ನೆನಪಿನ ಭಾವನೆಗಳೇ ಹಾಗೆ, ಲಗಾಮಿಲ್ಲದ ಹುಚ್ಚು ಕುದುರೆಯಂತೆ, ಕೆಲವೊಮ್ಮೆ ಬದುಕನ್ನು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿಸಿ, ಮರುಘಳಿಗೆ ಶೈಶವ ನರಕದಲ್ಲಿ ಹೊರಳಾಡಿಸುತ್ತವೆ. ಸಿಹಿ ನೆನಪುಗಳೇ ಇರಲಿ, ಕಹಿ ನೆನಪುಗಳೇ ಇರಲಿ, ಕನಸಾಗಿ ಬಂದು ಕಾಡುತ್ತವೆ. ಭಾವನೆಗಳ ಹುಚ್ಚೆಬ್ಬಿಸಿ, ಹೊತ್ತಲ್ಲದ ಹೊತ್ತಿನಲ್ಲಿ, ಬಿಚ್ಚಿಟ್ಟ ಭಾವನೆಗಳ ಬೆತ್ತಲಾಗಿಸುವ, ತನ್ಮೂಲಕ ಕಾಡುವ ಕನಸುಗಳಿಗೆ ಹೇಳುವುದು ಇಷ್ಟೇ...''ಎಲ್ಲವನ್ನೂ ಸ್ಮ್ರತಿ ಪಟಲದಲ್ಲಿ ಅಚ್ಚೊತ್ತಿ ಹೋಗಿಬಿಡು, ಬಿಟ್ಟೆ ಎನ್ನುವ ಆತಂಕ ಬೇಡ, ಬಚ್ಚಿಟ್ಟೆ ಎನ್ನುವ ಭಯ ಬೇಡ, ಆದರೆ ಮತ್ತೆ ಬಂದು ನನ್ನ ಕಾಡಬೇಡ '' ಎಂದು.
ಸುತ್ತಲು ಕವಿದ ಕತ್ತಲ ನೋಡಿ
ಬೆತ್ತಲಾಗದಿರು ಮನಸೇ
ಹೊತ್ತಲ್ಲದೊತ್ತಿನಲಿ, ಕಗ್ಗತ್ತಲಲ್ಲಿ
ಬಂದೆನ್ನ ಕಾಡದಿರು ಕನಸೇ..
ಹುಚ್ಚೆದ್ದ ಭಾವ, ಬೆಚ್ಚಾದ ಜೀವ
ಚಿತ್ತಾರದಂತ ಸೊಗಸೇ..
ಮಚ್ಚೆತ್ತಿ ಬಂದ, ಹಚ್ಚನೆಯ ಬೆಳಕು
ತುಂಬೆನ್ನ ಒಲವ ಬೊಗಸೆ...
ಚುಚ್ಚಾಟವೇಕೆ, ಕಚ್ಚಾಟವೇಕೆ
ಬಿಚ್ಚಿಟ್ಟ ಭಾವನೆಯ ಹದಕೆ
ಅಚ್ಚೊತ್ತಿ ಹೋಗು, ಬಚ್ಚಿಡದೆ ಎಲ್ಲ
ಮತ್ತೆರಗಿ ಬರದೆ ಕನಸೇ..
33 comments:
ಹುಚ್ಚುಕೋಡಿ ಮನಸಿನ ಕವನ ಚೆನ್ನಾಗಿದೆ ಸರ್.......
Dear Guru Sir,
Yes, your words in the poem are true. It happens in every ones life. Good exhibition of feelings.
ಸುಂದರ ಮುನ್ನುಡಿಯ ಜೊತೆಗೆ ಚೆಂದದ ಕವನ.
ಭಾವನೆಗಳನ್ನು ಕಲಕುವ ಕನಸು,
ಕನಸಿನಿಂದ ತಪ್ಪಿಸಿಕೊಳ್ಳಲಾರದ ಮನಸು,
ಕನಸು ಮನಸುಗಳ ನಡುವೆ ನಗುವ,ನಲುಗುವ ಬದುಕು..
ಚಂದದ ಭಾವಾರ್ಥದ ಕವನಕ್ಕೆ ಅಭಿನಂದನೆಗಳು.
hey est chanda barityo....
ವಾವ್..ಭಾವಗಾನದಂತಹ ಕವನ..ಚೆನ್ನಾಗಿದೆ ಗುರು
ಗುರು ಸರ್;ಈ ಕನಸುಗಳು ಮತ್ತೆ ಮತ್ತೆ ಬಂದು ಮನಸ್ಸನ್ನು ಕಾಡಿಸಿ,ಪೀಡಿಸಿ,ಘಾಸಿ ಗೊಳಿಸುವುದೇಕೆ?!!!ಚಂದದ ಕವನ.ಅಭಿನಂದನೆಗಳು.
Modaleradu saalugalu chanda ive..
Aadare,
Ommomme kattalalli taa ontiyenisi jeeva maruguvaaga aa ontitanavanne madhura ekaantavagisi muda taralu manasu bettaleyaadare chenna embudu nanna abhipraaya..
