Thursday, October 14, 2010

ಬಚ್ಚಿಡದೆ ಬಿಚ್ಚಿಟ್ಟಿಹೆ..

ಪ್ರೀತಿ ಎಲ್ಲಿ ಯಾವಾಗ ಹುಟ್ಟುತ್ತದೋ ಬಲ್ಲವರು ಯಾರು. ಹರೆಯದ ಮನಸುಗಳ ಮುಗ್ಧ ಪ್ರೀತಿ, ಬದುಕಿನ ಸುಂದರ ಕ್ಷಣಗಳಲ್ಲೊಂದು. ಇಲ್ಲಿ ಪ್ರೇಮಿಕೆಯ ಪ್ರೇಮದಲ್ಲಿ ಶರಣಾದ ಪ್ರೇಮಿ, ತನ್ನ ಪ್ರಿಯತಮೆಯ ಸೌಂದರ್ಯದ ಅನಾವರಣ ಮಾಡುತ್ತಿದ್ದಾನೆ. ಆತ ಅವಳನ್ನು ಹೊಗಳುತ್ತಿಲ್ಲ ಬದಲಿಗೆ ಅವಳ ಸ್ನಿಗ್ಧ ಸೌಂದರ್ಯಕೆ ಸಾಕ್ಷಿಯಾಗುತ್ತಿದ್ದಾನೆ. ಆತನಿಗೆ ಅವಳ ಸೌಜನ್ಯ, ಸಲ್ಲಾಪ, ಸವಿಗನಸು ಕಾಣುವಂತೆ ಮಾಡಿದೆ. ಪ್ರೇಮದ ಮತ್ತಿನಲ್ಲಿ ಬಾಯಾರಿಕೆ ಆಗಿದೆ. ಇದಕ್ಕೆ ನೀರು ಪರಿಹಾರವಲ್ಲ. ಪ್ರೇಮಿಕೆಯ ಅಧರದ ಪಾನಕ್ಕೆ ಆತ ಕಾದಿದ್ದಾನೆ. ಅದೊಂದು ನಿಷ್ಕಲ್ಮಶ: ಪ್ರೀತಿ. ಕಾಮಕ್ಕೆ ಅಲ್ಲಿ ಜಾಗವೇ ಇಲ್ಲ. ತನ್ನ ಬದುಕಿನ ಎಲ್ಲ ಸತ್ಯಗಳನ್ನು, ರಹಸ್ಯಗಳನ್ನು ಬಚ್ಚಿಡದೆ ಆತ ಬಿಚ್ಚಿಟ್ಟಿದ್ದಾನೆ. ದೂರದಲ್ಲೆಲ್ಲೋ ಮಾಮರದಲಿ ಆತನಿಗೆ ಕೋಗಿಲೆಗಳ ಸದ್ದು ಕೇಳುತ್ತಿದೆ. ಹೌದು, ಸಂಗಾತಿಯ ಸಂಪ್ರೀತಿಗೆ ವಸಂತ ಕಾಲ ಸಜ್ಜಾಗಿದೆ. ಆ ಮೋಹಕ ಘಳಿಗೆಗೆ ಆಕೆಯ ಸೆಳೆಯಲು ಮದನನ ಮೋಹಕ ಬಾಣವನ್ನೇ ಅವಳಿಗೆ ಎಸೆದಿದ್ದಾನೆ. ಗೋಪಿಕೆಯರ ಆರಾದ್ಯ ದೈವ ಗೋಪಿನಂದನ ಕೊಳಲ ನಾದಕ್ಕೆ ಮೋಹಕ ಮುತ್ತಿನ ನೆನಪು ಆತನಿಗೆ ಕಾಡಿದೆ. ಇದು ಕೇವಲ ಪ್ರೇಮವೇ? ಎರಡು ಮನಸುಗಳ, ಎರಡು ದೇಹಗಳ,ಅಮರ ಪ್ರೇಮ....


