Sunday, June 27, 2010

ತೇಲಿ ಹೋಗದಂತೆ ಬದುಕು




ಸಖ ನಿನ್ನ ಪ್ರೇಮರಸವ
ಸುಖಿಯಾಗಿ ಉಂಡೆ ನಾನು
ದುಡುಕಿ ಹೋಗದಂತೆ ಬದುಕು
ದಡಕೆ ತಂದ ನಾವಿಕ ನೀನು

ಮಧುರ ವೀಣೆ ತಂತಿ ಮೀಟಿ
ಮನಸು ಹಾರದಂತೆ ದಾಟಿ
ತೇಲಿ ಹೋಗದಂತೆ ಬದುಕು
ಹಿಡಿದು ತಂದ ನಾವಿಕ ನೀನು

ನೊಂದ ಭಾವ, ಬೆಂದ ಜೀವ
ಅಲೆಯುತಿರುವ ಭಾವ ಸೆಲೆಯ
ಬಾಡಿ ಹೋಗದಂತೆ ಬದುಕು
ಅರಳುವಂತೆ ಮಾಡಿದೆ ನೀನು

ಯಾವ ಹುತ್ತ, ಯಾವ ಹಾವು
ಯಾರ ಬಾಳು, ಯಾರ ಸಾವು
ಬಾರದೆಡೆಗೆ ಹೊರಟು ನಿಂತ
ಬಳಿಗೆ ಕರೆದ ರಕ್ಷಕ ನೀನು


103 comments:

AntharangadaMaathugalu said...

ಗುರು ಸಾರ್..
"ನೊಂದ ಭಾವ, ಬೆಂದ ಜೀವ
ಅಲೆಯುತಿರುವ ಭಾವ ಸೆಲೆಯ
ಬಾಡಿ ಹೋಗದಂತೆ ಬದುಕು
ಅರಳುವಂತೆ ಮಾಡಿದೆ ನೀನು"....ಸಾಲುಗಳು ತುಂಬಾ ಇಷ್ಟವಾಯಿತು.... ಎಷ್ಟೊಂದು ಭಾವನೆಗಳು ಸರಳ ಪದಗಳ ಈ ಮೂರು ಸಾಲಿನಲ್ಲಡಗಿವೆ... ಚೆನ್ನಾಗಿದೆ...

ಶ್ಯಾಮಲ

ಚುಕ್ಕಿಚಿತ್ತಾರ said...

nice feelings..

ಬಾಲು ಸಾಯಿಮನೆ said...

nice photo, also,

ಮನಸು said...

tumba chennagide

ಭಾಶೇ said...

ಚೆನ್ನಾಗಿದೆ. ಇದು ನಿಮ್ಮ ಪತ್ನಿಯ ಕುರಿತಾದ ಕವನವೇ?
ಹಾಗಾದರೆ ಅದ್ಭುತ! ಆಕೆಗಿಷ್ಟು ಸಮ್ಮಾನ ನೀಡಿದ್ದಕ್ಕೆ

Ganapati Bhat said...

Chennagiddo :)

ವಾಣಿಶ್ರೀ ಭಟ್ said...

nice words..

ಕ್ಷಣ... ಚಿಂತನೆ... said...

ಗುರು ಅವರೆ,
ಕವನ ತುಂಬಾ ಚೆನ್ನಾಗಿದೆ.. ಅದರಲ್ಲಿಯೂ ಮೂರನೇ ಪ್ಯಾರಾ ಅರ್ಥಪೂರ್ಣವಾಗಿದೆ.
ಸ್ನೇಹದಿಂದ,

yogish bhat said...

ಕವನ ಚೆನ್ನಾಗಿದೆ.ಯೋಗೀಶ್

Subrahmanya said...

ಸುಗಸಾದ ಅಭಿವ್ಯಕ್ತಿ. ಉತ್ತಮ ಕವನ.

PARAANJAPE K.N. said...

ಕವನ ತು೦ಬಾನೆ ಚೆನ್ನಾಗಿದೆ ಗುರೂ

nenapina sanchy inda said...

ಕವನ ತುಂಬ ತುಂಬ ಚೆನ್ನಾಗಿದೆ ಗುರುಮೂರ್ತಿಯವರೆ.
:-)
ಮಾಲತಿ ಎಸ್.

