Monday, October 26, 2009

ಮದುಮಗಳು




ಮಲೆನಾಡಿನ ಮೈದಳೆವ ವನಸಿರಿ 
ಮೈತುಂಬಿ ಮೆರೆದಾಡುವ ಹಸಿರ ಗಿರಿ 
ಮದವೇರಿದ ಮದನಾರಿಯ ಚೆಲುವ ಪರಿ 
ಮುತ್ತನ್ನೇ ಮೆತ್ತಿರುವ ಹರಿಯುವ ಝರಿ


ಶರಾವತಿ ಜೋಗದಲಿ ಹರಿಯುವ ಸೊಬಗು 
ಬನವಾಸಿಯ ಮಧುಕೇಶ್ವರ ಪಂಪನ ಬೆರಗು 
ಸುತ್ತ ಮರವು ಲತೆಗಳೆಲ್ಲ ನಾಚಿಸೋ ಯಾಣ
ಮಾಡು ಒಮ್ಮೆ ಮಲೆನಾಡಿಗೆ ತಪ್ಪದೆ ಪಯಣ


ಕವಿಗಳೆಲ್ಲ ಹುಟ್ಟಿ ಬೆಳೆದ ಆದರ್ಶದ ತಾಣ 
ರಾಷ್ಟ್ರ ಬೆಳಗೋ ದಿಗ್ಗಜರಿಗೆ ನಮ್ಮಯ ನಮನ 
ಭೂಮಿತಾಯಿ ಪ್ರೀತಿ ಮಗಳು ಇರುವಳು ಇಲ್ಲಿ 
ಮನಸ ಸೂರೆ ಮಾಡ್ವ ಸೋದೆ ಸ್ವರ್ಣವಲ್ಲಿ


ಎಲ್ಲ ಇಲ್ಲಿ ಒಂದೆ ಎಂಬ ಭಾವನೆ ಇರಲು 
ಯಾರೇ ಬಂದರೂ ಭತ್ತದ ಪ್ರೀತಿಯ ಕಡಲು 
ಇತಿಹಾಸದ ಗತ ವೈಭವ ಇಲ್ಲಿಯ ಒಡಲು 
ದೈವ ಭಕ್ತಿ ತುಂಬಿರುವ ಸೇವೆಯ ಅಳಿಲು


ಸಿರಸಿಯ  ಶ್ರೀ  ಮಾರಿಕಾಂಬೆ  ನಿನಗೆ  ವಂದನೆ 
ಮಂಜುಗುಣಿ  ದೇವನಿಗೆ  ಅಭಿವಂದನೆ 
ಮುಕ್ಕೋಟಿ  ದೇವತೆಗಳ  ಪ್ರೇಮದರಮನೆ 
ಮಲೆನಾಡಿನ  ಸೊಬಗು  ಸವಿಯೋ  ಒಮ್ಮೆ  ಸುಮ್ಮನೆ

49 comments:

Mohan said...

ಬಹಳ ಚೆನ್ನಾಗಿದೆ ನಿಮ್ಮ ಕವಿತೆ. ಮಲೆನಾಡ ಸೊಬಗನ್ನು ಬಣ್ಣಿಸಲು ಪದಗಳು ಸಲುವುದಿಲ್ಲವೆಂಬ ತರ್ಕಕ್ಕೆ ನಿಮ್ಮ ಕವಿತೆಯೇ ಸಾಕ್ಶಿ!

shivu.k said...

ಗುರುಮೂರ್ತಿ ಸರ್,

ಕವನ ತುಂಬಾ ಚೆನ್ನಾಗಿದೆ. ಮತ್ತು ಅದಕ್ಕೆ ತಕ್ಕಂತೆ ಸಾಗರ ಸುಂದರಿ ಫೋಟೊ ಕೂಡ.

ಮನಸು said...

wow!!! tumba chennagide...malenaada siri bloginalli..

ಸಾಗರದಾಚೆಯ ಇಂಚರ said...

