Monday, September 13, 2010

ಉರಿಸದಿರಲೆಂದೂ ನಿನ್ನ ಸಹನೆ...


ನೋವು ನಲಿವು ಬದುಕಿನ ಬಂಡಿಯ ಎರಡು ಚಕ್ರಗಳಿದ್ದಂತೆ. ನಲಿವೆಗೆ ನೂರೆಂಟು ಮಿತ್ರರು, ನೋವಿಗೆ ನೀನೊಬ್ಬನೇ ಮಿತ್ರ ಎಂಬ ಮಾತು ಅಕ್ಷರಶ: ಸತ್ಯ. ನೋವಿನಲ್ಲಿ ಜೊತೆಗೆ ಬರುವವರು ಮಾತ್ರ ನಿಜವಾದ ಮಿತ್ರರು. ಮನಸು ನೋವಿನಿಂದ ಆವ್ರತವಾದಾಗ, ಬದುಕು ಪಾತಾಳ ಸೇರಿದ ಅನುಭವ ಆಗುತ್ತದೆ. ಬದುಕಿನ ಬಗೆಗಿನ ಅಸಹನೆ ಎಂದಿಗೂ ನಿನ್ನ ''ಸಹನೆ'' ಯ ಕೆಣಕದಿರಲಿ. ನಿನ್ನ ನೋವುಗಳು ಕಲ್ಲ ಗೋಡೆಗೆ ಮಾತ್ರ ಕೇಳಿಸುತ್ತದೆ, ಅದನ್ನು ಅರಿತವರಿಗೆ  ಮಾತ್ರ ಅದರ ಅಗಾಧತೆ ಅರ್ಥವಾಗುತ್ತದೆ. ನೀನು ಒಲ್ಲೆ ಎಂದರೂ ವಿಶಾಲ ಬದುಕು ನಿನಗಾಗಿ ಕಾದಿದೆ, ಕಾಯುತಿದೆ, ಹೂವಿನಿಂದ ಪೊಕಳೆ ಉದುರಿತು ಎಂಬ ನೋವು ಬೇಡ, ಹೊಸ ಹೂವು ಅದೇ ಜಾಗದಿಂದ ಮೂಡುವುದು ಹಾಗೂ ಮೂಡಬೇಕು, ಅದೇ ಬದುಕು, ಅದೇ ಬಾಳು.

                                                                      ಚಿತ್ರ  ಕ್ರಪೆ: ಗೂಗಲ್ 

ನಿನ್ನ ನೋವುಗಳ ಮನದ ಭಾವಗಳ
ಆಗಸಕೆ ಹಾರಿಬಿಡು ನನ್ನ ಗೆಳತಿ
ಬೀಸೋ ಗಾಳಿಗೆ ಅದರ ವೇಗಕೆ
ಸುಟ್ಟು ಹೋಗಲಿ ಎಲ್ಲ , ಪ್ರೀತಿಯೊಡತಿ

ಸುತ್ತ ಹರಿಯುತಿದೆ ಆಳಕಿಳಿಯುತಿದೆ
ಭೂವ್ಯೋಮ ಪಾತಾಳ, ಎಲ್ಲ ಒಡನೆ
ಹಸಿವಿನ ಕಿಚ್ಚು, ಮೈಯ್ಯೊಳಗೆ ಹುಚ್ಚು
ಉರಿಸದಿರಲೆಂದೂ ನಿನ್ನ ಸಹನೆ
 
ಕಲ್ಲ ಗೋಡೆಯಲಿ, ಮೆಲ್ಲನುಸಿರುತಿರೆ
 ಬಲ್ಲ ಮನಸಿಗದು, ಕಬ್ಬಿಣದ ಕಡಲೆ
ಒಲ್ಲೆನೆಂದರೂ ಜೀವ, ಬಿಡಿಸಲಾಗದ ಭಾವ
ಇಲ್ಲೇ ಇರು ಎನ್ನುತಿದೆ ಮನದ ಪೊಕಳೆ

59 comments:

Creativity said...

