Monday, June 14, 2010

ಓ ಸಾಜನಾ



ಓ ಸಾಜನಾ, ಓ ಸಾಜನಾ, 
ನಿನ ಬಿಟ್ಟು ಇರಲಾರೆ ನಾ
ಓ ಸಾಜನಾ, ಓ ಸಾಜನಾ  
ನನ ಭಾವ ನಿನ್ನ ಮನ


ನಿನ್ನೊಳಗಿನ, ನಿನ್ನಾಸೆಯ, ನಿನ್ನುಸಿರೆ ನಾ 
ನಿನ್ನೆದೆಯ ಮಿಡಿತದಲಿ, ಅಡಗಿರುವೆ ನಾ 
ಓ ಸಾಜನಾ, ಓ ಸಾಜನಾ,  
ನೀನಿಲ್ಲದೆ ನಾನಿರುವೆನಾ


ನನ್ನ ಮನೆಯಂಗಳದಿ, ಚೆಲ್ಲಿದ ನಗು ನೀನಾ 
ನಿನ್ನ ಕನಸಿನ ಮನದ, ಕನಸುಗಾರ ನಾನಾ
ಓ ಸಾಜನಾ, ಓ ಸಾಜನಾ,  
ಅರಳಿದಂತೆ ಹೂವಿನ ಬನ


ನೋವಿರಲಿ, ನಲಿವಿರಲಿ, ಮರೆಯೆ ಒಲವ ಗಾನ 
ನೀನಿರದ ಅನುಕ್ಷಣವೂ ಬಾಳು ದಿವ್ಯ ಮೌನ,
ಓ ಸಾಜನಾ, ಓ ಸಾಜನಾ,
ನಿನ ಬಿಟ್ಟು ಇರಲಾರೆ ನಾ 

ಸ್ನೇಹಿತರೆ,
ಕೆಲವು ದಿನಗಳಿಂದ ಅನಿವಾರ್ಯ ಕಾರಣಗಳಿಂದ ಬ್ಲಾಗ್ ಗೆ ಬರಲಾಗಲಿಲ್ಲ, ನಿಮ್ಮೆಲ್ಲರ ಬ್ಲಾಗನ್ನು ಓದಲು ಸರಿಯಾಗಿ ಆಗಲಿಲ್ಲ. ಬ್ಲಾಗ್ ಬರೆಯಲು ಆಗಲಿಲ್ಲ. ಅದಕ್ಕೆ ಕ್ಷಮೆ ಇರಲಿ. ಮತ್ತೆ ಮೊದಲಿನಂತೆ ಬ್ಲಾಗ್ ಗೆ ಬಂದಿದ್ದೇನೆ. ಕೆಲವು ಕೆಲಸದ ಒತ್ತಡಗಳು , ಭಾರತ ಪ್ರವಾಸ ಎಲ್ಲವೂ ಒಮ್ಮೆಲೇ ಬಂದು ಬರೆಯಲಾಗಲಿಲ್ಲ.


ಬಹಳಷ್ಟು ಹೊಸ ವಿಷಯಗಳು, ವಿಚಾರ ಧಾರೆಗಳೊಂದಿಗೆ ಮುಂದಿನ ವಾರ ಸಿಗುತ್ತೇನೆ,


ಪ್ರೀತಿ ಪ್ರೋತ್ಸಾಹ ಸದಾ ಇರಲಿ
ಗುರು

74 comments:

PARAANJAPE K.N. said...

ಒತ್ತಡದ ನಡುವೆಯೂ ನಿಮ್ಮ "ಸಾಜನಾ" ಚೆನ್ನಾಗಿ ಮೂಡಿ ಬ೦ದಿದೆ.

Nisha said...

istu chennagiro kavana bareddaddu guruna?... :-) :-) thumba chennagide.

Dr.D.T.Krishna Murthy. said...

ಓ ಸಾಜನಾ, ಓ ಸಾಜನಾ,
ಎಲ್ಲೋ ಕೇಳಿದಂತಿದೆ !
ಇದು ಸಾಗರದಾಚೆಯ
ಇಂಚರಾನಾ ------?

ಮನಸು said...

ಕವನ ತುಂಬಾ ಚೆನ್ನಾಗಿದೆ.......

nenapina sanchy inda said...

:-)
oLLe film lyric taraa ide.
Nice
:-)
malathi S

Ittigecement said...

ಸಾಜನಾ..
ಬಗೆಗೆ ಬರೆದ "ಗೀತಾ" ತುಂಬಾ ಚೆನ್ನಾಗಿದೆ...

ಪ್ರಾಸ ಬದ್ಧವಾಗಿದೆ...