ಮೋಹನ ಸರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಮಲೆನಾಡಿನ ಸೊಬಗು ವರ್ಣಿಸಲು ಪದಗಳೇ ಸಿಗದ ಅವಿಚ್ಛಿನ್ನ ಬಂಗಾರ,
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಶಿವೂ ಸರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಇಷ್ಟವಾಗಿದ್ದಕ್ಕೆ ನನಗೂ ಸಂತೋಷ,
ಹೀಗೆಯೇ ಪ್ರೋತ್ಸಾಹಿಸುತ್ತಿರಿ , ಒಮ್ಮೆ ಮಲೆನಾಡಿಗೆ ಬನ್ನಿ

sunaath said...

ಕವನದ ಶೀರ್ಷಿಕೆಯೇ ನನ್ನ ಮನ ಸೆಳೆಯಿತು. ಓದಿದ ಮೇಲೆ, ಶೀರ್ಷಿಕೆ ಸಾರ್ಥಕವೆನಿಸಿತು. ಮಲೆನಾಡಿನ ಸೊಬಗನ್ನು ಕವನದಲ್ಲಿ ತುಂಬಾ ಚೆನ್ನಾಗಿ ಸೆರೆ ಹಿದಿದಿದ್ದೀರಿ.

ಸಾಗರದಾಚೆಯ ಇಂಚರ said...

ಮನಸು,
ಕಾಮೆಂಟಿಸಿದ್ದಕ್ಕೆ ಥ್ಯಾಂಕ್ಸ್,
ಮಲೆನಾಡಿಗೆ ಸದಾ ಸ್ವಾಗತ

ಸಾಗರದಾಚೆಯ ಇಂಚರ said...

ಸುನಾಥ ಸರ್,
ಮಲೆನಾಡಿಗೆ ಸಾಟಿ ಮಲೆನಾದೇ ಅಲ್ಲವೇ?
ಎಷ್ಟೊಂದು, ನದಿ, ಜಲಪಾತ, ಕಾಡು, ಅಬಬ್ಬಬ್ಬ
ಏನು ಅಂತ ಹೇಳಲಿ ಅದರ ಬಗ್ಗೆ

Unknown said...

hi guruanna.....koneya 4 salu thumbha channagiddu......super kavana......

ಸವಿಗನಸು said...

ಗುರು,
ಕವನ ತುಂಬಾ ಸೊಗಸಾಗಿದೆ....
ಅಭಿನಂದನೆಗಳು.....

ಸುಮ said...

ಚೆನ್ನಾಗಿದೆ ಕವಿತೆ.ಇದು ನಮ್ಮ ಮಲೆನಾಡು ಎಂದು ಹೆಮ್ಮೆ ಪಡಲು ಎಷ್ಟೊಂದು ಕಾರಣಗಳಿವೆಯಲ್ಲವೆ!

ಕ್ಷಣ... ಚಿಂತನೆ... said...

ಗುರು ಅವರೆ, ಮಲೆನಾಡಿನ ಸೊಬಗನ್ನು ತುಂಬಾ ಸುಂದರವಾಗಿ, ಸುಮಧುರವಾಗಿ ತಿಳಿಸಿದ್ದೀರಿ. ಕವಿತೆಯ ಸೊಬಗು ಮಲೆನಾಡಿನಲ್ಲಿ ಸುತ್ತಾಡಿಸುತ್ತದೆ. ಫೋಟೋ ಸಹ...

ಸೀತಾರಾಮ. ಕೆ. / SITARAM.K said...

cute

ಸಾಗರದಾಚೆಯ ಇಂಚರ said...

ದೀಪಿಕಾ
ಇಷ್ಟ ಆಗಿದ್ದಕ್ಕೆ ಥ್ಯಾಂಕ್ಸ್,
ಹಿಂಗೆ ಬರ್ತಾ ಇರು

ಸಾಗರದಾಚೆಯ ಇಂಚರ said...

