Sunday, April 10, 2011

ನಶ್ವರ .............


ಪ್ರಕ್ರತಿಯ ವೈಚಿತ್ರ್ಯಗಳ ನೋಡಿ, ಯಾವ ತಂತ್ರಜ್ಞಾನದಲ್ಲಿಯೂ ಕಡಿಮೆ ಇರದ ಜಪಾನ್ ಗೆ ಅಪ್ಪಳಿಸಿದ ಭೂಕಂಪ, ಬೆನ್ನಿಗೆ ಬಂದ ಸುನಾಮಿ ಗೆ ಜಪಾನೀಯರು ಕಂಗಾಲಾಗಿದ್ದಾರೆ. ಅದರ ಜೊತೆಗೆ ಬಂದೆರಗಿದ ಅಣು ವಿಕಿರಣ ಸೋರುವಿಕೆ, ಒಂದೇ ಎರಡೇ, ಬೆನ್ನಿಗೊಂದರಂತೆ ಬಂದೆರಗಿರುವ ಸಂಕಷ್ಟಗಳ ನಿವಾರಣೆಗೆ ಜಪಾನೀಯರು ಹೆಣಗುತ್ತಿದ್ದಾರೆ. ಬದುಕು ಎಷ್ಟೊಂದು ''ನಶ್ವರ'' ಅಲ್ಲವೇ? ನಿನ್ನೆ ವರೆಗೆ, ಈ ಬದುಕು ನಮ್ಮದು, ಮನೆ ನಮ್ಮದು, ಆಸ್ತಿ ನಮ್ಮದು, ಮರುಕ್ಷಣ ಯಾವುದೂ ನಮ್ಮದಲ್ಲ, ದೇಹ ಮಾತ್ರ ನಮ್ಮದು, ಇಲ್ಲಿ ಸಾವು ಗೆದ್ದ ಮನೆಯೂ ಇಲ್ಲ, ಮನಸು ಇಲ್ಲ, ಸಾಸಿವೆ ಇಲ್ಲದ ಮನೆಯ ಹುಡುಕಾಟದಂತೆ....
ಆದರೂ ಬದುಕು, ಅದರ ಬಗೆಗಿನ ಪ್ರೀತಿ ಕಡಿಮೆ ಆಗದು, ಮತ್ತದೇ ಆಸೆ, ಮತ್ತದೇ ಅಶಾಂತಿಯ ಬದುಕು, ಶಾಂತಿಯ ಹುಡುಕಾಟ, ಹಣ ಮಾಡಲು ಕಿತ್ತಾಟ, ಇಷ್ಟು ಮಾಡಿ ಇಟ್ಟಿದ್ದಕ್ಕೆ ಅಷ್ಟು ಸೇರಿಸುವ ಆಸೆ, ಕೊನೆಗೆ ಎಲ್ಲ ಬಿಟ್ಟು ೬ ಅಡಿ ೩ ಅಡಿ ದೇಹದೊಂದಿಗೆ ಸಾವು. ಇದೆ ತಾನೇ ಬದುಕು., ಮೊನ್ನೆ ಜಪಾನ್ ಭೂಕಂಪ ಹಾಗೂ ಸುನಾಮಿಯಲ್ಲಿ ಜಪಾನಿನ ಆತ್ಮೀಯ ಸ್ನೇಹಿತನ ಕುಟುಂಬ ಕಳೆದುಹೋಗಿದೆ. ಆತನ ತಂದೆ, ತಾಯಿ, ಹಾಗೂ ಇಬ್ಬರು ಅಕ್ಕಂದಿರು ಕಾಣೆಯಾಗಿದ್ದಾರೆ. ಅವರು ಸತ್ತಿದ್ದಾರೆ ಎನ್ನಲು ಅವನ ಮನಸ್ಸು ಒಪ್ಪುತ್ತಿಲ್ಲ. ಯಾಕೆಂದರೆ ಇಲ್ಲಿಯವರೆಗೆ ಅವರ ಶವಗಳು ಸಿಗುತ್ತಿಲ್ಲ. ದಿನೇ ದಿನೇ ಆತ ಕುಗ್ಗಿ ಹೋಗುತ್ತಿದ್ದಾನೆ. ಆತನ ನೋವಿಗೆ ಸಾಂತ್ವನ ಹೇಳುವ ಧೈರ್ಯ ನನಗಿಲ್ಲ. ''ನಶ್ವರ'' ದ ಬದುಕಿನ ವಿವಿಧ ಮಜಲುಗಳು ಕಣ್ಣ ಪಟಲದಿಂದ ಸರಿಯುತ್ತಿವೆ. ತಾಯಿಯ ಗರ್ಭದಿಂದ ಹೊರಗೆ ಬಂದಾಗ ಸುತ್ತ ಎಲ್ಲರೂ ನಗುತ್ತಿದ್ದರೆ, ಜಗದ ಮೈ ಮಾಟಕ್ಕೆ ತಯಾರಾಗುವ ಮಗುವಿನ ಕಣ್ಣಲ್ಲಿ ತುಂಬಿರುವುದು ನೀರು. ಆದರೆ ಜಗದಿಂದ ಹೊರತು ನಿಂತಾಗ ಎಲ್ಲರ ಕಣ್ಣಲ್ಲಿ ನೀರು, ಆದರೆ ಹೊರಡುವವನ ಕಣ್ಣಲ್ಲಿ ನಗು ತುಂಬಿರಬೇಕು, ಆಗಲೇ ಬದುಕು ಸಾರ್ಥಕ.
ಆ ಸ್ನೇಹಿತನ ಕುಟುಂಬ ಬೇಗ ಅವನಿಗೆ ಸಿಗಲಿ ಎಂದು ಪ್ರಾರ್ಥಿಸುತ್ತ ಈ ಕವನ ಅವನ ಕುಟುಂಬದ ನೆನಪಿಗಾಗಿ...



