Friday, July 22, 2011

ಹುಟ್ಟಿದ ಹಬ್ಬದ ಶುಭಾಶಯಗಳು

ಇಂದು ಪ್ರೀತಿಯ ಮಡದಿಯ ಜನ್ಮ ದಿನ. ಕಳೆದ ಕೆಲವು ವರ್ಷಗಳಿಂದ ಅವಳ ಜನ್ಮದಿನವನ್ನು ಒಟ್ಟಿಗೆ ಆಚರಿಸುತ್ತಿದ್ದ ನನಗೆ ಈ ಸಲ ಮಾತ್ರ ಅವಳಿಂದ ದೂರವಾಗಿ ಮಲೇಶಿಯಾ ದಲ್ಲಿ ಇರುವ ಸಂದರ್ಭ ಬಂದೊದಗಿದೆ. ಅವಳ ನೆನಪು ಇಂದು ಕಾಡುತ್ತಿದೆ. ಜನ್ಮ ದಿನದ ಸಂದರ್ಭದಲ್ಲಿ ಹಾರ್ದಿಕ ಶುಭ ಹಾರೈಕೆಗಳು. ಜನ್ಮ ದಿನದ ಸಂಧರ್ಬದಲ್ಲಿ ಈ ಕವನ ಅವಳಿಗಾಗಿ...




ನನ್ನ ಒಲವೆ, ನನ್ನ ಬಲವೆ, ನನ್ನ ಪ್ರೇಮವೇ
ಮನವ ಗೆದ್ದ, ತನುವ ಗೆದ್ದ ನನ್ನ ಪ್ರೀತಿಯೇ
ಕಣ ಕಣದಲೂ ಅಣು ಅಣುವಲೂ ನಿನ್ನ ಕಾಣುವೆ
ಉಸಿರಿನ ಕೊನೆ ಉಸಿರಲ್ಲೂ ನಗುವ ನೀಡುವೆ

ಜನ್ಮ ದಿನದ ಕ್ಷಣವು ಇದುವು ಹರಸಿ ನಿನ್ನನು
ಇಂದು ನಿನ್ನ ನೆನಪು ಕಾಡುತಿಹುದು ಎನ್ನನು
ನೂರು ಕಾಲ ಬಾಳು ನೀನು, ಹರಸುತಿಹೆನು ನಾ
ಸದಾ ಸುಖವು ನಿನಗೆ ಸಿಗಲಿ, ಬೇಡುತಿರುವೆ ನಾ

ಜನ್ಮ ದಿನದಿ ನಿನ್ನ ಬಿಟ್ಟು ದೂರ ಇರುವೆನು
ಕ್ಷಮಿಸು ಎನ್ನ , ಬೇಗ ಬರುವೆ, ನೋಡ್ವೆ ನಿನ್ನನು
ಕಾಲವೆಂಬ ಪರಿಧಿಯಲ್ಲಿ, ಕಣವು ಎಲ್ಲರೂ
ಮರೆತ ಕ್ಷಣವ, ಬೆರೆತ ನಗುವ, ನೆನಪ ಮಾಡ್ವರು

ವರುಷ ಕಳೆದು ವರುಷ ಬಂತು ನಿನ್ನ ಬದುಕಲಿ
ಹರುಷವೆಂದೂ ಮರೆಯದಿರಲಿ ಬಾಳ ರಥದಲಿ
ಜನ್ಮದಿನದ ಸಮಯದಲ್ಲಿ ಎನ್ನ ಹರಕೆಯು
ನೂರು ಕಾಲ ಬಾಳು ನೀನು, ಭವ್ಯ ಪಥದಲಿ 

14 comments:

ತೇಜಸ್ವಿನಿ ಹೆಗಡೆ said...

Wow... back to back B'day! :) Convey my Best wishes to her :)

Mohan Hegade said...

Hai,

nimma srimathiyavarige nanna wishes tilisi. arogyavagiddare tane??

once again sundara barahadalli hendatimelina prema.

Danyari,

MOhan Hegade

ಮನಸು said...

happy birthday geeta..

ಸವಿಗನಸು said...

kavana sogasaagide....Geetha Guru ibbarigu huttu habbada shubashayagalu....

Sumana said...

huttuhabbada shubhashayagalu ninnavalige Guru..ninna arpane tumbaa chennaagi baindu!! Let this beyour last time being apart! jotheyaagi santoshavaagiri anta haaraike nanninda!

ಪ್ರವರ ಕೆ ವಿ said...

nanna shubhashayagalanna heli bidi.... nimma kavite avaranna muttirutte....

Pranav said...

Wow!!!!super.....yavagalu hige eri nivibbaru......

ವಿ.ಆರ್.ಭಟ್ said...

ನಿಮ್ಮ ಮಡದಿಗೆ ನಮ್ಮೆಲ್ಲರ ಶುಭಾಶಯಗಳನ್ನು ತಿಳಿಸಿರಿ.

sunaath said...

ನಿಮ್ಮ ಶ್ರೀಮತಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸೊಗಸಾದ ಕವನಕ್ಕಾಗಿ ನಿಮಗೆ ಅಭಿನಂದನೆಗಳು.

ಜಲನಯನ said...

ಹುಟ್ಟುಹಬ್ಬದ ಶುಭಾಶಯಗಳು....ಇಬ್ರಿಗೂ...

nagendra hegde said...

I wish u both celebrate tons of birthdays happily in future..( indirakkandoo same ada) :)

ಸೀತಾರಾಮ. ಕೆ. / SITARAM.K said...

ತಮ್ಮ ಶ್ರೀಮತಿಯವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಸಂತಸದ ದಿನಗಳು ನೂರಾರಾಗಿ ಮರಳಲಿ.

VENU VINOD said...

ವ್ಹಾವ್..ಇದಕ್ಕಿಂತ ದೊಡ್ಡ ಉಡುಗೊರೆ ಇನ್ಯಾಕೆ ನಿಮ್ಮ ಮಡದಿಗೆ!

Creativity!! said...

bahala sundaravaada baraha. huttuhabbada shubhashayagalu aakege :)