ನವಯವ್ವನ, ನಳನಳಿಸುವ, ನಲಿದಾಟದ ತರುಣ
ನಾಜೂಕಿನ, ನವೋ ನವದ, ನಿಗಿನಿಗಿಸುವ ತರುಣಿ
ನುಡಿದಂತೆ ನಾಲಿಗೆ, ನಡೆದಂತೆ ನಾಚಿಕೆ
ನಯನಗಳು ನಿಂತಲ್ಲಿ ನಿಲ್ಲದಿರೆ, ನೋಟಕೆ

ಸಂಗಾತಿಯೇ, ಸಂಪ್ರೀತಿಯೇ, ಸೌಮ್ಯೋಕ್ತಿಯ ಸೌಧ 
ಸೌಜನ್ಯದಿ, ಸಲಹುತಿರೆ, ಸುಶ್ರಾವ್ಯದ ನಾದ
ಸುದಿನವಿದು, ಸಜನಿ ನಿನಗೆ, ಸುಕುಮಾರನ ಸುಂದರಿ
ಸಲ್ಲಾಪದಿ, ಸವಿಗನಸಿದೆ, ಸೌಂದರ್ಯವ ಸವರಿ

ಬಳಲಿಕೆಯು, ಬಾಯಾರಿದೆ, ಬಳಿಗೆ ಬಾರೆ ಮಯೂರಿ
ಬೆದರದಿರು, ಬಳಿಯಲಿರು, ಬಿಡದೆ ನನ್ನ ನಾರಿ
ಬಚ್ಚಿಡದೆ ಬಿಚ್ಚಿಟ್ಟಿಹೆ, ಬದುಕಿನ ಬಟ್ಟಲ ಒಳಗೆ
ಬಂಗಾರಿಯೇ, ಬಿನ್ನಾಣವೇ, ಬದುಕಿನ ಘಳಿಗೆ 

ಮಾಮರದಲಿ ಸದ್ದಾಗಿದೆ, ಮರೆಮಾಚಿದೆ ಮೌನ
ಮಾಟಗಾರ, ಮಾತಿನಲ್ಲೇ, ಮಾರನ ಮೈ ಬಾಣ
ಮುದ್ದಾಡುವೆ ಮೆಲ್ಲನೆ, ಮೆಲುನಗೆಯಲಿ ಮೆತ್ತಗೆ
ಮೋಹನ ಮುರಳಿಯ ನಾದ, ಮೋಹಕತೆ ಮುತ್ತಿಗೆ

96 comments:

Keshav Kulkarni said...

ಚನ್ನಾಗಿದೆ.

ಸಾಗರದಾಚೆಯ ಇಂಚರ said...

Keshav Sir

thank you

bartaa iri

Dr.D.T.krishna Murthy. said...

ಗುರು ಸರ್;ಕವನ ಸೊಗಸಾಗಿ ಮೂಡಿ ಬಂದಿದೆ.ಪ್ರೀತಿಯ ಅಭಿವ್ಯಕ್ತಿ ಸುಂದರ ವಾಗಿದೆ.ತುಂಬಾ ಇಷ್ಟವಾಯಿತು.

shivu.k said...

sir,

premada kavana chennagide...

yogish bhat said...

ಗುರುಅವರೇ, ಬಹಳ ಸು೦ದರವಾದ ಕವನ. ಸೌಧ ಹಾಗೂ ಘಳಿಗೆ ಇವೆರಡು ಪದಗಳನ್ನು ಸರಳಗೊಳಿಸಿದರೆ (ತದ್ಭವವನ್ನು ಬಳಸಿ) ಚೆನ್ನ ಎನ್ನುವದು ನನ್ನ ಖಾಸಗಿ ಅಭಿಪ್ರಾಯ. ಇನ್ನಷ್ಟು ಕವನ ಮತ್ತು ಬರಹಗಳ ನಿರೀಕ್ಷೆಯಲ್ಲಿ. ಇ೦ತು ನಿಮ್ಮವ ಯೋಗೀಶ್ ಭಟ್

Rashmi Hegde said...

ರಾಶಿ ಚೊಲೋ ಇದ್ದು ...ಗುರು ಅಣ್ಣ.......

PARAANJAPE K.N. said...

ಚೆನ್ನಾಗಿದೆ ಗುರುವೇ !! ನವ ಯೌವ್ವನ ನಳನಳಿಸುತ್ತಿರಲಿ, ಇ೦ತಹ ಕವನಗಳು ಇನ್ನಷ್ಟು ಬರಲಿ.

ನನ್ನೊಳಗಿನ ಕನಸು.... said...

ಮಾಮರದಲಿ ಸದ್ದಾಗಿದೆ, ಮರೆಮಾಚಿದೆ ಮೌನ
ಮಾಟಗಾರ, ಮಾತಿನಲ್ಲೇ, ಮಾರನ ಮೈ ಬಾಣ
ಮುದ್ದಾಡುವೆ ಮೆಲ್ಲನೆ, ಮೆಲುನಗೆಯಲಿ ಮೆತ್ತಗೆ
ಮೋಹನ ಮುರಳಿಯ ನಾದ, ಮೋಹಕತೆ ಮುತ್ತಿಗೆ
very nice lines.

sunaath said...

