Wednesday, August 3, 2011

ಚಳಿಯ ನಾಡಿನ ಬೆವರಿನ ನೋಟ ....Part 2

ಬದುಕಿಗೆ ವಿದೇಶ ಬೇಕಿರಲಿಲ್ಲ, ಅದು ಅನಿವಾರ್ಯವೂ ಆಗಿರಲಿಲ್ಲ. ಆದರೆ ಬದುಕಿನ ಸಾರ್ಥಕತೆಗೆ ಹೊರದೇಶದ ಕೆಲಸದ ಅನುಭವ ಬೇಕಿತ್ತು. ಆ ತುಡಿತವೇ ವಿದೇಶಕ್ಕೆ ಹೋಗಲು ಪೂರಕ ಹಾಗೂ ಪ್ರೇರಕ. ಹಾಗೆಂದು ವಿದೇಶದಲ್ಲಿ ಇದ್ದ ಮಾತ್ರಕ್ಕೆ ದೇಶ ಪ್ರೇಮ ಕಡಿಮೆ ಆಗದು. ಅದು ನಿರಂತರ ಶಾಶ್ವತ. ವಿದೇಶದಲ್ಲಿ ಕೆಲಸ ಮಾಡುವುದೇ ತಪ್ಪು ಎಂದಾದರೆ, ದೇಶದಲ್ಲೇ ಇದ್ದು ''ವಿದೇಶಿ ಕಂಪನಿಗಳಿಗೆ'' ಕೆಲಸ ಮಾಡುವುದು ಇನ್ನು ತಪ್ಪಲ್ಲವೇ? ತಪ್ಪನ್ನು ಹುಡುಕುತ್ತ ಹೋದರೆ ಅದಕ್ಕೆ ಕೊನೆಯಿಲ್ಲ. ಆದರೆ ಅದು ಎಷ್ಟರ ಮಟ್ಟಿಗೆ ಅವಶ್ಯಕ ಎನ್ನುವುದನ್ನು ನಾವೇ ನಿರ್ಧರಿಸಿಕೊಳ್ಳಬೇಕು. ಮೊದ ಮೊದಲು ವಿದೇಶಕ್ಕೆ ಹೋದಾಗ ಅಲ್ಲಿನ ಪರಿಸರ, ನಮ್ಮವರ ಪ್ರೀತಿ ಸ್ನೇಹದ ಕೊರತೆ ಕಾಡುವುದು ಬಹಳ ಸಹಜ. ಆದರೆ ಕ್ರಮೇಣ ಅಲ್ಲಿನ ಪರಿಸರಕ್ಕೆ ಬದುಕು ಹೊಂದಿಕೊಳ್ಳುವ ಅನಿವಾರ್ಯತೆ ಎದುರಿಸುತ್ತದೆ, ಆ ಅನಿವಾರ್ಯತೆ ಮುಂದೆ ಅವಶ್ಯಕತೆ ಎನಿಸುತ್ತದೆ. ಆ ಅವಶ್ಯಕತೆಯ ಮೇಲೆ ನಮ್ಮದೇ ವ್ಯಾಕ್ಯಾನ ಬರೆದು ನಮ್ಮ ದೇಶಕ್ಕೆ ಹೋಗಲು ಸಾದ್ಯವೇ ಇಲ್ಲದ ಸನ್ನಿವೇಶ ಸ್ರಷ್ಟಿಯಾಗುತ್ತದೆ. ಇದೆಲ್ಲವೂ ಮನಸ್ಸಿನ ಕೆಲವು ಕ್ಷಣ ಗಳು ಅಷ್ಟೇ. 

''ತೆರೆದಿಡು ಮನವನ್ನು, ಅರೆಕ್ಷಣ ಚಿಂತಿಸುವ  ಮುನ್ನ
ಹರಿಯಬಿಡು ಕ್ಷಣವನ್ನ, ಬಾಚಿಕೋ ನೀ ಆಹ್ವಾನ''

ಬದುಕಿಗೆ ಅವಕಾಶಗಳು ಸಿಗುವುದು ಬಹಳ ಕಡಿಮೆ. ''ಎಲ್ಲ ಅವಕಾಶಗಳು ನಿಮ್ಮ ಮನೆಯ ಬಾಗಿಲಿಗೆ ಬಂದು, ಸ್ವೀಕರಿಸು ನನ್ನ, ಸ್ವೀಕರಿಸು ನನ್ನ ಎಂದು ಗೋಗರೆಯುವುದೂ ಇಲ್ಲ'' ಹಾಗಾಗಿ ಸಿಕ್ಕಿದ ಅವಕಾಶವನ್ನು ಉಪಯೋಗಿಸಿಕೊಳ್ಳುವುದೇ ಬುದ್ದಿವಂತಿಕೆ. ನಾವು ಸದಾ ನಮ್ಮ ರಾಜಕೀಯದವರು ಏನು ಮಾಡಿದ್ದಾರೆ, ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎನ್ನುತ್ತಿದ್ದೆವೆಯೇ ಹೊರತು ನಾವು ಏನು ಮಾಡಿದ್ದೇವೆ ಎಂದು ಚಿಂತಿಸುವುದೇ ಇಲ್ಲ. ಕೆನಡಿಯವರ ಮಾತು ನೆನಪಾಗುತ್ತದೆ,

''Don't ask what country can do for you
Ask what you can do for your country''

