Wednesday, April 28, 2010

ಸಮುದ್ರ ಸಂಗಮ - ನೋಟ ವಿಹಂಗಮ ..ಕೊನೆಯ ಭಾಗ

ಹಿಂದಿನ ವಾರ ಹಡಗಿನ ಪ್ರಯಾಣ ದ ಅನುಭವದ  (http://gurumurthyhegde.blogspot.com/2010/04/grenen-2.html) ಬಗೆಗೆ ಹೇಳಿದ್ದೆ. ಅದರೊಂದಿಗೆ ರೈಲಿನಲ್ಲಿ ನಿಮ್ಮನ್ನು Skagen ವರೆಗೆ ಒಯ್ದಿದ್ದೆ. ಇನ್ನು  ಪ್ರವಾಸ ಕಥನವನ್ನು ಧಾರಾವಾಹಿಯಂತೆ ಎಳೆಯುವುದಿಲ್ಲ. ಇಂದೇ ಮುಗಿಸಿಬಿಡುತ್ತೇನೆ.  

ರೈಲಿನಲ್ಲಿ Skagen ತಲುಪುವಾಗ ಮಧ್ಯಾನ್ಹ 3 ಘಂಟೆ ಆಗಿತ್ತು. ಇಳಿದ ಕೂಡಲೇ ಗ್ರೆನೇನ್ ತಲುಪಲು ಬಸ್ ಎಲ್ಲಿದೆ ಎಂದು ವಿಚಾರಿಸಿದಾಗ ತಿಳಿಯಿತು, ಇನ್ನೂ ಬೇಸಿಗೆ ಆರಂಭವಾಗದ್ದರಿಂದ ಬಸ್ ಸೌಲಭ್ಯ ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು. ಬಾಡಿಗೆ ಕಾರನ್ನು ಹುಡುಕಿದೆವು. ಅದೂ ಇಲ್ಲ ಎಂದು ತಿಳಿಯಿತು. ಪಕ್ಕದಲ್ಲೇ ಇದ್ದ ಬಾಡಿಗೆ ಸೈಕಲ್ ಕೇಳಲೆಂದು ಹೋದರೆ ಮಾಲಿಕನನ್ನೇ ಹುಡುಕಿ ಹೋಗಬೇಕು ಎಂದು ತಿಳಿಯಿತು. ಇಲ್ಲಿ ಹೆಚ್ಚಿನ ಜನ ಸೈಕಲ್ ತೆಗೆದುಕೊಂಡು ಗ್ರೆನೇನ್ ಗೆ ಹೋಗುತ್ತಾರೆ ಎಂದು ಓದಿ ತಿಳಿದುಕೊಂಡಿದ್ದೆ. ಹಾಗಾಗಿ ಸೈಕಲ್ ಕೇಳಲು ಹೋದೆವು. ಯಾವುದೂ  ಸಿಗದೇ ದೇವರು ಕೊಟ್ಟ ಕಾಲನ್ನು ಉಪಯೋಗಿಸುವುದೆಂದು ತೀರ್ಮಾನಿಸಿದೆವು.

ಇಲ್ಲಿಯ ರಸ್ತೆಗಳು ಹಾಗೆಯೇ, ಅಂಕು ಡೊಂಕು ಗಳಿಲ್ಲ, ನೇರವಾಗಿವೆ, ದೂರದಲ್ಲಿ ದೀಪದ ಮನೆ (Light House) ಕಾಣುತ್ತಿತ್ತು. ಅಲ್ಲಿಯೇ ಗ್ರೆನೇನ್ ಇದೆ ಎಂದು ಗೂಗಲ್ ಮಾಡಿ ನೋಡಿಕೊಂಡಿದ್ದೆವು. ಆದರೆ ಆ ದೀಪದ ಮನೆ ಎಷ್ಟು ನಡೆದರೂ ಬರುತ್ತಿಲ್ಲ. ಹೇಳುವ ಎಲ್ಲ ವಿಷಯಗಳು ಖಾಲಿಯಾಗುತ್ತಿತ್ತು. ಕಾಲು ದಣಿಯುತ್ತಿತ್ತು. ಸಮುದ್ರ ಸಂಗಮ ಸೇರುವ ಮೊದಲೇ ನಾವು ತಿರುಗಿ ಹೋಗುತ್ತೇವೆಯೇ ಎಂಬ ಚಿಂತೆ ಆರಂಭವಾಯಿತು. ಸುಮ್ಮನೆ ನೇರ ರಸ್ತೆಯಲ್ಲಿ ನಡೆಯುವುದೆಂದರೆ ಸ್ವಲ್ಪ ಬೇಸರವೇ....ಆದರೆ ರಸ್ತೆಯ ಇಕ್ಕೆಲಗಳಲ್ಲಿನ ಸುಂದರ ಮನೆಗಳು ಕಣ್ಮನ ಸೆಳೆಯುತ್ತಿದ್ದವು.



ಹೆಸರಾಂತ ಚಿತ್ರಕಾರರ ಓಣಿ ಯಂತೆ  ಇದು. ಮನೆ ನೋಡಿದರೆ ತಿಳಿಯುತ್ತದೆ ಇದು ಚಿತ್ರಕಾರನ ಕಲ್ಪನೆಯ ಮೂರ್ತರೂಪ ಎಂದು. ಬಗೆ ಬಗೆಯ ವೈವಿದ್ಯದ ಮನೆ ಕಣ್ಣಿಗೆ ತಂಪು ನೀಡದಿರುತ್ತಿದ್ದರೆ ಬಹುಷ: ನಾವು ಮುಂದೆ ಹೆಜ್ಜೆ ಹಾಕುತ್ತಿರಲಿಲ್ಲವೇನೋ. ಸ್ವಲ್ಪ ದೂರ ಕಳೆದ ಮೇಲೆ ಓಣಿ ಮುಗಿಯಿತು. ಬಯಲು ಬಂತು.




ಏನು ಮಾಡಬೇಕೆಂದು ತೋಚದೆ ಸಮಯ ನೋಡುತ್ತಾ ಹೆಜ್ಜೆ ಹಾಕುತ್ತಿದ್ದೆವು. ಸ್ವಲ್ಪ ದೂರ ಕಳೆದ ಮೇಲೆ ಬಲಗಡೆಯಲ್ಲಿ ಸಮುದ್ರ ತೀರ ಕಾಣಲು ಆರಂಬಿಸಿತು.  ಸರಿ, ಇನ್ನು ರಸ್ತೆ ಬೇಡ ಎಂದು ನಿರ್ಧರಿಸಿ ಪಕ್ಕದ ಸಮುದ್ರ ತೀರದಲ್ಲಿ ನಡೆಯಲು ಆರಂಬಿಸಿದೆವು. ಇಲ್ಲಿಯೂ ಅಷ್ಟೇ, ದೀಪದ ಮನೆ ಕಾಣುತ್ತಲೇ ಇತ್ತು. ಆದರೆ ಬರುತ್ತಿರಲಿಲ್ಲ.



