Tuesday, April 20, 2010

ಮುಂದುವರಿದ Grenen ಪ್ರವಾಸ ಕಥನ, ಭಾಗ -2

ಕಳೆದ ವಾರದ ಸಂಚಿಕೆಯಲ್ಲಿ ಗ್ರೆನೇನ್ ಎಂಬ ಪ್ರದೇಶದ ಚಿಕ್ಕ ಮಾಹಿತಿಯ ಜೊತೆಗೆ ಹಡಗಿನ ಪ್ರಯಾಣದ ಬಗೆಗೆ ತಿಳಿಸಿದ್ದೆ (Grenen- - ಡೆನ್ಮಾರ್ಕ್ ದೇಶದ ಉತ್ತರಭಾಗದ ತುತ್ತ ತುದಿ http://gurumurthyhegde.blogspot.com/2010/04/blog-post.html). ಅನೇಕ ಬ್ಲಾಗ್ ಮಿತ್ರರು ಕಾಯಿಸಬೇಡಿ ಎಂದು ತಿಳಿಸಿದ್ದರಿಂದ ಇನ್ನೂ ಕಾಯಿಸುವುದು ಸರಿ ಅಲ್ಲವೆಂದು ನಿರ್ಧರಿಸಿ ಬೇಗನೆ ಬರೆದು ಹಾಕುತ್ತಿದ್ದೇನೆ :)

Gothenburg ನಿಂದ Frederikshavn ಗೆ ಹೊರಡುವ ಹಡಗಿನ ಪ್ರಯಾಣ  ಆರಂಬವಾಗಿದ್ದು 1983 ರಲ್ಲಿ. ಅನೇಕ ಲಾರಿಗಳಿಗೆ ಇದು ವರ ಕಾರಣ ಕೇವಲ ಮೂರೇ ತಾಸಿನಲ್ಲಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹಡಗು ಲಾರಿಗಳನ್ನು ತಲುಪಿಸುತ್ತದೆ. ಇಲ್ಲದಿದ್ದರೆ ಅವರು ಸುಮಾರು 15 ಘಂಟೆಗಳಷ್ಟು ರಸ್ತೆಯಲ್ಲಿ ಸಂಚರಿಸಬೇಕು. ಆದ್ದರಿಂದ ಹಡಗಿನ ಒಳಗೆ ಹೆಚ್ಚಾಗಿ ಲಾರಿ ಮಾಲೀಕರು, ಡ್ರೈವರ್ ಗಳು ತುಂಬಿರುತ್ತಾರೆ. ಅಷ್ಟೇ ಅಲ್ಲದೆ ಎಷ್ಟೋ ಪ್ರವಾಸಿಗರು ತಮ್ಮ ಕಾರನ್ನು ಹಡಗಿನಲ್ಲಿ ಹಾಕಿ, ನಂತರ ಡೆನ್ಮಾರ್ಕ್ ಮುಟ್ಟಿದ ಮೇಲೆ ಕಾರಿನಲ್ಲಿ ಮುಂದಿನ ಸ್ಥಳಕ್ಕೆ ಪ್ರಯಾಣಿಸುತ್ತಾರೆ. ಇದರಿಂದ ಅವರ ಸಮಯ ಮಾತ್ರ ಉಳಿಯುವುದಿಲ್ಲ ಬದಲಿಗೆ ಪೆಟ್ರೋಲ್ ನ  ಹಣ ಉಳಿಯುತ್ತದೆ, ಐಶಾರಾಮಿ  ಹಡಗಿನಲ್ಲಿ ಕುಳಿತು ರುಚಿಯಾದ ಬಗೆ ಬಗೆಯ ಖಾದ್ಯ ಸೇವಿಸುತ್ತಾ, ವಿವಿದ ದೇಶದ ಪಾನೀಯಗಳನ್ನು ಹೀರುತ್ತಾ ಹೋಗುವ ಆ ಸುಖ ಕಾರಿನಲ್ಲಿ ಅವರಿಗೆ ಎಲ್ಲಿ ಸಿಗುತ್ತದೆ ಅಲ್ಲವೇ?


ಸುಮಾರು 155 ಮೀಟರ್ ಗಳಷ್ಟು ಉದ್ದದಾದ ಹಡಗು 550 ಕಾರುಗಳನ್ನು ಹೊತ್ತೊಯ್ಯುವಷ್ಟು ಸಮರ್ಥವಾಗಿದೆ. ಸುಮಾರು 2300 ರಷ್ಟು ಪ್ರಯಾಣಿಕರನ್ನು ಒಮ್ಮೆಲೇ ಹೊತ್ತೊಯ್ಯಬಹುದಾದ ಬ್ರಹತ್ ಹಡಗಿದು. ಇದರ ಹೊರಗಿನ ಮೈಮಾಟ ಎಷ್ಟು ಚಂದವೋ ಒಳಗಿನ ಒನಪು ವಯ್ಯಾರವೂ ಅಷ್ಟೇ ಮನೋಹರ. ನಿಮ್ಮ ದುಡ್ಡಿಗೆ ಸಂಚಕಾರ ನೀಡುವ ಅನೇಕ ಜೂಜು ಕೇಂದ್ರಗಳು (Casino Centre) ಇದರ ಒಳಗೆ ಇವೆ. ಮಕ್ಕಳ ಆಟದಿಂದ ಹಿಡಿದು ಟೇಬಲ್ ಟೆನ್ನಿಸ್ ನಂತಹ ಆಟಗಳು ಇದರೊಳಗೆ ಹೇರಳವಾಗಿವೆ. ಇಲ್ಲಿ ಜನ ಕುಳಿತಿರುವುದಕ್ಕಿಂತ ಒಂದಿಲ್ಲೊಂದು ಆಟದಲ್ಲಿ, ಜೂಜಾಡುತ್ತ ಇರುವುದೇ ಹೆಚ್ಚು. ವಾತಾವರಣ ಚೆನ್ನಾಗಿದ್ದರೆ ಹಡಗಿನ ಮೇಲೆ ಹೋಗಿ ಸುತ್ತಲೂ ಇರುವ ನೀಲಾಕಾಶ, ಬ್ರಹತ್ ಸಮುದ್ರದ ಸೌಂದರ್ಯವನ್ನು ಸವಿಯಬಹುದು. 