ಹಾಗಾಗಿ ದೇಶ ಪ್ರೇಮ ಕೇವಲ ಅಕ್ಷರಗಳ ಮಾತಾಗದೆ ಅದು ಕಾರ್ಯರೂಪಕ್ಕೆ ಇಳಿಯಬೇಕಿದೆ. ನಮ್ಮ ದೇಶಕ್ಕೆ ನಾವು ಕೊಡುವ ಅಲ್ಪ ಕಾಣಿಕೆಯೂ ಬ್ರಹದಾಕಾರವಾಗಿ ಬೆಳೆದು ದೊಡ್ಡ ಪರ್ವತವೆ ಆಗುತ್ತದೆ. ಸುಧಾರಣೆ ನಿನ್ನಿಂದಲೇ ಆರಂಬವಾಗಲಿ ಎಂಬ ಕವಿವಾಣಿ ಎಂದಿಗೂ ಸತ್ಯ. ಇದೆಲ್ಲ ಅನುಭವಕ್ಕೆ ಬಂದಿದ್ದು 3 ವರ್ಷಗಳ ಹಿಂದೆ ಸ್ವೀಡನ್ ದೇಶಕ್ಕೆ ಬಂದಾಗ. 

ನನ್ನನ್ನು ಬಹಳಷ್ಟು ಚಿಂತನೆಗೆ ಹಚ್ಚಿದ ದೇಶ ಇದು. ಸ್ವೀಡನ್ ಎಂದರೆ ''IKEA'' ಎಂಬ ನಾನ್ನುಡಿಯಿದೆ. ಕಾರಣ ಸ್ವೀಡನ್ ದ ಭಾಗವೇ ಆದ  ''IKEA''  ಕಂಪನಿ ಯಲ್ಲಿ ಶಿಸ್ತು ಹಾಗೂ ಅಚ್ಚು ಕಟ್ಟುತನ ಎಲ್ಲೆಡೆ ನೋಡಲು ಸಿಗುತ್ತದೆ. ಪ್ರತಿಯೊಬ್ಬರ ಮನೆಯ ಎಲ್ಲ ವಸ್ತುಗಳು  ''IKEA''  ಕಂಪನಿಯಿಂದಲೇ ಬರುತ್ತದೆ. ಜನರ ಆಸೆಗೆ, ರುಚಿಗೆ ತಕ್ಕಂತೆ ಎಲ್ಲ ಸಾಮಾನುಗಳನ್ನು ಅವರು ತಯಾರಿಸುತ್ತಾರೆ. ಸದ್ಯದಲ್ಲಿಯೇ ನಮ್ಮ ದೇಶದ ಮುಂಬೈ ಗೆ  ''IKEA''  ಕಂಪನಿ ಬರುತ್ತದೆ ಎಂಬ ಸುದ್ದಿ ಇದೆ. ಸ್ವೀಡನ್ ಅಂದರೆ ನೆನಪಾಗುವುದು ''VOLVO'' ಕಾರು ಗಳು. ಅತ್ಯಂತ ಬೆಲೆಬಾಳುವ ಜನರ ಮೆಚ್ಚಿನ ಕಾರುಗಳು ಜಗತ್ಪ್ರಸಿದ್ದ. ಅಷ್ಟೇ ಯಾಕೆ ನಮ್ಮ ರಸ್ತೆಗಳಲ್ಲಿ ಸಂಚರಿಸುವ ಸುಖದ ಸುಪ್ಪತ್ತಿಗೆಯಂತೆ  ಇರುವ ''VOLVO'' ಬಸ್ ಗಳು ಈ ದೇಶದ ಉತ್ಪಾದನೆ. ದೊಡ್ಡ ದೊಡ್ಡ ಮಹಡಿಗಳ ನಿರ್ಮಾಣ ತಯಾರಿಕೆ, ರಸ್ತೆ ನಿರ್ಮಾಣ ತಯಾರಿಕೆ ಗಳಲ್ಲಿ ಉಪಯೋಗಿಸುವ ಬಹುತೇಕ ಬ್ರಹತ್ ಉಪಕರಣಗಳು ''VOLVO'' ಕಂಪನಿಯಿಂದಲೇ ತಯಾರಾದದ್ದು. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.



ಸ್ವೀಡನ್ ಎಂದರೆ ನೆನಪಾಗುವುದು ''SKF'' ಕಂಪನಿ. ನಟ್ಟು, ಬೋಲ್ಟ್ ಗಳ ತಯಾರಿಕೆಯಲ್ಲಿ ವಿಶ್ವದ ನಂಬರ್ ಒನ್ ಕಂಪನಿಯಾದ ಇದು ಜಗತ್ತಿನ ಎಲ್ಲ ದೇಶಗಳಲ್ಲಿ ತನ್ನ ಸೇವೆ ನೀಡುತ್ತಿದೆ. ನೋಡಿ, ಎಷ್ಟು ಸಣ್ಣ ದೇಶ, ಆದರೆ ಅವರ ಸಾಧನೆ ಜಗತ್ತಿನಾದ್ಯಂತ ವಿಸ್ತರಿಸಿದೆ. ''ಮನಸ್ಸಿದ್ದರೆ ಮಾರ್ಗ'' ಎನ್ನುವುದಕ್ಕೆ ಈ ದೇಶದ ಜನ ಜೀವಂತ ಉದಾಹರಣೆ. ಸರಿ, ಏನಪ್ಪಾ ಇವರ ಜನಸಂಖ್ಯೆ ಅಂತಿರಾ, ಅಬ್ಬಬಬ್ಬ ಅಂದ್ರೆ 9 ಮಿಲಿಯನ್ ನಷ್ಟು. ನೋಡಿದ್ರ, 9 ಮಿಲಿಯನ ಜನ ಸೇರಿ ಇಷ್ಟೊಂದು ಸಾಧನೆ ಮಾಡೋದಾದ್ರೆ 1 .3 ಬಿಲಿಯನ್ ಜನ ಏನೇನು ಮಾಡಬಹುದಿತ್ತು. ಆಲ್ವಾ?

