Monday, April 5, 2010

Fashion Show -ಲಲನೆಯ ಚಲನೆ


ಇತ್ತೀಚಿಗೆ ಸ್ವೀಡನ್ನಿನ ಗೊತ್ಹೆಂಬುರ್ಗ್ ನಲ್ಲಿ ಒಂದು Fashion ಶೋ ನಡೆಯಿತು. ಇಲ್ಲಿನ ಸುಪ್ರಸಿದ್ದ ಶಾಪಿಂಗ್ ಮಳಿಗೆಯಾದ Norsdstan ನಲ್ಲಿ ನಡೆದ Fashion ಶೋ ಎಲ್ಲರ ಮನ ಸೆಳೆಯಿತು. ಸುಂದರ ನೀರೆಯರ ಅಂದದ  ಉಡುಗೆಗಳು, ಚಂದದ ನಗುವಿನ ಅಂದದ ನಡಿಗೆ ಎಲ್ಲರ ಮನಸ್ಸಿನಲ್ಲಿ ಸಂತಸದ ವಾತಾವರಣ ನಿರ್ಮಿಸಿತು. ಹೇಳಿ ಕೇಳಿ ಸ್ವೀಡನ್ನಿನ ಹುಡುಗಿಯರು ಜಗತ್ತಿನಲ್ಲೇ ಸೌಂದರ್ಯದಲ್ಲಿ ಹೆಸರುವಾಸಿಯಂತೆ. ಕಳೆದ ವರ್ಷ ಜಗತ್ತಿನಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಸ್ವೀಡನ್ನಿಗೆ ಸುಂದರ ಲಲನೆಯರು  ಇರುವ ಸ್ಥಳ ಎಂಬ ಬಿರುದು  ದೊರಕಿದೆ.

ಲಲನೆ, ನಿನ್ನ ಸೌಂದರ್ಯಕೆ ಸಾಟಿಯೆಲ್ಲಿ...


ಬೆಕ್ಕಿನ ನಡಿಗೆಯೇ....ವಸ್ತ್ರ ವಿನ್ಯಾಸಕೆ ಬೆರಗಾಗದವರ್ಯಾರು...


ಬಣ್ಣ ಬಣ್ಣದ ಲೋಕ, ಬಣ್ಣಿಸಲು ಸಾಲದು ಈ ಸಾಲು.


.ಚೆಲುವೆಯೇ ನಿನ್ನ ನೋಡಲು.....


ನಾವೇನೂ ಕಡಿಮೆಯಿಲ್ಲ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು 


ಭವಿಷ್ಯದ ಸುಂದರಾಂಗನೆ....

ಅಮ್ಮ ನಿನ್ನ ತೋಳಿನಲ್ಲಿ ಕಂದಾ  ನಾನು .....

ನಮ್ಮೂರ ಮಂದಾರ ಹೂವೆ...


ಗತ್ತಿನ ನೋಟವೇ... ಸುತ್ತಣ ನೋಟವೇ?


ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು....


ಸ್ವಲ್ಪ ಯೋಗ, ಸ್ವಲ್ಪ ಆಟ, ದೇಹಕ್ಕೆ ಸ್ವಲ್ಪ ಕಾಟ 


ನೋಡುವ ಕಣ್ಣುಗಳಿವು , ಹರಸುವ ಕಣ್ಣು ಗಳು ಹೌದು

ಮುಂದಿನ ವಾರ ಡೆನ್ಮಾರ್ಕಿನ ತುತ್ತತುದಿಯ ಭಾಗದಲ್ಲಿರುವ ಗ್ರೆನೇನ್ ಎಂಬ ಭೂಲೋಕದ ಸ್ವರ್ಗದ ಪ್ರವಾಸ ಕಥನ ದೊಂದಿಗೆ ಬರುತ್ತೇನೆ. ಅಲ್ಲಿಯವರೆಗೆ ಸೌಂದರ್ಯವನ್ನು ನೋಡಿ ಆನಂದಿಸಿ.

61 comments:

ಮನಸು said...