ಕೆಲವೊಮ್ಮೆ, ನಮ್ಮ ನೋಡಿ ಅದು ಓಡುತ್ತಿದೆಯೇ ಎಂದು ಅನ್ನಿಸತೊಡಗಿತು. ಆದರೆ ಪಕ್ಕದ ಸಮುದ್ರ ಮನಸ್ಸಿಗೆ ಹಿತ ನೀಡುತ್ತಿತ್ತು. ಒಂದು ವಿಚಿತ್ರ ಆಕಾರದಲ್ಲಿ ಇಲ್ಲಿನ ಸಮುದ್ರ ತೀರ ನಿರ್ಮಿಸಲಾಗಿದೆ. ಸಮುದ್ರದ ಶಕ್ತಿಶಾಲಿ ಅಲೆಗಳಿಂದ ತಡೆಯಲು ಇಂಥಹ ತಡೆಗೋಡೆ ನಿರ್ಮಿಸಲಾಗಿದೆಯಂತೆ. ಹೆಚ್ಚು ಮಾನವ ಸುಳಿವಿಲ್ಲದೆ ಇರುವುದರಿಂದ ಸ್ವಚ್ಚತೆಯಿಂದ ಕಂಗೊಳಿಸುತ್ತಿತ್ತು.



ಅಂತೂ ನಡೆದು ನಡೆದು ದೀಪದ ಮನೆ ಹತ್ತಿರ ಬಂದು ತಲುಪಿದೆವು. ದೀಪದ ಮನೆ ಸಮುದ್ರದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ದಾರಿದೀಪ ವಿದ್ದಂತೆ. ಇಲ್ಲಿನ ದೀಪದ ಮನೆಯನ್ನು 1858 ರಲ್ಲಿ ನಿರ್ಮಿಸಲಾಯಿತು. 46 ಮೀಟರ್ ಎತ್ತರ ಇರುವ ಲೈಟ್ ಹೌಸ ಡೆನ್ಮಾರ್ಕಿನ ಎರಡನೇ ಅತಿ ದೊಡ್ಡ ಲೈಟ್ ಹೌಸ್ ಆಗಿದೆ.


ಇದು ಅತ್ಯಂತ ಪ್ರಕಾಶಮಾನವಾದ 400 ವ್ಯಾಟ್ ಗಳುಳ್ಳ ಸೋಡಿಯಂ ಬೆಳಕನ್ನು ಹೊಂದಿದೆ. ಸುಮಾರು 20 ಮೈಲಿಗಳ ದೂರದಿಂದ ಸಹ ಇದರ ಬೆಳಕನ್ನು ವೀಕ್ಷಿಸುವಷ್ಟು ಸಮರ್ಥವಾಗಿದೆ ಇದು. ಹಿಂದಿನವರ ತಂತ್ರಜ್ಞಾನಕ್ಕೆ ತಲೆ ಬಾಗಲೆಬೇಕಲ್ಲವೇ?

ಇಲ್ಲಿ ಒಂದು ಚಿತ್ರ ಸಂಗ್ರಹಾಲಯವಿದೆ. ಹೆಸರಾಂತ ಚಿತ್ರಕಾರರು ಇಲ್ಲಿನ ಸಮುದ್ರ ತೀರಕ್ಕೆ ಬಂದು ಬಿಡಿಸಿದ ಮನಮೋಹಕ ಚಿತ್ರಗಳು ಇಲ್ಲಿವೆಯಂತೆ. ಆದರೆ ನಾವು ಹೋದಾಗ ಸಂಗ್ರಹಾಲಯ  ಮುಚ್ಚಿತ್ತು ಅದಕ್ಕೆ ಅದನ್ನು ನೋಡಲಾಗಲಿಲ್ಲ. ಇಲ್ಲಿಂದ ಸುಮಾರು ಒಂದು ಕಿ ಮಿ ನಡೆದರೆ ಸಿಗುವುದೇ ಡೆನ್ಮಾರ್ಕಿನ ಉತ್ತರದ ತುತ್ತ ತುದಿ, ಎರಡು ಸಮುದ್ರಗಳು ಸೇರುವ ಸಂಗಮ. ಗ್ರೆನೇನ್ ಎಂದು ಕರೆಯುವ ಜಾಗ. ಇಲ್ಲಿ ಒಂದು Tractor ಬಸ್ ಲಭ್ಯವಿದೆ. ಇದೊಂದು ಬ್ರಹತ್, ವಿಶಾಲ್ ಸಮುದ್ರ ತೀರವಾದ್ದರಿಂದ ನಡೆದು ಮುಗಿಯದು ಎಂದು ನಿರ್ಧರಿಸಿ Tractor ಬಸ್ ಏರಿ ಕುಳಿತೆವು.




ಇದರಲ್ಲಿ ಸಂಪೂರ್ಣ ಸಮುದ್ರ ತೀರ ಸುತ್ತಿ ಬರಬಹುದು. ಎರಡು ಸಮುದ್ರಗಳು ಸೇರುವ ಜಾಗದಲ್ಲಿ ಬಸ್ ನಿಲ್ಲಿಸುತ್ತಾರೆ. ಇಲ್ಲಿ ಇಳಿದು ಬೇಕಾದಷ್ಟು ಸಮಯ ಕಳೆದು ಪುನಃ ಇನ್ನೊಂದು ಬಸ್ ಹಿಡಿದು ತಿರುಗಿ ಹೋಗುವ ವ್ಯವಸ್ಥೆಯಿದೆ. 


ಕೊನೆಗೂ ಆ ಕ್ಷಣ ಬಂತು. ಚಿತ್ರ ವಿಚಿತ್ರ ಬಣ್ಣದ ಆಗಸ, ಎರಡು ಸಮುದ್ರಗಳ ಮಿಲನ, ಬ್ರಹತ್ ಮರಳ ದಂಡೆ, ನಿಜಕ್ಕೂ ಇದೊಂದು ರಮಣೀಯ ಸ್ಥಳ.


ಅಲ್ಲಿಯೇ ಕುಳಿತು ಕವನ ಬರೆಯಲೇ ಎನ್ನುವಷ್ಟು ಮನಸ್ಸು ನನಗೆ ಹಾತೊರೆಯುತ್ತಿದ್ದರೆ ಇನ್ನು  ಚಿತ್ರಕಾರನಿಗೆ ಇದು ಸ್ಪೂರ್ತಿ ಸೆಲೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಎಂಥಹ ಮನುಷ್ಯನಿಗೂ ಪ್ರಕ್ರತಿಯ ಜೊತೆಗೆ ಬೆಸುಗೆ ಬೆಸೆಯುವ ಸ್ಥಳವಿದು.



ಇಲ್ಲಿನ ಆಕಾಶವೇ ಹಾಗಂತೆ. ಸದಾ ಚಿತ್ರ ವಿಚಿತ್ರ ಬಣ್ಣಗಳಲ್ಲಿ ಗೋಚರಿಸುತ್ತಾ ಇರುವುದರಿಂದ ಬೇಸಿಗೆಯಲ್ಲಿ ಚಿತ್ರಕಾರರೂ ಇಲ್ಲಿಯೇ ಕುಳಿತು ತಮ್ಮ ಕಲ್ಪನೆಗಳಿಗೆ ಕುಂಚದ ಸಹಾಯದಿಂದ ಮೂರ್ತ ರೂಪ ನೀಡುತ್ತಾರಂತೆ.