ಏನೋ, ಬೇಕಾದಷ್ಟು ಹಣ ಇದೆ ಅವ್ರಿಗೆ, ಏನು ಬೇಕಾದರು ಮಾಡ್ತಾರೆ ಅಂತಿರಾ? ಕಷ್ಟನೆ ಇಲ್ಲ ಅವರಿಗೆ ಅಂದ್ಕೊಂಡ್ರ? ಇಲ್ಲ ಸ್ವಾಮೀ. ನಿಮ್ಮ ಊಹೆ ತಪ್ಪು. ವರ್ಷದ 6 ತಿಂಗಳು ವಿಪರೀತ ಚಳಿ. ಎಷ್ಟು ಅಂದ್ರೆ ಇಲ್ಲಿನ ಉಷ್ಣತೆ  - 25 ಡಿಗ್ರಿ ಹೋಗುತ್ತದೆ. ನಮಗೆ + 15 ಹೋದ್ರೆ ಸಿಕ್ಕಾಪಟ್ಟೆ ಚಳಿ ಅಂತಿವಿ, ಅದ್ರಲ್ಲಿ -25 ಅಂದ್ರೆ ಹೇಗಿರಬೇಡ. ಸದಾ ಹಿಮ ಬಿಳ್ತಾ ಇರತ್ತೆ, ಇದೆಲ್ಲ ಸಾಲದು ಅನ್ನೋ ಹಾಗೆ ವಿಪರೀತ ಅನ್ನೋ ಕತ್ತಲು. ದಿನದ 20 ಘಂಟೆ  ಕತ್ತಲು ಕತ್ತಲು ಎಷ್ಟು ಘೋರ ಅನ್ನೋದು ಇಲ್ಲಿ ಬಂದ ಮೇಲೆ ನಮಗೆ ತಿಳೀತು. ನೀವೇನಾದ್ರು ಬ್ರಮ್ಹಚಾರಿ ಆಗಿದ್ರೆ ನಿಮ್ಮ ಕಥೆ ಮುಗಿತು, ಸದಾ ಕತ್ತಲು, ಹೊರಗಡೆ ಹೋಗೋ ಹಾಗಿಲ್ಲ, ಮಾತಾಡೋಕೆ ಯಾರು ಸಿಗಲ್ಲ, ರಸ್ತೆ ಎಲ್ಲ ಖಾಲಿ ಖಾಲಿ, ಒಂಥರಾ ಸಮೂಹ ಸನ್ನಿ ಅಂತಾರಲ್ಲ, ಹಾಗೆ ಆಗತ್ತೆ ಎಲ್ಲಾರಿಗೂ. ತುಂಬಾನೇ Depression ಸ್ಟಾರ್ಟ್ ಆಗುತ್ತೆ.


ಅಂಥಹ ಕತ್ತಲನ್ನೇ ಗೆದ್ದು ಬಂದಿದ್ದಾರೆ ಅವರೆಲ್ಲ. ಅವರ ಇಂದಿನ ಶ್ರೀಮಂತಿಕೆ ಅವರು ಬೆವರು ಸುರಿಸಿ ಗಳಿಸಿದ್ದು. ಅವರಿಗೆ ನಮ್ಮ ದೇಶದ ಹಾಗೆ ಶ್ರೀಮಂತ ಪರಂಪರೆಯಿಲ್ಲ. ಒಂದು ಕಾಲದಲ್ಲಿ ಕಡು ಬಡವರೇ ಆಗಿದ್ದ ಅವರು ಸುಧಾರಣೆಯ ಟೊಂಕ ಕಟ್ಟಿದ ಕ್ಷಣದಿಂದ ಬದಲಾದರು. ಅಲ್ಲೀಗ  ಕೇವಲ ''ಸುಧಾರಣೆ, ಸುಧಾರಣೆ, ಸುಧಾರಣೆ''

ದಿನಕರ ದೇಸಾಯಿ ಯವರ ಮಾತೊಂದು ನೆನಪಾಗ್ತಾ ಇದೆ 

''ಮನುಕುಲದ ರಕ್ತಮಯ ಇತಿಹಾಸ ಕೂಗಿತ್ತು
ನೆಲವು ನಂದನವಾಗಲೇನು ಬೇಕು
ತಿಳಿವು ತುಂಬಿದ ಕಣ್ಣು, ಅರಿವು ತುಂಬಿದ ಎದೆಯು 
ಛಲವನರಿಯದ  ಬದುಕು ಇಷ್ಟೇ ಸಾಕು''


ಬದುಕಲ್ಲಿ ಸಾಧಿಸುವ ಮನೋಭಾವ, ಮಾನವೀಯತೆ ತುಂಬಿದರೆ ಏನನ್ನಾದರೂ ಮಾಡಬಹುದು ಅನ್ನೋದಕ್ಕೆ ಸ್ವೀಡನ್ ಜನರ ಸಾಧನೆಯೇ ಉದಾಹರಣೆ.

