Tuesday, September 29, 2009

ಷೋಡಷಿಯು ಅವಳು ....ಮನೆಯ ಮಂದಿರದಲ್ಲಿ ಮನದ ಆಳದ ಬೆಡಗಿ  
ಮನಸ್ಸನ್ನು ಕದ್ದಂಥ ಮಲೆನಾಡಿನ ಹುಡುಗಿ


ಮಲ್ಲಿಗೆಯೋ ಸಂಪಿಗೆಯೋ ಮನಸೆಲ್ಲ ಜಾಜಿ  
ಮಿಂಚಿನ ಸೆಳಕಿನಲಿ ತಪ್ಪೆಲ್ಲ ರಾಜಿ


ಮುದ್ದಿನ ಮಾವನ ಮುತ್ತಿನ ಮಗಳು 
ಮೆತ್ತನೆಯ ಮಾತಿಂದ ಮನವ ಗೆದ್ದಿಹಳು


ಮೈಮನದ ಮಕರಂದ ಮಾನಿನಿಗೆ ಚಂದ  
ಮನವನ್ನು ತಣಿಸುವಳು ನೋಡು ಮುದದಿಂದ


ಮಗುವಂತೆ ಬಂದು ಮಗುವನ್ನೇ ನೀಡಿದಳು 
ಮಕ್ಕಳಾದವು ಎರಡು ಒಂದು ಮರಿ ಮಗಳು


ಮಂದಹಾಸವ ಬೀರಿ ಈಗಲೂ ಕಾಯುವಳು  
ಹರೆಯ ಅರವತ್ತಾರು, ಷೋಡಷಿಯು ಅವಳು

44 comments:

ಸಿಮೆಂಟು ಮರಳಿನ ಮಧ್ಯೆ said...

ಗುರು...

ಸುಂದರ ಕವನ...

ಶಬ್ಧಗಳ ಮೇಲಿನ ಹಿಡಿತ
ಭಾವಗಳು ಚೆನ್ನಾಗಿ ವ್ಯಕ್ತವಾಗಿವೆ...

ಎರಡನೆಯ ಮರಿ ಮಗು...

ಶೀಘ್ರವೇ ಬರಲಿ...

ಯಾವಾಗ ಸಿಹಿ ಸುದ್ಧಿ...?

Divya Mallya - ದಿವ್ಯಾ ಮಲ್ಯ said...

ಚೆನ್ನಾಗಿದೆ :)

ಮನಸು said...

ಗುರು,
ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ, ಬಹಳ ಇಷ್ಟವಾಯಿತು...

shivu said...

ಗುರು,

ಹರೆಯ ಅರವತ್ತಾರು ಆದರು ಶೋಡಸಿ...

ನಿಮ್ಮ ಕಲ್ಪನೆ ತುಂಬಾ ಚೆನ್ನಾಗಿದೆ...ಹೀಗೆ ಹಿರಿತನಕ್ಕೂ ಇಂಥ ನೀಡಿದ್ದೀರಿ...ಅಭಿನಂದನೆಗಳು..

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ, ಎಂದಿನಂತೆ ಮೊದಲ ಅಭಿಪ್ರಾಯ ಪ್ರೋತ್ಸಾಹ ನಿಮ್ಮದು. ನಿಮ್ಮ ಹಾರೈಕೆ ನಿಜವಾಗಲಿ :)

ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ದಿವ್ಯ,
ಧನ್ಯವಾದಗಳು ಅಭಿಪ್ರಾಯಕ್ಕೆ , ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಮನಸು,
ಇಷ್ಟವಾಗಿದ್ದಕ್ಕೆ ಸಂತೋಷ, ಇದು ಮನದೆನ್ನೆಗೆ ಬರೆದಿದ್ದು, ಅವಳೊಂದಿಗೆ ಜೀವನಪೂರ್ತಿ ಕಳೆದರೂ ಅವಳಿನ್ನು ಚಿರ ನೂತನ ಎನ್ನುವ ಅರ್ಥದಲ್ಲಿ ಬರೆದಿದ್ದು

ಸಾಗರದಾಚೆಯ ಇಂಚರ said...