ಎಷ್ಟು ನೋಡಿದರೂ ಸಾಲದು ಎಂಬಂತಿತ್ತು ಅಲ್ಲಿನ ಎರಡು ಸಮುದ್ರಗಳು ಸೇರುವ ಆ ಸ್ಥಳ. ನೀರು ಮಾತ್ರ ಬಹಳ ತಣ್ಣಗೆ ಇದ್ದಿದ್ದರಿಂದ ನೀರನ್ನು ಒಮ್ಮೆ ಮುಟ್ಟಿ  ಧನ್ಯರಾದೆವು. ಅದೇ ಕಡು ಬೇಸಿಗೆಯಾಗಿದ್ದರೆ ನೀರಿಗೆ ಇಳಿದು ಸ್ನಾನ ಆದರೂ ಮಾಡಬಹುದಿತ್ತೇನೋ ಎಂದು ಯೋಚಿಸುವಷ್ಟರಲ್ಲಿಯೇ ಅಲ್ಲಿ ಇದ್ದ ಒಬ್ಬರು ಹೇಳಿದರು, ಇಲ್ಲಿ ಸಮುದ್ರ ಸ್ನಾನ ಅಷ್ಟು ಒಳ್ಳೆಯದಲ್ಲ ಎಂದು. 




ಬೇಸಿಗೆಯಲ್ಲಿ ಇದು ಅತ್ಯಂತ ಪ್ರಸಿದ್ದ ಪ್ರವಾಸೀ ತಾಣ. ದೇಶ ವಿದೇಶಗಳಿಂದ ಸದಾ ಪ್ರವಾಸಿಗರು ಇಲ್ಲಿ ಬರುತ್ತಾರೆ. ಅವರಿಗಾಗಿಯೇ ಕಡಿಮೆ ದರದಲ್ಲಿ ತಿಂಗಳು ಗಟ್ಟಲೆ ಉಳಿಯಲು ಮನೆಗಳಿವೆ. ಇನ್ನೊಂದು ವಿಶೇಷವೆಂದರೆ ಇಲ್ಲಿ ಸೇರುವ ಎರಡು ಸಮುದ್ರಗಳ ಪೈಕಿ ಒಂದು ಬಿಸಿ ಆಗಿರುತ್ತದೆ, ಇನ್ನೊಂದು ತಣ್ಣಗಿದೆ. ಸೇರುವೆ ಜಾಗದಲ್ಲಿ ಕಾಲಿಟ್ಟರೆ ಬಿಸಿ ಹಾಗೂ ತಣ್ಣನೆಯ ಅನುಭವ ಒಮ್ಮೆಲೇ ಲಭಿಸುತ್ತದೆ. ಇದೊಂದು ರೋಚಕ ಅನುಭವ.

ಎರಡು ಸಮುದ್ರಗಳಲ್ಲಿ ಒಂದು ತಿಳಿ ನೀಲದಂತೆ ಕಂಡರೆ ಇನ್ನೊಂದು ಸ್ವಲ್ಪ ಬೇರೆಯೇ ಬಣ್ಣ ಇರುವಂತೆ ಗೋಚರಿಸುತ್ತದೆ. ಅತ್ಯಂತ ಸ್ಪಷ್ಟವಾಗಿ ಎರಡು ಸಮುದ್ರಗಳ ವ್ಯತ್ಯಾಸ ಗುರುತಿಸಬಹುದು.


ಸುಮಾರು ಹೊತ್ತು ಅಲ್ಲಿಯೇ ಕುಳಿತು ಕೊಂಡು ಸೂರ್ಯಾಸ್ತ ನೋಡುವ  ಮನಸ್ಸು ಇದ್ದರೂ ರಾತ್ರಿಯ ಹಡಗು ತಪ್ಪಿ ಹೋಗಬಾರದು ಎಂದು ಸ್ವಲ್ಪ ಹೊತ್ತು ಕುಳಿತು ನಂತರ ತಿರುಗಿ ಹೊರಟೆವು. ಅಲ್ಲಿಯೇ ಒಂದು ಅಂಗಡಿಯಲ್ಲಿ ಬಿಸಿಬಿಸಿ ಚಹಾ ಕುಡಿದು ನಂತರ ಒಬ್ಬ ಪುಣ್ಯಾತ್ಮ ಅದೇಗೋ ಯಾರಿಗೋ ಫೋನ್ ಮಾಡಿ ಒಂದು ಬಾಡಿಗೆ ಕಾರನ್ನು ತರಿಸಿಕೊಟ್ಟ. ಅವನಿಗೆ ಮನಸಿನಲ್ಲೇ ವಂದಿಸುತ್ತಾ ಕಾರಿನಲ್ಲಿ ರೈಲು ನಿಲ್ದಾಣದವರೆಗೆ ಬಂದು ನಂತರ ಸರಿಯಾದ ಸಮಯಕ್ಕೆ ಹಡಗನ್ನು ಹತ್ತಿದೆವು.
ಇಡೀ ದಿನದ ಸಾಹಸ ದೇಹಕ್ಕೆ ಬಹಳಷ್ಟು ದಣಿವನ್ನು ನೀಡಿತ್ತು. ಯಾರಿಗೂ ಹಡಗಿನಲ್ಲಿ ಆಡಲು ಮನಸ್ಸಿರಲಿಲ್ಲ.



 ಹಾಗೇ ಹೀಗೆ ನೋಡುತ್ತಿರುವಂತೆಯೇ ನಮ್ಮ ಊರು Gothenburg ಬಂದೆ ಬಿಟ್ಟಿತು.

ಪುನಃ ಮನೆಗೆ ಬಂದು ಸೇರುವಷ್ಟರಲ್ಲಿ ರಾತ್ರಿ 11-30. 

ಸಮುದ್ರದ ಸಂಗಮ ದ ವಿಹಂಗಮ ನೋಟ ಮನದಾಳದಲ್ಲಿ ಸಂಗಮವಾಗಿ ಸಂಗೀತದ ಸರಿಗಮಕ್ಕೆ ತಾಳವಾಗಿ, ವಾರದ ಕೊನೆಯ ಮನರಂಜನೆಯ ತಾಣವಾಗಿ, ಮರುದಿನದ ಕೆಲಸಕ್ಕೆ ಉತ್ಸಾಹದ ಚಿಲುಮೆಯಾಗಿ ಪುನಃ ಮತ್ತೊಮ್ಮೆ ಅಲ್ಲಿಗೆ ಹೋಗಬೇಕೆನ್ನುವ ಆಸೆಗೆ ನೀರೆರೆದಿತ್ತು.

ಸ್ನೇಹಿತರೆ, ನನ್ನೊಂದಿಗೆ ಪ್ರವಾಸ ಕಥನವನ್ನು ಓದಿದ ನಿಮ್ಮೆಲ್ಲರಿಗೂ ಕ್ರತಜ್ನತೆಗಳು. ಮುಂದಿನ ವಾರ ಮತ್ತೆ ಸಿಗುತ್ತೇನೆ. ಅಲ್ಲಿಯವರೆಗೆ

ಓದುತ್ತಿರಲ್ಲ....




63 comments:

Ash said...

You sure had a lot of fun.... Good! One must live their life to the fullest... Seeing those pics reminded me of our very Mangalorean houses... I love the Mangalore tiled homes... I wanted to incorporate them here.... I dont know when??? Lemme see.... But awesome read & pics.... like I had a small trip myself....

Ash...
(http://asha-oceanichope.blogspot.com/)

ಸಾಗರದಾಚೆಯ ಇಂಚರ said...

