Thursday, January 14, 2010

ಮುಂದೇನಾಯಿತು? ಪೊಲೀಸರೊಂದಿಗೆ ನನ್ನ ಮಾತುಕತೆ-ಭಾಗ 2

 ಕಳೆದ ವಾರ ಸ್ವೀಡನ್ನಿನ ಪೊಲೀಸರಿಗೆ ಸಿಕ್ಕಿ ಬಿದ್ದ ನನ್ನ ಸ್ಥಿತಿ ''http://gurumurthyhegde.blogspot.com/2010/01/blog-post.html'' ಯ ಬಗ್ಗೆ ಹೇಳಿದ್ದೆ. ಬಹಳಷ್ಟು ಬ್ಲಾಗ್ ಮಿತ್ರರು ಕಥೆಯನ್ನು ಧಾರಾವಾಹಿಯ ಹಾಗೇ ಮುಂದೂಡಬೇಡಿ , ಬೇಗ ಮುಂದೇನಾಯಿತು ಹೇಳಿ ಎಂದಿದ್ದರು. ಅದಕ್ಕೆ ಇಂದಿನ ಶೀರ್ಷಿಕೆಯೂ ಅದೇ '' ಮುಂದೇನಾಯಿತು? ಪೊಲೀಸರೊಂದಿಗೆ ನನ್ನ ಮಾತುಕತೆ- ಭಾಗ 2 '' ಎಂದು ಹಾಕಿದ್ದೇನೆ. ಇಂದು ಎಲ್ಲವನ್ನೂ ಹೇಳಿ ಮುಗಿಸುತ್ತೇನೆ. ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ.

