Monday, January 25, 2010

ವರುಷವಾಯಿತು ಒಂದು, ಹರುಷವಾಯಿತು ಇಂದು...

ತ್ಮೀಯ ಮಿತ್ರರೇ,


ಇಂದು ನನಗೆ ಸಂತಸದ ದಿನ, ನನ್ನ ಪ್ರೀತಿಯ ''ಸಾಗರದಾಚೆಯ ಇಂಚರ'' ಬ್ಲಾಗ್ ಗೆ ಒಂದು ವರುಷದ ಸಂಭ್ರಮ. ಬ್ಲಾಗ್ ಪ್ರಪಂಚ ಬಹಳಷ್ಟು ನೀಡಿದೆ ಒಂದು ವರುಷದಲ್ಲಿ. ಅನೇಕ ಮಿತ್ರರ ನಗೆ ಉಕ್ಕಿಸುವ ಬರಹಗಳು, ಚಿಂತನಶೀಲ ಲೇಖನಗಳು, ಮುದ ನೀಡುವ ಕವನಗಳು, ಚುಟುಕಾಗಿ ಇದ್ದರೂ ದಿನದ ನೋವನ್ನೇ ಮರೆಸುವ ಚುಟುಕಗಳು, ಹೀಗೆ ಪಟ್ಟಿ ಬೆಳೆಯುತ್ತದೆ.  ಸಂಧರ್ಭದಲ್ಲಿ ನನ್ನೆಲ್ಲ ನಲ್ಮೆಯ ಬ್ಲಾಗ್ ಮಿತ್ರರಿಗೆ, ಓದುಗರಿಗೆ, ನನ್ನ ಬ್ಲಾಗ್ ನ್ನು ಪ್ರೀತಿಯಿಂದ ಓದಿ ಬೆನ್ನು ತಟ್ಟುವ ಎಲ್ಲರಿಗೆ ನನ್ನ ಹ್ರದಯ ತುಂಬಿದ ಕ್ರತಜ್ಞತೆಗಳು. 
ಸರಿಯಾಗಿ ಒಂದು ವರುಷದ ಹಿಂದೆ ಬ್ಲಾಗ್ ಪ್ರಪಂಚಕ್ಕೆ ನಾನು ಕಾಲಿಟ್ಟೆ. ಅದೊಂದು ಕುತೂಹಲಕಾರೀ ಕಥೆ. ಮೊದಲಿನಿಂದಲೂ ನಾನು ಲೇಖನ, ಕವನಗಳು, ಕಥೆ ಹೀಗೆ ನನ್ನಷ್ಟಕ್ಕೆ ನಾನೇ ಬರೆಯುತ್ತಿದ್ದೆ. ಆದರೆ ನನ್ನ ಅರ್ಧಾಂಗಿ, ''ನೀವು ಯಾಕೆ ಬ್ಲಾಗ್ ಆರಂಬಿಸಿ ಅದರಲ್ಲಿ ನಿಮ್ಮ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಬಾರದು'' ಎಂದು ಒಂದು ದಿನ ನನ್ನನ್ನು ಕೇಳಿದಳು ಅಷ್ಟೇ ಅಲ್ಲ ಬ್ಲಾಗ್ ಬರೆಯಲು ಮೊದಲು ಪ್ರೇರಣೆ ನೀಡಿದಳು. ನನ್ನನ್ನು ಸದಾ ಪ್ರೇರೇಪಿಸಿ ಪ್ರೋತ್ಸಾಹ ನೀಡುವ ಮಡದಿಗೆ ಒಂದು ವರುಷ ತುಂಬಿದ  ಸಂದರ್ಭದಲ್ಲಿ ಕ್ರತಜ್ಞತೆಗಳು.


ಅದೇ ಸಮಯಕ್ಕೆ ಸರಿಯಾಗಿ ''ಕ್ಷಮಿಸಿ ನಾನು ಹೇಳೋದೆಲ್ಲ ತಮಾಷೆಗಾಗಿ'' ಬ್ಲಾಗಿನ ಆತ್ಮೀಯ ಮಿತ್ರ ಮೂರ್ತಿ (http://nmurthy79.blogspot.com/) ನನಗೆ ಬ್ಲಾಗ್ ಮಾಡುವುದು ಹೇಗೆ, ಲೇಖನ ಹಾಕುವುದು ಹೇಗೆ ಎಂಬ ಬಗ್ಗೆ ಬಹಳಷ್ಟು ಮಾಹಿತಿ ನೀಡಿದ್ದರು. ಅವರ ಮಾರ್ಗದರ್ಶನದಲ್ಲಿ ನನ್ನ ಬ್ಲಾಗ್ ಆರಂಬವಾಯಿತು. ಎಷ್ಟು ಉತ್ಸಾಹ ವಿತ್ತೆಂದರೆ ಮೊದಲ ದಿನವೇ 10-15 ಲೇಖನ ಹಾಕಿ ಬಿಟ್ಟೆ. ಅದು ಮೊದಲ ಬಾರಿಗೆ ಬೈಕನ್ನು ಓಡಿಸಿದ ಸಂತಸದಂತೆ, ಆ ಉತ್ಸಾಹ ನಿರಂತರ ಉಳಿದರೆ ಸಾಕು ಅಲ್ಲವೇ? ನನ್ನನ್ನು ಬ್ಲಾಗ್ ಪ್ರಪಂಚಕ್ಕೆ ಕರೆದುಕೊಂಡು ಬಂದು ನನಗೆ ಬ್ಲಾಗ್ ಬರೆಯಲು ಬೇಕಾದ ಎಲ್ಲ ಮಾಹಿತಿ ನೀಡಿದ ಮೂರ್ತಿ ಗೆ  ನನ್ನ ಕ್ರತಜ್ಞತೆಗಳು.


ವರುಷ ತುಂಬಿದ ಸಂತಸಕ್ಕೆ ಸರಿಯಾಗಿ ಬ್ಲಾಗ್ ಹಿಂಬಾಲಿಸುವವರ ಸಂಖ್ಯೆಯೂ 100 ದಾಟಿದೆ, ನಿಮಗೆಲ್ಲರಿಗೂ ನಲ್ಮೆಯ ನಮನಗಳು.


