Sunday, April 11, 2010

Grenen- - ಡೆನ್ಮಾರ್ಕ್ ದೇಶದ ಉತ್ತರಭಾಗದ ತುತ್ತ ತುದಿ

ಐರೋಪ್ಯ ದೇಶಗಳಲ್ಲಿ ಇರುವಾಗ ರಜಾ ದಿನಗಳಲ್ಲಿ ಏನು ಮಾಡುವುದು ಎಂದು ವಿಚಾರಿಸುವ ಅಗತ್ಯವಿಲ್ಲ, ಆದರೆ ಎಲ್ಲಿಗೆ ಹೋಗುವುದು ಎಂಬುದೇ ಸಮಸ್ಯೆ ಆಗುತ್ತದೆ. ಕಾರಣ ಇಲ್ಲಿನ ಪ್ರತಿಯೊಂದು ಪ್ರದೇಶವೂ ರಮಣೀಯ, ಸುಮನೋಹರ. ಪ್ರಕ್ರತಿಯೇ ಮೈ ವೆತ್ತಂತೆ ಇರುವ ಇಲ್ಲಿನ ನಿಸರ್ಗ ಎಂಥವರನ್ನೂ ಮಂತ್ರ ಮುಗ್ಧಗೊಳಿಸುತ್ತದೆ. ಅದರಲ್ಲೂ ನಿಸರ್ಗವನ್ನು ದೇವರಂತೆ ಪೂಜಿಸುವ Scandinavian ದೇಶಗಳ ಸೌಂದರ್ಯ ಹೇಳಲಸದಳ. ಇವರು ಪ್ರಕ್ರತಿಗೆ ನೀಡುವ ಬೆಲೆ ನಿಜಕ್ಕೂ ಸೋಜಿಗಗೊಳಿಸುತ್ತದೆ. ಅದಕ್ಕಾಗಿಯೇ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿನ ಸೌಂದರ್ಯ ಸವಿಯಲು ಬರುತ್ತಾರೆ. ಇಂಥಹ ಒಂದು ಅದ್ಭುತ ಪ್ರದೇಶ ಗ್ರೆನೇನ್. ಡೆನ್ಮಾರ್ಕ್ ಎಂಬ ಸಂಪಧ್ಬರಿತ ದೇಶದ ಉತ್ತರಭಾಗದ ತುತ್ತ ತುದಿಯೇ ಗ್ರೆನೇನ್.
ಚಿತ್ರವನ್ನು ನೋಡಿ, ಎರಡೂ ಸಮುದ್ರಗಳು ಸಂಧಿಸುವ ಜಾಗವಿದು. ಸುಮಾರು 5 km ಗಳಿಗಿಂತ ಉದ್ದದ ವಿಶಾಲ್ ಬೀಚ್ ಎಂಥವರನ್ನೂ ಮಂತ್ರ ಮುಗ್ಧ   ಗೊಳಿಸುತ್ತದೆ. ಇಂಥಹ ಅದ್ಭುತ ಪ್ರದೇಶಕ್ಕೆ ನಾವು 5 ಜನ ಸ್ನೇಹಿತರು  ಸೇರಿ ಪ್ರವಾಸ ಹೊರಟೆವು. ಪ್ರವಾಸದ ಒಂದೊಂದು ಕ್ಷಣವೂ ರೋಮಾಂಚನೀಯ ವಾಗಿತ್ತು.  Gothenburg ನಿಂದ  ಬೆಳಿಗ್ಗೆ 9 ಘಂಟೆಗೆ ಬ್ರಹದಾಕಾರದ ಹಡಗಿನಲ್ಲಿ ಹೊರಟ ನಾವು ಅದೇ ದಿನ ರಾತ್ರಿ  12 ಘಂಟೆಗೆ ಪುನಃ ಬಂದು Gothenburg ಸೇರಿದೆವು. ಒಂದು ದಿನದ ಪ್ರವಾಸ ಕೇವಲ ಮನಸ್ಸಿಗೆ ನೆಮ್ಮದಿ ಅಷ್ಟೇ ಅಲ್ಲ ನಿಸರ್ಗದ ಬಗೆಗೆ ವಿಶೇಷ ಗೌರವವನ್ನೂ ನೀಡಿತು. ಮಾನವ ಎಷ್ಟೇ ದೊಡ್ಡವನಾದರೂ ನಿಸರ್ಗದ ಮುಂದೆ ತುಂಬಾ ಕುಬ್ಜ ವ್ಯಕ್ತಿ ಅನ್ನುವುದು ಸುಳ್ಳಲ್ಲ. ವಿಶಾಲ ಸಮುದ್ರದ ಮುಂದೆ ನಿಂತಾಗ ನಮ್ಮಲ್ಲಿನ ಅಹಂಕಾರ, ಸಿಟ್ಟು, ಕೋಪ ಎಲ್ಲವೂ ಮಾಯವಾಗುತ್ತದೆ. ನಮ್ಮ ಬಗ್ಗೆ ನಮಗೆ ಇರುವ ಪೊಳ್ಳು ಪ್ರತಿಷ್ಠೆ ಎಲ್ಲ ಮಾಯವಾಗುತ್ತದೆ. ಎರಡು ಸಮುದ್ರಗಳು ಸಂಧಿಸುವ ಆ ಜಾಗ ಐತಿಹಾಸಿಕವಾಗಿಯೂ ತುಂಬಾ ಮಹತ್ವಪೂರ್ಣ ವಂತೆ.