ಬಸ್ಸು ಚಲಿಸಲು ಆರಂಬಿಸಿತು, ಆ ಮಹಾತಾಯಿಯ ಪತ್ತೆ ಇರಲಿಲ್ಲ. ಇವರಿಗೆ ಭಾಷೆ ಬೇರೆ ಅರ್ಥವಾಗುವುದಿಲ್ಲ. ನನಗೋ ಭಯವೇ ಭಯ. ಇಳಿದು  ಬಿಡೋಣವೆಂದರೆ   ಬಸ್ಸನ್ನು ನಿಲ್ದಾಣ ಬರುವವರೆಗೂ ಮದ್ಯದಲ್ಲಿ ಎಲ್ಲಿಯೂ ಇಳಿಯುವ ಹಾಗಿಲ್ಲ. ಮುಂದಿನ  ನಿಲ್ದಾಣ ದಲ್ಲೇ ಇಳಿದು ಬಿಡುವುದು ಎಂದು ನಿರ್ದರಿಸಿದೆ. ಆದದ್ದಾಗಲಿ ಎದುರಿಸೋಣ ಎಂಬ ಹುಂಬ ಧೈರ್ಯ ತಂದು ಕೊಂಡೆ. ನಿಧಾನ ಮುಂದಿನ ನಿಲ್ದಾಣ ಬಂದಿತು.
ನಿಲ್ದಾಣ ಹತ್ತಿರ ಬರುವಷ್ಟರಲ್ಲಿ ನಿಲ್ದಾಣದಲ್ಲಿ 3-4 ಜನ ಪೊಲೀಸರು ತಿರುಗುತ್ತಿದ್ದಾರೆ. ಅವರ ಜೊತೆಗೆ ಆ ಮಹಾತಾಯಿಯೂ ಇದ್ದಾಳೆ. ಎಲ್ಲೋ ಎಡವಟ್ಟಾಗಿದೆ ಎಂದು ಆಗಲೇ ಅನ್ನಿಸತೊಡಗಿತು. ಇಳಿಯಲು ಭಯ. ಇಳಿಯದೆ ಇದ್ದರೆ ಅವರು ಬೇರೇನಾದರೂ ತಿಳಿದುಕೊಂಡರೆ ಎಂಬ ದಿಗಿಲು ಬೇರೆ. ಮಗುವನ್ನು ಎತ್ತಿಕೊಂಡು ಸ್ಟೇಷನ್ ದಲ್ಲಿ ಇಳಿದೆ. ಕೂಡಲೇ ಆ ತಾಯಿ ಪೊಲೀಸರೊಂದಿಗೆ ಓಡಿ ಬಂದು ''ಇವನೇ ನನ್ನ ಮಗುವನ್ನು ಎತ್ತಿಕೊಂಡು ಹೋದದ್ದು'' ಎನ್ನಬೇಕೆ. ಆಕಾಶ ಮೇಲಿದೆಯೇ ? ಕೆಳಗಿದೆಯೇ? ಎಂದು ಒಂದು ಕ್ಷಣ ತಿಳಿಯಲಿಲ್ಲ. ಇದೇನಪ್ಪ, ಯಾರಿಗೋ ಸಹಾಯ ಮಾಡಲು ಹೋಗಿ ಎಂಥಹ ಕಷ್ಟದಲ್ಲಿ ಸಿಲುಕಿದೆ ಎಂದೆನ್ನಿಸತೊಡಗಿತು. ಹೆಂಡತಿಗೆ ಇದನ್ನು ತಿಳಿಸೋಣವೆಂದರೆ ಮೊಬೈಲ್ off . ನಾನೊಂದು ತರ Dead Lock Situation ಗೆ ಬಿದ್ದಿದ್ದೆ. ಕೂಡಲೇ ಪೊಲೀಸರು ಮರುಮಾತನಾಡದೆ ಆ ಹೆಂಗಸಿನ ಜೊತೆ ನನ್ನನ್ನು ಪೋಲಿಸ್ ಸ್ಟೇಷನ್ ಗೆ ಕರೆದುಕೊಂಡು ಹೋದರು. ಎರಡನೇ ಬಾರಿಗೆ ವಿದೇಶದಲ್ಲಿ (ಮೊದಲ ಬಾರಿ ಸ್ಪೇನ್ ದಲ್ಲಿ ನನ್ನ ಪಾಸ್ ಪೋರ್ಟ್ ಕದ್ದಾಗ ಹೋಗಿದ್ದೆ, ಓದಲು ಇಲ್ಲಿ ಕ್ಲಿಕ್ಕಿಸಿ  ''http://gurumurthyhegde.blogspot.com/2009/10/s-pain-pain.html'') ಪೋಲಿಸ್ ಸ್ಟೇಷನ್ ದರ್ಶನವಾಯಿತು. ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಅಲ್ಲಿನ ವ್ಯವಸ್ಥೆ ನೋಡಿ ಶಾಶ್ವತ ಅಪರಾಧಿ ಯಾಗಿರುವುದೇ ಒಳ್ಳೆಯದು ಎಂದು ಎನ್ನಿಸದೇ ಇರದು. ಅಷ್ಟೊಂದು ಐಶಾರಾಮಿ ಜೀವನ ಅಲ್ಲಿನ ಕಳ್ಳರಿಗೆ.
ಇನ್ನು ಸ್ವೀಡನ್ನಿನ ಪೊಲೀಸರು ಶಿಸ್ತಿಗೆ ಕರ್ತವ್ಯಕ್ಕೆ ಹೆಸರುವಾಸಿ. ಅವರ ಬಗ್ಗೆ ಇನ್ನೂ ಆಸಕ್ತಿಯಿದ್ದರೆ ಮುಂದಿನ ವೆಬ್ಸೈಟ್ ನೋಡಿ ''http://www.polisen.se/'' . ಅವರಿಗೆ ಸಮಾಜದಲ್ಲಿ ದೊಡ್ಡ ಗೌರವವಿದೆ. ಲಂಚ ಎನ್ನುವುದು ಅವರಿಂದ ಕೊಂಚ ದೂರವೇ ಇರುತ್ತದೆ. ಸರಕಾರ ಅವರಿಗೆ ಬೇಕಾದಷ್ಟು ಸಂಬಳ ಕೊಡುತ್ತದೆ. ಗಿಂಬಳಕ್ಕೆ ಕೈ ಚಾಚುವ ಪ್ರಮೇಯವಿಲ್ಲ. ಅವರನ್ನು ನೋಡಿದರೆ ಹೆದರಿಕೆ ಹುಟ್ಟುತ್ತದೆ. ಎತ್ತರದ ಶರೀರ, ಅಚ್ಚು ಕಟ್ಟಾದ ಮೈ ಅಳತೆ, ಗಂಭೀರ ವದನ, ಕೈಯಲ್ಲಿ ಹೊಸ ತಂತ್ರಜ್ಞಾನದ ಪಿಸ್ತೂಲ್, gun ಗಳು ಇರುತ್ತವೆ. ಅವರ ದೇಹದ ಅಳತೆ ನೋಡಿದರೆ ಅವರ ಕೈ ಒಂದೇ 3-4 ಜನರನ್ನು ಹೊಡೆಯಲು ಸಾಕು ಎನಿಸುತ್ತದೆ. ಇಂಥಹ ಗಂಡೆದೆಯ ಪೋಲೀಸರ ಮುಂದೆ ನಾನು ನಿಂತಿದ್ದೆ.
ಮೈ ನಡುಗುತ್ತಿತ್ತು. ಹೊರಗಡೆ -14 ಡಿಗ್ರಿ ಯಷ್ಟು ಚಳಿ. ಸ್ಟೇಷನ್ ಒಳಗಡೆ +28  ಡಿಗ್ರಿ ಆದರೆ ನನಗೂ -14 degree ಕ್ಕಿಂತಲೂ ಹೆಚ್ಚಿನ ಚಳಿ, ಭಯ ಒಮ್ಮೆಲೇ ಆಗಿತ್ತು. ಮೊದಲಿಗೆ ನನ್ನ ಸಂಪೂರ್ಣ ದೇಹವನ್ನು ಪರೀಕ್ಷಿಸಿ ನನ್ನಿಂದ ನನ್ನ ಮೊಬೈಲ್ ಅನ್ನು ಕಿತ್ತುಕೊಂಡರು. ನಂತರ ನನ್ನ ಬಗ್ಗೆ ವಿಚಾರಣೆ ಆರಂಬಿಸಿದರು. ನನ್ನ ಕುಲ ಗೋತ್ರ ಎಲ್ಲ ಜಾಲಾಡಿಸಲು ಪ್ರಾರಂಬವಾಯಿತು. ಮದ್ಯದಲ್ಲಿ ನಾನೊಮ್ಮೆ ಬಾಯಿ ಹಾಕಿ ನಾನೊಂದು ಸಲ ನನ್ನ ಹೆಂಡತಿಗೆ ಫೋನ್ ಮಾಡಲೇ? ಇಲ್ಲ ನನ್ನ ಬಾಸ್ ಗೆ ಫೋನ್ ಮಾಡಲೇ ಎಂದೆ. ಆ ಪೋಲೀಸರ ಬಾಯಿಂದ ಹುಂ ಎನ್ನುವ ಯಾವ ಶುಭ ಲಕ್ಷಣಗಳೂ ಗೋಚರಿಸಲಿಲ್ಲ. ಆ ತಾಯಿ ನಾನೇ ಮಗುವನ್ನು ಕಿಡ್ನಾಪ್ ಮಾಡಿದ್ದೇನೆ ಎಂಬ ಅಪಾದನೆ ಮಾಡಿದ್ದಳು. ಸಾಲದ್ದಕ್ಕೆ ಕಂಪ್ಲೈಂಟ್ ಬೇರೆ ಕೊಟ್ಟಿದ್ದಾಳೆ. ನನ್ನನ್ನು ರಕ್ಷಿಸಲು ಯಾರು ಬರಲು ಸಾದ್ಯ. ನನಗೆ ನಾನೇ? ತಾನೇ. ನಾನೆಷ್ಟು ಹೇಳಿದರೂ ಪೊಲೀಸರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಕಾರಣ ಆ ತಾಯಿಯ ವೇದನೆ, ಕೋಪ ಅವರನ್ನು ಹಾಗೇ ನಂಬುವಂತೆ ಮಾಡಿತ್ತು. ನಂಗೆ ಆಗಲೇ ಅನ್ನಿಸತೊಡಗಿತ್ತು, ಜೀವನದಲ್ಲಿ ಜೈಲಿನ ದರ್ಶನ ಖಂಡಿತ ಇದೆ ಎಂದು. ಕೆಲವು ತಿಂಗಳ ಹಿಂದೆ ಭಾರತಕ್ಕೆ ಹೋದಾಗ ಜ್ಯೋತಿಷಿಯೊಬ್ಬರು ಒಂದು ಭವಿಷ್ಯ ಹೇಳಿದ್ದರು ''ಕೆಲವೇ ದಿನಗಳಲ್ಲಿ ನೀನು ನಿಮ್ಮ ಕುಟುಂಬದಲ್ಲೇ ಯಾರೂ ಹೋಗದ ಜಾಗಕ್ಕೆ ಹೋಗುತ್ತಿಯಾ'' ಎಂದು. ಬಹುಷ: ಅವರು ಹೇಳಿದ್ದು ಇದೆ ಇರಬೇಕು. ನಮ್ಮ ಕುಟುಂಬದಲ್ಲೇ ಯಾರೂ ಹೋಗದ ಜೈಲಿಗೆ ಬಹುಷ: ನಾನು ಹೋಗುವೆನೆಂದು ಆಗ ಅನ್ನಿಸತೊಡಗಿತು.
ವಿಧಿಯಾಟ ಹೇಗೆ ನೋಡಿ, ಹತ್ತಾರು ಕೊಲೆ ಮಾಡಿದವ ತನಗೆ ಗೊತ್ತೇ ಇಲ್ಲದಂತೆ ತಿರುಗುತ್ತಾನೆ. ಆದರೆ ಇನ್ನೊಬ್ಬರಿಗೆ ಸಹಾಯ ಮಾಡಲು ಹೋದ ನನಗೆ ಪೋಲೀಸರ ದರ್ಶನ ಭಾಗ್ಯ. ಜೀವನವೆಂದರೆ ಸುಖ ದು:ಖ ಗಳ ಸಮರಸದ ಪ್ಯಾಕೇಜ ಎಂದು ಯಾರೋ ಹೇಳಿದ್ದು ನೆನಪಿಗೆ ಬಂತು. ಹೌದು, ಬದುಕಿನ ಜಟಕಾ ಬಂಡಿಯಲ್ಲಿ ಯಾರೆಲ್ಲ ಇರುತ್ತಾರೆ, ಬರುತ್ತಾರೆ, ಎಷ್ಟೋ ಸ್ನೇಹಿತರು, ಎಷ್ಟೋ ಹಿತ ಶತ್ರುಗಳು, ಎಷ್ಟೋ ವೈರಿಗಳು. ರಕ್ತ ಸಂಭಂಧವೆ ಇಲ್ಲದಿದ್ದರೂ ನಮಗೆ ಜೀವವನ್ನೇ ಕೊಡುವ ಆತ್ಮೀಯರು, ಆದಷ್ಟು ನಮ್ಮನ್ನು ನಮ್ಮ ವ್ಯಕ್ತಿತ್ವವನ್ನು ಹಾಳು ಮಾಡಲು ಪ್ರಯತ್ನಿಸುವ ಭಂಡ ಮನುಷ್ಯರು, ಹೀಗೆ ಎಲ್ಲರೂ ನಮ್ಮೊಂದಿಗೆ ಬದುಕಿನ ಗಾಡಿಯಲ್ಲಿ ಪ್ರಯಾಣಿಸುತ್ತಾರೆ. ಆ ಗಾಡಿಯಲ್ಲಿ ಇಂದು ಪೋಲೀಸರ ಪ್ರಯಾಣ.
ಒಂದು ಮಾತನ್ನು ಹೇಳಲೇಬೇಕು. ಇಲ್ಲಿನ ಪೊಲೀಸರಲ್ಲಿ ಒಂದು ವಿಧೇಯತೆ ಇದೆ, ವಿನಯತೆ ಇದೆ. ದರ್ಪವಿಲ್ಲ. ಕರ್ತವ್ಯ ಪ್ರಜ್ಞೆಯಿದೆ. ಸಮಯ ಪ್ರಜ್ಞೆಯಿದೆ. ಆ ತಾಯಿ ಯ ಮಾತಿನಲ್ಲಿ ಇರುವ ಸತ್ಯಾಂಶ ಹಾಗೂ ನನ್ನ ಮಾತಿನಲ್ಲಿರುವ ಸತ್ಯತೆಯನ್ನು ಅಳೆದು ತೂಗುತ್ತಿದ್ದರು. ಪರಿ ಪರಿಯಾಗಿ ಬೇಡಿದರೂ ನನ್ನ ಬಾಯಿಯಿಂದ ಒಂದೇ ಉತ್ತರ '' ಆ ತಾಯಿ ನನ್ನ ಮೇಲೆ ಸುಮ್ಮನೆ ಅಪವಾದ ಹಾಕುತ್ತಿದ್ದಾಳೆ'' ಎಂದು. ಆ ಮಹಾತಾಯಿಯಲ್ಲಿ  ಹೋಗಿ ನಡೆದುದನ್ನು ಹೇಳಿದೆ. ಆದರೆ ಅವಳು ಕೇಳುವ ಸ್ಥಿತಿಯಲ್ಲಿ  ಇರಲಿಲ್ಲ. ಯಾವ ತಾಯಿಯಾದರೂ ಅಷ್ಟೇ ಅಲ್ಲವೇ? ಮಗುವನ್ನು ಅರೆಕ್ಷಣ ಕಾಣದಿದ್ದರೆ ಚಡಪಡಿಸುತ್ತಾರೆ. ಅಂಥಹುದರಲ್ಲಿ ಮಗುವನ್ನು ಎತ್ತಿಕೊಂಡ ನಾನು ಬಸ್ಸಿನಲ್ಲಿ ಹೋದೆ ಎಂದರೆ ಏನೇನೋ ಅವಳು ಕಲ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದಳು.
ನನಗೆ ಹೇಳಲು ಏನೂ ಉಳಿದಿರಲಿಲ್ಲ. ಫೋನ್ ಮಾಡಲು ಅವರು ಅವಕಾಶ ನೀಡಲಿಲ್ಲ. ಸುಮಾರು ಒಂದು ಘಂಟೆ ವಿಚಾರಣೆ ನಡೆಸಿದರೂ ಯಾವುದೇ ವಿಷಯವನ್ನು ನನ್ನ ಬಾಯಲ್ಲಿ ಅವರು ಕೇಳಲಿಲ್ಲ ''ನಾನು ಅವಳಿಗೆ ಸಹಾಯ ಮಾಡಲು ಮಗುವನ್ನು ಎತ್ತಿಕೊಂಡಿದ್ದೇನೆ'' ಎನ್ನುವ ವಿಷಯವೊಂದನ್ನು ಬಿಟ್ಟು.
ಅಲ್ಲಿನ ಪೋಲೀಸರ ತಾಳ್ಮೆ ಮೀರುತ್ತಿತ್ತು. ಇವನು ಸುಮ್ಮನೆ ಬಾಯಿ ಬಿಡುವುದಿಲ್ಲ ಎಂದು ನಿರ್ಧರಿಸಿದರೋ ಏನೋ, ಕೂಡಲೇ ಒಬ್ಬ ನನ್ನ ಬಗ್ಗಿಸಿ ಕೈಯನ್ನು ಹಿಂದಕ್ಕೆ ಕಟ್ಟಿ ಬೇಡಿ ಹಾಕಿದ. ಇನ್ನೊಬ್ಬ ನನ್ನನ್ನು ಹಿಡಿದುಕೊಂಡ. ಏನಾಗುತ್ತಿದೆ ಎಂದು ನನಗೆ ತಿಳಿಯದಾಗಿತ್ತು, ಆದರೆ ಪೋಲೀಸರ ಹೊಡೆತದ ರುಚಿ ಖಂಡಿತ ಇಂದು ಸಿಗುತ್ತದೆ ಎಂಬುದು ಮಾತ್ರ ಖಾತ್ರಿಯಾಗಿತ್ತು. ಒಬ್ಬ ಪೋಲಿಸ ತನ್ನ ಬಲವಾದ ಕೈಯಿಂದ ನನ್ನ ಬೆನ್ನ ಮೇಲೆ ಗುದ್ದಲು ಕೈ ಎತ್ತಿದ, ಇನ್ನೇನು ಅವನ ಬಲವಾದ ಕೈ ನನ್ನ ಮೇಲೆ ಅಪ್ಪಳಿಸುತ್ತದೆ , ನಾನು ಜೀವನದಲ್ಲೇ ಮೊದಲ ಬಾರಿಗೆ ಇಂಥಹ ದಿನವನ್ನೂ ನೋಡುತ್ತೇನೆ ಎಂದುಕೊಳ್ಳುತ್ತಿದ್ದೇನೆ.......ಅಷ್ಟರಲ್ಲಿ...
ಅಷ್ಟರಲ್ಲಿ ''ಬೇಗ ಏಳಿ, ಕನಸು ಕಂಡಿದ್ದು ಸಾಕು, ತಿಂಡಿ ಸಿದ್ದವಾಗಿದೆ, ಎದ್ದು ಹಲ್ಲು ತಿಕ್ಕಿ ಮುಖ ತೊಳೆದು ತಿಂಡಿ ತಿನ್ನಲು ಬನ್ನಿ'' ಎಂದು ಒಲವಿನ ಮಡದಿ ಹಾಸಿಗೆಯ ಹೊದಿಕೆಯನ್ನು ಸರಿಸಿದಳು. ಪೋಲಿಸರಿಂದ ಹೊಡೆತ ತಿನ್ನುವ ಸುಂದರ ಕನಸು ಹಾಗೆಯೇ ಮುರಿದು ಬಿತ್ತು. 
'' ಇನ್ನೈದು ನಿಮಿಷ ಬಿಟ್ಟು ಎಬ್ಬಿಸಿದ್ದರೆ ನಿನಗೆ ಆಗುತ್ತಿರಲಿಲ್ಲವೇ, ನನ್ನ ಕನಸು ಹಾಳು ಮಾಡಿದೆ'' ಎಂದು ಅವಳಲ್ಲಿ ಹುಸಿ ಮುನಿಸು ತೋರಿದೆ.
ಮುಖ ತೊಳೆದು ಬಂದವನಿಗೆ ''ಬಿಸಿ ಬಿಸಿ'' ಆದ ದೋಸೆ ಕಾಯುತ್ತಿತ್ತು. ಮನಸಿನಲ್ಲಿಯೇ ಕನಸಿನ ಬಗ್ಗೆ ನಗುತ್ತಾ ದೋಸೆ ತಿಂದು ಆಫೀಸ್ ಕಡೆ ಹೆಜ್ಜೆ ಹಾಕಿದೆ.
 ಆತ್ಮೀಯರೇ, ಕಳೆದ ಒಂದು ವಾರದಿಂದ ನನ್ನೊಂದಿಗೆ ಕನಸಿನಲ್ಲಿ ಪ್ರಯಾಣಿಸಿದ್ದಿರಿ, ನಿಮಗೂ ಇಂಥಹ ಕನಸು ಬಿದ್ದಿತ್ತೆ? ಹಂಚಿಕೊಳ್ಳುತ್ತಿರಲ್ಲ.            
ಸರ್ವರಿಗೂ ''ಮಕರ ಸಂಕ್ರಾಂತಿಯ'' ಹಾರ್ದಿಕ ಶುಭಾಶಯಗಳು.
ಮುಂದಿನ ವಾರ ಮತ್ತೆ ಸಿಗುತ್ತೇನೆ.