ಕಳೆದ ವರುಷ ಮರೆಯಲಾದೀತೇ, ಸ್ವೀಡನ್ನಿನ ಹಿಮಚ್ಚಾದಿತ ಪರ್ವತಗಳ  ಶ್ರೇಣಿಯಲ್ಲಿ ಸ್ಕೀಯಿಂಗ್ ಮಾಡಿದ ಅನುಭವ, ಸ್ಪೇನ್ ದಲ್ಲಿ ಪಾಸ್ ಪೋರ್ಟ್ ಕಳ್ಳತನ ಎರಡೂ ಮರೆಯಲಾರದ ನೆನಪುಗಳಾಗಿ ಜೀವನ ಪುಟದಲ್ಲಿ ದಾಖಲಾದವು. ಅದರಲ್ಲೂ ನನ್ನ ಪಾಸ್ ಪೋರ್ಟ್ ಕಳೆದಾಗ ಬ್ಲಾಗ್ ಮಿತ್ರರು ನೀಡಿದ ಸಮಾಧಾನ, ಹಿತ ನುಡಿ, ಹುರಿದುಂಬಿಸುವಿಕೆ ಇವೆಲ್ಲವೂ ಕುಟುಂಬದ ನೆನಪನ್ನು ತರಿಸಿದವು. ದೂರದಲ್ಲಿದ್ದರೂ ನಿಮ್ಮವನಲ್ಲಿ ಒಬ್ಬನಂತೆ ನೋಡುವ ನಿಮ್ಮೆಲ್ಲರ ಪ್ರೀತಿಗೆ ನಾನು ಚಿರ ಋಣಿ. 

 ಸದಾ ಪ್ರೋತ್ಸಾಹಿಸುತ್ತಿರುವ ಇಟ್ಟಿಗೆ ಸಿಮೆಂಟಿನ ಪ್ರಕಾಶಣ್ಣ, ಛಾಯಾ ಕನ್ನಡಿಯ ಶಿವೂ ಸರ್, ಜೀವನ್ಮುಖಿಯ ಪರಾಂಜಪೆ ಸರ್, ಜಲಾನಯನ ಅಜ್ಹಾದ್ ಸರ್, ಚಂದ್ರು ಸರ್, ಮಹೇಶ್ ಸರ್, ಮಾನಸದ ತೇಜಸ್ವಿನಿ ಮೇಡಂ, ಮ್ರದು ಮನಸಿನ ಸುಗುಣ ಮೇಡಂ, ಹೀಗೆ ಎಲ್ಲ ನನ್ನ ಬ್ಲಾಗ್ ಮಿತ್ರರಿಗೂ ನಾನು ಚಿರ ಋಣಿ. ಜಾಗದ ಅಭಾವದಿಂದ ಇಲ್ಲಿ ಎಲ್ಲರ ಹೆಸರನ್ನೂ ಪ್ರಸ್ತಾಪಿಸುತ್ತಿಲ್ಲ. ನೀವೆಲ್ಲರೂ ನನಗೆ ಮಾರ್ಗದರ್ಶಿಗಳೇ.


ಅಂತೆಯೇ ನನಗೆ ಪ್ರೋತ್ಸಾಹ ನೀಡುತ್ತಿರುವ  ಜೈ ವಿಟ್ಟಲ ಬಳಗದ ಮಿತ್ರರಿಗೂ ವಂದನೆಗಳು.


ಎರಡನೇ  ವರ್ಷಕ್ಕೆ ಕಾಲಿಡುತ್ತಿರುವ ''ಸಾಗರದಾಚೆಯ ಇಂಚರ'' ಕ್ಕೆ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಹಿಂದಿನಂತೆಯೇ ಇರುತ್ತದೆ ಎಂಬ ವಿಶ್ವಾಸದೊಂದಿಗೆ ಮುಂದಿನ ವಾರ ಹೊಸ ಲೇಖನದೊಂದಿಗೆ, ಹೊಸ ಅನುಭವದೊಂದಿಗೆ ನಿಮ್ಮೆದುರು ಬರುತ್ತೇನೆ,
ಗಣ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 
ಅಲ್ಲಿಯವರೆಗೆ
ನಿಮ್ಮವ ಗುರು 


86 comments:

ಬಾಲು ಸಾಯಿಮನೆ said...

ಅಭಿನಂದನೆಗಳು,
ವರುಷದ, ಶತಕದ, ಹರುಷದ ಸಂಭ್ರಮಕೆ........
ಬಾಲು ಹೆಗಡೆ

ಮೂರ್ತಿ ಹೊಸಬಾಳೆ. said...

ಸಾಗರದಾಚೆಯ ಇಂಚರಕ್ಕೆ ಮೊದಲನೇ ಹುಟ್ಟುಹಬ್ಬದ ಶುಭಾಷಯಗಳು.
ನಿಮ್ಮ ಬ್ಲೊಗ್ ತೆರೆಯುವ ಉತ್ಸಾಹಕ್ಕೆ ನಾನು ಕೇವಲ ದೋಣಿದಾಟಿಸುವ ಅಂಬಿಗನಾದೆ.ಬ್ಲೋಗ್ ತೆರೆದ ಎರಡೇ ದಿನದಲ್ಲಿ ನಿಮ್ಮ ಪೋಸ್ಟ್ ಗಳನ್ನ ನೋಡಿ "ಗುರುಬ್ಯೋ ನಮಃ" ಎಂದು ಉದ್ಗರಿಸಿದ್ದೆ. ನಿಮ್ಮ ಸಾಧನೆ,ಪರಿಶ್ರಮದಿಂದಾಗಿ ಇಂದು ನೀವು ಬ್ಲೋಗ್ ಲೋಕದಲ್ಲಿ ನಿಮ್ಮದೇ ಛಾಪನ್ನ ಒತ್ತಿದ್ದೀರಿ.ಇನ್ನೂ ಸಾವಿರಾರು ಇಂತಹಾ ಬರಹಗಳನ್ನ ನಿಮ್ಮಿಂದ ಬರೆಯುವಂತಾಗಲಿ.

Ranjita said...

