Tuesday, August 24, 2010

ಮರೆಯಲಾಗದ ನಾರ್ವೆ, ಪ್ರವಾಸ ಕಥನದ ಅಂತಿಮ ಭಾಗ

ನೋಡೇ ಗೆಳತಿ, ಬಾನ ತುಂಬಾ ಮೋಡ ಕವಿದಿದೆ, ಚೆಲುವ ಬರುವ ಎಂದು ಮನವು ಪುಳಕಗೊಂಡಿದೆ. 

ಭಳಿರೆ, ಭಳಿರೆ...

Flam ದಲ್ಲಿ ಕಳೆದು ಒಂದು ದಿನ ಜೀವನದಲ್ಲಿಯೇ ಮರೆಯಲಾಗದ್ದು. ನಮ್ಮ ಅದೃಷ್ಟಕ್ಕೆ ಅಲ್ಲೊಂದು ಅಪಾರ್ಟ್ಮೆಂಟ್ ಬಾಡಿಗೆಗೆ ಒಂದು ದಿನ ಸಿಕ್ಕಿತ್ತು. ನಾರ್ವೆಯ ಮನೆಯಲ್ಲಿ ಕುಳಿತು ಕರ್ನಾಟಕದ ಚಿತ್ರಾನ್ನ, ಪಲಾವ್ ತಿನ್ನುವ ಯೋಗ ನೋಡಿ. ಹತ್ತಿರದಲ್ಲಿಯೇ ಇದ್ದ ನದಿ ತೀರ, ಬೆಟ್ಟ ಗುಡ್ಡಗಳು ಎಲ್ಲವನ್ನೂ ಮನಸೋ ಇಚ್ಛೆ ಸುತ್ತಿ ಕುಣಿದೆವು, ನಲಿದೆವು.

ಮನೆಯ ಅಡಿಗೆ ಯಾರಿಗೆ ಬೇಡ ಹೇಳಿ....
ನಾವು ನಾಲಕ್ಕು ಜನ ಹೋಗಿದ್ದು ನಾರ್ವೆಗೆ  ...
ನೋಟದಲ್ಲೇ ಎನ್ನ ಸೆಳೆದೆ, ಬರುವೆ ಮತ್ತೆ ನಿನ್ನ ಜೊತೆಗೆ...

ನಾವುಳಿದುಕೊಂಡ ಮನೆಯಿಂದ ಕಾಣುವ ದ್ರಶ್ಯ  

ಇಲ್ಲಿನ ವೈಚಿತ್ರ್ಯ ನೋಡಿ, ಹವಾಮಾನ ಎಷ್ಟು ಬೇಗ ಬದಲಾಗುತ್ತದೆ ಎಂದರೆ ಊಹಿಸಲು ಅಸಾದ್ಯ. ಬೆಳಿಗ್ಗೆ ಬಿಸಿಲಿತ್ತು, ನೋಡು ನೋಡು  ತ್ತಿದ್ದಂತೆ ಮೋಡ, ಮತ್ತೆ ಮಳೆ, ಕೂಡಲೇ ಮೋಡದ ಮರೆಯಲ್ಲಿ ಸೂರ್ಯನ ಕಣ್ಣು ಮುಚ್ಚಾಲೆ, ನಂತರ ಸಂಪೂರ್ಣ ಬಿಸಿಲು. ಇವೆಲ್ಲವೂ ಸುಮಾರು 20 ನಿಮಿಷದಲ್ಲಿ ನಡೆದು ಹೋಯಿತು. ಮೋಡ ಗಳಂತೂ  ಎಕ್ಸ್ ಪ್ರೆಸ್ ರೈಲಿನಂತೆ ಓಡುತ್ತಿರುತ್ತವೆ.ಒಂದು ದಿನ ಇಂಥಹ ಪ್ರಕ್ರತಿಯ ಒಡಲಿನಲ್ಲಿ ಕಳೆದ ಮೇಲೆ ಇಲ್ಲಿಯೇ Permanent ಆಗಿ ಇದ್ದು ಬಿಡೋಣ ಅಂತ ಅನ್ನಿಸದೆ ಇರದು. 

ಮೋಡಗಳ ಸರಸ ನೋಡಿ....