94 comments:

ರಾಜೇಶ್ ನಾಯ್ಕ said...

ಹ್ಹ ಹ್ಹ.... ಇಲ್ಲೇನೋ ಎಡವಟ್ಟು ಇದೆ ಎಂದು ಮೊದಲ ಭಾಗ ಓದಿದಾಗಲೇ ಅನಿಸಿತ್ತು! ಈಗ ಮೊದಲ ಭಾಗದಲ್ಲಿ ಟಿಪ್ಪಣಿ ಬರೆದವರನ್ನು ಎದುರಿಸಲು ಸಜ್ಜಾಗಿರಿ...

Jagadeesh Balehadda said...

ಅಬ್ಬಾ! ತಮ್ಮ ಕನಸು ಇಲ್ಲಿಗೆ ಮುಗಿದಕ್ಕೆ ಸಂತೋಷವಾಯಿತು.

ಸಾಗರದಾಚೆಯ ಇಂಚರ said...

ರಾಜೇಶ್ ಸರ್,
ನಿಮ್ಮ ಉಹೆ ಸರಿಯಾಗೇ ಇದೆ
ಸಂಕ್ರಾಂತಿ ಹಬ್ಬದ ಶುಭಾಶಯಗಳು

ಸಾಗರದಾಚೆಯ ಇಂಚರ said...

ಜಗದೀಶ್ ಸರ್
ಸ್ವಾಗತ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ದೋಸೆ ಬಿಸಿಯಾಗಿದ್ದಕ್ಕೆ ಕನಸಿಗೆ ಕತ್ತರಿ ಬಿತ್ತು

Nisha said...

Sakkathagi besthu beelisideeri. Ayoo paapa enagirbahudu antha oohe madtha kuthoohaladinda odhthidre, kanasu antha atom bomb ne hakibitri.

ಸುಬ್ರಮಣ್ಯ said...

ನಮಸ್ಕಾರ.
ತುಂಬಾ ಚೆನ್ನಾಗಿದೆ.
ಎಪ್ರಿಲ್ ಮೊದಲ ವಾರಕ್ಕೆ ಈ ಬರಹ ಸರಿಹೊಂದುತ್ತಿತ್ತೆಂದು ನನ್ನ ಅಭಿಪ್ರಾಯ.

Guruprasad said...

ಹಾ ಹಾ, ನಿಮ್ಮ ಕನಸಿನ ಜೊತೆಗೆ ನಮ್ಮನ್ನು ಕರೆದು ಕೊಂಡು ಹೋದರಲ್ಲ.... guess ಮಾಡಿದ್ದೆ ...
ಸಂಕ್ರಾತಿ ಹಬ್ಬದ ಶುಭಾಶಯಗಳು

ಸಾಗರದಾಚೆಯ ಇಂಚರ said...

ನಿಶಾ,
ಅಂತೂ ಬೇಸ್ತು ಬಿದ್ರಾ
ಒಂದು ಬಾಂಬ್ ಬಿತ್ತಲ್ಲ
ಹಬ್ಬದ ಶುಭಾಶಯಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

Machikoppa ಅವರೇ,
ನೀವು ಅಂದಿದ್ದು ಸರಿ,
ಅಲ್ಲಿಯ ವರೆಗೆ ತಡೆದು ಕೊಳ್ಳುವಷ್ಟು ವ್ಯವಧಾನ ಇರಲಿಲ್ಲ
ಅದಕ್ಕೆ ಈಗಲೇ ಹಾಕಿಬಿಟ್ಟೆ
ನನ್ನ ಬ್ಲಾಗಿಗೆ ಸ್ವಾಗತ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಗುರು ಸರ್,
ಎಲ್ಲರೂ Guess ಮಾಡಿದ್ದೆ ಅಂತಾರೆ :)
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಬರಹದ ಉದ್ದೇಶ ಇಲ್ಲಿನ ಸಾರಿಗೆ ವ್ಯವಸ್ಥೆಯ ಬಗ್ಗೆ, ಪೋಲೀಸರ ಬಗ್ಗೆ ಹೇಳುವುದಾಗಿತ್ತು
ಅದಕ್ಕೆ ಕನಸಿನ ಮಾರ್ಗ ಅನುಸರಿಸಿದೆ
ನಿಮ್ಮ ಪ್ರೀತಿಯ ಪ್ರೋತ್ಸಾಹದಾಯಕ ಮಾತುಗಳೇ ನನಗೆ ಹೊಸ ಉತ್ಸಾಹ ನೀಡುತ್ತದೆ

SANTOSH MS said...

Sir, the story was very interesting but it was a real biscut to all. Good interpretation.

ಆನಂದ said...

ಆಹಾ, ನಾನು ಏನೋ‌ ಅಂತ ತಿಳ್ಕಂಡು ಓದ್ತಾ ಇದ್ದೆ. ಸಾರ್, ನೀವ್ಹೀಗೆ ಮಾಡ್ಬೋದಾ?
ಒಂದು ಅನುಮಾನ! ಪೋಲೀಸರು ಕೊಡುವ ಲತ್ತೆ ತಪ್ಪಿಸಿದರೆ, ಸುಂದರ ಕನಸು ಹಾಳಾಯ್ತು ಅಂತ ಹೇಳ್ತೀರಲ್ಲಾ, ಅಲ್ಲಾ ನಿಮಗೆ ನಿಜಕ್ಕೂ ಆ ರೀತಿಯ ಆಸೆಗಳಿವೆಯಾ? :)
ಹೋಗ್ಲಿ ಬಿಡಿ, ಸದ್ಯ ನಿಜವಾಗಿ ನಡೆದಿಲ್ವಲ್ಲಾ..

ನಿಮಗೂ ಸಂಕ್ರಾಂತಿಯ ಶುಭಾಶಯಗಳು.

ಸೀತಾರಾಮ. ಕೆ. / SITARAM.K said...

ನಿಮ್ಮ ಕನಸಿನ ಕಥಿ ನಮ್ಮ ಬಿಪಿನ್ನ ಸುಟ್ಟು ಸುಡುವಂಗ ಏರಿಸಿತ್ತು ನೋಡ್ರೆಲ್ಲಾ
ಸಧ್ಯ ಕನಸಂಥ ಕೇಳಿದ ಮ್ಯಾಲಿ ತಂಪ ಆತು ನೋಡ್ರೆಲ್ಲಾ
ಒಳ್ಳೆ ಕನಸಿನ ಕಥಿ ಕನಸು ಅಂಥಾ ಹೇಳದ ಶುರು ಹಚ್ಹ್ಕಂದು ಓದವ್ರಿಗ ಬೆಚ್ಚು ಬಿಳಿಸಿದ್ರಾ
ಚೆಂದ ಬರಿದಿರಿ ಬಿಡ್ರಿ
ಬರೀರಿ ಅದ್ರ ಬಿಪಿ ಯೇರಿಸ್ಬ್ಯಾದ್ರಿ....

ಬಾಲು ಸಾಯಿಮನೆ said...

ಹೇ, ಸಂಕ್ರಾಂತಿ ದಿನ "ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ" ಹೇಳ್ತ. ನೀ ಹೀಂಗೆ ಮಾಡದ ಸರಿನಾ!

ಅದರೂ ಬರಹ ಸಖತ್ತಾಗಿತ್ತು.
ಸಾರಿಗೆ ವ್ಯವಸ್ಥೆ ಬಗ್ಗೆ, ಸಮಯ ಪ್ರಜ್ಞೆ, ಸ್ವಚ್ಛತೆ, ಎಲ್ಲಾ ಸರಿ, ಆದರೆ,ಇಲ್ಲಿ ಜರ್ಮನಿಯಲ್ಲಿ, ಅಂತೂ, ದರ ಮಾತ್ರ,ಸಿಕ್ಕಾ ಪಟ್ಟೆ. ನಮ್ಮ ಭಾರತೀಯ ರೇಲ್ವೆ, ಬಿ.ಎಮ್. ಟಿ.ಸಿ. ಬಸ್ ಗಳೇ ಸಾವಿರ ಪಾಲು ಬೇಕು.

ಸ್ವೀಡನ ನಲ್ಲಿ ಹೇಗೆ ಅಂತ ನನಗೆ ಗೊತ್ತಿಲ್ಲ.

ಜಲನಯನ said...