                                        

ನೀಲಾಕಾಶದ ನೀಲಿಯಿಂದಾಗಿ ಸಮುದ್ರದ ನೀರು ಅಚ್ಚ ನೀಲಿ ಸೀರೆ ಉಟ್ಟ ಬೆಡಗಿಯಂತೆ ತೋರುತ್ತದೆ. ಪ್ರಕ್ರತಿ, ಸೌಂದರ್ಯಕ್ಕೆ ಎಷ್ಟು ಹೆಸರುವಾಸಿಯೋ ಹಾಗೆಯೇ ಮಾನವನ ಅಹಂಕಾರ ಮುರಿಯುವಲ್ಲಿಯೂ ಅಷ್ಟೇ ಹೆಸರುವಾಸಿ. ಮನುಷ್ಯ ತಾನೆಷ್ಟೇ ದೊಡ್ಡವನಾದರೂ ಪ್ರಕ್ರತಿಯ  ಮುಂದೆ ಕುಬ್ಜನೆ. ನಾವು ಆಕಾಶದಲ್ಲಿ ಹಾರುವ ವಿಮಾನ ಸೃಷ್ಟಿಸಬಹುದು. ಆದರೆ ಜ್ವಾಲಾಮುಖಿಯ ಹೊಗೆಯಿಂದ ವಿಮಾನವನ್ನು ರಕ್ಷಿಸಲು ಸಾದ್ಯವಿಲ್ಲ. ಯೂರೋಪಿನ ಅದೆಷ್ಟೋ ವಿಮಾನ ನಿಲ್ದಾಣಗಳಲ್ಲಿ ಲಕ್ಷಾಂತರ ಜನರು ತಮ್ಮ ಮನೆಗೆ ಯಾವಾಗ ಸೇರುತ್ತೆವೋ ಎಂಬ ಆತಂಕದಲ್ಲಿದ್ದಾರೆ. ಪ್ರಕ್ರತಿಯ ನಡೆ ವಿಚಿತ್ರ, ಅದನ್ನು ಅರಿಯಲು ಯಾರಿಂದಲೂ ಸಾದ್ಯವಿಲ್ಲ. ಅಲ್ಲವೇ?

ಹೀಗೆ ಪ್ರಕ್ರತಿಯ ಬಗೆಗೆ ವಿಚಾರಿಸುತ್ತಾ ಹಡಗಿನ ಮೇಲೆ ಬಂದು ನಿಂತು ಸೌಂದರ್ಯ ಸವಿಯತೊಡಗಿದೆವು.  ವಿಪರೀತ ಗಾಳಿ, ಹಾಗೂ 8 ಡಿಗ್ರಿ ಯಷ್ಟು ಉಷ್ಣತೆ ಯಿಂದಾಗಿ ನಾವು ಹೆಚ್ಚು ಹೊತ್ತು ಅಲ್ಲಿ ನಿಲ್ಲಲಾಗಲಿಲ್ಲ. ಆದರೂ ಹುಚ್ಚಾಟಕ್ಕೆನೂ ಕಡಿಮೆಯಿರಲಿಲ್ಲ.
                                   

ಹಡಗಿನ ಒಳಗೆ ಬಂದು ನಾವು ಸ್ವಲ್ಪ ಹೊತ್ತು ಜೂಜನ್ನು ಆಡಿದೆವು.


                                    

 ಹೇಳಿಕೊಳ್ಳುವಂಥ ಲಾಭ ಬರದಿದ್ದರೂ ಒಂದು ಒಳ್ಳೆಯ ಅನುಭವ ಲಭಿಸಿತು. ನಾವು ಶಾಖಾಹಾರಿಗಳಿಗೆ ಆಹಾರದ್ದೆ ಸಮಸ್ಯೆ. ಎಲ್ಲಿ ಹೋದರೂ ನಮಗೆ ಬೇಕಾದ ಆಹಾರ ಸಿಗದೇ ಇದ್ದಿದ್ದರಿಂದ ಹೋಗುವಲ್ಲಿ ಎಲ್ಲ ಸ್ವಲ್ಪ ಆಹಾರ ತೆಗೆದುಕೊಂಡು ಹೋಗಲೇಬೇಕಾಗುತ್ತದೆ. ಮುದ್ದಿನ ಮಡದಿ ಹಿಂದಿನ ದಿನ ರಾತ್ರಿಯೆಲ್ಲ ನಿದ್ದೆ ಗೆಟ್ಟು ಮಾಡಿದ್ದ ತಿಂಡಿಯನ್ನು ಹಡಗಿನಲ್ಲಿ ತಿಂದು ಪುನಃ  ಸ್ವಲ್ಪ ಹೊತ್ತು ಇಸ್ಪೀಟ್ ಆಡುವಷ್ಟರಲ್ಲಿ 3ಘಂಟೆ ಕಳೆದೇ ಹೋಯಿತು. ನಾವು ಸೇರಬೇಕಾದ ಜಾಗ Frederikshavn  ಬಂದೆ ಬಿಟ್ಟಿತು.  

ಇನ್ನೊಂದು ವಿಚಾರ ಹೇಳಲೇಬೇಕು, ಇಷ್ಟೆಲ್ಲಾ ವ್ಯವಸ್ಥೆ ನೀಡುವ ಹಡಗಿನ ಟಿಕೆಟ್ ಬೆಲೆ ಕೇವಲ ೬೫೦ ರೂಪಾಯಿಗಳು. ಇಲ್ಲಿನ ಹಣಕ್ಕೆ ಹೋಲಿಸದರೆ ಇದು ತುಂಬಾ ತುಂಬಾ ಕಡಿಮೆ. ಕೇವಲ ಹಣದ ಆಸೆಗೊಂದೆ ಹಡಗು ಇರದೇ ಇಲ್ಲಿನ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿಯೂ ಅದರ ಪಾತ್ರ ಬಹಳ ದೊಡ್ಡದು. ಹಾಗಾಗಿ ಇಲ್ಲಿಗೆ ಬಂದ ಎಲ್ಲರೂ ಹಡಗಿನ ಪ್ರಯಾಣ ಮಾಡಿಯೇ ಹೋಗುತ್ತಾರೆ. ಪ್ರಕ್ರತಿ ವಿಕೋಪ ಎದುರಾದರೆ ನಿಮ್ಮನ್ನು ರಕ್ಷಿಸಲು ಪರ್ಯಾಯ ವ್ಯವಸ್ಥೆಯೂ ಇದೆ.