ಸೀತಾರಾಮ. ಕೆ. / SITARAM.K said...
This comment has been removed by the author.
ಸೀತಾರಾಮ. ಕೆ. / SITARAM.K said...

ತು೦ಬಾ ಭಾವಪೂರ್ಣವಾಗಿ ಸಂಗಾತಿಯ ಪ್ರಾಮುಖ್ಯತೆಯ ತಿಳಿಸುವ ಕವನ ರೂಪ ಮನಸ್ಸನ್ನು ಮುದಗೊಳಿಸಿತು. ದನ್ಯವಾದಗಳು.
ಆದರೆ ಮೊದಲ ಪ್ಯಾರದಲ್ಲಿ "ನೀನು" ಇಟ್ಟು ಬೇರೆ ಎಲ್ಲಾ ಪ್ಯಾರಗಳಲ್ಲಿ ನೀನು ತೆಗೆದು ಶೀರ್ಷಿಕೆಯಲ್ಲಿ "ಸ೦ಗಾತಿ ನೀನು...." ಎ೦ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನನ್ನ ವೈಯುಕ್ತಿಕ ಅನಿಸಿಕೆ.

Guruprasad said...

ವೌ... ಸೂಪರ್ ಕವನ ಸರ್,,, ತುಂಬಾ ಚೆನ್ನಾಗಿ ಇದೆ....

jithendra hindumane said...

ಗುರುಮೂರ್ತಿಯವರೇ ಕವನ ಚೆನ್ನಾಗಿದೆ...

ದಿನಕರ ಮೊಗೇರ said...

ನೊಂದ ಭಾವ, ಬೆಂದ ಜೀವ
ಅಲೆಯುತಿರುವ ಭಾವ ಸೆಲೆಯ
ಬಾಡಿ ಹೋಗದಂತೆ ಬದುಕು
ಅರಳುವಂತೆ ಮಾಡಿದೆ ನೀನು

ಸುಂದರ ಭಾವಾಭಿವ್ಯಕ್ತಿ ಸರ್...... ತುಂಬಾ ಚೆನ್ನಾಗಿದೆ......

V.R.BHAT said...

ಆಳದ ಭಾವಕ್ಕೆ ಕೊಂಚವೂ ಇಲ್ಲ ಅಭಾವ! ನಿಮ್ಮ ಭಾವನಾ ಪೂರಿತ ಕವನ, ಅರಳಿಸಿತು ಮನ, ನಿಮಗೆ ನಮನ

Ash said...

Yaavudo Kuvempuravara kavana oduththiddanthe annisithu..... Thumba artha poorna vaagide..... U R A G!!!!!! God Bless :-)

Ash....
(http://asha-oceanichope.blogspot.com/)

Guruprasad . Sringeri said...

ಚೆನ್ನಾಗಿದೆ ಸಾರ್... ಒಳ್ಳೇ ಭಾವನೆಗಳನ್ನು ವ್ಯಕ್ತಪಡಿಸಿದ್ದೀರಿ.

ದಿವ್ಯಾ ಮಲ್ಯ ಕಾಮತ್ said...

ಸೊಗಸಾದ ಕವನ :-)

balasubramanya said...

ಕವಿತೆ ತುಂಬಾ ಚೆನ್ನಾಗಿ ಮೂಡಿಬಂದಿದೆ , ಚಂದದ ಚಿತ್ರ ಅದರ ಅಂದ ಹೆಚ್ಚಿಸಿದೆ.

ತೇಜಸ್ವಿನಿ ಹೆಗಡೆ said...

ಸುಂದರ ಕವಿತೆ. ಇಷ್ಟಾತು :)

Nivedita Thadani said...

ತುಂಬಾ ಚೆನ್ನಾಗಿ ಬರೆದಿದ್ದೀರಾ.
ನನ್ನ್ನ ಬ್ಲಾಗ್ ವಿಸಿಟ್ ಮಾಡಿ, ಪ್ರತಿಕ್ರಿಯೆ ಕೊಟ್ಟದ್ದಕ್ಕಾಗಿ ಧನ್ಯವಾದಗಳು. ಬರುತ್ತಾ ಇರಿ.

Uday Hegde said...

Super kavana sir...

SANTOSH MS said...

Sir, the concept is very good

Shashi jois said...