‘ನ,ಸ,ಬ,ಮ’ ಅಕ್ಷರಗಳಿಂದಲೇ ಪ್ರಾರಂಭವಾಗುವ ನುಡಿಗಳ ಚಾತುರ್ಯ ಹಾಗು ಸಮರ್ಪಕವಾದ ಭಾವನೆ, ಇವುಗಳನ್ನು ಜೊತೆಗೂಡಿಸಿ ಹೆಣೆದ ಗೀತೆ ತುಂಬ ಸೊಗಸಾಗಿದೆ!

shaanu said...

very nice.keep writing.

shaanu said...

very nice.keep writing.

"ನಾಗರಾಜ್ .ಕೆ" (NRK) said...

ಪ್ರೇಮ ಕವನ ಸುಂದರವಾಗಿದೆ
ಪ್ರತಿ ಪ್ಯಾರದಲ್ಲು ಸಾಲುಗಳು ಒಂದೇ ಅಕ್ಷರದಿಂದ ಶುರುವಾಗಿದೆ ಮತ್ತು ಆ ಅಕ್ಷರದ್ದೆ ಅಲ್ಲಿ ಮೆರವಣಿಗೆ, ವಾವ್ .
ಪ್ರೇಮ ಝರಿ ಹರಿಯುತಿರಲಿ . . .
'ಚಂದ್ರಶೇಕರ್ ಆಲೂರ್' ಒಂದು ಕಡೆ ಬರೀತಾರೆ " ದೇಹದ ಹಂಗಿಲ್ಲದ ಪ್ರೇಮ, ಆತ್ಮದ ಹಂಗಿಲ್ಲದ ಕಾಮ. ಎರಡು ಅಪೂರ್ಣವೇ . . . "

ಮನಸು said...

tumba chennagide kavana, preetiye haage ...nice one

ಚಿತ್ರಾ said...

ಆಹಾಹ ... ಗುರುವೇ , ಶರಣಾದೆ .
ಸುಂದರ ಪ್ರೇಮಕವಿತೆಗೆ ಚಂದದ ನಿರೂಪಣೆಯ ಚೌಕಟ್ಟು ! ಇಷ್ಟ ಆತು.
ಈಗಷ್ಟೇ ದಿಲೀಪರ ಮಧುರ ಭಾವದ ಕವನ ಓದಿದೆ, ಈಗ ನಿಂದು ! ಯಾಕೋ ... ಹೆಚ್ಚಿನ ಬ್ಲಾಗುಗಳಲ್ಲಿ ಪ್ರೀತಿಯ ಕಂಪು ಸುಳಿದಾಡುತ್ತಿದೆ !

Shashi jois said...

ಗುರು ಪ್ರೇಮದ ಕವನ ಸೊಗಸಾಗಿದೆ..

nimmolagobba said...

ಗುರು ಸರ್ ನಿಮ್ಮ ಕವನ ಚೆನ್ನಾಗಿದೆ. ಒಂದು ಅನುಮಾನ ಈ ಕವಿತೆ ಮದುವೆಗೆ ಮೊದಲು ಬರೆದದ್ದಾ ಅಥವಾ ನಂತರವ !!! [ಸಾರಿ ತಮಾಷೆಗೆ ಕೇಳಿದೆ]ಪ್ರೀತಿಯ ಲಹರಿ ಸುಂದರ ನದಿಯಂತೆ ಹರಿದು ಸಾಗಿದೆ.ಪದಗಳ ಲಾಸ್ಯ ಆಗಸದಲ್ಲಿ ಮೂಡಿದ ಮಿಂಚಿನಂತಿದೆ.ಸೂಪರ್ ಧನ್ಯವಾದಗಳು.

- ಕತ್ತಲೆ ಮನೆ... said...

sogasaagide..

ಅನಂತರಾಜ್ said...

ಪ್ರೀತಿ-ಯೌವ್ವನ-ನಳನಳಿಕೆಯಲ್ಲಿ-ಕಾವ್ಯೋದ್ಭವ-ನ,ಸ,ಬ,ಮ-ಗಳಿ೦ದ ಮುನ್ನುಡಿಸಿ-ಹೊಸಪ್ರಯೋಗ-ಚೆ೦ದವಿದೆ-ಗುರು-ಸರ್.


ಶುಭಾಶಯಗಳು
ಅನ೦ತ್

ಸಾಗರದಾಚೆಯ ಇಂಚರ said...

