Tuesday, February 2, 2010

ಅರಳುತಿರು ಎಂದೂ ...

ಕೃಪೆ : Google

ಆಗಸದ ಅಂಗಳದಿ ಅಂತರಂಗದ ಅಂದ
ಆಸೆಗಳ ಅಂಬಾರಿ ಅರಳಿಸಿದ ಚಂದ
ಅಂಕೆಗಳ ಅಂಚಿನಲಿ ಮಿಂಚಿಹುದು ಅನವರತ
ಅಕ್ಷರದಿ ಕುಕ್ಷರಿಗೆ ಹಾಡು ನಿರತ

ಅಂಧ ನಾ ಅನಬೇಡ,ಅಸಂಖ್ಯರಿಹರಿಲ್ಲಿ
ಅಜ್ಞಾನಿ ನೀನೆಂಬ ಅಳುಕು ಬೇಡ
ಅಂಕು ಡೊಂಕುಗಳೆಂಬ ಬಿಂಕದಲಿಹರೆಲ್ಲ
ಅವರಿವರ ನಡುವಿನಲಿ ನಗುತಲಿರು ನೀನು

ಅನ್ನವಸ್ತ್ರವ ಪಿಡಿದು ಅವಿರತದಿ ದುಡಿಯುತಿರು
ಅಂತರಾತ್ಮದ ಅಣತಿ ಮೀರದಿರು ಮನುಜ
ಅಂಜದಿರು,ಅರಳುತಿರು,ಅಸ್ಪ್ರಶ್ಯನೆನದಿರು
ಅನಂತದಾನಂತದಲಿ ಬಾಳು ಸತತ
 ಮನುಜ ಅರಳು ನಿರತ

84 comments:

ಸೀತಾರಾಮ. ಕೆ. / SITARAM.K said...

ಅದ್ಭುತ ಅರಳುವ ಪರಿಕಲ್ಪನೆ ತಮ್ಮದು -ವಿಶ್ವಮಾನವನತ್ತ.
ಚೆ೦ದದ ಬರಹ ಡಾ!ಗುರುಮೂರ್ತಿಯವರೇ.

Nisha said...

Superb, thumba chennagi baredideera. Liked it.

ತೇಜಸ್ವಿನಿ ಹೆಗಡೆ said...

ತುಂಬಾ ಸುಂದರವಾಗಿದೆ ಕವನ. ಅದರಲ್ಲೂ ಮೊದಲ ಚರಣ ಮತ್ತೂ ಇಷ್ಟವಾಯಿತು.

ಸವಿಗನಸು said...

ಕವನ ಓದಿ ಅಂಧ ಅನ್ನದೆ ಸದಾ ಅರಳುತ್ತಿರುವ ಆಗಿದೆ....
ಚೆಂದದ ಕವನ....

ಚುಕ್ಕಿಚಿತ್ತಾರ said...

ಚ೦ದದ ಕವಿತೆ..
ಭಾವ ತು೦ಬಿದ ಆಶಯ...

V.R.BHAT said...

chennagide,best of luck,keep writing

ಮನಸು said...

very nice kavana!!!

Guruprasad said...

wow,,ಒಳ್ಳೆಯ ಕವನ ಗುರು ಸರ್.... ಚೆನ್ನಾಗಿ ಇದೆ.... ಆದರೆ "ಅನ್ನವಸ್ತ್ರವ ಪಿಡಿದು" ಇದರಲ್ಲಿ ಪಿಡಿದು, ಶಬ್ದದ ಅರ್ಥ ಹಿಡಿದು ಅಂತ ನ?

ಸಾಗರದಾಚೆಯ ಇಂಚರ said...

ಸೀತಾರಾಮ ಸರ್,
ಬದುಕು ಮುನ್ನೆದೆಯಬೇಕು ಎನ್ನುವುದೇ ಕವನದ ಆಶಯ
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು

ಸಾಗರದಾಚೆಯ ಇಂಚರ said...

Nisha,

thanks for the comments

ಸಾಗರದಾಚೆಯ ಇಂಚರ said...