ಆಶಾ
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು
ನಿಜಕ್ಕೂ ಇಂಥಹ ಸ್ಥಳಗಳು ಮನಸ್ಸಿಗೆ ಹೊಸ ಯೋಚನೆ ನೀಡುತ್ತವೆ
ಹೊಸ ಹೊಸ ಸ್ಥಳಗಳ ವೀಕ್ಷಣೆ ನಮ್ಮಲ್ಲಿನ ಜ್ಞಾನವನ್ನು ಬೆಳೆಸುತ್ತವೆ
ಹೀಗೆಯೇ ಬರುತ್ತಿರಿ

Nisha said...

Nice pictures. Thanks for taking us along with you.

balasubramanya said...

ಗುರುಮೂರ್ತಿ ಸಾರ್ ನಿಜವಾಗಲು ಒಳ್ಳೆ ಟೂರ್ ಮಾಡ್ಸಿದ್ರಿ!!! ಮನಸಿಗೆ ಖುಷಿ, ನೀಡಿತು.ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.ಚಿತ್ರಗಳು ಲೇಖನಕ್ಕೆ ಮೆರಗನ್ನು ನೀಡಿವೆ !!!ಮುಂದಿನ ಪಯಣ???

Ittigecement said...

ಗುರುಮೂರ್ತಿ...

ವಾಹ್..
ವಾಹ್..
ವಾಹ್...!!

ಬೇರೆ ಶಬ್ಧಗಳೇ ಬರುತ್ತಿಲ್ಲ..

ಎಷ್ಟು ಶುದ್ಧವಾಗಿರ ಬಹುದು ಅಲ್ಲಿನ ಹವೆ...
ವಾತಾವರಣ.. !

ಚಿತ್ರ.. ಲೇಖನ ಓದಿ ಮೂಕನಾಗಿದ್ದೇನೆ...

ಅಭಿನಂದನೆಗಳು...

sunaath said...

ನೀವು ಕೊಟ್ಟ ಫೋಟೋಗಳೇ ಇಷ್ಟು ಚೆನ್ನಾಗಿದ್ದರೆ, ವಾಸ್ತವವು ಇನ್ನೆಷ್ಟು ಸುಂದರವಾಗಿರಬಹುದೆಂದು ಅನಿಸಿತು. ಮಾಹಿತಿಯೂ ಸಹ ಸ್ವಾರಸ್ಯಕರವಾಗಿದೆ.

ಸೀತಾರಾಮ. ಕೆ. / SITARAM.K said...

ಅದ್ಭುತವಾದ ಛಾಯಾಚಿತ್ರಗಳು. ಹವ್ಯಾಸಿ ಮತ್ತು ವೃತ್ತಿನಿರತರನ್ನೂ ಮೀರಿಸುವ೦ತಿದೆ. ಜೊತೆಗೆ ಸು೦ದರ ವಿವರಣೆ ಹೆಚ್ಚಾಗಿ ಸು೦ದರ ಯೂರೋಪನ ಸ್ಥಳಗಳು. ಹೀಗಾಗಿ ಲೇಖನ ಒ೦ದು ಕಾವ್ಯ ಕಥನವಾಗಿದೆ. ಊಣಬಡಿಸಿದ ತಮಗೆ ವ೦ದನೆಗಳು. ಮು೦ದಿನ ಸಲ ಗ್ರೇನೆನ್-ನ ವಸ್ತು ಮತ್ತು ಚಿತ್ರ ಸ೦ಗ್ರಹಾಲಯ ನೋಡಿ ಅದರ ಬಗ್ಗೆ ಬರೆಯಿರಿ.

nenapina sanchy inda said...

ಗ್ರೆನೆನ್ ಪ್ರವಾಸ ಸಚಿತ್ರ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಶ್ರೀಕಾಂತ್ ಗೆ online ಬರಲು ಕಾಯ್ತಾ ಅಷ್ಟನ್ನೂ ಒದಿ ಮುಗಿಸಿದೆ. ನಾವು ಒಂದು ಸಲ visit ಮಾಡಲೇಬೇಕೆಂಬ ಅಪೇಕ್ಷೆ.
thank you Gurumurthy
:-)
ಮಾಲತಿ ಎಸ್.

Subrahmanya said...

ನಿಮ್ಮ ಸಚಿತ್ರ ಲೇಖನವೇ ಇಷ್ಟು ಚೆನ್ನಾಗಿರಬೇಕಾದರೆ, ಇನ್ನು ಪ್ರತ್ಯಕ್ಷಕಂಡರೆ..ಅದರ ಅನುಭವ ಹೇಳತೀರದೆನಿಸುತ್ತದೆ. ಅಲ್ಲಿಗೆ ಕೊಂಡೊಯ್ದ ನಿಮಗೆ ಥ್ಯಾಂಕ್ಸ್.

SANTOSH MS said...

Sir, the photos are really good and the explanation makes us very curious about that place.

ಮನಸು said...

ಗುರು,
ತುಂಬಾ ಚೆನ್ನಾಗಿದೆ ಲೇಖನ ಹಾಗೂ ಚಿತ್ರಗಳು, ನಿಮ್ಮ ನಿರೂಪಣೆಯಲ್ಲೇ ನಾವು ಪ್ರವಾಸ ಮಾಡಿ ಬಂದ ಹಾಗೆ ಆಯ್ತು.... ಒಳ್ಳೆಯ ಅನುಭವ ನಿಮಗೆ. ಇಂತ ಸ್ಥಳ ನೋಡಿ ಬಂದಿರಲ್ಲಾ ನೀವು ಪುಣ್ಯವಂತರು..........
ಮತ್ತಷ್ಟು ಹೀಗೆ ಪ್ರವಾಸ ಮಾಡಿ ನಿಮ್ಮ ಲೇಖನದ ಮೂಲಕ ನಮ್ಮನ್ನೂ ಕರೆದೊಯ್ಯಿ.
ವಂದನೆಗಳು

ತೇಜಸ್ವಿನಿ ಹೆಗಡೆ said...

ಅದ್ಭುತವಾಗಿವೆ ಚಿತ್ರಗಳು. ಒಂದಕ್ಕಿಂತ ಒಂದು ಚೆನ್ನಾಗಿದೆ. ಎರಡು ಸಮುದ್ರಗಳನ್ನು ಸೇರುವ ಸ್ಥಳವನ್ನು ತೋರಿದ್ದಕ್ಕೆ ಧನ್ಯವಾದಗಳು. ಇಂತಹ ಸುಂದರ ಪ್ರದೇಶಕ್ಕೆ ಭೇಟಿಕೊಟ್ಟಿದ್ದು ನಿಮ್ಮ ಅದೃಷ್ಟವೇ ಸರಿ.

Ramesh said...

Excellent Guru... I feel like visiting this place after reading the whole posting... Thanks for sharing..

PARAANJAPE K.N. said...

ಕಡಲ ಕಿನಾರೆ, ಎಲ್ಲೆಲ್ಲೂ ಜಲಧಾರೆ, ಹಸಿರು ಹೊದ್ದ ಬೆಟ್ಟ, ಶುಭ್ರ ರಸ್ತೆಗಳು ಅಚ್ಚುಕಟ್ಟಿನ ಕಟ್ಟಡಗಳು, ನಿಮ್ಮ ಸಮುದ್ರ ಸ೦ಗಮ ನೋಟ, ವಿಹಂಗಮ ಮಾತ್ರವಲ್ಲ ಹೃದಯ೦ಗಮ ಕೂಡ ಆಗಿದೆ. ತು೦ಬಾ ಚೆನ್ನಾಗಿದೆ.