ಬಹಳ ಅತ್ಹ್ಯುಥಮವಾದ ಕವನ. ಅಚ್ಚುಮೆಚ್ಚಿನ ಸಾಲುಗಳು. ತುಂಬಾ ಚೆನ್ನಾಗಿ ಬರದಿದ್ಹಿರಿ.

SANTOSH MS said...

Guru Sir,

Good concept. The image reflects the essence of the poem.

PARAANJAPE K.N. said...

ಬಹಳ ಚೆನ್ನಾಗಿದೆ ಕವನ, ಯಾಕೋ ಕವನ ಬರೀವಾಗ ಇತ್ತೀಚಿಗೆ ತೀರಾ ಭಾವುಕ ಆಗ್ತಾ ಇದೀರಿ, ಎನ್ಕಥೆ ?? , ಸ್ವಲ್ಪ ಹೇಳಿ ಗುರೂ

ರಾಘವೇಂದ್ರ ಹೆಗಡೆ said...

Nice..

ಮನಮುಕ್ತಾ said...

ನೋವಿನ ಮನೋಭಾವವ ಗಾಳಿಯಲಿ ತೇಲಿಬಿಟ್ಟು,
ನಗುವಿನಾ ಮೊಗವನ್ನು ಸಹನೆಯಲಿ ಹಿಡಿದಿಟ್ಟು,
ಮನವ ನಲಿವಿನಲೆಗಳಲಿ ನೆನೆಯಬಿಟ್ಟು..
ಜೀವನದ ನೆಮ್ಮದಿಗೆ ಸಹನೆಯೇ ಗುಟ್ಟು.

ಬಾಳಿನ ಬಗ್ಗೆ ಒಳ್ಳೆಯ ನುಡಿ.. ಚೆನ್ನಾಗಿದೆ.

balasubramanya said...

ಅರ್ಥವತ್ತಾಗಿದೆ. ಒಂದು ಒಳ್ಳೆಯ ಕವಿತೆ ಬರೆದಿದ್ದೀರ ,ಸಾರ್ .

ಅನಂತ್ ರಾಜ್ said...

ಅರ್ಥಗರ್ಭಿತ ಕವನ. ನಿಜ.. ನೋವು ಅರಿತವರಿಗೆ ಮಾತ್ರ ಅದರ ಅಗಾಧತೆ ಅರ್ಥ ಆಗುತ್ತದೆ. ಪೊಕಳೆ ಉದುರುವುದು ಇನ್ನೊ೦ದಕ್ಕೆ ಜಾಗ ಕೊಡಲೆ೦ದೇ ಅಲ್ಲವೆ? ಉತ್ತಮ ಚಿ೦ತನೆ ಮೂಡಿಸಿದಿರಿ..ಗುರು ಸಾರ್..

ಶುಭಾಶಯಗಳು
ಅನ೦ತ್

Jayashree said...

channagide. But last four lines off the track anstu. nimma expression nange artha aaglilla ansatte.

ಪ್ರವೀಣ್ ಭಟ್ said...

Mast lines anna

ಸುತ್ತ ಹರಿಯುತಿದೆ ಆಳಕಿಳಿಯುತಿದೆ
ಭೂವ್ಯೋಮ ಪಾತಾಳ, ಎಲ್ಲ ಒಡನೆ
ಹಸಿವಿನ ಕಿಚ್ಚು, ಮೈಯ್ಯೊಳಗೆ ಹುಚ್ಚು
ಉರಿಸದಿರಲೆಂದೂ ನಿನ್ನ ಸಹನೆ

tumba ista atu.. enta sandarbadallu irali sahane..

Pravi

ದಿನಕರ ಮೊಗೇರ said...

endinante kavana sogasaagide....
tumbaa bhaavukaraagi bareda haagide....

AntharangadaMaathugalu said...