ಒಮ್ಮೆಲೇ ಆ ಜಾಗದ ಬಗೆಗೆ ತಿಳಿಸುವ ಬದಲಿಗೆ ನಿಮ್ಮನ್ನೂ ನನ್ನೊಂದಿಗೆ ಹಡಗಿನಲ್ಲಿ ಕರೆದೊಯ್ಯುತ್ತೇನೆ. ನನ್ನ ಅನುಭವಗಳೊಂದಿಗೆ ನಿಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿನ ರಮಣೀಯ ಸ್ಥಳಗಳ ಪರಿಚಯದ ಪ್ರಯತ್ನ ವಿದು.
ಬೆಳಿಗ್ಗೆ ೯ ಘಂಟೆಗೆ ನಾವು 5 ಜನ (ನಾನು, ನನ್ನ ಹೆಂಡತಿ, ಮತ್ತು ಮೂವರು ನನ್ನ ಮಿತ್ರರು) ಸೇರಿ Gothenburg ನಿಂದ ಪ್ರಯಾಣ ಹೊರಟೆವು. ಇಲ್ಲಿಂದ ರೈಲಿನಲ್ಲಿ ಹೋದರೆ ಬಹುಷ: 10 ತಾಸುಗಳಿಗೂ ಹೆಚ್ಚಿನ ಸಮಯ ಬೇಕಾಗಬಹುದು. ಆದರೆ ಪ್ರತಿದಿನ ಇಲ್ಲಿಂದ ಹಡಗು ಡೆನ್ಮಾರ್ಕಿನ ಫ್ರೆಡ್ರಿಕ್ ಶಾವ್ನ್  ಎಂಬ ಜಾಗಕ್ಕೆ ಹೋಗುತ್ತದೆ. ಇದು ತೆಗೆದುಕೊಳ್ಳುವ ಸಮಯ ಕೇವಲ 3 ಘಂಟೆ. ಆದರೆ ಹಡಗಿನ ಪ್ರಯಾಣ ಮಾತ್ರ ಜೀವನದಲ್ಲೇ ಮರೆಯಲಾರದ್ದು. ಆ ಬ್ರಹದಾಕಾರದ ಹಡಗು, ಅದರಲ್ಲಿನ ವ್ಯವಸ್ಥೆ ಎಲ್ಲವೂ ಕನಸಿನ ಲೋಕಕ್ಕೆ ಕರೆದೊಯ್ಯುತ್ತದೆ.




ಇಲ್ಲಿನ ಹಡಗಿನ ಒಳಗೆ ಒಂದು ಅದ್ಭತ ಮಾಯಾ ಲೋಕವಿದೆ, ಓದಲು ಪುಸ್ತಕವಿದೆ, ಆಡಲು ನೂರಾರು ಆಟಗಳಿವೆ, ಹಣ ಮಾಡಲು, ಕಳೆಯಲು ಜೂಜು ಕೇಂದ್ರಗಳಿವೆ, ತಿನ್ನಲು ರುಚಿ ರುಚಿಯಾದ ತಿಂಡಿ ತಿನಿಸುಗಳಿವೆ, ಕುಡಿಯಲು ನೂರಾರು ಬಗೆಯೇ ಪಾನೀಯಗಳಿವೆ, ವಿರಮಿಸಲು ರೂಂ ಗಳಿವೆ.



 ಕಣ್ಣಿಗೆ ಸೌಂದರ್ಯ ನೀಡಲು ವಿಶಾಲ ಸಮುದ್ರ ಸುತ್ತಲೂ ಇದ್ದೇ ಇರುತ್ತದೆ. 



ಒಟ್ಟಿನಲ್ಲಿ ಇದೊಂದು ವಿಭಿನ್ನ ಅನುಭವದ ಪ್ರಯಾಣ.