ಎಲ್ಲರು ತಿಳಿದಿದ್ದಾರೆ ನೀವೆಲ್ಲೋ ಕೆಲಸದ ಒತ್ತಡದಲ್ಲಿದ್ದು ಬ್ಲಾಗಿಗೆ ಲೇಖನ ಬಿತ್ತರಿಸಿರಲಿಲ್ಲವೆಂದು ಈಗ ತಿಳಿಯಿತು ನಿಮ್ಮ ತಡವಾದ ಲೇಖನಕ್ಕೆ ಹಹಹ

shivu.k said...

sir,

sweedon sunderiyarannu nodi kannu tampaithu....thanks...

PARAANJAPE K.N. said...

ಸ್ವೀಡನ್ ಲಲನೆಯರ ಸೊಬಗಿನ ಚಲನೆಯ ಸಚಿತ್ರ ವರದಿ ಮನಸಿಗೆ ಮುದವನಿತ್ತಿತು. ಚೆನ್ನಾಗಿದೆ.

ಸೀತಾರಾಮ. ಕೆ. said...

ಸು೦ದರ ಛಾಯಾಚಿತ್ರಗಳು. ಕಣ್ಣು -ಮನ ತ೦ಪಾಯಿತು.

ಸಾಗರದಾಚೆಯ ಇಂಚರ said...

ಮನಸು
ಬ್ಲಾಗಿಗಾಗಿ ಹೊಸ ಲೇಖನ ಬರೆಯುತ್ತಿದ್ದೇನೆ, ಅದು ಮುಗಿದಿಲ್ಲ
ಬ್ಲಾಗ್ ಹಾಗೆಯೇ ಬಿಡಬಾರದೆಂದು ಇದನ್ನು ಹಾಕಿದೆ
ನೀವು ಅಂದುಕೊಂಡಂತೆ ಅಲ್ಲ :)

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಶಿವೂ ಸರ್

ಕಣ್ಣು ಮನಸ್ಸು ತಂಪಾಯಿತಲ್ಲವೇ?
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಇಲ್ಲಿ ಅನೇಕ ಇಂಥಹ ಸೌಂದರ್ಯ ಸ್ಪರ್ಧೆಗಳು ನಡೆಯುತ್ತಾ ಇರುತ್ತವೆ

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಸೀತಾರಾಮ್ ಸರ್
ಮನಸ್ಸು ಯಾವತ್ತೂ ತಂಪಾಗಿರಬೇಕಲ್ಲ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೀಗೆಯೇ ಬರುತ್ತಿರಿ

sunaath said...

ಗುರುಮೂರ್ತಿಯವರೆ,
ಇನ್ನಷ್ಟು ಇಂತಹ ತಂಪು ನೀಡುವ ಚಿತ್ರಮಾಲೆಯನ್ನು ನೀಡಿರಿ.
ಭಗವಾನ್ ಆಪಕೀ ಭಲಾ ಕರೇ!

ಸಾಗರದಾಚೆಯ ಇಂಚರ said...

ಸುನಾಥ್ ಸರ್
ಖಂಡಿತಾ
ಮುಂದೊಮ್ಮೆ ಇಂಥಹ ಕಾರ್ಯಕ್ರಮಗಳಿಗೆ ಹೋದರೆ ಫೋಟೋ ಹಾಕುತ್ತೇನೆ :)

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಭಗವಾನ್ ಆಪ್ ಕೋ ಭಿ ಭಲಾ ಕರೆ

ಪ್ರವೀಣ್ ಭಟ್ said...

manasu n kannu tampayitu

pravi

Anonymous said...

wooow,,elroo tumbaa chennaagiddare..:)

ಮನಮುಕ್ತಾ said...

good photographs..

ಸವಿಗನಸು said...

ಗುರು,
ನಿಮ್ಮೂರ ಮಂದಾರ ಹೂ ಗಳನ್ನು ಚೆನ್ನಾಗಿ ಸೆರೆ ಹಿಡಿದಿದ್ದೀರ.....
ಎಲ್ಲರ ಕಣ್ಣು ತಂಪಾಗಿಸಲು....

