Tuesday, October 6, 2009

ಬದುಕಿದೆಯಾ ಬಡ ಜೀವವೇ? ''S-PAIN'' ಪ್ರವಾಸ ತಂದ PAIN ಪ್ರವಾಸ.....

ಹಿಂದಿನ ತಿಂಗಳು SPAIN ಗೆಂದು ಹೋದಾಗ ಆ ''S-PAIN'' ಪ್ರವಾಸ ತಂದ PAIN  ಬಗ್ಗೆ ಬರೆದ ಲೇಖನ. ಬಹಳ ದಿನಗಳಿಂದ ಇದನ್ನು ಬರೆಯಬೇಕೆಂದಿದ್ದೆ . ಆದರೆ ಕೆಲಸದ ಒತ್ತಡದಿಂದಾಗಿ ಬರೆಯಲಾಗುತ್ತಿರಲಿಲ್ಲ. ಆದರೆ ಕಳೆದ ವಾರ ಇಟ್ಟಿಗೆ ಸಿಮೆಂಟಿನ ಪ್ರಕಾಶ ಹೆಗಡೆಯವರ ''ಹೇಳಬಾರದೆಂದರೂ.. ಬಾಯಲ್ಲಿ ಬರುತ್ತಿತ್ತು ಸುಳ್ಳು'' http://ittigecement.blogspot.com/ ಲೇಖನ ಓದಿದ ಮೇಲೆ ಇದನ್ನು ಇಂದು ಬರೆಯಲೇ ಬೇಕು ಎಂದೆನಿಸಿ ಬರೆದಿದ್ದೇನೆ.

ಕಳ್ಳರು ಎಲ್ಲೆಡೆ ಇರುತ್ತಾರೆ, ಕೆಲವೆಡೆ ರಕ್ಷಕರೇ ಕಳ್ಳರಾಗುವುದು ಉಂಟು. ಅದೇನು ಭಾರತಕ್ಕೆ ಹೊಸದಲ್ಲ ಬಿಡಿ. ಸಮಸ್ತ ದೇಶವನ್ನೇ ರಾಜಕಾರಣಿಗಳು ಹಗಲು ದರೋಡೆ ಮಾಡುತ್ತಿದ್ದಾರೆ. ಆದರೆ ರಕ್ಷಣೆ ಎನ್ನುವುದು ವಿದೇಶಗಳಲ್ಲಿ ಅದರಲ್ಲೂ ಭಾರಿ ಸಂಭಾವಿತರೆನಿಸಿಕೊಂಡ ಐರೋಪ್ಯ ಸಮುದಾಯಗಳಲ್ಲಿ ಹೆಚ್ಚಿದೆ ಎಂಬ   ನಂಬಿಕೆ (ಅಲ್ಲ ಅಪನಂಬಿಕೆ) ಇತ್ತು. ಹಿಂದಿನ ತಿಂಗಳ ಸ್ಪೇನ್ ಪ್ರವಾಸ ಆ ನಂಬಿಕೆಗೆ ಬಲವಾದ ಕೊಡಲಿ ಏಟು ನೀಡಿತು.

ಸ್ಪೇನ್ ದೇಶ ಸೌಂದರ್ಯಕ್ಕೆ ಹೆಸರುವಾಸಿ,  ದೇಶದ ಒನಪು ವಯ್ಯಾರಗಳ ಬಗೆಗೆ ಮುಂದೊಮ್ಮೆ ವಿಸ್ತಾರವಾಗಿ ಬರೆಯುತ್ತೇನೆ. ಏಕೆಂದರೆ  ಲೇಖನ ಸ್ಪೇನ್ ನಿಂದ ಪಾರಾಗಿ ಬಂದ ನನ್ನ ಬಡಪಾಯಿ ಸ್ಥಿತಿಯ ಕುರಿತು. ಅದಕ್ಕೆ ಸೌಂದರ್ಯದ ಬಣ್ಣ ಬಳಿದು ಸತ್ಯವನ್ನು ಮುಚ್ಚುವ ಪ್ರಯತ್ನ  ಲೇಖನದಲ್ಲಂತೂ ಮಾಡಲಾರೆ. ಸ್ಪೇನ್ ನ ಒಂದು ಸುಂದರ ನಗರ ZARAGOZA ಎಂಬುದಾಗಿದೆ. ಇಲ್ಲಿಯೇ 12 ನೆ FERROELECTRIC LIQUID CRYSTAL CONFERENCE ನಲ್ಲಿ ಭಾಗವಹಿಸಲು ನಾನು  ಮತ್ತು ನನ್ನ ಬಾಸ್ ಇಬ್ಬರೂ ಗೊತ್ಹೆಂಬುರ್ಗ್ (ಸ್ವೆಡೆನ್ನಿನಲ್ಲಿದೆ) ನಿಂದ ವಿಮಾನ ಹಿಡಿದು ಹೊರಟೆವು.