ಹಡಗಿನ ಬಗೆಗೆ, ಅಲ್ಲಿನ ಅನುಭವಗಳ ಬಗೆಗೆ, ಗ್ರೆನೇನ್ ಎಂಬ ಮಾಯಾ ಜಾಗದ ಬಗೆಗೆ ಇನ್ನೂ ಹೆಚ್ಚಿನ ವಿವರಣೆಯೊಂದಿಗೆ  ಮುಂದಿನ ವಾರ ಬರುತ್ತೇನೆ. ಅಲ್ಲಿಯವರೆಗೆ ನೀವು ಕಾಯಲೇಬೇಕು, ನಾನು ಕಾಯಿಸಲೇಬೇಕು :)

73 comments:

Unknown said...

nce one sir :)

ಸಾಗರದಾಚೆಯ ಇಂಚರ said...

arya_for U

ಥ್ಯಾಂಕ್ಸ್
ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು

ಬಾಲು ಸಾಯಿಮನೆ said...

ಏನೋ ಶುರು ಮಾಡೋದರೊಳಗೆ cut ಅಂದುಬಿಟ್ರಿ. ಕಾಯಲೇ ಬೇಕಲ್ಲ. ಇರಲಿ.

ಹಲವು ವಿಶೇಷಗಳ, ಜಗತ್ತಿನಲ್ಲಿ ಅತಿ ಹೆಚ್ಚು ಮನುಷ್ಯರಿಂದ ಹಾನಿಗೊಳಗಾದ ಬಾಲ್ಟಿಕ ಸಮುದ್ರೋಲ್ಲಂಘನದ ಅನುಭವಕ್ಕೆ ಕಾಯ್ತಾ ಇದ್ದೀನಿ.

ನಾನೂ, ಜರ್ಮನಿಯಿಂದ ಸ್ವಿಡನ್ ಗೆ ಬರುವುದಿದ್ದರೂ ಹಡಗಿನಲ್ಲೇ ಬರಬಹುದೇನೋ. ವಿಚಾರಿಸಿ ನೋಡುತ್ತೇನೆ.

sunaath said...

ಮಾಯಾಲೋಕಕ್ಕೆ ಬರೆದ ನಿಮ್ಮ ಮುನ್ನುಡಿಯೇ ನನ್ನನ್ನು ಮರಳುಗೊಳಿಸಿದೆ. ಮುಂದಿನ ಭಾಗಕ್ಕೆ ಕಾಯಲು ನಾನು ತಯಾರಿದ್ದೇನೆ. ದಯವಿಟ್ಟು ಜಾಸ್ತಿ ಕಾಯಿಸಬೇಡಿ.

Dr.D.T.Krishna Murthy. said...

ಯುರೋಪ್ ಪ್ರವಾಸ ನನ್ನ ಬಹು ದಿನಗಳ ಕನಸು .ನನಸಾಗುವ ಮೊದಲು ನಿಮ್ಮ ಕ್ಯಾಮರಾ ಕಣ್ಣುಗಳಿಂದಲೇ ನೋಡಿಬಿಡುವ ಉತ್ಸಾಹ !ನಿಮ್ಮ
ಪ್ರವಾಸ ಕಥನಗಳ ಮುಂದಿನ ಕಂತುಗಳಿಗಾಗಿ ಉತ್ಸುಕತೆಯಿಂದ ಎದುರು ನೋಡುತ್ತಿದ್ದೇನೆ .

Me, Myself & I said...

ಸಖತ್

ಜಲನಯನ said...

Nice experience sharing Dr. Guru, haudu westerners parisarakke hecchu ottu kodtaare...
chennagide lekhana.

ಮನಮುಕ್ತಾ said...

ಒಳ್ಳೆಯ ವಿವರಣೆಯೊ೦ದಿಗೆ ಪ್ರವಾಸಕಥನ ಖುಶಿಕೊಟ್ಟಿತು.

Snow White said...

nice post sir..thanks for sharing :)

shivu.k said...

ಗುರುಮೂರ್ತಿ ಸರ್,

ವೆರಿಗುಡ್...ಮತ್ತೆ ನಿಮ್ಮ ಪ್ರವಾಸಗಳನ್ನು ತಿಳಿದುಕೊಳ್ಳುವ ಅವಕಾಶ. ನೇರ ಗ್ರೆನಿನ್ ವಿವರ ಕೊಟ್ಟಿಬಿಡುತ್ತೀರೇನೋ ಅಂದುಕೊಳ್ಳುವಷ್ಟರಲ್ಲಿ ಹಡಗಿನ ಬಗ್ಗೆ ಬರೆಯುತ್ತಿದ್ದೀರಿ...ಪ್ರವಾಸದ ಪ್ರತಿಯೊಂದನ್ನು ವಿವರಿಸಿದರೆ ನಿಜವಾದ ಮಜ ಅಲ್ವಾ....ವಾರಕ್ಕೊಮ್ಮೆ ದಯವಿಟ್ಟು ಕೊಟ್ಟುಬಿಡಿ....