ಕೃಷ್ಣಮೂರ್ತಿ ಸರ್
ನಿಮ್ಮ ಆಶೀರ್ವಾದ ಹೀಗೆಯೇ ಇದ್ರೆ ಇನ್ನು ಹೆಚ್ಚಿನ ಕವನ ಬರತ್ತೆ
ಸದಾ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಶಿವೂ ಸರ್
ನಿಮ್ಮ ಹಾರೈಕೆಗೆ ವಂದನೆಗಳು
ಇದೊಂದು ಹೊಸ ಪ್ರಯೋಗ

ಸಾಗರದಾಚೆಯ ಇಂಚರ said...

ಯೋಗಿಶ್ ಸರ್
ನೀವು ಹೇಳಿದ್ದು ನಿಜಾ,
ಕೆಲವೊಮ್ಮೆ ಕವನ ಬರೆಯುವಾಗ ಸರಿಯಾದ ಪದಗಳು ಸಿಗದೆ ಒದ್ದಾಡಿದ ಪ್ರಸಂಗಗಳು ಇವೆ
ಇದೊಂದು ಹೊಸ ಪ್ರಯೋಗ
ನಿಮ್ಮ ತಿದ್ದುವಿಕೆ ಹೀಗೆಯೇ ಇರಲಿ
ಬರೆಯಲು ಇಂಥಹ ಮಾತುಗಳೇ ಸ್ಪೂರ್ತಿ

ಸಾಗರದಾಚೆಯ ಇಂಚರ said...

ರಶ್ಮಿ
ಥ್ಯಾಂಕ್ಸ್
ಬರ್ತಾ ಇರು

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್

ಹೊಸತನ ಹೊಸಕ್ಷಣ ಹೊಸದು ನಿಜ
ಹೊಸದರಲಿ ಎಲ್ಲವೂ ಸಹಜ
ಅಲ್ಲವೇ
ನವೋಲ್ಲಾಸ ನಲಿಯುತ್ತಿರಲಿ
ನೀವು ಸದಾ ಬರುತ್ತಿರಲಿ

ಸಾಗರದಾಚೆಯ ಇಂಚರ said...

ನನ್ನೊಳಗಿನ ಕನಸು ಸರ್

ನಿಮ್ಮ ಮಾತುಗಳಿಗೆ ಚಿರ ಋಣಿ

ಬರುತ್ತಿರಿ

ಸಾಗರದಾಚೆಯ ಇಂಚರ said...
This comment has been removed by the author.
ಸಾಗರದಾಚೆಯ ಇಂಚರ said...

ಸುನಾಥ್ ಸರ್

ನ ಸ ಬ ಮ ಗಳ ಉಪ್ಯೋಗಿಸುವಿಕೆಯೇ ಕವನದ ಜೀವಾಳ
ಕೆಲವೊಮ್ಮೆ ಪದಗಳೇ ದೊರಕದೆ ತಾಸುಗಟ್ಟಲೆ ಯೋಚಿಸಿದ್ದೇನೆ.
ನಿಮಗೆಲ್ಲ ಇಷ್ಟವಾಗಿದ್ದಕ್ಕೆ ಬರೆದಿದ್ದಕ್ಕೂ ಸಾರ್ಥಕ

ಸಾಗರದಾಚೆಯ ಇಂಚರ said...

shaanu

ಮೊದಲಿಗೆ ಬ್ಲಾಗಿಗೆ ಸ್ವಾಗತ

ನಿಮ್ಮ ಬ್ಲಾಗ್ ನಲ್ಲಿ ಏನಾದರೂ ಬರೆಯಿರಿ

ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

"ನಾಗರಾಜ್ .ಕೆ" (NRK)

ನಿಮ್ಮ ಮಾತುಗಳು ಬರೆಯಲು ಉತ್ತೆಜಿಸಿವೆ

ಪ್ರೇಮ ಕಾಮದ ಹಂಗಿಲ್ಲದೆ ಇದ್ದರೆ ಚೆನ್ನ

ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಮನಸು

ಹೌದು, ಪ್ರೀತಿ ಯಾವತ್ತೂ ಮಧುರ ನೆನಪು

ಸ್ಪೂರ್ತಿ ಹಾಗೂ ಚೈತನ್ಯ

ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಚಿತ್ರಾ
ಪ್ರೀತಿ ಬಗ್ಗೆ ಬರದ್ರೆ ಹಿಂಗೆ, ವಿರಹದ ಬಗ್ಗೆ ಬರದ್ರೆ ಏನು ವಿರಹ ಅಂತ ಹೇಳ್ತಾ?