ಗುರೂ......ಏನಪ್ಪಾ....ನನಗೆ ಬಂದ ಗತಿ ಗುರೂಗೂ ಬಂತಲ್ಲ...ಅಂತ...ಯೋಚಿಸ್ತಿದ್ದೆ........ನನ್ನ ಊಹೇಗೂ ಕಲ್ಹಾಕಿಬಿಟ್ರಿ...ಹಹಹ...ಚೆನ್ನಾಗಿತ್ತು ನಿಮ್ಮ ಕನಸು......ಅಲ್ಲಿನ ಪೋಲೀಸು..ಕಾರ್ಯಕ್ಷಮತೆ..ಇತ್ಯಾದಿ ಹೇಳಿ ದಾರೀನೂ ತಪ್ಪಿಸಿದ್ದೀರಿ.....ಹಾಂ...!!!

Subrahmanya said...

ದೋಸೆಗೊಂದು ಥ್ಯಾಂಕ್ಸ್ ಹೇಳಿಬಿಡಿ....ಅದೇ ಅಲ್ಲವೇ ನಿಮ್ಮ ಮರ್ಯಾದೆ ಉಳಿಸಿದ್ದು...ಹ್ಹ...ಹ್ಹಾ...ಹ್ಹ

Priyanka Prabhu said...

Hello Sir,
It was a really engrossing story I was lost when I read your first part of this particular post but the end turned out to be a real surprise to everyone....:):):) superbly written story!!!!!!Loved it.

shivu.k said...

ಗುರುಮೂರ್ತಿ ಸರ್,

ಸಂಕ್ರಾಂತಿ ದಿನ ಎಳ್ಳು ಬೆಲ್ಲ ತಿಂದು ಒಳ್ಳೇ ಮಾತಾಡಿ ಎನ್ನುತ್ತಾರೆ. ಆದ್ರೆ ನೀವೇನು ಇವತ್ತು ಏಪ್ರಿಲ್ ಒಂದು ಅಂದುಕೊಂಡಿರಾ...ಈ ರೀತಿ ಫೂಲ್ ಮಾಡಬಹುದೇ...ಆದರೂ ಇಷ್ಟು ಸೊಗಸಾಗಿ ಕಣ್ಣಮುಂದೆ ಕಟ್ಟುವಂತೆ ಬರೆದಿರುವ ನಿಮ್ಮ ಕನಸಿಗೆ, ಕಲ್ಪನೆಗೆ ಹ್ಯಾಟ್ಸಪ್ ಹೇಳಬಲ್ಲೆ. ಆದ್ರೆ ಖಂಡಿತ ಅಲ್ಲಿನ ನಿತ್ಯ ಜೀವನದ ಆಗುಹೋಗುಗಳು, ಅಲ್ಲಿನ ಸಂಪ್ರಧಾಯ, ಶಿಸ್ತು, ಇತ್ಯಾದಿಗಳ ಬಗ್ಗೆ ಬರೆಯಲೇ ಬೇಕು..

ಧನ್ಯವಾದಗಳು.

Jyoti Hebbar said...

ನಿಜವಾಗಲೂ ನಿನ್ಮೇಲೆ ತುಂಬಾ ಕೋಪ ಬಂತು ಕಣೋ ಗುರು...
ಇಷ್ಟೊತ್ತು ಛೇ! ಪಾಪ ಗುರು ಬಡಪಾಯಿ ಅಂತ ಯೋಚಿಸ್ತಾ ಓದಿದ್ದೆ ಗೊತ್ತ.. fool ಮಾಡ್ಬಿಟ್ಟೆ ಅಲ್ವ?
ಹ್ಹ ಹ್ಹ... ತುಂಬಾ ಚೆನ್ನಾಗಿ ಬರ್ದಿದೀಯ..

ಬಾಲು said...

ಸಕ್ಕತ್ತಾಗಿ ಮಂಗ ಮಾಡಿದ್ರಿ.
ಆಮೇಲೆ ಇಲ್ಲೂ ಕೂಡ ವಿ ಐ ಪಿ ಕಳ್ಳರಿಗೆ ಐಷಾರಾಮಿ ಜೈಲು ವ್ಯವಸ್ತೆ ಇದೆ ಅಲ್ಲವೇ

sunaath said...

ಗುರುಮೂರ್ತಿ,
ನಿಮಗಿನ್ನೂ ಪೋಲೀಸರ ಸನ್ಮಾನ ಸಿಕ್ಕುತ್ತೆ ಎಂದು ನಾನು ಅಳಕುತ್ತಿರುವಾಗಲೆ, ಇದೆಲ್ಲ ಕನಸು ಎಂದು ಹೇಳಿದಿರಲ್ಲ;Thank
God!
ಆದರೂ ಒಂದು ಎಚ್ಚರಿಕೆ ಕೊಡುತ್ತೇನೆ : ಬಸ್ಸಿನಲ್ಲಿ ಯಾರದೋ ಮಕ್ಕಳನ್ನು ಎತ್ತಿಕೊಳ್ಳಲು ಹೋಗದಿರಿ!

ಕ್ಷಣ... ಚಿಂತನೆ... said...

ಗುರು ಅವರೆ, ಸಂಕ್ರಾಂತಿಯ ಶುಭಾಶಯಗಳು. ಕನಸು ಎಂದು ತಿಳಿಯುವಷ್ಟರಲ್ಲಿ ಕುತೂಹಲವಾಗಿಯೇ ಕಥೆಯನ್ನು ಹೇಳುತ್ತಾ ಹೇಳುತ್ತ ಹೋದಿರಿ.
ಆಸಕ್ತಿಯಾಗಿ, ಚೆನ್ನಾಗಿತ್ತು.

ಮುಂದಿನ ಬರಹ ಏನಿರಬಹುದು?

ಸ್ನೇಹದೊಂದಿಗೆ,

Ittigecement said...

ಉಫ್..............!

ಎಂಥಹ ಜನ ನೀವು..?
ಸುಮ್ಮನೆ ಹೆದರಿಸಿ ಬಿಟ್ಟಿದ್ದಿರಲ್ಲ..!

ಆದರೂ ನಿಮಗೆ ಅಭಿನಂದನೆಗಳು...
ಹೇಳಿದ ರೀತಿ, ಶೈಲಿ...
ತುಂಬಾ ಸೊಗಸಾಗಿದೆ...

ಇಂಥಹ ಘಟನೆಗಳು ಕನಸಲ್ಲೂ ಬೇಡ....

ಮನಸು said...

wow!!! wonderful....hahaha tumba chennagide nikka kanasina kathe...

ಸವಿಗನಸು said...

ಎನ್ ಗುರು....
ನಾನು ಎನೇನೊ ಊಹೆ ಮಾಡಿದ್ದೆ...
ಎಷ್ಟು ಕಷ್ಟ ಆಗಿರಬೇಕಲ್ವ ಗುರೂ ಗೆ ಬಚ್ಚವಾಗೋಕೆ ಅಂತ....
ಒಳ್ಳೆ ಬರಹ....
ಚೆನ್ನಾಗಿತ್ತು...

ಸಾಗರದಾಚೆಯ ಇಂಚರ said...

ಸಂತೋಷ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಕುತೂಹಲ ಕಾಯ್ದಿಡಬೇಕು ಅಂತಾನೆ ಎರಡನೇ ಭಾಗ ಹಾಕಿದೆ
ಇಲ್ಲದಿದ್ರೆ ಒಂದನೇ ಭಾಗದಲ್ಲೇ ಮುಗಿಸ್ತಿದ್ದೆ

ಸಾಗರದಾಚೆಯ ಇಂಚರ said...

ಆನಂದ್,
ಖಂಡಿತ ಅಂಥಹ ಆಸೆ ಇಲ್ಲ, \
ಕನಸಿನಲ್ಲಾದ್ರು ಸಿಕ್ಕಿದ್ರೆ ಅಂತ ಒಂದು ಯೋಚನೆ,
ನನಸಿನಲ್ಲಿ ಬೇಡವೇ ಬೇಡ ಬಿಡಿ
ನಿಮಗೂ ಹಬ್ಬದ ಶುಭಾಶಯಗಳು

ಸಾಗರದಾಚೆಯ ಇಂಚರ said...

ಸೀತಾರಾಂ ಸರ್,
ಹಂಗೆನಿಲ್ರಿ, ಸುಮನ ಸ್ವೀಡನ್ ಬಗ್ಗ ಹೇಳೋದಕಿಂತ
ಕನಸು ಅಂತ ಹೇಳಿ ಅದರ ಮೂಲಕ ಇಲ್ಲಿನ ಸಾರಿಗೆ ವ್ಯವಸ್ಥಿ
ಮತ್ತ ಪೋಲೀಸರ ಬಗ್ಗೆ ಹೇಳಿದೆ ನೋಡ್ರಪ್ಪ
ನಿಮಗೆ ಇಷ್ಟ ಆಯ್ತಿಲ್ಲೇ ನಂಗೆ ಭಾಳ ಖುಷಿ ಅಯ್ತ್ರಪ್ಪ
ಬಿ ಪಿ ಏರಿಸಿಕೋ ಬೇಡ್ರಪ್ಪ
ಹಿಂಗ ಬರ್ತಾ ಇರ್ರಿ
ನಿಮ್ಮ ಅಭಿಪ್ರಾಯಕ್ಕೆ ಶರಣರಿ

ಸಾಗರದಾಚೆಯ ಇಂಚರ said...

ಬಾಲು,
ಸಂಕ್ರಾಂತಿಯ ದಿನ ಸುಮ್ಮನೆ ಇಲ್ಲಿನ ವ್ಯವಸ್ಥೆ ಬಗ್ಗೆ ಹೇಳೋದಕಿಂತ
ಹಿಂಗೆ ಹೇಳಣ ಅನಿಸ್ತು ಅದಿಕ್ಕೆ
ಇಲ್ಲಿನ ಸಂಬಳಕ್ಕೆ ಇಲ್ಲಿನ ಸಾರಿಗೆ ವ್ಯವಾಸ್ಥೆ ಭಾರಿ ಚೀಪ್
ಭಾರತದಲ್ಲಿ ಇಂಥಹ ವ್ಯವಸ್ಥೆ ಬಂದ್ರೆ ಅಲ್ಲೂ ಚೀಪ್ ಇರ್ತು ಅಲ್ಲಿ ಸಂಬಳಕ್ಕೆ
ಆದರೆ ನಾವು ಅದನ್ನು ಉಳಿಸಿಕೊಂಡು ಹೋಗವು
ಇಲ್ಲೂ ಭಾರತಕ್ಕೆ ಹೋಲಿಸಿದರೆ ಎಲ್ಲದು ತುಂಬಾ ಕಾಸ್ಟ್ಲಿ

ಸಾಗರದಾಚೆಯ ಇಂಚರ said...