ಸಾಗರದಾಚೆಯ ಇಂಚರ said...

ಬಾಲು
ಎಲ್ಲವನ್ನೂ ಒಮ್ಮೆಲೇ ಬರೆದರೆ ಅದೊಂದು ದೊಡ್ಡ ಕಾದಂಬರಿಯೇ ಆಗುತ್ತದೆ
ಹಾಗಾಗಿ ಅನಿವಾರ್ಯವಾಗಿ ಮುಂದಿನ ವಾರಕ್ಕೆ ಮುಂದೂಡಬೇಕಾಯಿತು
ಅಲ್ಲಿನ ಅನುಭವಗಳು ವಿಭಿನ್ನ
ಬಾಲ್ಟಿಕ್ ಸಮುದ್ರದ ರೋಚಕ ಕಥೆ ಜೊತೆಗೆ ಮುಂದಿನ ವಾರ ಬರುತ್ತೇನೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸುನಾಥ್ ಸರ್
ಖಂಡಿತ ಮುಂದಿನ ವಾರ ಮುಂದಿನ ಭಾಗ
ಕಾಯಿಸಲಾರೆ ಹೆಚ್ಚು
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು

ಸಾಗರದಾಚೆಯ ಇಂಚರ said...

ಕೃಷ್ಣಮೂರ್ತಿ ಸರ್
ಐರೊಪ್ಯ ದೇಶಗಳ ಸೊಗಸೇ ಬೇರೆ
ನೀವು ಒಮ್ಮೆ ಬನ್ನಿ
ಅಭಿಪ್ರಾಯಕ್ಕೆ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

ಲೋದ್ಯಾಶಿ ಸರ್
ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

ಜಲನಯನ ಅಜ್ಹಾದ್ ಸರ್
ನಿಜ, ಇವರು ಕೊಡುವಷ್ಟು ಪರಿಸರದ ಬಗೆಗೆ ಕಾಳಜಿ ನಾವು ನೀಡುವುದಿಲ್ಲ
ಅತ್ಯಂತ ವ್ಯವಸ್ಥಿತವಾಗಿ ಪರಿಸರ ಬೆಳೆಸುತ್ತಾರೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಮನಮುಕ್ತಾ
ನಿಮ್ಮ ಮಾತುಗಳು ನನಗೆ ಸಂತಸ ನೀಡಿತು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

Snow White,

thanks for the comments
keep visiting

ಸಾಗರದಾಚೆಯ ಇಂಚರ said...

ಶಿವೂ ಸರ್
ನಿಮ್ಮ ಉತ್ಸಾಹಭರಿತ ಮಾತುಗಳಿಗೆ ಥ್ಯಾಂಕ್ಸ್
ಇಲ್ಲಿನ ಜನ ಜೀವನದ ಬಗೆಗೆ ಒಮ್ಮೆ ಬರೆಯುತ್ತೇನೆ ಹೇಳಿದ್ದೇನೆ,
ಇದೊಂದು ಮರೆಯಲಾರದ ಪ್ರವಾಸ
ಹೀಗೆ ಬರುತ್ತಿರಿ

ದಿನಕರ ಮೊಗೇರ said...

TUMBAA KHUSHI KODTU........ photo kooda chennaagide........... hecchu kaayisabedi......

Nisha said...

Nice one. You have left no choice other than to wait.

V.R.BHAT said...

ಚೆನ್ನಾಗಿದೆ ಪ್ರವಾಸ ಕಥನ, ಮುಂದುವರಿಯಲಿ, ಧಾರವಾಹಿಗಳ ಥರ ಸಪೆನ್ಸ್ ಬೇಡ, ಇದೇ ಥರ ಸಾದಾ ಥ್ರಿಲ್ ಸಾಕು,ಧನ್ಯವಾದಗಳು

Creativity said...

ಅಬ್ಬ ಅದ್ಬುತ.....ಬಹಳ ಮನ ಮೆಚಿದ ಜಾಗವಿದು!!!!! ಮುಂದಿನವಾರದ ವರೆಗೂ ಕಾಯಿಲೇಬೇಕು......

