Wednesday, May 5, 2010

ಕೆಂಪಾದ ಕೆನ್ನೆ, ಅರಳೋದ್ ಬಿಟ್ಟು

ಯಾಕೋ ಏನೋ, ನಂಗೇನ್ ಗೊತ್ತು
ಅವಳಿಗೆ ಬಂತು ಸಿಟ್ಟು
 ಕೆಂಪಾದ ಕೆನ್ನೆ, ಅರಳೋದ್ ಬಿಟ್ಟು
ತಂದೀತ್ ತಲೆಗೆ ಚಿಟ್ಟು

ಕೊಡ್ತೀನಿ ಚಿನ್ನ, ನಿಂಗೆ ''ಚಿನ್ನ''
ಬಿಡ ಬ್ಯಾಡ್ ಹಿಂಗೆ ಕಣ್ಣ 
ಅಧರದಿಂದ ಮಧುರ ಗೀತೆ 
ಹಾಡಲೇನೆ ರನ್ನ   


ಮುದ್ದಾದ ವದನ, ಯಾಕೆ ಕದನ
ನೀನೆ ನನ್ನ ಪ್ರಾಣ
ಹರಿಯೋ ನದಿಯ, ಬೀಸೋ ಗಾಳಿ
 ತಂದು ಕೊಡ್ಲೇನ್ ಜಾಣ

ನನ್ನ ನಿನ್ನ, ನಡುವೇನ್ ಗುಟ್ಟು
ನಿಂಗ್ಯಾಕ್  ಬಂತು ಸಿಟ್ಟು
 ಬಿಟ್ಟು ಸಿಟ್ಟು, ''ಅತ್ತು'' ಬಿಟ್ಟು
ತಬ್ಕೋ  ನನ್ನ, ಬಂದ್ ಬಿಟ್ಟು 

ಗಂಡ ಹೆಂಡತಿ ಸಿಟ್ಟು, ಉಂಡು ಮಲಗುವ ತನಕ ಎಂಬ ಗಾದೆ ಅಂದಿಗೂ, ಇಂದಿಗೂ ಎಂದಿಗೂ ಪ್ರಸ್ತುತ. ನಿತ್ಯ ಸತ್ಯ. ಸಂಸಾರದ ಬಂಡಿಯಲ್ಲಿ ಬರೆ ಪ್ರೇಮವಿದ್ದರೆ ಸಾಲದು. ಅಲ್ಲಿ ಸರಸವೆಷ್ಟೋ, ವಿರಸವೂ ಇರಬೇಕು. ಹುಸಿಮುನಿಸು, ನಸು ನಗಿಸುತ್ತಾ ಇರುವುದೇ ಜೀವನದ ಯಶಸ್ಸಿನ ಗುಟ್ಟು. ಸರಸ ವಿರಸ ಹದವಾಗಿ ಬೆರೆತರೆ ಸಂಸಾರ ಸೊಗಸು. ಹೆಂಡತಿಗೆ ಸಿಟ್ಟು ಬಂದಿದೆ ಎಂದು ಗಂಡನೂ ಸಿಟ್ಟು ಮಾಡಿ ಕುಳಿತರೆ  ಹೇಗೆ. ಸಿಟ್ಟು ಯಾಕೆ ಬಂತು, ನನ್ನ ಯಾವ ಮಾತು, ಯಾವ ವಿಷಯ ನಿನಗೆ ಕೋಪ ತಂತು, ಎಂದು ಹದವಾಗಿ ಅವಳಲ್ಲಿ ಕೇಳಿ ಅವಳ ಮನಸ್ಸಿನ ಪ್ರೇಮ ''ತಂತು'' ವನ್ನು ಮೀಟಬೇಕು. ಜೀವನ ಒಂದು ಪಾಠ ಶಾಲೆ, ಪ್ರತಿದಿನ ಪ್ರತಿಕ್ಷಣ ಕಲಿಕೆ ಇದ್ದಿದ್ದೆ. ಪ್ರತಿದಿನದ ಯಾಂತ್ರಿಕ ಕೆಲಸದ ನಡುವೆ ಬರುವ ಸಿಟ್ಟಿಗೆ ಅದರದೇ ಆದ ಸಮಾಧಾನವು ಇರುತ್ತದೆ. ಅದರಲ್ಲೂ ತನ್ನ ''ಅಪ್ಪ, ಅಮ್ಮ, ಹುಟ್ಟೂರು, ಹೆತ್ತೋರು, ಮನೆ, ಗಿಡ ಮರ, ಸ್ನೇಹಿತರು'' ಎಲ್ಲವನ್ನೂ ತ್ಯಜಿಸಿ ಪತಿಯ ಹಿಂದೆ ಬರುವ ಹೆಣ್ಣು ಮಕ್ಕಳ ಬಹುದೊಡ್ಡ ಆಸ್ತಿ ''ಕಣ್ಣೀರು''. ಮನಸ್ಸಿಗೆ ಬೇಸರವಾದಾಗ ನಾಲಕ್ಕು ಹನಿ ಕಣ್ಣೀರು ಹಾಕಿದರೆ ಅವರಿಗೆ ಅದೆಷ್ಟೋ ಸಮಾಧಾನ. ಅದಕ್ಕೆ ಸಿಟ್ಟು ಬಂದಾಗ ಸ್ವಲ್ಪ ಅಳಲು ಬಿಟ್ಟರೆ, ಸಮಾಧಾನವಾದಾಗ ನಗು ಅರಳುತ್ತದೆ. ಬದುಕಿನ ಬಂಡಿಯಲ್ಲಿ ಸಮರಸದಿ ಬದುಕಿ ಬಾಳಬೇಕು ಎಂಬುದೇ ಕವನದ ಆಶಯ.