ಅಜ್ಹಾದ್ ಸರ್
ಬರಹದ ಉದ್ದೇಶ ಕನಸು ಆಗಿರಲಿಲ್ಲ
ಇಲ್ಲಿನ ಸಾರಿಗೆ ವ್ಯವಸ್ಥೆ ಮತ್ತು ಪೋಲೀಸರ ದಕ್ಷತೆ ಬಗ್ಗೆ ತಿಳಿಸೋದಾಗಿತ್ತು
ಅದಕ್ಕೆ ಬೇರೆಯದೇ ರೀತಿಯಾಗಿ ಹೇಳಿದೆ
ನಿಮ್ಮ ಅಭಿಪ್ರಾಯಗಳು ಹೆಚ್ಚಿನ ಹುರುಪು ನೀಡಿದೆ

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಸರ್
ನಿಜ, ದೋಸೆಗೆ ಮತ್ತು ಬಿಸಿ ಬಿಸಿ ದೋಸೆ ಮಾಡಿ ಕೊಡುವ
ಪ್ರೀತಿಯ ಹೆಂಡತಿಗೆ ಇಬ್ಬರಿಗೂ ಥ್ಯಾಂಕ್ಸ್
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

Priyanka,
thanks for the comments.Idea is to emphasize the quality of life in sweden for example, traffic systme, security everything. But i narrated as a story. I am so happy that you liked this writing.
Keep visiting

ತೇಜಸ್ವಿನಿ ಹೆಗಡೆ said...

ತುತ್ತತುದಿಯಿಂದ ಪ್ರಪಾತಕ್ಕೆ ಎಸೆಯುವುದೆಂದರೆ ಇದೇ ಇರಬೇಕು. ಕುತೂಹಲದ, ಆತಂಕದ ತುದಿಯಿಂದ "ಇಷ್ಟೇನಾ?!" ಅನ್ನುವ ಪ್ರಪಾತಕ್ಕೆಸೆದು ಬಿಟ್ಟಿರಿ :( :) ಮೊದಲು ನಂಗೆ ಸಂಶಯ ಬಂದಿತ್ತು. ಯಾವುದೇ ತಾಯಿ ತನ್ನ ಮಗುವನ್ನು ಅಪರಿಚಿತನಿಗೆ ಕೊಟ್ಟು ಹೋಗುತ್ತಾಳೆಯೇ? ಅದೂ ವಿದೇಶದಲ್ಲಿ!! ಎಂದು. ಆದರೆ ಯಾಕೋ ಒಳಗಿನ ಗುಟ್ಟು ಅರಿವಾಗಲೇ ಇಲ್ಲ.

ಜನವರಿ ತಿಂಗಳಲ್ಲೇ ಎಪ್ರಿಲ್ ಫೂಲ್ ಕನಸು ಕಾಣ್ತೀದ್ದೀರಾ ಅಂತಾಯ್ತು :)

ಸಾಗರದಾಚೆಯ ಇಂಚರ said...

ಶಿವೂ ಸರ್
ಖಂಡಿತ ಫೂಲ್ ಮಾಡ್ತಾ ಇಲ್ಲ
ಇಲ್ಲಿನ ಸಾರಿಗೆ ವ್ಯವಸ್ಥೆಯ ಒಂದು ಜ್ಹಲಕ್ ಅಷ್ಟೇ
ನಿಮ್ಮ ಜೊತೆ ಕನಸನ್ನು ಹಂಚಿಕೊಳ್ಳಬೇಕು ಅಂತ ತುಂಬಾ ದಿನದಿಂದ ಇದ್ದೆ
ಏಪ್ರಿಲ್ ತನಕ ಹೇಗೆ ತಾಳಿ ಕೊಳ್ಳೋದು
ಅದಿಕ್ಕೆ ಹಾಕಿದೆ
ಖನಿಡ್ತ ಇಲ್ಲಿನ ಜನಜೀವನದ ಬಗ್ಗೆ ವಿವರವಾಗಿ ಬರೆಯುತ್ತೇನೆ
ಅಭಿಪ್ರಾಯಕ್ಕೆ ಧನ್ಯವಾದಗಳು

ಚುಕ್ಕಿಚಿತ್ತಾರ said...

ಹ್ಹ..ಹ್ಹ..ಹ್ಹಾ...
ಚೆನ್ನಾಗಿದೆ..
ಕನಸಿನ ಕೂಸು....

ಸಾಗರದಾಚೆಯ ಇಂಚರ said...

ಜ್ಯೋತಿ,
ಅದಿಕ್ಕೆ ಮೊದಲ ಭಾಗ ಅಲ್ಲಿಗೆ ಮುಗಿಸಿದೆ
ಸ್ವಲ್ಪ ಕುತೂಹಲ ಇರಲಿ ಅಂತ
ನಿಮಗೆಲ್ಲ ಇಷ್ಟ ಆಯ್ತಲ್ಲ
ಬರೆದಿದ್ದಕ್ಕೆ ನನಗೂ ಹೆಮ್ಮೆ ಇದೆ
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಬಾಲು ಸರ್
ಸತ್ಯಂ ನ ರಾಮ್ ಲಿಂಗಾರಾಜು ಅಂಥವರಿಗೆ ಜೈಲೇ ಮನೆ, ಮನೆಯೇ ಜೈಲು
ಅವರು ಎಲ್ಲಿದ್ದರೂ ಐಶಾರಮ ವಾಗಿಯೇ ಇರುತ್ತಾರೆ
ಆದರೆ ಸಣ್ಣ ಪುಟ್ಟ ಕಳ್ಳತನ ಮಾಡಿದವರಿಗೆ ಭಾರತದ ಪೊಲೀಸರು ಕೊಡುವ
ಚಿತ್ರಹಿಂಸೆ ನೋವು ನೀಡುತ್ತದೆ ಅಲ್ಲವೇ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸುನಾಥ್ ಸರ್
ಮಗುವಿನ ಮುಗ್ಧತೆ, ಆ ಮುಗುಳ್ನಗು
ಯಾರನ್ನು ಆಕರ್ಷಿಸೋದಿಲ್ಲ ಹೇಳಿ
ಇಲ್ಲಿನ ಮಕ್ಕಳಂತೂ ತುಂಬಾ ತುಂಬಾ ಮುದ್ದಾಗಿರ್ತಾರೆ
ಆದರೆ ಯಾರಿಗೂ ಹೇಳದೆ ಎತ್ತಿ ಕೊಳ್ಳೋದಿಲ್ಲ ಬಿಡಿ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಚಂದ್ರು ಸರ್
ನಿಮಗೂ ನಿಮ್ಮ ಕುಟುಂಬಕ್ಕೂ ಸಂಕ್ರಾಂತಿಯ ಶುಭಾಶಯಗಳು
ಇಷ್ಟವಾಗಿದ್ದಕ್ಕೆ ಧನ್ಯವಾದಗಳು
ಇಂಥಹ ಕಥೆ ಬರೆಯಬೇಕು ಎಂದು ತುಂಬಾ ದಿನದಿಂದ ತಲೆಯಲ್ಲಿ ಹುಳ ಬಿಟ್ಟುಕೊಂಡಿದ್ದೆ
ಮುಂದಿನ ವಾರ ಮತ್ತೊಂದು ಹೊಸ ವಿಷಯದೊಂದಿಗೆ ಸಿಗುತ್ತೇನೆ

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಇಂಥಹ ಕುತೂಹಲ ಶ್ರುಷ್ಟಿಸಲೆಂದೇ ಎರಡು ಭಾಗ ಗಳಾಗಿ ಕಥೆ ವಿಂಗಡಿಸಿ
ಹಾಕಿದೆ
ಮೊದಲೇ ಎಲ್ಲ ಕಥೆ ಬರೆದು ಇಟ್ಟಿದ್ದೆ
ಮುಚ್ಚಿದ ಪೆಟ್ಟಿಗೆಯ ಕುತೂಹಲತೆ ಇರಲಿ ಎಂಬ ಆಶಯ ಮೊದಲ ಭಾಗದಲ್ಲಿತ್ತು
ನಿಮ್ಮ ಚಂದದ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಮನಸು,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಪ್ರೋತ್ಸಾಹ ಹೀಗೆಯೇ ಇರಲಿ

ಸಾಗರದಾಚೆಯ ಇಂಚರ said...

ತೇಜಸ್ವಿನಿಯವರೇ ,
ಆ ಆತಂಕ, ಕುತೂಹಲ ನಮ್ಮನ್ನು ಎಷ್ಟು ಚುರುಕಾಗಿಸುತ್ತದೆ ಅಲ್ಲವೇ
ಅದು ಹೋದಾಗ ಜೀವನ ''ಇಷ್ಟೇನಾ'' ಎನಿಸುತ್ತದೆ
ಇಲ್ಲಿನ ವ್ಯವಸ್ಥೆಗಳ ಬಗೆಗೆ ತಿಳಿಸುವ ಸಣ್ಣ ಪ್ರಯತ್ನ ಇದು
ಇನ್ನೂ ವಿವರವಾಗಿ ಮುಂಬರುವ ಲೇಖನಗಳಲ್ಲಿ ಬರೆಯುತ್ತೇನೆ
ಎಷ್ಟು ವ್ಯವಸ್ಥೆಯಿದೆಯೋ ಹಾಗೆಯೇ ಸ್ವಲ್ಪ ಲೋಪ ದೋಷವೂ ಇದೆ ಇಲ್ಲಿ
ಜನವರಿ ತಿನಗಳ ಕನಸನ್ನು ಏಪ್ರಿಲ್ ತಿಂಗಳ ವರೆಗೆ ಹೇಗೆ ಕಾಯಲಿ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಚುಕ್ಕಿ ಚಿತ್ತಾರ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಕನಸಿನ ಕೂಸಿನ ಕನಸು ಮುಗಿದಿದೆ :)

ಸಾಗರದಾಚೆಯ ಇಂಚರ said...

ಸವಿಗನಸಿನ ಮಹೇಶ್ ಸರ್
ನಿಮಗೆ ಕನಸಿನ ಬಗ್ಗೆ ಹೇಳಬೇಕ
ಅದೇ ಹೆಸರಿನ ಬ್ಲಾಗ್ ಬೇರೆ ಇದೆ
ಅದರೂ ನಿಮ್ಮ ಕಾಳಜಿಗೆ ಧನ್ಯವಾದಗಳು
ಪ್ರೀತಿ ಇರಲಿ
ಅಭಿಪ್ರಾಯಕ್ಕೆ ವಂದನೆಗಳು

ಚಿತ್ರಾ said...