ತೇಜಸ್ವಿನಿಯವರೇ,
ನಿಮ್ಮ ಹಾರೈಕೆ ಬರೆಯಲು ಇನ್ನಷ್ಟು ಸ್ಪೂರ್ತಿ ಕೊಡುತ್ತದೆ,
ನಿಮ್ಮ ಕವನಗಳನ್ನು ಓದಿದಂತೆ ನನ್ನ ಶಬ್ದ ಭಂಡಾರ ಹೆಚ್ಚುತ್ತದೆ
ಅಭಿಪ್ರಾಯಕ್ಕೆ ವಂದನೆಗಳು

ಸಾಗರದಾಚೆಯ ಇಂಚರ said...

ಸವಿಗನಸು ಸರ್,
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೀಗೆಯೇ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಚುಕ್ಕಿ ಚಿತ್ತಾರ
ಅಭಿಪ್ರಾಯಕ್ಕೆ ವಂದನೆಗಳು
ಬದುಕು ಅರಳಿದರೆ ಚೆನ್ನ, ಕೆರಳಿದರೆ ಮೈ ಎಲ್ಲ ಕೆಸರು

ಸಾಗರದಾಚೆಯ ಇಂಚರ said...

ವಿ ಆರ್ ಭಟ್ ಸರ್
ನಿಮ್ಮ ಹಾರೈಕೆ ಸದಾ ಇರಲಿ
ಹೀಗೆಯೇ ಬರ್ತಾ ಇರಿ

ಸಾಗರದಾಚೆಯ ಇಂಚರ said...

Manasu,

thank you for the comments

ಸಾಗರದಾಚೆಯ ಇಂಚರ said...

ಗುರು
ಅಭಿಪ್ರಾಯಕ್ಕೆ ಧನ್ಯವಾದಗಳು
ನೀವು ಹೇಳಿದ್ದು ನಿಜ, ಪಿಡಿದು ಇದರ ಅರ್ಥ ಹಿಡಿದು ಎಂದು,
ಅನ್ನ ವಸ್ತ್ರಕ್ಕೊಸ್ಕರ ದುಡಿದು ಎನ್ನುವುದನ್ನು ಕವ್ಯಾತಮಕವಾಗಿ ಅನ್ನ ವಸ್ತ್ರವ ಪಿಡಿದು ಎಂದು ಹೇಳಿದ್ದೀನಿ
ಸದಾ ಬರ್ತಾ ಇರಿ

ಮನಮುಕ್ತಾ said...

ಅ೦ಕು ಡೊ೦ಕುಗಳೇನೇ ಇದ್ದರೂ ಅಲ್ಲಿಯೇ ನಗುನಗುತ್ತಾ ಇರಬೇಕೆ೦ಬ ಆಶಯ ಮೆಚ್ಚುವ೦ಥದ್ದು.ಕವಿತೆ ಮನಸ್ಸಿಗೆ ಹಿಡಿಸಿತು.

ದಿನಕರ ಮೊಗೇರ said...

ಗುರು ಸರ್,
ನವಿರಾದ ಸಂದೇಶ್ ಹೇಳುವ ಕವನಕ್ಕೆ ಧನ್ಯವಾದ...
ಅನ್ನವಸ್ತ್ರವ ಪಿಡಿದು ಅವಿರತದಿ ದುಡಿಯುತಿರು
ಅಂತರಾತ್ಮದ ಅಣತಿ ಮೀರದಿರು ಮನುಜ
ಅಂಜದಿರು,ಅರಳುತಿರು,ಅಸ್ಪ್ರಷ್ಯನೆನದಿರು
ಅನಂತದಾನಂತದಲಿ ಬಾಳು ಸತತ.....
ಈ ಸಾಲುಗಳಂತೂ ಸೂಪರ್ .......

ಗೌತಮ್ ಹೆಗಡೆ said...

hosa type bhaashe prayoga maadadange kaantu:)nice guranna:)

ಸಾಗರದಾಚೆಯ ಇಂಚರ said...