ನಮಗೆ ನೇರ ವಿಮಾನ ವಿಲ್ಲವಾದರಿಂದ ಗೊತ್ಹೆಂಬುರ್ಗ್ ನಿಂದ ಜರ್ಮನಿ ಯ ಮ್ಯುನಿಕ್ ಗೆ ಪ್ರಯಾಣ ಮಾಡಿ ಅಲ್ಲಿಂದ ಸ್ಪೇನ್ ನ ಬಾರ್ಸಿಲೋನ ಗೆ ಪ್ರಯಾಣ ಮಾಡಲು ನಿರ್ಧರಿಸಿದೆವು. ಗೊತ್ಹೆಂಬುರ್ಗ್ ನಿಂದ ಸ್ಪೇನ್ ಗೆ ಸುಮಾರು ೪ ಘಂಟೆಗಳ ಪ್ರಯಾಣ. ಮಧ್ಯದಲ್ಲಿ ಮ್ಯುನಿಕ್ ನಲ್ಲಿ ಸ್ವಲ್ಪ ಹೊತ್ತು ಕಾದು ಬಾರ್ಸೆಲೋನಾಗೆ ಬಂದಿಳಿಯುವಷ್ಟರಲ್ಲಿ ನಡು ಮಧ್ಯಾನ್ಹ ವಾಗಿತ್ತು. ಬಾರ್ಸಿಲೋನ ಎಂದಾಕ್ಷಣ  ನೆನಪಾಗುವುದು , ಬಾರ್ಸಿಲೋನ ಒಲಂಪಿಕ್ಸ್, ಬಾರ್ಸಿಲೋನ ಫುಟ್ಬಾಲ್ ತಂಡ, ನಂತರ ಬಾರ್ಸಿಲೋನ ದ ಶಿಲ್ಪ ಗೌಡಿ ಯ   ಬಗ್ಗೆ. ಸ್ಪೇನ್ ನ ಪ್ರವಾಸ ಕಥನದಲ್ಲಿ  ಮಹಾನ್ ಶಿಲ್ಪಿಯ ಬಗೆಗೆ ತಿಳಿಸುತ್ತೇನೆ. ಹೀಗೆ ಬಾರ್ಸಿಲೋನ ವಿಮಾನ ನಿಲ್ದಾಣದಿಂದ ಇಳಿದು ಬಾರ್ಸಿಲೋನ ಉತ್ತರ ಬಸ್ ನಿಲ್ದಾಣಕ್ಕೆ ಬರುವಷ್ಟರಲ್ಲಿ ಮಧ್ಯಾನ್ಹ 1-30 ಆಗಿತ್ತು. ಹಸಿವು ಬೇರೆ, ಜೊತೆಗೆ ಆದಷ್ಟು ಬೇಗ ZARAGOZA ತಲುಪಿದರೆ ಸಾಕೆಂಬ ಯೋಚನೆ ಸೇರಿ ನಮ್ಮ ಮನಸ್ಸು ಓಡುತ್ತಿತ್ತು.

ಬಾರ್ಸಿಲೋನ ದಿಂದ ZARAGOZA ವರೆಗೆ ರೈಲಿ ನಲ್ಲಿ ಹೋದರೆ ಸುಮಾರು 3600 ರೂಪಾಯಿಗಳು. ಅದೇ ಬಸ್ಸಿನಲ್ಲಿ ಹೋದರೆ 600 ರೂಪಾಯಿಗಳು. ಸುಮ್ಮನೆ ಅನಾವಶ್ಯಕ ಹಣ ಖರ್ಚು ಮಾಡುವುದು ಯಾಕೆಂದು ಯೋಚಿಸಿ ನಾನು ಮತ್ತು ನನ್ನ ಬಾಸ್ ಇಬ್ಬರೂ ಬಸ್ಸಿನಲ್ಲೇ ಪ್ರಯಾಣ ಮಾಡೋಣವೆಂದು ನಿರ್ಧರಿಸಿದೆವು. ಬಹುಷ್ಯ ಆ ನಿರ್ಧಾರ ಇಷ್ಟೊಂದು ಭೀಕರವಾಗಿರುತ್ತದೆ ಎಂದು ತಿಳಿದಿದ್ದರೆ ನಾವು ನಿರ್ಧಾರವನ್ನೇ ಕೈ ಬಿಡುತ್ತಿದ್ದೆವು. ಬಾರ್ಸಿಲೋನ ಬಸ್ಸ ನಿಲ್ದಾಣದಿಂದ ZARAGOZA ಕ್ಕೆ ಹೊರಡುವ ಬಸ್ಸ ಟಿಕೆಟ್ ತೆಗೆದುಕೊಂಡು ಸ್ವಲ್ಪ ಊಟ ಮಾಡಿ ಪ್ರಯಾಣ ಮುಂದುವರೆಸೋಣ ಎಂದು ನಿರ್ದರಿಸಿದೆವು . ಆ ಬಸ್ಸ ನಿಲ್ದಾಣದಲ್ಲಿ 2 ನೇ  ಮಹಡಿಯಲ್ಲಿ ಟಿಕೆಟ್ ಕೌಂಟರ್ ಇದೆ, ಆದರೆ ಮೆಟ್ಟಿಲುಗಳ ಹೊರತು ಇನ್ಯಾವ ಸಾಧನವೂ ನಮ್ಮನ್ನು ಮೇಲೆ ಒಯ್ಯಲಾರದು. ಆದರೆ ಕೈಯಲ್ಲಿ ಬ್ಯಾಗ್ ಬೇರೆ ಇದ್ದರಿಂದ ಒಬ್ಬರು ಬ್ಯಾಗ್ ನೋಡಿಕೊಳ್ಳುವುದು, ಇನ್ನೊಬ್ಬರು ಟಿಕೆಟ್ ತರುವುದು ಎಂದು ನಿರ್ದರಿಸಿ ನಾನು ಟಿಕೆಟ್ ತರಲು 2 ನೇ  ಮಹಡಿ ಗೆ ಹೋದೆನು. ಹೋಗುವಾಗ ನನ್ನ ಸಮಸ್ತ ಬ್ಯಾಗ್ ಗಳನ್ನೂ ಅಲ್ಲಿಯೇ ಬಿಟ್ಟು ಕೇವಲ ಹಣದೊಂದಿಗೆ ಹೊರಟನು. ಅಂತೂ 2-30 ರ  ಬಸ್ಸ ಗೆ ಟಿಕೆಟ್ ಲಭಿಸಿತು. ಸಂತೋಷದಿಂದ ಕೆಳಗೆ ಬಂದೆ, ''ಬಹುಶ ಆ ಪ್ರಯಾಣದ ಕೊನೆಯ ನಗೆ ಅದಾಗಿತ್ತು ಎನಿಸುತ್ತದೆ''. ಕೆಳಗೆ ಬಂದು ನನ್ನ ಬ್ಯಾಗ್ ನೋಡುತ್ತೇನೆ , ಬ್ಯಾಗ್ ನಾಪತ್ತೆಯಾಗಿದೆ. ಬಾಸ್,  ಬ್ಯಾಗ್ ಮುಂದೆ ಇದ್ದರೂ ಕಳ್ಳರೂ ಉಪಾಯದಿಂದ ಬ್ಯಾಗ್ ಹಾರಿಸಿದ್ದಾರೆ.

