Saturday, April 16, 2011

ಕನಸೇ.....

ನೆನಪಿನ ಭಾವನೆಗಳೇ ಹಾಗೆ, ಲಗಾಮಿಲ್ಲದ ಹುಚ್ಚು ಕುದುರೆಯಂತೆ, ಕೆಲವೊಮ್ಮೆ ಬದುಕನ್ನು  ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿಸಿ, ಮರುಘಳಿಗೆ ಶೈಶವ ನರಕದಲ್ಲಿ ಹೊರಳಾಡಿಸುತ್ತವೆ. ಸಿಹಿ ನೆನಪುಗಳೇ ಇರಲಿ, ಕಹಿ ನೆನಪುಗಳೇ ಇರಲಿ, ಕನಸಾಗಿ ಬಂದು ಕಾಡುತ್ತವೆ. ಭಾವನೆಗಳ ಹುಚ್ಚೆಬ್ಬಿಸಿ, ಹೊತ್ತಲ್ಲದ ಹೊತ್ತಿನಲ್ಲಿ, ಬಿಚ್ಚಿಟ್ಟ ಭಾವನೆಗಳ ಬೆತ್ತಲಾಗಿಸುವ, ತನ್ಮೂಲಕ ಕಾಡುವ ಕನಸುಗಳಿಗೆ ಹೇಳುವುದು ಇಷ್ಟೇ...''ಎಲ್ಲವನ್ನೂ ಸ್ಮ್ರತಿ ಪಟಲದಲ್ಲಿ ಅಚ್ಚೊತ್ತಿ ಹೋಗಿಬಿಡು, ಬಿಟ್ಟೆ ಎನ್ನುವ ಆತಂಕ ಬೇಡ, ಬಚ್ಚಿಟ್ಟೆ ಎನ್ನುವ ಭಯ ಬೇಡ, ಆದರೆ ಮತ್ತೆ ಬಂದು ನನ್ನ ಕಾಡಬೇಡ '' ಎಂದು.   




ಸುತ್ತಲು ಕವಿದ ಕತ್ತಲ ನೋಡಿ
ಬೆತ್ತಲಾಗದಿರು ಮನಸೇ
ಹೊತ್ತಲ್ಲದೊತ್ತಿನಲಿ, ಕಗ್ಗತ್ತಲಲ್ಲಿ
ಬಂದೆನ್ನ ಕಾಡದಿರು ಕನಸೇ..

ಹುಚ್ಚೆದ್ದ ಭಾವ, ಬೆಚ್ಚಾದ ಜೀವ
ಚಿತ್ತಾರದಂತ ಸೊಗಸೇ..
ಮಚ್ಚೆತ್ತಿ ಬಂದ, ಹಚ್ಚನೆಯ ಬೆಳಕು
ತುಂಬೆನ್ನ ಒಲವ ಬೊಗಸೆ...

ಚುಚ್ಚಾಟವೇಕೆ, ಕಚ್ಚಾಟವೇಕೆ
ಬಿಚ್ಚಿಟ್ಟ ಭಾವನೆಯ ಹದಕೆ
ಅಚ್ಚೊತ್ತಿ ಹೋಗು, ಬಚ್ಚಿಡದೆ ಎಲ್ಲ
ಮತ್ತೆರಗಿ ಬರದೆ ಕನಸೇ..

33 comments:

ದಿನಕರ ಮೊಗೇರ said...

ಹುಚ್ಚುಕೋಡಿ ಮನಸಿನ ಕವನ ಚೆನ್ನಾಗಿದೆ ಸರ್.......

SANTOSH MS said...

Dear Guru Sir,

Yes, your words in the poem are true. It happens in every ones life. Good exhibition of feelings.

ಓ ಮನಸೇ, ನೀನೇಕೆ ಹೀಗೆ...? said...

ಸುಂದರ ಮುನ್ನುಡಿಯ ಜೊತೆಗೆ ಚೆಂದದ ಕವನ.

ಭಾವನೆಗಳನ್ನು ಕಲಕುವ ಕನಸು,
ಕನಸಿನಿಂದ ತಪ್ಪಿಸಿಕೊಳ್ಳಲಾರದ ಮನಸು,
ಕನಸು ಮನಸುಗಳ ನಡುವೆ ನಗುವ,ನಲುಗುವ ಬದುಕು..

ಚಂದದ ಭಾವಾರ್ಥದ ಕವನಕ್ಕೆ ಅಭಿನಂದನೆಗಳು.

ಡಾ. ಚಂದ್ರಿಕಾ ಹೆಗಡೆ said...

hey est chanda barityo....

VENU VINOD said...

ವಾವ್..ಭಾವಗಾನದಂತಹ ಕವನ..ಚೆನ್ನಾಗಿದೆ ಗುರು

Dr.D.T.Krishna Murthy. said...

ಗುರು ಸರ್;ಈ ಕನಸುಗಳು ಮತ್ತೆ ಮತ್ತೆ ಬಂದು ಮನಸ್ಸನ್ನು ಕಾಡಿಸಿ,ಪೀಡಿಸಿ,ಘಾಸಿ ಗೊಳಿಸುವುದೇಕೆ?!!!ಚಂದದ ಕವನ.ಅಭಿನಂದನೆಗಳು.

ಮನಸಿನಮನೆಯವನು said...

Modaleradu saalugalu chanda ive..
Aadare,
Ommomme kattalalli taa ontiyenisi jeeva maruguvaaga aa ontitanavanne madhura ekaantavagisi muda taralu manasu bettaleyaadare chenna embudu nanna abhipraaya..
Enanteero taavu..

ಮನಸು said...