ಗುರು ಸಾರ್...
ಚೆನ್ನಾಗಿದೆ. ಒಲ್ಲೆನೆಂದರೂ... ಜೀವ... ಇಷ್ಟವಾಯಿತು. ಪಕಳೆ ಉದುರಲೇ ಬೇಕಲ್ಲವೇ, ಹೊಸತು ಉದಯಿಸಲು ಹಳೆಯ ಬದುಕು ಅಳಿಯಲೇ ಬೇಕು.

ಶ್ಯಾಮಲ

ಸುಬ್ರಮಣ್ಯ said...

:-)

sunaath said...

ಕವನ ತುಂಬ ಸೊಗಸಾಗಿದೆ. ಆದರೆ ಈ ಉದ್ವೇಗ ಏಕೆ?

Ash said...

Hello Guru,

It had been long since I visited u & read your posts... Since I was busy with my trips & would be for sometime, may be a couple of months or so, kindly forgive my absence..... This poem like always is wonderfully written..... Thanks for all the love & support u have extended to me so far.... God Bless u with all the happiness of this world..... Hugs))))))

Ash....
(http://hastkala-oceanichope.blogspot.com/)

shivu.k said...

ಗುರುಮೂರ್ತಿ ಸರ್,

ಕವನದ ಅರ್ಥ ತುಂಬಾ ಚೆನ್ನಾಗಿದೆ. ಪದಗಳಲ್ಲಿ ಭಾವುಕತೆ ತುಂಬಿದೆ.

ಸಾಗರದಾಚೆಯ ಇಂಚರ said...

Creativity!!

thanks for the comments

ಸಾಗರದಾಚೆಯ ಇಂಚರ said...

SANTOSH MS

your comment made me to write more

keep coming

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್

ಭಾವುಕ ಆದಷ್ಟು ಭಾವಗೀತೆ ಹುಟ್ಟತ್ತೆ ಅಂತಾರೆ

ನಿಮ್ಮ ಆಶಿರ್ವಾದ ಸದಾ ಇರಲಿ ಗುರುವೇ

ಸಾಗರದಾಚೆಯ ಇಂಚರ said...

ರಾಘವೇಂದ್ರ ಹೆಗಡೆ

thanks yaar

ಸಾಗರದಾಚೆಯ ಇಂಚರ said...

ಮನಮುಕ್ತಾ
ಬದುಕು ಯಾವತ್ತೂ ನಿಂತ ನೀರಾಗಬಾರದು ಆಲ್ವಾ

ಕೆಲವರು ಜೀವನ ಮುಗಿದೇ ಹೋಯಿತು ಅಂತ ಇರ್ತಾರೆ ಅಂತವರಿಗೆ ಈ ಕವನ

ಸಾಗರದಾಚೆಯ ಇಂಚರ said...

nimmolagobba ಬಾಲು ಸರ್

ತುಂಬಾ ಸಂತೋಷ ನಿಮ್ಮ ಮಾತಿಗೆ

ಬರ್ತಾ ಇರಿ

ಸಾಗರದಾಚೆಯ ಇಂಚರ said...

ಅನಂತರಾಜ್ ಸರ್

ಬಹಳ ದಿನಗಳಿಂದ ಹೂವು ಪೊಕಳೆ ತುಂಬಾ ಕಾಡ್ತಾ ಇತ್ತು

ಎಲ್ಲಿ ಇದರ ಉಪಯೋಗ ಅಂತ ಹುಡುಕ್ತ ಇದ್ದೆ

ಬದುಕಿಗೆ ಇದಕಿನ ಬೇರೆ ನಿದರ್ಶನ ಬೇಕೇ?

ಸಾಗರದಾಚೆಯ ಇಂಚರ said...

Jayashree madam,

aa koneya 4 saalugalu innobbara badukannu artha maadikollade iro janarige

nimma abhipraayakke vandane

barta iri

ಸಾಗರದಾಚೆಯ ಇಂಚರ said...