ಗುರು,
ಹೀಂಗೆ ಮೋಸ ಮಾಡದು ಸರಿನಾ? ಹೇಳಿ ಕೇಳವು ಅನಿಸಿದರೂ ಕೇಳ್ತ್ನಿಲ್ಲೇ. ಆವಾಗ .. ನಿಮಗೆ ಪೋಲೀಸ್ ಆತಿಥ್ಯ ತಪ್ಪಿದ್ದು ನಮಗೆ ಬೇಜಾರಾತು ಅಂದಹಾಂಗೆ ಆಗ್ತು !
ಆದರೆ ,ಇಷ್ಟೆಲ್ಲಾ ಅನುಕಂಪದಿಂದ ಓದಿ , ' ಅಯ್ಯೋ ರಾಮಾ.. ಸುಮ್ಮನೆ ನೀವು ತಲೆ ಮೇಲೆ ತೊಂದರೆ ಎಳಕಂಡ ಹಾಂಗಾತು, ಇನ್ನೇನು ಮಾಡ್ತಾರೋ ಪಾಪ ' ಅಂತ ಬೇಜಾರು , ಗಾಬರಿ ಪಟ್ಟು ಬಿಪಿ ಹೆಚ್ಚಾತಲ್ಲ ನಮಗೆಲ್ಲ ಅದಕ್ಕೆ ಸಲ್ಪ ಸಿಟ್ಟು ಅಷ್ಟೇ . ಇನ್ನು ಸ್ವಲ್ಪ ಹುಷಾರಾಗಿ ಬರೀರಿ ! ಹಿ ಹಿ ಹಿ..

PRASANNA KUMAR said...

hale kathe.. videshada banna..

ಸಾಗರದಾಚೆಯ ಇಂಚರ said...

ಚಿತ್ರಾ
ಬರಹದ ಉದ್ದೇಶ ಇಲ್ಲಿನ ವಾತಾವರಣವನ್ನು ಪರಿಚಯಿಸದು ಆಗಿತ್ತು
ಕನಸು ಹೇಳದು ಒಂದು ನೆವ ಅಷ್ಟೇ
ಇಲ್ದಿದ್ರೆ ಆಸಕ್ತಿ ಇರ್ತಿಲ್ಲೆ ಅಂತ ಹಂಗೆ ತಗಂಡಿ
ನಿಂಗೆ ಬಿ ಪಿ ಹೆಚ್ಚಾಗಿದ್ರೆ ಹತ್ತಿರದಲ್ಲಿರುವ ವೈದ್ಯರನ್ನು ಸಂಪರ್ಕಿಸಿ :)
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಪ್ರಸನ್ನಕುಮಾರ್ ಅವರೇ,
ಬರಹದ ಒಳಗಿನ ಹೂರಣ ಕೇವಲ ವಿದೇಶದ ವ್ಯವಸ್ಥೆಯನ್ನು
ಮನಗಾಣಿಸಲು ಇದ್ದ ಒಂದು ಸೇತುವೆ ಅಷ್ಟೇ
ಕಥೆ ಹಳೆಯದಾದರೂ ಇಲ್ಲಿನ ವ್ಯವಸ್ಥೆಯ ಅಚ್ಚುಕಟ್ಟುತನ ತೋರಿಸುವುದು
ನನ್ನ ಉದ್ದೇಶ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು

ದಿನಕರ ಮೊಗೇರ said...

ಗುರು ಸರ್,
ಮೊದಲ ಭಾಗದ ಮೊದಲಾರ್ಧ ಓದುತ್ತಿರುವಾಗ ಯಾಕೋ ಡೌಟ್ ಬಂದಿತ್ತು.... ನೀವು ಇಲ್ಲದ ಪೋಲೀಸರ ಬಗ್ಗೆ , ಟ್ರಾಫಿಕ್ ಬಗ್ಗೆ ಹೇಳಿ ಯಾಮಾರಿಸಿದಿರಿ .... ಈಗ ಅನಿಸುತ್ತಾ ಇದೆ .... ಮೊದಲೇ ನಮಗೆ ಇದು ಕನಸೆಂದು ಗೊತ್ತಾಗಿದ್ರೆ, ನಿಮ್ಮ ಕನಸಲ್ಲಿ ಬಂದ ಪೊಲೀಸರಿಗೆ , ನಿಮಗೆ ಎರಡೇಟು ಬಿಡಲು ಹೇಳುತ್ತಿದ್ದೆ.... ನೀವು ನಮ್ಮನ್ನೆಲ್ಲಾ ಯಾಮಾರಿಸಿದ ತಪ್ಪಿಗೆ ...... ಹ್ಹ ಹ್ಹಾ ಹಾ .... ನಿರೂಪಣೆ ಸೂಪರ್ ಸರ್.... ನಮ್ಮನ್ನೆಲ್ಲ ಹಳಿ ತಪ್ಪಿಸಿದ ರೀತಿನೂಚೆನ್ನಾಗಿತ್ತು.....

ಮನಮುಕ್ತಾ said...

ಸದ್ಯ! ಖರೆ ಅಲ್ಲ.ಏನ್ ಆಗ್ಬಿಟ್ಟಿತ್ತಪ್ಪಾ ಅ೦ದ್ಕೊ೦ಡಿದ್ದೆ.

ಸಾಗರದಾಚೆಯ ಇಂಚರ said...

ದಿನಕರ್ ಸರ್
ಅದಿಕ್ಕೆ ಕನಸು ಅಂತ ಹೇಳಲಿಲ್ಲ
ಇಲ್ದಿದ್ರೆ ನೀವು ಪೊಲೀಸರಿಗೆ ಹಾಗೆ ಹೇಳ್ತಿರಾ ಅಂತಾ ಹಹಃ
ನಿಮಗೆ ಇಷ್ಟ ಆಗಿದ್ದಕ್ಕೆ ಸಂತೋಷ
ನಿಮ್ಮ ಪ್ರೀತಿ ಹಾರೈಕೆನೆ ಬರೆಯೋಕೆ ಸ್ಪೂರ್ತಿ
ಹೀಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಮನಮುಕ್ತಾ
ನಿಮ್ಮೆಲ್ಲರ ಪ್ರೀತಿ ಮತ್ತು ಕಾಳಜಿ ನನ್ನನ್ನು
ಮೂಕನನ್ನಾಗಿಸಿದೆ
ಬ್ಲಾಗ್ ಪ್ರಪಂಚ ಎಲ್ಲವನ್ನೂ ನೀಡಿದೆ
ನಾನು ಋಣಿ
ಬರುತ್ತಿರಿ

ಸುಬ್ರಮಣ್ಯ said...

ನಮಸ್ಕಾರ. ನಾನು ನಿಮ್ಮ ಬ್ಲಾಗಿಗೆ http://kannadablogs.ning.com/ ಮೂಲಕ ಬಂದೆ. ನಾನು ನನ್ನ ಬ್ಲಾಗ್ homepageಗೆ ಬಂದಾಗ ನಿಮ್ಮ comment (ನನ್ನ ಒಂದು ಬರಹದ ಬಗ್ಗೆ) ಓದಿ ಸಂತೋಷವಾಯಿತು. ನಾವಿನ್ನೂ ಬ್ಲಾಗ್ ಪ್ರಪಂಚದಲ್ಲಿ ಕಣ್ಣು ಬಿದುತ್ತಿರುವರು. ನಿಮ್ಮ ಅನಿಸಿಕೆಗಳಿಗೆ ಸದಾ ಸ್ವಾಗತ.ಆದ್ರೆ follower ಆಗಿ.

ಸಾಗರದಾಚೆಯ ಇಂಚರ said...

ಮಾಚಿಕೊಪ್ಪ ಅವರೇ
ನಿಮ್ಮ ಬ್ಲಾಗ್ ಗೆ ಬಂದೆ, ಆದ್ರೆ ಅಲ್ಲಿ Follower
ಆಗೋಕೆ ಯಾವುದೇ ಮಾಹಿತಿಗಳಿಲ್ಲ
ನಿಮ್ಮ ಲೇಖನ ತಪ್ಪದೆ ಓದ್ತೀನಿ ಇನ್ನುಮೇಲೆ,
Follower icon ನೀವು ಹಾಕಿದರೆ ಖಂಡಿತ ಆಗ್ತೀನಿ

ವನಿತಾ / Vanitha said...

ಅಬ್ಬಾ..ನಿಜವಾಗಲೂ ಫೂಲ್ ಮಾಡ್ಬಿಟ್ರಿ!!!nice narration..:-)
ನಮ್ಮಲ್ಲೂ ಪೋಲಿಸ್ ವ್ಯವಸ್ಥೆ ಚೆನ್ನಾಗಿದೆ..ಆದ್ರೆ ಸಾರಿಗೆಗೆ ಬರಿ ನಮ್ಮದೇ ಕಾಲು ಅಥವಾ ಕಾರು !!!!

Manju M Doddamani said...

ನಿಮ್ಮ ಕನಸು ಸೂಪರ್
ಬರೆದಿರುವ ಶೈಲಿ ಇನ್ನು ಸೂಪರ್

ಗೌತಮ್ ಹೆಗಡೆ said...

kelavu sala kanase life aadre mast irtu alda?:):) but ni kanda type kanasu nanasaagadu byada maraya:)happy sankranti :)

ಸಾಗರದಾಚೆಯ ಇಂಚರ said...

ವನಿತಾ
ನಮ್ಮ ಪೋಲಿಸ ವ್ಯವಸ್ಥೆಯಲ್ಲಿ ಲಂಚ ಸ್ವಲ್ಪ ಕಡಿಮೆ ಆದರೆ ಚೆನ್ನ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ದೊಡ್ಡಮನಿ ಮಂಜು ಅವರೇ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಗೌತಮ್ ತಮ್ಮ
ಹೌದು, ಅಂಥಹ ಕನಸು ಕನಸಾಗೆ ಇರ್ಲಿ ಅಲ್ದಾ
ಎಂಥ ಮಾಡಿದೆ ಸಂಕ್ರಾಂತಿ ದಿನ
ನಿನಗೂ ಹಬ್ಬದ ಶುಭಾಷಯ
ಹಿಂಗೆ ಬರ್ತಾ ಇರು

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ... ನಮ್ಮನ್ನೆಲ್ಲ ಫೂಲ್ ಮಾಡಿಬಿಟ್ಟಿರಲ್ಲ....

ಭಯಂಕರವಾಗಿದೆ ನಿಮ್ಮ ಕನಸು... :)

ಗೌತಮ್ ಹೆಗಡೆ said...

khandita bartnapa matte:)

PARAANJAPE K.N. said...

ಗುರು
ನಿಮ್ಮ ಕನಸಿನ ಕಥೆ ರೋಚಕವಾಗಿತ್ತು, ಅದು ನಿಜವಾಗುವುದು ಬೇಡ. ಚೆನ್ನಾಗಿದೆ, ಮುಂದಿನ ಬರಹದ ನಿರೀಕ್ಷೆಯಲ್ಲಿ....