ಎಲ್ಲ ನೋವುಗಳ ಆಚೆಯೊಂದು 
ನಲಿವೆಂಬ ಭಾವ ಇಹುದು
''ಸಾವು'' ಗೆದ್ದ ಮನಸಿಲ್ಲ ಇಲ್ಲಿ
ನೆರಳಂತೆ ಜೀವ ಬರದು   

ಜನ್ಮ ಪಡೆದ ಕ್ಷಣ, ಸುತ್ತಲೆಲ್ಲ ನಗು
ನಿನ್ನ ಕಣ್ಣಲ್ಲಿ ನೀರು
ಇಷ್ಟವಾಗಲಿ ಜಗದ ಮೈಮಾಟ
ದು:ಖ ಸುಖದ ತೇರು 

ನಿನ್ನದೆಂಬುದು ದೇಹ ಮಾತ್ರ
ನಿನ ಹಿಂದೆ ಬರರು ಯಾರೂ
ಒಣಜಂಭ ಬಿಟ್ಟು, ಪ್ರೀತಿಯನು ಕಟ್ಟು
ಮಾಡದೆಯೇ ಬದುಕು ಬೋರು

ಅರಳುತಿರಲಿ ಸುಮ, ಬೆರೆಯುತಿರಲಿ ನಗು
ಕೆದಕದಿರಲೆಂದು ಬದುಕು
ಮೂರು ದಿನದ ಒಡನಾಟವಿಹುದಿಲ್ಲಿ
ಎಂದೆಂದೂ ಮೆಲುಕು ಹಾಕು         

52 comments:

ಮನಸು said...

ಆದಷ್ಟು ಬೇಗ ಅವರ ಕುಟುಂಬ ಒಂದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.......

Nagendra hegde said...

ಓ ದೇವರೇ, ನಾನೀಗಾಗಲೇ ಸಲ್ಲಿಸಿರುವ ಕೋರಿಕೆಗಳ ಪಟ್ಟಿಯಲ್ಲಿ ಯಾವುದಾದರೊಂದನ್ನು ಈಡೇರಿಸುವ ಮನಸ್ಸು ನಿನಗಿದ್ದಲ್ಲಿ ಅದು ಸರ್ವೇ ಜನಃ ಸುಖಿನೋ ಭವಂತು ಆಗಿರಲಿ ಎಂದು ಪ್ರಾರ್ಥಿಸುತ್ತೇನೆ.

Ittigecement said...

ನಿಜಕ್ಕೂ ಬೇಸರ ತರಿಸಿತು
ಅವರಿಬ್ಬರೂ ಬೇಗ ಒಂದಾಗಲಿ ಎಂದು ನಮ್ಮೆಲ್ಲರ ಪ್ರಾರ್ಥನೆ...

ನೀವು ಬರೆದ ಸಾಲುಗಳು ಚೆನ್ನಾಗಿವೆ..
ಮನಸ್ಸಿಗೆ ತಟ್ಟುವಂತೆ ಬರೆದಿರುವಿರಿ..