ತೇಜಸ್ವಿನಿ ಹೆಗಡೆ said...

ತುಂಬಾ ಆಸಕ್ತಿಕರವಾಗಿದೆ ನಿಮ್ಮ ಪಯಣದ ಪ್ರಸಂಗ. ಮುಂದಿನ ಭಾಗಕ್ಕಾಗಿ ಕಾಯುವೆ. ಎರಡು ಸಮುದ್ರಗಳು ಸೇರುವ ಮತ್ತಷ್ಟು ಫೋಟೋಗಳನ್ನು ಹಾಕಿ. ಅಂತೆಯೇ ಅವುಗಳ ಸೇರುವಿಕೆಯ ಹಿಂದಿರುವ ಐತಿಹಾಸಿಕ ಮಹತ್ವವನ್ನೂ ತಿಳಿಸಿ.

ವನಿತಾ / Vanitha said...

ಕಾಯ್ತೀವಿ:)

jithendra hindumane said...

ತುಂಬಾ ಸುಂಗರ ಪ್ರವಾಸ ಕಥನ.. ಮಂದಿನದರ ಬಗ್ಗೆ ಕುತೂಹಲ ಮೂಡಿಸುತ್ತಿದೆ...

Subrahmanya said...

ಮೊದಲ ಚಿತ್ರ ಮತ್ತು ಅದರ ವಿವರಣೆ ಓದಿಯೇ ಸೋತುಹೋದೆ !. ಮುನ್ನುಡಿಯೇ ಮುದವಾಗಿರಬೇಕಾದರೆ ಇನ್ನು ಇಡೀ ಪ್ರವಾಸದ ವಿವರಣೆ...ಅಬ್ಬಾ ! ದಯಮಾಡಿ ಬೇಗ ಬರೆಯಿರಿ.

ಕ್ಷಣ... ಚಿಂತನೆ... said...

ಗುರು ಅವರೆ, ಪ್ರವಾಸ ಕಥನದಿಂದ ನಮಗೊಂದು ಹೊಸ ಲೋಕಕ್ಕೆ ಕರೆದೊಯ್ಯುತ್ತಿರುವಿರಿ.

ನಿಸರ್ಗ ಪ್ರೇಮಿಗಳಿಗೊಂದು ಇದು ನಿಜಕ್ಕೂ ಸಂತಸದ ವಿಚಾರ.
ಮುಂದಿನ ಕಂತಿಗಾಗಿ ಕಾಯುತ್ತಿದ್ದೇನೆ.

ಸ್ನೇಹದಿಂದ,

Ash said...

Hmmm... That was interesting & the pic very impressive.... Enjoyed reading through.... Looking forward to the episode further.... :-)

Ash...
(http://asha-oceanichope.blogspot.com/)

ಸಾಗರದಾಚೆಯ ಇಂಚರ said...

ದಿನಕರ್ ಸರ್
ಖಂಡಿತ ಹೆಚ್ಚು ಕಾಯಿಸಲ್ಲ
ಮುಂದಿನ ವಾರ ಹಾಕ್ತೀನಿ ಮುಂದಿನ ಭಾಗ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

Nisha

hahah, yes you have to wait

only one week :)

thanks for the comments

ಸಾಗರದಾಚೆಯ ಇಂಚರ said...

ವಿ ಅರ್ ಭಟ್ ಸರ್
ಒಂದೇ ದಿನ ಹಾಕಿದ್ರೆ ನನಗೂ ತುಂಬಾ ಬರೀಬೇಕು
ಹೀಗೆ ಹಾಕಿದ್ರೆ ನನಗೂ ಸ್ವಲ್ಪ ರೆಸ್ಟ್ ಸಿಗತ್ತೆ :)
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

ಹೌದು, ಆ ಎರಡು ಸಮುದ್ರಗಳು ಸೇರುವ ಆ ಜಾಗ ನನಗಂತೂ ತುಂಬಾ ಇಷ್ಟವಾಯಿತು
ಮುಂದಿನ ವಾರ ಇನ್ನೂ ರೋಚಕ ವಿಷಯಗಳನ್ನು ತಿಳಿಸುತ್ತೇನೆ

ಸಾಗರದಾಚೆಯ ಇಂಚರ said...

ತೇಜಸ್ವಿನಿಯವರೇ,
ಹೌದು, ಸಮುದ್ರಗಳು ಸೇರುವ ಜಾಗ ಬಹಳಷ್ಟು ಪ್ರಸಿದ್ಧಿ ಪಡೆದಿದೆ
ಅದರಲ್ಲೂ ಕಡು ಬೇಸಿಗೆಯಲ್ಲಿ ಇದಕೆ ಭಾರಿ ಮಹತ್ವವಿದೆ
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು

ಸಾಗರದಾಚೆಯ ಇಂಚರ said...