ಮನಮುಕ್ತಾ,
ಬದುಕೇ ಹಾಗೆ ಅಲ್ಲವೇ,
ಅನೇಕ ಸಂಕೋಲೆಗಳು
ಆದರೂ ಎದುರಿಸಲೇಬೇಕು
ನಾಳೆ ಎಂಬ ಸೂರ್ಯ ಬೆಳಕು ನೀಡುತ್ತಾನೆ ಎಂಬ ಆಶಾವಾದವೇ ಬದುಕಿಗೆ ದಾರಿದೀಪ

ಸಾಗರದಾಚೆಯ ಇಂಚರ said...

ದಿನಕರ್ ಸರ್
ನಿಮಗೆ ಇಷ್ಟವಾಗಿದ್ದಕ್ಕೆ ನನಗೆ ಸಂತಸ
ನಿಮ್ಮ ಹಾರೈಕೆ ಸದಾ ಇರಲಿ
ನನಗೂ ಆ ಸಾಲುಗಳು ಬಹಳ ನಾಟಿವೆ

ಸಾಗರದಾಚೆಯ ಇಂಚರ said...

ಗೌತಮ,
ಹೌದೋ, ಒಂಥರಾ ಬೇರೇನೆ ಶಬ್ದ ಪ್ರಯೋಗ ಮಾಡಿದ್ದಿ
ನಿಂಗಕಿಗೆ ಇಷ್ಟ ಆದ್ರೆ ಅದೇ ಖುಷಿ

Jagadeesh Balehadda said...

ಸರ್ ನಿಮ್ಮ ಸಾಲುಗಳು..
------------------------
ಅಂತರಂಗದಲ್ಲಿನ ಕತ್ತಲೆಯ
ತೊಳಲಾಟಗಳಿಗೆ
ದಾರಿದೀವಿಗೆಯಂತಿಹುದು
ಖಿನ್ನತೆಯ ಹಾದಿಯವಗೆ
ಉನ್ನತಿಯ ದಿಕ್ಕುತೋರುತಿಹುದು.
-------------------------

shivu.k said...

ಗುರು ಸರ್,
ಬದುಕಿನ ಸಂಕೋಲೆಗಳ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ.
ಇಷ್ಟವಾಯ್ತು...ಮುಂದುವರಿಸಿ..ಜೊತೆಗೆ ನಿಮ್ಮ ನಿತ್ಯ ಮತ್ತು ಅಲ್ಲಿನ ಜನರ ವಿಚಾರಗಳನ್ನು ಬರೆಯುತ್ತೇನೆಂದು ಮಾತು ಕೊಟ್ಟಿದ್ದೀರಿ...ನೆನಪಿರಲಿ...

SANTOSH MS said...

Sir,

Beautiful meaning and nicely explained.

ಸಾಗರದಾಚೆಯ ಇಂಚರ said...

ಜಗದೀಶ್
ನಿಮ್ಮ ಕವನ ಸೂಪರ್
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೀಗೆಯೇ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಶಿವೂ ಸರ್
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಖಂಡಿತ ನೆನಪಿದೆ
ಅದರ ಬಗ್ಗೆ ಈಗಾಗಲೇ ಮಾಹಿತಿ ಸಂಗ್ರಹಿಸುತ್ತಿದ್ದೇನೆ
ಸದ್ಯದಲ್ಲಿಯೇ ಇಲ್ಲಿಯ ಜನ ಜೀವನ ದ ಬಗ್ಗೆ ಬರೆಯುತ್ತೇನೆ
ನಿಮ್ಮ ಪ್ರೋತ್ಸಾಹ ಬರೆಯಲು ಇನ್ನೂ ಹೆಚ್ಚು ಪ್ರೇರೇಪಿಸುತ್ತದೆ

ಸಾಗರದಾಚೆಯ ಇಂಚರ said...

Santhosh,
thanks for the comments

keep visiting

ಸುಬ್ರಮಣ್ಯ said...

ನಮಸ್ಕಾರ
ಕವಿತೆಗಳೆಂದರೆ ನನಗೆ ಅಷ್ಟಕ್ಕಷ್ಟೇ. ಆದರೂ ನಿಮ್ಮ ಕವನ ನನ್ನನ್ನು ಓದಿಸಿತು. ಚನ್ನಾಗಿದೆ.
ನನ್ನ ಇತ್ತೀಚಿನ ಪೋಸ್ಟಿಗೆ ನೀವು ಕಾಮೆಂಟ್ ಬರೆದಿದ್ದು ಓದಿ ಖುಷಿಯಾಯಿತು . ಹೊಸ ಬರಹಗಾರರನ್ನು ಚೆನ್ನಾಗಿ ಪ್ರೋತ್ಸಾಹಿಸುತ್ತೀರಿ.