ಬರೆಯಲೇ ವಿಷಯವೇ ಇಲ್ದೆ ಹೋದ ಹಂಗೆ ಆಗ್ತು :)

ಇಷ್ಟವಾಗಿದ್ದಕ್ಕೆ ಧನ್ಯವಾದಗಳು

ನ ಸ ಬ ಮ ವನ್ನು ಉಪಯೋಗಿಸಿ ಬರದ್ದಿ, ಹೊಸ ಪ್ರಯೋಗ

ಹಿಂಗೆ ಬರ್ತಾ ಇರು

ಸಾಗರದಾಚೆಯ ಇಂಚರ said...

Shashi jois

ಥ್ಯಾಂಕ್ಸ್

ಬರ್ತಾ ಇರಿ

ಸಾಗರದಾಚೆಯ ಇಂಚರ said...

nimmolagobba ಬಾಲು ಸರ್

ಕವಿತೆ ಮೊನ್ನೆ ಬರೆದದ್ದು, ಮದುವೆಯಾಗಿ ೩ ವರ್ಷ ಆಗ್ತಾ ಬಂತು :)

ಸಂಗಾತಿಯ ಜೊತೆಗಿನ ಮಧುರ ಕ್ಷಣಗಳು ಸದಾ ಹೊಸತಲ್ಲವೇ..

ಬರುತ್ತಿರಿ

ಸಾಗರದಾಚೆಯ ಇಂಚರ said...

- ಕತ್ತಲೆ ಮನೆ...
ಧನ್ಯವಾದಗಳು

ಬರುತ್ತಿರಿ

ಸಾಗರದಾಚೆಯ ಇಂಚರ said...

ಅನಂತರಾಜ್ ಸರ್

ಆ ಶಬ್ದಗಳ ಪ್ರಯೋಗ ಮಾಡಲೇಬೇಕೆಂದು ನಿರ್ಧರಿಸಿ ಬರೆದ ಕವನ

ಇಷ್ಟವಾಗಿದ್ದಕ್ಕೆ ನಂಗೆ ಸಂತೋಷ

ಆಶೀರ್ವಾದ ಹೀಗೆಯೇ ಇರಲಿ

ಪ್ರಗತಿ ಹೆಗಡೆ said...

ಗುರು ಅವರೇ, ತುಂಬಾ ಸುಂದರವಾಗಿದೆ ನಿಮ್ಮ ಕವನ... ಹೊಸ ಶೈಲಿ ಇಷ್ಟವಾಯಿತು..

Dileep Hegde said...

ಅತೀ ಸುಂದರ ಕವನ..ಇಷ್ಟವಾಯ್ತು..

Bhavana ಭಾವನ Rao said...

very very nice prose and poem.. Cheers..

Subrahmanya said...

ಬಚ್ಚಿಟ್ಟುಕೊಳ್ಳದೆ ಕವನದ ಮೂಲಕ ತೆರೆದಿಟ್ಟಿದ್ದು ಸೊಗಸಾಗಿದೆ. ಒಳ್ಳೆಯ ಭಾವ ಸ್ಫುರಣ.

Anonymous said...

ಗುರು...ಪ್ರೀತಿ ಅನಾದಿ ಕಾಲದಿಂದಲೂ ಇದ್ದಿದ್ದೆ.. ಬೇರೆ ಬೇರೆ ತರಹದ ಅಭಿವ್ಯಕ್ತಿ ಅದರದ್ದು!! ನಿನ್ನ ಕವನದಲ್ಲಿನ ಪದಗಳ 'ಆಟ' ಖುಷಿ ಆತು!! ಹಿಂಗೆ ಬರೀತಾ ಇರು!!

ಶಿವಶಂಕರ ವಿಷ್ಣು ಯಳವತ್ತಿ said...

ಕವನದ ಸಂಧರ್ಭವನ್ನು ಕವನಕ್ಕೆ ತುಂಬಾ ಚೆನ್ನಾಗಿ ಹೊಂದಿಸಿದ್ದೀರಿ. ಚನ್ನಾಗಿದೆ.

-ಯಳವತ್ತಿ
www.shivagadag.blogspot.com

ashokkodlady said...

ಗುರು ಸರ್,

ಹೊಸ ರೀತಿಯ, ಸುಂದರ ಪ್ರೇಮ ಕವನ, ಪ್ರತಿಯೊಂದು ಸಾಲುಗಳು ಸುಂದರವಾಗಿವೆ, ಧನ್ಯವಾದಗಳು.

kanasu said...

kavana sogasaagide :)

ಅಪ್ಪ-ಅಮ್ಮ(Appa-Amma) said...