ಪ್ರವೀಣ್ ಭಟ್

ಇಷ್ಟ ಆತನೋ

ಭಾರಿ ಖುಷಿ ಅತು ನೋಡು

ಬರ್ತಾ ಇರು

ಸಾಗರದಾಚೆಯ ಇಂಚರ said...

ದಿನಕರ ಮೊಗೇರ.

thanks for the comments

barta iri

ಸಾಗರದಾಚೆಯ ಇಂಚರ said...

AntharangadaMaathugalu

ಪೊಕಳೆ ಉದುರುವುದು ಇನ್ನೊಂದು ಹೂವಿಗೆ ಜಾಗ ಕೊಡಲು ಅಲ್ಲವೇ?

ನೋಡಿ ಎಂಥ ತ್ಯಾಗ ಇದೆ ಅಲ್ಲಿ

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಮಾಚಿಕೊಪ್ಪ sir

naguvinalle bhaava tumbtiraa

barta iri

ಮನಸು said...

wow super kavana

ಸಾಗರದಾಚೆಯ ಇಂಚರ said...

sunaath ಸರ್

ಉದ್ವೇಗ ಇಲ್ಲ ಸರ್

ಕೆಲವು ಮನುಷ್ಯರ ಜೀವನ ಶೈಲಿ ಕಂಡು ಮೂಡಿದ ಭಾವ

ಸಾಗರದಾಚೆಯ ಇಂಚರ said...

AshKuku

thanks for your comments

keep visiting

ಸಾಗರದಾಚೆಯ ಇಂಚರ said...

shivu. ಸರ್

''ಭಾವುಕನ ಭಾವದೊಳು, ಅವನೊಳುದಿಸಿದ ಒಲವು
ಆ ಒಳವಿಗನಿಸಾರ ಅವನು ಪಡೆಯುವ ಫಲವು'' ಅನ್ನತ್ತೆ ಕವಿವಾಣಿ

ಭಾವನೆ ಇದ್ದಂತೆ ಬದುಕು ಆಲ್ವಾ

ಬರ್ತಾ ಇರಿ

ಅಪ್ಪ-ಅಮ್ಮ(Appa-Amma) said...

ಗುರು,

ನೋವು ನಲಿವುಗಳ ಬಗ್ಗೆ ಅತ್ಯಂತ ಸುಂದರವಾಗಿ ಭಾವನೆಗಳು ಕವನದಲ್ಲಿವೆ.

ಸುಂದರ ಕವನಕ್ಕೆ ವಂದನೆಗಳು.

ಸಾಗರದಾಚೆಯ ಇಂಚರ said...

ಮನಸು

thank you

welcome back :)

ಸಾಗರದಾಚೆಯ ಇಂಚರ said...

ಅಪ್ಪ-ಅಮ್ಮ(Appa-Amma)

nimma maatu nija,

baduku nagutirali alvaa

Bhavana Rao said...

Short and sweet, liked the introduction part. Poems are not my cup of tea. I think I am too lazy for that:(
Kavanagau chikkadadalli, nanage bahaLa santosha :)

I liked about your "about me" especially this line "ಇದನ್ನೆಲ್ಲಾ ಕಷ್ಟ ಪಟ್ಟು ಬರೆದದ್ದಲ್ಲ, ಇಷ್ಟಪಟ್ಟು ಬರೆದಿದ್ದು, ಹಾಗಾಗಿ ಇಷ್ಟವಾದರೆ ಓದಿ, ಕಷ್ಟವಾದರೆ ಬಿಟ್ಟುಬಿಡಿ. ತಮ್ಮವನೇ ಆದ ಗುರು ಬಬ್ಬಿಗದ್ದೆ". This line reminded me of Beechi's line "ನನ್ನ ಅಭಿಪ್ರಾಯ ನನ್ನವು, ನಿಮ್ಮವು ನಿಮ್ಮವು. ನನ್ನ ಅಭಿಪ್ರಾಯ ಸರಿಯೆಂದು ನಾನು ಮಾತ್ರ ನುಮ್ಬುತ್ತೇನೆ, ಅದು ನಾನು "

Thanks for reading my blog and our comments :) I also would like to ask you to read my english posts as well :)
Regards,
Bhavana

prabhamani nagaraja said...