ಜಲನಯನ said...

ಗುರು, ಬಹಳ ತೂಗಿ..ಅಳೆದು ಪದ ಬಳಕೆ ಮಾಡಿ ಅಂದದ ಪ್ರಾಸವುಳ್ಳ ಹಾಡಿಕೊಳ್ಲಬಹುದಾದ ಚಂದದ ಕವನ...ಅಭಿನಂದನೆಗಳು... ಅದರಲ್ಲೂ ಈ ಸಾಲುಗಳು ಮೆಚ್ಚುಗೆಯಾದವು
ಅಂಕು ಡೊಂಕುಗಳೆಂಬ ಬಿಂಕದಲಿಹರೆಲ್ಲಅವರಿವರ ನಡುವಿನಲಿ ನಗುತಲಿರು ನೀನು

SANTA said...

Guru dvg mankutimmana influence eddu kaantaide! olleya kavana. Thanks for a good reading

Narayan Bhat said...

ಅವರಿವರ ನಡುವಿನಲಿ ನಗುತಲಿರು ನೀನು ..ಅನಂತದಾನಂತದಲಿ ಬಾಳು ಸತತ..ಮನುಜ ಅರಳು.. ಈ ಆಶಯಗಳು ತುಂಬಾ ಹಿಡಿಸಿದವು.

Subrahmanya said...

ಚೆನ್ನಾಗಿದೆ ಕವನ...

ಸಾಗರದಾಚೆಯ ಇಂಚರ said...

ಮಾಚಿಕೊಪ್ಪ ಸರ್,
ನನಗೂ ಮೊದಲು ಕವಿತೆ ಅಷ್ಟೊಂದು ಹಿಡಿಸುತ್ತಿರಲಿಲ್ಲ
ಆದರೆ ಸಂಗೀತದ ಅತಿಯಾದ ಗೀಳು ಕವನ ಬರೆಯಲು ಪ್ರೇರೇಪಿಸಿತು
ನಿಮ್ಮ ಹಾರೈಕೆಗೆ ವಂದನೆಗಳು
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಜಲನಯನದ ಅಜ್ಹಾದ್ ಸರ್
ನಿಮ್ಮ ಪ್ರೀತಿಯ ಹಾರೈಕೆಯೇ ನನಗೆ ಇನ್ನೂ ಹೆಚ್ಚು ಬರೆಯಲು ಸ್ಪೂರ್ತಿ
ನಿಮಗೆ ಇಷ್ಟವಾಗಿದ್ದಾಕೆ ನನಗೆ ಹೆಮ್ಮೆ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ವಸಂತ್
ಮನೆಯಲ್ಲಿ ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗ ಇದೆ
ಸದಾ ಓದುತ್ತಿರುತ್ತೇನೆ
ನಿಮ್ಮ ಹಾರೈಕೆಗೆ ವಂದನೆಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ನಾರಾಯಣ್ ಭಟ್ ಸರ್
ಬದುಕು ಯಾವಾಗಲೂ ಧನಾತ್ಮಕತೆಯ ಕಡೆಗಿದ್ದರೆ ಚೆನ್ನ ಅಲ್ಲವೇ,
ಜಗತ್ತಿನಲ್ಲಿ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಅಪರಿಪೂರ್ಣರೆ
ಇಂಥವರ ನಡುವೆ ಬಾಳಲು ಹೆದರುವ ಅಗತ್ಯವಿಲ್ಲ
ಸ್ವಾಭಿಮಾನವೊಂದೆ ಬದುಕಿಗೆ ಮಾರ್ಗದರ್ಶಿ
ನಿಮ್ಮ ಹಾರೈಕೆಗೆ ವಂದನೆಗಳು

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಭಟ್ ಸರ್
ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ
ನಮ್ಮನ್ನು ಪ್ರೋತ್ಸಾಹಿಸುತ್ತಿರಿ

Jyoti Hebbar said...

tumba chennagide kavana...

sunaath said...

