Sunday, January 10, 2010

ಸ್ವೀಡನ್ನಿನ ಪೊಲೀಸರಿಗೆ ಸಿಕ್ಕಿ ಬಿದ್ದ ನನ್ನ ಸ್ಥಿತಿ

ಅದೊಂದು ಚಳಿಗಾಲದ ಮುಂಜಾನೆ ಸುಮಾರು ೯ ಘಂಟೆಯ ಸಮಯ. ಇಲ್ಲಿ ಚಳಿಗಾಲವೆಂದರೆ ಸೂರ್ಯನಿಗೆ ''Winter Vacation'' ಆತನೂ ಬಹಳ ಮೈಗಳ್ಳ ಚಳಿಗಾಲದಲ್ಲಿ. ಮದುವೆಯ ದಿನ ಮೊದಲ ರಾತ್ರಿಯಲ್ಲಿ ಪ್ರಿಯತಮೆಗೆ ಕಾಯುವ ಪ್ರಿಯತಮನಂತೆ ಇಲ್ಲಿನ ಜನ ಸೂರ್ಯನ ಬೆಳಕಿಗೆ ಕಾಯುತ್ತಿರುತ್ತಾರೆ. ಕೆಲವೊಮ್ಮೆ ಮೋಡದ ಮರೆಯಲ್ಲಿ ಕಣ್ಣು ಮುಚ್ಚಾಲೆ ಆಡುತ್ತಾ ಒಮ್ಮೆ ನಕ್ಕು ಮತ್ತೆ ಕಾಣದಾಗುವ ಸೂರ್ಯ ಬದುಕಿನಲ್ಲಿ ಇಷ್ಟೊಂದು ಮಹತ್ವದ ವ್ಯಕ್ತಿ ಎಂದು ತಿಳಿದಿದ್ದೆ ಸ್ವೀಡನ್ನಿಗೆ ಬಂದ ಮೇಲೆ. ಅಲ್ಲಿಯವರೆಗೆ ಸೂರ್ಯನ ಬಿಸಿಲು ಬಂದ ಕೂಡಲೇ ''ಅಯ್ಯಯ್ಯೋ ಸೆಖೆ, ತಡೆಯಲಾಗದು, ಗಾಳಿ ಕೂಡಾ ಬರ್ತಾ ಇಲ್ಲಾ'' ಎಂದೆಲ್ಲ ಬೈದ ದಿನಗಳೇ ಹತ್ತು ಹಲವು. ಇಂಥಹ ಸೂರ್ಯ ಚಳಿಗಾಲದಲ್ಲಿ ಸ್ವೀಡನ್ನಿನಲ್ಲಿ ದರ್ಶನ ಕೊಡುವುದು ಬೆಳಗಿನ ೧೦ ಘಂಟೆಯ ಸುಮಾರಿಗೆ. ಇವನ ದರ್ಶನವೋ ತಿರುಪತಿ ತಿಮ್ಮಪ್ಪನ ದರ್ಶನದಂತೆ. ಬಹಳ ಹೊತ್ತು ಒಂದೇ ಕಡೆ ನಿಲ್ಲಲಾರ. ಹೆಚ್ಚು ಹೊತ್ತು ದರ್ಶನ ಕೊಡದೆ ಮರೆಯಾಗುವ ಈತ ಭಾರತದ ತಿಮ್ಮಪ್ಪನಿಗೂ ಅಪ್ಪನಂತಿದ್ದಾನೆ. ಬೆಳಗಿನ ೧೦ ಘಂಟೆಗೆ ಬೆಳಕು ಹರಿದರೆ ಮಧ್ಯಾನ್ಹ ೩ ಘಂಟೆಗೆ ಪುನಃ ಸಂಪೂರ್ಣ ಕತ್ತಲು. ಕೇವಲ ೫-೬ ತಾಸುಗಳ ಹಗಲು ಇಲ್ಲಿಯವರನ್ನು ಒಂದು ರೀತಿಯ ವಿಚಿತ್ರ ಮಾನಸಿಕ ವೇದನೆಗೆ ಒಳಪಡಿಸುತ್ತದೆ. ಚಳಿಗಾಲದಲ್ಲಿ ಸತ್ತು ಬಿದ್ದ ಹೆಣದಂತೆ ಇಲ್ಲಿಯವರ ಮುಖ ಗೋಚರಿಸುತ್ತದೆ.