                                        

Frederikshavn ದಲ್ಲಿ ಇಳಿದ ಮೇಲೆ ಅಲ್ಲಿಂದ ನೇರ ರೈಲು ನಿಲ್ದಾಣಕ್ಕೆ ನಡೆದವು. ಅಲ್ಲಿಂದ ಸುಮಾರು ೨೦ ನಿಮಿಷಗಳು ಕಾಲ ನಡೆದರೆ ರೈಲು ನಿಲ್ದಾಣ ಬರುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಬೆಳೆಸಿದ ಸುಂದರ ಹೂಗಳು ಮನಸೂರೆಗೊಂಡವು. 
                                        

ಹಾಗೆಯೇ ನಡೆಯುತ್ತಿರಬೇಕಾದರೆ ಅಲ್ಲಿನ ೧೨೫ ವರ್ಷಗಳಷ್ಟು ಹಳೆಯದಾದ ಚರ್ಚ್ ಗೋಚರಿಸಿತು. ಇದನ್ನು ೧೮೯೨ ರಲ್ಲಿ ಖ್ಯಾತ ಶಿಲ್ಪಿ (Architect) ವಿ.ಅಹ್ಲ್ಮಂನ್ ಎಂಬಾತ ಸಂಪೂರ್ಣ ರೋಮನ್ ಶೈಲಿಯಲ್ಲಿ  ಕೇವಲ Lime Stone ಗಳನ್ನು ಉಪಯೋಗಿಸಿ ಕಟ್ಟಿದ್ದಾನಂತೆ. ಇಲ್ಲಿಯೇ ಸ್ವಲ್ಪ ಹೊತ್ತು ನಿಂತು ಕೆಲವು ಫೋಟೋ ತೆಗೆದುಕೊಂಡು ರೈಲು ನಿಲ್ದಾಣದ ಬಳಿಗೆ ಹೆಜ್ಜೆ ಹಾಕಿದೆವು.


                                                       

ರೈಲು ನಿಲ್ದಾಣ ತಲುಪುವಷ್ಟರಲ್ಲಿ ನಮ್ಮ ಅದೃಷ್ಟಕ್ಕೆ ರೈಲು ಹೊರತು ಹೋಗಿತ್ತು . ಮುಂದಿನ ರೈಲು ಬರಲು ೧ ಘಂಟೆ ಕಾಯಬೇಕು ಎಂದು ತಿಳಿಯಿತು. ರೈಲಿನ ಟಿಕೆಟ್ ತೆಗೆದುಕೊಂಡು ಅಲ್ಲಿಯೇ ನಿಲ್ದಾಣದ ಹೊರಗಿನ ಪಾರ್ಕಿನಲ್ಲಿ ಕುಳಿತು ಊಟ ಮಾಡಿದೆವು. ಊಟ ಮಾಡಿ ಬರುವಷ್ಟರಲ್ಲಿ ರೈಲು ನಮಗಾಗಿ ಕಾದು ನಿಂತಿತ್ತು. 


                                     

ಇಲ್ಲಿಂದ ನಮ್ಮ ಪ್ರಯಾಣ ಡೆನ್ಮಾರ್ಕಿನ ಉತ್ತರ ಭಾಗದ ತುತ್ತತುದಿಯ ನಗರ Skagen ಎಂಬ ನಗರಕ್ಕೆ. ಸುಮಾರು 40 ನಿಮಿಷ ನಿಸರ್ಗದ ಸೌಂದರ್ಯ ಸವಿಯುತ್ತಾ Skagen ತಲುಪಿದಾಗ ಮಧ್ಯಾನ್ಹ 3  ಘಂಟೆ ಆಗಿತ್ತು. 


                                              
Skagen ನಗರಕ್ಕೆ  ಅದರದೇ  ಆದ  ಭವ್ಯ  ಇತಿಹಾಸವಿದೆ, ಸುಮಾರು 1870 ಮತ್ತು 1880 ರ ಸಮಯದಲ್ಲಿ ಯೂರೋಪಿನ ಹಲವಾರು ಚಿತ್ರಕಾರರಿಗೆ ಇದೊಂದು ಸ್ವರ್ಗವಾಗಿತ್ತು. ಇಲ್ಲಿಂದ ಸುಮಾರು 5  km ನಡೆದರೆ ಸಿಗುವುದೇ Grenen ಎಂಬ ತುತ್ತ ತುದಿ. Kattegatt ಮತ್ತು 
  Skagerrak ಎಂಬ ಎರಡು ಸಮುದ್ರಗಳು ಸೇರುವ ಮನಮೋಹಕ ಪ್ರದೇಶವಿದು. ವಿಶಾಲವಾದ ಸಮುದ್ರ, ಸುಂದರ ಬೀಚ್, ಮನಮೋಹಕ ಪರಿಸರ, ಸೃಷ್ಟಿಯೇ ಇಲ್ಲಿ ಹುಟ್ಟಿತೆ ಎಂಬಂತೆ ಭಾಸವಾಯಿತು. ಇಲ್ಲಿನ ಚಿತ್ರ ವಿಚಿತ್ರ ವಾದ ಆಕಾಶದ ಬಣ್ಣಗಳು ನಮಗೆ ಇಷ್ಟೊಂದು ಮುದ ನೀಡಬೇಕಾದರೆ ಎಂಥಹುದೇ ಕಲಾಕಾರನಿಗೂ ಸಹಜವಾಗಿ ಚಿತ್ರ ಬಿಡಿಸಲು ಉತ್ತೇಜನ ನೀಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದರ ಬಗ್ಗೆ ಎಷ್ಟು ಹೇಳಿದರೂ ತೀರದು. ಹೇಳಿದಷ್ಟು ಇನ್ನಷ್ಟು ಹೇಳಬೇಕೆನಿಸುವ ಪ್ರದೇಶವಿದು. ಇಲ್ಲಿನ ಸುಂದರ ಸಮುದ್ರ ತೀರ, ಅವುಗಳ ಹಿಂದಿನ ಕಥೆ, ಇವೆಲ್ಲವುಗಳೊಂದಿಗೆ ಮುಂದಿನ ವಾರ ಮತ್ತೆ ಸಿಗುತ್ತೇನೆ. ಅಲ್ಲಿಯವರೆಗೆ ಕಾಯುತ್ತಿರಲ್ಲ?