ಗುರುಮೂರ್ತಿಯವರೆ,
ತುಂಬ ಸತ್ವಶಾಲಿಯಾದ ಕವನವನ್ನು ಬರೆದಿದ್ದೀರಿ. ಪ್ರತಿಸಾಲಿನ ಮೊದಲನೆಯ ಅಕ್ಷರವನ್ನು ‘ಅ’ಕಾರದಿಂದಲೇ ಪ್ರಾರಂಭಿಸುವ ಜಾಣ್ಮೆ
ಮೆಚ್ಚುವಂತಹದು. ನಿಮಗೆ ಅಭಿನಂದನೆಗಳು.

ಸುಮ said...

nice thougths :)

ಸಾಗರದಾಚೆಯ ಇಂಚರ said...

ಜ್ಯೋತಿ ಶಿಗೆಪಾಲ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಸುನಾಥ್ ಸರ್
ಅ ಕಾರದಿಂದಲೇ ಆರಂಬಿಸಬೇಕು ಎನ್ನುವುದು ಮೊದಲು ನಿರ್ದರ ಮಾಡಿದ್ದು
ಕೊನೆಗೆ ಶಬ್ದಗಳ ಹುಡುಕಲು ತುಂಬಾ ಕಷ್ಟ ಪಟ್ಟೆ
ನಿಮಗೆ ಇಷ್ಟವಾಗಿದ್ದಕ್ಕೆ ಈಗ ಸಂತಸವಿದೆ
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

Suma,

thank you so much

keep visiting

ಮನಸಿನಮನೆಯವನು said...

'ಸಾಗರದಾಚೆಯ ಇಂಚರ ' ಅವರೇ..,

ನವೀನ ಪದಗಳ ಜೋಡಣೆ ಸೊಗಸಾಗಿದೆ..

'ಅಸ್ಪೃಶ್ಯ' ಎಂಬ ಬದಲಾಗಿ 'ಅಸ್ಪ್ರಷ್ಯ' ಎಂದಿದೆ ಸರಿಪಡಿಸಿ..


ನನ್ನ 'ಮನಸಿನಮನೆ'ಗೆ...:http//manasinamane.blogspot.com

ಬಿಸಿಲ ಹನಿ said...

ಚೆಂದದ ಆಶಯವನ್ನು ಹೊಂದಿದ ಕವನ ಸುಂದರವಾಗಿದೆ.

VENU VINOD said...

ವಿಶಾಲ ಚಿಂತನೆಯ ಆಶಯ ಗೀತೆ ಮನಮುಟ್ಟುತ್ತದೆ...
well written Guru

PARAANJAPE K.N. said...

ಗುರು, ಕವನ ತುಂಬಾ ಚೆನ್ನಾಗಿದೆ. ಕಾವ್ಯಾತ್ಮಕವಾಗಿದೆ. ಮು೦ದುವರಿಸಿ

shwetha said...

Nemma kavana odutheddare nanage nevu nanna spurtheya seleyage kanuthera yake andare nanu swalpa negative feel madodu jasthee nange thumba esta ayethu.

Basavannana vachana odhedha hagayethu.mathe kuvempu avara elladaru eru enthadarue eru manavanageru.....

nemma prathebe aralutherale nemma kavanadenda.

Unknown said...

Chennaagide..

ಸುಧೇಶ್ ಶೆಟ್ಟಿ said...

ವಿಶ್ವಮಾನವ ಸ೦ದೇಶ ಕೊಡುತ್ತಿದೆ ನಿಮ್ಮ ಕವನ.... ಸು೦ದರ ರಚನೆ....

AntharangadaMaathugalu said...

ತುಂಬಾ ಚೆನ್ನಾಗಿದೆ ಕವನ. ನನಗೆ ಕೊನೆಯ ಎರಡು ಸಾಲುಗಳು ಮತ್ತೆ ಮತ್ತೆ ಹೇಳಿಕೊಳ್ಳುವಂತಾಗುತ್ತಿದೆ....