ಗುರು,

ಅಕ್ಷರಗಳೊಂದಿಗೆ ಆಡಿದ ಆಟ ಸೊಗಸಾಗಿದೆ.
ಕವನ ಇಷ್ಟವಾಯ್ತು...

ಸಾಗರದಾಚೆಯ ಇಂಚರ said...

ಪ್ರಗತಿ ಹೆಗಡೆ ಯವರೇ
ನಿಮ್ಮ ಹಾರೈಕೆ ಹೀಗೆಯೇ ಇರಲಿ
ಖಂಡಿತ ಹೊಸ ಹೊಸ ಪ್ರಯತ್ನ ಮಾಡುತ್ತೇನೆ

ಸಾಗರದಾಚೆಯ ಇಂಚರ said...

Dileep Hegde ಯವರೇ

ನಿಮ್ಮ ಪ್ರೀತಿ ಸದಾ ಇರಲಿ
ಬರುತ್ತಿರಿ

ಸಾಗರದಾಚೆಯ ಇಂಚರ said...

Bhavana ಭಾವನ Rao

ಅಭಿಪ್ರಾಯಕ್ಕೆ ಥ್ಯಾಂಕ್ಸ್

ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

Subrahmanya ಸರ್

ಬಚ್ಚಿಡದೆ ಇರುವುದು ಪ್ರೇಮವೊಂದೇ ಅಲ್ಲವೇ?

ಪ್ರೇಮದ ಮಧುರ ಕ್ಷಣಗಳು ಬದುಕಿಗೆ ಪೂರಕ ಹಾಗೂ ಪ್ರೇರಕ

ಸಾಗರದಾಚೆಯ ಇಂಚರ said...

Sumana ಮೇಡಂ

ನಿಮಗೆ ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್

ಹೌದು, ಪ್ರೇಮ ಅನಾದಿ ಕಾಲದಿಂದಲೂ ಬರವಣಿಗೆಯ ವಸ್ತು

ಅದನ್ನು ಹಲವಾರು ಜನ ಹಲವಾರು ರೀತಿಯಲ್ಲಿ ಅರ್ಥೈಸಿದ್ದಾರೆ.
\ನಮ್ಮದು ಚಿಕ್ಕ ಪ್ರಯತ್ನ

ಸಾಗರದಾಚೆಯ ಇಂಚರ said...

ಶಿವಶಂಕರ ವಿಷ್ಣು ಯಳವತ್ತಿ ಸರ್

ನಿಮಗೆ ಇಷ್ಟವಾಗಿದ್ದಕ್ಕೆ ನಂಗೆ ಸಂತಸ

ಹೀಗೆಯೇ ಪ್ರೋತ್ಸಾಹ ಇರಲಿ

ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ashokkodlady

ನಿಮ್ಮ ಪ್ರೀತಿ ಆಶಿರ್ವಾದ ಸದಾ ಇರಲಿ

ಸಾಗರದಾಚೆಯ ಇಂಚರ said...

kanasu

ಥ್ಯಾಂಕ್ಸ್

ಬರುತ್ತಿರಿ

ಸಾಗರದಾಚೆಯ ಇಂಚರ said...

ಅಪ್ಪ-ಅಮ್ಮ(Appa-Amma)

ಅಕ್ಷರಗಳ ಆಟವೇ ಕವನಕ್ಕೆ ಪ್ರೇರಣೆ

ಇಷ್ಟವಾದರೆ ಬರೆದಿದ್ದಕ್ಕೂ ಸಾರ್ಥಕ

ಗುಬ್ಬಚ್ಚಿ ಸತೀಶ್ said...

prema preethiye hige.

ಸಾಗರದಾಚೆಯ ಇಂಚರ said...

ಗುಬ್ಬಚ್ಚಿ ಸತೀಶ್

ನಿಮ್ಮ ಮಾತು ನಿಜ

ಪ್ರೀತಿಯ ಗಮ್ಮತ್ತೆ ಹಾಗೆ

ದಿನಕರ ಮೊಗೇರ said...

tumbaa chennaagide sir.... really nice...

ಸಾಗರದಾಚೆಯ ಇಂಚರ said...

ದಿನಕರ ಮೊಗೇರ ಸರ್

ತುಂಬಾ ಧನ್ಯವಾದ ಕಾಮೆಂಟಿಸಿದ್ದಕ್ಕೆ

ಬರುತ್ತಿರಿ

ArkalgudJayakumar said...