ಅಲ್ಲಿನ ಬದುಕಾದರೂ ಎಂತದ್ದು, ಅವರ ದಿನನಿತ್ಯದ ಜೀವನ ಶೈಲಿ ಹೇಗೆ, ಬದುಕನ್ನು ಅವರು ನೋಡುವ ರೀತಿ ಹೇಗೆ ಇದನ್ನೆಲ್ಲಾ ಮುಂದಿನ ವಾರ ನಿಮ್ಮೊಂದಿಗೆ ಹಂಚೋಕೊತಿನಿ, ಅಲ್ಲಿತನಕ ಕಾಯ್ತಿರಲ್ಲ....

ನಿಮ್ಮವ
ಗುರು 


ಹಿಂದಿನ ವಾರ ಇದೆ ಸರಣಿಯ ಮೊದಲ ಭಾಗ ಬರೆದಿದ್ದೆ, ನೀವು ಓದಿಲ್ಲ ಅಂದ್ರೆ ಇಲ್ಲಿದೆ ಓದಿ 
ಮರೆತೆನೆಂದರ ಮರೆಯಲಿ ಹ್ಯಾಂಗ್ 
http://gurumurthyhegde.blogspot.com/  

40 comments:

ಚುಕ್ಕಿಚಿತ್ತಾರ said...

ಸು೦ದರವಾದ ಫೋಟೋಗಳೊ೦ದಿಗೆ ಚ೦ದದ ವಿವರಣೆ ನೀಡಿದ್ದೀರಿ.. ವ೦ದನೆಗಳು..

ಮನಸಿನಮನೆಯವನು said...

ಸ್ವೀಡನ್ ಜನ್ರಿಗೆ ತಮ್ಮದೇ ಆದ ಕೆಲವು characteristic features ಇರ್ತಾವಲ್ಲ ಅದು ನೀವು ಹೇಳಿದ್ದು
ಹಾಗೆಯೇ
ಭಾರತದವರು ಅಂದ್ರೆ ಕೆಲವು characteristic features ಇರ್ತಾವೆ ನೀವು ಅವ್ನ ಬದಲಾಯಿಸ್ಕೋಬೇಕು ಅಂತೀದ್ದೀರಿ
ಚೆನ್ನಾಗಿದೆ

_ನನ್ನ 'ಮನಸಿನಮನೆ'ಗೂ ಬನ್ನಿ

shivu.k said...

ಗುರುಮೂರ್ತಿ ಸರ್,

ಇದು ನಿಜಕ್ಕೂ ಉತ್ತಮವಾದ ಪ್ರಾರಂಭ. ಮತ್ತೆ ಬ್ಲಾಗಿಗಾಗಿ ಬರೆಯುತ್ತಿದ್ದೇನೆಂದು ಬರಹದಲ್ಲಿ ಆತುರಬೇಡ. ಮುಖ್ಯವಾಗಿ ಬ್ಲಾಗ್ ಎಲ್ಲರಿಗೂ ತಲುಪುವ ಮಾದ್ಯಮವಾದರೂ ವಿವರವಾಗಿ ನಿದಾನವಾಗಿ ಮತ್ತು ಆರಾಮವಾಗಿ ಬರೆಯಿರಿ. ನಿಮ್ಮ ಎರಡು ವರ್ಷದ ಅನುಭವ ಒಂದು ಪುಸ್ತಕವಾಗುವ ನಿಟ್ಟಿನಲ್ಲಿ ನಿಮ್ಮ ಬರಹ ಸಾಗಲಿ. ಇದು ನನ್ನ ಅನಿಸಿಕೆ. ಅಲ್ಲಿನ ಬದುಕಿನ ಸೂಕ್ಷ್ಮಗಳ ಪ್ರತಿಯೊಂದು ವಿವರಗಳು ಚೆನ್ನಾಗಿ ಬರುತ್ತದೆ ಎಂದು ನಿರೀಕ್ಷಿಸುತ್ತೇನೆ. all the best!

VENU VINOD said...

ವೋಲ್ವೋ, ಎಸ್‌ಕೆಎಫ್‌ ಕಂಪನಿಗಳ ಮಾಹಿತಿ ಬೆರೆತ ನಿಮ್ಮ ಸ್ವೀಡನ್ ಲೇಖನ ಚೆನ್ನಾಗಿದೆ ಗುರು..ಹ್ಮ್..20 ಗಂಟೆ ಕತ್ತಲು ತುಂಬಾ ಜಾಸ್ತೀನೆ ಆಯ್ತು :)

Pavana Bhat said...

tumba layaka barddi guruanna..

ಜಲನಯನ said...

ಗುರು..ಫೋಟೋಗಳು ಯೂನಿಕ್...ಇನ್ನು ನಿಮ್ಮ ಮಾಮೂಲಿ ಆಸಕ್ತಿ ಮೂಡಿಸೋ ಲೇಖನ ಶೈಲಿ...ಜೊತೆಗೆ ನುಡಿ ಮುತ್ತುಗಳನ್ನು ಮೇಳೈಸುವ ರೀತಿ ..ಮೆಚ್ಚುಗೆಯಾಗುತ್ತೆ...ನಿಮ್ಮ ಪುಸ್ತಕ ಯಾವಾಗ ತಿಳಿಸಿ.