ಅಭಿನಂದನೆಗಳು ಚಂದದ ಕವಿತೆಗೆ..
ಅದರ ಭಾವಗಳಿಗೆ...

ರಾಘವೇಂದ್ರ ಹೆಗಡೆ said...

ಚೆಂದದ ಕವಿತೆ. ತುಂಬಾ ಭಾವಪೂರ್ಣವಾಗಿ ಮೂಡಿಬಂದಿದೆ ಸರ್ ....:)

ಶಿವಪ್ರಕಾಶ್ said...

Nice one..
Welcome Back Guru :)

ಸಾಗರದಾಚೆಯ ಇಂಚರ said...

ನಿಶಾ ಮೇಡಂ
ಗುರುನೆ ಬರೆದಿದ್ದು :)
ನಿಮಗೆ ಇಷ್ಟವಾಗಿದ್ದಕ್ಕೆ ತುಂಬಾ ಸಂತೋಷ
ಹೀಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್
ಒತ್ತಡದ ನಡುವೆ ಒಳ್ಳೆ ಶಬ್ದಗಳು ಸಿಕ್ಕಿದವು
ನಿಮ್ಮ ಪ್ರೀತಿ ಹಾರೈಕೆ ಇರಲಿ

ಸಾಗರದಾಚೆಯ ಇಂಚರ said...

ಮನಸು
ಅಭಿಪ್ರಾಯಕ್ಕೆ ಧನ್ಯವಾದಗಳು
ಬರುತ್ತಿರಿ

ಸಾಗರದಾಚೆಯ ಇಂಚರ said...

ಕೃಷ್ಣಮೂರ್ತಿ ಸರ್
ಇಂಚರಾನೆ ಇದು
ನಿಮ್ಮ ಪ್ರೀತಿಯ ಮಾತುಗಳೂ ಯಾವತ್ತೂ ಸ್ಪೂರ್ತಿ

ಸಾಗರದಾಚೆಯ ಇಂಚರ said...

ನೆನಪಿನ ಸಂಚಯ ದಿಂದ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ರಾಘವೇಂದ್ರ ಸರ್
ನಿಮಗೆ ಹಿಡಿಸಿದರೆ ಅದೇ ಸಂತಸ
ಪ್ರೋತ್ಸಾಹ ಹೀಗೆಯೇ ಇರಲಿ
ಬರುತ್ತಿರಿ

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
''ಓ ಸಾಜನ'' ಕವನ ಹಿಡಿಸಿದ್ದಕ್ಕೆ ತುಂಬಾ ಸಂತೋಷ
ನಿಮ್ಮ ಮಾತುಗಳು ಎಂದಿಗೂ ಬರೆಯಲು ಸ್ಪೂರ್ತಿ
ಪ್ರೇರಣೆ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಶಿವೂ ಸರ್
ಥ್ಯಾಂಕ್ಸ್
ಬರ್ತಾ ಇರಿ

Subrahmanya said...

ಗುರುಮೂರ್ತಿಯವರೆ,

ಕವನ ಚೆನ್ನಾಗಿದೆ. ನಿಮ್ಮ ಭಾರತ(ನಿಮ್ಮೂರಿನ) ಪ್ರವಾಸದ ಬಗ್ಗೆಯೂ ಬರೆಯಿರಿ.

sunaath said...

ತಡವಾಗಿ ಬಂದರೂ ಒಳ್ಳೆಯ ಕವನದೊಡನೆ ಬಂದಿರುವಿರಿ.
ಅಭಿನಂದನೆಗಳು.

ದಿನಕರ ಮೊಗೇರ said...

sundara kavana sir..... chennaagide... endinante... tune ge bareda haagide... anda haage, illige bandiddaaga yaavudaadaroo music director ge meet maadidraa sir...

ಸುಬ್ರಮಣ್ಯ said...

:-)

ಸವಿಗನಸು said...

ಗುರು,
ಮಸ್ತ್ ಆಗಿದೆ ಕವನ.....
ಆ ವಿಡಿಯೋ ಮೈಲ್ ನಲ್ಲಿ ಕಳುಹಿಸದೆ ಬ್ಲಾಗ್ನಲ್ಲಿ ಹಾಕಿದ್ರೆ ಇನ್ನು ಖ್ಯಾತಿಗಳಿಸುತ್ತಿದ್ರಿ....

ಸಾಗರಿ.. said...