ಅತ್ಯ೦ತ ಭಾವಪೂರ್ಣವಾದ ಕವನ ನೀಡಿದ್ದಕ್ಕಾಗಿ ಧನ್ಯವಾದಗಳು.

sapna said...

ವಾವ್...ನಿಮ್ ಕಿಸ್ಸೊಂದು...ಕವನ ಸಖತ್ತಾಗಿತ್ತು. ಮನಸ್ಸಿನ ಭಾವನೆಗಳನ್ನ ಕವನದ ರೂಪದಲ್ಲಿ ಪ್ರಸ್ತುತಪಡಿಸೋ ನಿಮ್ ರೀತಿ ತುಂಬಾ ಇಷ್ಟ ಆಗುತ್ತೆ. ಮುಂದುವರಿಸಿ ಸರ್.

ಸಾಗರದಾಚೆಯ ಇಂಚರ said...

Bhavana Rao

ಕೆಲವೊಮ್ಮೆ ಅನಾಮಿಕ ಹೆಸರಿನಲ್ಲಿ ನಮ್ಮ ಬ್ಲಾಗ್ ಬಗ್ಗೆ ಕೆಟ್ಟ ಅಭಿಪ್ರಾಯ ಕೊಡೊ ಹುಚ್ಚು ಮನಸುಗಳು ಇವೆ

ಬ್ಲಾಗ್ ನ ನಾವು ಇಷ್ಟ ಪಟ್ಟು ಬರಿತಿವಿ, ಅದು ಇಷ್ಟ ಆಗದೆ ಇದ್ರೆ ಸರಿ ಮಾಡಿಕೊಳ್ಳೋ ಬಗೆಯನ್ನು ಹೇಳೋದು ಬಿಟ್ಟು

ಸುಮ್ಮನೆ ಟೀಕೆ ಮಾಡೋ ಜನರಿಗೆ ಏನು ಹೇಳೋಕು ಆಗಲ್ಲ, ಅದಕೆ ಇಷ್ಟ ಆದ್ರೆ ಓದಿ, ಕಷ್ಟ ಆದ್ರೆ ಬಿಡಿ ಅಂದಿದ್ದು

ನನ್ನ ಬ್ಲಾಗ್ ಗೆ ಸ್ವಾಗತ

ಸದಾ ಬರ್ತಾ ಇರಿ

ನಿಮ್ಮ ಸಲಹೆ ಸೂಚನೆ ನೀಡ್ತಾ ಇರಿ

ಸಾಗರದಾಚೆಯ ಇಂಚರ said...

prabhamani nagaraja

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸದಾ ಬರ್ತಾ ಇರಿ

ಸಾಗರದಾಚೆಯ ಇಂಚರ said...

sapna

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ

ಬ್ಲಾಗ್ ಗೆ ಸದಾ ಸ್ವಾಗತ

ಬರುತ್ತಿರಿ

ವೆಂಕಟೇಶ್ ಹೆಗಡೆ said...

ಕಲ್ಲ ಗೋಡೆಯಲಿ, ಮೆಲ್ಲನುಸಿರುತಿರೆ
ಬಲ್ಲ ಮನಸಿಗದು, ಕಬ್ಬಿಣದ ಕಡಲೆ
ಒಲ್ಲೆನೆಂದರೂ ಜೀವ, ಬಿಡಿಸಲಾಗದ ಭಾವ
ಇಲ್ಲೇ ಇರು ಎನ್ನುತಿದೆ ಮನದ ಪೊಕಳೆ
very nice sir..

Ashok.V.Shetty, Kodlady said...