ಆತ್ಮೀಯ ಸ್ನೇಹಿತರೆ,

ನಾನು ಮತ್ತು ನನ್ನ ಅರ್ಧಾಂಗಿ  ಸ್ವಲ್ಪ ದಿನದ ಮಟ್ಟಿಗೆ ಭಾರತಕ್ಕೆ ಬರುತ್ತಿದ್ದೇವೆ.. ತಾಯ್ನಾಡಿನ ನೆನಪು, ಮಣ್ಣಿನ ನೆನಪು, ಹೆತ್ತವರ ನೋಡುವ ತವಕ ದಿನೇ ದಿನೇ ಹೆಚ್ಚುತ್ತಿದೆ. ಜೊತೆಗೆ ಕಳೆದ ಒಂದು ವರ್ಷದಲ್ಲಿ ಮನಸ್ಸಿಗೆ ತುಂಬಾ ಹತ್ತಿರವಾದ ಬ್ಲಾಗ್ ಸ್ನೇಹಿತರು ಕೂಡಿದ್ದಾರೆ. ನಿಮ್ಮನೆಲ್ಲ ಬೆಂಗಳೂರಿನಲ್ಲಿ ಭೆಟ್ಟಿಯಾಗುತ್ತೇನೆ ಎಂಬ ವಿಶ್ವಾಸ ನನ್ನದು. ಯಾವಾಗ, ಎಲ್ಲಿ ಎಂಬುದನ್ನು ಭಾರತಕ್ಕೆ ಬಂದು ತಿಳಿಸುತ್ತೇನೆ. ನಿಮ್ಮೆಲ್ಲರ ಫೋನ್ ನಂಬರ್ ನನ್ನ E-mail. Address ''koorsebabbi@gmail.com'' ಗೆ ದಯವಿಟ್ಟು ಕಳಿಸುತ್ತಿರಲ್ಲ. ನಾನು ಮೇ 7 ರಿಂದ 26 ರ ತನಕ ಭಾರತದಲ್ಲಿ ಇರುತ್ತೇನೆ. 

ಸಿಗುತ್ತಿರಲ್ಲ...

ಇನ್ನು ಸುಮಾರು 3 ವಾರಗಳ ಕಾಲ ನಿಮ್ಮೆಲ್ಲರ ಬ್ಲಾಗನ್ನು ಪೂರ್ತಿ ಓದಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕ್ಷಮೆ ಇರಲಿ. ಬಂದ ಕೂಡಲೇ ಮತ್ತೆ ಪ್ರೀತಿಯ ಓದುಗನಾಗಿ ಎಲ್ಲ ಬ್ಲಾಗನ್ನು ಓದುತ್ತೇನೆ. 

ಪ್ರೀತಿ, ವಿಶ್ವಾಸ ಸದಾ ಇರಲಿ.

