Sunday, September 18, 2011

ಅಭಿನವ ಉವಾಚ .....

ಪ್ರೀತಿಯ ಸ್ನೇಹಿತರೆ, ಕಳೆದ ತಿಂಗಳು ನಮ್ಮ ಪ್ರೀತಿಯ ಮಗ ಹುಟ್ಟಿದ್ದು ನಿಮಗೆ ತಿಳಿದೇ ಇದೆ. ಗುರುಹಿರಿಯರ ಆಶೀರ್ವಾದ  ದಿಂದ ''ಅಭಿನವ್'' ಎಂದು ಹೆಸರು ಇಟ್ಟಿದ್ದೇವೆ. ಅವನು ಹುಟ್ಟಿದ  ಕಥೆ ಅವನ ಬಾಯಿಂದಲೇ ಕೇಳಿ :) 


ಅಬ್ಬಾ, 9 ತಿಂಗಳು ಕತ್ತಲೆ ನಲ್ಲಿ ಇದ್ದಿದ್ದೆ, ಇದೇನಪ್ಪ, ಒಂದು ಲೈಟ್ ಕೂಡಾ ಹಾಕದೆ ಕಂಜೂಸ್ ಮಾಡ್ತಾರೆ ಅಂತ ಅಂದ್ಕೊಂಡಿದ್ದೆ,
ಎಲ್ಲಿ ನೋಡಿದ್ರುನು ಕತ್ತಲೆ, ಬರೆ ಆಚೆಯಿಂದ ಈಚೆ ಗೆ  ಓಡೋದು, ಒದೆಯೋದು ಇದೆ ನನ್ನ ಪ್ರಪಂಚ ಆಗಿತ್ತು. ಬದುಕು ಅಂದ್ರೆ ಇದೇನಾ, ಜಗತ್ತು ಅಂದ್ರೆ ಇದೇನಾ ಅಂತ ಆಶ್ಚರ್ಯ ಆಗಿತ್ತು. ನನ್ನೊಳಗಿನ ನಾನು ದೊಡ್ಡ ಆಗ್ತಾ ಇದ್ದೆ ಹೊಟ್ಟೆ ಒಳಗೆ. ''ಬದುಕು ಅಂದ್ರೆ ಬೆಳೆಯೋದು, ಬಾಳು ಅಂದ್ರೆ ಬೆಳಗೋದು'' ಅಂತ ಇದ್ದವನಿಗೆ ಎಲ್ಲ ಕಡೆ ಕತ್ತಲೆ ಮಾತ್ರ ಕಾಣುತ್ತ ಇತ್ತು. ಕತ್ತಲೆ ಮನಸ್ಸನ್ನು ತುಂಬಾ ನೋಯಿಸ್ತ ಇತ್ತು. ದೊಡ್ಡ ಆಗ್ತಾ ಇದ್ದಂತೆ ಗೊತ್ತಾಗ್ತಾ ಹೋಯ್ತು, ನನ್ನ ಪ್ರಪಂಚ ಇದಲ್ಲ, ಇದು ಅಮ್ಮನ ಪ್ರೀತಿಯ ಪ್ರಪಂಚ. ಜಗತ್ತಿನ ಎಲ್ಲ ಕೆಟ್ಟ ಶಕ್ತಿಗಳಿಂದ ನನ್ನನ್ನು ರಕ್ಷಿಸಿ ಪ್ರಪಂಚಕ್ಕೆ ಯೋಗ್ಯವಾಗಿ ಬರಲು ಶ್ರಮಿಸಿದ ಅಮ್ಮನ ಪ್ರೀತಿಯ ಪ್ರಪಂಚ ಇದು ಎಂದು ನಿಧಾನ ಅರಿವಾಗತೊಡಗಿತು. 

ಅಮ್ಮನಿಗೆ ಆ ದಿನಗಳಲ್ಲಿ ತುಂಬಾ ಕಷ್ಟ ಕೊಟ್ಟೆ. ಪಾಪ, ನನ್ನ ಪ್ರಪಂಚಕ್ಕೆ ತರಲು ಸ್ವೀಡನ್ನಿನಿಂದ ಭಾರತಕ್ಕೆ ಬರುವಂತೆ ಮಾಡಿದೆ. ನನಗೋ ಭಾರತದಲ್ಲೇ ಹುಟ್ಟುವ ಬಯಕೆ ಇತ್ತು. ಅಪ್ಪ, ಅಮ್ಮನ ಆಸೆಯೂ ಅದೇ ಆದದ್ದರಿಂದ ವಿದೇಶದ ಮಣ್ಣಿನಲ್ಲಿ ಹುಟ್ಟುವ ಸಂಕಷ್ಟ ತಪ್ಪಿತು.
 ಮಣ್ಣಿನ ಸುಗಂಧ, ಬದುಕನ್ನೇ ಬದಲಿಸುತ್ತದಂತೆ. 
ಗಂಗೆ ಹರಿದ, ತುಂಗೆ ನಲಿದ, ನಾಡಿನ ಮಣ್ಣಿನ ಸತ್ವವೇ ಅಂತದ್ದು.  ಹುಟ್ಟಿದ ಘಳಿಗೆ ಇನ್ನು ನೆನಪಿದೆ, ಅಮ್ಮನ ಹೊಟ್ಟೆಯಿಂದ ಹೊರಗೆ ಬರಲು ತುಂಬಾ ಚಡಪಡಿಸುತ್ತಿದ್ದೆ. ಅಮ್ಮನಿಗಂತೂ ನೋವು ತಡೆಯಲು ಆಗುತ್ತಿರಲಿಲ್ಲ. ಅಮ್ಮನ ಬಾಯಿಯಿಂದ  ''ಅಮ್ಮ'' , ''ಅಮ್ಮ'' ಎಂಬ ನೋವು ಕಿವಿಗೆ ತಟ್ಟುತಿತ್ತು. ಅವಳಿಗೆ ನೋವು ಕೊಟ್ಟು ನಾನು ಹೊರಗೆ ಬರುವ ಆಸೆ ಖಂಡಿತ ನನಗೆ ಇರಲಿಲ್ಲ. ಆದರೆ ಏನು ಮಾಡಲಿ, ಕತ್ತಲೆ ಯಲ್ಲಿ ಇದ್ದು ಇದ್ದು ನನಗೂ ಬೇಸರ ಬಂದಿತ್ತು. ಅಂತೂ ಆಗಸ್ಟ್ 16 ನೆ ತಾರೀಖು ಮಧ್ಯಾನ್ಹ   3 ಘಂಟೆ ಸುಮಾರಿಗೆ ನಾನು ಜನಿಸಿದೆ. ಸುಮಾರು 3.4 kg ಇದ್ದ ನನ್ನನ್ನು ಹೊರ ತರುವಲ್ಲಿ ವೈದ್ಯರು ತುಂಬಾ ಶ್ರಮಿಸಿದರು.