ಸಾಗರದಾಚೆಯ ಇಂಚರ said...

ಶಿವೂ ಸರ್
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಕನಸು ಕಾಣಬೇಕಲ್ವ ಇಲ್ದಿದ್ರೆ ಬದುಕು ನೀರಸ ಆಗಿ ಬಿಡುತ್ತೆ
ಆದರೆ ಜೈಲಿಗೆ ಹೋಗೋ ಕನಸು ನನಸು ಆಗೋದು ಬೇಡಾ

ಸಾಗರದಾಚೆಯ ಇಂಚರ said...

Goutam,

ninage sadaa swaagata

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಮುಂದಿನ ವಾರ ಹೊಸ ಬರಹದೊಂದಿಗೆ ಸಿಗುತ್ತೇನೆ

prameela said...

che...innobrige upakara maadok hogi..nimge heegaaythalla..endu nim bagge ayyo enisitthu.odtha...odtha konege joru nagu banthu.aadre ondanthu nija... inthaha anubhava esto janarige(nijavaglu)aagirutthe.sogasaagi prasthuta padisiddera..!heege...bareetha iri.

ಸಾಗರದಾಚೆಯ ಇಂಚರ said...

ಪ್ರಮೀಳ ಅವರೇ
ನನ್ನ ಬ್ಲಾಗ್ ಗೆ ಸ್ವಾಗತ
ನೀವು ಹೇಳಿದ್ದು ನಿಜ, ಎಷ್ಟೋ ಸಲ ಹೀಗೆಯೇ ಆಗಿರುತ್ತದೆ
ಯಾರಿಗೋ ಉಪಕಾರ ಮಾಡಲು ಹೋಗಿ ನಾವೇ ಸಿಕ್ಕಿ ಬೀಳುತ್ತೇವೆ
ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ

ದೀಪಸ್ಮಿತಾ said...

ಅಯ್ಯೋ ಪಾಪ ಸಹಾಯ ಮಾಡಲು ಹೋಗಿ ಹೀಗೆ ಆಯ್ತಲ್ಲ, ಮುಂದೇನು ಮಾಡುತ್ತಾರೆ ಎಂದುಕೊಳ್ಳುತಿರುವಾಗಲೆ ಎಲ್ಲ ಟುಸ್ ಮಾಡಿದಿರಿ. ಏನೇ ಇರಲಿ, ಬರಹ ಚೆನ್ನಾಗಿತ್ತು

ಸಾಗರದಾಚೆಯ ಇಂಚರ said...

ದೀಪಸ್ಮಿತ
ಆ ಕುತೂಹಲ ಉಳಿಸಲು ಎರಡು ವಾರಕ್ಕೆ ಬರಹ ಹಾಕಿದೆ
ಇಲ್ಲಿನ ಜನ ಜೀವನದ ಒಂದು ಪರಿಚಯ ಮಾಡಲು ಸಣ್ಣ ದಾರಿ ಇದು ಅಷ್ಟೇ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಪ್ರೋತ್ಸಾಹ ಹೀಗೆಯೇ ಇರಲಿ

shwetha said...

Sorry nanage thumba bejaragedhe
nemage enu ayetho eno endu thumba feel agethu. adarakenta hecchage nanna friend thumba kuthuhala denda keleddaru Deena manege(PG)hoda kudale nenna friend blog barededdara enayethe anta keluthare nanu hege anta heledare ella nanage byethare gotha (Edhu nanna manadalada mathu thumba settu banthu first)
nemma kalpane chennagede sir kalpane ya kathe nanage thumba esta ayethu (odhee thumba hottada mele first thumba settu bandethu sir.
nemagu heg

ಸಾಗರದಾಚೆಯ ಇಂಚರ said...

ಶ್ವೇತ,
ಬೇಜಾರು ಮಾಡ್ಕೋಬೇಡಿ,
ನಿಮ್ಮೆಲ್ಲರ ಪ್ರೋತ್ಸಾಹ ಬರೆಯೋಕೆ ಇನ್ನಷ್ಟು ಸ್ಪೂರ್ತಿ ಕೊಡುತ್ತೆ
ನನಗೆ ಹೀಗಾಯ್ತಲ್ಲ ಅಂತ ನೀವು ಬೇಜಾರು ಮಾಡ್ಕೊಳ್ಳೋದು
ನನ್ನ ಬಗ್ಗೆ ನೀವು ಬ್ಲಾಗ್ ಮಿತ್ರರು ತೋರಿಸುವ ಕಳಕಳಿಗೆ
ಮೂಕನಾಗಿದ್ದೇನೆ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ನಿಮ್ಮ ಸ್ನೇಹಿತರಲ್ಲಿ ನನ್ನ ಬ್ಲಾಗ್ ಬಗ್ಗೆ ಹೇಳುತ್ತಿರುವುದು ನನಗೆ ತುಂಬಾ ಹೆಮ್ಮೆ ಎನಿಸಿದೆ
ಪ್ರೋತ್ಸಾಹ ಹೀಗೆಯೇ ಇರಲಿ
ಸದಾ ಬರುತ್ತಿರಿ

ಅರಕಲಗೂಡುಜಯಕುಮಾರ್ said...

ಸರ್ ಇದು ನಿಜವಾಗಿಯೂ ಕನಸೇ...! ಊಹುಂ ಈಗಲೂ ನನಗೆ ಹಾಗನ್ನಿಸುತ್ತಿಲ್ಲ.. ಬಹುಶ; ನಿಮ್ಮ ಬರಹದ ಪಕ್ವತೆ ಕನಸನ್ನು ನಮಗೆ ವಾಸ್ತವದ ದರ್ಶನ ಮಾಡಿಸಿದೆ.ಇಂತಹ ನಿರೂಪಣೆ ಅಪರೂಪಕ್ಕೆ ಸಿಕ್ಕಿದೆ ಉತ್ತಮ ಓದು ನೀಡಿದ್ದಕ್ಕೆ ಧನ್ಯವಾದ. ಆ ಮೂಲಕ ಅಲ್ಲಿನ ಪೊಲೀಸ್ ವ್ಯವಸ್ಥೆಯ ಪರಿಚಯವಾಗಿದೆ ಸೋ ಡಬ್ಬಲ್ ಥ್ಯಾಂಕ್ಸ್.

ಸಾಗರದಾಚೆಯ ಇಂಚರ said...

ಜಯಕುಮಾರ್ ಸರ್
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಬರಹದ ಉದ್ದೇಶವೂ ಇಲ್ಲಿನ ಸಾರಿಗೆ ವ್ಯವಸ್ಥೆ ಮತ್ತು ರಕ್ಷಣೆಯ ಬಗ್ಗೆ
ತಿಳಿಸುವುದಾಗಿತ್ತು
ಪ್ರೀತಿ , ಪ್ರೋತ್ಸಾಹ ಸದಾ ಇರಲಿ

Ranjita said...

ಗುರು ಅಣ್ಣ ,
ಸಕ್ಕತ್ತಗಿದ್ದು ...ಸಿಕ್ಕಾಪಟ್ಟೆ ಇಂಟರೆಸ್ಟ್ ನಿಂದ ಒದದಿ ಎಂತಾ ಆಗಿಕ್ಕು ಮುಂದೆ ಹೇಳಿ ..ಒಳ್ಳೆ ಮೂವಿ ತಾರಾ ಟ್ವಿಸ್ಟ್ !
ನಿಮ್ಮ ಬರಹದ ಉದ್ದೇ ಷ ಆಮೇಲೆ ಗೊತ್ತಾತು .. ನಗುನೂ ಬಂತು :D
thanks guru anna sankanti wishes ge .. nimgu kooda belated wishes nanninda :(

ಶೆಟ್ಟರು (Shettaru) said...

ಕನ್ನಡ ಬ್ಲಾಗ ಲೋಕದ ಸಮೀಕ್ಷೆ: ನೀವೂ ಭಾಗವಹಿಸಿ ಮತ್ತು ನಿಮ್ಮ ಗೆಳೆಯರಿಗೂ ತಿಳಿಸಿ
ಆತ್ಮೀಯರೆ,
ಅತ್ಯಂತ ಶೀಘ್ರವಾಗಿ ಹಾಗೂ ಗುಣಾತ್ಮಕವಾಗಿ ಬೆಳೆಯುತ್ತಿರುವ ಒಂದು ಪ್ರಬಲ ಮಾದ್ಯಮ “ಬ್ಲಾಗಿಂಗ್”, ಇದಕ್ಕೆ ಕನ್ನಡಿಗರು ಮತ್ತು ಕನ್ನಡ ಬ್ಲಾಗಿಂಗ ಹೋರತಲ್ಲ. ಇವತ್ತಿಗೆ ಕನ್ನಡದಲ್ಲು ಸುಮಾರು ೮೦೦ಕ್ಕೂ ಹೆಚ್ಚು ಬ್ಲಾಗಗಳಿವೆ. ಭಾರತಿಯ ಭಾಷೆಗಳ ಬ್ಲಾಗಿಂಗ ಸಂಭ್ರಮದಲ್ಲಿ ಕನ್ನಡವಿಗ ಪ್ರಖರ ಪ್ರಕಾಶ, ಸುಂದರ ಅಕ್ಷರಗಳ ಉದ್ಯಾನ.
ಬಹಳಷ್ಟು ಬ್ಲಾಗ್‍ಗಳಲ್ಲಿ ಒಂದು, ಎರಡು ಪೋಸ್ಟುಗಳಿವೆ. ಕೆಲವೆಡೆ ಒಬ್ಬರೇ ಐದಾರು ಬ್ಲಾಗ್ ಮಾಡಿಕೊಂಡಿದ್ದಾರೆ. ಏನೇ ಆದರೂ ಉತ್ಸಾಹ-ಆಕಾಶಕ್ಕೆ ಏಣಿ ಹಾಕುವಷ್ಟಿದೆ. ಹೀಗಾಗಿ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ಈ ಸಮೀಕ್ಷೆ ನಮ್ಮ ಮನದಲ್ಲಿ ಹುಟ್ಟಿದ್ದು, ಈ ಸಮೀಕ್ಷೆ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ವಿಶೇಷಗುಣ, ಅಪೂರ್ವಲಕ್ಷಣ, ವೈಶಿಷ್ಟ್ಯಗಳನ್ನು ಅರ್ಥೈಸಿಕೊಳ್ಳುವ ಒಂದು ಸಣ್ಣ ಪ್ರಯತ್ನ.
ಆತ್ಮೀಯ ಬ್ಲಾಗ ಬಂಧುಗಳೇ, ಈ ಸಮೀಕ್ಷೆಯ ಸಫಲತೆ ನಿಮ್ಮ ಸಹಯೋಗದಿಂದ ಮಾತ್ರ ಸಾಧ್ಯ. ಹೀಗಾಗಿ ದಯವಿಟ್ಟು ಈ ಕೆಳಗೆ ನೀಡಿದ ಸಂಪರ್ಕ ಕೊಂಡಿ (Link) ಚಿಟುಕಿಸಿ ಅಲ್ಲಿ ನೀಡಲಾಗಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ. ನೀವು ನಿಡಿದ ಎಲ್ಲ ಮಾಹೀತಿಗಳನ್ನು ರಹಸ್ಯವಾಗಿರಿಸುವುದಾಗಿಯೂ ಮತ್ತು ಸಮೀಕ್ಷೆಯ ಫಲಿತಾಂಶವನ್ನು ಕೇವಲ ಶೈಕ್ಷಣಿಕ ಕಾರ್ಯಗಳಿಗೆ ಮಾತ್ರ ಉಪಯೋಗಿಸಿಕೊಳ್ಳಲಾಗುವುದಾಗಿ ಈ ಮೂಲಕ ಪ್ರಮಾಣಿಸುತ್ತೆವೆ.
http://spreadsheets.google.com/viewform?formkey=dF90eEtaNDlnNkRQQmVPZlBRSE02OGc6MA..
ತಮ್ಮ ಸಲಹೆ ಮತ್ತು ಸಂದೇಹಗಳಿಗಾಗಿ shettaru@gmail.com ಗೆ ಮಿಂಚಂಚೆ ಕಳುಹಿಸಿ.
ಧನ್ಯವಾದಗಳೊಂದಿಗೆ
ಈರಣ್ಣ ಶೆಟ್ಟರು ಮತ್ತು ಗ್ರಂಥಪಾಲಕ ಗೆಳೆಯರು