Dr.D.T.Krishna Murthy. said...

ಗುರು ಸರ್;ಮುಂದಿನ ಕಂತುಗಳಿಗೆ ಕಾತುರತೆಯಿಂದ ಕಾಯುತ್ತಿದ್ದೇನೆ.ನಮಸ್ತೆ.

Jagadeesh Balehadda said...

ನವಿರಾದ ನಿರೂಪಣೆಯಿಂದ ನಿಮ್ಮ ಬರವಣಿಗೆ ಮನ ಮುಟ್ಟುವಂತಿದೆ . ಈ ಸರಣಿ ಹೀಗೇಯೇ ಮುಂದುವರೆಯುತ್ತಿರಲಿ.
ಧನ್ಯವಾದಗಳು.

ಚಿನ್ಮಯ ಭಟ್ said...

ತುಂಬಾ ಚೆನ್ನಾಗಿದೆ . ಬೇರೆ ದೇಶದವರೆಲ್ಲ ಯಾವುದೋ ಜಾದೂವಿನಿಂದ ಉತ್ತಮ ಸ್ಥಿತಿಗೆ ತಲುಪಿದ್ದಾರೆ ಎಂದು ಯೋಚಿಸುವ ಪೆದ್ದ ಮನಸಿಗೆ ಒಂದು ಗುದ್ದು ಕೊಟ್ಟಿದ್ದು ಈ ಲೇಖನ . ದಿನವಿಡೀ ನಮ್ಮ ಬಾವಿಯ ನೀರೇ ಸಿಹಿಯೆಂದು ಹೇಳಿಕೊಳ್ಳುವವರು ಬೇರೆ ನೀರನ್ನು ಕುಡಿದಿಹಂತ ತಮ್ಮನ್ನು ಕೇಳುವುದು ಒಳ್ಳೆಯದು ಎಂಬುದ ನನ್ನ ಭಾವನೆ. ಇನ್ನು ದಿನಕ್ಕೆ ೨೦ ಗಂಟೆ ಕತ್ತಲೆ ಎಂಬುದನ್ನು ಕಣ್ಣು ಕತ್ತಲೆ ಬಂದಿತು ಹಾ ಹಾ .....ನಮ್ಮಲ್ಲಿ ಇಷ್ಟಿದ್ದರೂ ಏನೂ ಇಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವ ಮಂದಿಗೆ ಇದೊಂದೇ ಅಂಶ ಸಾಕಾದೀತು ನಮ್ಮಲ್ಲಿಯ ಸಲಕರಣೆಗಳನ್ನು ತಿಳಿಸಲು ..( ಕೆಂಪು ಹಳದಿಯ ಬಸ್ಸಿನ ಮುಂದಿನ ಸೀಟಿನ " ಇರುವ ಸುಖವ ನೆನೆ ನೆನೆದು ಬಾರನೆಂಬುದ ತಿಳಿ ........." ನೆನಪಾಯ್ತ ?).....ಇರಲಿ ,ಚೆನ್ನಾಗಿದೆ ಖುಷಿ ಆಯಿತು ....





ಹೊಸ ದೇಶದ ಬಗ್ಗೆ ಹೊಸ ವಿಚಾರಗಳನ್ನು ತಿಳಿಸಿಕೊಟ್ಟ ತಮಗಿದೋ ನಮನ
ಹೊಸದನ್ನು ತಿಳಿಸಿ ಹೊಸದಾಗಿರಿಸಿ (updated ? ) ನಮ್ಮನ



ಇತಿ ನಿಮ್ಮನೆ ಹುಡುಗ
ಚಿನ್ಮಯ್ ?

ಚಿನ್ಮಯ ಭಟ್ said...

ತುಂಬಾ ಚೆನ್ನಾಗಿದೆ . ಬೇರೆ ದೇಶದವರೆಲ್ಲ ಯಾವುದೋ ಜಾದೂವಿನಿಂದ ಉತ್ತಮ ಸ್ಥಿತಿಗೆ ತಲುಪಿದ್ದಾರೆ ಎಂದು ಯೋಚಿಸುವ ಪೆದ್ದ ಮನಸಿಗೆ ಒಂದು ಗುದ್ದು ಕೊಟ್ಟಿದ್ದು ಈ ಲೇಖನ . ದಿನವಿಡೀ ನಮ್ಮ ಬಾವಿಯ ನೀರೇ ಸಿಹಿಯೆಂದು ಹೇಳಿಕೊಳ್ಳುವವರು ಬೇರೆ ನೀರನ್ನು ಕುಡಿದಿಹಂತ ತಮ್ಮನ್ನು ಕೇಳುವುದು ಒಳ್ಳೆಯದು ಎಂಬುದ ನನ್ನ ಭಾವನೆ. ಇನ್ನು ದಿನಕ್ಕೆ ೨೦ ಗಂಟೆ ಕತ್ತಲೆ ಎಂಬುದನ್ನು ಕಣ್ಣು ಕತ್ತಲೆ ಬಂದಿತು ಹಾ ಹಾ .....ನಮ್ಮಲ್ಲಿ ಇಷ್ಟಿದ್ದರೂ ಏನೂ ಇಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವ ಮಂದಿಗೆ ಇದೊಂದೇ ಅಂಶ ಸಾಕಾದೀತು ನಮ್ಮಲ್ಲಿಯ ಸಲಕರಣೆಗಳನ್ನು ತಿಳಿಸಲು ..( ಕೆಂಪು ಹಳದಿಯ ಬಸ್ಸಿನ ಮುಂದಿನ ಸೀಟಿನ " ಇರುವ ಸುಖವ ನೆನೆ ನೆನೆದು ಬಾರನೆಂಬುದ ತಿಳಿ ........." ನೆನಪಾಯ್ತ ?).....ಇರಲಿ ,ಚೆನ್ನಾಗಿದೆ ಖುಷಿ ಆಯಿತು ....