Snow White said...

chitragalu tumba chennagive sir :)

jithendra hindumane said...

ಗುರುಮೂರ್ತಿಯವರೇ, ಫೋಟೋ ಹಾಗೂ ಬರಹ ಚೆನ್ನಾಗಿದೆ.
ಭಾರತದ ಶೋಗಳಿಗೆ ಹೋಲಿಸಿದರೆ ಸಭ್ಯವಾಗಿದೆ,,,!

ದಿನಕರ ಮೊಗೇರ.. said...

aahaa....... olleya collection sir.... swalpa zoooom haakidre olleyaditteno........... alvaa sir.... dhanyavaada....... nanna blog kade banni sir...... yaako yaara blog nalloo naanu bareda post bagge update hogtaa illa.......

ಬಾಲು ಸಾಯಿಮನೆ said...

ಭರ್ಜರಿಯಾಗಿಗೇ Summerಗೆ ಸ್ವಾಗತ ಕೋರುತ್ತೀದ್ದೀರಿ ಎಂದಾಯಿತು! ಮುಂದಿನ ಲೇಖನಕ್ಕೆ ಕಾತರದಿಂದ ಕಾಯುತ್ತದ್ದೇನೆ.

ವಿ.ಆರ್.ಭಟ್ said...

ರಾಂಪ್ ಶೋ ಅಂದರೆ ಇದೆಲ್ಲ ಇರಲೇಬೇಕಲ್ಲವೇ, ಬಹುಶಃ ಇವಿಲ್ಲದಿದ್ದರೆ ಜನ ನೋಡುತ್ತಲೇ ಇರಲಿಲ್ಲವೇನೋ ! ಚಿತ್ರಗಳು ಚೆನ್ನಾಗಿವೆ, ಹುಡುಗು ಬುದ್ಧಿಯ ರಸಿಕರಿಗಂತೂ ರಸದೌತಣ ! ಧನ್ಯವಾದಗಳು

ಸಾಗರದಾಚೆಯ ಇಂಚರ said...

Praveen,

manasu kannu tampaagiddu keli namage khushi aayitu

heegeye bartaa iri

hosadannu needalu prayatnisuve

ಸಾಗರದಾಚೆಯ ಇಂಚರ said...

ಆಕಾಶ ಬುಟ್ಟಿ
ಹೌದು, ಇಲ್ಲಿನ ಶೋ ಗಳು ಅಚ್ಚು ಕಟ್ಟಾಗಿ ನಡೆಯುತ್ತವೆ
ಹಾಗೆಯೇ ಶೋ ದಲ್ಲಿ ಬರುವವರು ಕೂಡಾ :)

ಸಾಗರದಾಚೆಯ ಇಂಚರ said...

Manamukta

thanks for the comments

ಸಾಗರದಾಚೆಯ ಇಂಚರ said...

ಸವಿಗನಸು ಮಹೇಶ್ ಸರ್
ನಮ್ಮೂರ ಮಂದಾರ ಹೂಗಳನ್ನು ನಿಮ್ಮೂರಿಗೆ ತಿಳಿಸುವ ಒಂದು
ಸಣ್ಣ ಪ್ರಯತ್ನ :)

ನಿಮ್ಮೂರಿನ ಮಂದಾರ ಹೂಗಳನ್ನು ನೀವು ನಮಗೆ ತೋರಿಸಲಿಲ್ಲವಲ್ಲ :)

ಸಾಗರದಾಚೆಯ ಇಂಚರ said...

Snow white,

thank you for the encouraging words

ಸಾಗರದಾಚೆಯ ಇಂಚರ said...