@ Gautham Sir, Wish u Happy Dussera ಸ್ವೀಡನ್ ನಲ್ಲಿ ಹಿಂದೂಗಳು ದಸರಾ ಹೇಗೆ ಆಚರಿಸುತ್ತಾರೆ? ನೀವು ಹೇಗೆ ಆಚರಿಸಿದಿರಿ? ಬ್ಲಾಗ್ ನಲ್ಲಿ ಬರೆಯಬಹುದಲ್ಲ? ಅಂದ ಹಾಗೆ '...ಮೆಲುದನಿಯಲಿ ಮೆತ್ತಗೆ ಮೋಹನ ಮುರುಳಿಯ ನಾದ, ಮೋಹಕತೆ ಮುತ್ತಿಗೆ'ಸುಂದರ ಭಾವನೆಗಳ ಅನಾವರಣವಾಗಿದೆ.

ಸಾಗರದಾಚೆಯ ಇಂಚರ said...

ಜಯಕುಮಾರ್ ಸರ್

ನಾನು ಗೌತಮ್ ಅಲ್ಲ, ಗುರು ಹಹಹಹ

ಖಂಡಿತ ಬರೀತೀನಿ ದಸರಾದ ಬಗ್ಗೆ

ಬರ್ತಾ ಇರಿ

ಮನಮುಕ್ತಾ said...

nice one.

Balu said...

ತುಂಬಾ ದಿನದ ನಂತರ ಬ್ಲಾಗ ಲೋಕ ಸುತ್ತಡ್ತಾ ಇದ್ದಿ. ಕವನ ಚನ್ನಾಗಿದ್ದು.

ಸತೀಶ್ ಗೌಡ said...

ಪ್ರೀತಿಯ ಜಲಪಾತ ತುಂಬಾ ಚನ್ನಾಗಿ ಹರಿಯುತ್ತಿದೆ...

ತೇಜಸ್ವಿನಿ ಹೆಗಡೆ said...

ಕಾಕಾ ಅವರು ಹೇಳಿದಂತೇ ಶಬ್ದಾಕ್ಷರಗಳ ಚಮತ್ಕಾರಗಳಿಂದ ಕೂಡಿದ ಕವನ. ಉತ್ತಮ ಪ್ರಯತ್ನ. :)

ಸಾಗರದಾಚೆಯ ಇಂಚರ said...

ಮನಮುಕ್ತಾ

thanks for the comments

ಸಾಗರದಾಚೆಯ ಇಂಚರ said...

Balu

thanks kano

barta iru

ಸಾಗರದಾಚೆಯ ಇಂಚರ said...

ಸತೀಶ್ ಗೌಡ

thank you sir

ಸಾಗರದಾಚೆಯ ಇಂಚರ said...

ತೇಜಸ್ವಿನಿ ಹೆಗಡೆ ಯವರೇ

ನಿಮ್ಮ ಹಾರೈಕೆ ಸದಾ ಇರಲಿ

ಇದೊಂದು ಹೊಸ ಪ್ರಯತ್ನ, ಮೆಚ್ಚಿದ್ದಕ್ಕೆ ಧನ್ಯವಾದಗಳು

AntharangadaMaathugalu said...

ಗುರು ಸಾರ್...
ಹೊಸ ಪ್ರಯೋಗ... ಉತ್ತಮ ಪದಗಳ ಜೋಡಣೆ... ತುಂಬಾ ಚೆನ್ನಾಗಿವೆ. ಇಷ್ಟವಾಯಿತು.

ಶ್ಯಾಮಲ

Manasa said...

NICE :)

ಸುಧೇಶ್ ಶೆಟ್ಟಿ said...

padhagaLondige aata aadutta kavanavannu chennagi barediddeera :)

SANTOSH MS said...

Guru Sir,

Nicely written and meaningful

ಜಲನಯನ said...

ಓಹ್..ಗುರು,,ಏನಿದು,,>??
ಎಲ್ಲಿತ್ತು ಈ ಭರಭರನೆ ಭರಾಟೆಯಂತಹ ಭ್ರಮೆ ಹುಟ್ಟಿಸೋ ಕವನ
ಗುರುವಲ್ಲಿ ಗುರಿಯಿಟ್ಟ ಗರಿಗೆದರಿದ ಗರಬಡಿಸಿ ಹೌಹಾರೋ ಕವನ
ವಾವ್..ವಾವ್...

PrashanthKannadaBlog said...

nice one Guru. I liked the choice of words to express the feeling.

ಕ್ಷಣ... ಚಿಂತನೆ... bhchandru said...

sir, n-kaara, s-kaara, b-kaara, m-kaara da padagalalli kavana chennaide.
snEhadinda,

ಪ್ರವೀಣ್ ಭಟ್ said...