ಗುರು ಅಣ್ಣ ,

ಮೊದಲನೇ ವರ್ಷದ ಸಂತಸದಲ್ಲಿರೋ ನಿಮಗೆ ಅಭಿನಂದನೆಗಳು ..
ಬ್ಲಾಗಾಯಣದಿಂದ ಹೊಸ ಹೊಸ ಮಿತ್ರರು ಅವರ ಸಲಹೆಗಳು , ಸಮಾಧಾನಗಳು , ಕಾಮ್ಮೆಂಟ್ಗಳು ನಮ್ಮಲ್ಲಿ ಹೊಸತನದ ಸಂತಸವನ್ನ ತರತ್ತೆ ಅಲ್ವ ? ..
ನಿಮ್ಮ ಈ ವರುಷದ ಹರುಷ ಎಂದೂ ಹೀಗೆ ಇರಲಿ ..
ಅಭಿನಂದಬೆಗಳು .

ಲೋದ್ಯಾಶಿ said...

ಜಾಲಲೇಖನದ ವಾರ್ಷಿಕೋತ್ಸವದ ಶುಭಾಶಯಗಳು.

ಹಾಗೂ ಗಣರಾಜ್ಯ ದಿನಾಚರಣೆಯ ಶುಭಾಶಯಗಳು.

:-)

Subrahmanya Bhat said...

ನಿಮ್ಮ ಇಂಚರ ಇನ್ನಷ್ಟು ವರ್ಷಗಳು ಹೀಗೇ ಯಶಸ್ವಿಯಾಗಿ ಮುನ್ನೆಡೆಯಲಿ.....all the best

ಚುಕ್ಕಿಚಿತ್ತಾರ said...

ವರುಷ ತು೦ಬಿದ ಹರುಷಕ್ಕೆ...
ಇ೦ಚರದ ಹುಟ್ಟುಹಬ್ಬಕ್ಕೆ ಶುಭ ಹಾರೈಕೆಗಳು...

ಮನಮುಕ್ತಾ said...

ಗುರುಮೂರ್ತಿ ಅವರೆ,
ಅಭಿನ೦ದನೆಗಳು....ಶುಭ ಹಾರೈಕೆಗಳು.
”ಸಾಗರದಾಚೆಯ ಇ೦ಚರದ” ಮೊದಲನೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು..
ಹೀಗೆ ಅನೇಕ ವರುಷ ಎಲ್ಲರಿಗೂ ಹರ್ಷದ ಹೊನಲನ್ನು ತರುತ್ತಾ ಮು೦ದುವರೆಯಲಿ.

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ಗುರುಮೂರ್ತಿ....

ನಾನು ನನ್ನ ಬ್ಲಾಗ್ ಹೋಗುವ ಮುನ್ನ ಶಿವು, ಮಲ್ಲಿ, ಸಂದೀಪ್ ಕಾಮತ್, ಪರಾಂಜಪೆ.ಮಹೇಶ್, ಜಲನಯನ . ನಿಮ್ಮ ಹಾಗೂ ಇನ್ನೂ ಅನೇಕರ ಬ್ಲಾಗ್ ಹೋಗುತ್ತೇನೆ. ನಿಮ್ಮ ಬ್ಲಾಗ್ ವೈವಿಧ್ಯ ಮಯವಾಗಿರುತ್ತದೆ..
ಹಾಗಾಗಿ ಇಷ್ಟವಾಗಿಬಿಡುತ್ತದೆ..

ಇನ್ನಷ್ಟು ಬರೆಯಿರಿ...

ಮೊದಲನೇಯ ಹುಟ್ಟು ಹಬ್ಬದ ಸುಸಮಯದಲ್ಲಿ ಹೃತ್ಪೂರಕ ಅಭಿನಂದನೆಗಳು...

ನಿಮ್ಮ ಬ್ಲಾಗ್ ಅನುಸರಿಸುವವರ ಸಂಖ್ಯೆ ಶತಕ ದಾಟಿದೆ...

ನಿಜಕ್ಕೂ ಖುಷಿಯಾಗುತ್ತದೆ..

ಮತ್ತೊಮ್ಮೆ ಅಭಿನಂದನೆಗಳು...

kamal said...

ನಲ್ಮೆಯ ಗೆಳಯಾ...
ಇಂದು ಸಂತೋಷ ಮತ್ತೆ ಅಸೂಯೆ ಒಟ್ಟಿಗೆ ಆಗುತ್ತಿದೆ ನಂಗೆ.... ನಿನ್ನೊಬ್ಬ ಆದರ್ಶ ವಿದ್ಯಾರ್ಥಿ ಕಾಲೇಜ್ಗಳಲ್ಲಿ...ಇಂದು ನಿನ್ನ ವೃತ್ತಿ ಜೀವನದಲ್ಲಿ ಎತ್ತರಕ್ಕೆ ಬೆಳೆದಿದ್ದಿಯ... ಆದರು ಹವ್ಯಾಸಗಳನ್ನು ಬಿಟ್ಟಿಲ್ಲ...ವೃತ್ತಿ ಜೀವನದಲ್ಲಿಯ್ಯು ನೀನೊಬ್ಬ ಆದರ್ಶ ವ್ಯಕ್ತಿ ಕೂಡ.... ನಿನ್ನ ಬ್ಲಾಗ್ ಒಂದು ವರ್ಷ ತುಂಬಿದ ಇ ಕ್ಷಣ ನಿಜಕ್ಕೂ ನಂಗೆ ಸಂತೋಷ ಕೊಡುತ್ತಿದೆ... ನಂಗೆ ನಿನ್ನ ಹಗೆ ಆಗಲಿಕ್ಕೆ ಆಗುತ್ತಿಲ್ಲವಲ್ಲ ಎಂಬ ಅಸುಯೇಯೂ ನಂಗೆ ಕಾಡುತ್ತಿದೆ........ನಿನಗಿದೋ ನನ್ನ ಹಾರ್ದಿಕ ಶುಭಾಶಯಗಳು....