ಶ್ಯಾಮಲ

Unknown said...

tumbaa olle reetiyalli moodi bandide

ಸಾಗರದಾಚೆಯ ಇಂಚರ said...

ಗುರು ದೆಸೆ,
ನೀವು ಹೇಳಿದ್ದು ಸರಿ, ಎಅಗ ಸರಿಪಡಿಸಿದ್ದೇನೆ,
ನಿಮ್ಮ ಅಮೂಲ್ಯ ಸಲಹೆಗೆ ವಂದನ್ಗೆಅಳು
ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಬಿಸಿಲ ಹನಿ ಉದಯ ಸರ್
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ನಿಮ್ಮೆಲ್ಲರ ಹಾರೈಕೆ ಬರೆಯಲು ಉತ್ಸಾಹ ನೀಡುತ್ತದೆ

ಸಾಗರದಾಚೆಯ ಇಂಚರ said...

ವೇಣು,
ನಿಮ್ಮ ಮಾತುಗಳು ಸದಾ ಸ್ಪೂರ್ತಿ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್
ನಿಮ್ಮ ಆಶಿರ್ವಾದ ಸದಾ ಇರಲಿ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಶ್ವೇತ,
ನನ್ನ ಕವನ ನಿಮಗೆ ಸ್ಪೂರ್ತಿ ನೀಡಿದೆ ಎಂದಾದರೆ ಬರೆದಿದ್ದಕ್ಕೂ ಸಾರ್ಥಕ
ಬರವಣಿಗೆಯ ಉದ್ದೇಶ ನಾವು ಸುಧಾರಿಸುವುದರ ಜೊತೆಗೆ ಬೇರೆಯವರಿಗೂ ಸ್ವಲ್ಪ ಒಳ್ಳೆಯದಾಗಲಿ ಎಂದಲ್ಲವೇ?
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ನಿಮ್ಮಥಹ ಓದುಗರೇ ನನ್ನ ಬ್ಲಾಗಿನ ಶಕ್ತಿ
ಸದಾ ಬರುತ್ತಿರಿ
ಬದುಕು ಧನಾತ್ಮಕತೆಯೆಡೆಗೆ ಇರಬೇಕು
ನಾವೇ ದೊಡ್ಡವರು ಎಂಬ ಅಹಂಕಾರದಲ್ಲಿ ಬದುಕುವ ಜನರು ಎಲ್ಲೆಡೆ ಇರುತ್ತಾರೆ
ಅವರ ಮದ್ಯದಲ್ಲೇ ನಾವು ಬದುಕಬೇಕಿದೆ
ಅಹಂಕಾರ ಮೆಟ್ಟಿ ನಿಲ್ಲಬೇಕಿದೆ

ಸಾಗರದಾಚೆಯ ಇಂಚರ said...

ರವಿಕಾಂತ್ ಸರ್
ಅಭಿಪ್ರಾಯಕ್ಕೆ ಧನ್ಯವಾದಗಳು
ಬರ್ತಾ ಇರಿ

ಸಾಗರದಾಚೆಯ ಇಂಚರ said...

ಸುದೇಶ್ ಸರ್
ನಿಮ್ಮ ಮಾತುಗಳು ನನಗೆ ಹೆಮ್ಮೆ ಅನಿಸುತ್ತಿದೆ
ವಿಶ್ವ ಮಾನವ ಸಂದೇಶ ಕೊಟ್ಟರೆ ಅದಕ್ಕಿಂತ ಹರುಷ ಇದೆಯೇ
ಬರುತ್ತಿರಿ

ಸಾಗರದಾಚೆಯ ಇಂಚರ said...

ಶ್ಯಾಮಲಾ ಮೇಡಂ,
ಕೊನೆಯ ಸಾಲುಗಳು ನನ್ನನ್ನು ಬಹಳ ಕಾಡಿವೆ
ಮನುಕುಲದ ಉನ್ನತಿ ಅವನತಿ ಏನೇ ಇರ್ಲಿ ಬದುಕು ಅರಳುತ್ತಿರಬೇಕಲ್ಲವೇ?
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು

ಸಾಗರದಾಚೆಯ ಇಂಚರ said...