ಹೊಸ ದೇಶದ ಬಗ್ಗೆ ಹೊಸ ವಿಚಾರಗಳನ್ನು ತಿಳಿಸಿಕೊಟ್ಟ ತಮಗಿದೋ ನಮನ
ಹೊಸದನ್ನು ತಿಳಿಸಿ ಹೊಸದಾಗಿರಿಸಿ (updated ? ) ನಮ್ಮನ



ಇತಿ ನಿಮ್ಮನೆ ಹುಡುಗ
ಚಿನ್ಮಯ್ ?

ರಾಜೇಶ ಎನ್. said...

"# ಅವರ ಇಂದಿನ ಶ್ರೀಮಂತಿಕೆ ಅವರು ಬೆವರು ಸುರಿಸಿ ಗಳಿಸಿದ್ದು. ಅವರಿಗೆ ನಮ್ಮ ದೇಶದ ಹಾಗೆ ಶ್ರೀಮಂತ ಪರಂಪರೆಯಿಲ್ಲ. " ಮನ ಮುಟ್ಟಿದ ಸಾಲು ನಿಮ್ಮದು.... ಮುಂದಿನ ಕಂತಿಗೆ ಕಾಯುತ್ತಿದ್ದೇನೆ...

sunaath said...

ಸ್ವೀಡನ್ನಿನ ೈಶಿಷ್ಟ್ಯ ತಿಳಿಸಿದಿರಿ. ಧನ್ಯವಾದಗಳು.

V.R.BHAT said...

ಚಳಿಯಲ್ಲೂ ಬೆವರುವ ಪರಿ ಸೋಜಿಗವೆನಿಸುತ್ತದೆ! ಇನ್ನಷ್ಟು ಬರಲಿ, ಕೆಲವು ಗುಣಲಕ್ಷಣಗಳು ನೀವೇನೇ ಅಂದರೂ ಬದಲಾಗುವುದೇ ಇಲ್ಲ, ಬದಲಾಯಿಸಿಕೊಂಡರೆ ಚೆನ್ನಾಗಿರುತ್ತದೆ ನಿಜ..ಆದ್ರೆ ಪ್ರಕೃತದಲ್ಲಿ ಅದು ಸಾಧ್ಯವೇ ? ಎಂಬ ಸಂದೇಹ ಉಂಟಾಗುತ್ತದೆ.

ಸಾಗರದಾಚೆಯ ಇಂಚರ said...

ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಬರುತ್ತಿರಿ

ಸಾಗರದಾಚೆಯ ಇಂಚರ said...

ವಿಚಲಿತ,,,,
ಬದುಕು ಬದಲಾವಣೆಯ ಮೇಲೆ ನಿಂತಿದೆ,
ಸದಾ ನಿಂತ ನೀರಾಗಿದೆ ಹರಿಯಬೇಕಿದೆ ಅಷ್ಟೇ ಅಲ್ಲವೇ?

ಬರುತ್ತಿರಿ

ಸಾಗರದಾಚೆಯ ಇಂಚರ said...

ಶಿವೂ ಸರ್

ಬರೆಯುವ ಆತುರದಲ್ಲಿ ಬರೆದರೆ ಬರಹದ ಸೊಗಸು ಮಾಯ ಆಗುತ್ತದೆ

ಬರೆಯುವ ಆತುರ ಇಲ್ಲದಿದ್ದರೆ ಬರಹ ಮಾಯವೇ ಆಗಿಬಿಡುತ್ತದೆ :)

ನಡುವಿನ ಎಲೆ ಬಹಳ ಸೂಕ್ಷ್ಮ ಅಲ್ಲವೇ

ಬರುತ್ತಿರಿ

ಸಾಗರದಾಚೆಯ ಇಂಚರ said...

ವೇಣು ,

ನಿಜಾ, ಆ ಕತ್ತಲನ್ನೇ ಗೆದ್ದು ಬಂದ ಅವರ ಸಾಹಸ ಗಾಥೆ ಮೆಚ್ಚುವಂತದ್ದೆ

ಸಾಗರದಾಚೆಯ ಇಂಚರ said...

Pavana,

thank you so much

ಸಾಗರದಾಚೆಯ ಇಂಚರ said...

ಅಜಾದ ಸರ್

ಖಂಡಿತ ಪುಸ್ತಕ ಬರತ್ತೆ

ಯಾವಾಗ ಗೊತ್ತಿಲ್ಲ,

ನಿಮ್ಮ ಪ್ರೀತಿಗೆ ಅಭಾರಿ

ಸಾಗರದಾಚೆಯ ಇಂಚರ said...

ಕೃಷ್ಣಮೂರ್ತಿ ಸರ್

ಪ್ರೀತಿಯ ಹಾರೈಕೆಗೆ ವಂದನೆಗಳು

ಸಾಗರದಾಚೆಯ ಇಂಚರ said...