ಜನಿಸಿದ ಹೊತ್ತು ಅಮ್ಮನಿಗೆ ಅರ್ಧ ಎಚ್ಚರ ಇತ್ತು. ಕಣ್ಣಲ್ಲಿ ನೀರಿತ್ತು. ಬಹುಶ: ಬದುಕಿನ ಎಲ್ಲ ಘಟ್ಟದಲ್ಲಿ 

''ನಿನ್ನ ನೋವು ನನಗಿರಲಿ, ನನ್ನೆಲ್ಲ ನಲಿವು ನಿನಗಿರಲಿ'' 

ಎಂದು ಅಮ್ಮ ನನಗೆ ಹೇಳುತ್ತಿದ್ದಂತೆ ಕಿವಿಯಲ್ಲಿ ಭಾಸವಾಗುತ್ತಿತ್ತು. 


9 ತಿಂಗಳು ಹೊತ್ತು, ನೋವನ್ನು ನುಂಗಿ , ನನ್ನನ್ನು ಈ ಪ್ರಪಂಚಕ್ಕೆ ತಂದ ಅಮ್ಮನ ಪ್ರೀತಿಗೆ ಕೋಟಿ ಕೋಟಿ ನಮನಗಳು. ಆ ಹೊರಗೆ ಬಂದ ಮೊದಲ ಕ್ಷಣ ಅಪ್ಪನಿಗೆ ನನ್ನ ನೋಡುವ ತವಕ. ಅಪ್ಪನ ಕಣ್ಣಲ್ಲಿ ಆನಂದದ ಕಣ್ಣೀರು ಬಂದಿದ್ದು ಕಾಣುತ್ತಿತ್ತು. ಅಪ್ಪಂದಿರ ಪ್ರೀತಿಯೇ ಅಂತಾದ್ದು. ಅಮ್ಮನ ಮಡಿಲ ಸಾಂತ್ವನ ಇಲ್ಲದಿದ್ದರೂ, ಬದುಕಿಗೆ ಸವಾಲು ಹಾಕುವ ವಿಶ್ವಾಸವಿರುತ್ತದೆ. ಅಂದು ಅಪ್ಪನ ಕೈ ನನ್ನ ಕೆನ್ನೆ ಸವರಿದಾಗ ಅನಿಸಿದ್ದು ಅದೇ.

 ಹುಟ್ಟಿದ ಕೆಲವು ದಿನಗಳು ಬರೆ ಅಳುವುದು. ನಿದ್ದೆ ಮಾಡುವುದು. ಅಪ್ಪ, ಅಮ್ಮನಿಗೆ ಕೊಟ್ಟ ಕಾಟವನ್ನು ಅವರಿಂದಲೇ ದೊಡ್ಡವನಾದಾಗ ಕೇಳುವ ಆಸೆಯಿದೆ.



 ನನ್ನ ಹಠ ತುಂಬಾ ಇತ್ತು. ಅಮ್ಮನಿಗಂತೂ  ನಿದ್ದೆ ಇಲ್ಲ, ಬೆನ್ನು ನೋವು ಬೇರೆ, ನನ್ನ ಹಠ ಒಂದೇ ಸಮನೆ. ಆದರೆ ನಾನು ಏನು ಮಾಡಲಿ, ನನಗೆ ಆಗ ಅಳುವುದು ಬಿಟ್ಟು ಬೇರೇನೂ ಬಾರದು. ಅದು ಬಿಟ್ಟರೆ ನಂಗೆ ಗೊತ್ತಿದದ್ದು ನಿದ್ದೆ ಮಾಡುವುದು ಮಾತ್ರ. ಹಠ ನನಗೆ ಆಟವಿದ್ದಂತೆ, ಕಾರಣ ನನ್ನ ಬಗ್ಗೆ ಯಾರಾದರೂ ಲಕ್ಷ ಕೊಡದಿದ್ದರೆ ಅತ್ತು ಹೆದರಿಸುತ್ತಿದ್ದೆ. ಅಂತೂ ಹುಟ್ಟಿದ 11 ನೇ ದಿನ ಅಪ್ಪ, ಅಮ್ಮ ಇಬ್ಬರು ಸೇರಿ ನನಗೆ ''ಅಭಿನವ್' ಎಂಬ ಸುಂದರ ಹೆಸರನ್ನು ಇಟ್ಟರು.


 ನಂತರದ ದಿನಗಳಲ್ಲಿ ನಾನು ಅಳುವುದನ್ನು ಕಡಿಮೆ ಮಾಡದಿದ್ದರೂ ಅಮ್ಮನಿಗೆ ಕಾಟ ಕೊಡುವುದನ್ನು ಸ್ವಲ್ಪ ಕಡಿಮೆ ಮಾಡಿದ್ದೇನೆ. ಅಪ್ಪನಂತು ನನ್ನ ಬಿಟ್ಟು ಕೆಲಸಕ್ಕೆಂದು ಮಲೇಶಿಯಾ ಕ್ಕೆ ಹೋಗಿದ್ದಾರೆ. ಅವರ ನೆನಪಿನಲ್ಲಿ ಇದ್ದೇನೆ. ಅಪ್ಪನಿಗೂ ನನ್ನ ತುಂಬಾ ನೆನಪು,,,, ಪಾಪ, ಅಪ್ಪ ಬೇಗನೆ ಬರುತ್ತಾರೆ ಎಂಬ ನೀರೀಕ್ಷೆ ನನ್ನದು.