ಜಿತೇಂದ್ರ ಸರ್
ಅದು ನಿಜ, ಭಾರತದ ಶೋ ಗಳಿಗಿಂತ ಸ್ವಲ್ಪ ಸಭ್ಯತೆ ಇದೆ ಅಂತ ನನಗೂ ಅನ್ನಿಸಿತು
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ದಿನಕರ್ ಸರ್
ನೀವು ಹೇಳೋದು ನಿಜಾ, ಆದರೆ ನನ್ನ ಕ್ಯಾಮೆರಾ ದಲ್ಲಿ ಅಷ್ಟೊಂದು Zoom ಇಲ್ಲ
ಅದಕ್ಕೆ ಆದಷ್ಟು ಹತ್ತಿರದಿಂದ ತೆಗೆದೇ
ಒಂದು ಅಂಥಹ ಕ್ಯಾಮೆರಾ ತೆಗೆದುಕೊಳ್ಳುವ ಯೋಚನೆ ಇದೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಬಾಲು
ಹೌದು, Summer ಗಾಗಿ ಕಾಯುತ್ತಿದ್ದೇವೆ
ನಿಮ್ಮ ಪ್ಲಾನ್ ಏನು?
ನಮ್ಮ ಕಡೆಯೂ ಬನ್ನಿ ಒಮ್ಮೆ

ಸಾಗರದಾಚೆಯ ಇಂಚರ said...

ವಿ ಅರ್ ಭಟ್ ಸರ್
ಇದೆಲ್ಲ ಇದ್ದರೇನೆ ಜೀವನ ಅಲ್ಲವೇ?
ಇಲ್ಲಿನ ಶೋ ಗಳು ಭಾರತಕ್ಕೆ ಹೊಲಿಸದರೆ ಸ್ವಲ್ಪ ಸಭ್ಯತೆಯಿಂದ ಕೂಡಿರುತ್ತವೆ.
ನಾವು ಇಲ್ಲಿಯವರ ಸಂಸ್ಕ್ರತಿಯ ಬಗ್ಗೆ ಬಯ್ಯುತ್ತೇವೆ, ಆದರೆ ನಮ್ಮ ಸಂಸ್ಕ್ರತಿಯನ್ನು
ಅವರಿಗಿಂತ ಹೆಚ್ಚಾಗಿ ಹಾಳು ಮಾಡುತ್ತಿದ್ದೇವೆ ಎನ್ನುವುದನ್ನು ಮರೆತಿದ್ದೇವೆ

ಶಿವರಾಮ ಭಟ್ said...

ಗುರುಮೂರ್ತಿಯವರೇ,
ನಿಮ್ಮ ಪೋಸ್ಟ್ ನ ಶೀರ್ಷಿಕೆ ಗಮನ ಸೆಳೆಯಿತು.
ನಾನು ಕೂಡ ಜುರಿಚ್ ನಲ್ಲಿ ಇದ್ದೆ. ನೀವಂದಂತೆ europe ಸೌಂದರ್ಯಾರಾಧಾಕರ ನಾಡು.
ಅದರಲ್ಲಿಯೂ ನೆದರ್ಲ್ಯಾಂಡ್ ನಲ್ಲಿ ಇನ್ನೂ ಉತ್ತಮ ಅವಕಾಶಗಳು ಸಿಗುತ್ತವೆ.
ನೀವಂದಂತೆ ನಮ್ಮ ಗ್ರಹಿಕೆ ತಪ್ಪು.
UK , Europe , ಅಮೇರಿಕಾದಲ್ಲಿ ಒಂದು ವ್ಯತ್ಯಾಸ ಇದೆ.
UK - TV ಗಳಲ್ಲಿ ಮುಕ್ತವಾಗಿ ಪ್ರದರ್ಶಿಸಿದರು ಮುಖತಃ ಮಾತನಾಡುವಾಗ ಜನ ಸಾಮಾನ್ಯವಾಗಿ ದೂರವಿರುತ್ತಾರೆ. [ weather, ಸ್ಪೋರ್ಟ್ಸ್ ಮಾತಾಡುವುದೇ jaasti ]
Rest of Europe : ತುಂಬಾ ಇಷ್ಟಪಡುತ್ತಾರೆ. ಸೌಂದರ್ಯ ಪ್ರಜ್ಞೆ ಇದೆ. ಪ್ರದರ್ಶನ ಪ್ರಿಯರು.
America : ಹೆಚ್ಚಾಗಿ ಹಣಕಾಸು ವಿಷಯದ ಮೇಲೆ ಆಸಕ್ತಿ. TV ಯಲ್ಲಿಯೂ ಮಡಿವಂತಿಕೆ ಕಾಣಬಹುದು. ಮಾರುಕಟ್ಟೆಯಲ್ಲಿ ಮಾತ್ರ ಹೇರಳವಾಗಿ ಸೌಂದರ್ಯ ಸರಕುಗಳು ಲಭ್ಯ.
ನನ್ನ ಬ್ಲಾಗಿಗೆ ತಮಗೆ ಸ್ವಾಗತ
http://shivarama-bhat.blogspot.com/
ನಮಸ್ಕಾರ
ಶಿವರಾಂ