ಬೆಟ್ಟದ ಮೇಲಿಂದ ಚೆಲುವೆಯ ದರ್ಶನ 

ಮಾರನೆ ದಿನ ಮಧ್ಯಾನ್ಹ ಅಲ್ಲಿಗೆ ಬ್ರಹತ್ ಹಡಗು '' Alexander''    ಬಂದಿತ್ತು. 
Alexander van  Hombalt
ಅಷ್ಟು  ಚಿಕ್ಕ ಊರಿಗೆ ಎಷ್ಟೊಂದು ಜನ ಭೇಟಿ ಕೊಡುತ್ತಾರೆ ಎಂದರೆ ಸೋಜಿಗವೇ ಸರಿ.  ನಂತರ ಸುಮಾರು 3 ಘಂಟೆಗೆ ಆರಂಬವಾಯಿತು ನೋಡಿ ಹಡಗಿನ ಪ್ರಯಾಣ. ಅದೊಂದು ಮರೆಯಲಾಗದ ಅನುಭವ.
ಕ್ಷಣಾರ್ಧದಲ್ಲಿ ಬಂದ ಬೋಟೊಂದು ನೀರನ್ನು ಅಲುಗಾಡಿಸಿ ಫೋಟೋದ ಪ್ರತಿಬಿಂಬಕ್ಕೆ ಪೆಟ್ಟು ಕೊಟ್ಟಿತು.... 

ನಾರ್ವೆಗೆ ಹೋದವರು Flam ನಿಂದ Gudvangen ವರೆಗಿನ ಹಡಗಿನ ಪ್ರಯಾಣ ಅನುಭವಿಸದೆ ಹೋದರೆ ಬಂದಿದ್ದು ವ್ಯರ್ಥ.

Good Bye Flam... we miss you


 ಆ ಬ್ರಹದಾಕಾರದ ಶಿಕರಗಳ ನಡುವೆ ನೀರಿನಲ್ಲಿ ಹೋಗುವ ಮಜವೇ ಬೇರೆ. ನಮ್ಮೊಂದಿಗೆ ಜೊತೆಗಾರರಾಗಿ ಹಕ್ಕಿಗಳು ಇದ್ದವು. ಅವರ ಹಾರಾಟ, ಆಹಾರ ಕ್ಕಾಗಿ ಕಿತ್ತಾಟ, ಎಲ್ಲವೂ ಮನಸೂರೆಗೊಳ್ಳುವ ರೀತಿಯಲ್ಲಿದ್ದವು.
ಎಲ್ಲಿ ನೋಡುತ್ತಿರುವೆ?

ನಾವೂ ನಿಮ್ಮೊಂದಿಗೆ ಪ್ರಕ್ರತಿ ವೀಕ್ಷಣೆಗೆ ಬರುತ್ತೇವೆ....

 ಛಾಯಾಗ್ರಾಹಕರಿಗೆ ಇದೊಂದು ಹಬ್ಬದ ವಾತಾವರಣ. 400 ವರ್ಷಗಳಿಂದ ಇರುವ ಕೆಲವು ಒಂಟಿ ಹಳ್ಳಿಗಳನ್ನು ನೋಡಿದಾಗ ಅಬ್ಬ ಇವರ ಬದುಕೇ ಎನಿಸಿತು. ರಸ್ತೆಯೂ ಇಲ್ಲದೆ ಕೇವಲ ನೀರನ್ನೇ ನಂಬಿಕೊಂಡು ಬದುಕುವ ಇವರ ಬದುಕು ಸೋಜಿಗವೆನಿಸಿತು.
ಪ್ರಾಚೀನ ಹಳ್ಳಿ, ಇಲ್ಲಿ ರಸ್ತೆಯ ವ್ಯವಸ್ಥೆ ಇಲ್ಲದೆ ಎಸ್ಟೋ ವರ್ಷಗಳು ಆಗಿತ್ತಂತೆ. ಇತ್ತೀಚಿಗೆ ರಸ್ತೆ ನಿರ್ಮಾಣ ಮಾಡಲಾಗಿದೆ.