ಶಿವೂ ಸರ್,

ನಿಮ್ಮ ಉಹೆ ದಿಟ, ವಯಸ್ಸು ದೇಹಕ್ಕೆ ಹೊರತು ಮನಸ್ಸಿಗಲ್ಲ, ನೋಡುವ ಕಂಗಳು, ಆರಾಧಿಸುವ ಮನಸ್ಸಿದ್ದರೆ ಹಿರಿಯ ಜೀವಗಳು ಬಹು ಇಷ್ಟದ ಸ್ನೇಹಿತರಾಗುತ್ತಾರೆ.
ಅಲ್ಲವೇ?

ಮೂರ್ತಿ ಹೊಸಬಾಳೆ. said...

ವಾವ್ ಮಸ್ತ್ ಇದ್ದೋ ಮಾರಾಯ.

ಸಾಗರದಾಚೆಯ ಇಂಚರ said...

ಮೂರ್ತಿ,
ಥ್ಯಾಂಕ್ಸ್ ಕಣೋ, ಹಿಂಗೆ ಬರ್ತಾ ಇರಿ

PARAANJAPE K.N. said...

ಕವನ ಪ್ರಾಸಬದ್ಧವಾಗಿರುವ ಜೊತೆಜೊತೆಗೆ ಭಾವ ಲಹರಿಯ೦ತಿದೆ.

ಬಿಸಿಲ ಹನಿ said...

nice one.

ಶಿವಪ್ರಕಾಶ್ said...

ಗುರು,
ವರ್ಣನೆ ತುಂಬಾ ಚನ್ನಾಗಿದೆ.

ತೇಜಸ್ವಿನಿ ಹೆಗಡೆ- said...

ಕವನದೊಳಗಿನ ಭಾವ ತುಂಬಾ ಇಷ್ಟವಾಯಿತು. ಮನದನ್ನೆಯನ್ನು ನಿತ್ಯ ಯೌವನೆಯಾಗಿ ಕಾಣುವ ನಿಮ್ಮ ಮನಸ್ಸೂ ಸುಂದರವಾಗಿದೆ..:) ಲಾಲಿತ್ಯಪೂರ್ಣ ಕವನ.

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್,
ನಿಮ್ಮ ಆಶೀರ್ವಾದ ಸದಾ ಇರಲಿ, ಹೀಗೆಯೇ ಬೆನ್ನು ತಟ್ಟುತ್ತಿರಿ

ಸಾಗರದಾಚೆಯ ಇಂಚರ said...

ಉದಯ್ ಸರ್,
ಥ್ಯಾಂಕ್ಸ್ , ಬರ್ತಾ ಇರಿ

ಸಾಗರದಾಚೆಯ ಇಂಚರ said...

ಶಿವೂ,
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ತೇಜಸ್ವಿನಿ ಮೇಡಂ,
ನಿಮ್ಮ ಸುಂದರ ಅಭಿಪ್ರಾಯಕ್ಕೆ ಧನ್ಯವಾದಗಳು, ಮನಸ್ಸು ಮಗುವಿನಂತಿರಬೇಕಂತೆ. ಆಗ ಎಲ್ಲವೂ ಸುಂದರವಾಗಿಯೇ ಕಾಣುತ್ತದೆ. ಮದ ದೇಹಕ್ಕೆ ತುಂಬಿದರೆ ಆಂತರ್ಯದ ಸೌಂದರ್ಯ ಎಲ್ಲಿ ಕಾಣುತ್ತದೆ ಹೇಳಿ?
ಹೀಗೆಯೇ ಬರುತ್ತಿರಿ, ಪ್ರೋತ್ಸಾಹಿಸುತ್ತಿರಿ

deepika said...

Super eddu guruanna

Anonymous said...

hey its kewl :)
nice one guru

Guru's world said...

ತುಂಬ ಚೆನ್ನಾಗಿ ಇದೆ ಕವನ,.

ಸಾಗರದಾಚೆಯ ಇಂಚರ said...

Thank you Deepika, barta iru

ಸಾಗರದಾಚೆಯ ಇಂಚರ said...

shree,

thanks for your comments

ಸಾಗರದಾಚೆಯ ಇಂಚರ said...

Guru, tumba thanks comment ge, heege barta iri

Ranjita said...