ಪುಟ್ಟ ಕಾಲುಗಳನ್ನು ಇಟ್ಟು ನಡೆಯುವ ತವಕ ನನಗೆ, ಆದರೆ ಏನು ಮಾಡಲಿ, ಇನ್ನು ಕಾಯಬೇಕಂತೆ, ಅಮ್ಮನ ಅಪ್ಪಣೆಯಿದೆ, ನಾನಿನ್ನೂ ಚಿಕ್ಕವನಂತೆ, ಸರಿ, ಅಮ್ಮನ ಮಾತು ನನಗೆ ವೇದ ವಾಕ್ಯ ಇದ್ದಂತೆ. ಬೇಗ ದೊಡ್ಡವನಾಗುವ ಆಸೆ ಇದೆ :)


ಅಪ್ಪನ ಅಪ್ಪಣೆಯ ಮೇರೆಗೆ ಅಪ್ಪನ ಬ್ಲಾಗ್ ನಲ್ಲಿ ನನ್ನ ಹುಟ್ಟಿದ ಕಥೆ ಹೇಳಿದ್ದೇನೆ. ಸದ್ಯದಲ್ಲಿಯೇ ಅಪ್ಪನ ಸಹಾಯದಿಂದ ''ಅಭಿನವ ಉವಾಚ'' ಎಂಬ ಬ್ಲಾಗ್ ನಲ್ಲಿ ಇನ್ನು ಹೆಚ್ಚು ಬರೆಯುತ್ತೇನೆ. ನನ್ನ ಬ್ಲಾಗ್ ''http://gurubabbigadde.blogspot.com/'' ಇಲ್ಲಿಯೇ ಬರೆಯುತ್ತೇನೆ. ಸದ್ಯಕೆ ನನ್ನ ಕೆಲವು ಫೋಟೋಗಳು ನಿಮಗಾಗಿ ಹಾಕಿದ್ದೇನೆ. ನೋಡುತ್ತಿರಲ್ಲ,


ಬೇಡ ಅಂದ್ರು ಕೇಳೋಲ್ಲ, ಏನೋ ಹಚ್ಚಿದ್ದಾರೆ ತಲೆಗೆ 


ಯಾರೋ ಇಣುಕಿ ನೋಡ್ತಾ ಇದಾರೆ ನನ್ನ, ಎದುರಿಗೆ ಬರೋಕೆ ಏನು ಕಷ್ಟ?


ಏನು ಮಾಡೋದು, ಅಮ್ಮ  ಯಾರತ್ರನೋ ಮಾತಾಡ್ತಾ ಇದಾಳೆ, ಈಗ ಹಠ ಮಾಡಿದ್ರೆ ಬರ್ತಾಳೆ ನೋಡೋಕೆ, ಆದ್ರೆ ಪಾಪ ಯಾಕೆ ತೊಂದ್ರೆ ಕೊಡೋದು?


ಸರಿ ನಿದ್ದೆ ಬರೋ ಟೈಮ್ ಆಯಿತು 


ಮಲಗ್ತಿನಪ್ಪ ನಾನು, ನೀವು ಮಲ್ಕೊಳ್ಳಿ, ಮತ್ತೆ ಸಿಗೋಣ, ಟಾ ಟಾ 


ಅಲ್ಲಿಯತನಕ ನಿಮ್ಮೆಲ್ಲರ ಪ್ರೀತಿ ಹಾರೈಕೆ ನನ್ನ ಮೇಲೆ ಇರಲಿ ,
ಪ್ರೀತಿಯ
ಅಭಿನವ

78 comments:

SANTOSH MS said...

Guru Sir,

chiranjeevi abhinava sakala aayushya, aarogyadinda nooru kaala channaagi badukali. beautiful write up.

uma bhat said...

hmm chalo baridyalo :)
maguvina maatugalu.. ninna saalugalu !!
matching ha :p
but nija - idu yeradane janmave sari ondu hengasige :)
may ur baby have all the pleasures it deserves :)

muraleedhara Upadhya Hiriadka said...

Abhinavanige shubhashayagalu
muraleedhara upadhya
mupadhyahiri.blogspot.com

ರಾಜೇಶ್ ನಾಯ್ಕ said...

ಮುದ್ದು ಮುದ್ದು ಅಭಿನವ.
ದೃಷ್ಟಿ ತೆಗೆಯತ್ತಾ ಇರಿ!

ಜಲನಯನ said...

ವಾವ್ ಗುರು ವಾಟ್ ಎನ್ ಆಂಗಲ್ ಏನು ದಿಶೆ? ಅಂದಹಾಗೆ ಎಂತಹ ಕಾಕತಾಳೀಯ....!!!! ಗುರು (ಗುರೂಸ್ ವರ್ಲ್ಡ್) ಮತ್ತು ಗುರು (ಸಾಗರದಾಚೆಯ ಇಂಚರ)ಎರಡೂ ಬ್ಲಾಗಿನಲ್ಲಿ ಮಗುವಿನ ಒಳಮನ ನಮ್ಮೆಲ್ಲರಿಗೆ ತೆರೆದುಕೊಂಡಿತು...
ಅಭಿನವ್...ಶುಭ ಶುಭ ಶುಭವಾಗಲಿ

shivu.k said...