ಇಲ್ಲಿನ ಕೆಲವು ಪರ್ವತಗಳು ಹಿಮದಿಂದಲೇ ನಿರ್ಮಾಣವಾಗಿದ್ದು ಶತ ಶತಮಾನಗಳಿಂದ ಹಿಮ ಬಿದ್ದು ಬಿದ್ದು ಅಲ್ಲಿಯೇ ಗಟ್ಟಿಯಾಗಿ ಹೋಗಿವೆ. ಸಾಲದ್ದಕ್ಕೆ ಉಷ್ನತೆಯೂ ಕಡಿಮೆ ಇರುವುದರಿಂದ ಅವು ಇನ್ನೂ ಬಿಳಿಯದಾಗಿಯೇ ಕಾಣುತ್ತವೆ.  ಇದರ ಬಗ್ಗೆ ವರ್ಣಿಸಿದರೆ ಸಾಲದು. ಅದಕ್ಕೆ ಫೋಟೋ ಗಳನ್ನು ಹಾಕಿದ್ದೇನೆ. ನೋಡಿ ಆನಂದಿಸಿ.
ಮೋಡಗಳು ಪರ್ವತಕ್ಕೆ  ಕೊಡುವ ಮುತ್ತೆ ಇದು?

ಓಡಿ ಹೋಗದಿರಿ, ನಿಲ್ಲಿ ಮೋಡಗಳೇ, ನಾನು ಬರುವೆ ಜೊತೆಗೆ....

ಮೋಡದ ಮಿಲನ ಶಿಖರದ ತುದಿಗೆ....

ಕನಕನ ಕಿಂಡಿ .....

ಎರಡು ಪರ್ವತಗಳು ಒಂದೇ ಜಾಗದಲ್ಲಿ ಸಂಧಿಸುತ್ತಿವೆ....

ಸುಮಾರು 3 ತಾಸಿನ ಪ್ರಯಾಣ ಇನ್ನೂ ಇದ್ದರೆ ಚೆನ್ನ ಎಂದು ತೋರುತ್ತಿತ್ತು. ಮಾರ್ಗ ಮದ್ಯದಲ್ಲಿ ಸಿಗುವ ಜಲಪಾತಗಳು ಕಣ್ಮನ ಸೆಳೆಯುವಂತಿದ್ದವು. 
ಎಲ್ಲರೂ ಖುಷ್.....

ಪಯಣ ಎಲ್ಲಿಗೆ.....

ಉಂಚಳ್ಳಿಯ ಜಲಪಾತ ನೆನಪಾಗುತ್ತಿಲ್ಲವೇ?

ಒಟ್ಟಿನಲ್ಲಿ ನಾರ್ವೆಯ ಪ್ರವಾಸ ಮರೆಯಲಾರದ ಪ್ರವಾಸವಾಗಿ ಉಳಿದಿದೆ. ನಾರ್ವೆಯ ಮತ್ತೊಂದು ಸುಂದರ ಜಾಗ ''Bergen'' ಎಂಬುವುದರ ಬಗೆಗೆ ಮುಂದೆ ಎಂದಾದರೂ ಬರೆಯುತ್ತೇನೆ. ನಾರ್ವೆಯ  ಬಗ್ಗೆ ಹೆಚ್ಚಿನ ವಿವರ ಬೇಕಾದರೆ ''http://www.norwaynutshell.com/'' ಎಂಬ ಅಂತರ್ಜಾಲ ತಾಣಕ್ಕೆ ಭೆಟ್ಟಿ ಕೊಟ್ಟು ಓದಿ. 

ಕಿಸೆಯಲ್ಲಿ ಹಣ, ಕಾಲಲ್ಲಿ ಶಕ್ತಿ, ಮನಸಲ್ಲಿ ಇಚ್ಛೆ ಈ ಮೂರು ಇದ್ದರೆ ನಾರ್ವೆ ನಿಮಗಾಗಿ ಕಾಯುತ್ತಿದೆ.

ಸ್ನೇಹಿತರೆ,
ಕಳೆದ ಕೆಲವು ವಾರಗಳಿಂದ ನಾರ್ವೆಗೆ ನನ್ನೊಂದಿಗೆ ಪ್ರಯಾಣಿಸಿದ್ದಿರಿ. ಅಲ್ಲಿನ ವಿವರಗಳನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿದ್ದಿರಿ. ನಿಮ್ಮೆಲ್ಲರಿಗೂ ಧನ್ಯವಾದಗಳು  ಕಳೆದ ಸಂಚಿಕೆಗಳು ಇಲ್ಲಿವೆ. ಓದಲು ಕೆಳಗೆ ಕ್ಲಿಕ್ಕಿಸಿ.