ಸಾಗರದಾಚೆಯ ಇಂಚರ said...

ಮನಸು,
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಆ ಸ್ನೇಹಿತನ ಕುಟುಂಬ ಬೇಗ ಸಿಗಲಿ ಎಂಬ ಪ್ರಾರ್ಥನೆ ನಮ್ಮದು
ಇಂಥಹ ಎಷ್ಟೋ ಕುಟುಂಬಗಳು ಅಲ್ಲಿವೆ

ಸಾಗರದಾಚೆಯ ಇಂಚರ said...

ನಾಗೇಂದ್ರ
ನಿಜ, ಜಪಾನ್ ಜನರ ಸಲುವಾಗಿ ಪ್ರಾರ್ಥಿಸಲೇ ಬೇಕಾಗಿದೆ
ವಿಶ್ವಕ್ಕೆ ತಂತ್ರಜ್ಞಾನ ಕೊಟ್ಟ ದೇಶ ಅದು
ಅಲ್ಲಿನ ಜನರಿಗೆ ಸಾಂತ್ವನ ನಾವು ನೀಡಬೇಕಿದೆ

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ

ಆ ಸ್ನೇಹಿತ ಇದೆ ತಿಂಗಳು ಸ್ವೀಡನ್ನಿಗೆ ಬರುತ್ತಿದ್ದಾನೆ
ಅವನದೇ ಕಂಪನಿಯ ಕೆಲಸ ನಾವು ಇಲ್ಲಿ ಮಾಡುತ್ತಿದ್ದೇವೆ
ಬಂದಾಗ ಹೆಚ್ಚಿನ ವಿವರ ಲಭಿಸಲಿದೆ
ನಿಮ್ಮ ಕಾಳಜಿಗೆ ಧನ್ಯವಾದಗಳು

Sandeep K B said...

ನಿಮ್ಮ ಸ್ನೇಹಿತನ ಕುಟುಂಬ ಆದಷ್ಟು ಬೇಗ ಒಂದಾಗಲಿ ಎಂದು ಆಶಿಸುತ್ತೇನೆ

AntharangadaMaathugalu said...

ಗುರು ಸಾರ್..
ಅವರ ಕುಟುಂಬಕ್ಕೆ ಭಗವಂತನ ಕರುಣೆ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ.

ಶ್ಯಾಮಲ

ಡಾ. ಚಂದ್ರಿಕಾ ಹೆಗಡೆ said...

aa geleyanige aadastu begane avana kutumba sikki... avana mogadalli naguvannu kaanuva...

Gubbachchi Sathish said...

ತುಂಬ ನೈಜತೆಯಿಂದ ಕವನ ಮೂಡಿದೆ. ನಿಮ್ಮ ಸ್ನೇಹಿತನು ನಮ್ಮ ಸ್ನೇಹಿತನೂ ಹೌದು. ಒಳ್ಳೆಯದಾಗಲಿ...

sunaath said...

ಬದುಕು ನಶ್ವರ, ನಿಜ. ಇರುವಷ್ಟು ದಿನ ಬದುಕಿನ ಮಾಯೆ ಬಿಟ್ಟೀತೆ? ನಿಮ್ಮ ಗೆಳೆಯನಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ.

ಜಲನಯನ said...

ಡಾ. ಗುರು ಮನಸ್ಸು ನಿಜವಾಗಿಯೂ ಅವರಿಗಾಗಿ ತುಡಿಯುತ್ತೆ,,,ಅವರ ಸಹನಾಶೀಲತೆ ಮತ್ತು ದೇಶಾಭಿಮಾನ ಮೆಚ್ಚುವಂತಹುದು...ಅಗಲಿ ಬೇರ್ಪಟ್ಟ ಜೀವಗಳು ಮತ್ತೆ ಒಂದಾಗ್ಲಿ ಎಂದೇ ನಮ್ಮಾ ಹಾರೈಕೆ...ಚನ್ನಾಗಿದೆ ಕವನ ಲೇಖನಕ್ಕೆ ಪೂರಕ.

ವಾಣಿಶ್ರೀ ಭಟ್ said...

ಮೂರು ದಿನದ ಒಡನಾಟವಿಹುದಿಲ್ಲಿ
ಎಂದೆಂದೂ ಮೆಲುಕು ಹಾಕು nice lines...
wonderful poem

ಗಿರೀಶ್.ಎಸ್ said...