ನಿಮ್ಮವ ಗುರು


61 comments:

ಮನಮುಕ್ತಾ said...

ಸು೦ದರ ಚಿತ್ರಗಳೊಡನೆ ಪ್ರವಾಸದ ಅನುಭವದ ಉತ್ತಮ ಬರಹ ಹಾಗು ಪ್ರಕೃತಿ ಸೌ೦ದರ್ಯಯದ ಸು೦ದರ ಚಿತ್ರಣ ಮನಸ್ಸಿಗೆ ಮುದ ಕೊಟ್ಟಿತು.

ತೇಜಸ್ವಿನಿ ಹೆಗಡೆ said...

Very Interesting...Skagerrak ಚಿತ್ರಗಳಿಗಾಗಿ ಕಾಯುತ್ತಿರುವೆ.. ಮುಂದಿನ ಭಾಗದಲ್ಲಿ ಹಾಕುವಿರಲ್ಲಾ? ನಿಮ್ಮೊಂದಿಗೇ ನಾನೂ ಪ್ರಯಾಣಿಸಿದಂತೆ ಭಾಸವಾಯಿತು ಓದಿ. ತುಂಬಾ ಅದೃಷ್ಟಶಾಲಿಗಳು ನೀವು ಬಿಡಿ :) ಅಂದಹಾಗೆ ಈಗ ಅಲ್ಲಿಯ ಪರಿಸ್ಥಿತಿ ಹೇಗಿದೆ? ಜ್ವಾಲಾಮುಖಿಯ ಹೊಗೆ ಮತ್ತೂ ದಟ್ಟವಾಗಿರಬೇಕಲ್ಲವೇ? ನಿಜ..ಪ್ರಕೃತಿಯ ಮುಂದೆ ನಾವೆಲ್ಲಾ ತೀರಾ ಕುಬ್ಜರು!

ಸೀತಾರಾಮ. ಕೆ. / SITARAM.K said...

ತು೦ಬಾ ಆಪ್ತವಗಿ ಪ್ರವಾಸವನ್ನ ಹೇಳಿಕೊ೦ಡಿದ್ದಿರಾ. ಜೀವನದಲ್ಲಿ ಒಮ್ಮೆ ಯುರೋಪ ಸುತ್ತಬೇಕೆ೦ಬ ಆಶೆ ಉತ್ಕಟವಾಗುತ್ತಿದೆ. ಚಿತ್ರಗಳು ಚೆನ್ನಾಗಿವೆ. ಮು೦ದಿನ ಲೇಖನ ಭಾಗ ಬೇಗ ಬರಲಿ.

ಜಲನಯನ said...

ಗುರು...ನಿಮ್ಮ ಲೇಖನ ನೋಡಿ ನನಗೆ ನನ್ನ ಮುಂದಿನ ಸಂಶೋಧನಾ ವಿಚಾರಗೋಷ್ಠಿಯ ಪ್ರವಾಸ ಎಲ್ಲಿಗೇ ಹಾಕಬೇಕೆಂದುಕೊಂಡಿದ್ದೇನೆ....ಹಹಹ...ಯೂರೋಪಿನ ವಿಶೇಷತೆಗಳನ್ನು ಬಹಳ ಕೇಳಿದ್ದೆ...ಎರಡು ವರ್ಷಕ್ಕೆ ಹಿಂದೆ ಸ್ಕಾಟ್ ಲ್ಯಾಂಡಿಗೆ ಹೋದಾಗ ಅನುಭವವಾಯಿತು....ನಿಮ್ಮ ಸ್ಟೇನಾ ಲೈನ್ ನಲ್ಲಿ ನಿಮ್ಮ ಪ್ರವಾಸದ ಕಥನ ನಮ್ಮನ್ನೂ ನಿಮ್ಮೊಂದಿಗೆ ಕೊಂಡೊಯ್ಯಿತು...ಧನ್ಯವಾದ

Swathi Bhat said...

ship travel, ooooooooo..lovely..nd nice pics..ya nothing great nd more beautiful than nature..

Subrahmanya said...

ಕಾಯಲೇಬೇಕಿದೆ. ಕುಳಿತಲ್ಲೇ ಇಂತಹ ತಾಣವೊಂದರ ಪರಿಚಯ ಮತ್ತು ಅನುಭವ ಆಗುವುದಾದರೆ..ಏಕೆ ಕಾಯಬಾರದು?. ನಿಮ್ಮ ಪ್ರವಾಸ ಕಥನ ಸೊಗಸಾಗಿದೆ. ಬರೆಯಿರಿ ಮುಂದೆ..

shivu.k said...

ಗುರುಮೂರ್ತಿ ಸರ್,

ಸೊಗಸಾದ ಚಿತ್ರಗಳನ್ನು ತೋರಿಸುತ್ತಾ, ನಮ್ಮ ಹಡಗಿನೊಳಗೆ ಕರೆದೊಯ್ದು ಮತ್ತೆ ರೈಲು ನಿಲ್ದಾಣಕ್ಕೆ ಕರೆತಂದಿದ್ದೀರಿ...
"ನಮ್ಮ ಅದೃಷ್ಟಕ್ಕೆ ರೈಲು ಹೊರಟು ಹೋಗಿತ್ತು " ಈ ಮಾತು ನನಗೆ ತುಂಬಾ ಇಷ್ಟವಾಯಿತು. ಸಹಜವಾಗಿ ಬಸ್ಸು ರೈಲುಗಳು ಹೊರಟು ಹೋದರೆ ಕಾಯಬೇಕಲ್ಲ ಅಂತ ಎಲ್ಲರೂ ಬೇಸರ ಮತ್ತು ಚಿಂತೆಗೀಡಾಗುತ್ತಾರೆ. ಆದ್ರೆ ನಾನು ನಿಮ್ಮಂತೆ ತಪ್ಪಿದ ಬಸ್ಸು, ರೈಲುಗಳಿಂದಾಗಿ ಅಲ್ಲಿನ ಸುತ್ತಲಿನ ವಾತಾವರಣವನ್ನು ನೋಡುತ್ತಾ ಖುಷಿಪಡುತ್ತೇನೆ...
ಮುಂದೇನಾಯಿತು....ಕಾಯುತ್ತೇನೆ...