ಸುಬ್ರಮಣ್ಯ ಮಾಚಿಕೊಪ್ಪ said...

ಕ್ಲೋಸ್-ಅಪ್ ಫೋಟೋ ಇದ್ದಿದ್ದರೆ ಇನ್ನೂ ಚನ್ನಾಗಿರ್ತಿತ್ತು!!!!

ಮೌನಿ said...

ಗುರುಮೂರ್ತಿ ಸರ್....
ಅಪರೂಪಕ್ಕೆ ಇಂತಹ ಬರಹಗಳೂ ಇದ್ದರೆ ಚೆನ್ನ...
ಅಲ್ಲಿಯ ಲಲನೆಯರು ಜಗತ್ತಿನ ಸುಂದರಿಯರು ಎನ್ನುವದು ಗೊತ್ತಿರಲಿಲ್ಲ....ದಿನಕರ್ ಸರ್ ಹೇಳಿದಂತೆ ಸೌಂದರ್ಯವನ್ನು ಇನ್ನೂ ಹತ್ತಿರದಿಂದ ಸವಿಯುವ ಆಸೆ ಸಹಜ....

ಡಾ.ಕೃಷ್ಣಮೂರ್ತಿ.ಡಿ.ಟಿ. said...

ಸ್ವೀಡನ್ನಿನಲ್ಲಿ ಕೂಡ ನಮ್ಮೂರ ಮಂದಾರ ಹೂವುಗಳು ಮತ್ತು ನಿಂಬೆ ಹಣ್ಣಿನಂತಹ ಬೆಡಗಿಯರು ಜ್ಞಾಪಕ ಬಂದರಾ ಗುರೂಜಿ ?

Subrahmanya said...

ಚಿತ್ರಗಳು ತುಂಬ ಚೆನ್ನಾಗಿವೆ. ಇನ್ನೂ ಇದೆಯಾ ??!

ಸೀತಾರಾಮ. ಕೆ. said...

ಕೆಲವೊ೦ದು ಫೋಟೊಗಳನ್ನ ಲೇಖಕರು ಸೆನ್ಸಾರ್ ಮಾಡಿದ ಹಾಗಿದೆ.... !!!!! ?????????

ಗುರು-ದೆಸೆ !! said...

ಸಾಗರದಾಚೆಯ ಇಂಚರ,
ಲಲನೆ!

ಹತ್ತಿರ ಹತ್ತಿರ ಬಾ..
ಮೆತ್ತಗೆ ಮೆತ್ತಗೆ ಬಾ..

ನಿಮ್ಮ ನಿರೀಕ್ಷೆಯಲ್ಲಿ..: http://manasinamane.blogspot.com/

ಸಾಗರದಾಚೆಯ ಇಂಚರ said...