ಮುಂಬರುವ ದಿನಗಳಲ್ಲಿ ನಿನ್ನ ಬ್ಲಾಗಲ್ಲಿ ನಿನ್ನ ವ್ಯಯಕ್ತಿಕ ಲೆಕನಗಳ ಜೊತೆಜೊತೆಯಲ್ಲಿ ಸಾಮಾಜಿಕ, ರಾಜಕೀಯ, ಆರ್ತಿಕ ಸುದಾರಣೆಯ, ವ್ಯವಸ್ತೆಯ ಕೊರತೆಗಳ, ವ್ಯಕ್ತಿಯ, ಸಮಾಜದ ಸರ್ವೋತೊಮುಕ ಬೆಳವಣೆಗೆಯ ಬಗ್ಗೆ ಒಂದಿಷ್ಟು ಲೇಕನಗಳು ಪಡಿಮೂಡಲಿ....ನಿನ್ನ ಬ್ಲಾಗ್ ಓದುವ ಜನ ಕಡಮೆಯೇ ಇರಬಹುದು...ಆದರೆ ಓದಿದ ಒಂದಿಷ್ಟು ಜನರಿಗಾದರೂ ನಿನ್ನ ಲೇಕನಗಳು ಚಿಂತನೆಗೆ ವಿಷಯವಾಗಲಿ ಎಂದು ಆಶಿಸುತ್ತೇನೆ......
ನಿನ್ನ ಬರವಣಗೆ ಕಳೆದ ಒಂದು ವರ್ಷದಲ್ಲಿ ತುಂಬಾ ಅದ್ಭುತವಾದ ಶ್ಯಲಿಯಲ್ಲಿ ಮೂಡಿ ಬರುತ್ತಿದೆ... ನಿನ್ನ ಆಕರ್ಷಕ ಶಬ್ದ ಜೋಡಣೆ... ಸಂದರ್ಬಗಳ ಸಂದಿಸುವಿಕೆ ನಮ್ಮನ್ನು ನಿನ್ನ ಲೆಕನವನ್ನು/ಕವನವನ್ನು ಮುಂದೆ ಓಡಿಸುಕೊಂಡು ಹೋಗತ್ತೆ..

ಗೆಳ್ಯ ನಿನ್ನ ಎಲ್ಲ ಬರವಣಿಗೆಗಳು ಇನ್ನು ವಾಸ್ತವಿಕ ತಳಹದಿಯಲ್ಲಿ ಮೂಡಿ ಬರಲಿ...ನಿನ್ನ ಲೇಕನಗಳು...ಕವನಗಳು ಇನ್ನು ಹೆಚ್ಚಿನ ಜನರನ್ನು ತಲುಪಲಿ...ಆ ಮೂಲಕ ಓದುಗರಿಗೆ ಸಂತೋಷ್ ಮತ್ತು ಸ್ವ ಬೆಳವಣೆಗೆಯ ಸಮಯವಗಿಲಿ ಎಂದು ಅಷಿಶುವ .....ನಿನ್ನ ಗೆಳಯ ಕಮಲ್.....

Guru's world said...

ಗುರುಮೂರ್ತಿ ಸರ್, ನಿಮ್ಮ ಬ್ಲಾಗ್ ಗೆ ೧ ವರುಷದ ಹುಟ್ಟುಹಬ್ಬದ ಶುಭಾಶಯಗಳು.... ಹೀಗೆ ಇನ್ನು ಹೆಚ್ಚು ಹೆಚ್ಚು,,, ಬರಹಗಳನ್ನು ಬರೆಯುತ್ತ ನಿಮ್ಮ ಬ್ಲಾಗ್ ಸ್ನೇಹಿತರ ಮನಸನ್ನು ತಣಿಸುತ್ತಿರಿ,, ಎಂದು ಹಾರೈಸುವ
ನಿಮ್ಮ guru
ನಿಮಗೂ ಗಣರಾಜ್ಯೋತ್ಸವದ ಶುಭಾಶಯಗಳು ......

ತೇಜಸ್ವಿನಿ ಹೆಗಡೆ- said...

ಮೂರ್ತಿಯವರೆ,

ಮೊದಲ ಶುಭಾಶಯ ಮಾನಸದಿಂದಲೇ :)

ಸಾಗರದಾಚೆಯ ಇಂಚರವನ್ನು ಭಾರತದಲ್ಲೂ ಕೇಳಿಸುವಂತೆ ಮಾಡಿದ್ದಕ್ಕೆ ಧನ್ಯವಾದಗಳು. ನಿಮ್ಮ ಬರಹಗಳು, ಅನುಭವ ಲೇಖನಗಳು ಸದಾ ಹೊಸತನದಿಂದ ಕೂಡಿರುತ್ತವೆ. ಕವನಗಳು ಬಹು ಸುಂದರ ಹಾಗೂ ಲಾಲಿತ್ಯಪೂರ್ಣವಾಗಿರುತ್ತವೆ. ಇಂಚರ ಹೀಗೇ ಉಲಿಯುತ್ತಿರಲಿ. ಹಾರ್ದಿಕ ಶುಭಾಶಯಗಳು. ನೀವಿಟ್ಟ ವಿಶ್ವಾಸಕ್ಕೆ ತುಂಬಾ ಧನ್ಯವಾದಾಗಳು.

ಬ್ಲಾಗ್ ಓದುಗರಿಗೆಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಆನಂದ said...

ಒಂದು ವರ್ಷ ಪೂರೈಸಿದ್ದಕ್ಕೆ ಅಭಿನಂದನೆಗಳು ಸರ್ :)

sunaath said...

ಅಭಿನಂದನೆಗಳು. ಹೀಗೇ ಮುಂದುವರೆಯಲಿ.

Nisha said...

ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ''ಸಾಗರದಾಚೆಯ ಇಂಚರ''ಕ್ಕೆ ಶುಭಾಶಯಗಳು, ಗಣ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಸುಮ said...

ಇಂಚರದ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಬರಹಯಾತ್ರೆ ಅಡೆತಡೆಗಳಿಲ್ಲದೆ ಸಾಗಲಿ.

ಮನಸು said...

huttu habbada shubhashayagaLu... bareyuttaliri

ಸಾಗರದಾಚೆಯ ಇಂಚರ said...

ಬಾಲು,
ನಿಮ್ಮ ಪ್ರೀತಿ ಸದಾ ಇರಲಿ

ಸಾಗರದಾಚೆಯ ಇಂಚರ said...