ಜಗದೀಶ್

ಪ್ರೀತಿ ಹೀಗೆಯ ಇರಲಿ

ಬರ್ತಾ ಇರು

ಸಾಗರದಾಚೆಯ ಇಂಚರ said...

ಚಿನ್ಮಯ ಭಟ್

ನಿಜ, ನಾವು ವಿದೇಶದ ಸಂಪತ್ತು ಮೇಲಿಂದ ಉದುರಿದ್ದು ಅಂದ್ಕೊತಿವಿ

ಆದರೆ ಅವರ ಶ್ರಮ ಗೊತ್ತಿಲ್ಲದೇ ಮಾತನಾಡಬಾರದು ಅಲ್ಲವೇ....

ನಿಮ್ಮ ಪ್ರೀತಿಯ ಹಾರೈಕೆ ಸದಾ ಇರಲಿ

ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ರಾಜಿ,

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ನೀವೇ ಓದುಗರು ಬರೆಯಲು ಪ್ರೇರಣೆ

ಸಾಗರದಾಚೆಯ ಇಂಚರ said...

ಸುನಾಥ್ ಸರ್

ಥ್ಯಾಂಕ್ಸ್

ಬರ್ತಾ ಇರಿ

ಸಾಗರದಾಚೆಯ ಇಂಚರ said...

ಭಟ್ ಸರ್

ನಿಮ್ಮ ಸಂದೇಹ ದಂತೆ ಕೆಲವೊಂದು ಬದಲಾವಣೆ ಗಾಳಿ ಬೀಸಿದರೂ ಹಾರದು

ಅದಕ್ಕೆ ಪರಿಹಾರ ಇಲ್ಲ

ಕಾಲವೇ ನಿರ್ಧರಿಸಬೇಕಿದೆ

balasubramanya said...

ಗುರು ಮೂರ್ತಿ ಸರ್ ಒಳ್ಳೆಯ ಅನುಭವ ಮಾಲಿಕೆ!!! ಸ್ವೀಡನ್ ಬಗ್ಗೆ ನಿಮ್ಮಿಂದ ಹೆಚ್ಚಿನ ಮಾಹಿತಿಗಳು ನಮಗೆ ಒಳ್ಳೆಯ ದರ್ಶನ ನೀಡುತ್ತವೆ. ನನ್ನ ಒಂದಿಬ್ಬರು ಸ್ನೇಹಿತರು ಆ ದೇಶದವರೇ ಆದರೂ ಅವರಿಗಿಂತ ನೀವು ನೀಡುವ ಮಾಹಿತಿ ಅಮೂಲ್ಯವಾಗಿರುತ್ತದೆ. ಮುಂದುವರೆಸಿ ಕಾತುರದಿಂದ ಕಾಯುತ್ತಿದ್ದೇನೆ. ನಿಮಗೆ ಜೈ ಹೋ.

ಸೀತಾರಾಮ. ಕೆ. / SITARAM.K said...

ಅತ್ಯದ್ಭುತ ವಿವರಣೆ. ತಮ್ಮಲ್ಲಿನ ಕವಿಯ ಉತ್ತುಂಗ ಈ ಲೇಖನದಲ್ಲಿದೆ. ಮೊದಲ ಪ್ಯಾರದಲ್ಲಿನ ತಮ್ಮ ವಾಕ್ಕು ವಿದೇಶಿ ಕಂಪನಿಗೆ ಸ್ವದೇಶದಲ್ಲಿ ದುಡಿಯುತ್ತಿರುವ ನಮ್ಮಂಥವರಿಗೆ ಒಂದು ಕ್ಷಣ ಚಳುಕು ಹೊದೆಸುವದರಲ್ಲಿ ಸಂಶಯವಿಲ್ಲ.

SANTOSH MS said...

Guru sir,
Very well written. Really even I have had these experiences.

nsru said...

ಗುರು ಸರ್,

ಸ್ವೀಡನ್ ದೇಶದ ನಿಮ್ಮ ಅನುಭವ ಕಥನ ತುಂಬ ಚೆನ್ನಾಗಿ ಮೂಡಿಬರುತ್ತಿದೆ..ನಿರೂಪಣೆ ಪರಿಣಾಮಕಾರಿಯಾಗಿದೆ.. ಮಧ್ಯಮಧ್ಯದಲ್ಲಿ ಇರುವ ನುಡಿಮುತ್ತುಗಳು ಸೊಗಸಾಗಿವೆ.
ಅವರ ಕಾರ್ಯನಿಷ್ಠೆ, ಕೌಶಲ್ಯ, ತಂತ್ರಜ್ಞಾನ ನಿಜಕ್ಕೂ ಅದ್ವಿತೀಯ..ನಮಗೆ ಪ್ರೇರಣೆ ನೀಡುವಂತಹುದು.

ವಿದೇಶದಲ್ಲಿ ನೆಲೆನಿಂತ ಮೇಲೆ ತಾಯಿ ನಾಡನ್ನು ಮರೆತು ಹೊಸ ವ್ಯವಸ್ಥೆಯಲ್ಲಿ ಕಳೆದು ಹೋಗುವ ಜನರ ಮಧ್ಯೆ ನೀವು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಹಾಗು ಅನುಕರಣೀಯ..ನಿಮಗೆ ನನ್ನದೊಂದು ಹೃತ್ಪೂರ್ವಕ ನಮನ..