ಗುರು ಅಣ್ಣ ,
ತುಂಬಾ ಚನ್ನಾಗಿದೆ ಕವನ .. ಲಾಸ್ಟ್ ಲೈನ್ಸ್ ಮಾತ್ರ ಸುಪೆರ್ಬ್

sunaath said...

ನಿಮ್ಮ ಕವನ ಓದಿದಾ ಆಂಗ್ಲ ಕವನವೊಂದರ ಕೊನೆಯ ಸಾಲುಗಳು ನೆನಪಾದವು:
"Let us grow old together
The best is yet to be."

ಸಾಗರದಾಚೆಯ ಇಂಚರ said...

ರಂಜಿತ,
ಇಷ್ಟವಾಗಿದ್ದಕ್ಕೆ ತುಂಬಾ ಸಂತೋಷ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಸುನಾಥ ಸರ್,
ನಿಮ್ಮ ಅಂಗ್ಲ ಕವನ ಸಾಲು ತುಂಬಾ ಚೆನ್ನಾಗಿದೆ, ನನ್ನ ಕವನ ನಿಮಗೆ ಅದನ್ನು ನೆನಪಿಸಿದರೆ ನಾನು ಧನ್ಯ.
ಹೀಗೆಯೇ ಪ್ರೋತ್ಸಾಹಿಸುತ್ತಿರಿ

ಕ್ಷಣ... ಚಿಂತನೆ... bhchandru said...

ಗುರು ಅವರೆ, ಕವನ ತುಂಬಾ ಸುಂದರವಾಗಿದೆ. ಜೊತೆಯಲ್ಲಿರುವ ಚಿತ್ರವೂ ಸಹ ಸೊಗಸಾಗಿದೆ. ಭಾವಪೂರ್ಣ ಕವಿತೆಯು ಇಷ್ಟವಾಯಿತು.

ಸ್ನೇಹದಿಂದ,
ಚಂದ್ರು

ಸಾಗರದಾಚೆಯ ಇಂಚರ said...

ಕ್ಷಣ ಚಿಂತನೆ,
ನಿಮ್ಮ ಅಭಿಪ್ರಾಯಕ್ಕೆ ಚಿರಋಣಿ,
ಅದೊಂದು ಪೇಂಟಿಂಗ್, ಅದನ್ನೇ ಷೋಡಶಿ ರೂಪದಲ್ಲಿ ಹಾಕಿದೆ,
ಹೀಗೆಯೇ ಬರುತ್ತಿರಿ

SANTOSH MS said...

sundara kavana, mannassige mudaneeduvanta saalugalagive

ಸಾಗರದಾಚೆಯ ಇಂಚರ said...

ಥ್ಯಾಂಕ್ಸ್ ಸಂತೋಷ,
ಹೀಗೆ ಬರ್ತಾ ಇರಿ

shridhar said...

ಗುರು,
ಸುಂದರ ಕವನ ಹಾಗು ಶಬ್ದಗಳ ಮೇಲಿನ ನಿಮ್ಮ ಹಿಡಿತ ಕೂಡ .. ಸುಂದರ ಕಲ್ಪನೆಯುಳ್ಳ ಸರಳ ಕವಿತೆ.

ಸಾಗರದಾಚೆಯ ಇಂಚರ said...

ಶ್ರೀಧರ್
ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ

ಸೀತಾರಾಮ. ಕೆ. said...

ಸರಳ ಸು೦ದರ ಮುದ ಕೊಡುವ ಕವನ. "ಮಿ೦ಚಿನಾ ಸೆಳಕಿನಲಿ ತಪ್ಪೆಲ್ಲಾ ರಾಜಿ"-ಒಳ್ಳೇ ಸಾಲುಗಳು. ಮುಪ್ಪಿನಲು ಮನಗಳು ಮೆರೆವ ಪರಿಕಲ್ಪನೆ ಸು೦ದರ.

ವಿನುತ said...