ಸಾಗರಿ.. said...

ಗುರು ಅವರೇ,
ಆಹಾ, ಅದೆಷ್ಟು ಚೆಂದದ ಜಾಗ.. ಕಣ್ಣೆವೆ ಮುಚ್ಚದೆ ಫೋಟೋ ನೋಡಿದ್ದೇನೆ ಜೊತೆಗೆ ಓದಿದ್ದೇನೆ ಕೂಡ. ಅಂತಹ ಸ್ಥಳಗಳಿಗೆ ಭೇಟಿ ನೀಡಿದ ನೀವೂ ಧನ್ಯ, ನಿಮ್ಮ ಜೊತೆ ಪ್ರಯಾಣಿಸಿ ಬಂದ ನಾವೂ ಧನ್ಯ..(ಅತಿಶಯೋಕ್ತಿಯಿಲ್ಲ)

ಸುಧೇಶ್ ಶೆಟ್ಟಿ said...

vow annuvashtu chennagidhe aa sthaLa... chithra nOdi kanthumbikonde... yaavaagalaadaroo aa jaagavannu noduva luck barali :)

jithendra hindumane said...

ಗುರುಮೂರ್ತಿಯವರೇ, ನಾವೇ ಪ್ರವಾಸ ಹೋಗಿ ಬಂದಂತೆ ನಿರೂಪಿಸಿದ್ದೀರಿ. ನನಗೆ ಅಲ್ಲಿಯ ಸರಳ ಸುಂದರ ಮನೆಗಳು ತುಂಬಾಹಿಡಿದವು. ನಾವು ಕಟ್ಟುವದೇ ಮನೆಗಳನ್ನು ಕಾಂಕ್ರೀಟಮಯವಾಗಿ.
ಧನ್ಯವಾದಗಳು.

shivu.k said...

ಗುರುಮೂರ್ತಿ ಸರ್,
ಪ್ರವಾಸದ ಚಿತ್ರಗಳಂತೂ ಸೂಪರ್. ಬಹುಶಃ ವಾತವರಣದಲ್ಲಿ ಫಾಗ್ ಅಥವ ಬಿಸಿ ವಾರಾವರಣವಿಲ್ಲದಾಗ[aginess]ಇಂಥ ಸುಂದರ ವಾತಾವರಣ ಮತ್ತು ಅದಕ್ಕೆ ತಕ್ಕಂತೆ ಫೋಟೊ ತೆಗೆಯಬಹುದು ಎನ್ನುವುದು ನನ್ನ ಅನಿಸಿಕೆ. ಬಹುಶಃ ಯುರೋಪಿನ ಎಲ್ಲಾ ಪ್ರದೇಶಗಳು ಅದರಲ್ಲೂ ಸ್ವೀಡನ್ ಡೆನ್ಮಾರ್ಕ್ ಪರಿಶುದ್ದ ವಾತಾವರಣದ ಪ್ರದೇಶಗಳಾದ್ದರಿಂದ ಫೋಟೊಗ್ರಫಿಗೆ ಸೊಗಸಾದ ಅವಕಾಶ. ನೀವು ಕೂಡ ನಿಮ್ಮ ಪ್ರವಾಸವನ್ನು ತುಂಬಾ ಚೆನ್ನಾಗಿ ಅದ್ಬುತ ಚಿತ್ರಗಳೊಂದಿಗೆ ವಿವರಿಸಿದ್ದೀರಿ...ಅದಕ್ಕಾಗಿ ಧನ್ಯವಾದಗಳು.

ಮನಮುಕ್ತಾ said...

wonderful photos and sweet explanation... Thank you.

ಕ್ಷಣ... ಚಿಂತನೆ... said...

ಗುರು ಅವರೆ, ನಮಗೂ ಪ್ರಯಾಸವಿಲ್ಲದೆ ಪ್ರವಾಸ ಮಾಡುವ ಅವಕಾಶ ನಿಮ್ಮ ಪ್ರವಾಸ ಬರಹದಿಂದ ಆಯಿತು. ಸಂತಸವಾಯಿತು. ಅದರಲ್ಲಿಯೂ ಸಮುದ್ರದ ಸಂಗಮದ ವಿಷಯ ರೋಮಾಂಚಕವಾಗಿದೆ.
ಧನ್ಯವಾದಗಳು.
ಭಾರತದಲ್ಲಿ ಭೇಟಿಯಾಗುವ...
ಸ್ನೇಹದಿಂದ,

sachin said...

tumba olle jaga.Khushi Aytu.

ಜಲನಯನ said...

ಡಾಕ್ಟರ್...ಬಹಳ ಚನ್ನಾಗಿದೆ ನಿಮ್ಮ ವಿವರಣೆ ಮತ್ತು ಅದಕ್ಕೆ ಪೂರಕವಾದ ಚಿತ್ರ ಸರಣಿ.....ನನಗೆ ಯಾವ್ದಾದ್ರೂ ಚಾನ್ಸ್ ಸಿಕ್ರೆ ಖಂಡಿತ ನೋಡ್ಬೇಕು ಈ ಜಾಗಗಳು ಅನ್ನಿಸಿದೆ....ಹಹಹ

Shashi jois said...

ಗುರುಗಳೇ ,

ಒಳ್ಳೆ ಗಮ್ಮತ್ತಿನ ಪ್ರವಾಸ ಮಾಡಿಸಿದಿರಿ ..ಮನಕ್ಕೆ ಒಳ್ಳೆ ಮುದ ನೀಡಿತು .ನಿಮ್ಮ ಚಿತ್ರಗಳು ನಮ್ಮನ್ನು ಅಲ್ಲಿಗೆ ಹೊತ್ತೊಯ್ದಿತು..ನಿಮ್ಮ ಮಾತು,ಚಿತ್ರ ನೋಡೇ ನಮಗೇ ಇಷ್ಟು ಸಂತೋಷವಾದರೆ ಇನ್ನೂ ಸಾಕ್ಷಾತ್ ಕಣ್ಣಾರೆ ನೋಡಿ ಆನಂದಿಸಿದ ನಿಮಗೆ ಹೇಗಿರಬೇಡ ಅಂತ ಊಹಿಸಲು ಸಾದ್ಯವಿಲ್ಲ ಅಲಾ!!!
ಕಾರವಳಿಯವಳಾದ ನನಗೆ ಸಮುಂದ್ರ ನೋಡಿ ಇಷ್ಟು ಸಂತಸವಾಗಿದೆ ,ಇನ್ನೂ ನೋಡದೆ ಇರುವವರಿಗೆ ಹೇಗಾಗಿರಬೇಡ ಆಲ್ವಾ???ಮತ್ತೊಮ್ಮೆ ಧನ್ಯವಾದಗಳು ಚಂದದ ಪ್ರವಾಸ ಮಾಡಿಸಿದ್ದಕ್ಕೆ. ..

ಚಿತ್ರಾ said...