ಆ ಬ್ಯಾಗ ನಲ್ಲಿ ನನ್ನ ಪರಮ ಪ್ರಿಯ ಲ್ಯಾಪ್ಟಾಪ್ ಇತ್ತು, ಕೇವಲ ಕೆಲವೇ ದಿನಗಳ ಹಿಂದೆ ಮೆಚ್ಚಿನ ಮಡದಿಗೆ ಆ ಲ್ಯಾಪ್ಟಾಪ್ ನ್ನು ಅವಳ ಹುಟ್ಟು ಹಬ್ಬದ ಉಡುಗೊರೆಯಾಗಿ ನೀಡಿದ್ದೆ. ''ಇದನ್ನು ಸರ್ವದಾ ನಿನ್ನ ಬಳಿಯಲ್ಲಿಯೇ ಇಟ್ಟುಕೋ, ನನ್ನ ಮೇಲೆ ಕೋಪ ಬಂದರೆ ಇದನ್ನು ನೋಡು, ಕೋಪ ಇಳಿಯುತ್ತದೆ'', ಎಂದೆಲ್ಲ ಅವಳಿಗೆ ನೀಡಿದ ಸಿಹಿಮಾತುಗಳನ್ನು ಆ ಕಳ್ಳ ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಿದ್ದ. ಇಷ್ಟೇ ಆದರೆ ತಾಳಿಕೊಳ್ಳಬಹುದಾಗಿತ್ತು . ಆದರೆ ಅದೇ ಬ್ಯಾಗ್ ಅಲ್ಲಿ ಕೊನೆಯ ಕ್ಷಣದಲ್ಲಿ ನನ್ನ ಪಾಸ್ ಪೋರ್ಟ್ ಹಾಕಿ ಟಿಕೆಟ್ ತರಲು ಹೋಗಿದ್ದೆ. ಒಮ್ಮೆಲೇ ನೆಲ ಕುಸಿದ ಅನುಭವ. ವಿದೇಶದಲ್ಲಿ ಪಾಸ್ ಪೋರ್ಟ್ ಒಂದೇ ನಮ್ಮ ಗುರುತು. ಅದಿಲ್ಲದಿರೆ ನಾವು ''illegal immigrants'' ಒಂದು ಕ್ಷಣ ಏನು ಮಾಡುವುದೆಂದೇ ತೋಚಲಿಲ್ಲ. ಆದರೆ ಜೊತೆಯಲ್ಲಿ ಬಾಸ್ ಇದ್ದಿದ್ದರಿಂದ ಅವರು ಧೈರ್ಯ ತುಂಬಿದರು.

ಕೂಡಲೇ ಅಲ್ಲಿಯೇ ಹತ್ತಿರದಲ್ಲಿದ್ದ ಪೋಲಿಸ್ ಸ್ಟೇಷನ್ ಗೆ ತೆರಳಿ ಕಂಪ್ಲೈಂಟ್ ಕೊಟ್ಟೆವು. ಅಲ್ಲಿನ ಪೋಲಿಸರು  ಮಾವನ ಮನೆಗೆ ಬಂದ ಅಳಿಯನನ್ನು ಸತ್ಕರಿಸಿದಂತೆ ನಮ್ಮನ್ನು ನೋಡಿ ನಗುಮೊಗದಿ ಮಾತನಾಡಿದರೆ ಹೊರತು ತಮ್ಮ ಕರ್ತವ್ಯದ ಬಗೆಗೆ ಎಳ್ಳಷ್ಟೂ ಕಾಳಜಿ ತೋರಿಸಿದಂತೆ ಕಾಣಲಿಲ್ಲ. ಇದರ ಜೊತೆಗೆ '' ಇದೆಲ್ಲ ಇಲ್ಲಿ ಮಾಮೂಲು, ನೀವು ಎಚ್ಚರ ಇರಬೇಕು'' ಎಂಬ ಬಿಟ್ಟಿ  ಉಪದೇಶ ಬೇರೆ ಕೊಟ್ಟರು. ಮನದಲ್ಲಿ ದು:ಖ , ಮೇಲಿಂದ ಇವರ ಮೇಲೆ ಸಿಟ್ಟು, ನಾನು ನಾನಾಗಿರಲಿಲ್ಲ.  ''ಏನಾದರೂ ಮಾಡಿಕೊಂಡು ಸಾಯಿರಿ'' ಎಂದು ಶಪಿಸುತ್ತ (ಯಾವಾಗಲೂ ತುಂಬಾ ಕೋಪ, ಮತ್ತು ನೋವಾದಾಗ ಬಾಯಲ್ಲಿ ಕನ್ನಡ ಶಬ್ದಕೊಶಕ್ಕೇ  ಸವಾಲೆಸೆಯುವ ಬೈಗುಳಗಳು ಬರುತ್ತವಂತೆ) ಅವರಿಂದ ಕಂಪ್ಲೈಂಟ್ ಕೊಟ್ಟಿದ್ದರ ಪ್ರತಿ ತೆಗೆದುಕೊಂಡೆವು.

''ಬಂದದ್ದೆಲ್ಲ ಬರಲಿ, ಆ ಗೋವಿಂದನ ದಯೆ ಒಂದಿರಲಿ'' ಎಂಬ ಮಾತಿನಂತೆ ಊಟವನ್ನು ಮಾಡದೆ ಹಾಗೆಯೇ ಹೊರಡಲು ನಿರ್ಧರಿಸಿದೆವು. ಕಾರಣ ಅಂದು ರವಿವಾರ. ''Indian Embassy'' ಗೆ ರಜೆ. ಆದ್ದರಿಂದ ಪಾಸ್ ಪೋರ್ಟ್ ಬಗ್ಗೆ ತಿಳಿಸಲು ಸೋಮವಾರದವರೆಗೆ ಕಾಯಬೇಕು. ZARAGOZA ಹೋಗಿಯೇ ಸೋಮವಾರ  ಮುಂದಿನ ವಿಚಾರ ಮಾಡೋಣವೆಂದು ತೀರ್ಮಾನಿಸಿ 2-30 ಯ ಬಸ್ಸ ಹತ್ತಿದೆವು. ನನ್ನ ಬಾಸ್ ತುಂಬಾ ವಿಚಲಿತರಾಗಿದ್ದರು. ಹಸಿವಾದರೂ ಅವರಿಗೆ ಊಟ ಮಾಡಲು ಮನಸಿರಲಿಲ್ಲ. ಹಾಗೆಯೇ ಹಸಿದ ಹೊಟ್ಟೆಯಲ್ಲಿಯೇ ZARAGOZA ಬಂದಿಳಿದಾಗ ಸಂಜೆ 7-30 ಆಗಿತ್ತು. ಪುನಃ ನಮ್ಮ ಹೋಟೆಲ್ ಗೆ ಹೋಗಲು ಬಸ್ಸ ಹತ್ತುವ ದುಸ್ಸಾಹಸಕ್ಕೆ ಕೈ ಹಾಕದೆ ಟ್ಯಾಕ್ಸಿ ಹತ್ತಿ ಹೋಟೆಲ್ ಮುಟ್ಟಿದೆವು.