ಭಾವನಾತ್ಮಕವಾದ ಕವನ ಚೆನ್ನಾಗಿದೆ ಗುರು ..

Bhat Chandru said...

Sarala padagalu, mana naatuva saalugalu, chennagide Guru avare

ಸಾಗರಿ.. said...

ಕವನ ತುಂಬಾ ಚೆನ್ನಾಗಿದೆ, ಭಾವ ಸ್ಪರ್ಶಿ. ಕವನಕ್ಕೊಪ್ಪುವ ಚಿತ್ರ.

sachin said...

VERY NICE GURUJI

shravana said...

ನುಡಿಗಳು ಚೆನ್ನಾಗಿವೆ.. ಕವನದ ಭಾವ ಇಷ್ಟವಾಯಿತು..

shivu.k said...

ಗುರುಮೂರ್ತಿ ಸರ್,

ಸಖಿಯ ಭಾವನೆಗಳಿಗೆ ಕವನದ ರೂಪಕೊಟ್ಟಿದ್ದೀರಿ. ಭಾವಪೂರ್ಣ ಕವನ.

ಅನಂತ್ ರಾಜ್ said...

ನಿಮ್ಮ ಕವನದ ಸಾಲುಗಳು "ಮಧುರ ವೀಣೆ ತಂತಿ ಮೀಟಿ ಮನಸು ಹಾರದಂತೆ ದಾಟಿ ತೇಲಿಹೋಗದ೦ತೆ ಬದುಕು ಹಿಡಿದು ತ೦ದ ನಾವಿಕ"..ಇದರಲ್ಲೊ೦ದು ಆಧ್ಯಾತ್ಮವಿದೆ ಅನ್ನಿಸಿತು. ಉತ್ತಮ ಕವನ ಗುರು ಅವರೆ. ಬರೆಯುತ್ತಿರಿ.

ಶುಭಾಶಯಗಳೊಡನೆ
ಅನ೦ತ್

ಅನಂತ್ ರಾಜ್ said...

ನಿಮ್ಮ ಕವನದ ಸಾಲುಗಳು " ಮಧುರ ವೀಣೆ ತಂತಿ ಮೀಟಿ ಮನಸು ಹಾರದಂತೆ ದಾಟಿ ತೇಲಿ ಹೋಗದಂತೆ ಬದುಕು ಹಿಡಿದು ತಂದ ನಾವಿಕ".. ಇದರಲ್ಲೊ೦ದು ಆಧ್ಯಾತ್ಮವನ್ನು ಗುರುತಿಸಿದೆ..ಉತ್ತಮವಾದ ಕವನ ಗುರು ಅವರೆ.. ಬರೆಯುತ್ತಿರಿ..
ಶುಭಾಶಯಗಳು
ಅನ೦ತ್

Ranjita said...

ಭಾವ ತುಂಬಿದ ಸಾಲುಗಳು ಚಂದದ ಕವನ ಗುರು ಅಣ್ಣ :)

ಮನಸಿನಮನೆಯವನು said...

ಸಾಗರದಾಚೆಯ ಇಂಚರ ,

ಕೊನೆಯ ಸಾಲುಗಳು ಇಷ್ಟವಾದವು..

ಪ್ರವೀಣ್ ಭಟ್ said...

Hi Gurumoorthanna..

idanna neenu hudgi antha kalpane madkondu .. priyatamana mele bareda kavana alda... estu chandaneya bhava

bereyavara jagadalli nintu chenda kalpane moodsidde

pravi

ಶಿವಪ್ರಕಾಶ್ said...

Nice one guru :)

Dr.D.T.Krishna Murthy. said...

ಸಖತ್ ಕವನ ಗುರು ಸರ್.ಪ್ರತಿಕ್ರಿಯೆ ತಡವಾದದಕ್ಕೆ ಕ್ಷಮೆ ಇರಲಿ.

ಸುಧೇಶ್ ಶೆಟ್ಟಿ said...

chennaagidhe kavana Guru avare...

ದೀಪಸ್ಮಿತಾ said...

ಭಾವಪೂರ್ಣವಾಗಿವೆ ಸಾಲುಗಳು

ಸಾಗರದಾಚೆಯ ಇಂಚರ said...