ಮುಂದಿನ ವಾರ ಮತ್ತೆ ಸಿಗುತ್ತೇನೆ.

ನಿಮ್ಮವ

ಗುರು 

53 comments:

ಪ್ರಗತಿ ಹೆಗಡೆ said...

nice clicks...

shridhar said...

Olleya ChitragaLu ...hagu .. pravaas kathan ... bahala suMdara sthala .. photos nodi namagu kushi aytu ...

ಕ್ಷಣ... ಚಿಂತನೆ... said...

ಗುರು ಅವರೆ, ಸುಂದರವಾದ ಚಿತ್ರಗಳು. ಅದರಲ್ಲಿಯೂ ಅಲ್ಲಿನ ಮೋಡಗಳು, ಮನೆಗಳ ದೃಶ್ಯ ತುಂಬಾ ಚೆನ್ನಾಗಿವೆ.
ಕೊನೆಯದಾಗಿ ಉಂಚಳ್ಳಿಯ ಜಲಪಾತ ನೆನಪಿಸುತ್ತದೆ. ನನಗಂತೂ ಉಂಚಳ್ಳಿಗೆ ಹೋಗಿದ್ದ ನೆನಪಾಯಿತು.
ಚೆನ್ನಾದ ಪ್ರವಾಸ ಕಥನ ಕೊಟ್ಟಿದ್ದಕ್ಕೆ ಧನ್ಯವಾದಗಳು.

ಸ್ನೇಹದಿಂದ,

Guruprasad said...

ಗುರು ಸರ್,,,
ನಿಜವಾಗ್ಲೂ ನೀವು ಲಕ್ಕಿ,,,,,, ಎಂಥ ಅದ್ಬುತ ಸ್ಥಳ ..... ತುಂಬಾ ಚೆನ್ನಾಗಿ enjoye ಮಾಡಿದ್ದೆರ ಅಂತ ಕಾಣುತ್ತೆ ಅಲ್ವ.... ಫೋಟೋಗಳು ಸೂಪರ್,,, ನಾನು ಯಾವಾಗ್ ಇಂಥ ಜಾಗಕ್ಕೆ ಬಂದು ಹೋಗುತ್ತೇನೋ ಅಂತ ಅನ್ನಿಸಿದೆ........ ಇಟ್ಸ್ realy ಗುಡ್.....
ಗುಡ್ ಲಕ್....

Gubbachchi Sathish said...

ಭಳಿರೇ! ಕುಳಿತಲ್ಲಿಯೇ ನಾರ್ವೆಯ ದರ್ಶನವಾಯಿತು.

ಧನ್ಯವಾದಗಳು.

Creativity said...

bahala sundavara ramaneeya vada sthala :) :) noduthidhare mathe mathe nodona anno aase :) :)

Gubbachchi Sathish said...

ಭಳಿರೇ! ಕುಳಿತಲ್ಲಿಯೇ ನಾರ್ವೆಯ ದರ್ಶನವಾಯಿತು.

ಧನ್ಯವಾದಗಳು.

Gubbachchi Sathish said...

ಭಳಿರೇ! ಕುಳಿತಲ್ಲಿಯೇ ನಾರ್ವೆಯ ದರ್ಶನವಾಯಿತು.

ಧನ್ಯವಾದಗಳು.

Dr.D.T.Krishna Murthy. said...

ನಿಮ್ಮ ಪ್ರವಾಸ ಕಥನ ಮತ್ತು ಚಿತ್ರಗಳು ಸೊಗಸಾಗಿವೆ.ಧನ್ಯವಾದಗಳು ಸರ್.ನಮಸ್ಕಾರ.

sunaath said...

ಗುರುಮೂರ್ತಿಯವರೆ,
ಮೂರು ಭಾಗಗಳಲ್ಲಿ ಬಂದ ನಾರ್ವೆ ದರ್ಶನ ಸುಂದರವಾದ ಅನುಭವವನ್ನು ಕೊಟ್ಟಿತು. ಉತ್ತಮ ಚಿತ್ರಗಳು ಹಾಗು ಉತ್ತಮ ಲೇಖನಕ್ಕಾಗಿ ಅಭಿನಂದನೆಗಳು.