ಹೋಟೆಲ್ ಕೌಂಟರ್ ನವರು ಹೇಳಿದರು ''ಇಲ್ಲಿನ ಪೋಲಿಸಿನವರಿಂದ ಯಾವುದೇ ನಿರೀಕ್ಷೆ ಬೇಡ'' ಎಂದು. ಆಗಲೇ ಚಿಂತೆ ಯ ಪರ್ವತ ಬೆಳೆಯತೊಡಗಿತು. ಮಡದಿಗೆ ಫೋನ್ ಮಾಡಿ ವಿಚಾರ ತಿಳಿಸಿದೆ, ಅವಳಿಗೋ ಗಾಬರಿ. ಮೊದಲ ಬಾರಿಗೆ ಮದುವೆಯ ನಂತರ ಅವಳನ್ನು ಬಿಟ್ಟು ಹೋಗಿದ್ದೆ. ಅವಳಿಲ್ಲದ ಮೊದಲ ಪ್ರಯಾಣವೇ ಇಷ್ಟೊಂದು ವಿಘ್ನಗಳು. ಅವಳಿಗೆ ಸಮಾಧಾನ ನಾನು ಮಾಡಿದೆನೋ , ನನಗೆ ಸಮಾಧಾನ ಅವಳು ಮಾಡಿದಳೋ ಒಟ್ಟಿನಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಸಂತೈಸಿಕೊಂಡೆವು. ಮೊದಲ ಸ್ಪೇನ್ ಪ್ರವಾಸದ ಮೊದಲ ದಿನವೇ ''ಪ್ರಥಮ ಚುಂಬನಂ ದಂತ ಭಗ್ನಂ'' ದಂಥ ಸ್ಥಿತಿ ಎದುರಾಗಿತ್ತು.

ಮರುದಿನ ದಿಂದ ನನ್ನ ಪಾಸ್ ಪೋರ್ಟ್ ಗಾಗಿ ನಾ ಪಟ್ಟ ಕಷ್ಟ ಕಾರ್ಪಣ್ಯಗಳು, ಅಸಂಬದ್ದ ರೂಲ್ಸ್ ಗಳು , ತಲೆ ತಿನ್ನಲಾರಂಬಿಸಿದವು. ಅಲ್ಲಿಂದ  ನಾನು ಕ್ಷೇಮವಾಗಿ ಬಂದೆನೆ? ಕಸ್ಟಮ್ಸ್ ಗಳ ಕಣ್ಣಿನಿಂದ ಪಾರಾಗುವುದು ಸಾದ್ಯವಾಯಿತೆ? ಇವೆಲ್ಲ ಪ್ರಶ್ನೆಗಳ ಉತ್ತರದೊಂದಿಗೆ ಮುಂದಿನ ವಾರ ಸಿಗುತ್ತೇನೆ.

44 comments:

ಮನಸು said...

ಗುರು,
ಹೊರ ದೇಶದಲ್ಲಿ ಪಾಸ್ ಪೋರ್ಟ್ ಇಲ್ಲವೆಂದರೆ ಅದಕ್ಕಿಂತ ಕಷ್ಟದ ಸ್ಥಿತಿ ಬೇರಿಲ್ಲ.... ಅದು ನೀವು ವಿಸಿಟ್ ವೀಸಾದಲ್ಲಿ ತೆರಳಿದ್ದಿರಿ ಅನಿಸುತ್ತೆ ಅದು ಇದ್ದಿದ್ದು ಬಹಳ ಕಷ್ಟ...
ಒಳ್ಳೆ ಭಯಾನಕ ಅನುಭವವನ್ನು ಅನುಭವಿಸಿದ್ದೀರಿ... ಇಂತಹ ಘಟನೆಗಳು ಯಾರಿಗೂ ಬಾರದಿರಲೆಂದು ಆಶಿಸುತ್ತೇನೆ.
ಮುಂದಿನ ಸಂಚಿಕೆಗಾಗಿ ಕಾಯುತ್ತಲಿರುತ್ತೇವೆ.
ವಂದನೆಗಳು

Anonymous said...

hey guru,

nice article, and bad exp.. :(

i'm waitig for ur next article. :)

ಎಚ್. ಆನಂದರಾಮ ಶಾಸ್ತ್ರೀ said...

ಘಟನೆ ಬಹಳ ಕುತೂಹಲಕರವಾಗಿದೆ, ಅಷ್ಟೇ ವಿಷಾದಕರವೂ ಆಗಿದೆ. ಮುಂದಿನ ಕಂತಿಗೆ ಕಾಯುತ್ತಿದ್ದೇನೆ. ಗೂಳಿ ಕಾಳಗಿಗಳಿಗೆ ಸೊಕ್ಕು ಅತಿಯೆಂಬುದು ಗೊತ್ತಿತ್ತು ಐನಾತಿ ಕಳ್ಳರೂ ಅಲ್ಲಿದ್ದಾರೆಂದು ಇದೀಗ ಗೊತ್ತಾಯಿತು. ನಮ್ಮಲ್ಲಿ ಹಲವರು ’ಗ್ರೇಟ್’ ಎಂದುಕೊಂಡಿರುವ ಪಾಶ್ಚಾತ್ಯರ ಇಂಥ ಕೊಳಕುಗಳು ನಮ್ಮವರ ಅರಿವಿಗೆ ಬರಬೇಕು.