ಮಾತು ಎಲ್ಲೆಲ್ಲೋ ಹೋಗ್ತಾ ಇದೆ ಅಂತಿರಾ? ಸ್ವೀಡನ್ನಿನ ಪೊಲೀಸರು ಎಂದು ಸೂರ್ಯನ ಬಗ್ಗೆ ಹೇಳ್ತಾ ಇದಾನೆ ಅಂದುಕೊಂಡ್ರ? ಏನು ಮಾಡಲಿ ನಿಮಗೂ ಸ್ವಲ್ಪ ನಮ್ಮ ಚಳಿಗಾಲದ ವೇದನೆ ಹೇಳೋಣ ಅನಿಸ್ತು, ಅದಿಕ್ಕೆ ಇಷ್ಟೆಲ್ಲಾ ಪೀಠಿಕೆ. ಇಂಥಹ ಒಂದು ಚಳಿಗಾಲದ ಮುಂಜಾನೆ ಬಸ್ಸಿಗಾಗಿ ಕಾಯುತ್ತಾ ಇದ್ದೆ. ಒಂದೇ ನಿಮಿಷದೊಳಗೆ ಬಸ್ಸು ಬಂತು. ಇಲ್ಲಿನ ಸಾರಿಗೆ ವ್ಯವಸ್ಥೆಯ ಬಗೆಗೆ ಹೇಳದೆ ಕಥೆ ಮುಂದುವರಿಯುವುದು ಕಷ್ಟ. ಸಾಫ್ಟ್ವೇರ್ ತಂತ್ರಜ್ಞಾನ ಹೇಗೆಲ್ಲ ಉಪಯೋಗಿಸಿಕೊಳ್ಳಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ. ಅತ್ಯಂತ ವ್ಯವಸ್ಥಿತವಾಗಿ ಬಸ್ಸು, ಟ್ರಾಮ್, ಟ್ರೈನ್ ಗಳ ಬಗೆಗೆ ಮಾಹಿತಿ ನೀಡುವ ವೆಬ್ ಸೈಟ್ ''http://vasttrafik.se/en/''. ಸುಮ್ಮನೆ ಒಮ್ಮೆ ಅಲ್ಲಿಗೆ ಹೋಗಿ ವಾಹನಗಳ ಬಗೆಗಿನ ವಿವರಣೆ ನೋಡಿ. ನಿಮ್ಮ ಮನೆಯ ಹತ್ತಿರವೇ ಬಸ್ ನಿಲ್ದಾಣ ಇರುತ್ತದೆ. ನೀವು ಹೋಗುವ ಸಮಯವನ್ನು ಸೈಟ್ ನಲ್ಲಿ ಹಾಕಿದರೆ ಅದು ಬಸ್ ಅಥವಾ ಟ್ರಾಮ್ ಬರುವ ಸಮಯ ತೋರಿಸುತ್ತದೆ. ಅದೇ ಸಮಯಕ್ಕೆ ನೀವು ಅಲ್ಲಿ ಹೋದರೆ ಸಾಕು, ನಿಮಗಾಗಿ ಬಸ್ ತಯಾರಾಗಿರುವಂತೆ ಅಲ್ಲಿ ನಿಂತಿರುತ್ತದೆ. ಒಂದೆರಡು ನಿಮಿಷಗಳ ವ್ಯತ್ಯಾಸವು ಇರುವುದಿಲ್ಲ. ಅದಕ್ಕಾಗಿ ಇಲ್ಲಿಯ ಜನ ತಮ್ಮ ಕಾರುಗಳಿಗಿಂತ ಬಸ್ಸನ್ನೇ ಹೆಚ್ಚು ಉಪಯೋಗಿಸುತ್ತಾರೆ. ಒಂದು ತಾಸಿನಲ್ಲಿ 30 ಕಿ ಮಿ ದೂರದ ಪ್ರದೇಶಕ್ಕೆ ಹೋಗಿ ಸಾಮಾನು ಖರೀದಿಸಿಕೊಂಡು ಪುನಃ ಮನೆಗೆ ಬಂದು ಬಿಡಬಹುದು. ಎಲ್ಲಿಯೂ ಸಮಯ ಹಾಳಾಗುವುದಿಲ್ಲ. ಇಲ್ಲಿನ ಸಾರಿಗೆ ವ್ಯವಸ್ಥೆ ನನ್ನನ್ನು ಬಹುವಾಗಿ ಆಕರ್ಷಿಸಿದೆ. ಹೆಚ್ಚಿನ ಜನಸಂಖ್ಯೆ ಇರುವ ಭಾರತದಲ್ಲಿ ಇಂಥಹ ವ್ಯವಸ್ಥೆ ಬಂದರೆ ಎಷ್ಟೊಂದು ಚಂದ ಅಲ್ಲವೇ? ನಿಮಗೆ ಆಫೀಸ್ ನಲ್ಲಿ ಬೆಳಿಗ್ಗೆ ೯ ಘಂಟೆಗೆ ಅರ್ಜೆಂಟ್ ಆಗಿ ಒಂದು ಮೀಟಿಂಗ್ ಇದೆ ಅಂದುಕೊಳ್ಳಿ, ನೀವು ಬಸ್ಸಿಗೆ ಕಾಯುತ್ತಿದ್ದಿರಿ, ಸರಿಯಾದ ಸಮಯಕ್ಕೆ ಬಸ್ಸ ಬರಲಿಲ್ಲ, ಕೂಡಲೇ ನೀವು ಬಾಡಿಗೆ ಕಾರು ತೆಗೆದುಕೊಂಡು ಆಫೀಸ್ ಗೆ ಹೋಗಿ ಸಂಜೆ ಅದೇ ಕಾರಿನ ಬಿಲ್ಲನ್ನು ಸಾರಿಗೆ ಆಫೀಸಿನಲ್ಲಿ ಕೊಟ್ಟು ಬಸ್ಸ ಬರಲು ತಡವಾಗಿದ್ದು ಹೇಳಿದರೆ ''ಅದು ನಿಜವೇ ಆದಲ್ಲಿ'' ನಿಮಗೆ ಕಾರಿನ ಬಾಡಿಗೆ ಕೂಡಲೇ ಲಭಿಸುತ್ತದೆ. ಇಂಥಹ ವ್ಯವಸ್ಥೆ ಎಲ್ಲಿದೆ ಹೇಳಿ. ಅದಿಕ್ಕೆ ಹೇಳಿದ್ದು ಬಸ್ಸ, ಒಂದೆರಡು ನಿಮಿಷಗಳೂ ತಡವಾಗಿ ಬರುವುದಿಲ್ಲ ಎಂದು. ಒಂದೊಮ್ಮೆ ಬಸ್ಸು  ಬರಲು ತಡವಾದರೆ, ಬಿಲ್ಲನ್ನು ಅವರೇ ಕೊಡಬೇಕಲ್ಲ, ಅಂಥಹ   ತಪ್ಪನ್ನು ಅವರು ಹೆಚ್ಚಾಗಿ ಮಾಡುವುದಿಲ್ಲ. ಇನ್ನು ಕಥೆಗೆ ಬರೋಣ. ಬಸ್ಸನ್ನು ಹತ್ತಿ ಕುಳಿತುಕೊಂಡೆ. ಬಸ್ಸಲ್ಲಿ ಅಷ್ಟೊಂದು ಜನರೇನೂ ಇರಲಿಲ್ಲ. ಚಳಿಗಾಲದಲ್ಲಿ ಬಸ್ಸನ್ನು ಹತ್ತುವುದೇ ಮಜಾ, ಕಾರಣ ಬಸ್ಸು ಬೆಚ್ಚಗೆ ಇರುತ್ತದೆ, ಅದರೊಳಗಡೆ ಹಿಮದ ಮಳೆಯ ಕಾಟವಿಲ್ಲ :)


ಇಂತಿಪ್ಪ ಸಮಯದಲ್ಲಿ ನನ್ನ  ಪಕ್ಕದ ಸೀಟಿನಲ್ಲಿ ಸುಮಾರು ೩೦ ರ ಹರೆಯದ (ಹೆಣ್ಣಿನ ಹರೆಯಕ್ಕೂ ಅವಳ ಮುಖಕ್ಕೂ ಅಜಗಜಾಂತರ ವ್ಯತ್ಯಾಸ ಎಂದು ಕೇಳಿದ್ದೇನೆ ) ಹೆಂಗಸೊಬ್ಬಳು ತನ್ನ ಚಿಕ್ಕ ಮಗು (ಸುಮಾರು 2-3 ವರ್ಷ ಇರಬಹುದು) ಕರೆದುಕೊಂಡು ಬಂದು ಕುಳಿತಳು. ಕಥೆ ಅಲ್ಲಲ್ಲ ನನ್ನ ಗೋಳಿನ ವ್ಯಥೆ ಆರಂಬವಾಗುವುದೇ ಇಲ್ಲಿಂದ.