ಗುರು ಸರ್,
ನಿಮ್ಮ ಅಭಿನವನ ಕಥೆ ಕೇಳಿ ತುಂಬಾ ಖುಷಿಯಾಯ್ತು..ಆತನಿಗೆ ನಮ್ಮ ಲೋಕಕ್ಕೆ ಸ್ವಾಗತ. ಅವನು ಈ ಭುವಿಯಲ್ಲಿ ದೊಡ್ದ ಸಾಧನೆ ಮಾಡಲಿ..
ಅಭಿನವ್ ನ ಕಾಲು ಫೋಟೊ ತೆಗೆದಿದ್ದೀರಲ್ಲ...ಅದನ್ನು ಜೋಪಾನವಾಗಿಟ್ಟುಕೊಳ್ಳಿ. ನನಗೆ ತಿಳಿದಂತೆ ಅದೊಂದು ಅದ್ಬುತ ಫೋಟೊ. ಹತ್ತು ವರ್ಷದ ವರೆಗೂ ಅದನ್ನು ಯಾವ ಕಾರಣಕ್ಕೂ ಅವನಿಗೆ ತೋರಿಸಬಾರದು! ಹತ್ತು ವರ್ಷವಾಗಿ ಅವನು "ಇದು ಅಂಗಾಲು" ಅಂತ ನಿಮ್ಮಿಂದ ಪಾಠ ಹೇಳಿಸಿಕೊಳ್ಳುವಾಗ ಅಥವ ಅವನೇ ಹೇಳುವಾಗ ಈ ಫೋಟೊ ತೋರಿಸಿ,...ಆಗ ಅವನ ಮುಖದಲ್ಲಿರಳುವ ಅಚ್ಚರಿಯನ್ನು ಫೋಟೊ ತೆಗೆಯಿರಿ...ಇಂಥವೆಲ್ಲಾ ಛಾಯಾಗ್ರಾಹಕರಿಗೆ ಮಾತ್ರ ಸಾಧ್ಯ ಅಲ್ವಾ? ಇದು ನಮ್ಮಂತವರಿಗೆ god gift...encash ಮಾಡಿಕೊಳ್ಳಿ..

ಸುಬ್ರಮಣ್ಯ said...

ಕಂಗ್ರಾಟ್ಸ್

Pradeep Rao said...

Guru sir... Congrats! Abhinav is really cute! Very nice article! will be waiting to follow Abhinav Uvacha blog! LOLz :))

Ambika said...

Nice write up :)
Congrats Guru n Geetha :)
Abhinav ge olleyadaagali :)

Dr.D.T.Krishna Murthy. said...

ಗುರು ಸರ್;ನಿಮ್ಮ ಸಂತಸವನ್ನು 'ಅಭಿನವ್' ನ ಮೂಲಕ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು .ನಾನು ತಂದೆಯಾದಾಗಿನ ದಿನಗಳು ನೆನಪಾದವು.ಪಾಪುವಿಗೆ ಆ ದೇವರು ಆಯುರಾರೋಗ್ಯವನ್ನೂ ಸಕಲ ಸನ್ಮಂಗಳವನ್ನೂ ಉಂಟು ಮಾಡಲಿ.ನಮಸ್ಕಾರ.

ತೇಜಸ್ವಿನಿ ಹೆಗಡೆ said...

Muddu PutaNi Abhinav is very Cute :) Bhavapoorna baraha Guru :)

ದಿನಕರ ಮೊಗೇರ said...

muddaaiddaane muddu abhinav......

chennaagide ee riti barediddu...

ವನಿತಾ / Vanitha said...

cute :) bless you Abhinav.

ಮನಸು said...

ಗುರು, ಮಗುವಿನ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ... ಖುಷಿ ಆಯ್ತು ಓದಿ.. ಶುಭವಾಗಲಿ

Jyoti Hebbar said...

esht chenda idde maraya.. ninna kaalu kooda esht muddu... chenda bareede abhinav...papa ammange kaata kodada raashiya...appang bekar kodu..

namitha said...

tumba channagide..i liked it very much..god bless to ya son..:)

ಚಿತ್ರಾ said...

ಅಭಿನವ್ ,
ಮೊದಲನೆಯದಾಗಿ ನನ್ನ ತುಂಬು ಪ್ರೀತಿಯ ಹಾರೈಕೆಗಳು ನಿಂಗೆ ! ನಿನ್ನ ಮುದ್ದು ಮುದ್ದಾದ ಫೋಟೋಗಳನ್ನು ನೋಡಿ ಪ್ರೀತಿ ಉಕ್ಕಿ ಬಂತು . ಹತ್ತಿರವಿದ್ದರೆ ಒಮ್ಮೆ ಎತ್ತಿ ಎದೆಗವಚಿಕೊಂಡು ಕೆನ್ನೆಯಮೇಲೊಂದು ಹೂಮುತ್ತಿಡುತ್ತಿದ್ದೆ ! ಇರಲಿ , ಬಾ ಒಮ್ಮೆ ನಮ್ಮನೆಗೆ, ಕೂತು ಕಥೆ ಹೇಳೋಣ .
ಅಂತೂ ಅಪ್ಪನ ಹಾದಿಯನ್ನೇ ಹಿಡಿಯುತ್ತಿದ್ದೀಯ ! ಹುಟ್ಟಿ ತಿಂಗಳೊಳಗೆ ಬರೆಯುತ್ತಿದ್ದಿಯಾ! ನಿನ್ನ ಕಥೆಯನ್ನು ಓದುತ್ತಿದ್ದಂತೆ , ನಿನ್ನ ಸಿರಿಯಕ್ಕನೂ ಹೀಗೇ ಹೇಳುತ್ತಿದುದು ನೆನಪಾಗಿ ಕಣ್ಣು ತುಂಬಿ ಬಂತು . ಹೀಗೇ ಬರೆಯುತ್ತಿರು . ನಿನ್ನ ಬೆಳವಣಿಗೆಯ ಪ್ರತಿ ಹೆಜ್ಜೆಯನ್ನೂ ನಮಗೆ ಹೇಳ್ತಾ ಇರು .

V.R.BHAT said...

Congratulations once again & best wishes to Chi| Abhinava.

ಭಾಶೇ said...

Congratulations!

and ALL THE BEST! :)

Chaithrika said...

ಅಭಿನವನಿಗೆ ಸ್ವಾಗತ... ಮತ್ತು ಅವನ ಅಪ್ಪ-ಅಮ್ಮನಿಗೆ ಶುಭಾಶಯ...
ಹುಟ್ಟಿದ ತಕ್ಷಣ ಬ್ಲಾಗು ತೆರೆದನಲ್ಲಾ? ಅತಿ ಕಿರಿಯ ಬ್ಲಾಗರ್ ಆಗಿ ಗಿನ್ನೆಸ್ ದಾಖಲೆ ಮಾಡುವ ಮನಸೇನು?

Shri Prakash said...

wow guru..
it is so beautiful... never knew that u/ur son writes so well..fantastic..

now on wards i will read your blogs regularly

prakash

ಚುಕ್ಕಿಚಿತ್ತಾರ said...