ಸಾಗರದಾಚೆಯ ಇಂಚರ said...

ಮನಸು,
ನಿಜ, ಆ ಅನುಭವ ಇನ್ಯಾರಿಗೂ ಬರುವುದು ಬೇಡವೆಂದೆ ಈ ಲೇಖನ. ನನ್ನ ಸ್ಥಿತಿಯಿಂದ ಮುಂದೆ ಬರುವ ಪ್ರವಾಸಿಗರಿಗೆ ಸ್ವಲ್ಪವಾದರೂ ಉಪಯೋಗವಾದರೆ ನನಗೆ ಅದೇ ಸಮಾಧಾನ,
ಅಲ್ಲಿನ ಕಷ್ಟಗಳ ಬಗ್ಗೆ ಮುಂದಿನ ವಾರ ಬರೆಯುತ್ತೇನೆ,

ಸಾಗರದಾಚೆಯ ಇಂಚರ said...

Dear Shree,

thanks for the comments,

yes, indeed bad experience,

Cant forget this trip in my life time.

ಸಾಗರದಾಚೆಯ ಇಂಚರ said...

ಶಾಸ್ತ್ರಿ ಸರ್,
ನೀವು ಹೇಳೋದು ನಿಜ
ನಾವು ಯಾವಾಗಲು ನಮ್ಮ ದೇಶ ಕೆಟ್ಟದ್ದು ಅಂತಿವಿ,
ಆದರೆ ಬೇರೆ ದೇಶದವರು ಏನು ಒಳ್ಳೆಯವರು ಅಂತಲ್ಲ,
ಕಳ್ಳರು ಎಲ್ಲ ಕಡೆ ಇದಾರೆ,
ಅದರಲ್ಲೂ ಸ್ಪೇನ್ ಕಳ್ಳರು ಬಲು ಬುದ್ದಿವಂತರು,

PARAANJAPE K.N. said...

ಕಳ್ಳರು ಎಲ್ಲೆಲ್ಲೂ ಇದ್ದಾರೆ. ವಿದೇಶಿ ನೆಲದಲ್ಲಿರುವ ಎಲ್ಲರೂ ಸುಭಗರು ಅ೦ತ ನಮ್ಮಲ್ಲಿ ಮೇಲರಿಮೆ ಇದೆ. ಇ೦ತಹ ಸ೦ದರ್ಭ ಒದಗಿದಾಗ ಉ೦ಟಾಗುವ ಕಷ್ಟ ಮತ್ತು ನೋವು ನಿಮಗಾಗಿದೆ, ಅದು ಕುತೂಹಲಕಾರಿಯಾಗಿ ಬರಹದಲ್ಲಿ ಮೂಡಿದೆ, ಮುಂದಿನ ಸಂಚಿಕೆಗೆ ಕಾಯುವೆ,.

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್,
ನನ್ನ ಸ್ಥಿತಿ ನೋಡಿ ನನಗೆ ಅನಿಸ್ತು, ನಮ್ಮ ದೇಶಾನೇ ಚೆನ್ನ ಅಂತ,
ಹಾಡು ಹಗಲಿನಲ್ಲಿ ವಿದೇಶಿ ಅತಿಥಿಗಳನ್ನು ದರೋಡೆ ಮಾಡೋ ಜನಾನೂ ಐರೋಪ್ಯ ದೇಶದಲ್ಲಿ ಇದ್ದಾರಾ ಅಂತ?
ಮುಂದೆ ಕಥೆ ಇನ್ನು ಕುತೂಹಲಕಾರಿಯಾಗಿದೆ,
ಅಭಿಪ್ರಾಯಕ್ಕೆ ಧನ್ಯವಾದಗಳು

ಮಿಥುನ ಕೊಡೆತ್ತೂರು said...

kalla nan maklu purana kaladallu iddarante!

ಸಾಗರದಾಚೆಯ ಇಂಚರ said...

ಮಿಥುನ ಸರ್,
ನಿಜ, ಕಳ್ಳ ಮಕ್ಕಳು, ಎಲ್ಲ ದೇಶದಲ್ಲೂ ಅಷ್ಟೇ, ಎಲ್ಲಿ ಹೋದರೂ ಅಷ್ಟೇ,

sunaath said...

ಗುರುಮೂರ್ತಿಯವರೆ,
ಇವರಿಗೆ ಹೋಲಿಸಿದರೆ ಭಾರತೀಯರೇ ಸಂಭಾವಿತರು ಎಂದು ಅನ್ನಬೇಕು!

Me, Myself & I said...

ಸಾರ್,

ದಯವಿಟ್ಟು ಮುಂದುವರಿಸಿ. ತುಂಬಾ ಕುತೂಹಲದಿಂದ ಮುಂದಿನ ಸಂಚಿಕೆ ಕಾಯುತ್ತಿದ್ದೇನೆ

ಸಾಗರದಾಚೆಯ ಇಂಚರ said...

ಸುನಾಥ ಸರ್,
ನಿಜ, ಭಾರತೀಯರು ಎಷ್ಟೋ ವಾಸಿ ಎನ್ನಿಸಿತು ಆ ಘಳಿಗೆಗೆ,
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಲೋದ್ಯಾಶಿಯವರೇ,
ಖಂಡಿತ ಮುಂದಿನ ಸಂಚಿಕೆ ಶೀಘ್ರದಲ್ಲಿ ಬರುತ್ತದೆ.
ಇದೊಂದು ಮರೆಯಲಾರದ ಅನುಭವವಾಗಿ ಜೀವನ ಪುಟದಲ್ಲಿ ದಾಖಲಾಯಿತು ಎಂದಷ್ಟೇ ಈಗ ಹೇಳಬಲ್ಲೆ.

Dileep Hegde said...

OMG.. Thats really sad and bad experience...