ವನಿತಾ
ಕಾಯಲೇಬೇಕು :)

ಸಾಗರದಾಚೆಯ ಇಂಚರ said...

ಜಿತೇಂದ್ರ,
ನಿಮ್ಮ ಕುತೂಹಲ ಮುಂದಿನ ವಾರ ತಣಿಸುತ್ತೇನೆ
ಅಲ್ಲಿಯವರೆಗೆ ಕ್ಷಮಿಸಿ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಸುಬ್ರಮಣ್ಯ
ನಿಮ್ಮ ಪ್ರೀತಿಯ ನುಡಿಗೆ ನಮನ
ನಿಮ್ಮೆಲ್ಲರ ಪ್ರೀತಿಯೇ ಬರೆಯಲು ಪ್ರೇರೇಪಿಸುತ್ತದೆ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಚಂದ್ರು ಸರ್
ನಿಜಕ್ಕೂ ಇಲ್ಲಿನವರ ಪರ್ಸಿಅರ ಪ್ರೇಮ ಮೆಚ್ಚಲೇಬೇಕು
ಗಿಡ ಮರಗಳ ಬಗೆಗಿನ ಇವರ ಪ್ರೇಮ ಕ್ಕೆ ನಾನು ದಂಗಾಗಿದ್ದೇನೆ\
ನಿಮ್ಮ ಅಭಿಪ್ರಾಯಕ್ಕೆ ವಂದನಗೆಳು

ಸಾಗರದಾಚೆಯ ಇಂಚರ said...

Dear AshKuku,

thanks for the comments

really its an amazing place

Keep visiting

PARAANJAPE K.N. said...

ಪ್ರವಾಸದ ರೋಚಕತೆಯನ್ನು ಹಾಗೆಯೇ ಸೆರೆ ಹಿಡಿದು ನಮ್ಮ ಮು೦ದಿಟ್ಟಿದ್ದೀರಿ. ಚೆನ್ನಾಗಿದೆ. ಮು೦ದಿನ ಕ೦ತು ಬೇಗ ಬರಲಿ.

akshata said...

ಪ್ರವಾಸ ಕಥನದ ಮುನ್ನುಡಿ ಬಹಳ ಕುತೂಹಲ ಹುಟ್ಟಿಸಿದೆ. ಪ್ರಯಾಸವಿಲ್ಲದ ಪ್ರವಾಸವನ್ನು ಅದೂ ಏಳು ಸಮುದ್ರಗಳಾಚೆಗಿನ ಪ್ರವಾಸವನ್ನು ಮಾಡಿಸುತ್ತಿದ್ದೀರಿ, ಮುಂದಿನ ಭಾಗ ಬೇಗ ಓದಿಸಿ.
ಅಕ್ಷತ.

ರಾಘವೇಂದ್ರ ಹೆಗಡೆ said...

ಡೆನ್ಮಾರ್ಕಿನ ಪರಿಸರವ ಪರಿಚಯಿಸುತ್ತಿದ್ದೀರಿ ಸರ್ ತಮ್ಮ ಪ್ರವಾಸ ಕಥನದಲ್ಲಿ. ಚೆನ್ನಾಗಿದೆ, ಮತ್ತೆ ಮುಂದಿನ ಕಂತ ಓದಲು ಬರುವೆ.....:)

ಸಾಗರಿ.. said...

ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ, ರೋಚಕವಾಗಿದೆ. ಜೀವನದಲ್ಲಿ ಅಂತಹ ಅನುಭವ ಸಿಗತ್ತೋ ಇಲ್ವೊ ಆದ್ರೆ ಅದನ್ನು ನಿಮ್ಮ ಬರಹದಲ್ಲಿ ಕಾಣುವಂತಾಗಿದೆ. ಆದಷ್ಟು ಬೇಗ ಮುಂದಿನ ಭಾಗ ಬರಲಿ ಎಂದು ಕಾಯುತ್ತಿದ್ದೇನೆ.

balasubramanya said...

ಸ್ವಾಮೀ ಪಯಣದ ಉತ್ತಮ ಪ್ರಾರಂಭ ಮಾಹಿತಿ ಚೆನ್ನಾಗಿದೆ. ಮುನ್ನುಡಿ ರುಚಿ ಕಟ್ಟಾಗಿ ಇದೆ ಮುಂದೆ ಸಮೃದ್ದ ಭೋಜನ ಸಿಗೋದು ಗ್ಯಾರಂಟಿ!!!