ಆ ಹೆಂಗಸು ಕುಳಿತ ಒಂದೆರಡು ನಿಮಿಷದಲ್ಲೇ ಕೈಯಲ್ಲಿರುವ ಮಗು ಒಂದೇ ಸಮನೆ ಅಳಲಾರಂಬಿಸಿತು. ಮಗುವನ್ನು ಎಷ್ಟೇ ಸಮಾಧಾನ ಪಡಿಸಲು ಯತ್ನಿಸಿದರೂ ಆ ಮಗು ಅಳು ನಿಲ್ಲಿಸಲಿಲ್ಲ. ಆ ಮಹಾತಾಯಿ ತನ್ನ ಬ್ಯಾಗಿನಲ್ಲೆಲ್ಲ ಏನಾದರೂ ಮಗುವಿಗೆ ಕೊಡಲು ಸಿಗುತ್ತದೆಯೇ ಎಂದು ತಡಕಾಡಿದಳು. ಬಂದಿದ್ದು ಖಾಲಿ ಕೈ ಮಾತ್ರ. ಮಗುವಿನ ಅಳು ನೋಡಲಾಗದೆ ಆ ತಾಯಿ ನನ್ನೆಡೆಗೆ ತಿರುಗಿ ''If you don't mind, will you please take this child for couple of minutes until then i will bring some sweets from the shop?'' ಅಂತ ಹೇಳಿದಳು. ಮೊದಲೇ ನಾವು ಭಾರತೀಯರು, ಸಹಾಯ ಹಸ್ತಕ್ಕೆ ಪ್ರಸಿದ್ದರು. ಕೂಡಲೇ ಆಯಿತು ಎಂದು ಸಮ್ಮತಿ ಸೂಚಿಸಿ ಆ ಮುದ್ದಾದ ಮಗುವನ್ನು ಎತ್ತಿಕೊಂಡೆ. ಆ ಮಹಾತಾಯಿ ಸ್ವೀಟ್ಸ್ ತರಲು ಅಂಗಡಿಗೆ ತೆರಳಿದಳು. ನಂಗೆ ಗೊತ್ತಿದ್ದಂತೆ ಅಲ್ಲಿ ಹತ್ತಿರದಲ್ಲಿ ಎಲ್ಲಿಯೂ ಅಂಗಡಿ ಇರಲಿಲ್ಲ. ಸುಮಾರು ೧೦ ನಿಮಿಷ ಕಾದರೂ ತಾಯಿಯ ಸುಳಿವಿಲ್ಲ. ನನಗೆ ಭಯ ಆರಂಬವಾಯಿತು. ಮಗು ಬೇರೆ ಕೈಯಲ್ಲಿದೆ. ಎಲ್ಲರೂ ನನ್ನನ್ನೇ ದುರು ದುರು  ನೋಡಲಾರಂಬಿಸಿದರು. ಇದೆ ಸಮಯಕ್ಕೆ ಸರಿಯಾಗಿ ಬಸ್ಸನ್ನು ಬಸ್ ಸ್ಟೇಷನ್ ನಿಂದ ಬಿಟ್ಟರು. ನಾನು ಡ್ರೈವರ್ ಹತ್ತಿರ ಹೋಗಿ ಸ್ವಲ್ಪ ಹೊತ್ತು ನಿಲ್ಲಿಸಲು ಹೇಳಿದರೂ ಪ್ರಯೋಜನವಾಗಲಿಲ್ಲ. ಮೊದಲೇ ಸಮಯಕ್ಕೆ ಜೀವವನ್ನೇ ಕೊಡುವ ಜನರು. ಅಂಥಹುದರಲ್ಲಿ ಇಂಥಹ ವಿಷಯಗಳಿಗೆ ನಿಲ್ಲಿಸಿಯಾರೆ? ನನ್ನ ಎದೆ ಬಡಿತ ಹೆಚ್ಚಾಗುತ್ತಿತ್ತು. ಕೈಯಲ್ಲಿ ಯಾರದೋ ಮಗು. ಬಸ್ಸಿನಲ್ಲಿರುವವರೆಲ್ಲ ನನ್ನನ್ನೇ ನೋಡುತ್ತಿದ್ದಾರೆ. ಅವರ ನೋಟ ನೋಡಲಾಗದೆ ಒಂದು ಬದಿಯ ಸೀಟ್ ನಲ್ಲಿ ಬಂದು ಕುಳಿತೆ. ಮಹಾತಾಯಿ ಎಲ್ಲಿಗೆ ಹೋದಳೋ ಪತ್ತೆಯೇ ಇರಲಿಲ್ಲ.


ಮನಸ್ಸಿನಲ್ಲಿ ನೂರೆಂಟು ಯೋಚನೆ '' ನಿಜವಾಗಿಯೂ ಸ್ವೀಟ್ಸ್ ತರಲು ಹೋಗಿದ್ದಾಳ? ಇಲ್ಲ ಮಗುವನ್ನು ನನಗೆ ಕೊಟ್ಟು ಮಾಯವಾದಳ? ಮಗು ಅವಳದೇ ಹೌದೆ? ಇಲ್ಲ ಯಾರದೋ ಮಗುವನ್ನು  ಅಪಹರಿಸಿ ಕೊಂಡು ಬಂದು ಈಗ ನನಗೆ ನೀಡಿ ತಾನು ತಪ್ಪಿಸಿಕೊಂಡಲಾ ?'' ಮನಸ್ಸಿಗೆ ಏನೂ ತೋಚದಾಗಿತ್ತು. ಹೆಂಡತಿಯ ಮೊಬೈಲಿಗೆ ಫೋನ್ ಮಾಡಿದೆ, ಅವಳು ಮೀಟಿಂಗ್ ಇದೆ ಎಂದು ಮೊಬೈಲ್ ಆಫ ಮಾಡಿದ್ದಳು. ಸರಿಯಾಗಿ ಎಲ್ಲವೂ ಇಂದೇ ಆಗಬೇಕಿತ್ತೇ? ಎಂದು ಚಿಂತಿಸತೊಡಗಿದೆ. ಮನಸ್ಸು ಕುಳಿತಲ್ಲಿ ಕುಳಿತಿಲ್ಲ, ನಿಂತಲ್ಲಿ ನಿಲ್ಲುತ್ತಿಲ್ಲ. ಸಾಲದ್ದಕ್ಕೆ ಅಲ್ಲೇ ಆಚೆ ಇಚೆ ಸ್ವೀಡನ್ನಿನ ಪೋಲೀಸರ ವಾಹನಗಳು ಚಲಿಸುತ್ತಿದ್ದವು. ಇವರು ಮಗುವಿಗಾಗಿಯೇ ಹುಡುಕುತ್ತಿರಬಹುದೇ? ಎಂಬ ಕೆಟ್ಟ ಯೋಚನೆಗಳು ಬೇರೆ?