Uday Hegde said...

Very nice sir..enjoyed it.

balasubramanya said...

ಸಾರ್ ನಿಮ್ಮ ಹಡಗಿನ ಪ್ರವಾಸದ ಅನುಭವ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ.ಚಿತ್ರಗಳು ಮನ ಸೂರೆಗೊಂಡಿವೆ , ಉತ್ತಮ ನಿರೂಪಣೆ ಇದೆ , ಜೊತೆಗೆ ನಿಮಗೆ ಮಾಹಿತಿ ನೀಡಬೇಕೆಂಬ ತುಡಿತ ವಿದೆ ನಿಮಗೆ ಧನ್ಯವಾದಗಳು.

V.R.BHAT said...

VERY INTERESTING MOMENTS, REALLY ENJOYED IT,THANKS

ಸುಬ್ರಮಣ್ಯ said...

ಚನ್ನಾಗಿದೆ

ವಾಣಿಶ್ರೀ ಭಟ್ said...

tumba interesting....u r lucky...

ಮನಸು said...

ಅಬ್ಬಾ!!! ನೀವು ಎಂತಾ ಅದೃಷ್ಟವಂತರು ಪ್ರಕೃತಿಯ ಸೌಂದರ್ಯ ಎಲ್ಲದರಲ್ಲೂ ಇರುತ್ತೆ ಆ ಸವಿಯನ್ನ ಸವಿದು ಬಂದಿದ್ದೀರಿ..ಒಳ್ಳೆಯ ನಿರೂಪಣೆ ನಾವೇ ಅಲ್ಲಿಗೆ ಹೋದ ಹಾಗೆ ಆಗಿದೆ. ಚಿತ್ರಗಳಂತೂ ಅದ್ಭುತ ಬಹಳ ಇಷ್ಟವಾಯಿತು ಮುಂದಿನ ಕಂತಿಗೆ ಕಾಯುತ್ತಲಿರುವೆವು.

ಕ್ಷಣ... ಚಿಂತನೆ... said...

ಗುರು ಅವರೆ,
ಹಡಗಿನ ಆರಂಭ, ಅದರಲ್ಲಿ ಲಾರಿಗಳು ಕಾರುಗಳ ಪೇರಿಕೆ, ಸಮಯ ಉಳಿಸುವ ಪ್ರಯಾಣ ಹಾಗೂ ಒಳಾಂಗಣದ ನೋಟದೊಂದಿಗೆ ಸಾಗರದ ಮೇಲಿನ ವಿಸ್ಮಯ, ಸೌಂದರ್ಯವನ್ನೂ ಮಾತುಗಳಲ್ಲಿ, ಚಿತ್ರಗಳಲ್ಲಿ ಹೇಳಿದ್ದೀರಿ.

ಪ್ರಕೃತಿಯ ಮುಂದೆ ನಾವೆಲ್ಲಾ ಕುಬ್ಜರು. ಪ್ರಕೃತಿ ತನ್ನ ಒಡಲಿನಲ್ಲಿ ಏನೆಲ್ಲಾ ಇಟ್ಟಕೊಂಡಿದೆ ಎಂದು ಪರಿಮಾಣವಾಗಿ ಬಲ್ಲವರಾರು?

ಮುಂದಿನ ವಾರದಲ್ಲಿ 'ಸಾಗರ ಸಂಗಮ'ದ ದೃಶ್ಯ -ಚಿತ್ರಗಳಿಗಾಗಿ ಕಾದಿರುವೆ.
ಸ್ನೇಹದಿಂದ,

ಮನಸಿನಮನೆಯವನು said...

-->ಸಾಗರದಾಚೆಯ ಇಂಚರ,

ಮುದ ನೀಡುತ್ತಿದೆ..

sunaath said...

ಗುರು,
ಪ್ರಕೃತಿಸೌಂದರ್ಯವನ್ನು ಅನುಭವಿಸುವ ಹೃದಯ ಬೇಕು. ಅದನ್ನು ಹಂಚಿಕೊಳ್ಳುವ ಕುಶಲತೆ ಬೇಕು. ಎರಡೂ ನಿಮಗಿವೆ. ನಿಮ್ಮೊಡನೆ ನಮಗೂ ಸಹ ಹಡಗಿನ ಪ್ರಯಾಣವಾದಂತಾಯಿತು!

ಸಾಗರಿ.. said...

ಬಹಳ ಚೆನ್ನಾಗಿದೆ ಪ್ರವಾಸ ಕಥನ ಮತ್ತು ಚಿತ್ರಗಳು ಕೂಡ. ಟೈಟಾನಿಕ್ ಚಿತ್ರ ನೋಡಿ ಹಡಗು ಎಂದರೇ ಭಯ ಬೀಳುವಂತಾಗಿತ್ತು. ಹಡಗಲ್ಲಿ ಪ್ರಯಾಣಿಸುವಾಗ ಭಯ ಆಗುತ್ತದೆಯೇ? ನನಗೆ ಅಘನಾಶಿನಿಯಿಂದ ತದಡಿಗೆ ದೋಣಿಯಲ್ಲಿ ಸಾಗುವಾಗ ಜೀವ ನನ್ನ ಕೈಯಲ್ಲೂ ಅಲ್ಲ ನಾವಿಕನ ಕೈಗಿತ್ತು ಮಜ ನೋಡುತ್ತಿರುವಂತೆ ಭಾಸವಾಗುತ್ತದೆ. ನಿಮ್ಮ ಕತೆ ಕೇಳುತ್ತಿದ್ದರೆ ಸ್ವತಃ ಪ್ರಯಾಣಿಸುತ್ತಿರುವಂತೆ ಅನುಭವವಾಗುತ್ತದೆ.