ಶಿವರಾಂ ಸರ್
ನೀವು ಹೇಳೋದು ನಿಜ
ನಾವು ತಪ್ಪಾಗಿ ಅರ್ಥ ಮಾಡಿ ಕೊಂಡಿದ್ದಿವಿ
ನಿಮ್ಮ ಚಂದದ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೀಗೆಯೇ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಮಾಚಿಕೊಪ್ಪ ಸರ್
ಕ್ಯಾಮೆರಾ ದಲ್ಲಿ ಅಷ್ಟು ಕ್ಲೋಸ್ ಅಪ್ ಮಾಡೋಕೆ ಆಗಲೇ ಇಲ್ಲ
ಮತ್ತೊಮ್ಮೆ ಖನಿಡ್ತ ಕ್ಲೋಸ್ ಅಪ್ ತೆಗೆದು ಹಾಕ್ತೀನಿ :)

ಸಾಗರದಾಚೆಯ ಇಂಚರ said...

ಮೌನಿ,
ಹೌದು, ಏಕತಾನತೆ ಇರಬಾರದು, ವೈವಿದ್ಯತೇನೆ ಬದುಕಿಗೆ ಚಂದ
ಅದಕ್ಕೆ ಸ್ವಲ್ಪ ಚೇಂಜ್ ಇರಲಿ ಅಂತ ಸೌಂದರ್ಯ ದ ಫೋಟೋ ಹಾಕಿದೆ
ಹೀಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಕೃಷ್ಣಮೂರ್ತಿ ಸರ್
ಇಲ್ಲೂ ಕೂಡಾ ನಿಂಬೆ ಹಣ್ಣಿನಂತ ಹುಡುಗಿಯರು ಇದ್ದಾರೆ ಅಂತ ಹೇಳೋ ಪ್ರಯತ್ನ ಅಷ್ಟೇ :)
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಸರ್
ಚಿತ್ರಗಳೂ ಇನ್ನೂ ಇವೆ, ಆದರೆ ಬ್ಲಾಗ್ ನಲ್ಲಿ ಅಷ್ಟೊಂದು ಹಾಕೋದು ಬೇಡ ಅಂತ ಸ್ವಲ್ಪಾನೆ ಹಾಕಿದಿನಿ :)

ಸಾಗರದಾಚೆಯ ಇಂಚರ said...

ಸೀತಾರಾಮ್ ಸರ್
ಹೌದು, ಸೆನ್ಸಾರ ಮಂಡಳಿಯ ಕೆಂಗಣ್ಣಿಗೆ ಗುರಿ ಆಗೋದು ಬೇಡ ಅಂತ ಸೆನ್ಸಾರ ಮೊದಲೇ ಮಾಡಿದೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಗುರು ದೆಸೆ,
ಹತ್ತಿರ ಹತ್ತಿರ ಬಾ ಅಂತಿರಲ್ಲ
ನೀವು ನಮ್ಮ ಬ್ಲಾಗಿನ ಹತ್ತಿರ ಹತ್ತಿರ ಬನ್ನಿ :)

ವಿ.ಆರ್.ಭಟ್ said...

ಗುರುಜೀ ತಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವೇ, ನೀವು ಹೇಳಿದ್ದೂ ಕೂಡ ನಿಜ, ಸಭ್ಯತೆಯ ಸೋಗಿನಲ್ಲಿ ಭಾರತದ ಹಲವುಕಡೆ ಏನೇನೋ ನಡೆದಿದೆ, [ಉದಾಹರಣೆಗೆ ಕಿಂಗ್ ಫಿಷರ್ ಫೋಟೋ ಶೂಟ್ ]ಅದಕ್ಕಿಂತ ನೇರ ಪ್ರಸಾರವೇ ಒಳ್ಳೆಯದು. ಧನ್ಯವಾದಗಳು

ಮನದಾಳದಿಂದ said...

ತಳುಕುವ ಬಳುಕುವ ಕುಲುಕುವ ವಯ್ಯಾರಿಯರ ಮೈ ಮಾಟಕೆ ಬೆರಗಾಗಬೇಡಿ ಸ್ವಾಮೀ!
ಇದು ಬರೀ ಪಳಪಳ ಹೊಳೆವ ಪ್ರದರ್ಶನದ ವಸ್ತು ಮಾತ್ರ! ಜೀವವಿದೆ, ಬಾವವಿಲ್ಲ!
ಹ್ಹ ಹ್ಹಾ ಹ್ಹಾ !