ಪ್ರೀತಿಯ ಹಾರೈಕೆಗಳು... ಶುಭವಾಗಲಿ

ಸಾಗರದಾಚೆಯ ಇಂಚರ said...

Santhosh, nimma ashirvaada khandita avanige siguttade,
preeti irali

ಸಾಗರದಾಚೆಯ ಇಂಚರ said...

Uma,

baduke haage, yaara huttu, adeshto janarige marujanma

thanks for the comments

ಸಾಗರದಾಚೆಯ ಇಂಚರ said...

Muraleedhara sir

thanks for the comments

bartaa iri

ಸಾಗರದಾಚೆಯ ಇಂಚರ said...

ರಾಜೇಶ್ ಸರ್

ಮುದ್ದು ಅಭಿನವನಿಗೆ ನಿಮ್ಮ ಆಶೀರ್ವಾದ ಸದಾ ಸಿಗಲಿ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಅಜಾದ್ ಸರ್,

ಇನ್ನೊಬ್ಬ ಗುರುವಿಗೂ ಅಭಿನಂದನೆಗಳು

ಇದೊಂದು ಕಾಕತಾಳೀಯವೇ ಸರಿ

ನಿಮ್ಮ ಆಶಿರ್ವಾದ ಸದಾ ಸಿಗುತ್ತಿರಲಿ

ಬರುತ್ತಿರಿ

ಸಾಗರದಾಚೆಯ ಇಂಚರ said...

ಶಿವೂ ಸರ್

ನಿಮ್ಮ ಮಾತು ನಿಜ,

೧೦ ವರ್ಷದ ನಂತರ ಅವನ ಪಾದ ಅವನೇ ನೋಡಿದಾಗ ನಿಜಕ್ಕೂ ಫೋಟೋ ತೆಗೆಯುವ ಆಸೆ

ಆ ಮುದ್ದು ಕಂದನ ಮುಖದ ಭಾವನೆಗಳ ಹಿಡಿಯುವ ತವಕ

ನಿಮ್ಮ ಪ್ರೀತಿ ಹೀಗೆಯೇ ಇರಲಿ

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಸರ್

ಧನ್ಯವಾದಗಳು ಬರುತ್ತಿರಿ

ಸಾಗರದಾಚೆಯ ಇಂಚರ said...

ಪ್ರದೀಪ್ ಸರ್

ಪ್ರೀತಿ ಹೀಗೆಯೇ ಇರಲಿ

ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಕವಿತಾ,

ಅಭಿನವನಿಗೆ ಆಶಿರ್ವಾದ ಸದಾ ಇರಲಿ

ಬರುತ್ತಿರಿ

ಸಾಗರದಾಚೆಯ ಇಂಚರ said...

ಡಾ ಕೃಷ್ಣಮೂರ್ತಿ ಸರ್,

ಮಗುವಿನ ಹುಟ್ಟು ಅದೆಷ್ಟು ಸಂತಸ ನೀಡುತ್ತದೆ ಎಂಬುದು ತಿಳಿಯಿತು,

ನಿಮ್ಮ ಆಶಿರ್ವಾದ ಸದಾ ಇರಲಿ

ಬರುತ್ತಿರಿ

ಸಾಗರದಾಚೆಯ ಇಂಚರ said...

ತೇಜಸ್ವಿನಿ,

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಅಭಿನವನಿಗೆ ಆಶಿರ್ವಾದ ನೀಡುತ್ತಿರಿ

ಅವನ ಬಗ್ಗೆ ಇನ್ನು ಹೆಚ್ಚೆಚ್ಚು ಬರೆಯುತ್ತೇನೆ

ಮೆಚ್ಚಿದ್ದಕ್ಕೆ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

ದಿನಕರ್ ಸರ್

ಒಂದು ಹೊಸ ಪ್ರಯೋಗ ಅಷ್ಟೇ,

ನಾನೇ ಅವನ ಬಗ್ಗೆ ಬರೆಯುವುದಕ್ಕಿಂತ ಅವನೇ ಬರೆದಂತೆ ಕಲ್ಪಿಸಿಕೊಂಡು ಬರೆದರೆ ಹೇಗೆ ಎನಿಸಿತು

ಮೆಚ್ಚಿದ್ದಕ್ಕೆ ಥ್ಯಾಂಕ್ಸ್

ಬರುತ್ತಿರಿ

ಸಾಗರದಾಚೆಯ ಇಂಚರ said...

ವನಿತಾ,

ಅಭಿನವ್ ನಿಗೆ ಪ್ರೀತಿ ಆಶಿರ್ವಾದ ಸಿಗುತ್ತಿರಲಿ

ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಮನಸು

ಇಷ್ಟವಾಗಿದ್ದಕ್ಕೆ ತುಂಬಾ ಸಂತೋಷ

ಅಭಿನವನಿಗೆ ನಿಮ್ಮೆಲ್ಲರ ಹಾರೈಕೆ ಬೇಕು

ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಜ್ಯೋತಿ,

ಅಭಿನವ್ ನ ಬಗೆಗಿನ ನಿನ್ನ ಪ್ರೀತಿ ಗೆ ಧನ್ಯವಾದಗಳು

ಪ್ರೀತಿ ಹಾರೈಕೆ, ಆಶಿರ್ವಾದ ಸದಾ ಇರಲಿ

ಸಾಗರದಾಚೆಯ ಇಂಚರ said...

ನಮಿತಾ,
\ಥ್ಯಾಂಕ್ಸ್

ನಿಮ್ಮೆಲ್ಲರ ಆಶಿರ್ವಾದ ಅವನಿಗೆ ಬೇಕಿದೆ

ಸಾಗರದಾಚೆಯ ಇಂಚರ said...