ಅಂದು ಮೊದಲ ಬಾರಿಗೆ ವಿದೇಶದಲ್ಲಿ ಹೆದರಿಕೆ ಆರಂಬವಾಯಿತು. ಮುಂದೇನಾಗುತ್ತದೆಯೋ? ಎಂಬ ಭಯ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿತ್ತು.
ಮೊದಲೇ ನಾವು ವಿದೇಶಿಯರು ಬೇರೆ?
ಮುಂದೇನಾಯಿತು? ಮುಂದಿನ ವಾರದವರೆಗೆ ಕಾಯಲೇಬೇಕು
ಅಲ್ಲಿಯವರೆಗೆ,
ಲಘು ವಿರಾಮ

67 comments:

Guru's world said...

ಗುರುಪ್ರಸಾದ್ ಸರ್,,
ಚೆನ್ನಾಗಿ ಇದೆ, ಅನುಭವದ ಕತನ/ವ್ಯತನ.....ಮುಂದಿನ ಪೋಸ್ಟ್ ಗಾಗಿ ಎದುರು ನೋಡುತ್ತಿರುತ್ತೇವೆ...
ಹಾಗೆ ನೀವು ಹೇಳಿದ transport ಸಿಸ್ಟಮ್ ತುಂಬ ಇಷ್ಟ ಆಯಿತು... ನಾನು ಇದರ ಅನುಭವ ಪಡೆದಿದ್ದೇನೆ,, ಲಂಡನ್ ನಲ್ಲಿ ಇರಬೇಕಾದರೆ....ಕೆಲವೊಮ್ಮೆ ನನಗೂ ಹೀಗೆ ಅನ್ನಿಸಿದ್ದು,,, ಬೆಂಗಳೂರಿನಲ್ಲಿ ಹೀಗೆ ಆಗಲು ಸದ್ಯವ ಅಂತ......

ವನಿತಾ / Vanitha said...

OMG!!!ಮುಂದೇನಾಯ್ತು..ಬೇಗ ಮುಂದುವರೆಸಿರಿ:)

Subrahmanya Bhat said...

ಕಾಯುವಂತೆ ಮಾಡಿದ್ದೀರಿ...ಕಾಯುತ್ತೇನೆ. ಅನುಭವ curious ಆಗಿದೆ. ಹೀಗೆ ಮುಂದುವರಿಸಿ...ಧನ್ಯವಾದಗಳು

Shweta said...

ohh god! munde bega bareeri sir...

ಮನಸು said...

oh God!!! enta kelasa agide sahaya maadodu tappu annisutte kelavusari.. neevu ee gandaantaradinda paaragideeri endu gottagutte adakke saakshi ee blog posting.hahaha

mundenaayitu bega tiLisi..

Divya Mallya - ದಿವ್ಯಾ ಮಲ್ಯ said...

ಶೀರ್ಷಿಕೆ ಓದಿ ಸ್ವಲ್ಪ ಭಯ ಆಗಿದೆ.. ಮುಂದಿನ ಬರಹದ ನಿರೀಕ್ಷೆಯಲ್ಲಿ...

ಚುಕ್ಕಿಚಿತ್ತಾರ said...

ಚೆನ್ನಾಗಿದೆ....
ಪಜೀತಿ...ಮು೦ದೆ....?

ಸವಿಗನಸು said...

ಡಾ.ಗುರು,
ವೇಗವಾಗಿ ಓದಿಸಿಕೊಂಡು ಹೋಯಿತು...ಮುಂದೇನಾಯಿತು ಎಂಬ ಕುತೂಹಲ...
ನಿಮ್ಮ ಪರಿಸ್ಥಿತಿ ಊಹಿಸಿಕೊಂಡರೆ ಬಲು ಕಷ್ಟ.....
ಅಲ್ಲಿನ ಸಾರಿಗೆ ಬಗೆ ಚೆಂದದ ವಿವರಣೆ......
ಬೇಗ ಮುಂದಿನ ಭಾಗ ಹಾಕಿ.....

ಸಾಗರದಾಚೆಯ ಇಂಚರ said...

ಗುರು ಸರ್,
ಹೌದಲ್ವಾ,
ನಮ್ಮ ಊರಿನಲ್ಲಿ ಹೀಗೆ ಸಾರಿಗೆ ಬಂದ್ರೆ ಎಷ್ಟು ಚಂದ್ ಆಲ್ವಾ,
ನಾವು ಬೆಂಗಳೂರಿನಲ್ಲಿ ಹೆಚ್ಚಿನ ಸಮಯ ರಸ್ತೆಯಲ್ಲೇ ಕಳಿತೇವೆ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ವನಿತಾ,
ಖಂಡಿತ ಮುಂದಿನ ವಾರ ಕಥೆ ಮುಗಿಸುತ್ತೇನೆ,
ದಯವಿಟ್ಟು ಕಾಯಲೇಬೇಕು,ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಸರ್,
ಕಥೆ ಅಲ್ಲ ವ್ಯಥೆಯನ್ನು ಒಮ್ಮೆಲೇ ಮುಗಿಸಬೇಕೆನ್ದುಕೊಂಡಿದ್ದೆ
ಆದರೆ ಓದುಗರಿಗೆ ಅಷ್ಟೊಂದು ದೊಡ್ಡ ಕಥೆ ಬೇಡ ಎಂದು ಎರಡು ಭಾಗ ಮಾಡಿದ್ದೇನೆ
ಮುಂದಿನ ವಾರ ಕುತೂಹಲ ಇಡುವುದಿಲ್ಲ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಶ್ವೇತ,
ಮುಂದಿನ ವಾರದವರೆಗೆ ಕಾಯಲೇಬೇಕು :)
ಧನ್ಯವಾದಗಳು ಅಭಿಪ್ರಾಯಕ್ಕೆ

ಸಾಗರದಾಚೆಯ ಇಂಚರ said...