Aha enta prayoga anna.. Adbhuta kavana. ista atu

prabhamani nagaraja said...

ಪದಲಾಲಿತ್ಯ, ಪ್ರಾಸಗಳಿ೦ದೊಡಗೂಡಿದ ಪ್ರೇಮ ನಿವೇದನೆ ಸು೦ದರವಾಗಿದೆ ಗುರು ಸರ್!

Venkatakrishna.K.K. said...

ಸುಂದರ ಸುಮಧುರ ಭಾವನೆಗಳ ಗುಚ್ಚ..

bhavana said...

tumba chennagide. sagaradache iruvavaru nimma manninalliruva nanna blognnoo inukabahudallave?

bhavana tunturu said...

tumba chennagide. saagaradache iruvavaru nimma manninalliruva nanna blogannoo inukabahudallve?

ಸಾಗರದಾಚೆಯ ಇಂಚರ said...

AntharangadaMaathugalu

ಹೀಗೆ ಬರುತ್ತಿರಿ

ನಿಮ್ಮ ಪ್ರೋತ್ಸಾಹ ಅಗತ್ಯ

ಸಾಗರದಾಚೆಯ ಇಂಚರ said...

Manasa

thanks

ಸಾಗರದಾಚೆಯ ಇಂಚರ said...

ಸುಧೇಶ್ ಶೆಟ್ಟಿ ಸರ್

ಧನ್ಯವಾದಗಳು

ಬರುತ್ತಿರಿ

ಸಾಗರದಾಚೆಯ ಇಂಚರ said...

SANTOSH MS

thank you

ಸಾಗರದಾಚೆಯ ಇಂಚರ said...

ಜಲನಯನ ಸರ್

ಏನಿದು ನಿಮ್ಮ ಮಾತುಗಳು ಕವನವಾಗಿ ಹರಿಯುತ್ತಿವೆ

ಬರುತ್ತಿರಿ

ಸಾಗರದಾಚೆಯ ಇಂಚರ said...

PrashanthKannadaBlog

ಬರ್ತಾ ಇರಿ

ಸಾಗರದಾಚೆಯ ಇಂಚರ said...

ಕ್ಷಣ... ಚಿಂತನೆ... bhchandru ಸರ್

ನಿಮ್ಮ ಪ್ರೋತ್ಸಾಹ ಸದಾ ಇರಲಿ

ಸಾಗರದಾಚೆಯ ಇಂಚರ said...

ಪ್ರವೀಣ್ ಭಟ್

thanks kano

ಸಾಗರದಾಚೆಯ ಇಂಚರ said...

prabhamani nagaraja

ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರಲಿ

ಸಾಗರದಾಚೆಯ ಇಂಚರ said...

Venkatakrishna.K.K. ಸರ್

ಬರುತ್ತಿರಿ

ಬರೆಯುತ್ತಿರುವೆ

ಸಾಗರದಾಚೆಯ ಇಂಚರ said...

bhavana

ನಿಮ್ಮ ಬ್ಲಾಗ್ ಸಿಗ್ತಾ ಇಲ್ಲ ಯಾಕೆ?

ಲಿಂಕ್ ಕಳಿಸುತ್ತಿರಾ

ಕವಿ ನಾಗರಾಜ್ said...

ಪ್ರತಿಕ್ರಿಯೆಗಳ ದೊಡ್ಡ ರೈಲೇ ಕವನ ಸೊಗಸಾಗಿದೆ, ಎಂದು ಸಾರಿದೆ.

ವಿ.ಆರ್.ಭಟ್ said...

ಚೆನ್ನಾಗಿದೆ, ಮುಂದುವರಿಯಲಿ ಕವಿಗಳ ಕಾವ್ಯರಥ

ಸಾಗರದಾಚೆಯ ಇಂಚರ said...

Kavi Nagaraaj,

thank you sir

ಸಾಗರದಾಚೆಯ ಇಂಚರ said...

V R Bhat sir

thank you

keep visiting

ಸೀತಾರಾಮ. ಕೆ. / SITARAM.K said...

ಪ್ರೀತಿಯ ಉತ್ಕಟತೆಯ ಕವನ. ಸುಜನಿ ಹೊಸ ಶಬ್ದ ನೋಡಿ ಕುಶಿಯಾಯಿತು.

ಕಲರವ said...

bacchidade bicchitta prema kaavya sundaravaagide sir.abhinandanegalu.

shwetha said...

nimma abhivyakti shakti bahala sogasu...

please visit my blog:
thunthurumanasinamaatu.blogspot.com

thank u