ಬಿಸಿಲ ಹನಿ said...

ಗ್ರೆನಿನ್‍ನಲ್ಲಿ ನಿಮ್ಮ ಅನುಭವಗಳು ಹಾಗೂ ಚಿತ್ರಗಳು ತುಂಬಾ ಚನ್ನಾಗಿವೆ.

ಅರಕಲಗೂಡುಜಯಕುಮಾರ್ said...

ಬರಹದ ಓಘಕ್ಕೆ ಪ್ರವಾಸದ ಹೊಸ ಆಯಾಮ ಚೆನ್ನಾಗಿದೆ, ಕುತೂಹಲದ ಘಟ್ಟಕ್ಕೆ ತಲುಪಿಸುವ ಹಾದಿಯಲ್ಲಿದ್ದೀರಿ ಕಾಯುವುದು ಅನಿವಾರ್ಯ, ಕಾಯುತ್ತೇವೆ ಸಾರ್. ಕಳೆದ ವಾರ Fashion ಲೋಕಕ್ಕೆ ಕರೆದೊಯ್ದು ಅದ್ಭುತ ಅನುಭವವನ್ನು Lively ಆಗಿ ನೀಡಿದ್ದೀರಿ ತುಂಬಾ ಥ್ಯಾಂಕ್ಸ್ :)

geete said...

Thanks for taking us along :)

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ನಿಮ್ಮೆಲ್ಲರೊಂದಿಗೆ ಪ್ರವಾಸವನ್ನು ಹಂಚಿಕೊಳ್ಳಬೇಕೆನಿಸಿತು
ಹಾಗೆಯೇ ಬರೆಯಲು ಆರಂಬಿಸಿದೆ

ಸಾಗರದಾಚೆಯ ಇಂಚರ said...

ಅಕ್ಷತ
ಏಳು ಸಮುದ್ರಗಳಾಚೆಗೆ ಇನ್ನೆರಡು ಸಮುದ್ರಗಳು ಸೇರುತ್ತಿವೆ
ಮುಂದಿನ ವಾರ ಅದರ ವಿವರಣೆ ಕೊಡುತ್ತೇನೆ
ಬರುತ್ತಿರಿ

ಸಾಗರದಾಚೆಯ ಇಂಚರ said...

ರಾಘವೇಂದ್ರ ಸರ್
ನಿಮ್ಮೆಲ್ಲರ ಆಸಕ್ತಿಯೇ ನನಗೆ ಬರೆಯಲು ಪ್ರೇರಣೆ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಸಾಗರಿ
ಜಗತ್ತು ತುಂಬಾ ಚಿಕ್ಕದು,
ಖಂಡಿತ ಅಂಥಹ ಅವಕಾಶ ಸಿಗುತ್ತದೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ನಿಮ್ಮೊಳಗೊಬ್ಬ
ಭೋಜನ ಅಂತೂ ಸಿಗುತ್ತದೆ ಅದು ರುಚಿಕಟ್ಟು ಹೌದೋ ಅಲ್ಲವೋ ನೀವೇ ಹೇಳಬೇಕು
ಭೋಜನ ಹಾಕುವ ಮನಸಂತೂ ಇದೆ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಬಿಸಿಲ ಹನಿ ಉದಯ ಸರ್
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಜಯಕುಮಾರ್ ಸರ್
ನಮ್ಮದು ಕೇವಲ ಪ್ರವಾಸ ಕಥನ,
ಆದರೆ ನೀವು ಸಮಾಜದ ಸಮಸ್ಯೆಗಳ ಬಗೆಗೆ ಸುಂದರವಾಗಿ ಬರೆಯುತ್ತಿರಿ
ಮುಂದಿನ ವಾರ ಕಥನ ಮುಂದುವರಿಸುವೆ
ಖಂಡಿತ ಬನ್ನಿ

ಸಾಗರದಾಚೆಯ ಇಂಚರ said...

Geete,
pleasure is mine
keep visiting

AntharangadaMaathugalu said...

ಅತೀ ಕುತೂಹಲ ಹುಟ್ಟಿಸಿ ನಿಲ್ಲಿಸಿಬಿಟ್ಟಿದ್ದೀರ ಸಾರ್... ಬೇಗ ಚಿತ್ರಗಳ ಸಮೇತ ಬನ್ನಿ... ಕಾಯ್ತಾ ಇದ್ದೀವಿ.....

ಸುಬ್ರಮಣ್ಯ said...

ಆಯ್ತು ಕಾಯ್ತಿವಿ

ಸಾಗರದಾಚೆಯ ಇಂಚರ said...