ಬೇಸರದ ಸಂಗತಿ,ನಿಮ್ಮ ಸ್ನೇಹಿತನ ಕುಟುಂಬ ಬೇಗ ಒಂದಾಗಲಿ ಎಂಬುದು ನಮ್ಮ ಆಶಯ..

ಚಿತ್ರಾ said...

ಗುರು ,
ಪೀಠಿಕೆ ಓದುವಾಗ , ಇದ್ಯಾಕೆ ಗುರು ಹೀಗೆ ಫಿಲಾಸಫರ್ ಆಗಿದ್ದಾನೆ ಅಂದ್ಕೊತಾ ಇದ್ದೆ . ಆದರೆ ನಿಜ ತಿಳಿದಾಗ ತುಂಬಾ ಬೇಸರವಾಯ್ತು . ಜೀವನವೇ ಹಾಗೆ ಕಣೋ !
ಎಲ್ಲಾ ನಮ್ಮದು , ಮತ್ತೆ ಮರುಕ್ಷಣಕ್ಕೆ ಅದನ್ನೆಲ್ಲ ಅನುಭವಿಸಲು ನಾವೇ ಇಲ್ಲ ! ಅದು ಗೊತ್ತಿದ್ದರೂ , ನಾನೂ , ನಮ್ಮದು ಎಂದು ಹಲವರಿಯುತ್ತೇವೆ . ವಿಚಿತ್ರ ಅಲ್ಲವೇ?
ನಿನ್ನ ಗೆಳೆಯನ ದುಃಖ ಅರ್ಥವಾಗುತ್ತದೆ ! ತಮ್ಮವರನ್ನೆಲ್ಲ ಕಳೆದುಕೊಂದಾಗಿನ ನೋವು ಯಾರಿಗೂ ಬೇಡ ! ಆತನ ಕುಟುಂಬದವರು ಸುರಕ್ಷಿತವಾಗಿ ಸಿಕ್ಕಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ !

ಕವನ ತುಂಬಾ ಅರ್ಥಪೂರ್ಣ ಹಾಗೂ ಪ್ರಬುದ್ಧವಾಗಿದೆ !

ತೇಜಸ್ವಿನಿ ಹೆಗಡೆ said...

nice poem.. ನಿಮ್ಮಾ ಆ ಗೆಳಯನಿಗೆ ಭಗವಂತ ದುಃಖ ಸಹಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುವೆ.

kanasu said...

Good one!

ಸವಿಗನಸು said...

ಓದಿ ಬೇಸರವಾಯಿತು....
ಅವರ ಕುಟುಂಬ ಬೇಗ ಒಂದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.......
ಅವರಿಬ್ಬರೂ ಬೇಗ ಒಂದಾಗಲಿ ಎಂದು ನಮ್ಮೆಲ್ಲರ ಪ್ರಾರ್ಥನೆ...
ಸಾಲುಗಳು ಚೆನ್ನಾಗಿವೆ..

SANTOSH MS said...

Dear Guru Sir,

The words are really worthy of compassion. Let us all pray together that they get well soon.

ಅನಂತ್ ರಾಜ್ said...

ನಿಮ್ಮ ಸ್ನೇಹಿತನ ಕುಟು೦ಬ ಒ೦ದಾಗಲಿ ಮತ್ತು ಶುಭವಾಗಲಿ ಎ೦ಬ ಹಾರೈಕೆ ನನ್ನದೂ ಕೂಡ.

ಅನ೦ತ್

Dr.D.T.Krishna Murthy. said...

ನಿಮ್ಮ ಕವನ ಓದುತ್ತಿದ್ದರೆ ದಿ.ವಿ.ಜಿ.ಯವರ ಕಗ್ಗದ ಈ ಸಾಲುಗಳು ನೆನಪಾದವು ಗುರುಸರ್;
ನಮ್ಮ ಬಾಳ ದೋಣಿ ಯಾವುದೂ ಅಡ್ಡಿ ಯಿಲ್ಲದೆ ನೆಮ್ಮದಿಯಿಂದ ಸಾಗುತ್ತಿರಲು ವಿಧಿ ಎತ್ತಲಿಂದಲೋ ಬೀಸುವ ಗಾಳಿ ನಮ್ಮ ಬಾಳ ದೋಣಿಯನ್ನು ತಲೆ ಕೆಳಗಾಗಿಸುತ್ತದೆ.
ನಿಮ್ಮ ಸ್ನೇಹಿತ ತನ್ನ ಕುಟುಂಬವನ್ನು ಸೇರಿಕೊಳ್ಳಲಿ.

shivu.k said...