ಸಾಗರದಾಚೆಯ ಇಂಚರ said...

ಮನಮುಕ್ತಾ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು , ಇಲ್ಲಿನ ಪ್ರಕ್ರತಿಯಲ್ಲಿ ಒಂದು ಸಹಜ ಸೌಂದರ್ಯವಿದೆ, ಇಲ್ಲಿನ ಜನ ಪ್ರಕ್ರತುಯ ಆರಾಧಕರು

ಸಾಗರದಾಚೆಯ ಇಂಚರ said...

ತೇಜಸ್ವಿನಿಯವರೇ
ನಿಮ್ಮ ಚಂದನೆಯ ಅಭಿಪ್ರಾಯಕ್ಕೆ ವಂದನೆಗಳು
ಖಂಡಿತ ಮುಂದಿನ ವಾರ ಎರಡು ಸಮುದ್ರಗಳ ಮಿಲನದ ಫೋಟೋ ಹಾಕುವೆ, ನಿಜಕ್ಕೂ ಇದೊಂದು ಅದ್ಭುತ ಅನುಭವ
ಜ್ವಾಲಾಮುಖಿಯ ಬಿಸಿ ನಮಗೂ ತಟ್ಟಿದೆಸುಮಾರು ಎರಡು ದಿನ ಹೊರಗಡೆ ಸಲ್ಫರ್ ನ ವಾಸನೆ ಬರುತ್ತಿತ್ತು ಈಗ ಕಡಿಮೆಯಾಗಿದೆ

ಸಾಗರದಾಚೆಯ ಇಂಚರ said...

ಸೀತಾರಾಂ ಸರ್
ಯುರೋಪ ನೋಡಲೇಬೇಕಾದ ಸ್ಥಳಪ್ರತಿ ದೇಶವೂ ಅದರದೇ ಆದ ಸಂಸ್ಕ್ರತಿ ಹೊನ್ದಿದೆ
ಇಲ್ಲಿನ ಸೌಂದರ್ಯ ಹೇಳಳಸದಲ

ಸಾಗರದಾಚೆಯ ಇಂಚರ said...

ಅಜ್ಹಾದ ಸರ್
ಖಂಡಿತ ನಮ್ಮಲ್ಲಿಗೆ ಬನ್ನಿ, ಸದಾ ಸ್ವಾಗತ
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು

ಸಾಗರದಾಚೆಯ ಇಂಚರ said...

Swati,

yes, ship travel is always pleasurable

you can enjoy nature very much

thanks for the commnets

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಸರ್
ತುಂಬಾ ದಿನ ಕಾಯಿಸೋದಿಲ್ಲ, ಒಂದು ವಾರ ಅಷ್ಟೇ
ಎಲ್ಲವನ್ನೂ ಒಮ್ಮೆಲೆ ಬರೆದರೆ ಎಲ್ಲಿ ನೀವೆಲ್ಲ ಬೋರ್ ಆಗುತ್ತಿರೋ ಅಂತ ಹೀಗೆ ಕಂತಿನಲ್ಲಿ ಹಾಕುತ್ತಿದ್ದೇನೆ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಶಿವೂ ಸರ್
ನನಗೂ ಬಸ್, ರೈಲು ತಪ್ಪಿ ಹೋದರೆ ಅಲ್ಲಿಯೇ ಸುತ್ತಲೂ ಇರುವ ಪರಿಸರ ನೋಡಲು ಆರಂಬಿಸುತ್ತೇನೆ
ಪ್ರಕ್ರತಿಯಲ್ಲಿರುವ ಸೌಂದರ್ಯ ಬೇರೆಲ್ಲಿ ಇದೆ ಹೇಳಿ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

Uday Sir
thank you
keep coming

ಸಾಗರದಾಚೆಯ ಇಂಚರ said...

ಬಾಲು ಸರ್
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ನಿಮ್ಮೆಲ್ಲರೊಂದಿಗೆ ಹಂಚಿಕೊಂಡರೆ ಏನೋ ಸಮಾಧಾನ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

V.R.Bhat Sir
thanks for the comments
keep visiting

ಸಾಗರದಾಚೆಯ ಇಂಚರ said...

ಮಾಚಿಕೊಪ್ಪ ಸರ್

ತುಂಬಾ ಧನ್ಯವಾದ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

Vani

everyone is lucky, its only the time matters

thanks for the comments

ಸಾಗರದಾಚೆಯ ಇಂಚರ said...

ಮನಸು
ಇಲ್ಲಿನ ಸೌಂದರ್ಯಕ್ಕೆ ದಾಸನಾಗಿದ್ದೇನೆ ಪ್ರತಿ ಕಾದು ಹೊಸದಾಗಿ ತೋರುತ್ತಿದೆ
ನಿಜಕ್ಕೂ ಇದೊಂದು ಸ್ವರ್ಗ
ಒಮ್ಮೆ ಸಾದ್ಯ ವಾದರೆ ಬನ್ನಿ

ಸಾಗರದಾಚೆಯ ಇಂಚರ said...

ಚಂದ್ರು ಸರ್
ನಿಜಾ, ಪ್ರಕ್ರತಿಯ ಮುಂದೆ ನಾವೂ ಏನೂ ಅಲ್ಲ
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು

ಸಾಗರದಾಚೆಯ ಇಂಚರ said...