ಶ್ಯಾಮಲಾ ಮೇಡಂ
ನಿಮ್ಮ ಪ್ರೀತಿಯ ಹಾರೈಕೆಗೆ ಚಿರ ಋಣಿ
ಸದಾ ಪ್ರೋತ್ಸಾಹಿಸುತ್ತಿರಿ

ಸಾಗರದಾಚೆಯ ಇಂಚರ said...

ಚುಕ್ಕಿ ಚಿತ್ತಾರ

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

ಬಾಲು

ಥ್ಯಾಂಕ್ಸ್ ಕಣೋ
ಹಿಂಗೆ ಬರ್ತಾ ಇರು

ಸಾಗರದಾಚೆಯ ಇಂಚರ said...

ಮನಸು
ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ

ಸಾಗರದಾಚೆಯ ಇಂಚರ said...

ಭಾಶೆ
ಹೌದು, ನಿಮ್ಮ ಮಾತು ಸತ್ಯ
ಪತ್ನಿಯ ಕುರಿತಾದ ಕವನವೇ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

Gans

thanks for your comments
bartaa iru

ಸಾಗರದಾಚೆಯ ಇಂಚರ said...

ವಾಣಿಶ್ರೀ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಚಂದ್ರು ಸರ್
ನಿಮ್ಮೆಲ್ಲರ ಆಶಿರ್ವಾದ ಇದ್ದಾರೆ ಇನ್ನೂ ಹಲವು ಕವನ ಬರೆಯುತ್ತೇನೆ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಯೋಗಿಶ್
ನಿಮ್ಮ ಮಾತುಗಳಿಗೆ ಧನ್ಯವಾದ
ಬರುತ್ತಿರಿ

ಸಾಗರದಾಚೆಯ ಇಂಚರ said...

ಸುಬ್ರಮಣ್ಯ ಸರ್
ಪ್ರೀತಿ ಹೀಗೆಯೇ ಇರಲಿ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಮಾಲತಿ ಮೇಡಂ
ನಿಮ್ಮ ಪ್ರೋತ್ಸಾಹಕ್ಕೆ ಚಿರಋಣಿ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್
ಅಭಿಪ್ರಾಯಕ್ಕೆ ಧನ್ಯವಾದಗಳು
ನಿಮ್ಮೆಲ್ಲರ ಪ್ರೋತ್ಸಾಹವೇ ಪ್ರೇರಣೆ

ಸಾಗರದಾಚೆಯ ಇಂಚರ said...

ಸೀತಾರಾಂ ಸರ್
ನೀವು ಹೇಳೋದು ನಿಜ
ಆದರೆ ಸಂಗಾತಿ ನೀನು ಅನ್ನೋದು ಸ್ವಲ್ಪ ರಹಸ್ಯವಾಗಿರಲಿ ಅನ್ನೋದು ಕವನದ ಆಶಯ
ಅದರ ವ್ಯಾಪ್ತಿ ಓದುಗನಿಗೆ ಬಿಟ್ಟದ್ದು

ಸಾಗರದಾಚೆಯ ಇಂಚರ said...

ಗುರು
ಧನ್ಯವಾದಗಳು
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಜಿತೇಂದ್ರ ಸರ್
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ
ಸದಾ ಸ್ವಾಗತ

ಸಾಗರದಾಚೆಯ ಇಂಚರ said...

ದಿನಕರ್ ಸರ್
ನಿಮ್ಮೆಲ್ಲರ ಪ್ರೋತ್ಸಾಹ ಬರೆಯಲು ಪ್ರೇರೇಪಿಸಿದೆ
ಬರುತ್ತಿರಿ
ಬರೆಯುತ್ತಿರುವೆ

ಸಾಗರದಾಚೆಯ ಇಂಚರ said...

ವಿ ಅರ್ ಭಟ್ ಸರ್
ನಿಮ್ಮ ಕವನಪೂರಿತ ನಮನ
ಅರಳಿಸಿತು ನನ್ನ ಮನ
ಪ್ರೇರೇಪಿಸಿತು ಬರೆಯಲು ಇನ್ನೊಂದು ಕವನ
ನಿಮಗೆ ನನ್ನ ನಮನ

ಸಾಗರದಾಚೆಯ ಇಂಚರ said...