ನಿಮ್ಮವ 

ಗುರು 

41 comments:

AshKuku said...

Happy & Safe Journey!!!! Enjoy your trip to the core....

Ash....
(http://asha-oceanichope.blogspot.com/)

ವನಿತಾ / Vanitha said...

Guru..Cool..:)

"ತನ್ನ ''ಅಪ್ಪ, ಅಮ್ಮ, ಹುಟ್ಟೂರು, ಹೆತ್ತೋರು, ಮನೆ, ಗಿಡ ಮರ, ಸ್ನೇಹಿತರು'' ಎಲ್ಲವನ್ನೂ ತ್ಯಜಿಸಿ ಪತಿಯ ಹಿಂದೆ ಬರುವ ಹೆಣ್ಣು ಮಕ್ಕಳ ಬಹುದೊಡ್ಡ ಆಸ್ತಿ ''ಕಣ್ಣೀರು''. ಮನಸ್ಸಿಗೆ ಬೇಸರವಾದಾಗ ನಾಲಕ್ಕು ಹನಿ ಕಣ್ಣೀರು ಹಾಕಿದರೆ ಅವರಿಗೆ ಅದೆಷ್ಟೋ ಸಮಾಧಾನ."..So true..My hubby says it is 'Emotional Blackmailing'..

Enjoy Back home..Have a nice trip :)

Manasa said...

Wish you a very happy and safe journey...

Enjoy your stay in India :)

ಡಾ.ಕೃಷ್ಣಮೂರ್ತಿ.ಡಿ.ಟಿ. said...

happy journey.Have a gala holiday.shall send mobile number to your e mail.

ಜಲನಯನ said...

ಡಾ. ಗುರು, ಏನಿದು ತಾಯ್ನಾಡಿಗೆ ಬರುವ ಯೋಚನೆ ಮಾತ್ರದಿಂದ ಧುಮುಕಿದೆ ರಸಿಕತೆ ಪದಗಳ ಸಿರಿವಂತಿಕೆಯ ನೊರೆಯೊಡನೆ....ವಾ,..ಗುರು...ಎನ್ನದೇ ವಿಧಿಯಿಲ್ಲ.....ಹಹಹ...

ಸುಧೇಶ್ ಶೆಟ್ಟಿ said...

Welcome to India :)

Divya Mallya - ದಿವ್ಯಾ ಮಲ್ಯ said...

chennagide kavana :) GP rajaratnam nenapagutte...

ಅರಕಲಗೂಡುಜಯಕುಮಾರ್ said...

ಸರ್, ತಾಯ್ನಾಡಿಗೆ ಸ್ವಾಗತ:) ಈ ನಡುವೆ ನಿಮ್ಮ ಬರಹ ಮಿಸ್ ಮಾಡ್ಕೋತಿವಲ್ಲ ಅಂತ ಬೇಸರವೂ ಇದೆ. ಇರ್ಲಿ ಬಿಡಿ ಮೇ 28ರವರೆಗೆ ಕಾಯುತ್ತೇವೆ. ಅಂದಹಾಗೆ ಪ್ರವಾಸ ಕಥನವನ್ನು ಪತ್ರಿಕೆಯಲ್ಲಿ ಪ್ರಕಟಿಸಿದರೆ ಹೇಗೆ ಅಂತ? ನಿಮ್ಮ ಒಪ್ಪಿಗೆ ತಿಳಿಸಿ. ಊರಿಗೆ ಬಂದಾಗ ಹಾಸನ/ಅರಕಲಗೂಡಿಗೆ ಬನ್ನಿ. ಬಿಸಲೆ ರಕ್ಷಿತಾರಣ್ಯದ ಸುಂದರ ಪರಿಸರ, ಕರ್ನಾಟಕ ಶಾಸ್ತ್ರೀಯ ಸಂಗೀತದ ತವರು ರುದ್ರಪಟ್ಟಣ, ಅಲ್ಲಿನ ಪ್ರಸಿದ್ದ ನಾದವೇದ ಮಂಟಪ,ಬೇಲೂರು-ಹಳೆಬೀಡು,ಶ್ರವಣಬೆಳಗೊಳ,ಉಪಗ್ರಹ ನಿಯಂತ್ರಣ ಕೇಂದ್ರ ಹೀಗೆ ಏನೆಲ್ಲ ನೋಡ್ಲಿಕ್ಕಿದೆ ಅವಕಾಶವಾದರೆ ಬನ್ನಿ.