ಸಾಗರದಾಚೆಯ ಇಂಚರ said...

ವಿ ಅರ್ ಭಟ್ ಸರ್
ಹೌದು, ನಾವು ಸಭ್ಯತೆ ಸಭ್ಯತೆ ಅಂತಾ ಹೇಳ್ತಾನೆ ಇರ್ತಿವಿ
ಇಲ್ಲಿಯವರದು ಎಲ್ಲವೂ ಕುಲ್ಲಂ ಕುಲ್ಲ
ನಾವು ಇವರ ಅನುಕರಿಸುತ್ತಿದ್ದೇವೆ, ಇವರು ನಮ್ಮನ್ನು ಅನುಕರಿಸುತ್ತಿದ್ದ್ದಾರೆ

ಸಾಗರದಾಚೆಯ ಇಂಚರ said...

ಮನದಾಳದಿಂದ,
ಕುಲುಕುವ ಮೈ ಮಾಟಕ್ಕೆ ಮರುಳಾದರೆ
ಮೆಲುಕುವ ದನದಂತೆ ನಮ್ಮ ಜೀವ ಸರ್ವಜ್ಞ
ನಿಮ್ಮ ಸುಂದರ ಅಭಿಪ್ರಾಯಕ್ಕೆ ಧನ್ಯವಾದಗಳು

AshKuku said...

Well written post with lovely pics... & Thanks for the love shared on my post..... Good Clothes....

Ash....
(http://hastkala-oceanichope.blogspot.com/)

ಸಾಗರದಾಚೆಯ ಇಂಚರ said...

SahKuku

thanks for the comments
keep visiting

ಸಿಮೆಂಟು ಮರಳಿನ ಮಧ್ಯೆ said...

ಗುರುಮೂರ್ತಿಯವರೆ...

ನೀರೆಯರ ಮನಸೆಳೆಯುವ ನಡಿಗೆ...
ನಡಿಗೆಗೆ ತಕ್ಕಂತೆ ಮುದಗೊಳಿಸುವ ಸಾಲುಗಳು...

ವಾಹ್..

ಮಸ್ತಾಗಿದೆ..!!

"ನಗುತ ...
ನಲಿಯುತ್ತ ಬಾ...
ಬಾ.. ಬಾ..
ಪಕ್ಕದಲಿ..
ಜೊತೆಯಾಗಿ...
ಹೆಜ್ಜೆಯಿಡಲು.. ಬಾ ಬಾ.. "

ಎನ್ನುತ್ತ ಕರೆಯುವಂತಿದೆ..!

ತಡವಾಗಿ ಭೇಟಿಕೊಟ್ಟಿದ್ದಕ್ಕೆ ಕ್ಷಮೆ ಇರಲಿ...

ಚಂದದ ಫೋಟೊ ಲೇಖನಕ್ಕೆ ಅಭಿನಂದನೆಗಳು...

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ

ಇಲ್ಲಿನ ಫ್ಯಾಶನ್ ಶೋ ಗಳು ಬಹಳ ಅಚ್ಚು ಕಟ್ತಾಗಿರುತ್ತವೆ
ನೀವು ಅಂದಂತೆ
ನಡಿಗೆಗೆ ತಕ್ಕ ಬಣ್ಣ,
ಬಣ್ಣಕ್ಕೆ ತಕ್ಕ ಮೈ ಮಾಟ
ನಿಮ್ಮ ಸುಂದರ ಅಭಿಪ್ರಾಯಕ್ಕೆ ಧನ್ಯವಾದಗಳು

ಚಿತ್ರಾ said...