Ashkuku,
ನಿಮ್ಮ ಪ್ರೋತ್ಸಾಹಕ್ಕೆ ಚಿರಋಣಿ
ಕುವೆಂಪು ಅವರಂತ ಮಹಾನ್ ಕವಿ ಯ ಮುಂದೆ ನಾವೆಲ್ಲಾ ತೃಣ ಸಮಾನ
ಆದರೂ ನಿಮ್ಮಲ್ಲಿನ ಪ್ರೋತ್ಸಾಹ ಮನೋಭಾವ ಕ್ಕೆ ಧನ್ಯವಾದ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಗುರು ಪ್ರಸಾದ್ ಸರ್
ಪ್ರೀತಿ ಸದಾ ಇರಲಿ
ಬರ್ತಾ ಇರಿ

ಸಾಗರದಾಚೆಯ ಇಂಚರ said...

ದಿವ್ಯಾ
ತುಂಬಾ ತುಂಬಾ ಧನ್ಯವಾದಗಳು
ಬರ್ತಾ ಇರಿ

ಸಾಗರದಾಚೆಯ ಇಂಚರ said...

ನಿಮ್ಮೊಳಗೊಬ್ಬ,
ನಿಮ್ಮ ಪ್ರೀತಿಯ ಹಾರೈಕೆ ಪ್ರೋತ್ಸಾಹಕ್ಕೆ ಮೂಕನಾಗಿದ್ದೇನೆ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ತೇಜಸ್ವಿನಿ
ನಂಗೆ ರಾಶಿ ಖುಷಿ ಅತು
ಹಿಂಗೆ ಬರ್ತಾ ಇರು

ಸಾಗರದಾಚೆಯ ಇಂಚರ said...

ನಿವೇದಿತಾ
ಹೀಗೆಯೇ ಬರುತ್ತಿರಿ
ನಾನು ನಿಮ್ಮ ಬ್ಲಾಗ್ ಗೆ ಬರುತ್ತಿರುವೆ

ಸಾಗರದಾಚೆಯ ಇಂಚರ said...

ಉದಯ್
ತುಂಬಾ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

Santhosh
thanks for the comments

ಸಾಗರದಾಚೆಯ ಇಂಚರ said...

ಶಶಿ madam
ತುಂಬಾ ಸಂತೋಷ ಕಾಮೆಂಟಿಸಿದ್ದಕ್ಕೆ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಭಟ್ ಚಂದ್ರು ಸರ್
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಸಾಗರಿ
ನಿಮಗೆ ಇಷ್ಟವಾಗಿದ್ದಕ್ಕೆ ಸಂತೋಷ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಸಚಿ
ಥ್ಯಾಂಕ್ಸ್
ಬರ್ತಾ ಇರಿ

ಸಾಗರದಾಚೆಯ ಇಂಚರ said...

ಶ್ರಾವಣ
ನಿಮ್ಮ ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಶಿವೂ ಸರ್
ನಿಮ್ಮ ಪ್ರೀತಿಗೆ ಸದಾ ಋಣಿ
ಹೀಗೆ ಬರುತ್ತಿರಿ

ಸಾಗರದಾಚೆಯ ಇಂಚರ said...

ಅನಂತ್ ರಾಜ್ ಸರ್
ಆ ಸಾಲುಗಳಲ್ಲಿ ಸ್ವಲ್ಪ ಅಧ್ಯಾತ್ಮದ ಸ್ಪರ್ಶವಿದೆ ಎಂದಷ್ಟೇ ಹೇಳಬಲ್ಲೆ
ಕವನ ಓದುಗನಿಗೆ ಬಿಟ್ಟಾಗ ಬರುವ ಪ್ರತಿಕ್ರಿಯೆಯೇ ಬೇರೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ರಂಜಿತಾ
ಅಭಿಪ್ರಾಯಕ್ಕೆ ಥ್ಯಾಂಕ್ಸ್
ಬರ್ತಾ ಇರು

ಸಾಗರದಾಚೆಯ ಇಂಚರ said...

!! ಜ್ಞಾನಾರ್ಪಣಾಮಸ್ತು !!

ಧನ್ಯವಾದಗಳು

ಬರ್ತಾ ಇರಿ

ಸಾಗರದಾಚೆಯ ಇಂಚರ said...

ಪ್ರವೀಣ್
ನಿಜ ,
ಬೇರೊಬ್ಬರಲ್ಲಿ ಜಾಗದಲ್ಲಿ ಇದ್ದು ಕಲ್ಪನೆ ಮದ್ದು ಸ್ವಲ್ಪ ಕಷ್ಟ
ನಿನ್ನ ಸುಂದರ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಬರ್ತಾ ಇರು

ಸಾಗರದಾಚೆಯ ಇಂಚರ said...