ಸರ್,

ಬೆಂಗಳೂರಿಗೆ ಬಂದಾಗ ನೀವು ತಿಂಗಳಿಗೊಮ್ಮೆ ಜಪಾನ್‍ಗೆ ಹೋಗುವ ವಿಚಾರವನ್ನು ಹೇಳಿದ್ದೀರಿ. ಈಗ ಅವರ ಪರಿಸ್ಥಿತಿಯನ್ನು ತಿಳಿದು ಬೇಸರವಾಯಿತು..ದೇವರು ಅವರಿಗೆ ಒಳ್ಳೆಯದು ಮಾಡಲಿ ಅಂಥ ಪ್ರಾರ್ಥಿಸುತ್ತೇನೆ..

Pradeep Rao said...

ನಿಜ ಬದುಕು ನಶ್ವರ ಎಂಬುದನ್ನು ತಿಳಿಯದೆ ಜನರು ಲೋಭದಿಂದ ಜೀವಿಸುತ್ತಿದ್ದಾರೆ.

ಕವನ ಚೆನ್ನಾಗಿದೆ.. ಇದೇ ವಿಷಯದ ಕುರಿತು ನಾನೂ ಕೆಲವು ಸಾಲುಗಳನ್ನು ಗೀಚಿರುವೆ..

ಒಮ್ಮೆ ಭೇಟಿ ಕೊಡಿ http://poemsofpradeep.blogspot.com

ದಿನಕರ ಮೊಗೇರ said...

nimma geLeyana kuTumba matte serali endu praarthisuttEne..

kavana chennaagide...

ಸೀತಾರಾಮ. ಕೆ. / SITARAM.K said...

naagendra hegadeyavare maate nannadu...

Ashok.V.Shetty, Kodlady said...

ಗುರು ಸರ್...

"ತಾಯಿಯ ಗರ್ಭದಿಂದ ಹೊರಗೆ ಬಂದಾಗ ಸುತ್ತ ಎಲ್ಲರೂ ನಗುತ್ತಿದ್ದರೆ, ಜಗದ ಮೈ ಮಾಟಕ್ಕೆ ತಯಾರಾಗುವ ಮಗುವಿನ ಕಣ್ಣಲ್ಲಿ ತುಂಬಿರುವುದು ನೀರು. ಆದರೆ ಜಗದಿಂದ ಹೊರತು ನಿಂತಾಗ ಎಲ್ಲರ ಕಣ್ಣಲ್ಲಿ ನೀರು, ಆದರೆ ಹೊರಡುವವನ ಕಣ್ಣಲ್ಲಿ ನಗು ತುಂಬಿರಬೇಕು, ಆಗಲೇ ಬದುಕು ಸಾರ್ಥಕ." ..ಈ ಸಾಲುಗಳು ಇಷ್ಟವಾದವು.....ನಿಮ್ಮ ಸ್ನೇಹಿತನ ಕುಟುಂಬ ಬಹುಬೇಗ ಒಂದಾಗಲಿ....ಕವನವೂ ಚೆನ್ನಾಗಿದೆ....

ಸುಧೇಶ್ ಶೆಟ್ಟಿ said...

:(

ಸಾಗರದಾಚೆಯ ಇಂಚರ said...

ಸಂದೀಪ್ ಸರ್,
ನಿಮ್ಮ ಆಶಯ ನಿಜವಾಗಲಿ

ಸಾಗರದಾಚೆಯ ಇಂಚರ said...

AntharangadaMaathugalu

ನಿಮ್ಮ ಹಾರೈಕೆ ಅಂತೆ ಅವರಿಗೆ ಬೇಗ ಕುಟುಂಬ ಸಿಗುವಂತಾಗಲಿ

ಸಾಗರದಾಚೆಯ ಇಂಚರ said...

ಡಾ. ಚಂದ್ರಿಕಾ ಹೆಗಡೆ

ನಿಮ್ಮ ಹಾರೈಕೆಗೆ ಧನ್ಯವಾದಗಳು
ಬರುತ್ತಿರಿ

ಸಾಗರದಾಚೆಯ ಇಂಚರ said...