ನನಗೂ ಒಮ್ಮೆ ಇದೇ ತರದ ಅನುಭವ ಆಗಿತ್ತು.. ನ್ಯೂ ಯಾರ್ಕ್ ನ ಜೆಎಫ್ಕೆ ಏರ್ಪೋರ್ಟ್ ನಲ್ಲಿ ಇಳಿದು ಹುಡುಕಿದರೆ ನನ್ನ ಲಗೇಜ್ ಬಂದಿರಲೇ ಇಲ್ಲ.... ನನಗದು ಮರಳಿ ಸಿಕ್ಕಿದ್ದು ಎರಡು ದಿನದ ನಂತರ... :(

ಆದರೆ ನಿಮಗಾದ ಅನುಭವ ಇನ್ನೂ ಭಯಾನಕ...

ಮುಂದಿನ ಸಂಚಿಕೆಗಾಗಿ ಕಾಯ್ತಿದೇನೆ...

ಸಾಗರದಾಚೆಯ ಇಂಚರ said...

ಹೌದು ದಿಲೀಪ್ ಅವರೇ,
ಅದೊಂದು ಭಯಾನಕ ಅನುಭವನೆ, ಅಲ್ಲಿಯತನಕ ಪಾಸ್ ಪೋರ್ಟ್ ಕೈಯಲ್ಲೇ ಇತ್ತು, ಕೊನೆ ಕ್ಷಣದಲ್ಲಿ ಬ್ಯಾಗ್ ಗೆ ಹಾಕಿದೆ.

ಕೆಟ್ಟ ಕಾಲ ಹೇಗೆ ಬರತ್ತೆ ಅಂತ ನೋಡಿ. ಇಂಥದೆಲ್ಲ ನಮ್ಮ ದೇಶದಲ್ಲಿ ಆದ್ರೆ ಚಿಂತೆ ಅಸ್ತು ಆಗಲ್ಲ.

ಆದರೆ ವಿದೇಶದಲ್ಲಿ ಆದ್ರೆ ಮಾತ್ರ OMG ನೆ

ಕ್ಷಣ... ಚಿಂತನೆ... said...

Guru,
aa ghatanegalannu odhidaaga bhayaanakavenisitu. hora deshagalallina polisaroo heegeye ennisi mattoo besaravaayitu. agaa, nammoore namage chenda anno Dr.Raj haadu nenapaaguttade.

chandru

ತೇಜಸ್ವಿನಿ ಹೆಗಡೆ said...

ಅಪರಿಚಿತ ಊರಿನಲ್ಲಿ ನೀವು ಪಟ್ಟಿರುವ ಕಷ್ಟಗಳನ್ನು ಈ ಮೊದಲೇ ನಿಮ್ಮಿಂದ ಕೇಳಿದ್ದರೂ ಈಗ ಸವಿವರವಾಗಿ ಓದಿಕೊಂಡೆ. ನೀವು ಪಟ್ಟಿರಬಹುದಾದ ಮಾನಸಿಕ ಒತ್ತಡವನ್ನು ಊಹಿಸಬಲ್ಲೆನಷ್ಟೇ. ಮುಂದಿನ ಭಾಗಕ್ಕಾಗಿ ಕಾಯುವೆ...

ಸಾಗರದಾಚೆಯ ಇಂಚರ said...

ಚಂದ್ರು ಸರ್,
ಪೋಲಿಸಿನವರ ಬೇಜವಾಬ್ದಾರಿತನ ಸ್ಪೇನ್ ಮತ್ತು ಇಟಲಿ ಯಲ್ಲಿ ಭಾರತಕ್ಕಿಂತ ಹೆಚ್ಚು ಅಂದರೆ ತಪ್ಪಿಲ್ಲ. ಆದರೆ ಸ್ವೆಡೆನ್ನಿನಲ್ಲಿ ಇದುವರೆಗೂ ಎಲ್ಲಿಯೂ ಕಳ್ಳತನ ಆದ ಬಗ್ಗೆ ನಾನು ಓದಿಲ್ಲ.
ವಿದೇಶಿಯರೂ ಭಾರತಕ್ಕೆ ಬೈಯುತ್ತಾರೆ , ಆದರೆ ಅವರ ದೇಶವೂ ಹಾಗೆಯೇ ಇದೆ ಎಂಬ ಕಲ್ಪನೆ ಅವರಿಗೆ ಬರುವುದೇ ಇಲ್ಲ.
ಯಾಕೆಂದರೆ ಅವರ ಹಣ ಅಲ್ಲಿ ಕಳ್ಳತನವಾಗುವುದಿಲ್ಲ, ಅಲ್ಲಿ ಹೆಚ್ಚೆಚ್ಚು ವಿದೇಶಿಯರ ಹಣವೇ ಕಳ್ಳತನವಾಗುವುದು.
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ತೇಜಸ್ವಿನಿ ಮೇಡಂ,
ಮರೆಯಲಾಗದ ಅನುಭವ ಅದು, ಆ ೫ ದಿನಗಳಲ್ಲಿ ಪ್ರತಿದಿನವೂ ಸವಾಲಾಗಿತ್ತು,
ತಿರುಗಿ ಹೇಗೆ ಬರುತ್ತೇನೆ ಎಂಬ ಚಿಂತೆ ಸದಾ ಕಾಡುತ್ತಿತ್ತು.
ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ

Sushma said...

Guru,thats quite a tale you've through. hope the next installment brings a positive closure to this ordeal

ಸಾಗರದಾಚೆಯ ಇಂಚರ said...

Hello Sushma,

welcome to my blog,
The end is not important but how it ended is very important for me. It gave me lot of pain that i never forget.

Thanks for the comments, keep visiting

ಸವಿಗನಸು said...

ಗುರು,
ಮರೆಯಲಾಗದ ಅನುಭವ ...
ವಿಷಾದಕರ....
ಮುಂದೇನಾಯಿತು...
ಮಹೇಶ್!

ಸಾಗರದಾಚೆಯ ಇಂಚರ said...

