Tuesday, September 15, 2009

ಆಧ್ಯಾತ್ಮದ ಹರಿಕಾರನಾಗಿ ವೈಜ್ಞಾನಿಕ ಕ್ರಾಂತಿಗೆ ಮುನ್ನುಡಿ ಬರೆದು ನಮ್ಮನ್ನಗಲಿದ ಶ್ರೀ ವಿಭುದೇಶರಿಗೆ ಭಾವಪೂರ್ಣ ನಮನ


-ಗುರು ಬಬ್ಬಿಗದ್ದೆ

ಧರ್ಮ ಹಾಗೂ ವಿಜ್ಞಾನ ಒಂದೇ ನೆರಳಿನಲ್ಲಿ ಇರುವುದು ಬಹಳ ಕಡಿಮೆ. ಒಂದು ಇನ್ನೊಂದಕ್ಕೆ ವಿರುದ್ದ. ಅದಕ್ಕಾಗಿಯೇ ಸ್ವಾಮೀಜಿಗಳು ಹಾಗೂ ವಿಜ್ಞಾನಿಗಳ ವಿಚಾರ ಸರಣಿಯೇ ಬೇರೆ ಬೇರೆ. ಒಬ್ಬರು ನಿರಾಕಾರ ಭಗವಂತನ ಆರಾಧಕರಾದರೆ ಇನ್ನೊಬ್ಬರು ಭಗವಂತನ ಅಸ್ತಿತ್ವವನ್ನೇ ಪ್ರಶ್ನಿಸುವವರು. ಇವರಿಬ್ಬರೂ ಒಂದೇ ಆಗಿದ್ದು ತುಂಬಾ ವಿರಳ. ಆದರೆ ಇಂದು ಬೆಳಿಗ್ಗೆ ನಮ್ಮನ್ನಗಲಿದ ಅದಮಾರು ಮಠದ ಶ್ರೀ ಶ್ರೀ ಶ್ರೀ ವಿಭುದೇಶ ತೀರ್ಥರು ಧರ್ಮದ ಹರಿಕಾರನಾಗಿ ವಿಜ್ಞಾನದ ಕ್ರಾಂತಿಗೆ ಚಾಲನೆ ಕೊಟ್ಟವರು ಎಂದರೆ ಅತಿಶಯೋಕ್ತಿಯಲ್ಲ. ಹೌದು, ಶ್ರೀ ವಿಭುದೇಶ ತೀರ್ಥರೆಂದರೆ , ಶ್ರೀ ಪೂರ್ಣಪ್ರಜ್ಞ ಸಂಸ್ಥೆಯ ಸಂಸ್ಥಾಪಕರೆಂದರೆ ಸಮಸ್ತ ಭಾರತಕ್ಕೂ ಗೊತ್ತು. ಇಂದು ಭಾರತದಾದ್ಯಂತ ಹೆಸರು ಮಾಡಿರುವ ಕೆಲವೇ ಕೆಲವು ಶೈಕ್ಷಣಿಕ ಸಂಸ್ಥೆಗಳಲ್ಲಿ ಪೂರ್ಣಪ್ರಜ್ನವೂ ಒಂದು. ಇಂದು ಪೂರ್ಣಪ್ರಜ್ಞ ಸುಮಾರು ೨೭ ಶಾಲಾ , ಕಾಲೇಜುಗಳನ್ನು ಒಳಗೊಂಡಿದೆ. ಇದಕ್ಕೆಲ್ಲ ಕಾರಣೀಭೂತರಾದವರು ಶ್ರೀ ವಿಭುದೇಶರು. ಆಧ್ಯಾತ್ಮದ ನಡುವೆಯೇ ವಿಜ್ಞಾನದ ಅಪಾರ ಆಸಕ್ತಿ ಅವರ ವೈಶಿಷ್ಟ್ಯತೆ.