ಜ್ನಾನಾರ್ಪನ ಮಸ್ತು
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಸುನಾಥ್ ಸರ್
ಪ್ರಕ್ರತಿ ನನಗೆ ತುಂಬಾ ಇಷ್ಟ
ನನ್ನ ಬಹಳಷ್ಟು ಕವನಗಳ ಮೂಲ ವಸ್ತುವೇ ಪ್ರಕ್ರತಿ
ವಿಶಾಲ್ ಸಮುದ್ರದ ಮುಂದೆ ಕುಳಿತಾಗ ಸಿಗುವ ಆನಂದ ಮನೆಯ ಮುಂದಿನ ಟಿ ವಿ ಮುಂದೆ ಕುಳಿತಾಗ ಸಿಗುವುದೇ?
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಸಾಗರಿ
ಸಮುದ್ರ ಪ್ರಯಾಣ ಒಂದು ರೋಮಾನ್ಚನೀಯ ಅನುಭವ
ಇಲ್ಲಿ ನಮ್ಮ ಜೀವ ಪ್ರಕ್ರತಿಯ ಕೈಲಿ ಇರುತ್ತದೆ
ಪ್ರಕ್ರತಿ ಮುನಿದರೆ ಅಷ್ಟೇ?
ಮುಂದಿನ ವಾರ ಎರಡು ಸಮುದ್ರ ಸೇರುವ ಆ ತುತ್ತ ತುದಿಗೆ ಕರೆದುಕೊಂಡು ಹೋಗುತ್ತೇನೆ
ನನ್ನೊಂದಿಗೆ ನೀವೆಲ್ಲ ಪ್ರಯಾಣ ಮಾಡುತ್ತಿದ್ದಿರಿತುಂಬಾ ಸಂತೋಷಾ
ಹೀಗೆಯೇ ಬನ್ನಿರಿ

SANTOSH MS said...

Sir,

Good information . Tempting to visit that place the next time I go to Europe.

Raghavendra Hegde said...

ಚೆನ್ನಾಗಿದೆ ಸರ್. ನಿಮ್ಮೊಂದಿಗೆ ನಮ್ಮನ್ನೂ greneceಗೆ ಕರೆದುಕೊಂಡು ಹೋಗಿದ್ದೀರಿ ನಿಮ್ಮ ಬರವಣಿಗೆಯ ಮೂಲಕ.....:)

Snow White said...

sundara chitragalu haagu olleya pravaasa kathana sir :) :)

ದೀಪಸ್ಮಿತಾ said...

ಪ್ರಯಾಣದ ಅನುಭವ ಸೊಗಸಾಗಿದೆ

PARAANJAPE K.N. said...

ಪ್ರವಾಸ ಕಥನ ಚೆನ್ನಾಗಿದೆ. ಪ್ರಕೃತಿಯ ಸೌ೦ದರ್ಯವನ್ನು ಆಸ್ವಾದಿಸುವ ಮನಸ್ಥಿತಿ ಇದ್ದವರು ಮಾತ್ರ ಇ೦ತಹ ಪ್ರವಾಸದ ರೋಮಾ೦ಚನವನ್ನು ಈ ರೀತಿ ಬಣ್ಣಿಸಲು ಸಾಧ್ಯ. ನಾನೇ ನಿಮ್ಮೊಡನೆ ಪ್ರವಾಸ ಮಾಡಿ ಬ೦ದ೦ತಾಯ್ತು.

ಚುಕ್ಕಿಚಿತ್ತಾರ said...

chandada chitragalondige uttamma baraha .....

Shashi jois said...

ಗುರು,
ಮನಸೆಳೆಯುವ ಸುಂದರ ಚಿತ್ರದೊಂದಿಗೆ ನಿಮ್ಮ ಲೇಖನ ಓದಿ ನನಗೆ ಪ್ರವಾಸಕ್ಕೆಹೋಗಿ ಬಂದ ಅನುಭವ ಆಯ್ತು .
ನಿಜ ನೀವು ಹೇಳಿದ ಹಾಗೇ ಪ್ರಕೃತಿಯ ಮುಂದೆ ನಮ್ಮ ಆಟ ಏನು ನಡೆಯದು.ಇಲ್ಲದಿದ್ದರೆ ಮನುಷ್ಯನನ್ನು ಹಿಡಿಯುವರಿರುತ್ತಿರಲಿಲ್ಲ ಆಲ್ವಾ ...ನೀಲಿ ಸೀರೆ ಉಟ್ಟ ಸಮುದ್ರ ನೋಡಲು ಸೊಗಾಸಗಿತ್ತು..
ಮುಂದಿನ ಕಂತಿನ ಪ್ರಸಾರ ಬೇಗ ಬರಲಿ..

ವನಿತಾ / Vanitha said...

Gurumurthy, Beautiful explanation and nice photos too...:).ನೋಡಿದ ಮೇಲೆ ಭಾರತಕ್ಕೆ ಹೋಗುವಾಗ ಯುರೋಪ್ ನಲ್ಲಿಳಿದು , ಸ್ವಲ್ಪ places ನೋಡಲೇ ಬೇಕು ಅಂತ ಅನಿಸ್ತಿದೆ:)

ದಿನಕರ ಮೊಗೇರ said...

tumbaa sundara anubhava sir...... nammannoo nimma jote karedoyyitu.............. dhanyavaada....... sundara niroopanr jote soopar chitragalu.......

Manasaare said...

ಗುರು ಅವರೇ
ಸಕತ್ತ ಮಜಾ ಹೊಡಿತಾ ಇದ್ದೀರಾ ..ಪೋಸ್ಟ್ ಮೂಲಕ ನಮಗೂ ನಿಮ್ಮ ಜೊತೆ ಪ್ರವಾಸ ಕ್ಕೆ ಕರ್ಕೊಂಡು ಹೊಗಿದಕ್ಕೆ ಧನ್ಯವಾದಗಳೂರಿ . ಬೇಗ ಮುಂದು ವರಿಸಿ

ಮನಸಾರೆ

ಸಾಗರದಾಚೆಯ ಇಂಚರ said...

Dear Santhosh,

you should, its really amazing place

ಸಾಗರದಾಚೆಯ ಇಂಚರ said...

ರಾಘವೇಂದ್ರ ಸರ್
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ನನ್ನೊಂದಿಗೆ ನೀವು ಬಂದಿದ್ದಿರಲ್ಲ ನನಗೆ ಅದೇ ಖುಷಿ

ಸಾಗರದಾಚೆಯ ಇಂಚರ said...

Snow White,
thanks for the comments,
keep visiting

ಸಾಗರದಾಚೆಯ ಇಂಚರ said...

ದೀಪಸ್ಮಿತಾ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಮುಂದಿನ ವಾರ ಕೊನೆಯ ಕಂತು,
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್
ಪ್ರಕ್ರತಿ ನೀಡುವ ಸಂತೋಷ ಬೇರೆಲ್ಲಿಯೂ ಸಿಗದು
ಯಾವ ಸ್ವಾರ್ಥವಿಲ್ಲದೆ ಸರ್ವವನ್ನೂ ನೀಡುವ ಪ್ರಕ್ರತಿಯಿಂದ ನಾವು ಕಲಿಯುವುದು ತುಂಬಾ ಇದೆ
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು

ಸಾಗರದಾಚೆಯ ಇಂಚರ said...