ಚಿತ್ರಕ್ಕಾ,

ಸುಂದರ ಮಾತುಗಳಿಗೆ ಮೊದಲಿಗೆ ವಂದನೆಗಳು

ಮಗುವಿನ ಹುಟ್ಟು ತಾಯಿಗೆ ಮರುಜನ್ಮವಂತೆ

ಬಹುಶ ಎಲ್ಲ ನೋವುಗಳನ್ನು ಮರೆತು ಮಗುವಿನ ನಗುವಿನಲ್ಲಿ ನೋವ ಮರೆಯುವ ಮಹಾನ ಕ್ಷಣ ಅದು

ಜಗತ್ತಿನ ಕೋಟಿ ಕೋಟಿ ಸಂಪತ್ತನ್ನು ತಂದು ನಿಲ್ಲಿಸಿದರೂ ಆ ಕ್ಷಣದ ಸಂತೋಷ ಬೇರೆಲ್ಲೂ ಸಿಗಲಾರದು

ತಾಯಿ ಕ್ರತಾರ್ಥಳಾಗುವುದು ಅಲ್ಲಿಯೇ ಅಲ್ಲವೇ?

ಪ್ರೀತಿ ಹೀಗೆಯೇ ಇರಲಿ

ಸಾಗರದಾಚೆಯ ಇಂಚರ said...

V R Bhat Sir

thanks for your nice words

keep coming

ಸಾಗರದಾಚೆಯ ಇಂಚರ said...

ಭಾಶೇ

thanks for the comments

ಸಾಗರದಾಚೆಯ ಇಂಚರ said...

ಚೈತ್ರಿಕ


ದಾಖಲೆಯೇ ಇರಬಹುದು ಹ ಹ ಹ

ನಿಮ್ಮ ಪ್ರೀತಿ ಆಶಿರ್ವಾದ ಸದಾ ಇರಲಿ

ಬರುತ್ತಿರಿ

ಸಾಗರದಾಚೆಯ ಇಂಚರ said...

Dear Shriprakash,

am really happy that u liked it,

keep visiting and give your valuable feedback

thanks for the words

ಸಾಗರದಾಚೆಯ ಇಂಚರ said...

ಚುಕ್ಕಿ ಚಿತ್ತಾರ

ನಿಮ್ಮ ಹಾರೈಕೆ ಹೀಗೆಯೇ ಇರಲಿ

ಸದಾ ಬರುತ್ತಿರಿ

ಶಾಂತಲಾ ಭಂಡಿ (ಸನ್ನಿಧಿ) said...

ಗುರು...
ಚೆಂದ ಬರಹ. ಮುದ್ದಾದ ಫೋಟೋಗಳು. ಅಭಿನವನಿಗೆ ಮತ್ತವನ ಅಪ್ಪಾಮ್ಮರಿಗೆ ಶುಭಹಾರೈಕೆಗಳು :-)

ಪ್ರೀತಿಯಿಂದ,
ಶಾಂತಲಾ

krutthivaasapriya said...

ಅಭಿನಂದನೆಗಳು ಗುರು ಅವರೇ , ಪುಟ್ಟ ಅಭಿಗೆ ಶುಭವಾಗಲಿ ಅಂತ ಹಾರೈಸುತ್ತೀನಿ

Ittigecement said...

ಗುರುಮೂರ್ತಿ..

ಬಹಳ ಚಂದದ ಬರಹ...

ಕನ್ನಡ ಕಡಿಮೆ ಓದುವ "ಆಶಾ" ಓದಿ ಬಹಳ ಖುಷಿ ಪಟ್ಟಿದ್ದಾಳೆ.. ನಾನೂ ಸಹ..

ಮಗುವೊಂದೇ ಜನ್ಮ ತಳೆಯೋಲ್ಲ...
ಜೊತೆಗೆ ಅಪ್ಪ/ಅಮ್ಮನೂ ಹುಟ್ಟುತ್ತಾರೆ ಮಗುವಿನ ಜೊತೆಗೆ..

ಫೋಟೋಗಳು ಬಹಳ ಚೆನ್ನಾಗಿದೆ..

ಅಮ್ಮನ ಮುಖದ ಪಾಪು...

ನಮ್ಮೆಲ್ಲರ ಪ್ರೀತಿ.. ಶುಭಾಶಯಗಳು...

Ittigecement said...

ಗುರುಮೂರ್ತಿ..

ಬಹಳ ಚಂದದ ಬರಹ...

ಕನ್ನಡ ಕಡಿಮೆ ಓದುವ "ಆಶಾ" ಓದಿ ಬಹಳ ಖುಷಿ ಪಟ್ಟಿದ್ದಾಳೆ.. ನಾನೂ ಸಹ..

ಮಗುವೊಂದೇ ಜನ್ಮ ತಳೆಯೋಲ್ಲ...
ಜೊತೆಗೆ ಅಪ್ಪ/ಅಮ್ಮನೂ ಹುಟ್ಟುತ್ತಾರೆ ಮಗುವಿನ ಜೊತೆಗೆ..

ಫೋಟೋಗಳು ಬಹಳ ಚೆನ್ನಾಗಿದೆ..

ಅಮ್ಮನ ಮುಖದ ಪಾಪು...

ನಮ್ಮೆಲ್ಲರ ಪ್ರೀತಿ.. ಶುಭಾಶಯಗಳು...

ಸಾಗರದಾಚೆಯ ಇಂಚರ said...

ಶಾಂತಲ,

ಪ್ರೀತಿಯ ಹಾರೈಕೆಗೆ ವಂದನೆಗಳು

ಅಭಿನವ್ ಬೆಳೆಯುತ್ತಿದ್ದಾನೆ,

ಒಮ್ಮೆ ನೋಡಲು ಬನ್ನಿ :)

ಸಾಗರದಾಚೆಯ ಇಂಚರ said...

krutthivaasapriya

ನಿಮ್ಮ ಪ್ರೀತಿಪೂರ್ವಕ ಹಾರೈಕೆ ಮಗುವಿಗೆ ಮುಟ್ಟುತ್ತದೆ

ಬರುತ್ತಿರಿ

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,

ಒಂದು ಮಗುವಿನ ಜನನ, ಹೆತ್ತವರಿಗೆ ಮರುಜನ್ಮ, ಆ ಮಾತು ಬಹಳ ಸತ್ಯ ಅಲ್ಲವೇ

ಆ ಮಗುವಿನಲ್ಲಿ ನಮ್ಮ ಬಾಲ್ಯ ಕಾಣುತ್ತೇವೆ,

ಆ ಮಗುವಿನಲ್ಲಿ ನಮ್ಮ ನೋವು ಮರೆಯುತ್ತೇವೆ

ಆ ಮಗುವಿನಲ್ಲಿ ಎಲ್ಲ ಧ್ವೇಷ ಮರೆಯುತ್ತೇವೆ

ಒಂದು ಮಗು ಬಾಳಿನ ಆಶಾಕಿರಣ

ನಿಮ್ಮ ಪ್ರೀತಿಯ ಹಾರೈಕೆ ಅಷಿರ್ವಾದಕ್ಕೆ ಧನ್ಯವಾದಗಳು

ಆಶಕ್ಕ ಓದಿದ್ದಕ್ಕೆ ಮತ್ತೂ ಸಂತೋಷ

ಹೀಗೆಯೇ ಬರುತ್ತಿರಿ

createam said...