ಗುರು ಸರ್,

ನಿಮ್ಮ ಬ್ಲಾಗ್ ಗೆ ನನ್ನ ಮೊದಲ ಭೇಟಿ...ಅರ್ಥಗರ್ಭಿತ ಸುಂದರ ಕವನ...ಹಿಂದಿನ ಪೋಸ್ಟ್ ಗಳನ್ನೆಲ್ಲ ನಿಧಾನವಾಗಿ ಓದ್ತಾ ಇದ್ದೀನಿ......ಧನ್ಯವಾದಗಳು.....

ಒಮ್ಮೆ ಇಲ್ಲಿ ಭೇಟಿ ನೀಡಿ....

http://ashokkodlady.blogspot.com/

kavinagaraj said...

ಸುಂದರ ಅನಿಸಿಕೆಗಳಿಗೆ ಸುಂದರ ಅಕ್ಷರರೂಪ ಕೊಟ್ಟಿದ್ದೀರಿ. ಚೆನ್ನಾಗಿದೆ.

ಸೀತಾರಾಮ. ಕೆ. / SITARAM.K said...

ಕವನ ಸೊಗಸಾಗಿದೆ. ಭಾವ ತುಂಬಿದೆ. ಬೇಡವಾದುದನ್ನು ತೊಡೆದು, ಬೇಕಾದದ್ದನ್ನು ಹಂಬಲಿಸಿ, ಸಹನೆಯಲಿ ಪಡೆದು, ಪೀಳಿಗೆಗೆ ದಾರಿಯಾಗಿ ಉದುರಿ ನಿರಂತರತೆ ತೋರೋ ಎನ್ನುವಲ್ಲಿಯ ಕವನ ದಾರ್ಶನಿಕ ದೃಷ್ಟಿಯನ್ನೂ ನೀಡಿದೆ.
ಧನ್ಯವಾದಗಳು.

V.R.BHAT said...

ಬಹಳ ಚೆನ್ನಾಗಿ ಕವನ ಹೊಸೆದಿದ್ದೀರಿ! ಉಂಡ ತೃಪ್ತಿ ನಮ್ಮದು, ತೇಗಿದ್ದೇವೆ, ಹರಸಿದ್ದೇವೆ " ಕಾವ್ಯದಾತಾ ಸುಖೀ ಭವ" , ಧನ್ಯವಾದಗಳು

ತೇಜಸ್ವಿನಿ ಹೆಗಡೆ said...

Nice poem. Liked it. ಒಳಗಿನ ನೋವು ಸದಾ ನಮ್ಮನ್ನು ಮತ್ತಷ್ಟು ಗಟ್ಟಿ ಮಾಡುವಂತಾಗಬೇಕೇ ವಿನಃ ಮೆತ್ತಗೆ ಮಾಡುವಂತಾಗಬಾರದು. ನೋವ ಸಹಿಸಿ ನಗುವ ಪರಿ ತಿಳಿದಮೇಲೆ ಎಂತಹ ಕಷ್ಟಗಳಿಗೂ ನಾವು ಸೋಲದಂತಾಗುವುದು.

ಸಾಗರದಾಚೆಯ ಇಂಚರ said...

ನನ್ನೊಳಗಿನ ಕನಸು. ಸರ್

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಬದುಕು ಹಾಗೆ ಇದ್ರೇನೆ ಚೆಂದ ಆಲ್ವಾ

ಹೂವಿನ ತ್ಯಾಗ ಮೆಚ್ಚುವನ್ತದ್ದೆ ಅಲ್ವ

ಸಾಗರದಾಚೆಯ ಇಂಚರ said...

ashokkodlady ಸರ್

ನನ್ನ ಬ್ಲಾಗ್ ಗೆ ಸ್ವಾಗತ

ಭೇಟಿ ಸದಾ ಇರಲಿ

ನಿಮ್ಮ ಬ್ಲಾಗ್ ಗೂ ನಿನ್ನೆ ಹೋಗಿ ಬಂದೆ

ಸ್ನೇಹ ಹೀಗೆ ಇರಲಿ

ಸಾಗರದಾಚೆಯ ಇಂಚರ said...

