ ಇರುವುದು ಕೂದಲಿನ ಎಳೆಯ ಅಂತರ, ಒಮ್ಮೆ ತಪ್ಪಾಗಿ ಅರಿವಾದರೆ ಅದು ಹಲವಿ ತಪ್ಪಿಗೆ ಕಾರಣ, ಗೆಳತಿಗೆ ನಿಮ್ಮ ಸಂದೇಶ ಸ್ಪುಟವಾಗಿದೆ, ತಕ್ಕುದಾಗಿದೆ, ಚೆಂದದ ಕವನ, ಧನ್ಯವಾದಗಳು

ತೇಜಸ್ವಿನಿ ಹೆಗಡೆ said...

ತುಂಬಾ ಸುಂದರ ಆಶಯ. ಉತ್ತಮ ಅಕ್ವಿತೆ. ಬಲು ಇಷ್ಟವಾಯಿತು. ಚಿತ್ರ ಕೂಡ ಸೂಪರ್...

SSK said...

Nice one...!

Shiv said...

ಗುರು ಅವರೇ,

ನಿಮ್ಮ ಇಂಚರಕ್ಕೆ ಇದು ನನ್ನ ಮೊದಲ ಭೇಟಿ..
ಸೊಗಸಾಗಿ ಮೂಡಿಬರುತಿದೆ ನಿಮ್ಮ ಬ್ಲಾಗ್

ಈ ಸುಂದರ ಲಹರಿ ಹೀಗೆ ಸಾಗಲಿ

-ಪಾತರಗಿತ್ತಿ

Jagadeesh Balehadda said...

ಸು೦ದರವಾದ ಸರಳ ಸಾಲುಗಳಲ್ಲಿ ನೀವು ಬದುಕಿನ ಸುತ್ತಲೂ ಭರವಸೆಯ ಬೇಲಿ ಕಟ್ಟುವ ಪರಿ ತೋರಿಸಿದ್ದೀರಿ. ಬವಣೆ, ಜಂಜಡದ ಬದುಕಿಗೆ ಇಲ್ಲೇ ಇರುವ ಮಾರ್ಗ ಚಂದವಾಗಿ ತೋರಿಸಿದ್ದೀರಿ. ಹೀಗೆಯೇ 'ಟೈಪಿಸುತ್ತಿರಿ'. ನಿಮಗೆ ಧನ್ಯವಾದಗಳು.

Namratha said...

ಬಹಳ ಸಾಂತ್ವನ, ಹುರುಪು ನೀಡುವ ಮತ್ತು ವಿಚಾರಶೀಲ ಕವನ.. ಬಹಳ ಇಷ್ಟವಾಯಿತು.. ಒಳ್ಳೆಯ ಕವನ ಬರೆದದ್ದಕ್ಕೆ ಶುಭಾಶಯಗಳು
ಮತ್ತೆ ಬರುವೆ..

Snow White said...

arthapoornavada saalugalu sir :) tumba ista aithu :)

ಶಿವಪ್ರಕಾಶ್ said...

Nice one sir

ಮನಸಿನಮನೆಯವನು said...

ಸಾಗರದಾಚೆಯ ಇಂಚರ ,
ನೀ ನಡೆವ ಹಾದಿಯಲಿ
ನಗೆಹೂವು ಬಾಡದಿರಲಿ..&
ನಗುವಿರಲಿ
ಸುಖವಿರಲಿ
ನಿನ್ನ ಬಾಳಿನಲಿ
ಶಾಂತಿಯೇ ಇರಲಿ
ಕೋಟಿದೇವರ ವರ ನಿನಗಿರಲಿ
ಸಾಟಿಯಿಲ್ಲದ ಸುಖ ನಿನಗಿರಲಿ..
ನೋವು ನನಗಿರಲಿ..
:
ಸಾಲುಗಳು ನೆನಪಾಗುತ್ತಿವೆ..

AntharangadaMaathugalu said...

ಗುರು ಸಾರ್....

ತುಂಬಾ ಚೆನ್ನಾಗಿದೆ. ತಡವಾಗಿ ಬಂದು ಪ್ರತಿಕ್ರಿಯಿಸಿದ್ದಕ್ಕೆ ಕ್ಷಮೆ ಇರಲಿ..... ನಿಜಕ್ಕೂ ಚಿತ್ರ ಕೂಡ ನಿಮ್ಮ ಭಾವನೆಗಳಿಗೆ ಪೂರಕವಾಗಿಯೇ ಇದೆ. ಒಳ್ಳೆಯ ಕವನ... ಧನ್ಯವಾದಗಳು........

nenapina sanchy inda said...

hey raaga haakidare, idu chandada haaDaagi moodibartade, guarantee
:-)
malathi S

Guruprasad . Sringeri said...

ತುಂಬಾ ಚೆನ್ನಾಗಿದೆ ಗುರುಮೂರ್ತಿಯವರೆ... ನನಗೆ ಪೀಠಿಕೆ ತುಂಬಾ ಇಷ್ಟವಾಯಿತು. :)

ಸಾಗರದಾಚೆಯ ಇಂಚರ said...

ವಿ.ಆರ್.ಭಟ್ ಸರ್
ನಿಜ, ಬದುಕೇ ಹಾಗೆ
ಅದು ಅರ್ಥವಾದರೆ ಸರಳ, ಕಷ್ಟವಾದರೆ ಬದುಕು ವಿರಳ
ಬದುಕು ಅರಳಿದರೆ ಚೆನ್ನ
ನಿಮ್ಮ ಅರ್ಥಗರ್ಭಿತ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ತೇಜಸ್ವಿನಿಯವರೇ,
ನಿಮ್ಮ ಪ್ರೋತ್ಸಾಹ ಸದಾ ಇರಲಿ
ತಿದ್ದಿ ತೀಡುತ್ತಿರಿ

ಸಾಗರದಾಚೆಯ ಇಂಚರ said...