ತುಂಬ ಚೆನ್ನಾಗಿದೆ, ಮನಸಿಗೆ ಯಾವುದೇ ಲಗಾಮಿಲ್ಲ ಹುಚ್ಚೆದ್ದು ಯೋಚಿಸುತ್ತೆ... ಬಹಳಷ್ಟು ಶ್ರೀಮಂತಿಕೆಯನ್ನು ಕೊಡುತ್ತೆ ಹಾಗೆ ಬಡತನದಲ್ಲೂ ತೇಲಾಡಿಸುತ್ತೆ...

ಚಿತ್ರಾ said...
This comment has been removed by the author.
Ashok.V.Shetty, Kodlady said...

Guru sir,

Nice lines....sundara arthpurna saalugalu...Very Nice....

ಚಿತ್ರಾ said...

ಗುರು ,

ಸೊಗಸಾದ ಸಾಲುಗಳು
"ಅಚ್ಚೊತ್ತಿ ಹೋಗು, ಬಚ್ಚಿಡದೆ ಎಲ್ಲ
ಮತ್ತೆರಗಿ ಬರದೆ ಕನಸೇ.."

ವಾಹ್ ! ರಾಶಿ ಚಂದ ಇದ್ದು .

ಮುನ್ನುಡಿಯ ಜೊತೆ , ಕವನವನ್ನು ನೀಡುವ ಪರಿ ಇಷ್ಟವಾಯ್ತು !

HegdeG said...

Wah..! sundara kavana.

prabhamani nagaraja said...

ಪ್ರಾಸಬದ್ದವಾದ ಸು೦ದರ ಕವನ ಸರ್. ಅಭಿನ೦ದನೆಗಳು. ವಿಶಿಷ್ಟ ಕನಸುಗಳನ್ನು ಕಾಣುವ ನನ್ನ ಮಗಳು ಸುಶ್ಮಸಿ೦ಧುವಿನ ಬ್ಲಾಗ್ ಗೊಮ್ಮೆ ಭೇಟಿ ಕೊಡಿ.
http://mydreamwritings.blogspot.comhttp://kandenanondhukanasu.blogspot.com/
http://nanaganisidhdhu.blogspot.com/

MUNENDRA said...

WOW!>>

very nice emotions .....

Pradeep Rao said...

ತುಂಬಾ ಚೆನ್ನಾಗಿದೆ ಸಾರ್!

Geetha Nagendra said...

Hi Guru

Good one Guru ! Can see you growing
as a poet !

ಚುಕ್ಕಿಚಿತ್ತಾರ said...

ಸು೦ದರವಾಗಿದೆ ಕವಿತೆ..

sunaath said...

ಸೊಗಸಾದ ಕವನ.

shivu.k said...

ಗುರು ಸರ್,

ಮನಸ್ಸಿನ ಅತಂತ್ರದ ಬಗ್ಗೆ ನೀವು ಬರೆದ ಕವನ ತುಂಬಾ ಚೆನ್ನಾಗಿದೆ..

ಗಿರೀಶ್.ಎಸ್ said...

ಸೊಗಸಾಗಿದೆ :-)

avpg said...

beautiful poem , well written poem.

avpg said...

beautiful poem

Sushma Sindhu said...

@ ಗುರುಮೂರ್ತಿಯವರೇ,
ಕವನ ಇಷ್ಟವಾಯಿತು. ಅದರ ಮೊದಲಿರುವ ಸಾಲುಗಳು ಮನದಲ್ಲಿ ಅಚ್ಚೊತ್ತಿದವು :)

ಅನಿಕೇತನ ಸುನಿಲ್ said...

God one Guruji...Dil Manage more...

ಸುಧೇಶ್ ಶೆಟ್ಟಿ said...

chennagide guru sir... :)

neevu ardhadalli nillisida barahada maalikeyannu yaavaaga prarambisutteeri... kayta ideeni:)

ಸವಿಗನಸು said...

ಕವನ ಸೊಗಸಾಗಿದೆ....

Sinchana said...

ಕಗ್ಗತ್ತಲಲ್ಲಿ
ಬಂದೆನ್ನ ಕಾಡದಿರು ಕನಸೇ..
:)yaava bhayavillade hagalalu bantippe.. hagaluganasenabeedi..
beleva kanasenni.. manasenni..!

modala baari nimma blog nodtidini incharada sanchaara saagaradante sundravaagide vishaalavaagide.. Ishtavaaytu..!

Anonymous said...

kanasugalu, nenapugalu endu heege. hottilada hottali kaaduttave. ommome nagu, ommome kanniru surisuttade..... ivugala hidita saadisuvudu asaadhya... sundara kavana...

Sharada said...

ನಿಜ, ನಿಮ್ಮ ಈ ಕವನ, "ಹುಚ್ಚು ಖೋಡಿ ಮನಸು..." ಭಾವಗೀತೆಯ ನೆನಪನ್ನು ತರಿಸುತ್ತದೆ. ಭಾವನಾತ್ಮಕವಾಗಿದೆ!

By the way, the heading "ಇಂಚರದಲ್ಲಿ ವೈವಿದ್ಯತೆ" should have been "ಇಂಚರದಲ್ಲಿ ವೈವಿಧ್ಯತೆ"

namitha said...

u wrote very well about manasu...very nice...:)

Guruprasad . Sringeri said...

wow... super Agide sir...

Nisha said...

Thumba Chandavada padagalu, Bhavanegalige Bogaseya prthi nidutide....
Nimma baraha egea barali endu ashisuta...
Nava Vasanthada hagu Ugadiya Sambramada Shubhashyagalu...

Inti.,
Nisha

prasanna said...

OBBA OLLEYA RESEARCHER KOODA OBBA SUNDARA KAVI AGABALLARU EMBUVUDAKKE NEEVE JEEVANTHA SAAKHSI..HATS OFF SIR.