ಶಿವಪ್ರಕಾಶ್

ಥ್ಯಾಂಕ್ಸ್
ಬರ್ತಾ ಇರಿ

ಸಾಗರದಾಚೆಯ ಇಂಚರ said...

ಡಾ ಕೃಷ್ಣಮೂರ್ತಿ ಸರ್
ತಡವಾಗಿಯಾದರೂ ಓದುತ್ತಿರಲ್ಲ ಅದೇ ದೊಡ್ಡ ಖುಷಿ
ಬರ್ತಾ ಇರಿ

ಸಾಗರದಾಚೆಯ ಇಂಚರ said...

ಸುಧೇಶ್ ಸರ್
ನಿಮ್ಮ ಪ್ರೀತಿ ಸದಾ ಇರಲಿ
ಬರ್ತಾ ಇರಿ

ಸಾಗರದಾಚೆಯ ಇಂಚರ said...

ದೀಪಸ್ಮಿತ
ನಿಮ್ಮ ಪ್ರೀತಿಯ ಅಭಿಪ್ರಾಯಕ್ಕೆ ಧನ್ಯವಾದಗಳು
ಬರುತ್ತಿರಿ

ಮನದಾಳದಿಂದ............ said...

ವಾವ್...........
ಗುರುಮೂರ್ತಿ ಸರ್,
ಸುಂದರ ಕವನ,
ತುಂಬಾ ಇಷ್ಟವಾಯ್ತು.

sunaath said...

ಗುರುಮೂರ್ತಿಯವರೆ,
ಕಣ್ಣುಪೊರೆಯ ಶಸ್ತ್ರಚಿಕಿತ್ಸೆಯಿಂದಾಗಿ blogಲೋಕಕ್ಕೆ ಬರಲಾಗಿರಲಿಲ್ಲ. ಇಂದು ಬಂದು ನೋಡಿದೆ. ನಿಮ್ಮ ಅದ್ಭುತ ಭಾವಗೀತೆ ಕಣ್ಣಿಗೆ ಬಿತ್ತು. ತುಂಬ ಖುಶಿಯಾಯ್ತು. ಅಭಿನಂದನೆಗಳು.

Namratha said...

ಹೆಣ್ಣಿನ ಸೂಕ್ಷ್ಮ ಭಾವನೆಗಳನ್ನು ತುಂಬಾ ಚೆನ್ನಾಗಿ ಹಿಡಿದಿಟ್ಟಿರುವಿರಿ... ಅವಳ ಆತಂಕ, ಸಂತೋಷ, ಧನ್ಯತೆ, ಸಮರ್ಪಕತೆ ತುಂಬಾ ಚೆನ್ನಾಗಿ ಮೂಡಿಬಂದಿದೆ.. ಈ ಪದ್ಯ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಮನದಾಳದಿಂದ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಪ್ರೋತ್ಸಾಹ ಹೀಗೆಯೇ ಇರಲಿ

ಸಾಗರದಾಚೆಯ ಇಂಚರ said...

ಸುನಾಥ್ ಸರ್
ಈಗ ಹೇಗಿದ್ದೀರಿ
ಶಸ್ತ್ರ ಚಿಕಿತ್ಸೆಯೆಲ್ಲ ಸುರಳೀತ ವಾಗಿ ಆಯಿತಲ್ಲವೇ?
ಬ್ಲಾಗ್ ಲೋಕ್ಕಕ್ಕೆ ಮತ್ತೆ ನಿಮ್ಮ ಆಗಮನ ಸಂತಸ ತಂದಿದೆ
ನಿಮ್ಮ ಅಶಿರ್ವಾದವೇ ಶ್ರೀರಕ್ಷೆ

ಸಾಗರದಾಚೆಯ ಇಂಚರ said...