SSK

thanks for the comment

ಸಾಗರದಾಚೆಯ ಇಂಚರ said...

ಶಿವ್
ನಿಮಗೆ ಸುಸ್ವಾಗತ
ನನ್ನ ಬ್ಲಾಗಿಗೆ ಬಂದು ಮೆಚ್ಚುಗೆಯ ಮಾತು ಆಡಿದ್ದಿರಿ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಜಗದೀಶ್ ಸರ್
ಜಂಜಡಗಳು ಬವಣೆ ಇದೆಲ್ಲ ಎಲ್ಲಿ ಇಲ್ಲ ಅಲ್ಲವೇ,
ಸುಖ ತನ್ನೊಡನೆ ದು:ಖ ಕಟ್ಟಿಕೊಂಡೆ ಬರುತ್ತದೆ.
ಸುಖ ಬಂದಾಗ ಅದನ್ನು ಬಾಚಿಕೊಳ್ಳುವ ನಾವು ದು:ಖ ಕ್ಕೆ ಒಲ್ಲೆ ಎನ್ನುತ್ತೇವೆ.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗ

ಸಾಗರದಾಚೆಯ ಇಂಚರ said...

ನಮ್ರತಾ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೀಗೆಯೇ ಬರುತ್ತಿರಿ
ಹೊಸ ಹೊಸ ವಿಷಯಗಳನ್ನು ನೀಡಲು ಪ್ರಯತ್ನಿಸುವೆ

ಸಾಗರದಾಚೆಯ ಇಂಚರ said...

Snow WHITE
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಬದುಕು ಅರಳಿದರೆ ಎಲ್ಲರಿಗೂ ಸಂತಸ
ಕೆರಳಿದರೆ ಸುಮ್ಮನೆ ಬೇಸರ ಅಲ್ಲವೇ?

ಸಾಗರದಾಚೆಯ ಇಂಚರ said...

ಶಿವಪ್ರಕಾಶ್

ಥ್ಯಾಂಕ್ಸ್

ನಿಮ್ಮ ಆಗಮನ ಸಂತಸ ತಂದಿದೆ
ಬರುತ್ತಿರಿ

ಸಾಗರದಾಚೆಯ ಇಂಚರ said...

!! ಜ್ಞಾನಾರ್ಪಣಾಮಸ್ತು !!

ನಿಮ್ಮ ಆಶಿರ್ವಾದ ಪ್ರೋತ್ಸಾಹ ಸದಾ ಇರಲಿ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

AntharangadaMaathugalu

ತಡವಾದರೂ ಬಂದಿದ್ದಿರಿ
ಅದು ನಿಮ್ಮ ದೊಡ್ಡತನ ತೋರಿಸುತ್ತದೆ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

nenapina sanchy inda

ನಿಮ್ಮ ಮಾತುಗಳು ತುಂಬಾ ಸಂತೋಷ್ ಕೊಡುತ್ತವೆ
ಖಂಡಿತ ರಾಗ ಹಾಕಿಸುವೆ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಗುರುಪ್ರಸಾದ್, ಶೃಂಗೇರಿ
ನಿಮ್ಮ ಮಾತುಗಳಿಗೆ ಧನ್ಯವಾದಗಳು
ಸದಾ ಬಂದು ಪ್ರೋತ್ಸಾಹಿಸುತ್ತಿರುವುದಕ್ಕೆ ಧನ್ಯವಾದಗಳು
ಮುಂದೆಯೂ ಬರುತ್ತಿರಿ

ಕಿರಣ್ ಜಯಂತ್ said...

WOW..ಅದ್ಭುತವಾಗಿ ಬರೆದಿದ್ದೀರ ಸರ್. ಮತ್ತೆ ಮತ್ತೆ ಓದಬೇಕು ಅನ್ಸತ್ತೆ ನಿಮ್ಮ ಕವನವನ್ನು.

Ravi Hegde said...

ಕವನ ಚೆನ್ನಾಗಿದೆ.
ಮನೆಕೆ - ಎಂದರೇನು?

Ravi

ಸಾಗರದಾಚೆಯ ಇಂಚರ said...

ಕಿರಣ್ ಸರ್
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ
ಬರುತ್ತಿರಿ

ಸಾಗರದಾಚೆಯ ಇಂಚರ said...

ರವಿ ಸರ್
ಅದು ಮನಕೆ, ತಪ್ಪಿ ಮನೆಕೆ ಆಗಿದೆ

ಅಭಿಪ್ರಾಯಕ್ಕೆ ಧನ್ಯವಾದಗಳು

kavimana said...

ಶ್ರೀ ಗುರುಮೂರ್ತಿಯವರೇ, ನಿಮ್ಮ ಈ ತಾಣಕ್ಕೆ ಭೇಟಿ ನೀಡಿ ನಿಮ್ಮ ಬರಹಗಳ ಮೇಲೆ ಕಣ್ಣಾಡಿಸಿದೆ. ಮತ್ತೊಮ್ಮೆ ನಿಧಾನವಾಗಿ ಓದಬೇಕೆನ್ನಿಸಿದ ಬರಹಗಳು. ಹಿಡಿಸಿತು. ವಂದನೆಗಳು.

ಡಾ. ಚಂದ್ರಿಕಾ ಹೆಗಡೆ said...

bandee barutaava kasta maresuvadakke
novu maresuvadakke
baduku ista pattantee
kaayabeku naavu taalabeku jeeva