ಅವರ ಶೈಕ್ಷಣಿಕ ಸಂಸ್ಥೆಗಳಲ್ಲಿ ಬಹಳಷ್ಟು ವಿಜ್ಞಾನಕ್ಕೆ ಪ್ರೋತ್ಸಾಹಿಸಿದ ಸ್ವಾಮೀಜಿಯವರು ಅಪಾರ ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವೈಜ್ಞಾನಿಕ ಸಂಶೋಧನಾ ಸಂಸ್ಥೆ ಸ್ಥಾಪಿಸಿದ್ದಾರೆ.
ಯಾವ ಸ್ವಾಮೀಜಿಯವರು ಮಾಡದ ಈ ನೂತನ ಕೆಲಸ ಒಂದು ಮೈಲಿಗಲ್ಲೇ ಸರಿ. ಅವರ ಮಾತಿನಲ್ಲೇ ಹೇಳುವದಾದರೆ '' ಭಾರತೀಯರು ವಿದೇಶಗಳಲ್ಲಿ ಸಂಶೋಧನೆ ಮಾಡಿ ನೋಬಲ್ ಪಡೆಯುತ್ತಾರೆ, ಆದರೆ ನಮ್ಮ ಪ್ರತಿಭೆಗಳು ನಮ್ಮಲ್ಲೇ ಸಂಶೋಧನೆ ಮಾಡಿ ನೋಬಲ್ ಪಡೆಯಬೇಕು. ಅದೇ ದೇಶಕ್ಕೆ ಹೆಮ್ಮೆ, ಅದಕ್ಕಾಗಿಯೇ ಈ ಸಂಶೋಧನಾ ಕೇಂದ್ರ ನನ್ನ ಬಹುದಿನದ ಆಸೆ'' ಎಂದು ಸುಮಾರು 6 ವರ್ಷಗಳ ಹಿಂದೆ ಸ್ವಾಮೀಜಿ ಹೇಳಿದ್ದು ನನಗಿನ್ನೂ ನೆನಪಿದೆ. ಅದರಲ್ಲೂ ಭೌತಶಾಸ್ತ್ರದ ಬಗ್ಗೆ ವಿಶೇಷ ಒಲವು ಹೊಂದಿದ್ದ ಸ್ವಾಮೀಜಿ ಹೊಸ ಹೊಸ ವಿಷಯಗಳ ಬಗ್ಗೆ ಆಸಕ್ತರಾಗಿದ್ದರು. ಸದಾ ಚಟುವಟಿಕೆಯ ಕೇಂದ್ರ ಬಿಂದುವಾಗಿದ್ದ ಸ್ವಾಮೀಜಿಯವರು ಆಲಸ್ಯವನ್ನು ಎಂದಿಗೂ ಸಹಿಸುತ್ತಿರಲಿಲ್ಲ.
ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಕಟ್ಟು ನಿಟ್ಟಿನ ಆಡಳಿತಕ್ಕೆ ಹೆಸರುವಾಸಿಯಾಗಿದ್ದ ಸ್ವಾಮೀಜಿ ಶಿಕ್ಷಣಕ್ಕೆ ಒಂದು ಹೊಸ ರೂಪ ನೀಡಿದ್ದರು. ಬೆಂಗಳೂರಿನ ಜನರು ಪೂರ್ಣಪ್ರಜ್ಞಕ್ಕೆ ಇಂದಿಗೂ ಮುಗಿ ಬೀಳುವುದು ಇದಕ್ಕಾಗಿಯೇ.
ಸ್ವಾಮೀಜಿಯಾಗಿ ದೇವರ ಧ್ಯಾನದಲ್ಲಿಯೇ ನಿರತನಾಗದೆ ಸಮಾಜಕ್ಕೆ ಉಪಕಾರ ಮಾಡುತ್ತಾ ಶಿಕ್ಷಣಕ್ಕೆ ಅನುಪಮ ಸೇವೆ ಸಲ್ಲಿಸಿದ ಶ್ರೀ ವಿಭುದೇಶರ ಅಗಲಿಕೆಯ ನೋವು ಬಹುದಿನ ನಮ್ಮನ್ನು ಕಾಡುತ್ತದೆ.
ಅವರದೆ ವಿದ್ಯಾ ಸಂಸ್ಥೆಯಲ್ಲಿ ಕಲಿತ ನನಗೆ ಅವರನ್ನು ಹತ್ತಿರದಿಂದ ನೋಡಿದ ಭಾಗ್ಯವಿದೆ. ಅವರ ಕಾರ್ಯಕ್ರಮವೊಂದರಲ್ಲಿ ಕಾರ್ಯಕ್ರಮವನ್ನು ನಿರ್ವಹಣೆಯನ್ನು ಮಾಡಿದ್ದೇನೆ. ಅವರಿಂದ ಆಶೀರ್ವಾದ ಕೂಡ ಪಡೆದಿದ್ದೇನೆ. ಇಂದು ಬೆಳಗಿನ ಜಾವ ಬಂದ ಸುದ್ದಿ ಒಮ್ಮೆ ನನ್ನ ಮನಸ್ಸನ್ನೇ ವಿಚಲಿತಗೊಲಿಸಿತು. ಕೂಡಲೇ ಅವರ ಬಗೆಗೆ 4 ಮಾತುಗಳನ್ನಾಡುವ ಬಯಕೆ ತೋರಿತು.
ಅವರಿಲ್ಲ ನಿಜ, ಆದರೆ ಅವರ ಜ್ಞಾನದೀವಿಗೆ ಸದಾ ನಮ್ಮೊಂದಿಗಿದೆ. ಅವರ ದಿವ್ಯ ಉದ್ದೇಶ ನಮ್ಮೊಂದಿಗಿದೆ.
ಅವರ ಶಿಕ್ಷಣ ಸಂಸ್ಥೆ ಇನ್ನು ಹೆಚ್ಚು ಯಶಸ್ಸು ಪಡೆಯಲಿ ಎಂಬ ಹಾರೈಕೆಯೊಂದಿಗೆ ನನ್ನ ಬಾಳಿಗೆ ಬೆಳಕಾದ ಆ ಆಧ್ಯಾತ್ಮದ ಹರಿಕಾರನಿಗೊಂದು ದಿವ್ಯ ನಮನ, ಭಾವಪೂರ್ಣ ನಮನ,
ಸದಾ ನಿಮ್ಮ ನೆನಪಿನಲ್ಲಿ, ನಿಮ್ಮದೇ ಮಾರ್ಗದರ್ಶನದ ಅಡಿಯಲ್ಲಿ ಮುನ್ನಡೆಯುತ್ತಾ....