ವನಿತಾ / Vanitha said...

wow..Europe maja..:)) 4 blog post galannu ottige odide..
Beautiful clicks n awesome narration..:))

balasubramanya said...

ತುಂಬಾ ಒಳ್ಳೆ ಅನುಭವ ಆಯ್ತು ಸಾರ್ . ನಾರ್ವೆ ದೇಶದ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ ನಿಮಗೆ ಧನ್ಯವಾದಗಳು.

V.R.BHAT said...

ಗುರುಮೂರ್ತಿ ಸರ್, ನಾರ್ವೆಯ ಪರಿಚಯ ಮೂರು ಕಂತುಗಳಲ್ಲಿ ಮಾಡಿಸಿದಿರಿ, ಚಿತ್ರಗಳು ಮೋಹಕ, ನಿರೂಪಣೆ ಸುಂದರ, ಹೀಗೇ ಹಲವಾರು ಬರಲಿ, ಧನ್ಯವಾದಗಳು

shivu.k said...

ಗುರುಮೂರ್ತಿ ಹೆಗಡೆ ಸರ್,

ಸುಂದರವಾದ ಫೋಟೊಗಳ ಜೊತೆ ನಾರ್ವೆಯ ಸುತ್ತಾಟವನ್ನು ಮಾಡಿಸಿದ್ದೀರಿ. ನಾನು ಹೀಗಿನಿಂದಲೇ ಕನಸು ಕಾಣುತ್ತಿದ್ದೇನೆ. ಜೀವನದಲ್ಲಿ ಒಮ್ಮೆಯಾದರೂ ನಾರ್ವೆ, ನಿಮ್ಮ ಸ್ವೀಡನ್,ಡೆನ್ಮಾರ್ಕ್ ಪ್ರವಾಸ ಹೋಗಬೇಕೆಂದು.

ಧನ್ಯವಾದಗಳು.

ದಿನಕರ ಮೊಗೇರ said...

dr.guru sir,
enthaa sundara chitrana..... nijakku drashya vaibhava adu.... namma jote hanchikonDiddakke dhanyavaada....

PARAANJAPE K.N. said...

ಗುರುವೇ,
ಇಷ್ಟು ಬೇಗ ಮುಗಿಯಿತೇನ್ರೀ ನಿಮ್ಮ ಪ್ರವಾಸ ಕಥನ ?? ನೀವು ತೆಗೆದ ಛಾಯಾಚಿತ್ರಗಳೇ ಕಥೆ ಹೇಳ್ತಾವೆ, ನಿಮ್ಮ ಬರಹ ಕೂಡ ನಮ್ಮನ್ನು ಅಲ್ಲಿಗೇ ಒಯ್ಯುತ್ತದೆ. ಸು೦ದರ ಪರಿಸರ, ತು೦ಬಾ ಚೆನ್ನಾಗಿದೆ.

ಮನಮುಕ್ತಾ said...

ತು೦ಬಾ ಸು೦ದರವಾಗಿ ಪ್ರವಾಸಕಥನ ಬರೆದು ರ೦ಜಿಸಿದ್ದಕ್ಕೆ ಧನ್ಯವಾದಗಳು.

Raghu said...

ಫೋಟೋಸ್ ಎಲ್ಲ ಚೆನ್ನಾಗಿದೆ ಬಂದಿದೆ ಇಂಚರ..:)
ನಿಮ್ಮವ,
ರಾಘು.

AntharangadaMaathugalu said...

ಗುರು ಸಾರ್..
ಮುಗಿದೇ ಹೋಯ್ತಾ ಅನ್ನಿಸ್ತು... ನಿಜಕ್ಕೂ ಅದ್ಭುತ ಚಿತ್ರಗಳು... ನಿಮ್ಮ ವಿವರಣೆ ಕೂಡ ಅಷ್ಟೇ ಸುಂದರವಾಗಿತ್ತು. ನಮಗೂ ನಾರ್ವೆಯ ಪ್ರವಾಸ ಮಾಡಿಸಿದ ನಿಮಗೆ ಧನ್ಯವಾದಗಳು ಸಾರ್....