ಮೂರ್ತಿ,
ಅಂದು ನೀವು ನನಗೆ ಬ್ಲಾಗ್ ಮಾಡುವುದನ್ನು ತಿಳಿಸದಿದ್ದರೆ ಬಹುಶ ನಾನು
ಬ್ಲಾಗ್ ಬರೆಯಲು ಕೈ ಹಾಕುತ್ತಿರಲಿಲ್ಲ
ನಿಮ್ಮ ಪ್ರೋತ್ಸಾಹ ಸದಾ ಇರಲಿ

ಸಾಗರದಾಚೆಯ ಇಂಚರ said...

ರಂಜಿತ,
ನಿಜ, ಬ್ಲಾಗ್ ಬಹಳಷ್ಟು ವಿಷಯವನ್ನು ತಿಳಿಸುತ್ತದೆ, ಒಂದು ತಾರಾ ಕುಟುಂಬದ ವಾತಾವರಣ ನಿರ್ಮಾಣ ಮಾಡಿದೆ
ಹೀಗೆಯೇ ಬರುತ್ತಿರಿ
ನಿಮ್ಮೆಲ್ಲರ ಪ್ರೀತಿಯೇ ಬರೆಯಲು ಪ್ರೇರಣೆ

ಸಾಗರದಾಚೆಯ ಇಂಚರ said...

ಲೋದ್ಯಾಶಿಯವರೇ,
ನಿಮ್ಮ ಹಾರೈಕೆಗೆ ನನ್ನ ವಂದನೆಗಳು

ಸವಿಗನಸು said...

ಗುರು,

ಸಾಗರದಾಚೆ ಬಂದ ಇಂಚರ ವರುಷ ತು೦ಬಿದ ಹರುಷಕ್ಕೆ ಶುಭ ಹಾರೈಕೆಗಳು.....

ನಿಮ್ಮ ವಿಶ್ವಾಸಕ್ಕೆ ತುಂಬು ಹೃದಯದ ಧನ್ಯವಾದಗಳು....

ಬ್ಲಾಗ್ ಓದುಗರಿಗೆಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.....

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಭಟ್ ಸರ್
ಹಾರೈಕೆಗೆ ವಂದನೆಗಳು

ಸಾಗರದಾಚೆಯ ಇಂಚರ said...

ಚುಕ್ಕಿ ಚಿತ್ತಾರ,
ನಿಮ್ಮ ಹಾರೈಕೆ, ಪ್ರೀತಿ, ಪ್ರೋತ್ಸಾಹ ಸದಾ ಇರಲಿ

ಸಾಗರದಾಚೆಯ ಇಂಚರ said...

ಮನಮುಕ್ತಾ,
ನಿಮ್ಮೆಲ್ಲರ ಮಾತುಗಳು ಬರೆಯಲು ಪ್ರೆಪ್ರೇಪನೆ ನೀಡಿವೆ
ಸಾಧ್ಯವಾದಷ್ಟು ಹೊಸ ವಿಷಯಗಳನ್ನು ಮುಂದಿಡಲು ಪ್ರಯತ್ನಿಸುವೆ

ಸಾಗರದಾಚೆಯ ಇಂಚರ said...

ಆತ್ಮೀಯ ಪ್ರಕಾಶಣ್ಣ
ನಿಮ್ಮ ಪ್ರೀತಿಯ ಬೆನ್ನು ತಟ್ಟುವಿಕೆ ಬಹಳಷ್ಟು ಉತ್ಸಾಹ ನೀಡುತ್ತದೆ
ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಬಯಸುತ್ತೇನೆ
ಹೀಗೆಯೇ ಬರುತ್ತಿರಿ
ವಂದನೆಗಳು

ಸಾಗರದಾಚೆಯ ಇಂಚರ said...

ನಲ್ಮೆಯ ಕಮಲ್,
ಇಂದು ಬೆಳಿಗ್ಗೆ ನಿನ್ನ ಅಭಿಪ್ರಾಯ ಹಾರೈಕೆ ನೋಡಿದ್ದಾಗ ಮನ ತುಂಬಿ ಬಂತು,
೧೭ ವರ್ಷಗಳಿಂದ ನನ್ನೊಂದಿಗೆ ಇರುವ ಜೀವದ ಮಿತ್ರ ನೀನು
ನಾವಿಬ್ಬರೂ ಎಂದಿಗೂ ಜಗಳದ ಆಡಿಲ್ಲ, ಜೀವನದ ನೋವು ನಲಿವು ಹಂಚಿಕೊಂಡವರು
ನಿನ್ನಂಥ ಸ್ನೇಹಿತ ಸಿಗುವುದು ಬಲು ಅಪರೂಪ
ನೀನು ಹೇಳಿದಂತೆ ಲೇಖನಗಳಲ್ಲಿ ಸಾಮಾಜಿಕ ಚಿಂತನೆ ತುಂಬಲು ಪ್ರಯತ್ನಿಸುವೆ
ಪ್ರೀತಿಯ ಹಾರೈಕೆ ನೋಡಿ ಮೂಕನಾಗಿದ್ದೇನೆ

ಸಾಗರದಾಚೆಯ ಇಂಚರ said...

ಗುರು ಸರ್,
ನಿಮ್ಮ ಹಾರೈಕೆ ಹೆಚ್ಚು ಶಕ್ತಿ ನೀಡುತ್ತದೆ ಬರೆಯಲು
ಸಾಧ್ಯವಾದಷ್ಟು ಬ್ಲಾಗ್ ಲೋಕದಲ್ಲಿ ಎಲ್ಲರ ಮನ ಮುಟ್ಟುವ ಬರಹ
ಬರೆಯಲು ಪ್ರಯತ್ನಿಸುವೆ

ಸಾಗರದಾಚೆಯ ಇಂಚರ said...

ತೇಜಸ್ವಿನಿ ಯವರೇ,
ನಿಮ್ಮ ಬ್ಲಾಗ್ ನೋಡಿದ ಮೇಲೆ ಬ್ಲಾಗ್ ನಲ್ಲಿ ಡಿಸೈನ್ ಮಾಡುವುದು ಹೇಗೆಂದು ಕಲಿತೆ
ನಿಮ್ಮ ವೈವಿದ್ಯಮಯ ಬ್ಲಾಗ್ ಬಹಳಷ್ಟು ಕಲಿಸಿತು
ನಿಮ್ಮ ಕವನಗಳು, ಹೊಸ ಹೊಸ ವಿಚಾರಗಳು ಪ್ರೇರೇಪಿಸಿವೆ
ನಿಮ್ಮ ಹಾರೈಕೆ ಸದಾ ಇರಲಿ
ನಿಮ್ಮೆಲ್ಲರ ಪ್ರೀತಿಗೆ ಮಾತೆ ಬರುತ್ತಿಲ್ಲ
ನನಗೆ ನನ್ನ ಕುಟುಂಬ ನೋಡಿದ ಅನುಭವ

ಸಾಗರದಾಚೆಯ ಇಂಚರ said...