ಶ್ರೀ ಶ್ರೀ ಶ್ರೀ ವಿಭುದೇಶ ತೀರ್ಥರಿಗೆ ಕೊನೆಯ ದಿವ್ಯ ನಮನ

23 comments:

ಮನಸು said...

divya namanagaLu gurugaLige

ಸಾಗರದಾಚೆಯ ಇಂಚರ said...

Thank you manasu

ಬಿಸಿಲ ಹನಿ said...

ಅಪರೂಪದ ಸ್ವಾಮಿಜಿಯ ಬಗ್ಗೆ ಅಪರೂಪದ ಲೇಖನ. ಸ್ವಾಮಿಜಿಯ ವಿಚಾರಧಾರೆ ಇಷ್ತವಾಯಿತು.

ಶಿವಪ್ರಕಾಶ್ said...

ಜ್ಞಾನದೀಪವನ್ನು ಬೆಳಗಿಸಿದ ಮಹಾನ್ ಸಾಧಕರಾದ ಗುರುಗಳಿಗೆ ದಿವ್ಯ ನಮನಗಳು.

ಸಾಗರದಾಚೆಯ ಇಂಚರ said...

ಬಿಸಿಲ ಹನಿ ಸರ್,
ನಿಜಕ್ಕೂ ಅವರು ಅಪರೂಪದವರೇ,
ಅವರನ್ನು ನೀವು ಭೆತ್ತಿಯಾಗಿದ್ದರೆ ನಿಜಕ್ಕೂ ಸಂತೋಷ ಪಡ್ತಾ ಇದ್ರಿ

ಸಾಗರದಾಚೆಯ ಇಂಚರ said...

ಶಿವೂ ಸರ್,
ನಿಮ್ಮ ನಮನಗಳು ಅವರಿಗೆ ಸಲ್ಲಲಿ

sunaath said...

ಗುರುಮೂರ್ತಿಗಳೆ,
ಸ್ವಾಮೀಜಿಯವರ ವೈಜ್ಞಾನಿಕ ಆಸಕ್ತಿ ನನಗೆ ಗೊತ್ತಿರಲಿಲ್ಲ. ನಮ್ಮ ಎಲ್ಲ ಮಠಾಧೀಶರು ಇದೇ ಧೋರಣೆ ತಳೆಯುವದಾದರೆ, ಭಾರತದ ಭವಿಷ್ಯ ಉಜ್ವಲವಾದೀತು.

ಕ್ಷಣ... ಚಿಂತನೆ... said...

ಅಪರೂಪದ ಲೇಖನ. ಸಾಧಕ ಗುರುವರ್ಯರಿಗೆ ಭಾವಪೂರ್ಣ ನಮನಗಳು.

ಸಾಗರದಾಚೆಯ ಇಂಚರ said...

ಸುನಾಥ್ ಸರ್,
ನಿಜ, ಎಲ್ಲ ಸ್ವಾಮೀಜಿಗಳು ಇ ನಿಟ್ಟಿನಲ್ಲಿ ಜಾಗ್ರತರಾದರೆ ದೇಶದ ಭವಿಷ್ಯ ಉಜ್ವಲ

ಸಾಗರದಾಚೆಯ ಇಂಚರ said...

ಚಂದ್ರು ಸರ್,
ನಿಮ್ಮ ಅಭಿಪ್ರಾಯಕ್ಕೆ ಅನಂತ ಧನ್ಯವಾದಗಳು

ವಿನುತ said...

ಸ್ವಾಮೀಜಿಯವರ ವೈಜ್ಞಾನಿಕ ಆಸಕ್ತಿಯ ಪರಿಚಯ ಇರಲಿಲ್ಲ. ಎರಡು ವಿಚಾರ ವೈರುಧ್ಯಗಳ ಸ೦ಗಮಕಾರರಿಗೆ, ನಿಮ್ಮೊ೦ದಿಗೆ ನಮ್ಮದೂ ನಮನಗಳು.

ಸಾಗರದಾಚೆಯ ಇಂಚರ said...

ವಿನುತ,
ಹೌದು, ಇಂಥಹ ಸ್ವಾಮೀಜಿಗಳು ಬಹಳ ವಿರಳ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ತೇಜಸ್ವಿನಿ ಹೆಗಡೆ said...

"ಭಾರತೀಯರು ವಿದೇಶಗಳಲ್ಲಿ ಸಂಶೋಧನೆ ಮಾಡಿ ನೋಬಲ್ ಪಡೆಯುತ್ತಾರೆ, ಆದರೆ ನಮ್ಮ ಪ್ರತಿಭೆಗಳು ನಮ್ಮಲ್ಲೇ ಸಂಶೋಧನೆ ಮಾಡಿ ನೋಬಲ್ ಪಡೆಯಬೇಕು. ಅದೇ ದೇಶಕ್ಕೆ ಹೆಮ್ಮೆ, ಅದಕ್ಕಾಗಿಯೇ ಈ ಸಂಶೋಧನಾ ಕೇಂದ್ರ ನನ್ನ ಬಹುದಿನದ ಆಸೆ"

ಅವರ ಈ ಒಂದು ಕಲ್ಪನೆ ಬಹು ಸುಂದರ ಹಾಗೂ ಅದ್ಭುತವಾಗಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ. ಅವರ ದಿವ್ಯಾತ್ಮಕ್ಕೆ ಮನಃಪೂರ್ವಕವಾಗಿ ನಮಿಸುವೆ.