"ಹರೆಯ ಅರವತ್ತಾರು, ಷೋಡಷಿಯು ಅವಳು .."
ವಾವ್! ಪದ ಲಾಲಿತ್ಯ ಸೊಗಸಾಗಿದೆ ಕವನದಲ್ಲಿ. ಮನಸ್ಸಿಗೆ೦ದೂ ವಯಸ್ಸಾಗುವುದೇ ಇಲ್ಲ, ನಿಮ್ಮೊಳಗಿರುವ ಕವಿಯ೦ತೆ. ಅದೆ೦ದಿಗೂ ಚಿರನೂತನ.

ಸಾಗರದಾಚೆಯ ಇಂಚರ said...

ಸೀತಾರಾಂ ಸರ್,
ನನ್ನ ಬ್ಲಾಗ್ ಗೆ ಸ್ವಾಗತ , ಕವನ ಇಷ್ಟವಾಗಿದ್ದಕ್ಕೆ ನಾನು ಧನ್ಯ,
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ವಿನುತ,
ಮನಸ್ಸಿಗೆ ಯಾವತ್ತೂ ಮುಪ್ಪಿಲ್ಲ, ಮುಪ್ಪು ಏನಿದ್ದರೂ ದೇಹಕ್ಕೆ,
ಪ್ರತಿದಿನವೂ ಹೊಸದಿನವೇ, ಪ್ರತಿ ಕ್ಷಣವೂ ಹೊಸ ಕ್ಷಣವೇ
ಅಲ್ಲವೇ, ಹೀಗೆಯೇ ಬರುತ್ತಿರಿ

ದಿನಕರ .. said...

ಗುರು ಸರ್,
ಶಬ್ದದ ಮೇಲಿನ ಹಿಡಿತ, ಅದರ ಮೋಹ, ನಿಮ್ಮ ಕಲ್ಪನೆ ಎಲ್ಲಾ ಸಿಂಪ್ಲಿ ಸುಪೆರ್ಬ್..... ನಿಮ್ಮ ಮನಸ್ಸು ಮಗುವಿನಂತೆ, ಅದಕ್ಕೆ ಎಲ್ಲ ಸುಂದರವಾಗಿಯೇ ಕಾಣಿಸುತ್ತಿದೆ..... ಹೀಗೆ ನಿಮ್ಮ ಮನಸ್ಸು, ಕಲ್ಪನೆ ಎಲ್ಲ ಸುಂದರವಾಗಿರಲಿ.....

ಸಾಗರದಾಚೆಯ ಇಂಚರ said...

ದಿನಕರ ಸರ್,
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ, ಮನಸ್ಸು ಮಗುವಿನಂತೆ ಇರಬೇಕು ಅಂತಾರಲ್ಲ , ಹಾಗೆ ಆಲ್ವಾ,
ಹೀಗೆ ಬರ್ತಾ ಇರಿ,

Prabhuraj Moogi said...

ನಿಮ್ಮ ಚಿರಯೌವನ ಚೆಲುವೆಯ ಕವನ ತುಂಬಾ ಚೆನ್ನಾಗಿದೆ, ಕೊನೆ ಸಾಲು ಬಹಳ ಇಷ್ಟವಾಯಿತು. ಮನಸಿಗೆ ಮುಪ್ಪಿಲ್ಲ ಅನ್ನೂದಂತೂ ನಿಜ

ಸಾಗರದಾಚೆಯ ಇಂಚರ said...

ಪ್ರಭು ಸರ್,
ಕವನ ಇಷ್ಟವಾಗಿದ್ದಕ್ಕೆ ನನಗೆ ಸಂತೋಷ,
ಮನಸ್ಸಿಗೆ ಯಾವತ್ತೂ ಮುಪ್ಪಿಲ್ಲ, ಇರಬಾರದು ಕೂಡಾ

ಬರ್ತಾ ಇರಿ

Anonymous said...

tumba andavaada baravanige..bahala chennagide nimma kavana.. :)istondu kannada blogs ide antha gotte iralilla sir..illi banda mele tumba blogs bagge tilikonde.. :)

ಸಾಗರದಾಚೆಯ ಇಂಚರ said...

Anonymous,
nimma hesarenu, nanna blaag ge swaagata. dayavittu hesarininda banni.
i blog ondu sundara loka. tilidukollalu aneka sundara lekhanagalu iruttave.
nimma abhipraayakke dhanyavaadagalu

heegeye baruttiri