ಗುರು ಅವರೇ,
ಕವನ ತುಂಬಾ ಚೆನ್ನಾಗಿದೆ. ಎರಡನೇ ಪ್ಯಾರದಲ್ಲಿ ನಿನ್ನೆದೆಯ, ಮಿಡಿತದಲಿ ಹೇಳುವಾಗ ಮಧ್ಯದ coma ತೆಗೆದರೆ ಇನ್ನೂ ಚೆನ್ನಾಗಿರಬಹುದೇನೋ ಎನ್ನಿಸುತ್ತದೆ. ಭಾರತದಲ್ಲಿನ ದಿನಗಳು ಚೆನ್ನಾಗಿತ್ತೇ? ಏನಾದರೂ ಬದಲ್ಲವಣೆ ಕಂಡಿತೆ ಇಲ್ಲಿ??

balasubramanya said...

ಏನ್ ಸ್ವಾಮೀ ಇಷ್ಟೊಂದು ಲಹರಿ !!! ಎಲ್ಲಿತ್ತು ಈ ಕವನ .ಖುಷಿ ಕೊಟ್ಟಿದೆ ಚೆನ್ನಾಗಿದೆ.

ಸುಮ said...

ಸುಂದರ ಕವಿತೆ :) :)

SSK said...

very nice! I read this like as a film song...:)

SSK said...

Very nice! :)

Ash said...

Beautiful!!!!! And I loved the snaps too.... Very picturesque!!!!! Every frame seemed to come alive.... God Bless!!!!

Ash...
(http://asha-oceanichope.blogspot.com/)

ಸೀತಾರಾಮ. ಕೆ. / SITARAM.K said...

ತು೦ಬಾ ಲಹರಿಯಲ್ಲಿ ಬರೆದ ಹಾಗಿದೆ -ಒತ್ತಡವೆಲ್ಲಾ ಹೊರಹೋಗಿದೆ. ಬರೆದವರದಷ್ಟೆ ಅಲ್ಲಾ ಓದಿದವರದೂ ಓ ಸಾಜನಾ... ಒ ಸಜನಾ.....

ತೇಜಸ್ವಿನಿ ಹೆಗಡೆ said...

Good one :)

ಮನದಾಳದಿಂದ............ said...

ಗುರು ಸರ್,
ಬಹಳ ದಿನಗಳ ನಂತರ ಒಂದು ಸುಂದರ ಗೀತೆಯೊಂದಿಗೆ ಮರಳಿದ್ದೀರಾ. ಸುಸ್ವಾಗತ.....
ಸುಂದರ ಕವನ.........

Snow White said...

kavana haadina reeti ide sir..tumba ista aithu :)

ಅರಕಲಗೂಡುಜಯಕುಮಾರ್ said...

ಕವನದ ಸಾಲುಗಳು ಗಟ್ಟಿತನದ ಭಾವವನ್ನು ಸೂಸುತ್ತಿವೆ ಬರಹದಂತೆಯೇ ಕವನಗಳು ಮುದ ನೀಡುತ್ತಿವೆ ಸಾರ್. ಮುಂದಿನ ಬರಹಗಳಿಗೆ ಸದಾ ಕುತೂಹಲದ ಜಾತಕ ಪಕ್ಷಿ ನಾನು ನೆನಪಿರಲಿ.

Shashi jois said...

sogasaagide ri kavite...

Guruprasad said...

ಒಳ್ಳೆಯ ಕವನ,,, ತುಂಬಾ ಚೆನ್ನಾಗಿ ಮೂಡಿ ಬಂದಿದೆ... ಗುರು ಸರ್...

Manju M Doddamani said...

"ಸಾಜನಾ" ಯಾರು ಸರ್ ಅದು ????

ತುಂಬಾ ಚನ್ನಾಗಿದೆ ಕವನ

prabhamani nagaraja said...

ಕವನ ಭಾವಪೂರ್ಣವಾಗಿದೆ. ತಾಯ್ನಾಡಿನ ತಮ್ಮ ಅನುಭವಗಳ ನಿರೀಕ್ಷೆಯಲ್ಲಿರುವೆ. ನನ್ನ ಬ್ಲಾಗ್ ಗೊಮ್ಮೆ ಭೇಟಿ ನೀಡಿ.

Manasa said...

Good one :)

ಪ್ರವೀಣ್ ಭಟ್ said...

Hi Guromoorthanna,

barodu swalpa late adru latest kavanadondige bandri...

olle shruthi, sangeetha hakidare uttama haadagi kelugarannu kushi padisutte.. sahitya super

Pravi

AntharangadaMaathugalu said...