ಗುರು,
ಪ್ರವಾಸ ಕಥನ ಚೊಲೋ ಇತ್ತು. ಕೆಲದಿನಗಳಿಂದ ಬ್ಲಾಗ್ ಎಲ್ಲ ಓಡಾಡದೆ ಉಳಿದು ಹೋಗಿತ್ತು. ಹಂಗಾಗಿ , ಒಂದೇ ಸಲ ಓದಿ ಮುಗಿಸಿ ಅಭಿಪ್ರಾಯ ಬರೀತಾ ಇದ್ದಿ. ಅಂಥಾ ಚೆಂದ ಚೆಂದದ ಜಾಗ ಎಲ್ಲ ನೋಡುವ ಅವಕಾಶ ನಿಂಗೆ ಇರುವ ಬಗ್ಗೆ ಸ್ವಲ್ಪ ಹೊಟ್ಟೆ ಕಿಚ್ಚು ! ಅದನ್ನೆಲ್ಲ ನಮ್ಮ ಜೊತೆ ಹಂಚಿಕೊಳ್ತಾ ಇದ್ದಿದ್ದಕೆ ಸ್ವಲ್ಪ ಸಮಾಧಾನ ! ಹಾ ಹಾ ಹಾ ಹಾ .

Snow White said...

pravasa lekhana tumba chennagittu sir..hanchikondidakke dhanyavadagalu :):)

ದಿನಕರ ಮೊಗೇರ said...

tumbaa sundara photogala guccha idu sir...... dhanyavaada....... olleya anubhava namagoo aayitu.........

shridhar said...

ಗುರುಮೂರ್ತಿ ಸರ್,
ನಿಮ್ಮ ಪ್ರವಾಸ ಕಥನವನ್ನು ಒಂದೆ ಬಾರಿಗೆ ಒದಿ ಮುಗಿಸಿದೆ. ಆಹಾ ಎಷ್ಟು ಸುಂದರ ಸ್ಥಳ ಸರ್.
ಮನಸ್ಸು ಮುದಗೊಂಡಿತು.
ಫೋಟೊಗಳು ಸೂಪರ್....

Jayashree said...

nanu nEravaagi koneya bhaagakke jump maDbiTTiddini. adagyu bahaLa ishtvaaytu. nimma anubhava odidre nangu hogbekanstide.

akshata said...

ಡಾ.ಗುರುಮೂರ್ತಿ.
ಪಾರ್ಟ್ ೨ ಮತ್ತು ಪಾರ್ಟ್ ೩ ಒಟ್ಟಿಗೆ ಓದಿದೆ, ಎರಡು ಸಮುದ್ರಗಳು ಸೇರುವ ತಾಣ ಎಷ್ಟು ಸುಂದರವಾಗಿರಬಹುದಲ್ಲ? ಪ್ರತ್ಯಕ್ಷವಾಅಗಿ ನೋಡಿದ ನೀವೇ ಧನ್ಯರು. ಆದರೆ ಆ ಸಮುದ್ರದಲ್ಲಿ ಸ್ನಾನ ಮಾಡುವುದು ಒಳ್ಳೆಯದಲ್ಲ ಅಂತ ಯಾಕೆ ಹೇಳಿದ್ದು ಅಂತ ಅರ್ಥವಾಗಲಿಲ್ಲ.
ಅಕ್ಷತ.

ಸಾಗರದಾಚೆಯ ಇಂಚರ said...

Nisha

thanks for your comments

keep visiting

ಸಾಗರದಾಚೆಯ ಇಂಚರ said...

ಬಾಲು ಸರ್
ಸದ್ಯಕ್ಕೆ ಮುಂದಿನ ಪಯಣ ಭಾರತಕ್ಕೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
ನಿಮ್ಮ ಮಾತಿನಂತೆ ಅಲ್ಲಿಯ ಸೊಬಗ ನೋಡಿ ನಾನೂ ಮೂಕ ನಾಗಿದ್ದೆ
ಅದೊಂದು ವರ್ಣಿಸಲಾಗದ ಸ್ಥಳ
ಅಭಿಪ್ರಾಯಕ್ಕೆ ವಂದನೆಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಸುನಾಥ್ ಸರ್
ನಿಜಕ್ಕೂ ಇದೊಂದು ಹೋಗಲೇಬೇಕಾದ ಸ್ಥಳ
ನೀವು ಗೂಗಲ್ ನಲ್ಲಿ ಒಮ್ಮೆ ಹಾಕಿ ನೋಡಿ
ಅಲ್ಲಿನ ಸೊಬಗು ತಿಳಿಯುತ್ತದೆ

ಸಾಗರದಾಚೆಯ ಇಂಚರ said...

ಸೀತಾರಾಂ ಸರ್
ನಿಮ್ಮ ಮಾತುಗಳು ಇನ್ನಷ್ಟು ಲೇಖನ ಬರೆಯಲು ಸ್ಪೂರ್ತಿ ನೀಡಿವೆ
ಸ್ಥಳ ಸುಂದರವಾಗಿದ್ದರೆ ಯಾರು ಫೋಟೋ ತೆಗೆದರೂ ಸುಂದರವೇ ಅಲ್ಲವೇ?
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು

ಸಾಗರದಾಚೆಯ ಇಂಚರ said...

ಮಾಲತಿ ಮೇಡಂ
ಖಂಡಿತ ಒಮ್ಮೆ ಇಲ್ಲಿ ಬನ್ನಿ, ನಾನೇ ಕರೆದುಕೊಂಡು ಹೋಗುವೆ
ನಿಮ್ಮ ಅಭಿಪ್ರಾಯಕ್ಕೆ ವಂದನಗೆಳು
ಬರುತ್ತಿರಿ

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಸರ್
ನೀವು ಹೇಳೋದು ನಿಜಾ
ಪ್ರತ್ಯಕ್ಷ ನೋಡುವ ಮಜವೇ ಬೇರೆ
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು
ಬರುತ್ತಿರಿ

ಸಾಗರದಾಚೆಯ ಇಂಚರ said...

Dear Santhosh

you should visit this place,

really this is amazing place

ಸಾಗರದಾಚೆಯ ಇಂಚರ said...

ಮನಸು
ಪುನ್ಯವಂತರೋ , ಪಾಪಿಷ್ಟರೋ,
ಒಟ್ಟಿನಲ್ಲಿ ಕೆಲವು ಸ್ಥಳಗಳನ್ನು ನೋಡುತ್ತಿದ್ದೇವೆ :)
ಯುರೋಪೆ ನ ದೇಶಗಳು ಸೌಂದರ್ಯಕ್ಕೆ ಹೆಸರುವಾಸಿ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ತೇಜಸ್ವಿನಿಯವರೇ
ಒಂದು ತಾರಾ ಅಲಹಾಬಾದಿನ ಸಂಗಮ ದಲ್ಲಿದ್ದೆವೆಯೇ ಎಂಬ ಭಾವನೆ ಮೂಡಿತು,
ಅಲ್ಲಿಯೂ ಎರಡು ನದಿ (ಇನ್ನೊಂದು ಕಾಣದು), ಇಲ್ಲಿಯೂ ಎರಡು ಸಮುದ್ರ
ನಿಜಕ್ಕೂ ತುಂಬಾ ಇಷ್ಟವಾದ ಜಾಗವಿದು
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಬರುತ್ತಿರಿ

ಸಾಗರದಾಚೆಯ ಇಂಚರ said...