ಸವಿಗನಸು
ಮಲೆನಾಡೇ ಹಾಗೆ,
ಇಷ್ಟಾ ಆಗೇ ಆಗುತ್ತೆ,
ಕವನ ಇಷ್ಟ ಆಗಿದ್ದಕ್ಕೆ ನಂಗೆ ಹೆಮ್ಮೆ

ಸಾಗರದಾಚೆಯ ಇಂಚರ said...

ಸುಮಾ
ನಿಜ,
ನಮ್ಮ ಸರ್ಕಾರದ ನಿರ್ಲಕ್ಷ ಮನೋಭಾವದಿಂದ ನಮ್ಮ
ಮಲೆನಾಡು ಇನ್ನೂ ಅಂತರಾಷ್ಟ್ರೀಯ ಪ್ರವಾಸೀ ತಾಣವಾಗಿಲ್ಲ,
ಏನಿದೆ ಏನಿಲ್ಲ ಅಲ್ಲವಾ?

ಸಾಗರದಾಚೆಯ ಇಂಚರ said...

ಕ್ಷಣ ಚಿಂತನೆ ಸರ್,
ಮಲೆನಾಡಿನ ಸೊಬಗಿನ ಒಂದು ತುಣುಕನ್ನು ಸೆರೆ ಹಿಡಿದೆ ಅಷ್ಟೇ,
ಸಂಪೂರ್ಣ ಸೆರೆ ಹಿಡಿಯೋಕೆ ಯುಗಾನೆ ಬೇಕಾಗುತ್ತೆ

ಸಾಗರದಾಚೆಯ ಇಂಚರ said...

ಥ್ಯಾಂಕ್ಸ್ ಸೀತಾರಾಮ ಸರ್

ದಿನಕರ ಮೊಗೇರ said...

ಗುರು ಸರ್,
ಮಲೆನಾಡನ್ನು ವರ್ಣಿಸಿದ್ದಕ್ಕೆ ಧನ್ಯವಾದಗಳು...... ಕವನ ತುಂಬಾ ಸೊಗಸಾಗಿತ್ತು... ಮಲೆನಾಡಿನ ಹಾಗೆ.....

ಸಾಗರದಾಚೆಯ ಇಂಚರ said...

ದಿನಕರ ಸರ್,
ಮಲೆನಾಡಿನ ಕವನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು,
ಮಲೆನಾಡು ಇಷ್ಟ ಆಗಿದ್ದಕ್ಕೆ ನನಗೆ ಹೆಮ್ಮೆ ಯಾಕಂದ್ರೆ ನಾನು
ಮಲೆನಾಡಿನವನೆ ಆಗಿದ್ದಕ್ಕೆ

ದಿನಕರ ಮೊಗೇರ said...

ಗುರು ಸರ್,
ನಾನು ನಿಮ್ಮವನೇ, ಹ್ಯಾಗಂದ್ರೆ ನನ್ನ ಊರು ಮಲೆನಾಡ ಪಕ್ಕದ ಕರಾವಳಿಯ ಭಟ್ಕಳ..........

Me, Myself & I said...

ಆತ್ಮೀಯ
ಇಷ್ಟ ಆಯ್ತು

ಸಾಗರದಾಚೆಯ ಇಂಚರ said...

ದಿನಕರ ಸರ್,
ನಾನು ಕೆಲವು ವರ್ಷದ ಹಿಂದೆ ಶಿರಾಲಿಯಲ್ಲಿ ಇದ್ದೆ ಸುಮಾರು ೨ ವರುಷ

ಸಾಗರದಾಚೆಯ ಇಂಚರ said...

ಲೋದ್ಯಾಶಿಯವರೇ,
ಹೀಗೆ ಬರ್ತಾ ಇರಿ

ಮುಸ್ಸ೦ಜೆ said...

ಮಲೆನಾಡ ಗುಣಗಾನ ಸೊಗಸಾಗಿ ಮೂಡಿಬ೦ದಿದೆ.. ಧನ್ಯವಾದಗಳು :)

ದಿನಕರ ಮೊಗೇರ said...