ಮನಸು,
ನಿಜ, ಒಬ್ಬರಿಗೆ ಸಹಾಯ ಮಾಡಲು ಹೋಗಿ ಫಜೀತಿಗೆ ಸಿಲುಕಿಕೊಂಡೆ
ಆದರೆ ಪಾರಾಗಿ ಬಂದಿದ್ದೇನೆ ಎನ್ನುವ ನಿಮ್ಮ ಮಾತು ಸತ್ಯ
ಸಹಾಯ ಮಾಡುವ ಮುನ್ನ ಎಚ್ಚರದಿಂದಿರಿ ಅಷ್ಟೇ
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ದಿವ್ಯಾ,
ಭಯವನ್ನು ಮುಂದಿನ ವಾರ ನಿವಾರಿಸುತ್ತೇನೆ,
ಎಅಗ ಯಾವುದೇ ತೊಂದರೆ ಇಲ್ಲ
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಚುಕ್ಕಿ ಚಿತ್ತಾರ
ಫಜೀತಿ ಈಗ ನನಗೆ ಚೆನ್ನಾಗಿಯೇ ತೋರಿದೆ ಆದರೆ ಆ ಸಮಯದಲ್ಲಿ :)
ಮುಂದಿನ ವಾರ ಮುಂದಿನದು
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸವಿಗನಸು ಸರ್,
ಹೌದು, ಅದೊಂದು ವಿಚಿತ್ರ ಘಟನೆಯಾಗಿ ಜೀವನದ ಪುಟಗಳಲ್ಲಿ ದಾಖಲಾಯಿತು
ಆ ಸಮಯ ಮರೆಯಲಾರೆ
ಸಾರಿಗೆ ಇಲ್ಲಿನದು ನನ್ನನ್ನೂ ಬಹಳ ಆಕರ್ಷಿಸಿದೆ
ಹೀಗೆಯೇ ಬರುತ್ತಿರಿ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ರವಿಕಾಂತ ಗೋರೆ said...

Huh.. Chennaagide..

ಚಿತ್ರಾ said...

ಛೆ , ಇತ್ತೀಚೆ ಯಾಕೋ ಎಲ್ಲರೂ ಕಂತುಗಳಲ್ಲಿ ಬರೆಯಲಾರಂಭಿಸಿದ್ದಾರೆ ! ಅತ್ಯಂತ ಕುತೂಹಲದಿಂದ ಮುಂದೇನಾಯ್ತು ಎಂದು ಓದುತ್ತಿರುವಷ್ಟರಲ್ಲಿ ಕಂತು ಮುಗಿದಿರುತ್ತದೆ . ಮತ್ತೆ ಕಾಯಬೇಕು .
ಯಾರದೋ ಅಳುತಿರುವ ಮಗುವನ್ನು ಕೈಯಲ್ಲಿ ಹಿಡಿದು , ಚಡಪಡಿಸುತ್ತಾ , ಬೆಚ್ಚನೆಯ ಬಸ್ಸಿನಲ್ಲೂ ಒಳಗೊಳಗೇ ನಡುಗುತ್ತಾ ಕುಳಿತಿರಬಹುದಾದ ನಿಮ್ಮ ಪರಿಸ್ಥಿತಿಯನ್ನು ಕಲ್ಪಿಸಿಕೊಂಡು ಅನುಕಂಪ ಮೂಡುತ್ತಿದೆ ಗುರು !
ಬೇಗ ಮುಂದುವರಿಸಿ. ....

ಮನಮುಕ್ತಾ said...

ಅಯ್ಯೋ ...ದೇವರೇ..
ಮು೦ದೇನಾಯ್ತು ಬೇಗನೆ ಬರೆದು ಬಿಡಿ.ಊಹೆ ಮಾಡಿಕೊ೦ಡ್ರೆ
ಭಯನೇ ಆಗತ್ತೆ.ಏನಾಗಿರಬಹುದು ಎ೦ದು ಊಹೆ ಮಾಡೊ ಕಷ್ಟಕ್ಕೆ ತಳ್ಳಿದ್ದೀರಲ್ಲಾ..ನಮ್ಮನ್ನು.
ಮು೦ದಿನ ವಾರದವರೆಗೆ..ಅ೦ದ್ರೆ ಜಾಸ್ತಿ ಆಯ್ತು ಬಿಡಿ.

ಸಾಗರದಾಚೆಯ ಇಂಚರ said...

ಗೋರೆ ಸರ್,
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಚಿತ್ರಾ,
ಕಂತುಗಳಲ್ಲಿ ಹಾಕುವ ಯೋಚನೆ ಖಂಡಿತ ಇರಲಿಲ್ಲ
ಬರೆಯುತ್ತಾ ಹೋದಂತೆ ಲೇಖನ ದೊಡ್ಡದಾಗುತ್ತ ಹೋಯಿತು
ಒಂದೇ ದಿನ ಸಕಲ ಕಜ್ಜಾಯಗಳನ್ನು ತಿನ್ನಿಸಿದರೆ ಹೇಗಿರುತ್ತದೆ ಹೇಳಿ
ಹಾಗೆಯೇ ಕೆಲವು ಕುತೂಹಲಗಳನ್ನು ಇಡಲೇ ಬೇಕಲ್ಲ
ಆ ಮಗುವನ್ನು ಎತ್ತಿಕೊಂಡಾಗಿನ ಭಾವನೆಗಳು ವರ್ಣಿಸಲಾಗದು
ಮುಂದಿನ ವಾರ ಖಂಡಿತಾ ಮುಗಿಸುತ್ತೇನೆ
ಅಲ್ಲಿಯವರೆಗೆ ಕಾಯುತ್ತಿರಲ್ಲ
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಮನಮುಕ್ತ
ಕುತೂಹಲ ಇದ್ದರೇನೆ ಚೆನ್ನ ಆಲ್ವಾ
ಕೇವಲ ೬ ದಿನ ಕಾದರೆ ಆಯಿತು
ಮುಂದಿನ ಶುಕ್ರವಾರ ಕೊನೆಯ ಭಾಗ ಹಾಕುತ್ತೇನೆ
ಪ್ರೋತ್ಸಾಹ ಹೀಗೆಯೇ ಇರಲಿ
ಅಭಿಪ್ರಾಯಕ್ಕೆ ಧನ್ಯವಾದಗಳು

ಬಾಲು ಸಾಯಿಮನೆ said...