ಕಮಲ್,
ನೀನು ಬ್ಲಾಗ್ ಗೆ ಬಂದು ಕಾಮೆಂಟಿಸುತ್ತಿರುವುದು ತುಂಬಾ ಸಂತಸ ನೀಡಿದೆ
ಸದಾ ನೀನಿ ಸ್ಪೂರ್ತಿಯ ಸೆಲೆ
ಆತ್ಮೀಯ ಗೆಳೆಯನ ಮಾತುಗಳು ನನಗೆ ಹೊಸ ಹೊಸ ಚಿಂತನೆಗಳನ್ನು ಹುಟ್ಟಿಸುತ್ತವೆ
ಸದಾ ಬರುತ್ತಿರು

Unknown said...

nce one sir :)

ಸಾಗರದಾಚೆಯ ಇಂಚರ said...

Arya-4 U

thanks for the comments

Jayashree said...

ಅಂಜದಿರು,ಅರಳುತಿರು,ಅಸ್ಪ್ರಶ್ಯನೆನದಿರು
ಅನಂತದಾನಂತದಲಿ ಬಾಳು ಸತತ
ಮನುಜ ಅರಳು ನಿರತ
spurti sele ide salugalalli. kavana tumba arthapurnavaagide.

ಶಿವಪ್ರಕಾಶ್ said...

Nice one :)

ಸಾಗರದಾಚೆಯ ಇಂಚರ said...

ಜಯಶ್ರೀ ಅವರೇ,
ನಿಮ್ಮ ಮಾತು ನನಗೆ ಇನ್ನೂ ಸ್ಪೂರ್ತಿ ಕೊಟ್ಟಿದೆ
ಹೀಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

Shivu sir

thanks for the comments, keep visiting

Ittigecement said...

Very nice...!!
sogasaada kavana...

abhinandanegalu...!!

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
ನಿಮ್ಮ ಹಾರೈಕೆಗೆ ವಂದನೆಗಳು
ಹೀಗೆಯೇ ಬರುತ್ತಿರಿ

ಅರಕಲಗೂಡುಜಯಕುಮಾರ್ said...

ಸರ್ ಬ್ಲಾಗ್ ಗೆ ಒಂದು ವರ್ಷ ತುಂಬಿದ್ದಕ್ಕೆ ಮೊದಲಿಗೆ ಹಾರ್ಧಿಕ ಶುಭಾಶಯಗಳು. ದೂರದ ಊರಿನಲ್ಲಿದ್ದರೂ ಕನ್ನಡ ಪ್ರೀತಿ ಉಳಿಸಿಕೊಂಡಿದ್ದೀರಿ ಇದು ಹೀಗೆ ಮುಂದುವರಿಯಲಿ.
ಇನ್ನೂ ಭಾವನೆಗಳಿಗೆ ಅಕ್ಷರದ ಬೆಸುಗೆ ಸುಂದರವಾಗಿ ಒಡಮೂಡಿದೆ.. ಅಕ್ಷರ ಪ್ರೀತಿಯ ಹೊಸ ಸಾಧ್ಯತೆಗಳು ವಿಭಿನ್ನ ನೆಲೆಗಟ್ಟಿನಲ್ಲಿ ಮೂಡಲಿ.

ಅರಕಲಗೂಡುಜಯಕುಮಾರ್ said...

ಸರ್ ಬ್ಲಾಗ್ ಗೆ ಒಂದು ವರ್ಷ ತುಂಬಿದ್ದಕ್ಕೆ ಮೊದಲಿಗೆ ಹಾರ್ಧಿಕ ಶುಭಾಶಯಗಳು. ದೂರದ ಊರಿನಲ್ಲಿದ್ದರೂ ಕನ್ನಡ ಪ್ರೀತಿ ಉಳಿಸಿಕೊಂಡಿದ್ದೀರಿ ಇದು ಹೀಗೆ ಮುಂದುವರಿಯಲಿ.
ಇನ್ನೂ ಭಾವನೆಗಳಿಗೆ ಅಕ್ಷರದ ಬೆಸುಗೆ ಸುಂದರವಾಗಿ ಒಡಮೂಡಿದೆ.. ಅಕ್ಷರ ಪ್ರೀತಿಯ ಹೊಸ ಸಾಧ್ಯತೆಗಳು ವಿಭಿನ್ನ ನೆಲೆಗಟ್ಟಿನಲ್ಲಿ ಮೂಡಲಿ.