ಗುರು ಸರ್,
ಶಿರಾಲಿ ಎಂದರೆ ತುಂಬಾ ಹತ್ತಿರ ನಮಗೆ, ಸುಮಾರು ೧೦ ಕಿಲೋ ಮೀಟರ್ ಅಸ್ತೆ.... ನನ್ನ ಊರು ತೆಂಗಿನಗುಂಡಿ ಅಂತ.... ನನ್ನ ಆರ್ಕುಟ್ ನಲ್ಲಿ ನನ್ನೂರಿನ ಸನ್ ಸೆಟ್ ಫೋಟೋ ಹಾಕಿದ್ದೇನೆ.... ನೋಡಿ ಹಳೆಯ ನೆನಪು ಮಾಡಿಕೊಳ್ಳಿ....

Snow White said...

ತುಂಬ ಚೆನ್ನಾಗಿದೆ ಸರ್ ನಿಮ್ಮ ಕವಿತೆ :)ಬಹಳ ಇಷ್ಟವಾಯಿತು :)

ಸಾಗರದಾಚೆಯ ಇಂಚರ said...

ಮುಸ್ಸಂಜೆ ಇಂಪು,
ಮಲೆನಾಡ ಸೌಂದರ್ಯವೇ ಹಾಗೆ,
ಸಾಲದಷ್ಟು ಸುಂದರಿ ಅದು

ಸಾಗರದಾಚೆಯ ಇಂಚರ said...

snow white,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ದಿನಕರ್ ಸರ್,
ಖಂಡಿತ ಫೋಟೋ ನೋಡ್ತೀನಿ,
ಬರ್ತಾ ಇರಿ

ಬಿಸಿಲ ಹನಿ said...

ಶಿರಸಿಯ ಸೊಬಗನ್ನು ಕವನದಲ್ಲಿ ತುಂಬಾ ಚನ್ನಾಗಿ ಮೂಡಿದೆ.

ಸಾಗರದಾಚೆಯ ಇಂಚರ said...

ಬಿಸಿಲ ಹನಿ ಉದಯ್ ಸರ್,
ತುಂಬಾ ತುಂಬಾ ಥ್ಯಾಂಕ್ಸ್ ಕಾಮೆಂಟಿಸಿದ್ದಕ್ಕೆ

Ittigecement said...

ಗುರುಮೂರ್ತಿಯವರೆ...

ನಿಮ್ಮ ಈ ಕವನ ತುಂಬಾ ಚೆನ್ನಾಗಿದೆ...

ಎಲ್ಲ ಸೊಬಗುಗಳನ್ನು..
ವೈಭವಗಳನ್ನು ಮೆಲುಕು ಹಾಕಿಸಿದ್ದಿರಿ...
ಸುಂದರ ಶಬ್ಧಗಳಲ್ಲಿ ಬಿಡಿಸಿಟ್ಟಿದ್ದೀರಿ...

ಅಭಿನಂದನೆಗಳು...

ದಿವ್ಯಾ ಮಲ್ಯ ಕಾಮತ್ said...

ಗುರು ಸರ್,
ನಿಮ್ಮ ಕವನ ಚೆನ್ನಾಗಿದೆ...
'ಮದುಮಗಳು' ಅನ್ನುವುದು ಸರಿಯಾದ ಪದ ಪ್ರಯೋಗ ಎಂದು ನನ್ನ ಅನಿಸಿಕೆ.. ದಯವಿಟ್ಟು ಒಮ್ಮೆ ಪರಿಶೀಲಿಸಿ.

ಸುಧೇಶ್ ಶೆಟ್ಟಿ said...

ಗುರುಮೂರ್ತಿಯವರೇ....

ಮಲೆನಾಡೇ ಮೈವೆತ್ತಿ ನಿ೦ತಿದೆ ನಿಮ್ಮ ಕವನದಲ್ಲಿ.... ತು೦ಬಾ ಇಷ್ಟ ಆಯಿತು...

ತೇಜಸ್ವಿನಿ ಹೆಗಡೆ said...