ಒಳ್ಳೆ ಪತ್ತೆದಾರಿ ಕಾದಂಬರಿ ಓದಿದ ಹಾಗೆ ಅಗ್ತಾ ಇದೆ.
ಬರವಣಿಗೆ ಸ್ಟೈಲ್ ತುಂಬಾ ಚನ್ನಾಗಿದೆ.

shivu said...

ಅರೆರೆ,,,ಗುರು ಮೂರ್ತಿ ಸರ್, ಎಂಥಹ ಪೀಕಲಾಟಕ್ಕೆ ಸಿಕ್ಕಿಹಾಕಿಕೊಂಡು ಬಿಟ್ಟಿರಿ....ಮುಂದೇನಾಗುತ್ತೋ ಅನ್ನುವುದನ್ನು ಕಾಯುತ್ತಿದ್ದೇನೆ...
ಸ್ವೀಡನ್ ಸಾರಿಗೆ ವ್ಯವಸ್ಥೆಯನ್ನು ಅನುಭವ ಮೂಲಕ ಪರಿಚಯಿಸಿದ್ದೀರಿ..ಸಾಧ್ಯವಾದರೆ ಅಲ್ಲಿನ ನಿತ್ಯಜೀವನದ ಬಗ್ಗೆ ಬರೆಯಿರಿ...

ಸಾಗರದಾಚೆಯ ಇಂಚರ said...

ಬಾಲು ಸರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಮುಂದಿನ ವಾರ ಕಾದಂಬರಿಗೆ ಅಂತಿಮ ತೆರೆ :)

ಸಾಗರದಾಚೆಯ ಇಂಚರ said...

ಶಿವೂ ಸರ್
ಪೀಕಲಾಟ ತುಂಬಾ ಇತ್ತು
ಮುಂದಿನ ವಾರ ಅದರ ಮುಂದಿನ ಭಾಗ ಹೇಳುತ್ತೇನೆ
ಸಾರಿಗೆ ವ್ಯವಸ್ಥೆಗೆ ಮೂಕನಾಗಿದ್ದೇನೆ
ಅಲ್ಲಿಯ ಜನರ ಜೀವನದ ಬಗ್ಗೆ ಖಂಡಿತ ಬರೆಯುತ್ತೇನೆ
ಪ್ರೋತ್ಸಾಹ ಹೀಗೆಯೇ ಇರಲಿ

PARAANJAPE K.N. said...

ಚೆನ್ನಾಗಿದೆ, ನೀವು ಹೇಳಿದ ಸಾರಿಗೆ ವ್ಯವಸ್ಥೆ ನಮ್ಮಲ್ಲಿ ಇದ್ದಿದ್ದರೆ ಅದೆಷ್ಟು ಚೆನ್ನಿರುತ್ತಿತ್ತು ಅಲ್ಲವೇ? ಮು೦ದುವರಿದ ಭಾಗಕ್ಕೆ ಕಾದಿರುವೆ.

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್,
ನಿಜ, ಇಲ್ಲಿನ ಸಾರಿಗೆ ವ್ಯವಸ್ಥೆ ನಿಜಕ್ಕೂ ಮೆಚ್ಚುವಂತದ್ದೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಶಿವಪ್ರಕಾಶ್ said...

ಛೆ... Tension ಹುಟ್ಟಿಸಿ... Break ಕೊಟ್ಟುಬಿಟ್ಟಿರಲ್ಲ...
ಅದಸ್ಟು ಬೇಗ ಮುಂದೆ ಏನಾಯ್ತು ಅಂತ ಬರೀರಿ.... ;)

ದಿನಕರ ಮೊಗೇರ.. said...

ಗುರು ಸರ್,
ಮೋಸ ಸರ್, ಈಗೀಗ ''ಮುಂದಿನ ವಾರಕ್ಕೆ'' ಎಂದು ಮುಂದೂಡುವ ಪರಿಪಾಟ ಬೆಳೆದಿದೆ..... ನಿಮ್ಮ ಕಥೆ ತುಂಬಾ ಕುತೂಹಲ ದಿಂದ ಓದುತ್ತಿದ್ದೆ..... ಅಲ್ಲಿನ ಸಾರಿಗೆ ವ್ಯವಸ್ತೆ ಇಲ್ಲಿಗೂ ತಂದರೆ ತುಂಬಾಇಂಧನ್ ಉಳಿಸಬಹುದು.... ಸಮಯ ಉಳಿಸಬಹುದು, ಎಂದೆಲ್ಲಾ ಯೋಚಿಸುತ್ತಿದ್ದಾಗಲೆ, ಕಥೆಗೆ twist .......... ನಿಮಗೆ ಆದ ತೊಂದರೆ ಎನಿಸಿ, ಗಾಬರಿಯಾಯ್ತು...... ಹೇಗೆ ಹೊರ ಬಂದಿರಿ ಎಂದು ಓದುತ್ತಿರುವಾಗಲೇ...... ಮುಂದಿನ ವಾರಕ್ಕೆ .... ಎಂಬ ಬಾಂಬ್....... ಬೇಗ ಮುಂದಿನ ವಾರ ಬರಲಿ....... ನಿರೂಪಣೆ ಚೆನ್ನಾಗಿತ್ತು ಸರ್.....

ಸಾಗರದಾಚೆಯ ಇಂಚರ said...

ಶಿವಪ್ರಕಾಶ್ ಸರ್
ಕ್ಷಮಿಸಿ, ಮುಂದಿನ ವಾರ Tension ದೂರ ಮಾಡ್ತೀನಿ
ಅಲ್ಲಿ ತನಕ ಕಾಯಲೇಬೇಕು
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ದಿನಕರ್ ಸರ್
ಕುತೂಹಲ ಇದ್ರೇನೆ ಜೀವನ ಚಂದ ಆಲ್ವಾ
ಮುಂದೇನಾಗುತ್ತೆ ಅನ್ನೋದು ಇದ್ರೆ ಬದುಕು ಒಂದು ಉಲ್ಲಾಸ ಹೊಂದಿರತ್ತೆ ಏನಂತಿರಾ
ಮುಂದಿನ ವಾರ ಖಂಡಿತ suspence ಇಡೊಲ್ಲ
ಅಲ್ಲಿ ತನಕ ಕಾಯಿರಿ
ಪ್ರೋತ್ಸಾಹ ಪ್ರೀತಿ ಸದಾ

Deepasmitha said...