ಶ್ಯಾಮಲ

ಕನಸು said...

ಹಾಯ್
ಸರ್
ಸುಂದರ ಪೋಟೋಗಳ ಸುಂದರ
ಲೇಖನ.ಧನ್ಯವಾದಗಳು

Mohan Hegade said...

ಗುರವೇ,
ನಿಮ್ಮ ಸುಂದರ ಬರಹಕ್ಕೆ ಹಾಗೂ ಚಿತ್ರಗಳಿಗೆ ಕುಶ್ ಹುಹಾ. ಇಲ್ಲಿಂದಲೇ ನಾರ್ವೆ ನೋಡಿದಷ್ಟು ಕುಶಿ. ನಿ ಹೇಳಿನ್ದಂಗೆ ದುಡ್ಡು, ಇಚ್ಚೆ, ಶಕ್ತಿ ಜೊತೆ ಹಣೆಲ್ಲಿ ಬರೆದಿರಬೇಕು. ಯಾವುದಕ್ಕೂ ಯೋಗಬೇಕು ಗುರು.

ದನ್ಯರಿ,
ಮೋಹನ್ ಹೆಗಡೆ

ಶಿವಪ್ರಕಾಶ್ said...

great photos... :)
place ondsaari live aagi nodbeku anno aase huttide...
:)

ಪ್ರವೀಣ್ ಭಟ್ said...

Mast photos.. mast adi baraha...

narve illindane torsidke dhanyavaada !!

Pravi

ವೆಂಕಟೇಶ್ ಹೆಗಡೆ said...

ಗುರುಮೂರ್ತಿಯವರೇ , ತುಂಬಾ ಚೆನ್ನಾಗಿದೆ ಲೇಖನಗಳು .ಪವಿತ್ರ ನನ್ನ relative .

ರಾಜೇಶ್ ನಾಯ್ಕ said...

"ಕಿಸೆಯಲ್ಲಿ ಹಣ, ಕಾಲಲ್ಲಿ ಶಕ್ತಿ, ಮನಸಲ್ಲಿ ಇಚ್ಛೆ ಈ ಮೂರು ಇದ್ದರೆ ನಾರ್ವೆ ನಿಮಗಾಗಿ ಕಾಯುತ್ತಿದೆ."

ಮೊದಲಿನದ್ದೇ ಇಲ್ಲವಲ್ರೀ! ಹಾಗಾಗಿ ನಾರ್ವೇ ಬರೀ ಕನಸು ಮಾತ್ರ. ಆದರೂ ನೀವು ಚೆನ್ನಾದ ಬರಹದೊಂದಿಗೆ ಉತ್ತಮ ಚಿತ್ರಗಳನ್ನೂ ಹಾಕಿ ನಾರ್ವೇ ಪ್ರವಾಸ ಮಾಡಿಸಿದ್ದೀರಿ. ತುಂಬಾ ಧನ್ಯವಾದಗಳು. ಬರ್ಗನ್ ಬಗ್ಗೆ ಸ್ವಲ್ಪ ಇತಿಹಾಸವಿದೆ. ಎರಡನೇ ಮಹಾಯುದ್ಧದಲ್ಲಿ ಇಲ್ಲಿನ ಬಂದರಿನಿಂದಲೇ ಜರ್ಮನಿಯ ’ಬಿಸ್ಮಾರ್ಕ್’ ಎಂಬ ಹಡಗು ತನ್ನ ಅಂತಿಮ ಯಾನವನ್ನು ಆರಂಭಿಸಿತ್ತು.

ಸೀತಾರಾಮ. ಕೆ. / SITARAM.K said...

ಅದ್ಭುತ ಭೂ ಪ್ರದೇಶವೊಂದರ ಚಿತ್ರ ಮಾಹಿತಿ ಜೊತೆಗೆ ಪೂರಕ ಪ್ರವಾಸ ಲೇಖನ ಒದಗಿಸಿ ಮನರಂಜಿಸಿದ್ದಿರಾ... ಧನ್ಯವಾದಗಳು. ಇಂತಹ ತಾನವನ್ನು ನೋಡಬೇಕೆ೦ಬಆಶೆ ಮನದಲ್ಲಿ ಮೂಡಿದೆ. ನೋಡೋಣ!