ಆಹಾ ನಮ್ಮೂರ ಸೊಬಗ ವರ್ಣನೆ ಕೇಳಿ ಒಮ್ಮೆ ಅಲ್ಲಿಗೇ ಹೋಗಿ ಬಂದಂತಾತು. ಲಾಲಿತ್ಯಪೂರ್ಣ ಸುಂದರ ಕವನ.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ನಮ್ಮ ಮಲೆನಾಡಿನ ಗುಣವೇ ಹಾಗಲ್ಲವೇ,
ಅದೊಂದು ವರ್ಣಿಸಲು ಶಬ್ದಗಳೇ ಸಿಗದ ಸುಂದರಿ
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ದಿವ್ಯಾ,
ನೀವು ಅಂದಿದ್ದು ನಿಜ,
ಇದೀಗ ಸರಿ ಮಾಡಿದ್ದೇನೆ, ತಿಳಿಸಿದ್ದಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಸುಧೇಶ್ ಸರ್,
ಮಲೆನಾಡಿಗೆ ಸರಿ ಸಾಟಿಯುಂಟೆ?
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ತೇಜಸ್ವಿನಿಯವರೇ,
ನಮ್ಮೂರು ಮತ್ತು ನಮ್ಮೋರು ಎಷ್ಟು ಚಂದ ಅಲ್ಲವೇ?
ನಿಮ್ಮ ನಲ್ಮೆಯ ಹಾರೈಕೆ ಸದಾ ಇರಲಿ

ಅಂತರ್ವಾಣಿ said...

ಡಾ.,
ಸಕ್ಕತ್ತಾಗಿರೋ ಕವನ ಬರೆದಿದ್ದೀರ. ಮದುಮಗಳಿನ ಹಾಗೆ ಇದ್ದಳೆ ಅಲ್ವಾ?

Ranjita said...

ಗುರಣ್ಣ ಸಕ್ಕತ್ತಗಿದ್ದು ಕವನ ..ಫೋಟಾನು ಸೂಪರ್ :)
ಹಸಿರಾಗಿದ್ದ ಮನ ಮರಳುಗಾಡಾಯ್ತು
ವನಸಿರಿಯ ಹೊತ್ತ ಮಲೆನಾಡ ಬಿಟ್ಟು

ಸಾಗರದಾಚೆಯ ಇಂಚರ said...

ಅಂತರ್ವಾಣಿ,
ನಿಜಾ, ಮದುಮಗಳೇ ಆಲ್ವಾ,
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ರಂಜಿತಾ,
ಹೊರದೇಶದಲ್ಲಿ ಇರೋ ನಮಗೆ ಮಲೆನಾಡಿನ ನೆನಪು ಸದಾ ಆಗ್ತಾ ಇರತ್ತೆ ಆಲ್ವಾ
ಆ ಹಸಿರು, ಮರ ಗಿಡ, ಎಲ್ಲಾ ನೆನಪು ಮಾತ್ರ ಈಗ

ವಿನುತ said...

ಮಲೆನಾಡಿಗೊಂದು ಸುಂದರ ಶೀರ್ಷಿಕೆ ಹಾಗೂ ಕವನ. ಧನ್ಯವಾದಗಳು.

ಸಾಗರದಾಚೆಯ ಇಂಚರ said...

Thanks for your comments Vinutha

Raghu said...

ಚೆನ್ನಾಗಿದೆ.
Raaghu.

ಸಾಗರದಾಚೆಯ ಇಂಚರ said...

Thank You Raghu
Welcome to my Blog

ಮನಸಿನಮನೆಯವನು said...

ರೀ ಸಾಗರದಾಚೆಯ ಇಂಚರ ..,

ನಿಮ್ಮ ಬರಹದಲ್ಲೇ ಆ ಸೌಂದರ್ಯದ ಅರಿವು ಹೇಳಲಸದಳ ಎಂದು ತಿಳಿಯುತ್ತಿದೆ..
ನಿಮ್ಮನ್ನು ನನ್ನ 'ಮನಸಿನಮನೆ'ಯಲ್ಲಿ ನೋಡಿ ಸುಮಾರು ದಿವಸಗಳೇ ಆಯ್ತು..