ಯಾರಿಗೋ ಸಹಾಯ ಮಾದಲು ಹೋಗಿ ಫಜೀತಿ ಪಟ್ಟಿದ್ದೀರಿ. ಹ್ಮ್. ಮುಂದಿನ ಕಂತಿಗೆ ಕಾಯುತ್ತಿದ್ದೇವೆ

ಸಾಗರದಾಚೆಯ ಇಂಚರ said...

ದೀಪ ಸ್ಮಿತಾ
ನಿಜಾ,
ಸಹಾಯ ಮಾಡುವಾಗ ಎಚ್ಚರದಿಂದಿರಬೇಕು
ಕೆಲವೊಮ್ಮೆ ಹೀಗೆ ಆಗುತ್ತದೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

SANTOSH MS said...

very interesting and curious to know the full story.

ಆನಂದ said...

ಏನ್ಸಾರ್, ಒಳ್ಳೆ ಸಮಯಕ್ಕೆ ಸರಿಯಾಗಿ ನಿಲ್ಲಿಸಿದ್ದೀರಲ್ಲಾ‌...

ಸಾಗರದಾಚೆಯ ಇಂಚರ said...

Santhosh,
thanks for your comments
Keep visiting

ಸಾಗರದಾಚೆಯ ಇಂಚರ said...

ಆನಂದ್ ಸರ್,
ಮುಂದಿನ ವಾರ ಖಂಡಿತ ಅರ್ಧಕ್ಕೆ ನಿಲ್ಲಿಸೋದಿಲ್ಲ
ಪ್ರೋತ್ಸಾಹ ಹೀಗೆಯೇ ಇರಲಿ
ಅಭಿಪ್ರಾಯಕ್ಕೆ ಧನ್ಯವಾದಗಳು

ಜಲನಯನ said...

ಗುರು, ನೀವೂ ಕಲಿತುಬಿಟ್ರಿ ನಮ್ಮ ಟಿ.ವಿ. ಸೀರಿಯಲ್ ನಡೆಸೋವ್ರ ಟಿಕ್ಕು...ಅಲ್ರೀ ಪೋಲೀಸು ಕಥೆ ಅಂತ...ನಿಮ್ಮ ಎಪಿಸೋಡನ್ನ ಬರೀ ಪೀಠಿಕೆಯಲ್ಲೇ ಮುಗಿಸಿ...ಸೊಸೆಯನ್ನು ಮೇಲಿಂದ ತಳ್ಳುವ ಅತ್ತೆ ಕೈ ಮಾತ್ರ ತೋರಿಸಿ ನಿಲ್ಲಿಸಿಬಿಟ್ರಿ......ಹಹಹ....ಓಕೆ....ಕಾಯ್ತೋವಿ ಇನ್ನೇನು ಮಾಡೋಕಾಗುತ್ತೆ...ಹಹಹ

Nisha said...

ಚೆನ್ನಾಗಿದೆ, ಮುಂದಿನ ಬರಹದ ನಿರೀಕ್ಷೆಯಲ್ಲಿ.

sandeep said...

mundenaythu.....?

VENU VINOD said...

ಮುಂದೇನಾಯ್ತು???

ಕ್ಷಣ... ಚಿಂತನೆ... bhchandru said...

ಗುರು ಅವರೆ, ನಿಮ್ಮ ಅನುಭವ ಕಥನ ಮುಂದೇನಾಯಿತು ಎಂದು ಯೋಚಿಸುವಂತೆ ಮಾಡಿದೆ.

ಸಂಕ್ರಾಂತಿ ಹಬ್ಬದ ಶುಭಾಶಯಗಳು, ನಿಮಗೂ ನಿಮ್ಮ ಕುಟುಂಬದವರಿಗೂ.

ಸ್ನೇಹದಿಂದ,

shwetha said...

sir nanage thumba hedareke ayethu yake gotha nanu odeddu evaga adare yaro..... Comment Box allee nanna hesaru nodee amele gothayethu nanna hesarenavru ennobbaru eddare anta anta.

nangu annesuthe ondundu sala ella retheyalle vevastheetha vageruva vatavaranadallee navu erabeku anta baratha dhallee antu adu sadyave ella anta andukondeddene yake andare ondondu deshada stheethe endu sudharesuvudhella yaru sudharesuva pravathna nu maduvudella allava.

next enu madedera anta hele ok
nanaganesuthe nevu police station ge hoge nemma kathe heleddera endu.

ಸಾಗರದಾಚೆಯ ಇಂಚರ said...

ಅಜ್ಹಾದ್ ಸರ್
ಹಹಹಹ ಚೆನ್ನಾಗಿ ಹೇಳಿದಿರಾ
ಖಂಡಿತ ಮುಂದಿನ ವಾರ serial ಇಡೊಲ್ಲ,
ಮುಗಿಸಿಬಿಡ್ತೀನಿ
ಅತ್ತೆ ಕೈ ಮಾತ್ರ ಅಲ್ಲ ಅತ್ತೇನೆ ಕಾಣಿಸಿ ಬಿಡ್ತೀನಿ
ನಿಮ್ಮ ಚಂದದ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸಂದೀಪ್,
ಮುಂದೇನಾಯಿತು? ಶುಕ್ರವಾರ ನೋಡಿ :)

ಸಾಗರದಾಚೆಯ ಇಂಚರ said...

ವೇಣು ವಿನೋದ್
ಶುಕ್ರವಾರ ಉತ್ತರ ಸಿಗುತ್ತದೆ
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ

ಸಾಗರದಾಚೆಯ ಇಂಚರ said...

ಚಂದ್ರು ಸರ್,
ನಿಮ್ಮ ಮಾತುಗಳು ಹೊಸ ಹುರುಪನ್ನು ನೀಡುತ್ತವೆ ಇನ್ನೂ ಬರೆಯಲು
ನಿಮಗೂ ನಿಮ್ಮ ಕುಟುಂಬಕ್ಕೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

ಸಾಗರದಾಚೆಯ ಇಂಚರ said...