ಗುರು...
ಸ್ವೀಡನ್ ನ ಸುಂದರಿಯರಷ್ಟೇ ಚಂದದ ಲೇಖನ !
ಅಲ್ಲಿನ ಲಲನೆಯರು ಪ್ಯಾರಿಸ್ ನ ಕಡ್ಡಿಗಳಂತೆ ಇರದೇ ನಿಂಬೆ ಹಣ್ಣಿನಂತೆ ಮೈ ಕೈ ತುಂಬಿಕೊಂಡಿರುವುದನ್ನು ಕಂಡು ಸಮಾಧಾನವಾಯಿತು . ಫ್ಯಾಶನ್ ಷೋ ಗೆ ಒಬ್ಬನೇ ಹೋಗಿದ್ಯಾ? ಹಿ ಹಿ ಹಿ ..
ಅಂದ ಹಾಗೇ , ಸೌಂದರ್ಯದ ವಿಷಯದಲ್ಲಿ , ಭಾರತೀಯ ಚೆಲುವೆಯರೂ ಕಮ್ಮಿಯಿಲ್ಲ ಎಂದು ತಿಳಿಸಿಬಿಡು !

ಸಾಗರದಾಚೆಯ ಇಂಚರ said...

ಚಿತ್ರಾ,
ಶೋ ಗೆ ನನ್ನ ಮಡದಿ ಬರುವಷ್ಟರಲ್ಲಿ ಅದು ಮುಗಿದೇ ಹೋಗಿತ್ತು
ನಂಗೆ ಬೇರೆ ಕೆಲಸ ಇದ್ದಿದ್ದರಿಂದ ನಾನು ಸ್ವಲ್ಪ ಬೇಗನೆ ಹೋಗಿದ್ದೆ
ಇಲ್ಲಿನ ಸುಂದರಿಯರು ನೀವಂದಂತೆ ಪ್ಯಾರಿಸ ನ ಕಡ್ಡಿಗಳಂತೆ ಇಲ್ಲ
ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರ್ತಾ ಇರು

Ranjita said...

Lovely Collections guru anna ...
ಲಲನೆಯರು , ಚಿತ್ರ ಲೇಖನ ಎಲ್ಲವು ಸೂಪರ್ :)

ಸಾಗರದಾಚೆಯ ಇಂಚರ said...

Ranjitha

Thanks for the comments

heege bartaa iri

akshata said...

ತುಂಬ ಒಳ್ಳೆಯ ಫ಼ೋಟೋಗಳು, ಅದರ ಟೈಟಲ್ ಕೂಡ ಒಪ್ಪುವಂತಹದ್ದೇ. ನಿಮ್ಮ ಮುಂದಿನ ಬರಹ ಬೇಗ ಬರಲಿ.
ಅಕ್ಷತ

ರಾಘವೇಂದ್ರ ಹೆಗಡೆ said...

ಚಿತ್ರಗಳೊಂದಿಗೆ ತಾವು ಬಳಸಿಕೊಂಡ ಸಾಲುಗಳು, ಬರೆದ ಪದಗಳು ಬಹಳ ಸಮಯೋಚಿತವಾಗಿದೆ ಹಾಗೂ ಲೇಖನವನ್ನು ತುಂಬಾ ಆಪ್ತವಾಗಿಸುತ್ತವೆ.

SANTOSH MS said...

Sir,

The show appears to be very attractive and eye catching. Your captions also give special effects to the photos.

ಸಾಗರದಾಚೆಯ ಇಂಚರ said...

ಅಕ್ಷತ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೀಗ್ಯೆ ಬರುತ್ತಿರಿ

ಸಾಗರದಾಚೆಯ ಇಂಚರ said...

ರಾಘವೇಂದ್ರ ಸರ್
ನಿಮ್ಮ ಮಾತುಗಳಿಗೆ ನಾನು ಅಭಾರಿ
ನೀವು ಓದುಗರ ಅಭಿಪ್ರಾಯಗಳು ನಂಗೆ ಇನ್ನು ಹೆಚ್ಚೆಚ್ಚು ಬರೆಯಲು
ಪ್ರೇರೇಪಿಸುತ್ತಿವೆ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

Dear Santhosh

thanks for the lovely comment

keep visiting

ಪ್ರವೀಣ್ ಭಟ್ said...

Hi..

antu ille kutgandu denmark uttarada tudiyannu nodji..

hege poorti denmark torisbidu

mast baindu.. varnane photos ella

Pravi