ಸಾಗರದಾಚೆಯ ಇಂಚರ said...

ರಂಜಿತಾ
ಅಭಿಪ್ರಾಯಕ್ಕೆ ಧನ್ಯವಾದಗಳು
ಇಷ್ಟವಾಗಿದ್ದಕೆ ನಂಗೆ ಖುಷಿ ಇದ್ದು
ನಿಮ್ಮ ಪ್ರೋತ್ಸಾಹವೇ ಬರೆಯಲು ಪ್ರೇರೇಪಿಸುತ್ತದೆ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಶೆಟ್ಟರು
ಖಂಡಿತ ಅಭಿಪ್ರಾಯ ತಿಳಿಸುತ್ತೇನೆ

ಹರೀಶ ಮಾಂಬಾಡಿ said...

ರೋಚಕ ಪತ್ತೇದಾರಿ ಕಥೆಯಂತಿದೆ..:)

ಸಾಗರದಾಚೆಯ ಇಂಚರ said...

ಹರೀಶ್ ಸರ್
ನಿಮ್ಮ ಮಾತುಗಳು ಇನ್ನೂ ಹೆಚ್ಚೆಚ್ಚು ಬರಹ ಬರೆಯಲು ಪ್ರೋತ್ಸಾಹ ನೀಡಿವೆ
ಆದಷ್ಟು ಬರಹಗಳು ಕುತೂಹಲಕಾರಿಯಾಗಿ, ಮೌಲ್ಯಯುತವಾಗಿ,
ಇರುವಂತೆ ನೋಡಿಕೊಳ್ಳುತ್ತೇನೆ
ಪ್ರೀತಿ ಇರಲಿ
ಹೀಗೆಯೇ ಬರುತ್ತಿರಿ

Snow White said...

nimma kanasu nijakku rochakavaagide sir..nanantu edaridde...enagutto munde endu..
punyake adu kevala kanasu ..
chennagittu sir..

Uma Bhat said...

ನಿಮ್ಮ ಕನಸು ಕನಸಾಗಿಯೇ ಉಳಿಯಲಿ.

ಸಾಗರದಾಚೆಯ ಇಂಚರ said...

Snow White
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಉಮಾ ಮೇಡಂ,
ಆ ಕನಸು ನನಸು ಆಗುವುದು ಬೇಡ
ಬ್ಲಾಗಿಗೆ ಸ್ವಾಗತ
ಹೀಗೆಯೇ ಬರುತ್ತಿರಿ

ಆಚಕರೆ ಮಾಣಿ said...

ಇದೇ ಕನಸಿನ ಕಥೆಯನ್ನ ನನ್ನ ಹತ್ತನೇ ತರಗತಿಯಿಂದಲೂ ಕೇಳ್ತಾ ಬಂದಿದ್ದೀನಿ (ಸುಮಾರು ೧೨ ವರ್ಶ)..... ಆದರೆ ಇದರಲ್ಲೇನೋ ವಿಶೇಷ.

ಮೊದಲಬಾರಿಗೆ ತಮ್ಮ ಬ್ಲಾಗಿಗೆ ಇಣುಕಿದ್ದೆ. ಖುಶಿ ಆಯ್ತು.

ಹಾಗೆಯೆ ಗೆಳತಿಯೊಬ್ಬಳ ಬ್ಲಾಗ್ ಗೆ ವಿಸಿಟ್ ಮಾಡಿ. ತುಂಬಾ ವಿಶೇಷ ಇದೆ. anuswara.blogspot.com

mostly kannada's first voice blog

ಸಾಗರದಾಚೆಯ ಇಂಚರ said...

ಆಚೆಕೆರೆ ಮಾಣಿ ಯವರೇ
ಇಲ್ಲಿ ಅಲಂಕಾರ ಸ್ವಲ್ಪ ಇದೆ
ಬ್ಲಾಗಿಗೆ ಸ್ವಾಗತ
ಅಭಿಪ್ರಾಯಕ್ಕ್ಕೆ ಧನ್ಯವಾದಗಳು

Prabhuraj Moogi said...

ಕೊನೇವರೆಗೂ ಕುತೂಹಲ ಚೆನ್ನಾಗಿ ಕಾಯ್ದುಕೊಂಡಿದ್ದೀರಿ... ನಾನಂತೂ ನಿಜವೇ ಅಂತ ಪಾಪ ಏನಾಯ್ತಪ್ಪಾ ಇಅವರ ಕಥೆ ಅಂತಲೇ ಓದುತ್ತಿದ್ದೆ... ನೋಡಿದರೆ ಕೊನೆಗೆ ಒಳ್ಳೆ ಪಂಚ ಇದೆ...

ಸಾಗರದಾಚೆಯ ಇಂಚರ said...

ಪ್ರಭುರಾಜ ಸರ್
ನಿಮಗೆ ಮೆಚ್ಚುಗೆಯಾಗಿದ್ದಕ್ಕೆ ನನಗೆ ಹೆಮ್ಮೆ
ನಿಮ್ಮಾಕೆ ಹೇಗಿದ್ದಾಳೆ :)
ಹೀಗೆಯ್ ಬರುತ್ತಿರಿ

SANTA said...

Wow, omdegukkinalli usiru hidide odimugiside. wonderful gurooo!

ಸಾಗರದಾಚೆಯ ಇಂಚರ said...

Vasant Sir
thanks for the comments

heege barta iri

Namratha said...

sakkattagide... nimma kanasalli nimma kaige bedi hakidaga anisitu, idu nimma kanasu anta..
Intaha kathe hinde odidde.. adaroo nimma kathe nannannu eledukondu hoyitu.. bahala strong agide... nice..

ವಿನುತ said...

ಅಬ್ಬಾ! ಏನಿದು? ನೀವು ಹೀಗೆ ತಬ್ಬಿಬ್ಬುಗೊಳಿಸುತ್ತೀರೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ! ಅದರಲ್ಲೂ ನಿಮ್ಮ ಹಿಂದಿನ ಬರಹದಲ್ಲಿ ನೀವು ಹೇಳಿದ ನಿಜಘಟನೆ ಈ ಬರಹವನ್ನು ಅನುಮಾನಿಸಲು ಆಸ್ಪದ ಕೊಟ್ಟಿರಲಿಲ್ಲ. ಮನುಷ್ಯನ ಮನಸ್ಸು ಹೇಗೆ ಟ್ಯೂನ್ ಆಗಿ ಬಿಟ್ಟಿರುತ್ತದೆ ಎನ್ನುವುದಕ್ಕೆ ಒಂದು ಒಳ್ಳೆಯ ಉದಾಹರಣೆ! ಕೆಲಸದ ಒತ್ತಡದಿಂದಾಗಿ ಬಹಳ ದಿನಗಳಿಂದ ಬ್ಲಾಗಿನ ಕಡೆ ತಲೆಹಾಕಿರಲಿಲ್ಲ. ಬಂದವಳೇ ಬೆರಗಾದೆ! :)

ಸಾಗರದಾಚೆಯ ಇಂಚರ said...

ನಮ್ರತಾ
ಕಥೆ ಹಳೆಯದಾದರೇನು, ಭಾವ ನವನವೀನ ಆಲ್ವಾ
ನಿಮಗೆ ಇಷ್ಟ ಆಗಿದ್ದಕ್ಕೆ ತುಂಬಾ ಖುಷಿ ಆಯಿತು
ಮೊದಲೇ ಹೇಳಿದಂತೆ ಕಥೆ ಹೇಳೋದು ಉದ್ದೇಶ ಅಲ್ಲ, ಇಲ್ಲಿನ ಜನ ಜೀವನದ ಬಗ್ಗೆ ಒಂದು ಜ್ಹಲಕ್
ಹೀಗೆಯೇ ಬರ್ತಾ ಇರಿ

ಸಾಗರದಾಚೆಯ ಇಂಚರ said...

ವಿನುತಾ,
ನಮ್ಮ ಮನಸು ಹೇಗಿರುತ್ತದೆ ಎಂದರೆ ಅದನ್ನು ಹೇಗೆ ಬೇಕಾದರೂ ಟ್ಯೂನ್ ಮಾಡುವಂತಿರುತ್ತದೆ
ನಿಮ್ಮನ್ನು ತಬ್ಬಿಬ್ಬುಗೊಲಿಸಿದ್ದಕ್ಕೆ ಕ್ಷಮೆ ಇರಲಿ
ಆದರೆ ಇಲ್ಲಿನ ಜೀವನದ ಕೆಲವು ಸ್ಯಾಂಪಲ್ ಗಳನ್ನೂ ಇಟ್ಟಿದ್ದೇನೆ
ಶೀಘ್ರದಲ್ಲಿಯೇ ಹೊಸ ಕಥೆಯೊಂದಿಗೆ ಬರುತ್ತೇನೆ
ಬರುತ್ತಿರಿ ಸದಾ