ತೇಜಸ್ವಿನಿ ಹೆಗಡೆ said...

ಅದ್ಭುತ ತಾಣ... ನಯನ ಮನೋಹನ ಚಿತ್ರಗಳು. ತುಂಬಾ ಸುಂದರವಾಗಿದೆ ಫ್ಲೇಮ್. ಚಿತ್ರಗಳಮೂಲಕ ಕಾಣಿಸಿದ್ದಕ್ಕೆ ಧನ್ಯವಾದ.

Umesh Balikai said...

ಗುರುಮೂರ್ತಿ ಸರ್,

ನಾರ್ವೇಯ ಸುಂದರ ತಾಣಗಳ ದರ್ಶನ ಮಾಡಿಸಿದಿರಿ. ಇಲ್ಲಿನ ಛಾಯಾಚಿತ್ರಗಳನ್ನು ನೋಡಿದಾಕ್ಷಣ ನನಗೆ ನನ್ನ ಕಾಲಿಫೋರ್ನೀಯದ ತಾಹೋ ಸರೋವರದ ಭೇಟಿಯ ನೆನಪಾಯಿತು. ಜೀವನದಲ್ಲೊಮ್ಮೆಯಾದರೂ ಅಲ್ಲಿಗೆ ಹೋಗಿ ಬರಬೇಕೆಂಬ ಆಸೆ ಮೂಡಿಸಿತು ನಿಮ್ಮ ಚಿತ್ರ ಲೇಖನ.

ಧನ್ಯವಾದಗಳು

SATISH N GOWDA said...

nice clicks... and nice photos thank u sir

SANTOSH MS said...

Guru Sir,

Mind blowing pictures. your explanations are also super.

Subrahmanya said...

ಮನೆಯಲ್ಲೇ ಕುಳಿತು ನಾರ್ವೆಯ ಪ್ರವಾಸದರ್ಶನ ಮಾಡಿದ ಅನುಭವವಾಯ್ತು. ಎಲ್ಲಾ ಚಿತ್ರಗಳು ಚೆನ್ನಾಗಿತ್ತು.

ಚಿತ್ರಾ said...

ಗುರೂ ,
ಕೂತಲ್ಲೇ ಸುಂದರ ನಾರ್ವೆ ದರ್ಶನ ಆತು ಪುಕ್ಕಟೆ ! ಆದರೆ ಈಗ ಅದನ್ನು ಸ್ವತಃ ಅನುಭವಿಸವು ಹೇಳ ಹುಳ ತಲೇಲಿ ಬಿಟ್ಟೆ ನೀನು . ಒಂದೇ ಪ್ರಾಬ್ಲಂ ! ಜೇಬು ಎಲ್ಲಿಂದ ತುಂಬಿಸದು ಹೇಳಿ. ಫೋಟೋ , ಲೇಖನ ಸೂಪರ್ !

Anonymous said...

NICE!

ಅಪ್ಪ-ಅಮ್ಮ(Appa-Amma) said...

ತುಂಬಾ ಸುಂದರವಾದ ಪ್ರವಾಸಕಥನ !
ಅದ್ಭುತ ಪೋಟೋಗಳ ಜೊತೆ ನಾರ್ವೆ ಕಣ್ಮುಂದೆ ಬಂದಿಳಿಯಿತು.

ಧನ್ಯವಾದಗಳು

ಸಾಗರಿ.. said...

ಫೋಟೊಗಳು ಒಂದಕ್ಕಿಂತ ಒಂದು ಚೆಂದ.. ಸುಂದರವಾದ ನಿರೂಪಣೆ.. ನಮಗೆ ನಾರ್ವೆಯ ಸೊಬಗಿನ ಹಬ್ಬದೂಟ. ನಿಮಗೆ ನಾವೇ ಧನ್ಯವಾದ ಹೇಳಬೇಕು.. ಸೊಬಗಿನ ಊಟ ಉಂಡವರು ನಾವಲ್ಲವೇ??

Manju M Doddamani said...