Ramesh Sir

you are always welcome

this is the place to visit once

thanks for the comments
keep visitng my blog

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್
ನಿಮ್ಮ ಕಾವ್ಯಮಯ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಇಂಥಹ ಸ್ಥಳಗಳಿಗೆ ಹೋದರೆ ಕವಿತೆಗಳನ್ನು ಬರೆದು ಬರೆದು ಇಡಬೇಕೆನಿಸುತ್ತದೆ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಸಾಗರಿ
ನಿಮ್ಮ ಮೆಚ್ಚುಗೆಯ ಮಾತುಗಳಿಗೆ ವಂದನೆಗಳು
ಲೇಖನ ನಿಮಗೆ ಇಷ್ಟವಾದರೆ ನನಗದೆ ಸಂತೋಷ
ಇಂಥಹ ಸ್ಥಳಗಳಿಗೆ ಭೆಟ್ಟಿ ಇಟ್ಟರೆ ನಮ್ಮಲ್ಲಿನ ಅಹಂಕಾರ ಇಳಿಯುತ್ತದೆ ಎಂಬುದೇ ನನ್ನ ಭಾವನೆ

ಸಾಗರದಾಚೆಯ ಇಂಚರ said...

ಸುದೇಶ್ ಸರ್
ಲಕ್ ಬಂದೆ ಬರುತ್ತೆ
ಜಗತ್ತು ತುಂಬಾ ಚಿಕ್ಕದು
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಬರುತ್ತಿರಿ

ಸಾಗರದಾಚೆಯ ಇಂಚರ said...

ಜಿತೇಂದ್ರ ಸರ್
ಅಲ್ಲಿನ ಮನೆಗಳು ಹೊರಗಡೆಯಿಂದ ಎಷ್ಟು ಸುಂದರವೋ ಒಳಗಡೆ ಅಷ್ಟೇ ಅದ್ಭುತ
ಯುರೋಪಿಗರು ಮನೆಯ ಒಳಗಿನ ಅಲಂಕಾರಕ್ಕೆ ತುಂಬಾ ಪ್ರಸಿದ್ದರು
ಎಲ್ಲವೂ ಅಚ್ಚುಕಟ್ಟು
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಬರುತ್ತಿರಿ

ಸಾಗರದಾಚೆಯ ಇಂಚರ said...

ಶಿವೂ ಸರ್
ನೀವು ಅನ್ನೋದು ನಿಜ
ಇಲ್ಲಿನ ವಾತಾವರಣ ೧೦೦ % ಕಲುಷಿತ ರಹಿತವಾದದ್ದು
ಫೋಟೋಗಳು ಅತ್ಯಂತ ಸ್ಪಷ್ಟವಾಗಿ ಬರುತ್ತವೆ
ನಿಮ್ಮಂತ ಫೋಟೋಗ್ರಾಫರ್ ಗಳಿಗೆ ಹಬ್ಬ ಇಲ್ಲಿ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಬರುತ್ತಿರಿ

ಸಾಗರದಾಚೆಯ ಇಂಚರ said...

ಮನಮುಕ್ತಾ
ಥ್ಯಾಂಕ್ಸ್ ನಿಮ್ಮ ಅಭಿಪ್ರಾಯಕ್ಕೆ
ಬರುತ್ತಿರಿ

ಸಾಗರದಾಚೆಯ ಇಂಚರ said...

ಚಂದ್ರು ಸರ್
ನೀವೆಲ್ಲ ನನ್ನೊಂದಿಗೆ ಪ್ರಯಾಣ ಮಾಡಿದ್ದಕ್ಕೆ ಥ್ಯಾಂಕ್ಸ್
ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರಲಿ ಬ್ಲಾಗಿಗೆ
ಖಂಡಿತ ಭಾರತದಲ್ಲಿ ಸಿಗೋಣ
ಬರುತ್ತಿರಿ

ಸಾಗರದಾಚೆಯ ಇಂಚರ said...

Sachin

thanks for the comments

ಸಾಗರದಾಚೆಯ ಇಂಚರ said...

ಜಲನಯನ ಅಜ್ಹಾದ್ ಸರ್
ಖಂಡಿತ ಬನ್ನಿ ಒಮ್ಮೆ
ಇಲ್ಲಿನ ಸೌಂದರ್ಯವನ್ನು ಸವಿಯುವುದೇ ಒಂದು ಖುಷಿ

ಸಾಗರದಾಚೆಯ ಇಂಚರ said...

ಶಶಿಯವರೇ
ನಾನೂ ನನ್ನ ಜೀವನದ ಬಹಳಷ್ಟು ವರ್ಷಗಳನ್ನು ಸಮುದ್ರ ತೀರದ ಪಟ್ಟಣದಲ್ಲಿಯೇ ಕಳೆದೆ
ನನಗೆ ಸಮುದ್ರ ಯಾವಾಗಲೂ ಇಷ್ಟ
ನನ್ನೊಂದಿಗೆ ಪ್ರಯಾಣ ಮಾಡಿದ್ದಕ್ಕೆ ಥ್ಯಾಂಕ್ಸ್
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಚಿತ್ರಾ
ನಿಂಗೆ ಹೊಟ್ಟೆ ಕಿಚ್ಚು ಅತಲಿ, ನಂಗೆ ಸ್ವಲ್ಪ ಖುಷಿ, ಎಂತಕ್ಕೆ ಅಂದ್ರೆ ನಿಂಗೆ ನೋಡಲೇ ಅಜಿಲ್ಲೇ ಹೇಳಿ :)

ಇಲ್ಲಿ ವಾರದ ತುದಿಗೆ ಎಂಥ ಮಾಡವು ಹೇಳಿ ತಿಲಿತಿಲ್ಲೇ
ಅದಕ್ಕೆ ಗೂಗಲ್ ಮಾಡಿ ಮಾಡಿ ಜಾಗ ಹುಡುಕ್ತಿ
ಅಭಿಪ್ರಾಯಕ್ಕೆ ಥ್ಯಾಂಕ್ಸ್
ಬರ್ತಾ ಇರು

ಸಾಗರದಾಚೆಯ ಇಂಚರ said...

Snow white

thanks for the comments

heegeye bartaa iri

ಸಾಗರದಾಚೆಯ ಇಂಚರ said...

ದಿನಕರ್ ಸರ್
ನಿಮಗೆ ಇಷ್ಟವಾಯ್ತಲ್ಲ ನಂಗೆ ಅದೇ ಖುಷಿ
ಹೀಗೆಯೇ ಬ್ಲಾಗ ಕಡೆ ಬರ್ತಾ ಇರಿ
ಭಾರತದಲ್ಲಿ ಸಾದ್ಯ ಆದ್ರೆ ಸಿಗೋಣ

ಸಾಗರದಾಚೆಯ ಇಂಚರ said...

ಶ್ರೀಧರ್ ಸರ್
ನಿಮ್ಮ ಅಭಿಪ್ರಾಯ ಓದಿ ಬಹಳ ಸಂತಸವಾಯಿತು
ನೀವೆಲ್ಲ ಓದ್ತಿರೋದ್ರಿಂದ ಬರೆಯೋಕೆ ಇನ್ನೂ ಹೆಚ್ಚಿನ ಸ್ಪೂರ್ತಿ ಸಿಗುತ್ತೆ
ಹೀಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಜಯಶ್ರೀ ಮೇಡಂ,
ಖಂಡಿತ ಒಮ್ಮೆ ನೀವು ನೋಡಲೇಬೇಕು
ನಿಜಕ್ಕೂ ಒಳ್ಳೆಯ ಜಾಗ
ಆದ್ರೆ ಬೇಸಿಗೆ ಕಾಲ ತುಂಬಾ ಒಳ್ಳೆಯ ಸಮಯ

ಸಾಗರದಾಚೆಯ ಇಂಚರ said...