"ಇಂಚರ" ಹೀಗೆ ಮಧುರವಾಗಿ ಕೇಳಿಬರುತ್ತಿರಲಿ

ಸಾಗರದಾಚೆಯ ಇಂಚರ said...

ಬಾಲು ಸರ್
ನಿಮ್ಮ ಮಾತಿನಂತೆ ಮುಂದೆ ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ನೀಡುತ್ತೇನೆ

ಈ ದೇಶದ ವೈಶಿಷ್ಟ್ಯವೇ ಹಾಗೆ
ಅವರ ಜೀವನ ವಿಧಾನ ಕೂಡಾ

ಸಾಗರದಾಚೆಯ ಇಂಚರ said...

ಸೀತಾರಾಂ ಸರ್

ನಮ್ಮ ಕಲ್ಪನೆ ವಿದೇಶದ ಬಗ್ಗೆ ಸರಿಯಾಗಿಲ್ಲ

ವಿದೇಶಿಗರು ಎಂದರೆ ಕೆಲಸ ಮಾಡದವರು,
ಹಣ ಇದ್ದವರು ಎಂದೆಲ್ಲ ತಿಳಿಯುತ್ತೇವೆ

ಬದುಕು ನಮ್ಮಷ್ಟು ಸುಲಭವಾಗಿ ಅವರಿಗಿಲ್ಲ

ಸಾಗರದಾಚೆಯ ಇಂಚರ said...

Santhosh,
thanks for your words
yes i like Sweden very ,much

ಸಾಗರದಾಚೆಯ ಇಂಚರ said...

NSRU,
ನಿಮ್ಮ ಮಾತುಗಳು ಬರೆಯಲು ಪ್ರೇರಣೆ ನೀಡಿವೆ

ಯಾವುದೇ ದೇಶದ ಬಗ್ಗೆ ಮಾತನಾಡಲು
ಆ ದೇಶದ ಒಳ ಹೊಕ್ಕಿ ನೋಡಬೇಕಲ್ಲವೇ?
ಅಲ್ಲದೆ ಅವರ ತಂತ್ರಜ್ಞಾನ ಬೆರಗು ಗೊಳಿಸಿದೆ

ನಿಮ್ಮ ಹಾರೈಕೆ ಸದಾ ಇರಲಿ

prabhamani nagaraja said...

ಸ್ವೀಡನ್ ಬಗ್ಗೆ ನಿಮ್ಮ ಲೇಖನ ಮತ್ತು ಫೋಟೋಗಳು ಬಹಳ ಚೆನ್ನಾಗಿವೆ.ಧನ್ಯವಾದಗಳು. ೨೦ಗ೦ಟೆ ಕತ್ತಲೆಯವಾಸ ಕಲ್ಪನೆಗೂ ಮೀರಿದ್ದು! ಮು೦ದಿನ ಬರಹಕ್ಕಾಗಿ ನಿರೀಕ್ಷಿಸುತ್ತೇನೆ.

ಅನಂತ್ ರಾಜ್ said...

ಅನುಭವ ಮಾಲಿಕೆ ಉತ್ತಮವಾಗಿ ಬರುತ್ತಿದೆ ಸರ್. ಚಿತ್ರ-ಚಿತ್ರಣಗಳು ಮನಸೂರೆಗೊಳ್ಳುತ್ತವೆ. ಅಭಿನ೦ದನೆಗಳು.

ಅನ೦ತ್

prabhamani nagaraja said...

ದಿನಕ್ಕೆ ೨೦ ಗಂಟೆ ಕತ್ತಲೆಯಿದ್ದೂ ಅದನ್ನು ಮೀರಿ ಬೆಳೆದು ನಿ೦ತ ಅವರ ಸಾಹಸ ಮೆಚ್ಚುಗೆಗೆ ಯೋಗ್ಯವಾದದ್ದು. ನಿಮ್ಮ ಈ ಅನುಭವ ಲೇಖನ ಉತ್ತಮವಾಗಿದೆ. ಅಭಿನ೦ದನೆಗಳು.

Deep said...

Guru-ji ,

Bevarilisi kattida sundara samajakke olleya aarambha kottiruviri.

Heege hariyali!

ಅರಕಲಗೂಡುಜಯಕುಮಾರ್ said...

@ಗುರುಮೂರ್ತಿ ಸರ್,
ಸ್ವೀಡನ್ ದೇಶದ ಬಗೆಗೆ ಒಂದು ಕುತೂಹಲವಿತ್ತು, ಪ್ರವಾಸ ಲೇಖನದ ಬದಲಿಗೆ ಅಲ್ಲಿನ ಜನಜೀವನ ಮತ್ತು ಇತರೆ ವಿವರಗಳನ್ನು ಕಾವ್ಯದ ಸಾಲುಗಳ ಜೊತೆ ಹಂಚಿಕೊಂಡಿರೋದು ಚೆಂದವಾಗಿದೆ.ಈ ಬರಹಗಳಲ್ಲಿ ಅಂದರೆ ಲೇಖನ ಬರಹದಲ್ಲಿ ಪಕ್ವತೆ ಇದೆ.. ಮುಂದಿನ ಕಂತುಗಳ ಕಾಯುವ ಕುತೂಹಲಿಗ ನಾನು.

KalavathiMadhusudan said...

anubhavavannu manamuttuvante hidididuvudu vishehsavaada kale.adu nimage chennaagi siddhiside.abhinandanegalu.

Anonymous said...

Wonderful Sir.. U r great :)