Congrtulations Guru!

Kanthi said...

Very cute..

ಸಿಂಧು sindhu said...

ಗುರು,

ಅಭಿನವ ಹೆಸ್ರು ತುಂಬಾ ಚೆನ್ನಾಗಿದೆ. ಸತ್ಯಕಾಮರ ಒಂದು ಕಾದಂಬರಿ ಇದೆ - ಅಭಿನವ.
ಹೊಸ ಪಾಪುವಿಗೆ ಅದ್ರ ಗುಲಾಬಿ ಅಸ್ತಿತ್ವಕ್ಕೆ, ಮುದ್ದು ಪದಾರವಿಂದಕ್ಕೆ ಶರಣು.
ಅಪ್ಪ ಅಮ್ಮನಿಗೆ ಶುಭಾಶಯ.

ಪ್ರೀತಿಯಿಂದ,
ಸಿಂಧು

ಸೀತಾರಾಮ. ಕೆ. / SITARAM.K said...

ಚೆನ್ನಾಗಿದೆ ಅಭಿನವನ ಉವಾಚ. ಜೊತೆಗೆ ಮುದ್ದಾಗಿದ್ದಾನೆ. ಭಾರತದಲ್ಲೇ ಹುತ್ತಬೇಕೆಂದು ಸ್ವೀಡನ್ ನಿಂದ ಬಂದ ಅವನ ಬಗ್ಗೆ ಅಭಿಮಾನ ಇದೆ.

ಸಾಗರದಾಚೆಯ ಇಂಚರ said...

createam

thanks for your comments

keep coming

ಸಾಗರದಾಚೆಯ ಇಂಚರ said...

Kanthi,
thank you :)

ಸಾಗರದಾಚೆಯ ಇಂಚರ said...

ಸಿಂಧು

ನಿಮ್ಮ ಸುಂದರ ಮಾತುಗಳಿಗೆ ವಂದನೆಗಳು

ಆಶಿರ್ವಾದ ಅವನಿಗೆ ಹೀಗೆಯೇ ಸಿಗುತ್ತಿರಲಿ

ಬರುತ್ತಿರಿ

ಸಾಗರದಾಚೆಯ ಇಂಚರ said...

ಸೀತಾರಾಂ ಸರ್

ತುಂಬಾ ಧನ್ಯವಾದಗಳು

ಹೇಗಿದ್ದೀರಾ

ಪ್ರೀತಿ ಹೀಗೇನೆ ಇರಲಿ

ಗುರು

Nagendra hegde said...

bhava, raaashi cholo bard'de, abhige odal bandkule modlu idre torsu.. full kush agta :)

Deep said...

ಅಭಿನವ ಉವಾಚ ಹೀಗೆಯೇ ಬರ್ತಾ ಇರಲಿ. ಅಭಿನಂದನೆಗಳು ..

ಅಭಿನವ .. ಮುದ್ದಾದ ಹೆಸರು.. ಮಗುವಿಗೆ ಹಾರೈಕೆಗಳು ...

ಅಭಿನವ ದೊಡ್ದೊನದ್ಮೇಲೆ ಇವೆಲ್ಲ ನೋಡಿ ಹೆಮ್ಮೆ ಪಡ್ತಾನೆ... ಅಲ್ವ?

ಓ ಮನಸೇ, ನೀನೇಕೆ ಹೀಗೆ...? said...

ಪುಟ್ಟ ಅಭಿನವ್ ಗೆ ಬ್ಲಾಗ್ ಪ್ರಪಂಚಕ್ಕೆ ಸ್ವಾಗತ..:))
ತುಂಬಾ ಮುದ್ದಾದ ಫೋಟೋಗಳು. ಸುಂದರ ಬರಹ.

KalavathiMadhusudan said...

guruvina guru "adhinav"ge abhinandanegalu.abhinav haage lekhanavu sundaravaagide.

ಸಾಗರದಾಚೆಯ ಇಂಚರ said...

ನಾಗೇಂದ್ರ
ಅವ ದೊಡ್ಡ ಆದ ಮೇಲೆ ಅವನಿಗೆ ಇದನೆಲ್ಲ ತೋರಿಸಿದಾಗ ಮುಖದ ಮೇಲೆ ಬರುವ
ಫೀಲಿಂಗ್ಸ್ ನ ಫೋಟೋ ತೆಗೆಯವು

ಥ್ಯಾಂಕ್ಸ್ ಫಾರ್ ಕಾಮೆಂಟ್ಸ್
ಬರ್ತಾ ಇರು

ಸಾಗರದಾಚೆಯ ಇಂಚರ said...

Deep

ನಿಜ, ಅವನ ಹೆಮ್ಮೆಯಲ್ಲಿ ನಮ್ಮ ಉಸಿರು ಇದೆ

ಆ ಪುಟ್ಟು ಮಗನ ಬೆಳವಣಿಗೆ ತಂದೆ ತಾಯಿಗಳಿಗೆ ನೂರು ಗಜ ಸಂತಸ ದಂತೆ

ಆಲ್ವಾ

ಸಾಗರದಾಚೆಯ ಇಂಚರ said...

ಓ ಮನಸೇ, ನೀನೇಕೆ ಹೀಗೆ...?

ಧನ್ಯವಾದಗಳು

ಅಶುರ್ವಾದ, ಪ್ರೀತಿ ಹಾರೈಕೆ ಸದಾ ಇರಲಿ

ಸಾಗರದಾಚೆಯ ಇಂಚರ said...