ಆನಂದ್ ಸರ್,
ನಿಮ್ಮ ಹಾರೈಕೆಗೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸುನಾಥ್ ಸರ್
ಧನ್ಯವಾದಗಳು ಅಭಿಪ್ರಾಯಕ್ಕೆ ಮತ್ತು ಹಾರೈಕೆಗೆ

ಸಾಗರದಾಚೆಯ ಇಂಚರ said...

ನಿಶಾ,
ನಿಮ್ಮ ಹಾರೈಕೆ ಇನ್ನಷ್ಟು ಉತ್ಸಾಹ ನೀಡಿದೆ ಬರೆಯಲು
ಹೀಗೆಯೇ ಪ್ರೋತ್ಸಾಹಿಸುತ್ತಿರಿ

ಸಾಗರದಾಚೆಯ ಇಂಚರ said...

ಸುಮಾ,
ನಿಮ್ಮ ಹಾರೈಕೆ ಗೆ ವಂದನೆಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಮನಸು
ನಿಮ್ಮ ಹಾರೈಕೆ, ಪ್ರೀತಿ, ಪ್ರೋತ್ಸಾಹ ಸದಾ ಇರಲಿ

ಸಾಗರದಾಚೆಯ ಇಂಚರ said...

ಸವಿಗನಸಿನ ಮಹೇಶ್ ಸರ್
ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹಕ್ಕೆ ಮಾತೆ ಬರ್ತಾ ಇಲ್ಲ
ಹೀಗೆಯೇ ಬರುತ್ತಿರಿ ಬ್ಲಾಗ್ ಗೆ

shivu said...

ಅಭಿನಂದನೆಗಳು ಗುರುಮೂರ್ತಿ ಸರ್,

ನಿಮ್ಮ ಬ್ಲಾಗಿಗೆ ಒಂದು ವರ್ಷ ತುಂಬಿದೆ. "ಸಾಗರದಾಚೆಯ ಇಂಚರ" ಸದ್ಯ ಭುವಿಯ ಎಲ್ಲ ಖಂಡಗಳಿಗೂ ಕೇಳಿಸುತ್ತಿರಬಹುದು. ಹೀಗೆ ಹತ್ತಾರು, ನೂರಾರು ವರಷಗಳ ಸಂಭ್ರಮಕ್ಕೆ ಕಾರಣವಾಗಲಿ ಎನ್ನುವುದು ನನ್ನ ಹಾರೈಕೆ.
all the best.

ಸಾಗರದಾಚೆಯ ಇಂಚರ said...

ಶಿವೂ ಸರ್,
ನಿಮ್ಮೆಲ್ಲರ ಹಾರೈಕೆ, ಪ್ರೋತ್ಸಾಹವೇ ಒಂದು ವರ್ಷಕ್ಕೆ ನನ್ನ ಬ್ಲಾಗನ್ನು
ತಂದು ನಿಲ್ಲಿಸಿದೆ
ಮುಂದೆಯೂ ಸಹಕಾರ ಹೀಗೆಯೇ ಇರಲಿ

Creativity!! said...

ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ಇಂಚರ ಸಾವಿರಾರು ಕವನ ಲೇಖನದಿಂದ ತುಂಬಲಿ ಎಂದು ಹಾರೈಸುಥೆನೆ.

ಅಂತರ್ವಾಣಿ said...

ಡಾಕ್ಟರೇ,
ಶುಭಾಶಯಗಳು :)

ಸಾಗರದಾಚೆಯ ಇಂಚರ said...

Creativity
ನಿಮ್ಮ ಹಾರೈಕೆ ಹೀಗೆಯೇ ಇರಲಿ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಅಂತರ್ವಾಣಿ
ಮೆಚ್ಚುಗೆಗೆ ಹಾರೈಕೆಗೆ, ಪ್ರೋತ್ಸಾಹಕ್ಕೆ ಅಭಾರಿ

SANTOSH MS said...

Hearty congratulations on completion of your blogs 1 year. I wish all the best and keep writing in the same manner with enthusiasm.

jagadeesh Balehadda said...

ಗುರು ಅಣ್ಣಾ ನಿಮ್ಮ ಬರಹದ ಹರಿವು ಖುಷಿ ಕೊಡುತ್ತದೆ. ಇಂಚರ ನಿರಂತರವಾಗಿರಲಿ.

ವನಿತಾ / Vanitha said...

ಸಾಗರದಾಚೆಯ ಇಂಚರದ ವರುಷದ ಸಂಬ್ರಮಕ್ಕೆ ಶುಭಾಶಯಗಳು ..

Shweta said...

Wish you a very happy birthday -Sagaradaacheya Inchara!!

ಸೀತಾರಾಮ. ಕೆ. said...

ಬ್ಲೊಗ್-ನ ಹುಟ್ಟುಹಬ್ಬದ ಶುಭಾಶಯಗಳು.
ಹೀಗೆ ನಿರ೦ತರವಾಗಿ ಹೊಮ್ಮುತಿರಲಿ ಬ್ಲೊಗಾಯಣ.

ಸಾಗರದಾಚೆಯ ಇಂಚರ said...

Dear Santhosh,

thanks for the wishes, keep visiting

ಸಾಗರದಾಚೆಯ ಇಂಚರ said...

ಜಗದೀಶ್,
ನಿಮ್ಮ ಪ್ರೀತಿಗೆ ಚಿರ ಋಣಿ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ವನಿತಾ
ಹಾರೈಕೆ ವಂದನೆಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

Shwetha

thanks for the wishes

keep visiting

ಸಾಗರದಾಚೆಯ ಇಂಚರ said...