Rakesh Holla said...

I know swameeji very well..He is really a great person...
Thanks for this nice article...

ಸಾಗರದಾಚೆಯ ಇಂಚರ said...

ತೇಜಸ್ವಿನಿ ಮೇಡಂ,
ನೀವು ಅನ್ನೋದು ಸರಿ, ಅವರು ಒಬ್ಬ ಮಹಾನ್ ಸಾಧಕ, ಕನಸುಗಾರ

ಸಾಗರದಾಚೆಯ ಇಂಚರ said...

Dear Rakesh,\

yes, you are right, he was filled with inspirational thoughts

ಶಾಂತಲಾ ಭಂಡಿ (ಸನ್ನಿಧಿ) said...

ಗುರುಮೂರ್ತಿ ಅವರೆ...

"ಅವರ ಜ್ಞಾನದೀವಿಗೆ ಸದಾ ನಮ್ಮೊಂದಿಗಿದೆ. ಅವರ ದಿವ್ಯ ಉದ್ದೇಶ ನಮ್ಮೊಂದಿಗಿದೆ.
ಅವರ ಶಿಕ್ಷಣ ಸಂಸ್ಥೆ ಇನ್ನು ಹೆಚ್ಚು ಯಶಸ್ಸು ಪಡೆಯಲಿ ಎಂಬ ಹಾರೈಕೆಯೊಂದಿಗೆ..."

ಎಂಬೊಂದು ಅದೇ ಹಾರೈಕೆಯೊಂದಿಗೆ ನನ್ನದೂ ಒಂದು ನಮನ.

ಸಾಗರದಾಚೆಯ ಇಂಚರ said...

ಶಾಂತಲಾ ಮೇಡಂ,
ನಿಮ್ಮ ಹಾರೈಕೆಗೆ ನನ್ನ ವಂದನೆಗಳು

Me, Myself & I said...

ಆತ್ಮೀಯ ಗುರುಮೂರ್ತಿಗಳೇ,
ಶ್ರೀ ವಿಭುದೇಶ ತೀರ್ಥರಿಗೆ ಇದೋ ನನ್ನ ನಮಸ್ಕಾರಗಳು.

shivu.k said...

ಸ್ವಾಮೀಜಿಯವರ ಬಗ್ಗೆ ಕೇಳಿದ್ದೆ. ನೀವು ಅವರ ಬಗ್ಗೆ ಒಂದು ಉತ್ತಮ ಬರಹವನ್ನು ಬರೆದಿದ್ದೀರಿ...ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಶಿವೂ ಸರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು , ನಿಜಕ್ಕೂ ಅವರೊಬ್ಬ ಮಹಾನ ಯೋಗಿ

ದಿನಕರ ಮೊಗೇರ said...

ಸ್ವಾಮಿಜಿಯವರ ಬಗ್ಗೆ ಕೇಳಿದ್ದೆ... ನೀವು ಬರೆದದ್ದನ್ನು ನೋಡಿ ಅವರ ಬಗ್ಗೆ ಇನ್ನೂ ಗೌರವ ಮೂಡಿತು.... ಥ್ಯಾಂಕ್ಸ್.....ಉತಾಮ ಲೇಖನಕ್ಕಾಗಿ......

ಸಾಗರದಾಚೆಯ ಇಂಚರ said...

ದಿನಕರ ಸರ್,
ಸ್ವಾಗತ ನನ್ನ ಬ್ಲಾಗ್ ಗೆ, ಧನ್ಯವಾದ ಕಾಮೆಂಟ್ ಗೆ
ಬರ್ತಾ ಇರಿ