ಕಲರವ

ಅವನ ಗುರು ನಾನೂ, ನನ್ನ ಗುರು ಅವನೋ,

ಸ್ವಲ್ಪ ವರ್ಷ ಕಾಯಬೇಕು :)

ಬರ್ತಾ ಇರಿ

Mohan Hegade said...

abhinava uvacha........ sundara hagu aste artavattada baraha. magu huttida sambramavannu nivu e barahada mukakha heliddu super. enthaha janme yallarallu eralla.
abhinavange olledagli, novallu sukha anubhavisuva ammanigu, tamagu shubhasayagalu........
Sundarana Chalo photogalu....

Barla,

Mohan Hegade

ಸಾಗರದಾಚೆಯ ಇಂಚರ said...

Priya Mohan,

ninna preetiya maatugalige tumba thanks

neenu ittiruva preetige naa chira runi

paapuvige ninna ashirvaada sadaa irali

sadaa baruttiru

ಗಿರೀಶ್.ಎಸ್ said...

Guru sir,
heartly congrates !!!
Photos are good....Dear Abhinav,enjoy the childhood...

ಮನದಾಳದಿಂದ............ said...

ಗುರು ಸರ್,
ಅಭಿನಂದನೆಗಳು...........
ಅಭಿಗೆ ಶುಭವಾಗಲಿ.
ಅಭಿನವ್ ನ ಮುದ್ದಾದ ಫೋಟೋಗಳು ಸೂಪರ್.

ಸಾಗರದಾಚೆಯ ಇಂಚರ said...

Giressh Sir,

thanks for the lovely words,

keep visiting

ಸಾಗರದಾಚೆಯ ಇಂಚರ said...

Manadaaladinda,

thank you

keep coming

nsru said...

ಮುದ್ದು ಪುಟಾಣಿ 'ಅಭಿನವ',
ತುಂಬಾ ಚೆನ್ನಾಗಿ ಬರೆದಿದ್ದೀಯ..ನಿಮ್ಮ ತಂದೆಯಂತೆ ನೀನೂ ದೇವಿ ಸರಸ್ವತಿಯ ವರಪ್ರಸಾದ..
ಚಿನ್ನು, ನಾನು ನಿನ್ನ ಅಭಿಮಾನಿ ಆಗಿದ್ದೇನೆ ಕಣೋ ..ಮೊದಲ ನೋಟದಲ್ಲೇ ನೀನು ಮನ್ನಸ್ಸೂರೆಗೊಂಡೆ!
ಈಗ ಅಮ್ಮನ ತೋಳಲ್ಲಿ ಕೇಕೆಹಾಕುತ್ತ ಕುಣಿದಾಡು, ನಲಿದಾಡು :) ನಿನ್ನ ಭವಿಷ್ಯ ಉಜ್ವಲವಾಗಲಿ!

ಗುರು ಸರ್,
ಮೊದಲಿಗೆ ಅಭಿನಂದನೆಗಳು!! 'ಅಭಿನವ' ಒಳ್ಳೆಯ ಹೆಸರು..
ವಿಭಿನ್ನ ರೀತಿಯ ಪರಿಚಯ....ತುಂಬ ಖುಷಿಯಾಯ್ತು ಓದಿ :)

ಸಾಗರದಾಚೆಯ ಇಂಚರ said...

ನಿಮ್ಮ ಪ್ರೀತಿಯ ಮಾತುಗಳಿಗೆ ವಂದನೆಗಳು

ಖಂಡಿತ ಅವ ದೊಡ್ಡವನಾದ ಮೇಲೆ ಅವನಿಗೆ ಇದನ್ನು ತೋರಿಸುತ್ತೇನೆ

ಸದಾಶಿರ್ವಾದ ಪ್ರೀತಿ ಅವನಿಗೆ ಸಿಗಲಿ

ಬರುತ್ತಿರಿ

Sinchana said...

maguvanna nodi neevu maguvadralva..! he is very cute.. avanu doddavanadmele tndeyaadagina nimma bhaavagalannu bareyo thara aagbahudu.. I pray for Abhi..
and i realy felt good.. Nijaa heltini Hudugaru ishtu bhavukarirtaara athava nimma mnasina maatanna nimmavalu baritaara anniside nanage..:)
If it is not u r a nice person by heart..

ಸಾಗರದಾಚೆಯ ಇಂಚರ said...

Sinchana,

idondu vinootana prayoga, naavu maguvina manadolage hokku avana bhaavanegala kedaki noduva sambhrama ideyalla, adu nijakkoo adbhuta.

ilde idre namge magu andre gottagodu kevala alu matte nidde, ashtashtu nagu ashte. aadare aa aluvina hindina manassina bhaavangalannu ariyodakke naavu maguvaagbeku alva.
nimma preetiya maatugalige abhaari.
sadaa baruttiri

Guruprasad said...

ಹೋ,,, ಅಭಿನಂದನೆಗಳು....ಗುರು . ಏನ್ ಸರ್,, ನನಗೆ ಸೈಡ್ ಹೊಡಿತಾ ಇದ್ದೀರಾ..... ಇರಲಿ ಇರಲಿ...... !!
ಏನೋ ಒಂದು ತರ ಖುಷಿ ಅಲ್ವ,, ನಮ್ಮ ಮಕ್ಕಳ ಬಗ್ಗೆ ಬರೆದುಕೊಳ್ಳ ಬೇಕಾದರೆ..... ಇದನೆಲ್ಲ ದೊಡ್ಡವರಾಗಿ ಅವರು ನೋಡಿ ಕೊಂಡಾಗ ಎಷ್ಟು ಚೆನ್ನಾಗಿ ಇರುತ್ತೆ ಅಲ್ವ.....
ನಿಮ್ಮ ಮಗನಿಗೆ ಆಗಲೇ ಹೆಸರನ್ನು ಇತ್ತಿದ್ದಿರ... ಆದರೆ ನನ್ನ ಮಗ ನಿಂಗೆ ಇನ್ನು ಹುಡುಕ್ತಾ ಇದೇನೇ...... ಬರಲಿ ಬರಲಿ,, ಇನ್ನಷ್ಟು,,, ಅಭಿನವನ ಉವಾಚ.....