ಅಂತರಂಗದ ಮಾತುಗಳು
ಖಂಡಿತ ಬೇಗನೆ ಬರ್ತೀನಿ ಇನ್ನೊಂದು ಭಾಗ ದೊಂದಿಗೆ
ನೀವು ಹೀಗೆ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಮಾಚಿಕೊಪ್ಪ ಸರ್
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೀಗೆಯೇ ಬರ್ತಾ ಇರಿ

Manasa said...

Nice write up with good pictures and explaination :) ...

ಸಾಗರದಾಚೆಯ ಇಂಚರ said...

Manasa

thanks for the comment

Keep coming

Anonymous said...

ಹೌದು .ಗುರುಮೂರ್ತಿ ಸರ್ ..ಕಾಯುತ್ತಿದ್ದೇನೆ...ತಮ್ಮ ಬರಹದ ಮುಂದಿನ ಬಾಗಕ್ಕಾಗಿ .

ಸಾಗರದಾಚೆಯ ಇಂಚರ said...

aatmasantrapta

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೀಗೆಯೇ ಬರ್ತಾ ಇರಿ

Unknown said...

sir

lekhana tumba informative agide

ಸಾಗರದಾಚೆಯ ಇಂಚರ said...

Vijay,

tumbaa santhosha kaamentige

heege bartaa iri

Shashi jois said...

ನಿಮ್ಮ ಬ್ಲಾಗಿಗೆ ನನ್ನ ಪ್ರಥಮ ಭೇಟಿ .ಸೊಗಸಾದ ಪ್ರವಾಸ ಕಥನ ವನ್ನು ಮನಮುಟ್ಟುವ ಹಾಗೇ ಸೊಗಸಾಗಿ ವಿವರಿಸಿದ್ದೀರಿ.
ಎರಡು ಸಮುದ್ರಗಳು ಕೂಡುವ ಜಾಗ ನೋಡಿ ಸಂತೋಷವಾಯಿತು.ಮುಂದಿನ ಭಾಗಕ್ಕಾಗಿ ಕಾಯುತ್ತೇನೆ..

ಸಾಗರದಾಚೆಯ ಇಂಚರ said...

ಶಶಿ ಯವರೇ
ನನ್ನ ಬ್ಲಾಗಿಗೆ ಸುಸ್ವಾಗತ
ನಿಮ್ಮ ಅಭಿಪ್ರಾಯ ನೋಡಿ ತುಂಬಾ ಸಂತಸವಾಯಿತು
ಹೀಗೆಯೇ ಬರುತ್ತಿರಿ
ಉತ್ತಮ ಬರಹ ನೀಡುವ ಪ್ರಯತ್ನ ಮಾಡುತ್ತೇನೆ

ಸೀತಾರಾಮ. ಕೆ. / SITARAM.K said...

ಪ್ರವಾಸ ಕಥನವೂ ಕುತೂಹಲಕಾರಿಯಾಗಿದೆ. ಕಾಯಲು ತಯಾರಿದ್ದೆವೆ.
but make it fast!!!!!!!!!!!!

PrashanthKannadaBlog said...

Excellent. Thank you sir. I will surely plan to visit this place some time.

ಸಾಗರದಾಚೆಯ ಇಂಚರ said...

ಸೀತಾರಾಮ್ ಸರ್
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಪ್ರೀತಿ ಹೀಗೆಯೇ ಇರಲಿ

ಸಾಗರದಾಚೆಯ ಇಂಚರ said...

ಪ್ರಶಾಂತ್
ಖಂಡಿತಾ ನೋಡಲೇಬೇಕಾದ ಜಾಗ
ಆದರೆ ಹೋಗಿ ಬನ್ನಿ

ಮನಸು said...

wow!!! tumba chennagide nimma experience kushi aytu odi

ಸಾಗರದಾಚೆಯ ಇಂಚರ said...

Manasu

tumbaa thanks nimma abhipraayakke

heege bartaa iri

ಜಲನಯನ said...

ಡಾ.ಗುರೂಜಿ...ಅಲ್ಲೇ ಇದ್ದು..ನಮ್ಮನ್ನು ಇಲ್ಲಿಂದಲೇ ಒಳ್ಳೆ ವಿಶ್ವ ದರ್ಶನ ಮಾಡಿಸ್ತಿದ್ದೀರಿ....ಟಿಕೆಟ್ ಇಲ್ಲದೇ..ಅದರ ಜೊತೆ ಪ್ರವಾಸಿ ತಾಣದ ವಿವವರಣೆ....hats off...