ಸೀತಾರಾಮ್ ಸರ್
ನಿಮ್ಮ ಹಾರೈಕೆಗೆ ವಂದನೆಗಳು
ಸದಾ ಬರುತ್ತಿರಿ
ಪ್ರೋತ್ಸಾಹಿಸುತ್ತಿರಿ

ಬಿಸಿಲ ಹನಿ said...

Congratulations. Keep it up.

ಬಾಲು said...

ನಿಮ್ಮ ಬರಹಗಳಲ್ಲಿ ಆತ್ಮೀಯತೆ ಇರುತ್ತೆ. )

ನಿಮ್ಮ ಅಕ್ಷರಯಾನ ಹೀಗೆ ಮುಂದುವರೆಯುತ್ತಾ ಇರಲಿ ಎಂದು ಹಾರೈಸುವೆ.

ದಿನಕರ ಮೊಗೇರ.. said...

ಗುರು ಸರ್,
ಅಭಿನಂದನೆಗಳು... ಹೀಗೆ ಮುಂದುವರೆಯಿರಿ....... ನೀವು ಬರೆಯುವವರೆಗೂ ನಾವಿದ್ದೇವೆ ಜೊತೆಗೆ...... ಹಾಟು ಹಲವಾರು ವರ್ಷ ದಾಟಲಿ.......

ಸಾಗರದಾಚೆಯ ಇಂಚರ said...

Thank you ''Bisila Hani'' uday sir

ಜಲನಯನ said...

ಡಾಕ್ಟರ್, ನಿಮ್ಮಂತೆ ನಾನೂ ಸಂಶೋಧನೆಯ ವ್ಯಸ್ತತೆಯಲ್ಲಿ ಬ್ಲಾಗಿಗೋಸ್ಕರ ಸಮಯ ತೆಗೆಯಲು ಸಾಧ್ಯ್ವಾದದ್ದು...ನಿಮ್ಮಂತಹವರ ಬರವಣಿಗೆಯಿಂದ...ನಿಮ್ಮ ಬ್ಲಾಗಿನ ವಾರ್ಷಿಕೋತ್ಸವಕ್ಕೆ ನಮ್ಮ ಅಭಿನಂದನೆಗಳು

ಸಾಗರದಾಚೆಯ ಇಂಚರ said...

ಬಾಲು
ಪ್ರೀತಿ ಹೀಗೆಯೇ ಇರಲಿ
ನಿಮ್ಮೆಲ್ಲರ ಪ್ರೋತ್ಸ್ಸಾಹವೇ ಬರೆಯಲು ಪ್ರೇರಣೆ ನೀಡುತ್ತದೆ
ಹೀಗೆಯ್ ಬರುತ್ತಿರಿ

ಸಾಗರದಾಚೆಯ ಇಂಚರ said...

ದಿನಕರ್ ಸರ್
ಎಲ್ಲಿಯವರೆಗೆ ನಿಮ್ಮ ಪ್ರೀತಿ ಪ್ರೋತ್ಸಾಹ ಇರುತ್ತದೋ ಅಲ್ಲಿಯವರೆಗೆ ನನ್ನ ಬರವಣಿಗೆಯೂ ಇರುತ್ತದೆ
ಹಾರೈಕೆ ಗೆ ಚಿರ ಋಣಿ

ಸಾಗರದಾಚೆಯ ಇಂಚರ said...

ಅಜ್ಹಾದ್ ಸರ್
ನಿಮ್ಮನ್ಥವರ ಬ್ಲಾಗ್ ನೋಡಿ ನನಗೂ ಬರೆಯಲು ಉತ್ಸಾಹ ಸಿಗುತ್ತದೆ
ಇಲ್ಲದಿರೆ ಸಂಶೋಧನೆಯ ನಡುವೆ ಸಮಯ ಸಿಗುವುದು ಕಷ್ಟ

arya_forU said...

ಹುಟ್ಟು ಹಬ್ಬದ ಶುಭಾಶಯಗಳು.
ಹಾಗೆ ನಿಮ್ಮ ಈ ಬರವಣಿಗೆ ಹೀಗೆ ನಿರಂತರವಾಗಿ ಸಾಗಿ , ವರುಷ ವರುಷಗಳ ಹೀಗೆ ಮುಗಿಸಲಿ ಎಂದು ಹಾರೈಸುತ್ತೇನೆ

Deepasmitha said...

ಎರಡನೆ ವರ್ಷಕ್ಕೆ ಕಾಲಿಟ್ಟಿದ್ದಕ್ಕೆ ಅಭಿನಂದನೆಗಳು. ಈ ವರ್ಷವೂ ಇನ್ನೂ ಉತ್ತಮವಾದುದನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ

Sri said...

nimma blog tumba chennagide.. :)
ivatte adannu noDiddu.. vaarshikotsavakke abhinandanegaLu! :)

Sri said...

varsha pooraisiddakke abhinandanegaLu... :)

ivatte nimma blog na noDiddu.. bahaLa chennagide..

ಸಾಗರದಾಚೆಯ ಇಂಚರ said...

Arya-for you

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ದೀಪಸ್ಮಿತ
ಖಂಡಿತ ಉತ್ತಮವಾದುದನ್ನೇ ಕೊಡಲು ಪ್ರಯತ್ನಿಸುವೆ
ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ

ಸಾಗರದಾಚೆಯ ಇಂಚರ said...

ಶ್ರೀ
ನಿಮ್ಮ ಮೆಚ್ಚುಗೆಗೆ ನನ್ನ ವಂದನೆಗಳು
ನಿಮ್ಮ ಕವನ ಇದೀಗ ಓದಿ ಬಂದೆ
ತುಂಬಾ ಸುಂದರ ಕವನ ಹಾಕಿದ್ದಿರಾ

ವಿ.ಆರ್.ಭಟ್ said...

ಸೆಂಚುರಿ ಹೀರೋ, ಸಾಗಿ ಮುಂದೆ,ಬರೆಯಿರಿ ಇನ್ನಷ್ಟು

ಮಾಚಿಕೊಪ್ಪ said...

ನಮಸ್ಕಾರ.
ನೀವು ಮೊದಲು ಇಂಟರ್ ನೆಟ್ ಗ್ಗೆ ಕೃತಜ್ಞತೆ ಹೇಳಿ.ಅದಿರುವುದರಿಂದಲೇ ತಾನೇ ನಾವು ನಿಮ್ಮ ಬ್ಲಾಗ್ ಪಡೆಯುವುದು.