ಚುಕ್ಕಿ ಚಿತ್ತಾರ
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು
ಮೆಚ್ಚಿದ್ದಕ್ಕೆ ಸಂತೋಷ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಶಶಿ ಯವರೇ
ನಿಮಗೆ ಇಷ್ಟ ಆಗಿದ್ದಕ್ಕೆ ನನಗೆ ತುಂಬಾ ಖುಷಿ
ಮನುಷ್ಯನ ಅಹಂಕಾರವನ್ನು ಕಾಲ್ ಕಾಲಕ್ಕೆ ಮುರಿಯಲು ಪ್ರಕ್ರತಿ ತಯಾರಾಗಿರುತ್ತಾಳೆ
ಇಲ್ಲದಿದ್ದರೆ ಸಮತೋಲನವೇ ತಪ್ಪಿ ಹೋಗುತ್ತಿತ್ತು
ನಾವು ಪ್ರಕ್ರತಿಯನ್ನು ಅರಾಧಿಸದಿದ್ದರೆ ಉಳಿಗಾಲವಿಲ್ಲ

ಸಾಗರದಾಚೆಯ ಇಂಚರ said...

ವನಿತಾ
ಖಂಡಿತ ಸ್ವೀಡೆನ್ನಿಗೆ ಬನ್ನಿ
ಯೂರೊಪೆ ನ ಎಲ್ಲ ಜಗಹವು ಸುಂದರ
ಒಮ್ಮೆ ಬನ್ನಿ

ಸಾಗರದಾಚೆಯ ಇಂಚರ said...

ದಿನಕರ್ ಸರ್
ನನ್ನ ಜೊತೆ ನೀವು ಪ್ರಯಾಣ ಮಾಡ್ತಾ ಇದ್ದೀರಿ
ಹೀಗೆ ಬರ್ತಾ ಇರಿ
ಮುಂದಿಂದ ವಾರ ಎರಡು ಸಮುದ್ರಗಳ ಮಿಲನ ಫೋಟೋ ಹಾಕುತ್ತೇನೆ

ಸಾಗರದಾಚೆಯ ಇಂಚರ said...

ಮನಸಾರೆ
ನಿಜಕ್ಕೂ ಇಲ್ಲಿಗೆ ಬಂದ ಮೇಲೆ ಹಲವಷ್ಟು ದೇಶ ತಿರುಗಿದ್ದೇವೆ
ಕಾರಣ ವೀಸಾ ಬೇಡಾ ಅದಿಕ್ಕೆ :)
ಸೌಂದರ್ಯದ ಆರಾಧಕರು ಇವರು
ನಿಮ್ಮ ಅಭಿಪ್ರಾಯಕ್ಕೆ ವಂದನೆ
ಬರುತ್ತಿರಿ

Nisha said...

ಪ್ರವಾಸ ಕಥನ ಚೆನ್ನಾಗಿದೆ. Nice photos.

Ittigecement said...

ಗುರುಮೂರ್ತಿ...

ಎಷ್ಟು ಚೆನ್ನಾಗಿದೆ ಈ ಸ್ಥಳ.. !

ವಾಹ್..!!

ಸ್ವರ್ಗವೆಂದರೆ ಇದೇ ಇರಬೇಕು...!!

ಹಾಗೆಯೇ ನಿಮ್ಮ ವಿವರಣೆ ತುಂಬಾ ಆಪ್ತವಾಗಿದೆ...

ನಮ್ಮನ್ನೂ ಪುಕ್ಕಟೆಯಾಗಿ ತಿರುಗಾಡಿಸಿದ್ದಕ್ಕೆ ಧನ್ಯವಾದಗಳು..

ಚಂದದ ಫೋಟೊಗಳಿಗೆ ಮತ್ತೊಮ್ಮೆ ಅಭಿನಂದನೆಗಳು...

ಸುಧೇಶ್ ಶೆಟ್ಟಿ said...

thumba interesting aagidhe... mundhina bhaagakke kaayuttEne kooda...

nimma blogige regular aagi baralu saadhya aaguttilla itteechege... bEsarisabEdi...

aadashtu bEga regular aaguttEne :)

ಸಾಗರದಾಚೆಯ ಇಂಚರ said...

ನಿಶಾ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
\ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
ನಿಮ್ಮ ಚೆಂದದ ಅಭಿಪ್ರಾಯಕ್ಕೆ ವಂದನೆಗಳು
ನಿಜಕ್ಕೂ ಇದೊಂದು ಸುಂದರ ಜಗಹ
ಎರಡು ಸಮುದ್ರಗಳು ಸೇರುವ ಜಾಗದಲ್ಲಿ ಬಣ್ಣಗಳ ವೈಚಿತ್ರ್ಯ ನನ್ನನ್ನು ಮೂಕನನ್ನಾಗಿಸಿತು
ಮುಂದಿನ ಲೇಖನದಲ್ಲಿ ಆ ಬಣ್ಣಗಳ ಚಿತ್ರ ಹಾಕುತ್ತೇನೆ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಸುಧೇಶ್
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು
ತಡವಾಗಿಯಾದರೂ ಬಂದಿದ್ದಿರಲ್ಲ ಅದೇ ಸಂತೋಷ
ಕೆಲವೊಮ್ಮೆ ಕೆಲಸದ ಒತ್ತಡದಲ್ಲಿ ನನಗೂ ಹಲವು ಬ್ಲಾಗ್ ಗಳಿಗೆ ಭೇಟಿ ಕೊಡಲಾಗುವುದಿಲ್ಲ
ಹೀಗೆಯೇ ಬರುತ್ತಿರಿ

Banu said...

WOW..Very neat. I ended up in your blog via a comment you had left on Asha's craft blog.Thanks for sharing your travel experience with us. My grandfather had written his own travelogue as well called "Ekaki Pravasi"..After that I had not read another travelogue that was quite interesting. :)