ಮನಸು said...

ಕವನ ತುಂಬಾ ಚೆನ್ನಾಗಿದೆ. ತವರೂರ ಭೇಟಿ ಸಂತಸ ನೀಡಲಿ, ಪ್ರಯಾಣ ಸುಖಪ್ರದವಾಗಿರಲಿ.

Bhat Chandru said...

kavanada saalugalu mattu lekhana eradu tumba chennagive.
nimma prayaana sukakaravagirali.

ಜ್ಯೋತಿ ಶೀಗೆಪಾಲ್ said...

ohhhh... Welcome Guru.... wish u happy and safe journey...

ಸೀತಾರಾಮ. ಕೆ. / SITARAM.K said...

ತಮಗೆ ಶುಭಪ್ರಯಾಣ ಕೋರುತ್ತಾ ಹೊಸಪೇಟೆಗೆ ಬರಲು ಆಮ೦ತ್ರಿಸುತ್ತಿದೆನೆ. ಸಮಯ ಮಾಡಿಕೊ೦ದು ಬಒದರೆ ಹ೦ಪೆ ನೋಡಿಕೊ೦ಡು ಹೋಗಬಹುದು.
ಮನದನ್ನೆಯ ರಮಿಸುವ ತಮ್ಮ ಈ ಪ್ರಾಸ ಕವನ ಚೆನ್ನಾಗಿ ಮೂಡಿ ಬ೦ದಿದೆ.

!! ಜ್ಞಾನಾರ್ಪಣಾಮಸ್ತು !! said...

ಬಾಯಿ ತೆರೆವ ಮುನ್ನ ಬಾಯಿಗೆ (..ದ ಚಿಲಕ ತೊಡಿಸಬೇಕು...
ಚೆನ್ನಾಗಿದೆ..

shivu.k said...

ಗುರುಮೂರ್ತಿ ಸರ್,

ನೀವು ಭಾರತಕ್ಕೆ ಬರುತ್ತಿರುವ ಸಮಯದಲ್ಲಿ ಒಂದು ನವರಸ ತುಂಬಿದ ದಾಂಪತ್ಯ ಕವನವನ್ನು ಹಾಕಿದ್ದೀರಿ....

ನಿಮ್ಮನ್ನು ವೆಂಡರ್ ಕಣ್ಣು ಪುಸ್ತಕದೊಂದಿಗೆ ಭಾನುವಾರ ಬೇಟಿಯಾಗಲು ಕಾಯುತ್ತಿದ್ದೇನೆ...ನನ್ನ ಫೋನ್ ನಂಬರ್ ಬರೆದುಕೊಂಡಿದ್ದೀರಲ್ಲ.....

sunaath said...

ಮಧುರವಾದ ಪ್ರೇಮಕವನ! ಅಲ್ಲಿರುವ photo ಕೂಡ ಮುದ್ದಾಗಿದೆ. ಭಾರತಕ್ಕೆ ಸ್ವಾಗತ!

Shashi jois said...

ಕವನ ಚೆನ್ನಾಗಿದೆ.ತಾಯ್ನಾಡಿಗೆ ಸ್ವಾಗತ .ಪ್ರಯಾಣ ಸುಖಕರವಾಗಲಿ.

yogish said...

ಕವಿತೆ ಚೆನ್ನಾಗಿದೆ,ಸುಖಕರ ಮತ್ತು ಶುಭಪ್ರಯಾಣ ವನ್ನು ಆಶಿಸುವ,ಯೋಗೀಶ್ ಭಟ್

ಓ ಮನಸೇ, ನೀನೇಕೆ ಹೀಗೆ...? said...