ನಮ್ರತಾ
ಹೆಣ್ಣಿನ ಭಾವನೆಗಳೇ ಹಾಗೆ,
ಅದು ಹಿಡಿದಿಡಲು ಪ್ರಯತ್ನಿಸಿದಷ್ಟೂ ಕ್ಲಿಷ್ಟವಾಗುತ್ತ ಹೋಗುತ್ತದೆ
ನಿಮ್ಮ ಸುಂದರ ಪ್ರತಿಕ್ರಿಯೆಗೆ ಪ್ರೋತ್ಸಾಹಕ್ಕೆ ಧನ್ಯವಾದಗಳು
ಬರುತ್ತಿರಿ

Mohan Hegade said...

Guru dost,

Porlu undu erena padya ava.

barpe guruve,

Mohan Hegade

Anonymous said...

ee kavite tumba ishtavaaytu..

Ranjith

Manju M Doddamani said...

ತುಂಬಾ ಚನ್ನಾಗಿದೆ ಸರ್ :)

http://manjukaraguvamunna.blogspot.com/

ನಾಗರಾಜ್ .ಕೆ (NRK) said...

"ಯಾವ ಹುತ್ತ, ಯಾವ ಹಾವು
ಯಾರ ಬಾಳು, ಯಾರ ಸಾವು
ಬಾರದೆಡೆಗೆ ಹೊರಟು ನಿಂತ
ಬಳಿಗೆ ಕರೆದ ರಕ್ಷಕ ನೀನು"
Guru sir, excellent poem.
and i like quoted lines the most
thanks u.

Raghu said...

ಸೂಪರ್.
ಯಾವ ಹುತ್ತ, ಯಾವ ಹಾವುಯಾರ ಬಾಳು,
ಯಾರ ಸಾವುಬಾರದೆಡೆಗೆ ಹೊರಟು ನಿಂತಬಳಿಗೆ ಕರೆದ ರಕ್ಷಕ ನೀನು..
ತುಂಬಾ ಇಷ್ಟವಾದ ಸಾಲುಗಳು.
ನಿಮ್ಮವ,
ರಾಘು.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಕವನ ತುಂಬ ತುಂಬ ಚೆನ್ನಾಗಿದೆ ಗುರುಮೂರ್ತಿಯವರೆ.
ಒಳ್ಳೇ ಭಾವನೆಗಳನ್ನು ವ್ಯಕ್ತಪಡಿಸಿದ್ದೀರಿ.
ಭಾವಪೂರ್ಣ ಕವನ.
ಕವನದ ಭಾವ ಇಷ್ಟವಾಯಿತು..

Snow White said...

tumba chennagive sir saalugalu :) tumba ista aitu :)

ಸಾಗರದಾಚೆಯ ಇಂಚರ said...

ಮೋಹನ್
ನಿನ್ಕಲ್ ಮೆಸೇಜ್ edde ಉಂಡು

ಸಾಗರದಾಚೆಯ ಇಂಚರ said...

ನೀಲಿಹೂವು
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಬರುತ್ತಿರಿ

ಸಾಗರದಾಚೆಯ ಇಂಚರ said...

ಮಂಜು ಸರ್
ಧನ್ಯವಾದಗಳು ಅಭಿಪ್ರಾಯಕ್ಕೆ
ಬರುತ್ತಿರಿ

ಸಾಗರದಾಚೆಯ ಇಂಚರ said...

NRK,

thanks for your valuable comments

heegeye bartaa iri

ಸಾಗರದಾಚೆಯ ಇಂಚರ said...

ರಘು ಸರ್
ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರಲಿ
ಬರುತ್ತಿರಿ, ಬರೆಯುತ್ತಿರುವೆ

ಸಾಗರದಾಚೆಯ ಇಂಚರ said...

ವೆಂಕಟಕೃಷ್ಣ ಸರ್
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ನೀವು ಓದುಗರೇ ಬರೆಯಲು ಸ್ಪೂರ್ತಿ

ಸಾಗರದಾಚೆಯ ಇಂಚರ said...

Snow white,
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಕವನ ಇಷ್ಟವಾದರೆ ಕವಿಗೆ ಸಂತಸ

Unknown said...

ಭಾವ ಪೂರ್ಣ ಕವನ

ಸಾಗರದಾಚೆಯ ಇಂಚರ said...

Gopinath sir

thank you

ಡಾ. ಚಂದ್ರಿಕಾ ಹೆಗಡೆ said...

yee nange bendre sakhi geeta nenpaatuu.
sakhi sakhyada aakhyaana kathu madhura vyakhyana dodaguudi vivarisale/...... hinge salugalu....