VENU VINOD said...

ವರುಷದ ಹರುಷದಲ್ಲಿರುವ ಗುರು....ನಿಮ್ಮ ಈ ಅಕ್ಷರಯಜ್ಞ ಮುಂದುವರಿಯಲಿ..ಶುಭಾಶಯಗಳು

Snow White said...

congratulations sir..nimma blogna modalane huttu habbada shubhashayagalu.. :)

ಸಾಗರದಾಚೆಯ ಇಂಚರ said...

ವಿ ಆರ್ ಭಟ್ ಸರ್
ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆಯೇ ಇರಲಿ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಮಾಚಿಕೊಪ್ಪ ಸರ್
ನಿಮ್ಮ ಮಾತು ನಿಜ,
ಇಂಟರ್ನೆಟ್ ನಿಂದ ನಿಮ್ಮಂತಹ ಆತ್ಮೀಯರ ಪರಿಚಯ ಆಗಿದೆ
ಬ್ಲಾಗ್ ಪ್ರಪಂಚ ನನಗೆ ಬಹಳಷ್ಟು ನೀಡಿದೆ
ಅದಕ್ಕೆ ನಾನು ಚಿರಋಣಿ
ನಿಮ್ಮ ಹಾರೈಕೆಗೆ ವಂದನೆಗಳು

ಸಾಗರದಾಚೆಯ ಇಂಚರ said...

ವೇಣು,
ನಿಮ್ಮ ಪ್ರೋತ್ಸಾಹ ಸದಾ ಬೇಕು
ನಿಮ್ಮಂಥ ಪತ್ರಕರ್ತರ ಒಡನಾಟ ಬರೆಯಲು ಪ್ರೇರೇಪಿಸುತ್ತದೆ

ಸಾಗರದಾಚೆಯ ಇಂಚರ said...

Snow White,
ನಿಮ್ಮ ಹಾರೈಕೆಗೆ ವಂದನೆಗಳು
ಹೀಗೆಯೇ ಬರುತ್ತಿರಿ

ಶಿವಪ್ರಕಾಶ್ said...

Congrats sir.. :)
Keep Writing :)

goutam said...

blog ge belated happy birthday:)

ಸಾಗರದಾಚೆಯ ಇಂಚರ said...

Shivu Sir
thanks for the wishes

ಸಾಗರದಾಚೆಯ ಇಂಚರ said...

ಗೌತಮ್
ಥ್ಯಾಂಕ್ಸ್

ಗುರು-ದೆಸೆ !! said...

'ಸಾಗರದಾಚೆಯ ಇಂಚರ' ಅವರೇ..,

ನಿಮ್ಮ ಈ ಪಯಣ ಹೀಗೆ ಮುಂದುವರೆಯುತ್ತಿರಲಿ,ಜೊತೆಗೆ ನಾನೂ ಕೂಡ ಇದ್ದೇನೆ...

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com/

ಸುಶ್ರುತ ದೊಡ್ಡೇರಿ said...

ಶುಭಾಶಯಾ... ಮುಂದುವರೀಲಿ ಕಿಚಿಪಿಚಿ ಇಂಚರ...

ಸಾಗರದಾಚೆಯ ಇಂಚರ said...

ಗುರು ದೆಸೆ,
ನಿಮ್ಮ ಹಾರೈಕೆಗೆ ವಂದನೆಗಳು
ನಿಮ್ಮ ಬ್ಲಾಗ್ ಗೆ ಭೇಟಿ ಇಟ್ಟಿದ್ದೇನೆ

ಸಾಗರದಾಚೆಯ ಇಂಚರ said...

ಸುಶ್ರುತ ಸರ್
ಕಿಚಿ ಪಿಚಿ ಸದ್ದು ಕೇಳಲು ಖಂಡಿತ ಬರುತ್ತಿರಿ

ಚಿತ್ರಾ said...

ಗುರು,
ಹುಟ್ಟುಹಬ್ಬದ ಶುಭಾಶಯಗಳು ! ಹೀಗೇ ಹರುಷ ತುಂಬಿದ ವರ್ಷಗಳು ಮತ್ತೆ ಮತ್ತೆ ಬರುತ್ತಲೇ ಇರಲಿ !
ಬಹಳ ತಡವಾಗಿ ಬಂದಿದ್ದೇನೆ ಕ್ಷಮಿಸಿ . ವೈವಿಧ್ಯಮಯವಾದ ನಿಮ್ಮ ಬರಹಗಳು ಖುಷಿ ಕೊಡುತ್ತವೆ . ನಿಮ್ಮ ಸಾಹಿತ್ಯ ಸೇವೆ ಹೀಗೇ ಮುಂದುವರಿಯಲಿ ,

ಸಾಗರದಾಚೆಯ ಇಂಚರ said...

ಚಿತ್ರಾ,
ತಡವಾಗಿ ಬಂದರೂ ಬಂದಿದ್ದಿರಲ್ಲ ಎಂಬ ಸಂತೋಷ ಇದೆ,
ನಿಮ್ಮ ಹಾರೈಕೆ ಸದಾ ಇರಲಿ
ಹಿಂಗೆ ಬರ್ತಾ ಇರು ಅಕ :)

ವಿನುತ said...

ತುಂಬಾ ಅಂದರೆ ತುಂಬಾನೇ ತಡವಾಗಿ ಅಭಿನಂದನೆಗಳು. ಸಾಗರದಾಚೆಯ ನಿಮ್ಮ ಬರಹಗಳ ಅಲೆಗಳು ಹೀಗೇ ನಿರಂತರವಾಗಿ ದಡ ತಲುಪುತ್ತಿರಲಿ.

ಸಾಗರದಾಚೆಯ ಇಂಚರ said...

ವಿನುತಾ
ತಡವಾಗಿ ನಮ್ಮ ಬ್ಲಾಗಿಗೆ ಬಂದು ಹರಸಿದ್ದಿರಿ
ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆಯೇ ಇರಲಿ

chandrika said...

yeee hrudaya yaakoo sariyagi kaanista illa.. pls.....