ಮಹೇಶ್,
ಇದೊಂದು ಕೆಟ್ಟ ಕನಸು ಎಂದು ಮರೆಯಲು ಪ್ರಯತ್ನಿಸುತ್ತಿದ್ದೇನೆ.
ಮುಂದೆ ಮುಂದಿನ ವಾರ ಓದಿ, ಧನ್ಯವಾದಗಳು

SANTOSH MS said...

en sir story complete madlilla. but very bad experience alwa

ಶಿವಪ್ರಕಾಶ್ said...

Oh My God....!!!!
:(
waiting for next episode....

ಸಾಗರದಾಚೆಯ ಇಂಚರ said...

ಸಂತೋಷ್
ಕಥೇನ ಮುಂದಿನ ವಾರ ಮುಗಿಸೋ ಪ್ರಯತ್ನ ಮಾಡ್ತೀನಿ,
ನಿಜಕ್ಕೂ ಭಯಾನಕ ಅನುಭವ ಇದು

ಸಾಗರದಾಚೆಯ ಇಂಚರ said...

ಶಿವೂ ಸರ್
ನಂಗಂತೂ ದಿಕ್ಕೇ ತೋಚದಾಗಿತ್ತು
ಬರ್ತಾ ಇರಿ

ದಿನಕರ ಮೊಗೇರ said...

ತುಂಬಾ ಕೆಟ್ಟ ಅನುಭವ ಸರ್, ಸ್ಪೇನ್ ಪೊಲೀಸರು ನಮ್ಮ ಪೊಲೀಸರಿಗಿಂತ ಮೆಲ್ವರ್ಗವನ್ನ ಕಾಪಾಡಿಕೊಂಡಿದ್ದಾರೆ ( ಇಂತ ವಿಷಯದಲೂ ) .... ಎಲ್ಲರ ಮನೆ ದೋಸೇನೂ ತೂತೆ ಅಂತ ಈಗ ಗೊತ್ತಾಗ್ತಾ ಇದೆ..... ಮುಂದಿನ ಸಂಚಿಕೆಗೆ ಕಾಯ್ತಾ ಇದ್ದೇನೆ ಸರ್....

ವಿನುತ said...

ನಿಮ್ಮ ಬರೆದಿರುವ ಶೈಲಿಯನ್ನು ಮೆಚ್ಚಬೇಕೋ, ಬರೆದಿರುವ ವಿಷಯದ ಬಗ್ಗೆ ಆತ೦ಕಗೊಳ್ಳಬೇಕೋ ತೋಚದಾಗಿದೆ :(
ಎಲ್ಲೆಡೆಯೂ ಎಲ್ಲವು ಸರಿ ಇರುವುದಿಲ್ಲ ಎ೦ಬುದಕ್ಕೆ ಮತ್ತೊ೦ದು ಸಾಕ್ಷಿ ನಿಮ್ಮ ಈ ಅನುಭವ.

ಸಾಗರದಾಚೆಯ ಇಂಚರ said...

ದಿನಕರ ಸರ್,
ನಮಗೆ ಇಟಲಿ ಗೆ ಹೋದಾಗಲೂ ಇದೆ ರೀತಿ ಹೆದರಿಕೆ ಇತ್ತು ಕಲ್ಲರಿದ್ದು. ಆದರೆ ಅಲ್ಲಿ ಏನು ಆಗಿರಲಿಲ್ಲ.
ಪೊಲೀಸರು ಕರ್ತವ್ಯ ಲೋಪ ಮಾಡಿದರೆ ಪ್ರಜೆಗಳು ಬದುಕೋದು ಹೇಗೆ ಹೇಳಿ?
ಎಲ್ಲ ಕಾದೆನು ಒಂದೇ ರೀತಿ ಅಂತನು ಹೇಳೋದು ಕಷ್ಟ. ಯಾಕಂದ್ರೆ ನಾವಿರೋ ಸ್ವೇಡನ್ನಿನಲ್ಲಿ ಕ್ರೈಂ ರೇಟ್ ಝೀರೋ ಇದೆ.
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ವಿನುತ
ನಿಜಕ್ಕೂ ಇನ್ಯಾರಿಗೂ ಆ ರೀತಿ ಆಗೋದು ಬೇಡ,
ಹೀಗೆಯೇ ಬರ್ತಾ ಇರಿ

Shweta said...

ಗುರು ಸರ್,
ನೆನೆಸಿಕೊಂಡರೆ ತುಂಬಾ ಭಯ ಆಗುತ್ತದೆ ...ನಮ್ಮ ದೇಶದಲ್ಲಾದರೆ ಹೇಗೂ ಮಾಡಬಹುದು ,ಭಯಾನಕ ಅನ್ನಿಸುತ್ತೆ...ಎಲ್ಲ ದೇವರು ನೆನಪಾಗುತ್ತಾರಲ್ಲ?ನೀವು ಹೇಗೆ ಸುರಕ್ಷಿತವಾಗಿ ತಲುಪಿದರೆಂದು ತಿಳಿಯಲು
ಮುಂದಿನ ಭಾಗ ಓದಲೇ ಬೇಕು...ಬರೆಯಿರಿ ..
ಧನ್ಯವಾದಗಳು ...........

ಸಾಗರದಾಚೆಯ ಇಂಚರ said...

ಶ್ವೇತ ಮೇಡಂ,
ಮುಕ್ಕೋಟಿ ದೇವತೆಗಳೂ ಆಗ ನೆನಪಾಗಿದ್ರು, ''ಸಂಕಟ ಬಂದಾಗ ವೆಂಕಟರಮಣ'' ಅಂತಾರಲ್ಲ ಹಾಗೆ.
ಅಲ್ಲಿಂದ ಬಂದ ಮೇಲೆ ನನ್ನ ದುದ್ದಿಗಿನ ಹೆಚ್ಚು ಪಾಸು ಪೋರ್ಟ್ ಕಡೆಗೆ ಲಕ್ಷ ಇರತ್ತೆ :)
ಅಭಿಪ್ರಾಯಕ್ಕೆ ಧನ್ಯವಾದಗಳು

ಚಿತ್ರಾ said...