ಅಕ್ಷತ
ಎರಡು ಸಮುದ್ರಗಳು ಸೇರುವ ಜಾಗದಲ್ಲಿ ದಿನಗಟ್ಟಲೆ ಇದ್ದರೂ ಬೇಸರ ಬರದು
ಇಲ್ಲಿನ ಸಮುದ್ರಗಳಲ್ಲಿ ವಿದ್ಯುತ್ ತರಂಗಗಳಿವೆ ಎಂದು ಹೇಳುತ್ತಾರಂತೆ
ಅದಕ್ಕೆ ಅಲ್ಲಿನ ಜನ ಸ್ನಾನ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು
ಬರುತ್ತಿರಿ

ಸುಬ್ರಮಣ್ಯ said...

ಒಳ್ಳೇ ಲೇಖನ
ಸಮುದ್ರಕ್ಕಿಂತ ಬೆಟ್ಟ ಗುಡ್ಡ ನನಗಿಷ್ಟ!!

AntharangadaMaathugalu said...

ನಿಮ್ಮ ಪ್ರವಾಸ ಕಥನ ತುಂಬಾ ಚೆನ್ನಾಗಿತ್ತು. ಚಿತ್ರಗಳಂತೂ excellent... ಎರಡು ಸಮುದ್ರಗಳ ಸಂಗಮ, ನೀರಿನ ಬಣ್ಣಗಳಲ್ಲಿನ ವ್ಯತ್ಯಾಸ... ಅದ್ಭುತ.... ನಿಮ್ಮ ನಿರೂಪಣೆ ಕೂಡ ಸುಂದರವಾಗಿದೆ. ಆಕರ್ಷಕ ಪ್ರವಾಸ ನಮಗು ಮಾಡಿಸಿದ್ದಕ್ಕೆ ಧನ್ಯವಾದಗಳು.......

Unknown said...

ತುಂಬಾ ಚೆನ್ನಾಗಿದೆ. ಚಿತ್ರಗಳು ವಿಷಯಕ್ಕೆ ಸಂಪೂರ್ಣ ಒತ್ತು ಕೊಟ್ಟಿವೆ. ಕನಕಪುರದ ಬಳಿ ಇರುವ ಸಂಗಮದಲ್ಲಿ ಸುಳಿಗಳ ಅಪಾಯವಾದರೆ ಅಲ್ಲಿನ ಸಮುದ್ರಗಳಲ್ಲಿ ವಿದ್ಯುತ್ ತರಂಗಗಳಿವೆ ಎಂಬುದನ್ನು ಕೇಳಿ ಮೈ ಜುಮ್ ಎನ್ನುತ್ತಿದೆ. ಅದ್ಬುತ ಅನುಭವ...ಕೊನೆಯಲ್ಲಿ ಒಂದು ಸಣ್ಣ ಸಂದೇಹ ಬಿಟ್ಟಿರಿ. ಅದೇನೆಂದರೆ 'ಕಾರಿನಲ್ಲಿ ರೈಲು ನಿಲ್ದಾಣದವರೆಗೆ ಬಂದು ನಂತರ ಸರಿಯಾದ ಸಮಯಕ್ಕೆ ಹಡಗನ್ನು ಹತ್ತಿದೆವು'. ಮಾಹಿತಿಗೆ ಹಾಗು ಮನಸ್ಸನ್ನು ನಿಮ್ಮೊಡನೆ ಅಲ್ಲಿಗೆ ಕೊಂಡೊಯ್ದಿದ್ದಕ್ಕೆ ಧನ್ಯವಾದಗಳು.

Unknown said...

ತುಂಬಾ ಚೆನ್ನಾಗಿದೆ. ಚಿತ್ರಗಳು ವಿಷಯಕ್ಕೆ ಸಂಪೂರ್ಣ ಒತ್ತು ಕೊಟ್ಟಿವೆ. ಕನಕಪುರದ ಬಳಿ ಇರುವ ಸಂಗಮದಲ್ಲಿ ಸುಳಿಗಳ ಅಪಾಯವಾದರೆ ಅಲ್ಲಿನ ಸಮುದ್ರಗಳಲ್ಲಿ ವಿದ್ಯುತ್ ತರಂಗಗಳಿವೆ ಎಂಬುದನ್ನು ಕೇಳಿ ಮೈ ಜುಮ್ ಎನ್ನುತ್ತಿದೆ. ಅದ್ಬುತ ಅನುಭವ...ಕೊನೆಯಲ್ಲಿ ಒಂದು ಸಣ್ಣ ಸಂದೇಹ ಬಿಟ್ಟಿರಿ. ಅದೇನೆಂದರೆ 'ಕಾರಿನಲ್ಲಿ ರೈಲು ನಿಲ್ದಾಣದವರೆಗೆ ಬಂದು ನಂತರ ಸರಿಯಾದ ಸಮಯಕ್ಕೆ ಹಡಗನ್ನು ಹತ್ತಿದೆವು'. ಮಾಹಿತಿಗೆ ಹಾಗು ಮನಸ್ಸನ್ನು ನಿಮ್ಮೊಡನೆ ಅಲ್ಲಿಗೆ ಕೊಂಡೊಯ್ದಿದ್ದಕ್ಕೆ ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಮಾಚಿಕೊಪ್ಪ ಸರ್
ಗುಡ್ಡ ಬೆಟ್ಟಗಳ ಮಜವೇ ಬೇರೆ,
ಸಮುದ್ರದ್ದು ಇನ್ನೊಂದು ಮಜಾ
ಒಟ್ಟಿನಲ್ಲಿ ಪ್ರಕ್ರತಿಯೇ ಮಡಿಲೆ ಆಹ್ಲಾದ
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು

ಸಾಗರದಾಚೆಯ ಇಂಚರ said...

ಅಂತರಂಗದ ಮಾತುಗಳು
ನಿಮ್ಮ ನಲ್ಮೆಯ ಮಾತುಗಳಿಗೆ ವಂದನೆಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ವಸಂತ ಕುಮಾರ್ ಸರ್
ನಿಮ್ಮ ಪ್ರೀತಿಪೂರ್ವಕ ಅಭಿಪ್ರಾಯಕ್ಕೆ ಚಿರಋಣಿ
ಅಲ್ಲಿ ಎಲ್ಲವನೂ ಹೇಳಲಾಗದು ಎಂದು ಸಣ್ಣದಾಗಿ ರೈಲಿನಿಂದಿಳಿದು ಹಡಗು ಹತ್ತಿದೆವು ಎಂದೆ.
ರೈಲಿನಿಂದ ಇಳಿದು ಸುಮಾರು ೩೦ ನಿಮಿಷ ನಡೆದು ಹಡಗಿನ ಸ್ಥಳ ತಲುಪಿದಾಗ ಕೇವಲ ೫ ನಿಮಿಷ ಉಳಿದಿತ್ತು ಹಡಗು ಹೊರಡಲು
ತಪ್ಪಿದರೆ ಆ ದಿನ ಅಲ್ಲೇ ಉಳಿಯಬೇಕಿತ್ತು
ಅದಕ್ಕೆ ಸರಿಯಾದ ಸಮಯ ಅಂದೆ.
ಹೀಗೆಯೇ ಬರುತ್ತಿರಿ