ಗುರು ಸಾರ್...
ಕವನದ "ನೋವಿರಲಿ, ನಲಿವಿರಲಿ, ಮರೆಯೆ ಒಲವ ಗಾನ
ನೀನಿರದ ಅನುಕ್ಷಣವೂ ಬಾಳು ದಿವ್ಯ ಮೌನ".... ಸಕ್ಕತ್ ಸಾಲುಗಳು ಇಷ್ಟವಾಯಿತು...

ಶ್ಯಾಮಲ

SANTOSH MS said...

Dear Guru Sir,

Nice poem. welcome back after a long time. Let your journey continue.

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಅವರೇ
ಧನ್ಯವಾದಗಳು
ಖಂಡಿತ ಭಾರತ ಪ್ರವಾಸದ ಬಗ್ಗೆ ಬರೆಯುತ್ತೇನೆ

ಸಾಗರದಾಚೆಯ ಇಂಚರ said...

ಸುನಾಥ್ ಸರ್
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು
ಬರುತ್ತಿರಿ

ಸಾಗರದಾಚೆಯ ಇಂಚರ said...

ದಿನಕರ್ ಸರ್
ಭಾರತ ಪ್ರವಾಸದಲ್ಲಿ ಯಾರನ್ನೂ ಮೀಟ್ ಮಾಡೋಕೆ ಆಗಲೇ ಇಲ್ಲ
ಸ್ವಲ್ಪ ಜ್ವರ ಬೇರೆ ಬಂದಿತ್ತು
ಮತ್ತೆ ಹೇಗಿದಿರಾ

ಸಾಗರದಾಚೆಯ ಇಂಚರ said...

ಮಾಚಿಕೊಪ್ಪ ಸರ್
ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

ಸವಿಗನಸು ಮಹೇಶ್ ಸರ್
ಹಾಗೆ ಮಾಡ್ಬೇಕಿತ್ತಲ್ವ
ಸುಮ್ನೆ ಎಲ್ಲರನು ಯಾಕೆ ಫೂಲ್ ಮಾಡೋದು ಅಂತ ಬಿಟ್ಟೆ
ಹೀಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಸಾಗರಿ
ನೀವು ಹೇಳಿದಂತೆ ಸರಿಪಡಿಸಿದ್ದೇನೆ,
ತಿದ್ದಿ ತೀಡುವ ನಿಮ್ಮಂತ ಓದುಗರೇ ಬರೆಯಲು ಸ್ಪೂರ್ತಿ
ಬರುತ್ತಿರಿ

ಸಾಗರದಾಚೆಯ ಇಂಚರ said...

ಬಾಲು ಸರ್
ಭಾರತ ಪ್ರವಾಸದ ಮಹಿಮೆ
ಹೀಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಸುಮಾ

ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

SSK

thanks for your comments

ಸಾಗರದಾಚೆಯ ಇಂಚರ said...

Asha

i am so happy,

keep visiting

thanks for the comments

ಸಾಗರದಾಚೆಯ ಇಂಚರ said...

ಸೀತಾರಾಮ್ ಸರ್
ಖಂಡಿತ ನಿಜಾ
ನನಗಂತೂ ಸಮಾಧಾನ ಆಗಿದೆ

ಸಾಗರದಾಚೆಯ ಇಂಚರ said...

ತೇಜಸ್ವಿನಿಯವರೇ

ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

ಮನದಾಳದಿಂದ
ಬಹಳ ದಿನಗಳಿಂದ ಬರೆಯದೆ, ನಿಮ್ಮನ್ನೆಲ್ಲ ನೋಡದೆ ಬೇಸರವಾಗಿತ್ತು
ಮುಂದೆ ಹೀಗಾಗದು
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

Snow White

thanks for the comments

heege barta iri

ಸಾಗರದಾಚೆಯ ಇಂಚರ said...

ಜಯಕುಮಾರ್ ಸರ್
ನಿಮ್ಮ ಪ್ರೀತಿಯ ಮಾತುಗಳು ತುಂಬಾ ಸಂತೋಷ ಕೊಟ್ಟಿವೆ
ನಿಮ್ಮ ಪ್ರೋತ್ಸಾಹ ಸದಾ ಇರಲಿ

ಸಾಗರದಾಚೆಯ ಇಂಚರ said...

ಶಶಿ
ಥ್ಯಾಂಕ್ಸ್
ಹೀಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಗುರು ಸರ್
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಸದಾ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಮಂಜು ಸರ್
ಸಾಜನಾ ಯಾರು ಅಂತ ನನ್ನ ಕೇಳಿದ್ರೆ ಹೇಗೆ?
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಪ್ರಭಾಮಣಿ
ಖಂಡಿತ ಬರೆಯುತ್ತೇನೆ,
ತುಂಬಾ ವಿಷಯವಿದೆ ಬರೆಯಲು

ಸಾಗರದಾಚೆಯ ಇಂಚರ said...