ಮಡದಿಯ ಸಿಟ್ಟನ್ನು ರಮಿಸಿ ತಣಿಸುವ ಪ್ರಯತ್ನದ ಕವಿತೆ ತುಂಬಾ ಚೆನ್ನಾಗಿದೆ. ಕವಿತೆಯ ಜೊತೆಗೆ ಬರೆದಿರುವ ಟಿಪ್ಪಣಿ ಕೂಡಾ ತುಂಬಾ ಚೆನ್ನಾಗಿದೆ. (ಕವಿತೆಯ ಜೊತೆ ಹೀಗೆ ಒಂದು ಸಣ್ಣ ವಿವರಣೆ ಬರೆಯುವ ಪದ್ದತಿ ಇಷ್ಟವಾಯ್ತು. ನಾನೂ ಕೂಡ ಇದನ್ನು ಪ್ರಯತ್ನಿಸುತ್ತೇನೆ...:))

ನಿಮ್ಮ ಭಾರತ ಪ್ರವಾಸ ಸುಖಕರವಾಗಿರಲಿ.

ಗೌತಮ್ ಹೆಗಡೆ said...

welcome back :)

Subrahmanya said...

chennagide kavana. haagee bhaarathakke swaagatha.

AntharangadaMaathugalu said...

ತಾಯ್ನಾಡಿಗೆ ಸ್ವಾಗತ ಗುರು ಸಾರ್.... ನಿಮಗೂ ನಿಮ್ಮ ಪರಿವಾರದವರಿಗೂ ಶುಭ ಪ್ರಯಾಣ.....

Venkatakrishna.K.K. said...

ಬನ್ನಿ ಸಾರ್ ...ದಕ್ಷಿಣಕನ್ನಡಕ್ಕೆ..
ಹತ್ತೂರು ಕೊಟ್ಟರೂ ಬಿಡದ ಪುತ್ತೂರಿಗೆ..ನನ್ನೂರಿಗೆ..
ಪ್ರೀತಿಯ ಸ್ವಾಗತ ನಿಮಗೆ..

ಸುಬ್ರಮಣ್ಯ ಮಾಚಿಕೊಪ್ಪ said...

:-)

PARAANJAPE K.N. said...

ಕವನ ತುಂಬಾ ಚೆನ್ನಾಗಿದೆ

ಚಿತ್ರಾ said...

ಗುರು,
ಚಂದದ ಕವನ !
ತಾಯ್ನಾಡಿನ ಪ್ರವಾಸ ಸುಖಕರವಾಗಿರಲಿ ! ಬರಹಗಳಿಗಾಗಿ ಕಾಯುತ್ತೇವೆ.

"NRK" said...

"ಸರಸವೇ ಜನನ
ವಿರಸವೇ ಮರಣ
ಸಮರಸವೇ ಜೀವನ" ಎನ್ನುವ ಕವಿವಾಣಿ ನೆನಪಾಯ್ತು.
ಯಾವುದಾದರು ಒಂದು ಹೆಚ್ಚಾದರೂ ಕಷ್ಟ, ಎಲ್ಲ ಸಮವಾಗಿರ್ಬೇಕು ಅಲ್ವಾ ?

ಹಾಗೆ . . . ನೀವೀಗ ಬಹುಶಃ ಬೆಂಗಳೂರಿಗೆ ಬಂದಿರಬಹುದು, ದಂಪತಿಗಳಿಗೆ "ತುಂಬು ಹೃದಯದಿಂದ ಸ್ವಾಗತ"
--

ಮನದಾಳದಿಂದ said...

ಗುರು ಸರ್,
ಏನೋ ನಲ್ಲೆಯ ಮೇಲೆ ಪ್ರೀತಿ ತುಂಬಿದ ಕವನ ಬರೆದಿದ್ದೀರಲ್ಲ! ತಾಯ್ನಾಡಿಗೆ ಬರುತ್ತಿದ್ದೆನೆಂಬ ಖುಷಿಯಿಂದನಾ?
ಚೆನ್ನಾಗಿದೆ ಸರ್,
ಊರಿಗೆ ಬರುತ್ತಿರುವ ನಿಮಗೆ ಸ್ವಾಗತ.. ಸುಸ್ವಾಗತ....
have a safe and haqppy jurny..

Mangala Bhat said...

Hey Nice one ...Enjoi Back Home .

Thanks for visiting and lovely comment!:)

ಸವಿಗನಸು said...

ಕವನ ತುಂಬಾ ಚೆನ್ನಾಗಿದೆ....
Happy & Safe Journey..... Enjoy your trip

akshata said...

welcome to india guru avare, mumbai ge barOdaadre tuMba saMtOShavaagutte, nanna phone no. mail ge kalistini.
nimma kavite mattadara tippani tumbaane cannaagide.
akshata.