ನಿಶಾ
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಶ್ವೇತಾ,
ನಿಮ್ಮ ಹೆಸರಿನ ತುಂಬಾ ಬ್ಲಾಗ್ ಗಳು ಇವೆ
ಹೆದರಬೇಡಿ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಶುಕ್ರವಾರ ಮುಂದಿನ ಭಾಗ ಹಾಕುತ್ತೇನೆ, ಆಗ ನಿಮಗೆ ತಿಳಿಯುತ್ತದೆ ಸತ್ಯ ಏನೆಂದು
ಅಲ್ಲಿಯ ತನಕ ನೀವು ಊಹೆ ಮಾಡಿ ಅಷ್ಟೇ :)
ಹೀಗೆಯೇ ಪ್ರೋತ್ಸಾಹಿಸುತ್ತಿರಿ

ಬಾಲು said...

ಮುಂದಾ??

ಸಾಗರದಾಚೆಯ ಇಂಚರ said...

ಬಾಲು,
ಮುಂದ ಎನ್ನುವುದು ಶುಕ್ರವಾರದ ಉತ್ತರ
ಅಲ್ಲಿಯವರೆಗೆ ಕಾಯಲೇಬೇಕು.
ಅಭಿಪ್ರಾಯಕ್ಕೆ ಧನ್ಯವಾದಗಳು

Jyoti Sheegepal said...

plz bega bariri mundina bhagavanna... interesting aagi ide...

ಸಾಗರದಾಚೆಯ ಇಂಚರ said...

ಜ್ಯೋತಿ,
ಖಂಡಿತ ಶುಕ್ರವಾರ ಮುಂದಿನ ಭಾಗ ಹಾಕ್ತೀನಿ
ಈಗ ಬರಿತ ಇದ್ದೀನಿ
ಅಭಿಪ್ರಾಯಕ್ಕೆ ವಂದನೆಗಳು

ತೇಜಸ್ವಿನಿ ಹೆಗಡೆ- said...

ಇದು ಅನ್ಯಾಯ ಮೂರ್ತಿಯವರೆ.. ಇಷ್ಟು ಹೇಳಿದವರಿಗೆ ಕೊನೆಯನ್ನೂ ಹೇಳಬಹುದಿತ್ತು. ತುಂಬಾ ಕಾತುರಳಾಗಿರುವೆ. ಮುಂದೇನಾಯಿತು? ಆಕೆ ಮಗುವನ್ನು ಪಡೆದು ಸಣ್ಣ ಸ್ವೀಟಿನ ತುಂಡಾದರೂ ಕೊಟ್ಟು ಧನ್ಯವಾದ ಹೇಳಿದಳೋ ಇಲ್ಲಾ ಸ್ವೀಡನ್ ಪೋಲೀಸ್‌ನವರು ವಿಚಾರಿಸಿಕೊಂಡರೋ ಎನ್ನುವುದನ್ನು ಬೇಗ ತಿಳಿಸಿ :)

Usha said...

Tumba kutoohalakaariyaagide..bega mundina sanchike prakatisi..:)

sunaath said...

ಗುರುಮೂರ್ತಿ,
All the Best!

ಸಾಗರದಾಚೆಯ ಇಂಚರ said...

ತೇಜಸ್ವಿನಿ ಮೇಡಂ,
ಕುತೂಹಲ ಶುಕ್ರವಾರ ಇರುವುದಿಲ್ಲ,
ಅಲ್ಲಿಯ ತನಕ ಕ್ಷಮಿಸಿ, ಕಾಯಲೇಬೇಕು
ಅವಳು ಸ್ವೀಟಿನ ತುಂಡು ನೀಡಿದಳೋ,
ಅಥವಾ ನನಗೆ ಪೋಲಿಸರಿಂದ ಆತಿಥ್ಯ ಸತ್ಕಾರ ಮಾಡಿಸಿದಳೋ
ಎಂಬುದು ಶುಕ್ರವಾರ ಹೇಳುತ್ತೇನೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

Usha

thank you for the comments

ಸೀತಾರಾಮ. ಕೆ. said...

ಪೋಲಿಸು ಅ೦ಥಾ ಅಂದಿದ್ದರಿಂದ ಮುಂದೆ ಪಜೀತಿ ಪ್ರಸಂಗ ಇದೆ ಅನ್ನೋದು ಗೊತ್ತಾಯಿತು, ಆದ್ರೆ ಏನು ಅನ್ನೋದೇ ಕುತೂಹಲ. ಬೇಗ ಬರಲಿ ಕಾಯ್ತಾ ಇದ್ದೇವೆ..
ಸ್ವೀಡನ್ ಸಾರಿಗೆ ವ್ಯವಸ್ಥೆ ಕೇಳಿ ಹೊಟ್ಟೆ ಉರಿತಾ ಇದೆ...
ಚೆ೦ದದ ವಿವರಣೆ.

ಗೌತಮ್ ಹೆಗಡೆ said...

antu interval li interest create maaadi next post ge kaayange maadbute:)

ಸಾಗರದಾಚೆಯ ಇಂಚರ said...

Sunaath Sir

thanks for the comments

ಸಾಗರದಾಚೆಯ ಇಂಚರ said...

ಸೀತಾರಾಂ ಸರ್
ಫಜೀತಿ ಇನ್ನೂ ಇದೆ
ಇಲ್ಲಿನ ಸಾರಿಗೆ ವ್ಯವಸ್ಥೆ ಮಾತ್ರ ಹೊಗಳಲೆಬೇಕಾದ ವಿಷಯ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಬರ್ತಾ ಇರಿ

ಸಾಗರದಾಚೆಯ ಇಂಚರ said...

ಗೌತಮ್,
ಶುಕ್ರವಾರ ಮುಂದಿನ ಭಾಗ ಹಾಕ್ತಿ ಅಂದ್ರೆ ನಾಳೆನೆ,
ಅಲ್ಲಿ ತನಕ ಕ್ಷಮಿಸು :)
ತುಂಬಾ ದೊಡ್ಡ ಲೇಖನ ಆಗ್ತು ಅಂತ ಎರಡು ಎಪಿಸೋಡ್
ಮಾಡಕಾತು.
ಹಿಂಗೆ ಬರ್ತಾ ಇರು

Ranjita said...

ಗುರು ಅಣ್ಣ ,
ಲೇಖನ ಚೆನ್ನಾಗಿದ್ದು ,ಇದು ನಿಜವಾಗಿ ನಡೆದಿದ್ದ ? ..

ಸಾಗರದಾಚೆಯ ಇಂಚರ said...

ranjita,
abhipraayakke thanks

guru said...

innu neevu sathya baredaru nambhuvudhu kastavaguttde