ಗುಬ್ಬಚ್ಚಿ ಸತೀಶ್ ಸರ್
ನಿಮ್ಮ ಮನಸು ದೊಡ್ಡದು
ವಸುದೈವ ಕುಟುಂಬಕಂ ಅಲ್ಲವೇ

ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಸುನಾಥ್ ಸರ್

ನಿಮ್ಮ ಮಾತು ನಿಜಾ
ಮಾಯದ ಬೆನ್ನೇರಿ ಹೊರಟಂತೆ ಬದುಕು

ನಿಮ್ಮ ಹಾರೈಕೆಗೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಜಲನಯನ ಅಜಾದ್ ಸರ್

ಜಪಾನೀಯರ ಶ್ರಮ ವಿಶ್ವಕ್ಕೆ ಮಾದರಿ

ನನ್ನ ಸ್ನೇಹಿತನ ಕುಟುಂಬ ಸಿಗಲಿ ಎಂಬುದೇ ನನ್ನ ಹಾರೈಕೆ

ಸಾಗರದಾಚೆಯ ಇಂಚರ said...

ವಾಣಿಶ್ರೀ

ತುಂಬಾ ಥ್ಯಾಂಕ್ಸ್ ಇಷ್ಟವಾಗಿದ್ದಕ್ಕೆ

ಬರ್ತಾ ಇರು

ಸಾಗರದಾಚೆಯ ಇಂಚರ said...

ಗಿರೀಶ್.ಎಸ್

ನಿಮ್ಮ ಆಶಯ ಬೇಗ ಫಲಿಸಲಿ

ಆತನಿಗೆ ಕುಟುಂಬ ಸಿಗಲಿ

ಸಾಗರದಾಚೆಯ ಇಂಚರ said...

ಚಿತ್ರಾ ಮೇಡಂ,
ನಿಜಾ ಅಲ್ದನೆ

ಬದುಕೇ ಹಂಗೆ ನೋಡು,
ಇವತ್ತು ಎಲ್ಲ ನಮ್ಮದು,
ನಾಳೆ ನಾವ್ಯಾರೋ ಏನೋ.

ಆದರೂ ಕಿತ್ತಾಟ ಬಡಿದಾಟ

ಆ ಸ್ನೇಹಿತನ ಕುಟುಂಬ ಒಂದು ಅವಂಗೆ ಸಿಗಲಿ ಹೇಳದೆ ನನ್ನ ಆಸೆ

ಸಾಗರದಾಚೆಯ ಇಂಚರ said...

ತೇಜಸ್ವಿನಿ ಹೆಗಡೆ ಯವರೇ

ನಿಮ್ಮ ಪ್ರಾರ್ಥನೆಗೆ ಬೇಗ ಫಲ ಸಿಗಲಿ

ಹಾರೈಕೆಗೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಕನಸು

ಧನ್ಯವಾದಗಳು

ಬರುತ್ತಿರಿ

ಸಾಗರದಾಚೆಯ ಇಂಚರ said...

ಸವಿಗನಸು ಮಹೇಶ್ ಸರ್

ನಿಮ್ಮ ಹಾರೈಕೆಗೆ ವಂದನೆಗಳು

ನಿಮ್ಮೆಲ್ಲರ ಮನದ ಹಾರೈಕೆ ನಿಜವಾಗಲಿ

ಸಾಗರದಾಚೆಯ ಇಂಚರ said...

Dear Santhosh

thanks for your nice words,

indeed we have to pray for him

ಸಾಗರದಾಚೆಯ ಇಂಚರ said...

ಅನಂತರಾಜ್ ಸರ್

ನಿಮ್ಮ ಹಾರೈಕೆಗೆ ವಂದನೆಗಳು

ಅವನ ಸ್ನೇಹ ಬಹಳ ದೊಡ್ಡದು

ಸಾಗರದಾಚೆಯ ಇಂಚರ said...

Dr.D.T.krishna Murthy. ಸರ್

ದಿ ವಿ ಜಿ ಅವರಷ್ಟು ಎಂದು ಹೇಳಿದ್ದಕ್ಕೆ ನನಂಗೆ ಸಂತಸವಾಯಿತು,

ಅವರ ಹತ್ತಿರ ನಿಲ್ಲುವ ಸಾಮರ್ಥ್ಯ ನಮಗೆ ಬಾಳಲ್ಲೇ ಬರಲು ಸಾದ್ಯವಿಲ್ಲ ಬಿಡಿ

ನಿಮ್ಮ ಪ್ರೀತಿಯ ಹಾರೈಕೆಗೆ ವಂದನೆಗಳು

ಬರುತ್ತಿರಿ

ಸಾಗರದಾಚೆಯ ಇಂಚರ said...