ಶಾಂತಲಾ ಭಂಡಿ said...

ಗುರು ಅವರೆ...
ಮೇ ಏಳರಿಂದ ಮೇ ಇಪ್ಪತಾರರ ತನಕ ಮಾತ್ರನಾ? ಅಯ್ಯೋ.. ಇನ್ನು ಸ್ವಲ್ಪ ಜಾಸ್ತಿ ದಿನ ಇರ್ಲಾಗಿತ್ತು.
ಆಗ್ಲಿ, ಇಷ್ಟಾದ್ರೂ ಬತ್ರಲಿ, ಅಷ್ಟೇ ಸಮಾಧಾನ :-)

ವಿ.ಆರ್.ಭಟ್ said...

ಬನ್ನಿ,ತಾಯ್ನಾಡಿಗೆ ಸ್ವಾಗತ,ಹಾಗೂ ಈ ನಿಮ್ಮ ಕವನ ಬಹಳ ಉತ್ಸುಕತೆ ತುಂಬಿ ಉಕ್ಕಿ ಹರಿಯುತ್ತಿದೆ,ಧನ್ಯವಾದಗಳು

Sachi said...

Welcome to Karnataka .Looking Farward to meet you

Sachi said...

Welcome to Karnataka

Ranjita said...

ಗುರು ಅಣ್ಣ ,
lekhana chennagiddu

happy journey ..
aaramagi hogi banni ..

Snow White said...

Have a great time sir :)tumba chennagide nimma kavana sir :)

Raghu said...

ಕವಿತೆ ಚೆನ್ನಾಗಿದೆ...
ನಿಮ್ಮವ,
ರಾಘು.

Sadanand said...

ಅದು ಹೇಗೋ ಏನೋ ನಿಮ್ಮ ಬ್ಲಾಗ್ ಸಿಕ್ಕಿತು ,
ತುಸು ಹೊತ್ತು ಬೇಜಾರಿನಿಂದ ಹೊರಗೆ ಬರುವ ವೇಳೆ ,
ಸ್ವಲ್ಪ ಆಫೀಸ್ ಕೆಲಸವನ್ನೆಲ್ಲಾ ಬದಿಗಿಟ್ಟು , ನನ್ನೀ ದೃಷ್ಟಿಯ
ನಿಮ್ಮೀ ಪದಗಳ ಮೇಲೆ ನೆಟ್ಟಿದ್ದೆ ಸರಿ , ನಿಮ್ಮ ಪದ ಸಂಕಲನ
ನೋಡಿ ಮನಸ್ಸಿಗಿದೋ ಖುಷಿ ಆಯ್ತು .
ತುಂಬಾ ಚೆನ್ನಾಗಿದೆ ನಿಮ್ಮ ಕವನ !!!

ಭಾವಜೀವಿ... said...

ಗುರು,

ಒಳ್ಳೆ ಕವನ!
ನಿನ್ನನ್ನು ನೋಡಿ, ಮಾತಾಡಿ ಬಹಳ ಕಾಲವೆ ಆಯ್ತು ನೋಡು! ನೋಡೋಣ ನಾನೂ ಆ ಸಮಯದಲ್ಲಿ ಬೆಂಗಳೂರಿಗೆ ಬಂದ್ರೆ, ಸಿಗೋದಿಕ್ಕೆ ಪ್ರಯತ್ನ ಮಾಡ್ತೀನಿ!

ಸಾಗರದಾಚೆಯ ಇಂಚರ said...

ಸ್ನೇಹಿತರೆ
ಪ್ರತೊಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು
ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಲು ಸಾಧ್ಯವಾಗಿಲ್ಲ
ಕ್ಷಮಿಸಿ
ಹೀಗೆಯೇ ಪ್ರೋತ್ಸಾಹಿಸುತ್ತಿರಿ

ವಸಂತ್ said...

ಕವನ ತುಂಬಾ ಚೆನ್ನಾಗಿದೆ ಸರ್ ಆದ್ರೆ, ನಿಮ್ಮೊಳಗಿನ ತಾಯ್ನಾಡ ಅಕ್ಕರೆ ಕಂಡು ತುಂಬಾ ಕುಷಿಯಾಯಿತು. ಧನ್ಯವಾದಗಳು ಸರ್.

ವಸಂತ್