ಕವಿ ನಾಗರಾಜ್ ಸರ್

ನನ್ನ ಬ್ಲಾಗ್ ಗೆ ಸ್ವಾಗತ

ಭೇಟಿ ಸದಾ ಇರಲಿ

ಸಾಗರದಾಚೆಯ ಇಂಚರ said...

ಸೀತಾರಾಮ. ಕೆ. / SITARAM.K ಸರ್

ಬದುಕು ಧನಾತ್ಮಕತೆ ಸಾಗಬೇಕು ಅನ್ನೋದು ನನ್ನ ನಿಲುವು

ಕೆಲವೊಮ್ಮೆ ನೋವು ಬರತ್ತೆ

ಆದ್ರೆ ನಗು ಕಾನ್ಲೆಬೇಕಲ್ವಾ

ಸಾಗರದಾಚೆಯ ಇಂಚರ said...

ವಿ.ಆರ್.ಭಟ್ ಸರ್

ಬಡಿಸಿದ ಊಟ ಸಂತ್ರಪ್ತಿ ನೀಡಿದರೆ ಬಡಿಸಿದವನಿಗೆ ಸಂತೋಷ

ನನ್ನ ಮನೆಯೆಂಬ ಬ್ಲಾಗ್ ಗೆ ಸದಾ ಊಟಕ್ಕೆ ಬನ್ನಿ

ಹೊಸದನ್ನು ಬಡಿಸುವ ಪ್ರಯತ್ನ ನನ್ನದು

ಸಾಗರದಾಚೆಯ ಇಂಚರ said...

ತೇಜಸ್ವಿನಿ ಹೆಗಡೆ ಯವರೇ

ನಿಜ, ಒಳಗಿನ ನೋವು ಹಾಗೆ ಉಳಿದರೆ ಅಪಾಯ ಕಟ್ಟಿಟ್ಟ ಬುತ್ತಿ

ಮನಸಿನ ನೋವು ಹರಿಯಬಿದಬೇಕು

ನೋವನ್ನು ಕರಗಿಸುವ ಕಲೆ ರೂಡಿಸಿಕೊಳ್ಳಬೇಕು

ಬರುತ್ತಿರಿ

ಸುಧೇಶ್ ಶೆಟ್ಟಿ said...

munnudiyalliruva saalugaLu thumba ishta aayithu guru.. thumba uttejisuva saalugaLu avu.. sundhara kavithe :)

ಸಾಗರದಾಚೆಯ ಇಂಚರ said...

ಸುಧೇಶ್ ಶೆಟ್ಟಿ

thanks sir

bartaa iri

Snow White said...

tumba chennagide sir..bhaava tumbida saalugalu :)

ಹಳ್ಳಿ ಹುಡುಗ ತರುಣ್ said...

cguru sir.. chenagi bardiddira arta garbhitavagide...

sagaradaacheya inchara sada gunuguttirali nimma kannada da kampana....

http://hitechjeeta.blogspot.com/

ಹಳ್ಳಿ ಹುಡುಗ ತರುಣ್ said...

guru sir.. chenagi bardiddira arta garbhitavagide...

sagaradaacheya inchara sada gunuguttirali nimma kannada da kampana....

http://hitechjeeta.blogspot.com/

kalavathi said...

verygood,concept,and very nice

ಚಿನ್ಮಯ ಭಟ್ said...

ಮೊಗ್ಗಾಗಿ ಅರಳಿ
ಹೂವಾಗಿ ಬಾಡಿ ಹೋಗುವ ಮುನ್ನ
ಬೀರೋಣ ಸ್ವಲ್ಪ ಸುಗಂಧ
ಶ್ರಮದ ಪೂಜೆಯ
ಯಸದ ದೇವರಿಗೆ ಮಾಡಲು
ಆಗಲಿ ಇ ಜೀವನದ ಭಾವವೇ ಪುಷ್ಪ-ಶ್ರೀಗಂಧ