Enanteero taavu..
ತುಂಬ ಚೆನ್ನಾಗಿದೆ, ಮನಸಿಗೆ ಯಾವುದೇ ಲಗಾಮಿಲ್ಲ ಹುಚ್ಚೆದ್ದು ಯೋಚಿಸುತ್ತೆ... ಬಹಳಷ್ಟು ಶ್ರೀಮಂತಿಕೆಯನ್ನು ಕೊಡುತ್ತೆ ಹಾಗೆ ಬಡತನದಲ್ಲೂ ತೇಲಾಡಿಸುತ್ತೆ...
Guru sir,
Nice lines....sundara arthpurna saalugalu...Very Nice....
ಗುರು ,
ಸೊಗಸಾದ ಸಾಲುಗಳು
"ಅಚ್ಚೊತ್ತಿ ಹೋಗು, ಬಚ್ಚಿಡದೆ ಎಲ್ಲ
ಮತ್ತೆರಗಿ ಬರದೆ ಕನಸೇ.."
ವಾಹ್ ! ರಾಶಿ ಚಂದ ಇದ್ದು .
ಮುನ್ನುಡಿಯ ಜೊತೆ , ಕವನವನ್ನು ನೀಡುವ ಪರಿ ಇಷ್ಟವಾಯ್ತು !
Wah..! sundara kavana.
ಪ್ರಾಸಬದ್ದವಾದ ಸು೦ದರ ಕವನ ಸರ್. ಅಭಿನ೦ದನೆಗಳು. ವಿಶಿಷ್ಟ ಕನಸುಗಳನ್ನು ಕಾಣುವ ನನ್ನ ಮಗಳು ಸುಶ್ಮಸಿ೦ಧುವಿನ ಬ್ಲಾಗ್ ಗೊಮ್ಮೆ ಭೇಟಿ ಕೊಡಿ.
http://mydreamwritings.blogspot.comhttp://kandenanondhukanasu.blogspot.com/
http://nanaganisidhdhu.blogspot.com/
WOW!>>
very nice emotions .....
ತುಂಬಾ ಚೆನ್ನಾಗಿದೆ ಸಾರ್!
Hi Guru
Good one Guru ! Can see you growing
as a poet !
ಸು೦ದರವಾಗಿದೆ ಕವಿತೆ..
ಸೊಗಸಾದ ಕವನ.
ಗುರು ಸರ್,
ಮನಸ್ಸಿನ ಅತಂತ್ರದ ಬಗ್ಗೆ ನೀವು ಬರೆದ ಕವನ ತುಂಬಾ ಚೆನ್ನಾಗಿದೆ..
ಸೊಗಸಾಗಿದೆ :-)
beautiful poem , well written poem.
beautiful poem
@ ಗುರುಮೂರ್ತಿಯವರೇ,
ಕವನ ಇಷ್ಟವಾಯಿತು. ಅದರ ಮೊದಲಿರುವ ಸಾಲುಗಳು ಮನದಲ್ಲಿ ಅಚ್ಚೊತ್ತಿದವು :)
God one Guruji...Dil Manage more...
chennagide guru sir... :)
neevu ardhadalli nillisida barahada maalikeyannu yaavaaga prarambisutteeri... kayta ideeni:)
ಕವನ ಸೊಗಸಾಗಿದೆ....
ಕಗ್ಗತ್ತಲಲ್ಲಿ
ಬಂದೆನ್ನ ಕಾಡದಿರು ಕನಸೇ..
:)yaava bhayavillade hagalalu bantippe.. hagaluganasenabeedi..
beleva kanasenni.. manasenni..!
modala baari nimma blog nodtidini incharada sanchaara saagaradante sundravaagide vishaalavaagide.. Ishtavaaytu..!
kanasugalu, nenapugalu endu heege. hottilada hottali kaaduttave. ommome nagu, ommome kanniru surisuttade..... ivugala hidita saadisuvudu asaadhya... sundara kavana...
ನಿಜ, ನಿಮ್ಮ ಈ ಕವನ, "ಹುಚ್ಚು ಖೋಡಿ ಮನಸು..." ಭಾವಗೀತೆಯ ನೆನಪನ್ನು ತರಿಸುತ್ತದೆ. ಭಾವನಾತ್ಮಕವಾಗಿದೆ!
By the way, the heading "ಇಂಚರದಲ್ಲಿ ವೈವಿದ್ಯತೆ" should have been "ಇಂಚರದಲ್ಲಿ ವೈವಿಧ್ಯತೆ"
u wrote very well about manasu...very nice...:)
wow... super Agide sir...
Thumba Chandavada padagalu, Bhavanegalige Bogaseya prthi nidutide....
Nimma baraha egea barali endu ashisuta...
Nava Vasanthada hagu Ugadiya Sambramada Shubhashyagalu...
Inti.,
Nisha
OBBA OLLEYA RESEARCHER KOODA OBBA SUNDARA KAVI AGABALLARU EMBUVUDAKKE NEEVE JEEVANTHA SAAKHSI..HATS OFF SIR.
Post a Comment