ಗುರು ,
ಅನುಭವ ಓದಿ ಬೆಚ್ಚಿದೆ. ಪೊಲೀಸರು ಎಲ್ಲ ಕಡೆ ಒಂದೇ ಇರ ಹಾಂಗೆ ಕಾಣಿಸ್ತು ! ವಿದೇಶದಲ್ಲಿ ಪಾಸ್ ಪೋರ್ಟ್ ಇಲ್ಲದೆ ಎಂತಾ ಸ್ಥಿತಿ ಆಗ್ತು ಹೇಳಿ ಓದಿದ್ದೆ. ಈಗ ನೀನು ಆ ಪರಿಸ್ಥಿತಿಯಿಂದ ಹೆಂಗೆ ಪಾರಾಗಿದ್ದು ಅಂತ ಓದಲೇ ಕಾಯ್ತಾ ಇದ್ದಿ.

Rashmi said...

Hi Guru,

Very Sad! Hope everything went on well after this incident.

Waiting for the continual of this story.

ಸಾಗರದಾಚೆಯ ಇಂಚರ said...

ಚಿತ್ರಾ,
ಮೆಚ್ಚಿದ್ದಕ್ಕೆ ಥ್ಯಾಂಕ್ಸ್,
ಮುಂದಿನ ವಾರ ಅಲ್ಲಿ ಪಾರಾಗಿ ಬಂದ ಕಥೆ ಬರಿತಿ,
ಪ್ರೋತ್ಸಾಹ ಹಿಂಗೆ ಇರಲಿ

ಸಾಗರದಾಚೆಯ ಇಂಚರ said...

Rashmi,
thanks for your comments,
Luckily everything went well but the pain which i got is enormous.

Guru

shivu.k said...

ಗುರುಮೂರ್ತಿ ಹೆಗಡೆ ಸರ್,

ಐರೋಪ್ಯ ದೇಶಗಳ ಶಿಸ್ತಿನ ಬಗ್ಗೆ ತುಂಬಾ ಕೇಳಿದ್ದೆ. ಆದ್ರೆ ಅಲ್ಲೂ ಹೀಗೆ ಆಗುತ್ತೆ ಅಂದಾಗ ಖಂಡಿತ ಬೇಸರವಾಗುತ್ತದೆ. ನೀವಿದ್ದ ಪರಿಸ್ಥಿತಿ ಊಹಿಸಿಕೊಂಡರೆ ಗೊತ್ತಾಗುತ್ತೆ ಎಷ್ಟು ಭಯಾನಕವೆಂದು?

ನಾನು ಕಳೆದ ತಿಂಗಳು ಆರೆಂಜ್ ಕೌಂಟಿಗೆ ಅಲ್ಲಿ ಬಾರ್ಸಿಲೋನದಿಂದ ಬಂದಿದ್ದ ದಂಪತಿಗಳನ್ನು ಬೇಟಿಮಾಡಿದೆವು. ಅವರು ಚೆನ್ನಾಗಿ ಮಾತಾನಾಡಿಸಿದರು. ಮೊದಲೇ ಗೊತ್ತಿದ್ದರೇ ಇದರ ಬಗ್ಗೆ ಕೇಳುತ್ತಿದ್ದೆನೇನೋ...
ಮುಂದಿನ ಭಾಗಕ್ಕೆ ಕಾಯುತ್ತೇನೆ..

ಸಾಗರದಾಚೆಯ ಇಂಚರ said...

ಶಿವೂ ಸರ್,
ಎಲ್ಲ ಐರೋಪ್ಯ ದೇಶಗಳೂ ಹಾಗೆ ಅನ್ನುವಂತಿಲ್ಲ, ಆದರೆ ಸ್ಪೇನ್ ಮತ್ತು ಇಟಲಿ ಹಾಗೆಯೇ ಎನ್ನುವುದು ಇಲ್ಲಿನ ಹೆಚ್ಚಿನ ಜನರ ಅಭಿಮತ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ

ಸುಧೇಶ್ ಶೆಟ್ಟಿ said...

ಅಬ್ಬಾ... ಐರೋಪ್ಯ ಜಗತ್ತಿನ ಬಗೆಗಿನ ನ೦ಬಿಕೆಯನ್ನೇ ಬುಡಮೇಲು ಮಾಡುವ೦ತಿದೆ ನಿಮ್ಮ ಲೇಖನ.... ಈ ನಿಮ್ಮ ಮು೦ದೆ ವಿದೇಶ ಪ್ರಯಾಣ ಮಾಡುವವರಿಗೆ ಒ೦ದು ಎಚ್ಚರಿಕೆಯ ಗ೦ಟೆ ಆಗಿರುತ್ತದೆ...

ಮು೦ದಿನ ಭಾಗಕ್ಕೆ ಕಾಯುತ್ತೇನೆ....

ಸಾಗರದಾಚೆಯ ಇಂಚರ said...

ಸುಧೇಶ್ ಸರ್,
ಒಳ್ಳೆಯವರು ಕೆಟ್ಟವರು ಎಲ್ಲೆಡೆ ಇರುತ್ತಾರೆ, ನಾವು ನಮ್ಮ ದೇಶಕ್ಕೆ ಬೈಯುತ್ತೇವೆ.
ಎಲ್ಲೆಡೆಯಲ್ಲಿಯೂ ಕಳ್ಳತನ ಸುಲಿಗೆ ಇದ್ದದ್ದೇ.
ಅದರಲ್ಲೂ ಸ್ಪೇನ್, ಇಟಲಿಯಂತ ಪ್ರವಾಸಿ ತಾಣಗಳಲ್ಲಿ ಇದು ಇನ್ನು ಜಾಸ್ತಿ
ಹೀಗೆಯೇ ಬರುತ್ತಿರಿ

ಸುಧೇಶ್ ಶೆಟ್ಟಿ said...

ಗುರು ಅವರೇ....

ಬರ್ತಾ ಇರ್ತೀನಿ.... :)

ಸರ್ ಅನ್ನಬೇಡಿ... ಸುಧೇಶ್ ಅನ್ನಿ ಸಾಕು :)

ಸಾಗರದಾಚೆಯ ಇಂಚರ said...

ಸುಧೇಶ್
ಅಭಿಪ್ರಾಯಕ್ಕೆ ಧನ್ಯವಾದಗಳು