Manasa

thanks for the comments

keep visiting

ಸಾಗರದಾಚೆಯ ಇಂಚರ said...

ಪ್ರವೀಣ್
ಥ್ಯಾಂಕ್ಸ್ ಕಣೋ
ನಿನ್ನ ಮಾತು ಕೇಳಿದ್ರೆ ಖುಷಿ ಆಗ್ತಾ ಇದ್ದು
ಇನ್ನು ಕವನ ರಾಗ ಹಾಕಿದರೆ ಹೆಂಗೆ
ನೋಡನ, ಯಾವಾಗಲಾದರು ಹಾಕಸ್ತಿ ರಾಗನ

ಸಾಗರದಾಚೆಯ ಇಂಚರ said...

ಶಾಮಲ ಮೇಡಂ
ನಿಮ್ಮ ಅಭಿಪ್ರಾಯಕ್ಕೆ ಚಿರಋಣಿ
ಹೀಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

Santhosh

thanks for the comments
keep coming

V.R.BHAT said...

ಬಹಳ ಚೆನ್ನಾಗಿದೆ ಸ್ವಾಮೀ, ನಿಮ್ಮ ಸಾಜನಾ ಎಲ್ಲಿ ಎಂದು ಕೇಳಬಹುದೇ ? ನಮಸ್ಕಾರ

ಸಾಗರದಾಚೆಯ ಇಂಚರ said...

ವಿ ಆರ್ ಭಟ್ ಸರ್
ಸಾಜನಾ ಜೊತೆಯಲ್ಲಿಯೇ ಇದ್ದಾಳೆ
ನಿಮ್ಮ ಪ್ರೀತಿಯ ಅಭಿಪ್ರಾಯಕ್ಕೆ ಥ್ಯಾಂಕ್ಸ್

shivu.k said...

ಗುರುಮೂರ್ತಿ ಸರ್,

ನಿಮ್ಮೆಲ್ಲಾ ತಿರುಗಾಟದ ನಡುವೆ ನಿಮ್ಮ ಸಾಜನ ಕವನ ಚೆನ್ನಾಗಿ ಮೂಡಿಬಂದಿದೆ.

ನಾಗರಾಜ್ .ಕೆ (NRK) said...

ಓದಿ ನಿಮ್ಮ ಕವನ
ಸಂತೋಷಗೊಂಡಿತು ಮನ
ಯಾವಾಗಲು ಚೆಂದವಾಗಿರಲಿ ಸಾಜನಾ
ಸುಮಾರು ದಿನಗಳ ನಂತರ ಬಂದಿರಿ ನೀವು
ಖುಷಿಯಾಯಿತು ನಿಮ್ಮ ಆಗಮನ

ಸಾಗರದಾಚೆಯ ಇಂಚರ said...

ಶಿವೂ ಸರ್
ಬಹಳ ದಿನಗಳಿಂದ ಬ್ಲಾಗ್ ಬರೆಯದೆ ಬೇಸರವಾಗಿತ್ತು
ಎಅಗ ಸ್ವಲ್ಪ ನೆಮ್ಮದಿ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

ಏನ್ ಅರ ಕೆ
ನಿಮ್ಮ ಕವನ ಓದಿ ನನ್ನ ಮನ ಕುಣಿದಾಡಿತು
ಸುಂದರ ಅಭಿಪ್ರಾಯಕ್ಕೆ ಧನ್ಯವಾದ

shravana said...

ಚೆನ್ನಾಗಿದೆ ಕವನ..

ಸಾಗರದಾಚೆಯ ಇಂಚರ said...

ಶ್ರವಣ
ಥ್ಯಾಂಕ್ಸ್
ಬರುತ್ತಿರಿ

© ಹರೀಶ್ said...

ಗರುರವರೆ, ನಿಮ್ಮ ಕವನ ಚನ್ನಾಗಿದೆ

Raghu said...

ಓ ಸಾಜನಾ, ಓ ಸಾಜನಾ,
ನಿನ ಬಿಟ್ಟು ಇರಲಾರೆ ಓ ಸಾಜನಾ...ತುಂಬಾ ಸುಂದರ ಸಾಲುಗಳು.
ನಿಮ್ಮವ,
ರಾಘು.

ಮನಸಿನಮನೆಯವನು said...

ಸಾಗರದಾಚೆಯ ಇಂಚರ ,

'ಸಾಜನಾ' ಇಂಪಾದ ಇಂಚರ.