Anonymous said...

:-)
thanks for your comments in my blog
malathi S

ಸಾಗರದಾಚೆಯ ಇಂಚರ said...

ಜಯಕುಮಾರ್ ಸರ್
ನಿಮ್ಮೆಲ್ಲರ ಪ್ರೀತಿ ಹಾರೈಕೆಗೆ ಮೂಕನಾಗಿದ್ದೇನೆ
ಇನ್ನೂ ಹೆಚ್ಚೆಚ್ಚು ಬರೆಯಲು ಪ್ರೇರೇಪಣೆ ಸಿಗುತ್ತಿದೆ
ಕನ್ನಡ ದ ಪ್ರೀತಿ ಎಂದಿಗೂ ಹೀಗೆಯೇ ಇರಬೇಕಲ್ಲ?
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

Malathi,

thanks for the comments, dont comment like anonymous,
keep visiting

Ittigecement said...

ಗುರುಮೂರ್ತಿಯವರೆ...

ನಿಮ್ಮ ಕವನ ಭಾವ ಬಹಳ ಇಷ್ಟವಾಯಿತು...
ಪದಗಳಲ್ಲಿ ನಿಮಗೆ ಹಿಡಿತವಿದೆ...

ಅಭಿನಂದನೆಗಳು..

ಚಂದಿನ | Chandrashekar said...

ಸುಂದರ ಹಾಡಿನಂತೆ ಲಯಬದ್ಧವಾಗಿ ಮೂಡಿ ಬಂದಿದೆ...ಅಭಿನಂದನೆಗಳು

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ನಿಮ್ಮ ಪ್ರೀತಿಗೆ ಧನ್ಯವಾದಗಳು
ಪ್ರೋತ್ಸಾಹಕ್ಕೆ ಮೂಕನಾಗಿದ್ದೇನೆ

ಸಾಗರದಾಚೆಯ ಇಂಚರ said...

ಚಂದಿನ
ನಿಮ್ಮ ಹಾರೈಕೆ ಸದಾ ಇರಲಿ
ಕವನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು

Manasa said...

ಗುರು ಅವ್ರೆ,

ನನಗೆ ಬಸವಣ್ಣ ನವರ,
ಕಳ ಬೇಡ , ಕೊಲ ಬೇಡ
ಹುಸಿಯ ನುಡಿಯಲು ಬೇಡ
ಅನ್ಯರಿಗೆ ಅಸಹ್ಯ ಪಡಬೇದಾ
ತನ್ನ ಬಣಿಸಲು ಬೇಡ
ಇದ್ದೀರಾ ಹಳಿಯಲು ಬೇಡ
ಅನ್ನೋ ಸಾಲು ನೆನಪಿಸಿತೂ... ಚುಲೋ ಬರದಿರೀ :)

ವಿನುತ said...

<> ಅತ್ಯಂತ ಇಷ್ಟವಾದ ಸಾಲು. ಉತ್ತಮ ಸಂದೇಶವುಳ್ಳ ಕವಿತೆ.

ಸಾಗರದಾಚೆಯ ಇಂಚರ said...

ಮಾನಸ,
ನಿಮ್ಮ ಮಾತು ಬಹಳ ಖುಷಿ ಅತ್ರಿ
ನಿಮಗೆ ಇಷ್ಟ ಅಯ್ತಿಲ್ಲ
ಹಿಂಗ ಬರ್ತಾ ಇರ್ರಿ

ಸಾಗರದಾಚೆಯ ಇಂಚರ said...

ವಿನುತಾ
ಅಭಿಪ್ರಾಯಕ್ಕೆ ಥ್ಯಾಂಕ್ಸ್
ಪ್ರೋತ್ಸಾಹ ಹೀಗೆಯೇ ಇರಲಿ

e.re.....y said...

idu tumba chennagide, saralavada bhasheyallide, arthavaguthe, aadre nane swalpa tadavagi nodidddini,