ಏನ್ ಸರ್ ನನಗೆ ಕರ್ಚು ಇಲ್ದನೆ ನಾರ್ವೆ ತೋರ್ಸಿದ್ರಿ ..!
ಲೇಖನ ತುಂಬಾ ಚನ್ನಾಗಿದೆ ಅದರ ಜೊತೆ ಚಿತ್ರಣ ಕೊಡ ಮಸ್ತ ಆಗಿವೆ ..!

ನನ್ನ ಹೊಸ ಬ್ಲಾಗ್ ಗೆ ಒಮ್ಮೆ ಭೇಟಿ ಕೊಡಿ
http://manjukaraguvamunna.blogspot.com/

ಸಾಗರದಾಚೆಯ ಇಂಚರ said...

ಪ್ರಗತಿ ಹೆಗಡೆ

thanks for the comments

ಸಾಗರದಾಚೆಯ ಇಂಚರ said...

shridhar

indeed its great place

ಸಾಗರದಾಚೆಯ ಇಂಚರ said...

ಕ್ಷಣ... ಚಿಂತನೆ... bhchandru

ನಂಗೂ ಉಂಚಳ್ಳಿಯ ಜಲಪಾತ ನೆನಪಿಗೆ ಬಂತು

ಹಾಗೆ ಇದೆ

ಬರ್ತಾ ಇರಿ

ಸಾಗರದಾಚೆಯ ಇಂಚರ said...

Guru's world

ನೀವು ಸದ್ಯದಲ್ಲಿ ಹೋಗಿ ಬನ್ನಿ ಅಂತ ಹಾರೈಸ್ತೀನಿ

ತುಂಬಾ ಸುಂದರ ಜಾಗ ಅದು

ಸಾಗರದಾಚೆಯ ಇಂಚರ said...

ಗುಬ್ಬಚ್ಚಿ ಸತೀಶ್

ನಮ್ಮೊಡನೆ ಬಂದಿದ್ದಕ್ಕೆ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

Creativity!!

you are right

namge matte hogona annista ide

ಸಾಗರದಾಚೆಯ ಇಂಚರ said...

Dr.D.T.krishna Murthy. ಸರ್

ನಿಮ್ಮ ಆಗಮನ ಸದಾ ಆಗ್ತಾ ಇರಲಿ ನಮ್ಮ ಬ್ಲಾಗ್ ಗೆ

ತುಂಬಾ ಸಂತೋಷ ಅಭಿಪ್ರಾಯಕ್ಕೆ

ಸಾಗರದಾಚೆಯ ಇಂಚರ said...

sunaath ಸರ್

ಅಭಿಪ್ರಾಯಕ್ಕೆ ವಂದನೆಗಳು

ಬರುತ್ತಿರಿ

ಸಾಗರದಾಚೆಯ ಇಂಚರ said...

sunaath ಸರ್

ಅಭಿಪ್ರಾಯಕ್ಕೆ ವಂದನೆಗಳು

ಬರುತ್ತಿರಿ

Uday Hegde said...

Without spending a penny, we saw Norway through your eyes...(Your eye to our system)

Thanks for such an beautiful article.

nenapina sanchy inda said...

wow!! lucky you all. good pictures. one day i too will visit Norway.
ಹರಿಹರಪುರದ ಹತ್ತಿರ ಒಂದು ನಾರ್ವೆ ಎನ್ನುವ ಊರು ಇದೆ.
:-)
ಮಾಲತಿ ಎಸ್.

Snow White said...

superb pics sir :)

ಸಾಗರದಾಚೆಯ ಇಂಚರ said...

Thanks to one and all

ಸುಧೇಶ್ ಶೆಟ್ಟಿ said...

So nice!!!

venkat.bhats said...

ಚೆಂದದ ಬರಹಗಳು, ಫೊಟೊಗಳು ಚೆನ್ನಾಗಿವೆ..
ಮೋಹನ ಮುರುಳಿ ಸಾಗರದೀಚೆಗೆ ನಮ್ಮನ್ನು ತಾಕುತ್ತಿರಲಿ

Anonymous said...
This comment has been removed by a blog administrator.
Anonymous said...

It is really a great and useful piece of information. I am glad that you just shared this helpful info with us. Please keep us informed like this. Thanks for sharing.|
[url=http://instantonlinepayday.co.uk/]payday loans uk
[/url]