ಶಿವೂ ಸರ್

ನಿಜ, ನಿಮಗೆ ಅದರ ಬಗ್ಗೆ ಹೇಳಿದ್ದೆ,
ನಾನು ಕೆಲಸ ಮಾಡುತ್ತಿರುವುದು ಅದೇ ಕಂಪನಿಗೆ

ಇದೀಗ ಆತನ ಕುಟುಂಬ ಕಳೆದು ಹೋಗಿದೆ,

ಬೇಗ ಸಿಗಲಿ ಎಂಬ ಹಾರೈಕೆ

ಸಾಗರದಾಚೆಯ ಇಂಚರ said...

Pradeep ರಾವ್ ಸರ್

ನಿಮ್ಮ ಮಾತುಗಳಿಗೆ ಧನ್ಯವಾದ

ಖಂಡಿತ ನಿಮ್ಮ ಬ್ಲಾಗ್ ಗೆ ಬರುತ್ತೇನೆ,

ತಡವಾಗಿರುವುದಕ್ಕೆ ಕ್ಷಮೆ ಇರಲಿ

ಸಾಗರದಾಚೆಯ ಇಂಚರ said...

ದಿನಕರ ಮೊಗೇರ ಸರ್

ನಿಮ್ಮ ಪ್ರೀತಿಯ ಹಾರೈಕೆಗೆ ವಂದನೆಗಳು

ನಿಮ್ಮಂತವರ ಹಾರೈಕೆ ಬೇಕೇ ಬೇಕು

ಸಾಗರದಾಚೆಯ ಇಂಚರ said...

ಸೀತಾರಾಮ. ಕೆ. / SITARAM.ಕ ಸರ್

ಧನ್ಯವಾದಗಳು

ಬರ್ತಾ ಇರಿ

ಸಾಗರದಾಚೆಯ ಇಂಚರ said...

ashokkodlady

ನೀವು ಹೇಳಿದ್ದು ನಿಜ,
ಕವನದ ಸಾಲುಗಳನ್ನು ಸರಿಯಾಗಿಯೇ ಹೇಳಿದ್ದಿರಿ

ಬದುಕು ಹಾಗೆ ಇದ್ದಾರೆ ಚೆನ್ನ ಅಲ್ಲವೇ.

ಬರುತ್ತಿರಿ

ಸಾಗರದಾಚೆಯ ಇಂಚರ said...

ಸುಧೇಶ್ ಶೆಟ್ಟಿ ಸರ್

ಬೇಸರ ತುಂಬಾ ಆಗಿದೆ

ಬದುಕು ನಶ್ವರ ಎನ್ನುವುದು ಇದಕ್ಕೆ ಅಲ್ಲವೇ/

ಬರುತ್ತಿರಿ

V.R.BHAT said...

ಲೇಖನ ಕವನ ಪೂರಕವಾಗಿವೆ, ಕುಟುಂಬದವರು ಬೇಗ ಒಂದಾಗಲಿ.

Guruprasad said...

ಬದುಕು ... ಜೀವನ,,,, ಇಸ್ಟೇ ಅಲ್ವ..... ತುಂಬಾ ಕಷ್ಟ ಇದೆ......
ಅವರ ಕುಟುಂಬ ಬೇಗ ಒಂದಾಗಲಿ...... ನಿಮ್ಮ ಕೊನೆಯ ಸಾಲುಗಳು,,, ತುಂಬಾ ಚೆನ್ನಾಗಿ ಇದೆ.....

Girish Hegde said...

ಕೆಲವೇ ಸಾಲುಗಳಲ್ಲಿ ಹೃದಯ ಮುಟ್ಟುವ ಸಂದೇಶವಿದೆ. ನಾವು ಯಾಕೆ ಪ್ರೀತಿ ಗಳಿಸಬೇಕು ಎನ್ನುವುದಕ್ಕೆ ಕಾರಣವಿದೆ. Thank u.

Vinay Hegde said...

aa parivaara matte ondaagali endu aashisona.. maanava ella tanna hiditadallide endu estu beeguttaane...adakke prakrutiya uttara vipareeta ennalu idakkita udaaharane beke..??? :(